ದುಃಖದಲ್ಲೂ ಧೈರ್ಯದಿಂದ ಪರೀಕ್ಷೆ ಬರೆದ ಅನುಸುಜಾ ಗುರುಮಠಕಲ್: ತಂದೆಯ ಅಕಾಲಿಕ ನಿಧನದ ತೀವ್ರ ದುಃಖದಲ್ಲೂ ವಿದ್ಯಾರ್ಥಿನಿ ಅನುಸುಜಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದ ಮನಕಲುಕುವ ಘಟನೆ ಮಂಗಳವಾರ ಪಟ್ಟಣದ ಕಟ್ಟಲ್ ಗೇರಾ ಓಣಿಯಲ್ಲಿ ನಡೆದಿದೆ. ಗುರುಮಠಕಲ್ ಪಟ್ಟಣದ ಕಟ್ಟಲಗೇರಾ ಬಡಾವಣೆಯ ಕೂಲಿ ಕಾರ್ಮಿಕ ಅಂಜಪ್ಪ ಅವರು ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದರು. ತಂದೆಯ ಸಾವಿನಿಂದ ಮನನೊಂದು ದುಃಖದಲ್ಲಿದ್ದ ಅನುಸುಜಾ, ಆ ನೋವಿನಲ್ಲೇ ಹಿಂದಿ ವಿಷಯದ ಪರೀಕ್ಷೆಯನ್ನು ಬರೆದು, ನಂತರ ಮಧ್ಯಾಹ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾಳೆ. ಅನುಸುಜಾ ಗುರುಮಠಕಲ್ ಪಟ್ಟಣದ ಉಪ್ಪಾರಗಡ್ಡ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಜಿ. ಶ್ರೀನಿವಾಸ್ ರೆಡ್ಡಿ ಸ್ಮಾರಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ (ಫ್ರಂಟ್ ಲೈನ್ ಶಾಲೆ) ಪರೀಕ್ಷಾ ಕೇಂದ್ರದಲ್ಲಿ ಈಗಾಗಲೇ ನಾಲ್ಕು ವಿಷಯಗಳ ಪರೀಕ್ಷೆಗಳನ್ನು ಬರೆದಿದ್ದು, ಉಳಿದ ಎರಡು ವಿಷಯಗಳಿಗಾಗಿ ಸಿದ್ಧತೆ ನಡೆಸುತ್ತಿದ್ದಳು. ಈ ಸಂದರ್ಭದಲ್ಲಿ ತಂದೆಯ ನಿಧನವು ಆಕೆಗೆ ಭಾರೀ ಆಘಾತ ಉಂಟುಮಾಡಿತ್ತು. ಈ ದುಃಖದ ವೇಳೆಯಲ್ಲಿ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸ್ಥಳೀಯ ಪುರಸಭೆಯ ಮಾಜಿ ಸದಸ್ಯ ಆಶಣ್ಣ ಬುದ್ಧ ಅವರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಆಕೆಗೆ ಧೈರ್ಯ ತುಂಬಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು. ಅನುಸುಜಾ ತೋರಿದ ಧೈರ್ಯ ಮತ್ತು ಆತ್ಮಸ್ಥೈರ್ಯಕ್ಕೆ ಸಾರ್ವಜನಿಕರು ವ್ಯಾಪಕವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದುಃಖದಲ್ಲೂ ಧೈರ್ಯದಿಂದ ಪರೀಕ್ಷೆ ಬರೆದ ಅನುಸುಜಾ ಗುರುಮಠಕಲ್: ತಂದೆಯ ಅಕಾಲಿಕ ನಿಧನದ ತೀವ್ರ ದುಃಖದಲ್ಲೂ ವಿದ್ಯಾರ್ಥಿನಿ ಅನುಸುಜಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದ ಮನಕಲುಕುವ ಘಟನೆ ಮಂಗಳವಾರ ಪಟ್ಟಣದ ಕಟ್ಟಲ್ ಗೇರಾ ಓಣಿಯಲ್ಲಿ ನಡೆದಿದೆ. ಗುರುಮಠಕಲ್ ಪಟ್ಟಣದ ಕಟ್ಟಲಗೇರಾ ಬಡಾವಣೆಯ ಕೂಲಿ ಕಾರ್ಮಿಕ ಅಂಜಪ್ಪ ಅವರು ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದರು. ತಂದೆಯ ಸಾವಿನಿಂದ ಮನನೊಂದು ದುಃಖದಲ್ಲಿದ್ದ ಅನುಸುಜಾ, ಆ ನೋವಿನಲ್ಲೇ ಹಿಂದಿ
ವಿಷಯದ ಪರೀಕ್ಷೆಯನ್ನು ಬರೆದು, ನಂತರ ಮಧ್ಯಾಹ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾಳೆ. ಅನುಸುಜಾ ಗುರುಮಠಕಲ್ ಪಟ್ಟಣದ ಉಪ್ಪಾರಗಡ್ಡ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಜಿ. ಶ್ರೀನಿವಾಸ್ ರೆಡ್ಡಿ ಸ್ಮಾರಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ (ಫ್ರಂಟ್ ಲೈನ್ ಶಾಲೆ) ಪರೀಕ್ಷಾ ಕೇಂದ್ರದಲ್ಲಿ ಈಗಾಗಲೇ ನಾಲ್ಕು ವಿಷಯಗಳ ಪರೀಕ್ಷೆಗಳನ್ನು ಬರೆದಿದ್ದು, ಉಳಿದ ಎರಡು ವಿಷಯಗಳಿಗಾಗಿ ಸಿದ್ಧತೆ
