logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಳವಳ್ಳಿ ಪಟ್ಟಣದಲ್ಲಿ ಸಿಎಸ್ಆರ್ ಯೋಜನೆಯ 3.28 ಕೋಟಿ ವೆಚ್ಚದ ಸೇವೆಗಳಿಗೆ ಐಜಿಪಿ ಬೋರಲಿಂಗಯ್ಯ ಲೋಕಾಪಣೆ ಮಳವಳ್ಳಿ: ಅಭಿವೃದ್ಧಿಯಲ್ಲಿ ಹಿಂದುಳಿರುವ ಮಳವಳ್ಳಿಯ ಪ್ರಗತಿಗೆ ನಾನಾ ಮೂಲಗಳಿಂದ ಅನುದಾನ ತಂದು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಸೋಮವಾರ ಸಿಎಸ್ಆರ್ ಅನುದಾನದಡಿ 3.28 ಕೋಟಿ ರೂ.ವೆಚ್ಚದ ನಾಲ್ಕು ಪೊಲೀಸ್ ವಾಹನಗಳಿಗೆ ಚಾಲನೆ ನೀಡಿಕೆ, ಸಂಚಾರ ಸುರಕ್ಷತೆಗಾಗಿ ಅಳವಡಿಸಿರುವ ಪೊಲೀಸ್ ಚೌಕಿ ಹಾಗೂ ಆಧುನಿಕ ತಂತ್ರಜ್ಞಾನವುಳ್ಳ ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿ ಕ್ಯಾಮಾರಗಳು, ಸಿಸಿಟಿವಿ ಕಮಾಂಡ್ ಸೆಂಟರ್ ಗಳನ್ನು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಳವಳ್ಳಿ ತಾಲ್ಲೂಕಿನಲ್ಲಿ ಯಾವುದೇ ಉದ್ದಿಮೆಗಳಿಲ್ಲದೇ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕ್ಷೇತ್ರದಲ್ಲಿ ಹಲವು ಗ್ರಾಮಗಳಲ್ಲಿ ಕನ್ನಂಬಾಡಿ ಕಟ್ಟೆಯಿಂದ ಅರ್ಧ ಭಾಗಕ್ಕೆ ನೀರು ಸಿಕ್ಕರೆ, ಮತ್ತರ್ಥ ಭಾಗ ಒಣ ಪ್ರದೇಶವಾಗಿದೆ ಎಂದರು. ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲ್ಲೂಕು ನಮ್ಮದಾಗಿದೆ. ಇತರೆ ತಾಲ್ಲೂಕುಗಳಲ್ಲಿ ಉದ್ಯಮಗಳಿದ್ದು, ಅಭಿವೃದ್ಧಿ ಪಥದಲ್ಲಿ ಇವೆ. ತಾಲ್ಲೂಕಿನ ಅರ್ಧ ಭಾಗಕ್ಕೆ ಕನ್ನಂಬಾಡಿ ಕಟ್ಟೆಯ ನೀರು ಸಿಕ್ಕರೆ, ಉಳಿದೆಡೆ ಒಣ ಪ್ರದೇಶವಾಗಿದೆ. ಇಂಥ ವ್ಯವಸ್ಥೆಗೆ ಹೊಸ ಆಯಾಮ ನೀಡಲು ಹಲಗೂರು, ಕಸಬಾ, ಬೊಪ್ಪೇಗೌಡನಪುರ ಹೋಬಳಿಯ ಬರಡು ಭೂಮಿಯಲ್ಲಿ ಈಗ ಅಂತರ್ಜಲ ಹೆಚ್ಚಳವಾಗಿದೆ. ಇದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ ಎಂದು ಹೇಳಿದರು. 600 ಕೋಟಿ ವೆಚ್ಚದಲ್ಲಿ ನಾಲಾ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲೂ ರೈತರ ನೆರವಿಗೆ ನಿಲ್ಲುವೆ ಕೆಲಸ ಮಾಡಲಾಗುವುದು. ನನಗೆ ವೈಯಕ್ತಿಕವಾಗಿ ತಾಲ್ಲೂಕಿನ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶ ಇದ್ದು, ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆದು, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರಕುವಂತೆ ಪರಿಸ್ಥಿತಿ ನಿರ್ಮಾಣ ಮಾಡಲಾಗುವುದು ಎಂದರು. ಹಳೆಯ ವಾಹನಗಳ ಬಳಕೆಯಿಂದ ಆಗುವ ಸಮಸ್ಯೆ ಅರಿತು ಸನ್ಸೆರಾ ಫೌಂಡೇಶನ್ ವತಿಯಿಂದ 4 ಮಹೀಂದ್ರಾ ಕಂಪನಿಯ ಜೀಪುಗಳನ್ನು ನೀಡಿದ್ದು, ಸಮಸ್ಯೆ ಬಗೆಹರಿದಂತಾಗಿದೆ. ಸನ್ಸೆರಾ ಫೌಂಡೇಶನ್ ವತಿಯಿಂದ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕಿನಲ್ಲಿ ಪ್ರತಿ ಕ್ಲಸ್ಟರ್ ಗೆ ಒಬ್ಬ ಪರಿಣಿತ ಆಂಗ್ಲ ಶಿಕ್ಷಕರನ್ನು 10 ತಿಂಗಳ ಅವಧಿಗೆ ನೇಮಿಸಿಕೊಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ದಕ್ಷಿಣ ವಲಯ ಐಜಿಪಿ ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಯಾವುದೇ ಘಟನೆ ನಡೆದಾಗ ಮತ್ತು ನಂತರ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಬಹಳ ಸಹಾಯಕಾರಿಯಾಗಲಿದೆ. ನಮ್ಮ ಇಲಾಖೆ ಸದ್ಬಳಕೆ ಮಾಡಿಕೊಳ್ಳಲಿದೆ. ಮಹಾನಗರಗಲ್ಲಿರುವ ಇಂತಹ ಪೊಲೀಸ್ ಚೌಕಿ ವ್ಯವಸ್ಥೆ, ಮಳವಳ್ಳಿ ಪಟ್ಟಣದಲ್ಲಿ ಇರುವುದು ಒಂದು ಉತ್ತಮ ಬೆಳವಣಿಗೆ. ಅಭಿವೃದ್ಧಿಗೆ ಸಿಎಸ್ ಆರ್ ನಿಧಿಯನ್ನು ಬಳಸುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ಇಂಥ ಸಾರ್ವಜನಿಕ ಉಪಯೋಗ ಕೆಲಸಕ್ಕೆ ತಮ್ಮದೇ ಶ್ರೇಷ್ಠತೆ ಮತ್ತು ದೂರದೃಷ್ಟಿ ಚಿಂತನೆ ಬೇಕು. ಅದು ಪಿ.