logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಲಬುರಗಿಯಲ್ಲಿ ವಿಶ್ವ ಒಕ್ಕಲಿಗರ ಪಿತಾಮಹ ನಾಡಗೌಡ ಕೆಂಪೇಗೌಡ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. 27/5/2026ರಂದು ನಡೆಯಲಿರುವ ಜಯಂತಿಯ ಸಿದ್ಧತೆಗಳ ಕುರಿತು ಚರ್ಚಿಸಲು, ಈ ಸಭೆಯು 15/6/2026ರಂದು ಸಂಜೆ 4 ಗಂಟೆಗೆ ಜಿಲ್ಲಾ ಅಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ರಾಜ್ಯಾಧ್ಯಕ್ಷರಾದ ಶ್ರೀ ಶಿವರಾಜ ಪಾಟೀಲ್ ಕಲಗುರ್ತೀ ಮತ್ತು ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಾಹು ಗುಂಡಗುರ್ತೀ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸಮಾಜದ ಹಿರಿಯರು ಮತ್ತು ಕಿರಿಯರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಕಲಬುರಗಿ ಜಿಲ್ಲಾ ಕುಡ ಒಕ್ಕಲಿಗರ ಸಂಘವು ಪ್ರಕಟಣೆ ಹೊರಡಿಸಿದೆ.

14 hrs ago
user_User1523
User1523
Chittapur, Kalaburagi•
14 hrs ago
44ef57c2-4336-43b3-98ee-f59f89ed0782

ಕಲಬುರಗಿಯಲ್ಲಿ ವಿಶ್ವ ಒಕ್ಕಲಿಗರ ಪಿತಾಮಹ ನಾಡಗೌಡ ಕೆಂಪೇಗೌಡ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. 27/5/2026ರಂದು ನಡೆಯಲಿರುವ ಜಯಂತಿಯ ಸಿದ್ಧತೆಗಳ ಕುರಿತು ಚರ್ಚಿಸಲು, ಈ ಸಭೆಯು 15/6/2026ರಂದು ಸಂಜೆ 4 ಗಂಟೆಗೆ ಜಿಲ್ಲಾ ಅಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ರಾಜ್ಯಾಧ್ಯಕ್ಷರಾದ ಶ್ರೀ ಶಿವರಾಜ ಪಾಟೀಲ್ ಕಲಗುರ್ತೀ ಮತ್ತು ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಾಹು ಗುಂಡಗುರ್ತೀ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸಮಾಜದ ಹಿರಿಯರು ಮತ್ತು ಕಿರಿಯರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಕಲಬುರಗಿ ಜಿಲ್ಲಾ ಕುಡ ಒಕ್ಕಲಿಗರ ಸಂಘವು ಪ್ರಕಟಣೆ ಹೊರಡಿಸಿದೆ.

More news from Vijayapura and nearby areas
  • ಝುರಿ ಆಲೂ ಭಾಜಾ ಒಂದು ವಿಶಿಷ್ಟ ಬಂಗಾಳಿ ಶೈಲಿಯ, ಗರಿಗರಿಯಾದ ಆಲೂಗಡ್ಡೆ ಫ್ರೈ ಆಗಿದ್ದು, ತುರಿದ ಮತ್ತು ತೆಳ್ಳನೆಯ ಕಡ್ಡಿಗಳಂತೆ ಕತ್ತರಿಸಿದ ಆಲೂಗಡ್ಡೆಗಳನ್ನು ಚಿನ್ನದ ಕಂದು ಬಣ್ಣ ಬರುವವರೆಗೆ ಡೀಪ್-ಫ್ರೈ ಮಾಡಲಾಗುತ್ತದೆ. ಈ ಖಾದ್ಯವನ್ನು ಸಾಮಾನ್ಯವಾಗಿ ಆರಾಮದಾಯಕ ದಾಲ್ ಮತ್ತು ಬಿಸಿಬಿಸಿ ಅನ್ನದ ಜೊತೆ ಪಕ್ಕಾ ತಿಂಡಿಯಾಗಿ ಬಡಿಸಲಾಗುತ್ತದೆ. ಬಂಗಾಳಿ ಅಡುಗೆ ಪದ್ಧತಿಯಲ್ಲಿ ಝುರಿ ಆಲೂ ಭಾಜಾ, ಕುರ್ಕುರೆ, ಆಲೂ ಭಾಜಾ ಇವೆಲ್ಲವೂ ತಮ್ಮ ಗರಿಗರಿತನದಿಂದಲೇ ವಿಶೇಷ ಸ್ಥಾನ ಪಡೆದಿವೆ. ಈ ರುಚಿಕರ ಝುರಿ ಆಲೂ ಭಾಜಾ ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ: 3 ದೊಡ್ಡ ಸ್ಟಾರ್ಚಿ ಆಲೂಗಡ್ಡೆಗಳು (ಜ್ಯೋತಿ ವಿಧಕ್ಕೆ ಸಮನಾದ), ಅಥವಾ 4 ಮಧ್ಯಮ ಗಾತ್ರದ ಗೋಲ್ಡನ್ ಡಿಲೈಟ್ ಆಲೂಗಡ್ಡೆಗಳು; 2 ಟೇಬಲ್‌ಸ್ಪೂನ್ (ಅಥವಾ 20-25) ಕಡಲೆಕಾಯಿ; 1 ಚಿಗುರು (ಅಥವಾ 10-12) ಕರಿಬೇವಿನ ಎಲೆಗಳು; ½ ಟೀ ಚಮಚ ಅರಿಶಿನ ಪುಡಿ; ಮತ್ತು ½ ಟೀ ಚಮಚ ಕೆಂಪು ಮೆಣಸಿನ ಪುಡಿ. ರುಚಿಗೆ ತಕ್ಕಷ್ಟು ಬ್ಲಾಕ್ ಸಾಲ್ಟ್, ಚಾಟ್ ಮಸಾಲಾ ಮತ್ತು ಬ್ಲಾಕ್ ಪೆಪ್ಪರ್ ಪೌಡರ್ ಬಳಸಲಾಗುತ್ತದೆ. ಡೀಪ್-ಫ್ರೈ ಮಾಡಲು ಸಾಸಿವೆ ಎಣ್ಣೆ ಅಥವಾ ಯಾವುದೇ ತಟಸ್ಥ ಎಣ್ಣೆಯನ್ನು ಉಪಯೋಗಿಸಬಹುದು. ತಯಾರಿಸುವ ವಿಧಾನವು ಸರಳವಾಗಿದೆ: ಮೊದಲು ಆಲೂಗಡ್ಡೆಗಳ ಸಿಪ್ಪೆ ತೆಗೆದು, ದಪ್ಪ ತುರಿಯುವ ಯಂತ್ರದಿಂದ ತುರಿಯಿರಿ ಅಥವಾ ತೆಳ್ಳನೆಯ ಕಡ್ಡಿಗಳಂತೆ ಉದ್ದಕ್ಕೆ ಕತ್ತರಿಸಿಕೊಳ್ಳಿ. ನಂತರ ತುರಿದ ಆಲೂಗಡ್ಡೆಗಳನ್ನು ತಣ್ಣೀರಿನಲ್ಲಿ ಹಲವು ಬಾರಿ ತೊಳೆಯಿರಿ ಮತ್ತು ನೀರು ಸಂಪೂರ್ಣವಾಗಿ ಸ್ಪಷ್ಟವಾಗುವವರೆಗೆ 10-15 ನಿಮಿಷಗಳ ಕಾಲ ನೆನೆಸಿಡಿ. ನೀರನ್ನು ಚೆನ್ನಾಗಿ ಬಸಿದು, ತುರಿದ ಆಲೂಗಡ್ಡೆಗಳನ್ನು ಸ್ವಚ್ಛ, ಒಣ ಹತ್ತಿ ಬಟ್ಟೆಯ ಮೇಲೆ ಹರಡಿ. ಯಾವುದೇ ತೇವಾಂಶ ಉಳಿಯದಂತೆ ಸಂಪೂರ್ಣವಾಗಿ ಒಣಗಿಸಿ. ನಂತರ, ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಜ್ವಾಲೆಯನ್ನು ಮಧ್ಯಮಕ್ಕೆ ಇಳಿಸಿ. ಆಲೂಗಡ್ಡೆಗಳನ್ನು ಕಡಿಮೆ ಪ್ರಮಾಣದಲ್ಲಿ, ಒಂದಕ್ಕೊಂದು ಅಂಟಿಕೊಳ್ಳದಂತೆ ಬ್ಯಾಚ್‌ಗಳಲ್ಲಿ ಕರಿಯಿರಿ. ತಕ್ಷಣವೇ ತಿರುಗಿಸದೆ, ಅವು ಗಟ್ಟಿಯಾದ ನಂತರ ನಿಧಾನವಾಗಿ ತಿರುಗಿಸಿ, ಏಕರೂಪವಾಗಿ ಚಿನ್ನದ ಕಂದು ಬಣ್ಣ ಬರುವವರೆಗೆ ಕರೆದು, ಪೇಪರ್ ಟವೆಲ್ ಮೇಲೆ ಬಸಿದು ತೆಗೆಯಿರಿ. ಇದೇ ಎಣ್ಣೆಯಲ್ಲಿ ಕಡಲೆಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಕೆಲವು ಸೆಕೆಂಡುಗಳ ಕಾಲ ಹುರಿದು ಗರಿಗರಿಯಾಗುವಂತೆ ಮಾಡಿ. ಕೊನೆಯಲ್ಲಿ, ಹುರಿದ ಆಲೂಗಡ್ಡೆ, ಕಡಲೆಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಒಂದು ಬಟ್ಟಲಿನಲ್ಲಿ ಸೇರಿಸಿ, ಅರಿಶಿನ, ಕೆಂಪು ಮೆಣಸಿನ ಪುಡಿ, ಬ್ಲಾಕ್ ಸಾಲ್ಟ್ ಮತ್ತು ಚಾಟ್ ಮಸಾಲಾವನ್ನು ಬಡಿಸುವ ಮೊದಲು ಸಿಂಪಡಿಸಿ. ಗರಿಷ್ಠ ಗರಿಗರಿತನಕ್ಕಾಗಿ ಕೆಲವು ಪ್ರಮುಖ ಸಲಹೆಗಳಿವೆ: ಆಲೂಗಡ್ಡೆಗಳ ಮೇಲೆ ಯಾವುದೇ ತೇವಾಂಶ ಉಳಿದಿದ್ದರೆ, ಅವು ಎಣ್ಣೆಯಲ್ಲಿ ಗರಿಗರಿಯಾಗುವ ಬದಲು ಹಬೆಯಿಂದ ಬೇಯುತ್ತವೆ. ಕರಿಯುವ ಮೊದಲು ಹಸಿ ಆಲೂಗಡ್ಡೆ ಚೂರುಗಳಿಗೆ ಎಂದಿಗೂ ಉಪ್ಪು ಸೇರಿಸಬಾರದು, ಏಕೆಂದರೆ ಉಪ್ಪು ನೀರನ್ನು ಹೊರಹಾಕಿ ಆಲೂಗಡ್ಡೆಗಳನ್ನು ಮೆತ್ತಗಾಗಿಸುತ್ತದೆ. ಅಚूकವಾಗಿ ಹೆಚ್ಚು ಗರಿಗರಿತನಕ್ಕಾಗಿ, ಆಲೂಗಡ್ಡೆಗಳನ್ನು ಕರಿಯುವ ಮೊದಲು ಒಂದು ಟೇಬಲ್‌ಸ್ಪೂನ್ ಅಕ್ಕಿ ಹಿಟ್ಟನ್ನು ಲಘುವಾಗಿ ಲೇಪಿಸಬಹುದು. ಈ ತುರಿದ ಆಲೂಗಡ್ಡೆ ಫ್ರೈ ಮಾಡುವ ತಂತ್ರವನ್ನು ಪರಿಪೂರ್ಣಗೊಳಿಸಲು ಹಂತ-ಹಂತದ ವೀಡಿಯೊ ಟ್ಯುಟೋರಿಯಲ್ ಅನ್ನು ವೀಕ್ಷಿಸಲು ಸೂಚಿಸಲಾಗಿದೆ. ಈ ರುಚಿಕರ ಮತ್ತು ಗರಿಗರಿಯಾದ ಝುರಿ ಆಲೂ ಭಾಜಾವನ್ನು ಬಿಸಿಬಿಸಿ ದಾಲ್ ಮತ್ತು ನಿಂಬೆ ಹಣ್ಣಿನ ಹೋಳುಗಳ ಜೊತೆ ಸವಿಯಲು ವಿಶೇಷವಾಗಿ ಶಿಫಾರಸು ಮಾಡಲಾಗಿದೆ.
    1
    ಝುರಿ ಆಲೂ ಭಾಜಾ ಒಂದು ವಿಶಿಷ್ಟ ಬಂಗಾಳಿ ಶೈಲಿಯ, ಗರಿಗರಿಯಾದ ಆಲೂಗಡ್ಡೆ ಫ್ರೈ ಆಗಿದ್ದು, ತುರಿದ ಮತ್ತು ತೆಳ್ಳನೆಯ ಕಡ್ಡಿಗಳಂತೆ ಕತ್ತರಿಸಿದ ಆಲೂಗಡ್ಡೆಗಳನ್ನು ಚಿನ್ನದ ಕಂದು ಬಣ್ಣ ಬರುವವರೆಗೆ ಡೀಪ್-ಫ್ರೈ ಮಾಡಲಾಗುತ್ತದೆ. ಈ ಖಾದ್ಯವನ್ನು ಸಾಮಾನ್ಯವಾಗಿ ಆರಾಮದಾಯಕ ದಾಲ್ ಮತ್ತು ಬಿಸಿಬಿಸಿ ಅನ್ನದ ಜೊತೆ ಪಕ್ಕಾ ತಿಂಡಿಯಾಗಿ ಬಡಿಸಲಾಗುತ್ತದೆ. ಬಂಗಾಳಿ ಅಡುಗೆ ಪದ್ಧತಿಯಲ್ಲಿ ಝುರಿ ಆಲೂ ಭಾಜಾ, ಕುರ್ಕುರೆ, ಆಲೂ ಭಾಜಾ ಇವೆಲ್ಲವೂ ತಮ್ಮ ಗರಿಗರಿತನದಿಂದಲೇ ವಿಶೇಷ ಸ್ಥಾನ ಪಡೆದಿವೆ. 