ನಡೆಸುತ್ತಿದ್ದಳು. ಈ ಸಂದರ್ಭದಲ್ಲಿ ತಂದೆಯ ನಿಧನವು ಆಕೆಗೆ ಭಾರೀ ಆಘಾತ ಉಂಟುಮಾಡಿತ್ತು. ಈ ದುಃಖದ ವೇಳೆಯಲ್ಲಿ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸ್ಥಳೀಯ ಪುರಸಭೆಯ ಮಾಜಿ ಸದಸ್ಯ ಆಶಣ್ಣ ಬುದ್ಧ ಅವರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಆಕೆಗೆ ಧೈರ್ಯ ತುಂಬಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು. ಅನುಸುಜಾ ತೋರಿದ ಧೈರ್ಯ ಮತ್ತು ಆತ್ಮಸ್ಥೈರ್ಯಕ್ಕೆ ಸಾರ್ವಜನಿಕರು ವ್ಯಾಪಕವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
- Post by Dayanand hm3
- *ನಾಳೆ ಸಿದ್ದಗಂಗಾ ಮಠಕ್ಕೆ ರಾಷ್ಟಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆಶೋಕ್ ಕೆ.ವಿ ಐಪಿಎಸ್ ರವರು ಬಂದೋಬಸ್ತ್ ಬಗ್ಗೆ ಹಾಗೂ ಸಾರ್ವಜನಿಕರಿಗೆ ಮಠಕ್ಕೆ ಆಗಮಿಸಲು ಸಲಹೆ,ಸೂಚನೆಗಳನ್ನ ಹೇಳಿರುವ ಬಗ್ಗೆ ವಿಡಿಯೋ ಬೈಟ್*3
- Post by Nava karnataka News channel1
- ಬೀದರ್; ಜಿಲ್ಲೆಯ ಜನರಿಗೆ ಕುಡಿಯುವ ನೀರು ಹಾಗೂ ಗ್ಯಾಸ್ ಸಿಲೆಂಡರ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ ಎಂದು ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು1
- Post by Anand malled1
- ಕರ್ನಾಟಕ ಎಲ್ಲಾ ನಾಡ ಜನರಿಗೆ ಈ ಮೂಲಕ ತಿಳಿಸುವದನಂದರೆ ಇದನು ಕೇಳಿ ಜಾಗ್ರತವಾಗಿರಿ ಯಾವದೆ ಕಾರಣಕ್ಕುo t p ಹೇಳಬೇಡಿ ಮತ್ತು ಕ್ಟ್ರಾಚ್ ಮಾಡಬೇಡಿ1
- ಹುನಗುಂದ್ ಮತಕ್ಷೇತ್ರದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರು ಗೃಹ ಕಚೇರಿಯಲ್ಲಿ ಶ್ರೀ ಮಹಾವೀರ ಅವರ ಜಯಂತೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸಮಾಜ ಬಾಂಧವರು ಕಾರ್ಯಕರ್ತರು ಉಪಸ್ಥಿತರಿದ್ದರು.1
- ಮುದ್ದೇಬಿಹಾಳ.. ಪಟ್ಟಣದ ಇಂದಿರಾನಗರದಲ್ಲಿ ಹನುಮಾನ ಜಾತ್ರಾ ಮಹೋತ್ಸವ 2 4 2026 ಕ್ಕೆ ಗುರುವಾರ ನಡೆಯಲಿದೆ. ಎಲ್ಲಾ ಹನುಮಾನ ಭಕ್ತರು ಜಾತ್ರೆಗೆ ಆಗಮಿಸಿ ಹನುಮಾನ ಆರ್ಶಿವಾದ ಪಡೆಯಬೇಕು ಪಿಲೇಕಮ್ಮ ದೇವಸ್ಥಾನದಿಂದ ಕುಂಭ ಮೇಳ ಇರುತ್ತದೆ ಮತ್ತು ಮಧ್ಯಾನ ಅನ್ನ ಪ್ರಸಾದ ಇರುವದು ಹಾಗು ಗುರುವಾರ ರಾತ್ರಿ 10:30ಕ್ಕೆ ಗೋಪಾಲ ಹೋಗಾರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯುವದು ಗುಡಿಯ ಕಮಿಟ್ಟಿ ಅಧ್ಯಕ್ಷರಾದ ರಾಮು ದಳವಾಯಿ ಉಪದ್ಯಾಕ್ಷರಾದ ಸಿದ್ದು ತಳಹಳ್ಳಿ ಮಾಜಿ. ಮೇಂಬರಾದ ಶಿವು ಶಿವಪುರ ಮತ್ತು ಬಸವರಾಜ ಗುಂಡಕರ್ಚಿಗಿ ಅರ್ಚಕರಾದ ಶೇಕಪ್ಪ ಸ್ವಾಮಿ ಹಿರೇಮಠ ಇನ್ನಿತರರು ಇದ್ದರು.2