ಎಂ.ನರೇಂದ್ರಸ್ವಾಮಿ ಅವರಲ್ಲಿದೆ. ಶಾಸಕರ ವಿಶೇಷ ಕಾಳಜಿಯಿಂದ ಪೊಲೀಸ್ ಇಲಾಖೆಗೆ ನೀಡಿರುವ ವಾಹನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಾಲ್ಲೂಕಿನ ಶೈಕ್ಷಣಿಕ ಪ್ರಗತಿ ರಾಜ್ಯದಲ್ಲಿ ಮಾದರಿಯಾಗಿದೆ ಎಂದು ಹೇಳಿದರು. ಒಳ್ಳೆಯ ಕೆಲಸ ಮಾಡಲಿಕ್ಕೆ ಅವಕಾಶ ಸಿಕ್ಕಿದಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮುಖ್ಯವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಇದರ ಪರಿಣಾಮ ತಿಳಿಯಲಿದೆ. ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಡಿಜಿಟಲೀಕರಣ ಪರಿಣಾಮ ಬೀರಲಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ, ಆದರೆ ಒಳ್ಳೆಯ ಕೆಲಸಗಳು ಜನರು ಮನದಲ್ಲಿ ಉಳಿಯಲಿದೆ ಎಂದು ಹೇಳಿದರು. ಜಿ.ಪ.ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕಾಲಘಟ್ಟ ಬದಲಾದಂತೆ ನಾವು ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಪೊಲೀಸ್ ಇಲಾಖೆಗೆ ನೀಡಿರುವ ಸವಲತ್ತುಗಳಿಂದ ಮಳವಳ್ಳಿಗೆ ಅನುಕೂಲವಾಗಲಿದೆ. ಶಾಸಕರ ಕಾಳಜಿಯನ್ನು ಎಲ್ಲರೂ ಪ್ರಶಂಸಿಸಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯ ಅನುಕೂಲತೆಗಾಗಿ 8 ಸಾವಿರ ಮಕ್ಕಳಿಗೆ ಕಲಿಕಾ ಮಿತ್ರದಂಥ ಪುಸ್ತಕಗಳನ್ನು ನೀಡಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಇದ್ದರಿಂದ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಮಾತನಾಡಿ, ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ 78 ಸಿಸಿ ಕ್ಯಾಮರಾಗಳ ಅಳವಡಿಕೆ, ಟ್ರಾಫಿಕ್ ಸಿಗ್ನಲ್ ನಿಂದ ಸಂಚಾರ ನಿಯಂತ್ರಣವಾಗಲಿದೆ. ನಾಲ್ಕು ವಾಹನಗಳು ಸೇರಿದಂತೆ ಇಂಥ ಸೌಲಭ್ಯಗಳನ್ನು ಬಳಸಿಕೊಂಡು ಜನಪರ ಕೆಲಸ ಮಾಡಲಾಗುವುದು ಎಂದು ಹೇಳಿದರು. ಸನ್ಸೆರಾ ಫೌಂಡೇಶನ್ ನ ವ್ಯವಸ್ಥಾಪ ಮನೋಹರ್ ಮಾತನಾಡಿ, ನಮ್ಮ ಕಂಪನಿಯು ಆಟೋ ಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಕೆರೆಗಳ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಉನ್ನತೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಶಾಸಕರ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಮಳವಳ್ಳಿ ತಾಲೂಕಿಗೂ ವಿಸ್ತರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಚಂದನ್, ತಹಶೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಸನ್ಸೆರಾ ಫೌಂಡೇಶನ್ ನ ಮನೋಹರ್, ವಸಂತ್ ಭಾರದ್ವಾಜ್, ಗಿರೀಶ್ ರಾವ್, ಇತರೆ ಕಂಪನಿಗಳ ಸೂರ್ಯನಾರಾಯಣ, ಬಾಬು ಪಾಲ್ಗೊಂಡಿದ್ದರು.