ಈ ರುಚಿಕರ ಝುರಿ ಆಲೂ ಭಾಜಾ ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ: 3 ದೊಡ್ಡ ಸ್ಟಾರ್ಚಿ ಆಲೂಗಡ್ಡೆಗಳು (ಜ್ಯೋತಿ ವಿಧಕ್ಕೆ ಸಮನಾದ), ಅಥವಾ 4 ಮಧ್ಯಮ ಗಾತ್ರದ ಗೋಲ್ಡನ್ ಡಿಲೈಟ್ ಆಲೂಗಡ್ಡೆಗಳು; 2 ಟೇಬಲ್‌ಸ್ಪೂನ್ (ಅಥವಾ 20-25) ಕಡಲೆಕಾಯಿ; 1 ಚಿಗುರು (ಅಥವಾ 10-12) ಕರಿಬೇವಿನ ಎಲೆಗಳು; ½ ಟೀ ಚಮಚ ಅರಿಶಿನ ಪುಡಿ; ಮತ್ತು ½ ಟೀ ಚಮಚ ಕೆಂಪು ಮೆಣಸಿನ ಪುಡಿ. ರುಚಿಗೆ ತಕ್ಕಷ್ಟು ಬ್ಲಾಕ್ ಸಾಲ್ಟ್, ಚಾಟ್ ಮಸಾಲಾ ಮತ್ತು ಬ್ಲಾಕ್ ಪೆಪ್ಪರ್ ಪೌಡರ್ ಬಳಸಲಾಗುತ್ತದೆ. ಡೀಪ್-ಫ್ರೈ ಮಾಡಲು ಸಾಸಿವೆ ಎಣ್ಣೆ ಅಥವಾ ಯಾವುದೇ ತಟಸ್ಥ ಎಣ್ಣೆಯನ್ನು ಉಪಯೋಗಿಸಬಹುದು.

ತಯಾರಿಸುವ ವಿಧಾನವು ಸರಳವಾಗಿದೆ: ಮೊದಲು ಆಲೂಗಡ್ಡೆಗಳ ಸಿಪ್ಪೆ ತೆಗೆದು, ದಪ್ಪ ತುರಿಯುವ ಯಂತ್ರದಿಂದ ತುರಿಯಿರಿ ಅಥವಾ ತೆಳ್ಳನೆಯ ಕಡ್ಡಿಗಳಂತೆ ಉದ್ದಕ್ಕೆ ಕತ್ತರಿಸಿಕೊಳ್ಳಿ. ನಂತರ ತುರಿದ ಆಲೂಗಡ್ಡೆಗಳನ್ನು ತಣ್ಣೀರಿನಲ್ಲಿ ಹಲವು ಬಾರಿ ತೊಳೆಯಿರಿ ಮತ್ತು ನೀರು ಸಂಪೂರ್ಣವಾಗಿ ಸ್ಪಷ್ಟವಾಗುವವರೆಗೆ 10-15 ನಿಮಿಷಗಳ ಕಾಲ ನೆನೆಸಿಡಿ. ನೀರನ್ನು ಚೆನ್ನಾಗಿ ಬಸಿದು, ತುರಿದ ಆಲೂಗಡ್ಡೆಗಳನ್ನು ಸ್ವಚ್ಛ, ಒಣ ಹತ್ತಿ ಬಟ್ಟೆಯ ಮೇಲೆ ಹರಡಿ. ಯಾವುದೇ ತೇವಾಂಶ ಉಳಿಯದಂತೆ ಸಂಪೂರ್ಣವಾಗಿ ಒಣಗಿಸಿ. ನಂತರ, ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಜ್ವಾಲೆಯನ್ನು ಮಧ್ಯಮಕ್ಕೆ ಇಳಿಸಿ. ಆಲೂಗಡ್ಡೆಗಳನ್ನು ಕಡಿಮೆ ಪ್ರಮಾಣದಲ್ಲಿ, ಒಂದಕ್ಕೊಂದು ಅಂಟಿಕೊಳ್ಳದಂತೆ ಬ್ಯಾಚ್‌ಗಳಲ್ಲಿ ಕರಿಯಿರಿ. ತಕ್ಷಣವೇ ತಿರುಗಿಸದೆ, ಅವು ಗಟ್ಟಿಯಾದ ನಂತರ ನಿಧಾನವಾಗಿ ತಿರುಗಿಸಿ, ಏಕರೂಪವಾಗಿ ಚಿನ್ನದ ಕಂದು ಬಣ್ಣ ಬರುವವರೆಗೆ ಕರೆದು, ಪೇಪರ್ ಟವೆಲ್ ಮೇಲೆ ಬಸಿದು ತೆಗೆಯಿರಿ. ಇದೇ ಎಣ್ಣೆಯಲ್ಲಿ ಕಡಲೆಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಕೆಲವು ಸೆಕೆಂಡುಗಳ ಕಾಲ ಹುರಿದು ಗರಿಗರಿಯಾಗುವಂತೆ ಮಾಡಿ. ಕೊನೆಯಲ್ಲಿ, ಹುರಿದ ಆಲೂಗಡ್ಡೆ, ಕಡಲೆಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಒಂದು ಬಟ್ಟಲಿನಲ್ಲಿ ಸೇರಿಸಿ, ಅರಿಶಿನ, ಕೆಂಪು ಮೆಣಸಿನ ಪುಡಿ, ಬ್ಲಾಕ್ ಸಾಲ್ಟ್ ಮತ್ತು ಚಾಟ್ ಮಸಾಲಾವನ್ನು ಬಡಿಸುವ ಮೊದಲು ಸಿಂಪಡಿಸಿ.