2 hrs ago
user_ಮಾಗನೂರು ಎಂ ಶಿವಕುಮಾರ್
ಮಾಗನೂರು ಎಂ ಶಿವಕುಮಾರ್
ಮಳವಳ್ಳಿ, ಮಂಡ್ಯ, ಕರ್ನಾಟಕ•
2 hrs ago

ಮಳವಳ್ಳಿ ಪಟ್ಟಣದಲ್ಲಿ ಸಿಎಸ್ಆರ್ ಯೋಜನೆಯ 3.28 ಕೋಟಿ ವೆಚ್ಚದ ಸೇವೆಗಳಿಗೆ ಐಜಿಪಿ ಬೋರಲಿಂಗಯ್ಯ ಲೋಕಾಪಣೆ ಮಳವಳ್ಳಿ: ಅಭಿವೃದ್ಧಿಯಲ್ಲಿ ಹಿಂದುಳಿರುವ ಮಳವಳ್ಳಿಯ ಪ್ರಗತಿಗೆ ನಾನಾ ಮೂಲಗಳಿಂದ ಅನುದಾನ ತಂದು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಸೋಮವಾರ ಸಿಎಸ್ಆರ್ ಅನುದಾನದಡಿ 3.28 ಕೋಟಿ ರೂ.ವೆಚ್ಚದ ನಾಲ್ಕು ಪೊಲೀಸ್ ವಾಹನಗಳಿಗೆ ಚಾಲನೆ ನೀಡಿಕೆ, ಸಂಚಾರ ಸುರಕ್ಷತೆಗಾಗಿ ಅಳವಡಿಸಿರುವ ಪೊಲೀಸ್ ಚೌಕಿ ಹಾಗೂ ಆಧುನಿಕ ತಂತ್ರಜ್ಞಾನವುಳ್ಳ ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿ ಕ್ಯಾಮಾರಗಳು, ಸಿಸಿಟಿವಿ ಕಮಾಂಡ್ ಸೆಂಟರ್ ಗಳನ್ನು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಳವಳ್ಳಿ ತಾಲ್ಲೂಕಿನಲ್ಲಿ ಯಾವುದೇ ಉದ್ದಿಮೆಗಳಿಲ್ಲದೇ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕ್ಷೇತ್ರದಲ್ಲಿ ಹಲವು ಗ್ರಾಮಗಳಲ್ಲಿ ಕನ್ನಂಬಾಡಿ ಕಟ್ಟೆಯಿಂದ ಅರ್ಧ ಭಾಗಕ್ಕೆ ನೀರು ಸಿಕ್ಕರೆ, ಮತ್ತರ್ಥ ಭಾಗ ಒಣ ಪ್ರದೇಶವಾಗಿದೆ ಎಂದರು. ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲ್ಲೂಕು ನಮ್ಮದಾಗಿದೆ. ಇತರೆ ತಾಲ್ಲೂಕುಗಳಲ್ಲಿ ಉದ್ಯಮಗಳಿದ್ದು, ಅಭಿವೃದ್ಧಿ ಪಥದಲ್ಲಿ ಇವೆ. ತಾಲ್ಲೂಕಿನ ಅರ್ಧ ಭಾಗಕ್ಕೆ ಕನ್ನಂಬಾಡಿ ಕಟ್ಟೆಯ ನೀರು ಸಿಕ್ಕರೆ, ಉಳಿದೆಡೆ ಒಣ ಪ್ರದೇಶವಾಗಿದೆ. ಇಂಥ ವ್ಯವಸ್ಥೆಗೆ ಹೊಸ ಆಯಾಮ ನೀಡಲು ಹಲಗೂರು, ಕಸಬಾ, ಬೊಪ್ಪೇಗೌಡನಪುರ ಹೋಬಳಿಯ ಬರಡು ಭೂಮಿಯಲ್ಲಿ ಈಗ ಅಂತರ್ಜಲ ಹೆಚ್ಚಳವಾಗಿದೆ. ಇದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ ಎಂದು ಹೇಳಿದರು. 600 ಕೋಟಿ ವೆಚ್ಚದಲ್ಲಿ ನಾಲಾ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲೂ ರೈತರ ನೆರವಿಗೆ ನಿಲ್ಲುವೆ ಕೆಲಸ ಮಾಡಲಾಗುವುದು. ನನಗೆ ವೈಯಕ್ತಿಕವಾಗಿ ತಾಲ್ಲೂಕಿನ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶ ಇದ್ದು, ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆದು, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರಕುವಂತೆ ಪರಿಸ್ಥಿತಿ ನಿರ್ಮಾಣ ಮಾಡಲಾಗುವುದು ಎಂದರು. ಹಳೆಯ ವಾಹನಗಳ ಬಳಕೆಯಿಂದ ಆಗುವ ಸಮಸ್ಯೆ ಅರಿತು ಸನ್ಸೆರಾ ಫೌಂಡೇಶನ್ ವತಿಯಿಂದ 4 ಮಹೀಂದ್ರಾ ಕಂಪನಿಯ ಜೀಪುಗಳನ್ನು ನೀಡಿದ್ದು, ಸಮಸ್ಯೆ ಬಗೆಹರಿದಂತಾಗಿದೆ. ಸನ್ಸೆರಾ ಫೌಂಡೇಶನ್ ವತಿಯಿಂದ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕಿನಲ್ಲಿ ಪ್ರತಿ ಕ್ಲಸ್ಟರ್ ಗೆ ಒಬ್ಬ ಪರಿಣಿತ ಆಂಗ್ಲ ಶಿಕ್ಷಕರನ್ನು 10 ತಿಂಗಳ ಅವಧಿಗೆ ನೇಮಿಸಿಕೊಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ದಕ್ಷಿಣ ವಲಯ ಐಜಿಪಿ ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಯಾವುದೇ ಘಟನೆ ನಡೆದಾಗ ಮತ್ತು ನಂತರ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಬಹಳ ಸಹಾಯಕಾರಿಯಾಗಲಿದೆ. ನಮ್ಮ ಇಲಾಖೆ ಸದ್ಬಳಕೆ ಮಾಡಿಕೊಳ್ಳಲಿದೆ. ಮಹಾನಗರಗಲ್ಲಿರುವ ಇಂತಹ ಪೊಲೀಸ್ ಚೌಕಿ ವ್ಯವಸ್ಥೆ, ಮಳವಳ್ಳಿ ಪಟ್ಟಣದಲ್ಲಿ ಇರುವುದು ಒಂದು ಉತ್ತಮ ಬೆಳವಣಿಗೆ. ಅಭಿವೃದ್ಧಿಗೆ ಸಿಎಸ್ ಆರ್ ನಿಧಿಯನ್ನು ಬಳಸುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ಇಂಥ ಸಾರ್ವಜನಿಕ ಉಪಯೋಗ ಕೆಲಸಕ್ಕೆ ತಮ್ಮದೇ ಶ್ರೇಷ್ಠತೆ ಮತ್ತು ದೂರದೃಷ್ಟಿ ಚಿಂತನೆ ಬೇಕು. ಅದು ಪಿ.ಎಂ.ನರೇಂದ್ರಸ್ವಾಮಿ ಅವರಲ್ಲಿದೆ. ಶಾಸಕರ ವಿಶೇಷ ಕಾಳಜಿಯಿಂದ ಪೊಲೀಸ್ ಇಲಾಖೆಗೆ ನೀಡಿರುವ ವಾಹನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಾಲ್ಲೂಕಿನ ಶೈಕ್ಷಣಿಕ ಪ್ರಗತಿ ರಾಜ್ಯದಲ್ಲಿ ಮಾದರಿಯಾಗಿದೆ ಎಂದು ಹೇಳಿದರು. ಒಳ್ಳೆಯ ಕೆಲಸ ಮಾಡಲಿಕ್ಕೆ ಅವಕಾಶ ಸಿಕ್ಕಿದಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮುಖ್ಯವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಇದರ ಪರಿಣಾಮ ತಿಳಿಯಲಿದೆ. ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಡಿಜಿಟಲೀಕರಣ ಪರಿಣಾಮ ಬೀರಲಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ, ಆದರೆ ಒಳ್ಳೆಯ ಕೆಲಸಗಳು ಜನರು ಮನದಲ್ಲಿ ಉಳಿಯಲಿದೆ ಎಂದು ಹೇಳಿದರು. ಜಿ.ಪ.ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕಾಲಘಟ್ಟ ಬದಲಾದಂತೆ ನಾವು ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಪೊಲೀಸ್ ಇಲಾಖೆಗೆ ನೀಡಿರುವ ಸವಲತ್ತುಗಳಿಂದ ಮಳವಳ್ಳಿಗೆ ಅನುಕೂಲವಾಗಲಿದೆ. ಶಾಸಕರ ಕಾಳಜಿಯನ್ನು ಎಲ್ಲರೂ ಪ್ರಶಂಸಿಸಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯ ಅನುಕೂಲತೆಗಾಗಿ 8 ಸಾವಿರ ಮಕ್ಕಳಿಗೆ ಕಲಿಕಾ ಮಿತ್ರದಂಥ ಪುಸ್ತಕಗಳನ್ನು ನೀಡಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಇದ್ದರಿಂದ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಮಾತನಾಡಿ, ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ 78 ಸಿಸಿ ಕ್ಯಾಮರಾಗಳ ಅಳವಡಿಕೆ, ಟ್ರಾಫಿಕ್ ಸಿಗ್ನಲ್ ನಿಂದ ಸಂಚಾರ ನಿಯಂತ್ರಣವಾಗಲಿದೆ. ನಾಲ್ಕು ವಾಹನಗಳು ಸೇರಿದಂತೆ ಇಂಥ ಸೌಲಭ್ಯಗಳನ್ನು ಬಳಸಿಕೊಂಡು ಜನಪರ ಕೆಲಸ ಮಾಡಲಾಗುವುದು ಎಂದು ಹೇಳಿದರು. ಸನ್ಸೆರಾ ಫೌಂಡೇಶನ್ ನ ವ್ಯವಸ್ಥಾಪ ಮನೋಹರ್ ಮಾತನಾಡಿ, ನಮ್ಮ ಕಂಪನಿಯು ಆಟೋ ಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಕೆರೆಗಳ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಉನ್ನತೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಶಾಸಕರ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಮಳವಳ್ಳಿ ತಾಲೂಕಿಗೂ ವಿಸ್ತರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಚಂದನ್, ತಹಶೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಸನ್ಸೆರಾ ಫೌಂಡೇಶನ್ ನ ಮನೋಹರ್, ವಸಂತ್ ಭಾರದ್ವಾಜ್, ಗಿರೀಶ್ ರಾವ್, ಇತರೆ ಕಂಪನಿಗಳ ಸೂರ್ಯನಾರಾಯಣ, ಬಾಬು ಪಾಲ್ಗೊಂಡಿದ್ದರು.