ಗರಿಷ್ಠ ಗರಿಗರಿತನಕ್ಕಾಗಿ ಕೆಲವು ಪ್ರಮುಖ ಸಲಹೆಗಳಿವೆ: ಆಲೂಗಡ್ಡೆಗಳ ಮೇಲೆ ಯಾವುದೇ ತೇವಾಂಶ ಉಳಿದಿದ್ದರೆ, ಅವು ಎಣ್ಣೆಯಲ್ಲಿ ಗರಿಗರಿಯಾಗುವ ಬದಲು ಹಬೆಯಿಂದ ಬೇಯುತ್ತವೆ. ಕರಿಯುವ ಮೊದಲು ಹಸಿ ಆಲೂಗಡ್ಡೆ ಚೂರುಗಳಿಗೆ ಎಂದಿಗೂ ಉಪ್ಪು ಸೇರಿಸಬಾರದು, ಏಕೆಂದರೆ ಉಪ್ಪು ನೀರನ್ನು ಹೊರಹಾಕಿ ಆಲೂಗಡ್ಡೆಗಳನ್ನು ಮೆತ್ತಗಾಗಿಸುತ್ತದೆ. ಅಚूकವಾಗಿ ಹೆಚ್ಚು ಗರಿಗರಿತನಕ್ಕಾಗಿ, ಆಲೂಗಡ್ಡೆಗಳನ್ನು ಕರಿಯುವ ಮೊದಲು ಒಂದು ಟೇಬಲ್‌ಸ್ಪೂನ್ ಅಕ್ಕಿ ಹಿಟ್ಟನ್ನು ಲಘುವಾಗಿ ಲೇಪಿಸಬಹುದು. ಈ ತುರಿದ ಆಲೂಗಡ್ಡೆ ಫ್ರೈ ಮಾಡುವ ತಂತ್ರವನ್ನು ಪರಿಪೂರ್ಣಗೊಳಿಸಲು ಹಂತ-ಹಂತದ ವೀಡಿಯೊ ಟ್ಯುಟೋರಿಯಲ್ ಅನ್ನು ವೀಕ್ಷಿಸಲು ಸೂಚಿಸಲಾಗಿದೆ. ಈ ರುಚಿಕರ ಮತ್ತು ಗರಿಗರಿಯಾದ ಝುರಿ ಆಲೂ ಭಾಜಾವನ್ನು ಬಿಸಿಬಿಸಿ ದಾಲ್ ಮತ್ತು ನಿಂಬೆ ಹಣ್ಣಿನ ಹೋಳುಗಳ ಜೊತೆ ಸವಿಯಲು ವಿಶೇಷವಾಗಿ ಶಿಫಾರಸು ಮಾಡಲಾಗಿದೆ.
    user_Chethana Muniswamygowda
    Chethana Muniswamygowda
    Press advisory Almel, Vijayapura•
    22 hrs ago
  • ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ವಿವಿಧೆಡೆ ಕಳುವಾಗಿದ್ದ 50 ಬೈಕ್‌ಗಳನ್ನು ಬಳಗಾನೂರು ಪಿಎಸ್‌ಐ ಎರಿಯಪ್ಪ ಅಂಗಡಿ ನೇತೃತ್ವದ ಪೊಲೀಸ್ ತಂಡ ಶುಕ್ರವಾರ ಮಿಂಚಿನ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬೈಕ್ ಕಳ್ಳರು ಮತ್ತು ಇಬ್ಬರು ಖರೀದಿದಾರರು ಸೇರಿ ಒಟ್ಟು ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಸ್ಕಿ, ಬಳಗಾನೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣಗಳನ್ನು ಜಾಲಾಡಿದ ಪಿಎಸ್‌ಐ ಎರಿಯಪ್ಪ ಅಂಗಡಿ, ಖಚಿತ ಮಾಹಿತಿ ಆಧರಿಸಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ವಶಪಡಿಸಿಕೊಂಡ 50 ಬೈಕ್‌ಗಳು ವಿವಿಧ ಕಂಪನಿಗಳಿಗೆ ಸೇರಿದವಾಗಿದ್ದು, ಇವುಗಳಲ್ಲಿ ಕಳವು ಮಾಡಿ ಮಾರಾಟ ಮಾಡಿದ್ದ ಮತ್ತು ಮಾರಾಟಕ್ಕೆ ಇಟ್ಟಿದ್ದ ಬೈಕ್‌ಗಳು ಸೇರಿವೆ. ಬಂಧಿತ ಆರೋಪಿಗಳು ಮಸ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಯುವಕರು ಎಂದು ಗುರುತಿಸಲಾಗಿದೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಕಳ್ಳರನ್ನು ಬಂಧಿಸಿ, ಕಳುವಾಗಿದ್ದ 50 ಬೈಕ್‌ಗಳನ್ನು ವಶಕ್ಕೆ ಪಡೆದ ಪಿಎಸ್‌ಐ ಎರಿಯಪ್ಪ ಅಂಗಡಿ ನೇತೃತ್ವದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಸು ಮತ್ತು ಡಿಎಸ್‌ಪಿ ಚಂದ್ರಶೇಖರ್ ಶ್ಲಾಘಿಸಿದ್ದು, ಬಹುಮಾನವನ್ನೂ ಘೋಷಿಸಿದ್ದಾರೆ.
    1
    ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ವಿವಿಧೆಡೆ ಕಳುವಾಗಿದ್ದ 50 ಬೈಕ್‌ಗಳನ್ನು ಬಳಗಾನೂರು ಪಿಎಸ್‌ಐ ಎರಿಯಪ್ಪ ಅಂಗಡಿ ನೇತೃತ್ವದ ಪೊಲೀಸ್ ತಂಡ ಶುಕ್ರವಾರ ಮಿಂಚಿನ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬೈಕ್ ಕಳ್ಳರು ಮತ್ತು ಇಬ್ಬರು ಖರೀದಿದಾರರು ಸೇರಿ ಒಟ್ಟು ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಸ್ಕಿ, ಬಳಗಾನೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣಗಳನ್ನು ಜಾಲಾಡಿದ ಪಿಎಸ್‌ಐ ಎರಿಯಪ್ಪ ಅಂಗಡಿ, ಖಚಿತ ಮಾಹಿತಿ ಆಧರಿಸಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ವಶಪಡಿಸಿಕೊಂಡ 50 ಬೈಕ್‌ಗಳು ವಿವಿಧ ಕಂಪನಿಗಳಿಗೆ ಸೇರಿದವಾಗಿದ್ದು, ಇವುಗಳಲ್ಲಿ ಕಳವು ಮಾಡಿ ಮಾರಾಟ ಮಾಡಿದ್ದ ಮತ್ತು ಮಾರಾಟಕ್ಕೆ ಇಟ್ಟಿದ್ದ ಬೈಕ್‌ಗಳು ಸೇರಿವೆ. ಬಂಧಿತ ಆರೋಪಿಗಳು ಮಸ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಯುವಕರು ಎಂದು ಗುರುತಿಸಲಾಗಿದೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಕಳ್ಳರನ್ನು ಬಂಧಿಸಿ, ಕಳುವಾಗಿದ್ದ 50 ಬೈಕ್‌ಗಳನ್ನು ವಶಕ್ಕೆ ಪಡೆದ ಪಿಎಸ್‌ಐ ಎರಿಯಪ್ಪ ಅಂಗಡಿ ನೇತೃತ್ವದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಸು ಮತ್ತು ಡಿಎಸ್‌ಪಿ ಚಂದ್ರಶೇಖರ್ ಶ್ಲಾಘಿಸಿದ್ದು, ಬಹುಮಾನವನ್ನೂ ಘೋಷಿಸಿದ್ದಾರೆ.
    user_ಬಸವರಾಜ ಭೋಗಾವತಿ
    ಬಸವರಾಜ ಭೋಗಾವತಿ
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    2 hrs ago
  • ಮುದ್ದೇಬಿಹಾಳದ ಹಡಲಗೇರಿ ರಸ್ತೆಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಈ ಮಂಗಗಳ ಉಪಟಳದಿಂದಾಗಿ ಚಿಕ್ಕ ಮಕ್ಕಳು ಭಯಪಡುವಂತಾಗಿದೆ.