More news from ಕರ್ನಾಟಕ and nearby areas
  • ಗೊಲ್ಲರಹಳ್ಳಿ ಕಾಳಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನ. ಹಲಗೂರು:- ಸಮೀಪದ ಗೊಲ್ಲರಹಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ 4 ದಿನಗಳ ಕಾಲ ವಿವಿಧ ಪೂಜಾ ಪುನಸ್ಕಾರಗಳೊಡನೆ ಕೊಂಡೋತ್ಸವದ ನಂತರ ಸಂಪನ್ನಗೊಂಡಿದೆ. 5ನೇ ತಾರೀಕು ಭಾನುವಾರ ಸಂಜೆ ತಟ್ಟೆ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಹೋಮ, ಮಜ್ಜನ ಪೂಜಾ ಕಾರ್ಯಕ್ರಮಗಳು ನಡೆದು ನಂತರ ಭಕ್ತರು ಎಳ ವಾರವನ್ನು ಕಟ್ಟಿಕೊಂಡು ಕಾಳಮ್ಮ ದೇವಿಯ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಯ ಮುಖಾಂತರ ಬಂದು ಕೊಂಡದ ಬಾಯಿಗೆ ಸೌದೆಯನ್ನು ಹಾಕಲಾಯಿತು. ನಂತರ ರಾತ್ರಿಸಿದ್ದಪ್ಪಾಜಿ ದೇವಸ್ಥಾನದಿಂದ ಕಂಡಾಯ ತಂದು ಕಾಳಮ್ಮದೇವಿ ಮತ್ತು ಸಿದ್ದಪ್ಪಾಜಿ ದೇವರನ್ನು ಭೀಮ ನದಿಯ ತೀರದಿಂದ ಹೂ ಹೊಂಬಾಳೆ ಸಮೇತವಾಗಿ ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಕರೆ ತಂದು ಅಪಾರ ಭಕ್ತಾದಿಗಳ ನಡುವೆ ಬುಧವಾರ ಬೆಳಗಿನ ಜಾವ ಕೊಂಡೋತ್ಸವ ನಡೆದು ಜಾತ್ರಾ ಮಹೋತ್ಸವ ದಲ್ಲಿ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವಿಗೆ ತಂಬಿಟ್ಟಿನ ಆರತಿಯನ್ನು ಬೆಳಗಿ, ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು . ಮುತ್ತೈದೆಯರು ತಂಬಿಟ್ಟಿನ ಆರತಿಯ ಜೊತೆ ಅರಿಶಿಣದ ನೀರು,ಬೇವಿನ ಸೊಪ್ಪು ತಂದು ದೇವಸ್ಥಾನದ ಆವರಣದಲ್ಲಿರುವ ಕಲ್ಲಿನ ಮೇಲೆ ಹಾಕುವುದರ ಮುಖಾಂತರ ಯಾವುದೇ ರೋಗ ರುಜಿನೆಗಳು ಬರದಂತೆ ಆರೋಗ್ಯ ನೀಡುವಂತೆ ಪ್ರಾರ್ಥಿಸಿದರು. ಬುಧವಾರ ಸಾಯಂಕಾಲ ನೂತನವಾಗಿ ಮಾಡಿಸಿರುವ ರಥದಲ್ಲಿ ಕಾಳಮ್ಮ ದೇವಿಯ ಮೂರ್ತಿಯನ್ನು ಇಟ್ಟು ವಿವಿಧ ಪುಷ್ಪಗಳಿಂದ ರಥವನ್ನು ಅಲಂಕರಿಸಿ ಮೆರವಣಿಗೆ ಹೊರಟಾಗ ಜೊತೆಯಲ್ಲಿ ಸಿದ್ದಪ್ಪಾಜಿ, ಎಲ್ಲಮ್ಮ ತಾಯಿ ದೇವರುಗಳ ಮೆರವಣಿಗೆ ಮತ್ತು ಪೂಜಾ ಕುಣಿತ ದೊಡನೆ ಗೊಲ್ಲರಹಳ್ಳಿ, ನಂಜಾಪುರ ಸೇರಿದಂತೆ ಸುತ್ತಮುತ್ತ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮದ ಜಿ.ಎಂ. ಮಹಾದೇವ ಮಾತನಾಡಿ, ತಲ ತಲಾಂತರ ಗಳಿಂದ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವಂತೆ ಈ ಬಾರಿಯೂ ಸಂಪ್ರದಾಯದಂತೆ ಈ ಹಬ್ಬವನ್ನು ಎಲ್ಲಾ ವರ್ಗದವರು ಸೇರಿ ಭಕ್ತಿ ಭಾವ ಪೂರಕವಾಗಿ ಆಚರಿಸಿದ್ದೇವೆ. ಮೊದಲ ಬಾರಿಗೆ ನೂತನವಾಗಿ ತಯಾರಿಸಿರುವ ರಥದಲ್ಲಿ ನಮ್ಮ ಕಾಳಮ್ಮ ದೇವಿಯ ಮೂರ್ತಿಯನ್ನುಇಟ್ಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ರಾತ್ರಿ ಪಲ್ಲಕ್ಕಿ ಉತ್ಸವವನ್ನು ಸಹ ನಡೆಸಲಾಯಿತು ಎಂದರು. ಬಸವಣ್ಣ ಮಾತನಾಡಿ ಗ್ರಾಮದ ಎಲ್ಲ ಜನತೆ ಒಗ್ಗಟ್ಟಿನಿಂದ ದೇವರ ಕಾರ್ಯಗಳಲ್ಲಿ ಪಾಲ್ಗೊಂಡು ಗ್ರಾಮದ ಯಶಸ್ಸು ಹಾಗೂ ನಾಡಿನ ಯಶಸ್ವಿಗಾಗಿ ಪ್ರಾರ್ಥಿಸಿದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರ್ಚಕರು, ನಾಡಗೌಡರು, ಯಜಮಾನರು, ಊರಿನ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು
    1
    ಗೊಲ್ಲರಹಳ್ಳಿ ಕಾಳಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನ.
ಹಲಗೂರು:- ಸಮೀಪದ ಗೊಲ್ಲರಹಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ 4 ದಿನಗಳ ಕಾಲ ವಿವಿಧ ಪೂಜಾ ಪುನಸ್ಕಾರಗಳೊಡನೆ ಕೊಂಡೋತ್ಸವದ ನಂತರ  ಸಂಪನ್ನಗೊಂಡಿದೆ.
5ನೇ ತಾರೀಕು ಭಾನುವಾರ ಸಂಜೆ ತಟ್ಟೆ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಹೋಮ, ಮಜ್ಜನ ಪೂಜಾ ಕಾರ್ಯಕ್ರಮಗಳು ನಡೆದು ನಂತರ ಭಕ್ತರು ಎಳ ವಾರವನ್ನು ಕಟ್ಟಿಕೊಂಡು ಕಾಳಮ್ಮ ದೇವಿಯ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಯ ಮುಖಾಂತರ ಬಂದು ಕೊಂಡದ ಬಾಯಿಗೆ ಸೌದೆಯನ್ನು ಹಾಕಲಾಯಿತು.
ನಂತರ ರಾತ್ರಿಸಿದ್ದಪ್ಪಾಜಿ ದೇವಸ್ಥಾನದಿಂದ ಕಂಡಾಯ ತಂದು ಕಾಳಮ್ಮದೇವಿ ಮತ್ತು ಸಿದ್ದಪ್ಪಾಜಿ ದೇವರನ್ನು ಭೀಮ ನದಿಯ ತೀರದಿಂದ ಹೂ ಹೊಂಬಾಳೆ ಸಮೇತವಾಗಿ ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಕರೆ ತಂದು ಅಪಾರ ಭಕ್ತಾದಿಗಳ ನಡುವೆ ಬುಧವಾರ ಬೆಳಗಿನ ಜಾವ ಕೊಂಡೋತ್ಸವ ನಡೆದು ಜಾತ್ರಾ ಮಹೋತ್ಸವ ದಲ್ಲಿ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವಿಗೆ ತಂಬಿಟ್ಟಿನ ಆರತಿಯನ್ನು ಬೆಳಗಿ, ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು . ಮುತ್ತೈದೆಯರು ತಂಬಿಟ್ಟಿನ ಆರತಿಯ ಜೊತೆ ಅರಿಶಿಣದ ನೀರು,ಬೇವಿನ ಸೊಪ್ಪು ತಂದು ದೇವಸ್ಥಾನದ ಆವರಣದಲ್ಲಿರುವ ಕಲ್ಲಿನ ಮೇಲೆ ಹಾಕುವುದರ ಮುಖಾಂತರ ಯಾವುದೇ ರೋಗ ರುಜಿನೆಗಳು ಬರದಂತೆ ಆರೋಗ್ಯ ನೀಡುವಂತೆ ಪ್ರಾರ್ಥಿಸಿದರು.
ಬುಧವಾರ ಸಾಯಂಕಾಲ ನೂತನವಾಗಿ ಮಾಡಿಸಿರುವ ರಥದಲ್ಲಿ ಕಾಳಮ್ಮ ದೇವಿಯ ಮೂರ್ತಿಯನ್ನು ಇಟ್ಟು ವಿವಿಧ ಪುಷ್ಪಗಳಿಂದ ರಥವನ್ನು ಅಲಂಕರಿಸಿ ಮೆರವಣಿಗೆ ಹೊರಟಾಗ ಜೊತೆಯಲ್ಲಿ ಸಿದ್ದಪ್ಪಾಜಿ, ಎಲ್ಲಮ್ಮ ತಾಯಿ ದೇವರುಗಳ ಮೆರವಣಿಗೆ ಮತ್ತು ಪೂಜಾ ಕುಣಿತ ದೊಡನೆ ಗೊಲ್ಲರಹಳ್ಳಿ, ನಂಜಾಪುರ ಸೇರಿದಂತೆ ಸುತ್ತಮುತ್ತ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮದ ಜಿ.ಎಂ. ಮಹಾದೇವ ಮಾತನಾಡಿ,
ತಲ ತಲಾಂತರ ಗಳಿಂದ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವಂತೆ ಈ ಬಾರಿಯೂ ಸಂಪ್ರದಾಯದಂತೆ ಈ ಹಬ್ಬವನ್ನು ಎಲ್ಲಾ ವರ್ಗದವರು ಸೇರಿ ಭಕ್ತಿ ಭಾವ ಪೂರಕವಾಗಿ ಆಚರಿಸಿದ್ದೇವೆ. ಮೊದಲ ಬಾರಿಗೆ ನೂತನವಾಗಿ ತಯಾರಿಸಿರುವ ರಥದಲ್ಲಿ ನಮ್ಮ ಕಾಳಮ್ಮ ದೇವಿಯ ಮೂರ್ತಿಯನ್ನುಇಟ್ಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ರಾತ್ರಿ  ಪಲ್ಲಕ್ಕಿ ಉತ್ಸವವನ್ನು ಸಹ ನಡೆಸಲಾಯಿತು ಎಂದರು.
ಬಸವಣ್ಣ ಮಾತನಾಡಿ ಗ್ರಾಮದ ಎಲ್ಲ ಜನತೆ ಒಗ್ಗಟ್ಟಿನಿಂದ ದೇವರ ಕಾರ್ಯಗಳಲ್ಲಿ ಪಾಲ್ಗೊಂಡು ಗ್ರಾಮದ ಯಶಸ್ಸು ಹಾಗೂ ನಾಡಿನ ಯಶಸ್ವಿಗಾಗಿ ಪ್ರಾರ್ಥಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರ್ಚಕರು, ನಾಡಗೌಡರು, ಯಜಮಾನರು, ಊರಿನ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    8 min ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    5 hrs ago
  • On Invitation From RTI ACTIVIST SADA E ITTEHA FOUNDER BABA MUJAHID ALI VISITED GUMBAD E SHAHI IN SRIRANGAPATNA
    1
    On Invitation From RTI ACTIVIST SADA E ITTEHA FOUNDER BABA MUJAHID ALI VISITED GUMBAD E SHAHI IN SRIRANGAPATNA
    user_Mudassir Ahmed
    Mudassir Ahmed
    Local News Reporter ಮೈಸೂರು, ಮೈಸೂರು, ಕರ್ನಾಟಕ•
    7 hrs ago
  • ಹನೂರು :ತಾಲೂಕಿನ ಸೂಳೆರಿಪಾಳ್ಯ ಗ್ರಾ. ಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಶ್ರೀ ಮಕ್ಕಳ ಮಾರಮ್ಮನ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೊದಲ ದಿನವಾದ ಮಂಗಳವಾರ ತಡರಾತ್ರಿ ಶ್ರೀ ಮಕ್ಕಳ ಮಾರಮ್ಮನಿಗೆ ಜಾಗರ ಸಮರ್ಪಣೆ ಮಾಡಲಾಯಿತು. ಜಾತ್ರೆಯ ಮೊದಲ ದಿನ ಶ್ರೀ ಮಕ್ಕಳ ಮಾರಮ್ಮನಿಗೆ ವಿವಿಧ ಪುಷ್ಪಲಂಕಾರ ಮಾಡಿ,ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ತಡರಾತ್ರಿ 12 ಗಂಟೆಯ ಸಮಯದಲ್ಲಿ ಊರಿನ ಪ್ರತಿ ಮನೆಯಲ್ಲೂ ದ್ವಿದಳ ದಾನ್ಯಗಳಿಂದ ಮೊಳಕೆ ಹೊಡೆದ ಪೈರನ್ನ ತಂದು ಶ್ರೀ ಮಕ್ಕಳ ಮಾರಮ್ಮನಿಗೆ ಅರ್ಪಿಸಿದರು. ಮೆರಗು ತಂದ ಗಾಡಿ ಗೊಂಬೆ :ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಬಿದಿರಿನಿಂದ ಮಾಡಿದ ಬೋಂಬೆಯು ನೋಡುಗರ ಕಣ್ಮಣ ಸೆಳೆಯುವಂತಿತ್ತು. ಕಳೆದ 10 ವರ್ಷಗಳ ನಂತರ ವೆಂಕಟಾಚಲಚಾರಿಯವರ ಕಸುಬಾಗಿದ್ದು, ಒಣ ಬಿದಿರಿನಿಂದ ಬೋಂಬೆ ತಯಾರು ಮಾಡಿ, ಬಟ್ಟೆ ಓದಿಸಿಕೊಂಡು ಕುಣಿದರು. ತಮಟೆ ಸದ್ದಿಗೆ ಯುವಕರು, ಯಜಮಾನರು, ಮಕ್ಕಳು ಕುಣಿದು ಕುಪ್ಪಳಿಸಿದರು.
    4
    ಹನೂರು :ತಾಲೂಕಿನ ಸೂಳೆರಿಪಾಳ್ಯ ಗ್ರಾ. ಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಶ್ರೀ ಮಕ್ಕಳ ಮಾರಮ್ಮನ  ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೊದಲ ದಿನವಾದ ಮಂಗಳವಾರ ತಡರಾತ್ರಿ ಶ್ರೀ ಮಕ್ಕಳ ಮಾರಮ್ಮನಿಗೆ ಜಾಗರ ಸಮರ್ಪಣೆ ಮಾಡಲಾಯಿತು.
ಜಾತ್ರೆಯ ಮೊದಲ ದಿನ ಶ್ರೀ ಮಕ್ಕಳ ಮಾರಮ್ಮನಿಗೆ ವಿವಿಧ ಪುಷ್ಪಲಂಕಾರ ಮಾಡಿ,ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ವಿಶೇಷ ಪೂಜೆ ನೆರವೇರಿತು.