    1
    ಮುದ್ದೇಬಿಹಾಳದ ಹಡಲಗೇರಿ ರಸ್ತೆಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಈ ಮಂಗಗಳ ಉಪಟಳದಿಂದಾಗಿ ಚಿಕ್ಕ ಮಕ್ಕಳು ಭಯಪಡುವಂತಾಗಿದೆ.
    user_Sharanugouda Patil
    Sharanugouda Patil
    Muddebihal, Vijayapura•
    16 hrs ago
  • ವಿಜಯಪುರದಲ್ಲಿ, ಟಾಟಾ ಪವರ್ ಕಂಪನಿ ಲಿಮಿಟೆಡ್ ಸಂಸ್ಥೆಯು ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿರುವುದಕ್ಕೆ ಸಂಸದ ಗೋವಿಂದ ಕಾರಜೋಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ವಿದ್ಯುತ್‌ ಖಾಸಗೀಕರಣ ಗ್ರಾಮೀಣ ಭಾಗಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಖಾಸಗಿ ಸಂಸ್ಥೆಗಳು ಕೇವಲ ಲಾಭದ ಉದ್ದೇಶದಿಂದ ನಗರ ಹಾಗೂ ಕೈಗಾರಿಕಾ ಪ್ರದೇಶಗಳನ್ನು ಮಾತ್ರ ಗುರಿಯಾಗಿಸಿಕೊಳ್ಳುತ್ತವೆ ಎಂದು ಸಂಸದ ಕಾರಜೋಳ ಹೇಳಿದ್ದಾರೆ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಿಗೆ ಸೇವೆ ಒದಗಿಸುತ್ತಿರುವ ಸರ್ಕಾರಿ ವಿದ್ಯುತ್‌ ಸಂಸ್ಥೆಗಳು ತೀವ್ರ ಆರ್ಥಿಕ ನಷ್ಟಕ್ಕೆ ಗುರಿಯಾಗಿ ದಿವಾಳಿಯಾಗುವ ಭೀತಿ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
    1
    ವಿಜಯಪುರದಲ್ಲಿ, ಟಾಟಾ ಪವರ್ ಕಂಪನಿ ಲಿಮಿಟೆಡ್ ಸಂಸ್ಥೆಯು ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿರುವುದಕ್ಕೆ ಸಂಸದ ಗೋವಿಂದ ಕಾರಜೋಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ವಿದ್ಯುತ್‌ ಖಾಸಗೀಕರಣ ಗ್ರಾಮೀಣ ಭಾಗಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸಂಸ್ಥೆಗಳು ಕೇವಲ ಲಾಭದ ಉದ್ದೇಶದಿಂದ ನಗರ ಹಾಗೂ ಕೈಗಾರಿಕಾ ಪ್ರದೇಶಗಳನ್ನು ಮಾತ್ರ ಗುರಿಯಾಗಿಸಿಕೊಳ್ಳುತ್ತವೆ ಎಂದು ಸಂಸದ ಕಾರಜೋಳ ಹೇಳಿದ್ದಾರೆ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಿಗೆ ಸೇವೆ ಒದಗಿಸುತ್ತಿರುವ ಸರ್ಕಾರಿ ವಿದ್ಯುತ್‌ ಸಂಸ್ಥೆಗಳು ತೀವ್ರ ಆರ್ಥಿಕ ನಷ್ಟಕ್ಕೆ ಗುರಿಯಾಗಿ ದಿವಾಳಿಯಾಗುವ ಭೀತಿ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    13 hrs ago
  • ಇಳಕಲ್‌ನಲ್ಲಿರುವ ಪ್ರತಿಷ್ಠಿತ ಸ್ಪಂದನ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಅಮರೇಶ ಬಿ ಕೌದಿ ಅವರು ವಹಿಸಿಕೊಂಡಿದ್ದರು. ಕಾಲೇಜಿನ ನಿರ್ದೇಶಕ ಉಪನ್ಯಾಸಕರಾದ ರವಿ ಎಲ್ ಅರಸಿದ್ದಿ, ವೀರೇಶ್ ಡಿ ಬಾಚೇನಹಳ್ಳಿ, ಮತ್ತು ಬಸವರಾಜ ಸಿ ತುಂಬಗಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕರಾದ ಮಲ್ಲಿಕಾರ್ಜುನ ಜಗ್ಗಲ್ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ರಾಘವೇಂದ್ರ ಭಜಂತ್ರಿ ಅವರು ಸ್ವಾಗತಿಸಿದರು ಮತ್ತು ಸಮೀರ್ ಸರಕಾವಸ್ ಅವರು ವಂದನಾರ್ಪಣೆ ಮಾಡಿದರು. ಕಾಲೇಜಿನ ಎಲ್ಲ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    2
    ಇಳಕಲ್‌ನಲ್ಲಿರುವ ಪ್ರತಿಷ್ಠಿತ ಸ್ಪಂದನ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಅಮರೇಶ ಬಿ ಕೌದಿ ಅವರು ವಹಿಸಿಕೊಂಡಿದ್ದರು. ಕಾಲೇಜಿನ ನಿರ್ದೇಶಕ ಉಪನ್ಯಾಸಕರಾದ ರವಿ ಎಲ್ ಅರಸಿದ್ದಿ, ವೀರೇಶ್ ಡಿ ಬಾಚೇನಹಳ್ಳಿ, ಮತ್ತು ಬಸವರಾಜ ಸಿ ತುಂಬಗಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕರಾದ ಮಲ್ಲಿಕಾರ್ಜುನ ಜಗ್ಗಲ್ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ರಾಘವೇಂದ್ರ ಭಜಂತ್ರಿ ಅವರು ಸ್ವಾಗತಿಸಿದರು ಮತ್ತು ಸಮೀರ್ ಸರಕಾವಸ್ ಅವರು ವಂದನಾರ್ಪಣೆ ಮಾಡಿದರು. ಕಾಲೇಜಿನ ಎಲ್ಲ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    15 hrs ago
  • ಕುಷ್ಟಗಿಯಲ್ಲಿ ಶುಕ್ರವಾರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಬಾಲಕಾರ್ಮಿಕ ನಿರ್ಮೂಲನಾ ಜಾಗೃತಿ ಜಾಥಾ, ಕಾನೂನು ಅರಿವು-ನೆರವು ಕಾರ್ಯಕ್ರಮ ಹಾಗೂ ಖಾಯಂ ಲೋಕ ಅದಾಲತ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಆರ್. ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಮಂಜುನಾಥ್ ಆರ್. ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗಾಗಿದ್ದು, ಪ್ರತಿಯೊಂದು ಮಗುವಿಗೂ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ಬಾಲ್ಯ ಸಿಗುವುದು ಸಂವಿಧಾನಬದ್ಧ ಹಕ್ಕಾಗಿದೆ ಎಂದು ಹೇಳಿದರು. ಮಕ್ಕಳನ್ನು ದುಡಿಮೆಗೆ ತಳ್ಳುವುದು ಅವರ ಭವಿಷ್ಯವನ್ನು ಕತ್ತಲೆಗೆ ದೂಡುವಂತಾಗಿದ್ದು, ಸಮಾಜದ ಪ್ರತಿಯೊಬ್ಬರೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನುಬಾಹಿರವಾಗಿದ್ದು, ಮಕ್ಕಳನ್ನು ಶಾಲೆಯಿಂದ ದೂರವಿಟ್ಟು ದುಡಿಮೆಗೆ ಇಳಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪೋಷಕರು ಹಾಗೂ ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದೂ ಅವರು ಪ್ರತಿಪಾದಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಚೌವಲಗಿ ಅವರು, ಮಕ್ಕಳ ಹಕ್ಕುಗಳ ರಕ್ಷಣೆಯೇ ಆರೋಗ್ಯಕರ ಸಮಾಜ ನಿರ್ಮಾಣದ ಮೊದಲ ಹೆಜ್ಜೆ ಎಂದು ಒತ್ತಿ ಹೇಳಿದರು. ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರದೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಪ್ರತಿಯೊಂದು ಮಗು ಶಾಲೆಯಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಎಂದು ಆಶಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಎಂ.ಎಲ್. ಪೂಜೇರಿ ಅವರು, ಖಾಯಂ ಲೋಕ ಅದಾಲತ್ ವ್ಯವಸ್ಥೆಯ ಮೂಲಕ ಸಾರ್ವಜನಿಕರಿಗೆ ತ್ವರಿತ ಹಾಗೂ ಸುಲಭ ನ್ಯಾಯ ದೊರೆಯುತ್ತಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಹೈಕೋರ್ಟ್ ವತಿಯಿಂದ ಖಾಯಂ ಲೋಕ ಅದಾಲತ್‌ಗಳನ್ನು ಸ್ಥಾಪಿಸಲಾಗಿದ್ದು, ಪ್ರತಿದಿನವೂ ರಾಜಿ ಸಂಧಾನದ ಮೂಲಕ ಹಲವು ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದೂ ಅವರು ತಿಳಿಸಿದರು. ಕೊಪ್ಪಳ ಜಿಲ್ಲೆಯ ಖಾಯಂ ಲೋಕ ಅದಾಲತ್ ಪೀಠ ಧಾರವಾಡದಲ್ಲಿದೆ ಎಂದು ಸಹ ಅವರು ಸ್ಪಷ್ಟಪಡಿಸಿದರು. ನ್ಯಾಯಾಲಯದ ಆವರಣದಿಂದ ಆರಂಭವಾದ ಜಾಗೃತಿ ಜಾಥಾವು ಮಲ್ಲಯ್ಯ ವೃತ್ತದವರೆಗೆ ಸಾಗಿತು. ಈ ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಬಾಲಕಾರ್ಮಿಕ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಜಾಗೃತಿ ಫಲಕಗಳನ್ನು ಹಿಡಿದು ಸಕ್ರಿಯವಾಗಿ ಭಾಗವಹಿಸಿದರು. ಕಾರ್ಯಕ್ರಮದ ಭಾಗವಾಗಿ ನ್ಯಾಯಾಧೀಶರು, ವಕೀಲರು, ಪೊಲೀಸ್ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತು ಸಾಮೂಹಿಕವಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕಿ ನಿವೇದಿತಾ, ವಕೀಲರ ಸಂಘದ ಅಧ್ಯಕ್ಷ ಹೆಚ್.ಆರ್. ನಾಯಕ, ಕಾರ್ಯದರ್ಶಿ ಶಶಿಧರ ಶೆಟ್ಟರ್, ಸರ್ಕಾರಿ ಸಹಾಯಕ ಅಭಿಯೋಜಕರಾದ ರಾಯನಗೌಡ ಎಲ್. ಮತ್ತು ಇಂದಿರಾ ಸುಹಾಸಿನಿ, ಅಪರ ಸರ್ಕಾರಿ ವಕೀಲ ಟಿ.ಎನ್. ಗುಜಮಾಗಡಿ, ಪಿಎಸ್ಐ ಹನುಮಂತಪ್ಪ ತಳವಾರ, ಕ್ರೈಂ ವಿಭಾಗದ ಪಿಎಸ್ಐ ಪುಂಡಲೀಕಪ್ಪ, ತಾಲೂಕು ದೈಹಿಕ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ್, ಮುಖ್ಯೋಪಾಧ್ಯಾಯರಾದ ಯಮನಪ್ಪ ಚೂರಿ ಮತ್ತು ಶಿವಪ್ಪ ಮಾಟಲದಿನ್ನಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
    2
    ಕುಷ್ಟಗಿಯಲ್ಲಿ ಶುಕ್ರವಾರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಬಾಲಕಾರ್ಮಿಕ ನಿರ್ಮೂಲನಾ ಜಾಗೃತಿ ಜಾಥಾ, ಕಾನೂನು ಅರಿವು-ನೆರವು ಕಾರ್ಯಕ್ರಮ ಹಾಗೂ ಖಾಯಂ ಲೋಕ ಅದಾಲತ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಆರ್. ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಮಂಜುನಾಥ್ ಆರ್. ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗಾಗಿದ್ದು, ಪ್ರತಿಯೊಂದು ಮಗುವಿಗೂ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ಬಾಲ್ಯ ಸಿಗುವುದು ಸಂವಿಧಾನಬದ್ಧ ಹಕ್ಕಾಗಿದೆ ಎಂದು ಹೇಳಿದರು. ಮಕ್ಕಳನ್ನು ದುಡಿಮೆಗೆ ತಳ್ಳುವುದು ಅವರ ಭವಿಷ್ಯವನ್ನು ಕತ್ತಲೆಗೆ ದೂಡುವಂತಾಗಿದ್ದು, ಸಮಾಜದ ಪ್ರತಿಯೊಬ್ಬರೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನುಬಾಹಿರವಾಗಿದ್ದು, ಮಕ್ಕಳನ್ನು ಶಾಲೆಯಿಂದ ದೂರವಿಟ್ಟು ದುಡಿಮೆಗೆ ಇಳಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪೋಷಕರು ಹಾಗೂ ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದೂ ಅವರು ಪ್ರತಿಪಾದಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಚೌವಲಗಿ ಅವರು, ಮಕ್ಕಳ ಹಕ್ಕುಗಳ ರಕ್ಷಣೆಯೇ ಆರೋಗ್ಯಕರ ಸಮಾಜ ನಿರ್ಮಾಣದ ಮೊದಲ ಹೆಜ್ಜೆ ಎಂದು ಒತ್ತಿ ಹೇಳಿದರು. ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರದೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಪ್ರತಿಯೊಂದು ಮಗು ಶಾಲೆಯಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಎಂದು ಆಶಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಎಂ.ಎಲ್. ಪೂಜೇರಿ ಅವರು, ಖಾಯಂ ಲೋಕ ಅದಾಲತ್ ವ್ಯವಸ್ಥೆಯ ಮೂಲಕ ಸಾರ್ವಜನಿಕರಿಗೆ ತ್ವರಿತ ಹಾಗೂ ಸುಲಭ ನ್ಯಾಯ ದೊರೆಯುತ್ತಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಹೈಕೋರ್ಟ್ ವತಿಯಿಂದ ಖಾಯಂ ಲೋಕ ಅದಾಲತ್‌ಗಳನ್ನು ಸ್ಥಾಪಿಸಲಾಗಿದ್ದು, ಪ್ರತಿದಿನವೂ ರಾಜಿ ಸಂಧಾನದ ಮೂಲಕ ಹಲವು ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದೂ ಅವರು ತಿಳಿಸಿದರು. ಕೊಪ್ಪಳ ಜಿಲ್ಲೆಯ ಖಾಯಂ ಲೋಕ ಅದಾಲತ್ ಪೀಠ ಧಾರವಾಡದಲ್ಲಿದೆ ಎಂದು ಸಹ ಅವರು ಸ್ಪಷ್ಟಪಡಿಸಿದರು.

ನ್ಯಾಯಾಲಯದ ಆವರಣದಿಂದ ಆರಂಭವಾದ ಜಾಗೃತಿ ಜಾಥಾವು ಮಲ್ಲಯ್ಯ ವೃತ್ತದವರೆಗೆ ಸಾಗಿತು. ಈ ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಬಾಲಕಾರ್ಮಿಕ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಜಾಗೃತಿ ಫಲಕಗಳನ್ನು ಹಿಡಿದು ಸಕ್ರಿಯವಾಗಿ ಭಾಗವಹಿಸಿದರು. ಕಾರ್ಯಕ್ರಮದ ಭಾಗವಾಗಿ ನ್ಯಾಯಾಧೀಶರು, ವಕೀಲರು, ಪೊಲೀಸ್ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತು ಸಾಮೂಹಿಕವಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕಿ ನಿವೇದಿತಾ, ವಕೀಲರ ಸಂಘದ ಅಧ್ಯಕ್ಷ ಹೆಚ್.ಆರ್. ನಾಯಕ, ಕಾರ್ಯದರ್ಶಿ ಶಶಿಧರ ಶೆಟ್ಟರ್, ಸರ್ಕಾರಿ ಸಹಾಯಕ ಅಭಿಯೋಜಕರಾದ ರಾಯನಗೌಡ ಎಲ್. ಮತ್ತು ಇಂದಿರಾ ಸುಹಾಸಿನಿ, ಅಪರ ಸರ್ಕಾರಿ ವಕೀಲ ಟಿ.ಎನ್. ಗುಜಮಾಗಡಿ, ಪಿಎಸ್ಐ ಹನುಮಂತಪ್ಪ ತಳವಾರ, ಕ್ರೈಂ ವಿಭಾಗದ ಪಿಎಸ್ಐ ಪುಂಡಲೀಕಪ್ಪ, ತಾಲೂಕು ದೈಹಿಕ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ್, ಮುಖ್ಯೋಪಾಧ್ಯಾಯರಾದ ಯಮನಪ್ಪ ಚೂರಿ ಮತ್ತು ಶಿವಪ್ಪ ಮಾಟಲದಿನ್ನಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
    user_Maruti Gumagera
    Maruti Gumagera
    Farmer ಕುಷ್ಟಗಿ, ಕೊಪ್ಪಳ, ಕರ್ನಾಟಕ•
    56 min ago
  • ಮುದ್ದೇಬಿಹಾಳ ಪಟ್ಟಣದಲ್ಲಿ ಪುರಸಭೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಪ್ರವಾಸಿ ಮಂದಿರದ ಮುಂದಗಡೆ ಇದ್ದ ಡಬ್ಬ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
    1
    ಮುದ್ದೇಬಿಹಾಳ ಪಟ್ಟಣದಲ್ಲಿ ಪುರಸಭೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಪ್ರವಾಸಿ ಮಂದಿರದ ಮುಂದಗಡೆ ಇದ್ದ ಡಬ್ಬ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
    user_Sharanugouda Patil
    Sharanugouda Patil
    Muddebihal, Vijayapura•
    18 hrs ago
  • ಬಾಗಲಕೋಟೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರು ಮುಂಗಾರು ಬಿತ್ತನೆಗೆ ಸಂಬಂಧಿಸಿದಂತೆ ರೈತರಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.
    1
    ಬಾಗಲಕೋಟೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರು ಮುಂಗಾರು ಬಿತ್ತನೆಗೆ ಸಂಬಂಧಿಸಿದಂತೆ ರೈತರಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    20 hrs ago
  • ಕುಷ್ಟಗಿ ತಾಲೂಕಿನ ಶಾಖಾಪೂರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ತಾನು ಬೈಲಾ ಪ್ರಕಾರವೇ ಸದಸ್ಯತ್ವ ಪಡೆದು ಅಲಂಕರಿಸಿದ್ದೇನೆ ಹೊರತು ನಿಯಮಗಳನ್ನು ಉಲ್ಲಂಘಿಸಿ ಅಲ್ಲ ಎಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಸ್ಪಷ್ಟಪಡಿಸಿದ್ದಾರೆ. ಇಲ್ಲಿನ ತಾಲೂಕು ಪಂಚಾಯತ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಯಾರು ಬೇಕಾದರೂ ನೋಟಿಸ್ ನೀಡಲಿ, ಅದಕ್ಕೆ ಉತ್ತರ ನೀಡಲು ತಾನು ಸಿದ್ಧನಿದ್ದೇನೆ ಎಂದು ಹೇಳಿದರು. ಒಬ್ಬ ವ್ಯಕ್ತಿ ಮೂರು ಕಡೆ ಸದಸ್ಯತ್ವ ಪಡೆದು ಎರಡು ಕಡೆ ಮಾತ್ರ ಅಧಿಕಾರ ಮಾಡಲು ಅವಕಾಶವಿದೆ ಎಂದು ಬೈಲಾ ಸ್ಪಷ್ಟಪಡಿಸುತ್ತದೆ. ಶಾಖಾಪೂರ ಗ್ರಾಮವು ತನ್ನ ಕೊರಡಕೇರಾ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವುದರಿಂದ ತಾನು ಅಲ್ಲಿ ಸದಸ್ಯತ್ವ ಪಡೆದಿದ್ದೇನೆ. ತನ್ನ ಸ್ವಗ್ರಾಮ ಕೊರಡಕೇರಾದಲ್ಲಿ ಮಹಿಳೆಯರ ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕೂಟವಿದ್ದು, ಅಲ್ಲಿ ತನಗೆ ಸದಸ್ಯತ್ವ ಪಡೆಯಲು ಸಾಧ್ಯವಿಲ್ಲ. ಸಹಕಾರ ಸಂಘದಲ್ಲಿ ಕೆಲಸ ಮಾಡುವ ಇಚ್ಛೆಯಿಂದಲೇ ಶಾಖಾಪೂರದ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕೂಟದಲ್ಲಿ ಸದಸ್ಯತ್ವ ಪಡೆದು, ಗ್ರಾಮದ ಗುರು-ಹಿರಿಯರು ಸರ್ವಾನುಮತದಿಂದ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ ಎಂದು ಪಾಟೀಲ ತಿಳಿಸಿದರು. ತನ್ನ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳಿಗೆ ಮಾಹಿತಿ ಕೊರತೆ ಇದೆ. ವರದಿಗಾರರು ಯಾರದ್ದೋ ಮಾತುಗಳನ್ನು ಕೇಳಿ, ಬಹುತೇಕ ವಿರೋಧ ಪಕ್ಷದವರ ಮಾತು ಕೇಳಿ, ತನ್ನನ್ನು ಸಂಪರ್ಕಿಸದೆ ಆರೋಪಗಳನ್ನು ಮಾಡಿ ಬರೆದಿದ್ದಾರೆ. ಸ್ಪಷ್ಟ ಮಾಹಿತಿ ಪಡೆದುಕೊಂಡು ಬರೆಯಬೇಕಾಗಿತ್ತು, ತನ್ನನ್ನು ಕೇಳಿದ್ದರೆ ತಾನು ಉತ್ತರ ನೀಡುತ್ತಿದ್ದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಪ್ರಕಟಣೆಗಳ ಹಿಂದೆ ವಿರೋಧ ಪಕ್ಷದವರ ಕೈವಾಡವೂ ಇರಬಹುದು ಎಂದು ಅವರು ತಿಳಿಸಿದರು. ಸಹಕಾರ ಸಂಘಗಳ ಅಧಿಕಾರಿಗಳು ತನಗೆ ನೋಟಿಸ್ ನೀಡಿದರೆ, ತಾನು ಅದಕ್ಕೆ ಸ್ಪಷ್ಟವಾಗಿ ಉತ್ತರ ನೀಡಲು ಸಿದ್ಧನಿದ್ದೇನೆ. ಒಂದು ವೇಳೆ ತಾನು ನಿಯಮ ಉಲ್ಲಂಘಿಸಿ ಸದಸ್ಯತ್ವ ಪಡೆದಿದ್ದರೆ, ದಾಖಲೆ ಸಮೇತ ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದರು.
    1
    ಕುಷ್ಟಗಿ ತಾಲೂಕಿನ ಶಾಖಾಪೂರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ತಾನು ಬೈಲಾ ಪ್ರಕಾರವೇ ಸದಸ್ಯತ್ವ ಪಡೆದು ಅಲಂಕರಿಸಿದ್ದೇನೆ ಹೊರತು ನಿಯಮಗಳನ್ನು ಉಲ್ಲಂಘಿಸಿ ಅಲ್ಲ ಎಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಸ್ಪಷ್ಟಪಡಿಸಿದ್ದಾರೆ. ಇಲ್ಲಿನ ತಾಲೂಕು ಪಂಚಾಯತ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಯಾರು ಬೇಕಾದರೂ ನೋಟಿಸ್ ನೀಡಲಿ, ಅದಕ್ಕೆ ಉತ್ತರ ನೀಡಲು ತಾನು ಸಿದ್ಧನಿದ್ದೇನೆ ಎಂದು ಹೇಳಿದರು.

ಒಬ್ಬ ವ್ಯಕ್ತಿ ಮೂರು ಕಡೆ ಸದಸ್ಯತ್ವ ಪಡೆದು ಎರಡು ಕಡೆ ಮಾತ್ರ ಅಧಿಕಾರ ಮಾಡಲು ಅವಕಾಶವಿದೆ ಎಂದು ಬೈಲಾ ಸ್ಪಷ್ಟಪಡಿಸುತ್ತದೆ. ಶಾಖಾಪೂರ ಗ್ರಾಮವು ತನ್ನ ಕೊರಡಕೇರಾ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವುದರಿಂದ ತಾನು ಅಲ್ಲಿ ಸದಸ್ಯತ್ವ ಪಡೆದಿದ್ದೇನೆ. ತನ್ನ ಸ್ವಗ್ರಾಮ ಕೊರಡಕೇರಾದಲ್ಲಿ ಮಹಿಳೆಯರ ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕೂಟವಿದ್ದು, ಅಲ್ಲಿ ತನಗೆ ಸದಸ್ಯತ್ವ ಪಡೆಯಲು ಸಾಧ್ಯವಿಲ್ಲ. ಸಹಕಾರ ಸಂಘದಲ್ಲಿ ಕೆಲಸ ಮಾಡುವ ಇಚ್ಛೆಯಿಂದಲೇ ಶಾಖಾಪೂರದ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕೂಟದಲ್ಲಿ ಸದಸ್ಯತ್ವ ಪಡೆದು, ಗ್ರಾಮದ ಗುರು-ಹಿರಿಯರು ಸರ್ವಾನುಮತದಿಂದ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ ಎಂದು ಪಾಟೀಲ ತಿಳಿಸಿದರು.

ತನ್ನ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳಿಗೆ ಮಾಹಿತಿ ಕೊರತೆ ಇದೆ. ವರದಿಗಾರರು ಯಾರದ್ದೋ ಮಾತುಗಳನ್ನು ಕೇಳಿ, ಬಹುತೇಕ ವಿರೋಧ ಪಕ್ಷದವರ ಮಾತು ಕೇಳಿ, ತನ್ನನ್ನು ಸಂಪರ್ಕಿಸದೆ ಆರೋಪಗಳನ್ನು ಮಾಡಿ ಬರೆದಿದ್ದಾರೆ. ಸ್ಪಷ್ಟ ಮಾಹಿತಿ ಪಡೆದುಕೊಂಡು ಬರೆಯಬೇಕಾಗಿತ್ತು, ತನ್ನನ್ನು ಕೇಳಿದ್ದರೆ ತಾನು ಉತ್ತರ ನೀಡುತ್ತಿದ್ದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಪ್ರಕಟಣೆಗಳ ಹಿಂದೆ ವಿರೋಧ ಪಕ್ಷದವರ ಕೈವಾಡವೂ ಇರಬಹುದು ಎಂದು ಅವರು ತಿಳಿಸಿದರು.

ಸಹಕಾರ ಸಂಘಗಳ ಅಧಿಕಾರಿಗಳು ತನಗೆ ನೋಟಿಸ್ ನೀಡಿದರೆ, ತಾನು ಅದಕ್ಕೆ ಸ್ಪಷ್ಟವಾಗಿ ಉತ್ತರ ನೀಡಲು ಸಿದ್ಧನಿದ್ದೇನೆ. ಒಂದು ವೇಳೆ ತಾನು ನಿಯಮ ಉಲ್ಲಂಘಿಸಿ ಸದಸ್ಯತ್ವ ಪಡೆದಿದ್ದರೆ, ದಾಖಲೆ ಸಮೇತ ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದರು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.