ತಡರಾತ್ರಿ 12 ಗಂಟೆಯ ಸಮಯದಲ್ಲಿ  ಊರಿನ ಪ್ರತಿ ಮನೆಯಲ್ಲೂ ದ್ವಿದಳ ದಾನ್ಯಗಳಿಂದ ಮೊಳಕೆ ಹೊಡೆದ ಪೈರನ್ನ ತಂದು ಶ್ರೀ ಮಕ್ಕಳ ಮಾರಮ್ಮನಿಗೆ ಅರ್ಪಿಸಿದರು.
ಮೆರಗು ತಂದ ಗಾಡಿ ಗೊಂಬೆ :ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ  ಬಿದಿರಿನಿಂದ ಮಾಡಿದ ಬೋಂಬೆಯು ನೋಡುಗರ ಕಣ್ಮಣ ಸೆಳೆಯುವಂತಿತ್ತು. ಕಳೆದ 10 ವರ್ಷಗಳ ನಂತರ ವೆಂಕಟಾಚಲಚಾರಿಯವರ ಕಸುಬಾಗಿದ್ದು, ಒಣ ಬಿದಿರಿನಿಂದ ಬೋಂಬೆ ತಯಾರು ಮಾಡಿ, ಬಟ್ಟೆ ಓದಿಸಿಕೊಂಡು ಕುಣಿದರು.
ತಮಟೆ ಸದ್ದಿಗೆ ಯುವಕರು, ಯಜಮಾನರು, ಮಕ್ಕಳು ಕುಣಿದು ಕುಪ್ಪಳಿಸಿದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    20 hrs ago
  • ಮೈಸೂರು: ನಗರದ ಜನಗಣತಿ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಜನಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲಿರುವ ಶಿಕ್ಷಕರು, ಮೇಲ್ವಿಚಾರಕರು ಹಾಗೂ ಸಿಬ್ಬಂದಿಗೆ ಡಿಜಿಟಲ್ ಪದ್ಧತಿಯ ಜನಗಣತಿ ಹಾಗೂ ಸೆಲ್ಫ್ ಜನಗಣತಿ (Self Enumeration) ಕುರಿತು ವಿವರವಾದ ಮಾರ್ಗದರ್ಶನ ನೀಡಲಾಯಿತು. ತರಬೇತಿ ವೇಳೆ ಅಧಿಕಾರಿಗಳು ಮಾತನಾಡಿ, ಜನಗಣತಿ ದೇಶದ ಯೋಜನೆ ರೂಪಿಸುವಲ್ಲಿ ಪ್ರಮುಖ ಅಂಕಿಅಂಶಗಳನ್ನು ಒದಗಿಸುವ ಮಹತ್ವದ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು. ಜನಸಂಖ್ಯೆ, ಶಿಕ್ಷಣ, ಉದ್ಯೋಗ, ವಾಸಸ್ಥಿತಿ, ಸಾಮಾಜಿಕ ಹಾಗೂ ಆರ್ಥಿಕ ಮಾಹಿತಿಗಳು ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಆಧಾರವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ನಿಖರ ಮಾಹಿತಿಯನ್ನು ನೀಡುವುದು ಅಗತ್ಯ ಎಂದು ತಿಳಿಸಲಾಯಿತು. ಈ ಬಾರಿ ಜನಗಣತಿಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಾಗರಿಕರು ತಮ್ಮ ಮನೆಗಳಿಂದಲೇ ಸ್ವಯಂವಾಗಿ ಮಾಹಿತಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಇದನ್ನೇ ಸೆಲ್ಫ್ ಜನಗಣತಿ ಎಂದು ಕರೆಯಲಾಗುತ್ತದೆ. ಸೆಲ್ಫ್ ಜನಗಣತಿ ಮಾಡಿಕೊಳ್ಳುವುದು ಹೇಗೆ? ನಾಗರಿಕರು ಕೆಳಗಿನ ವಿಧಾನವನ್ನು ಅನುಸರಿಸಿ ಸೆಲ್ಫ್ ಜನಗಣತಿ ಪೂರ್ಣಗೊಳಿಸಬಹುದು: ಅಧಿಕೃತ ಜನಗಣತಿ ವೆಬ್‌ಸೈಟ್ ಗೆ ಭೇಟಿ ನೀಡಬೇಕು. ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಮೂಲಕ ನೋಂದಣಿ ಮಾಡಿಕೊಂಡು OTP ಮೂಲಕ ಲಾಗಿನ್ ಆಗಬೇಕು. ಮನೆಯ ವಿವರ, ಕುಟುಂಬದ ಸದಸ್ಯರ ಸಂಖ್ಯೆ, ವಯಸ್ಸು, ಶಿಕ್ಷಣ, ಉದ್ಯೋಗ ಹಾಗೂ ಇತರೆ ಅಗತ್ಯ ಮಾಹಿತಿಗಳನ್ನು ಸರಿಯಾಗಿ ನಮೂದಿಸಬೇಕು. ನೀಡಿದ ಮಾಹಿತಿಯನ್ನು ಪರಿಶೀಲಿಸಿ ಅಂತಿಮವಾಗಿ Submit ಮಾಡಬೇಕು. ಸಲ್ಲಿಸಿದ ನಂತರ ಸಿಗುವ ರೆಫರೆನ್ಸ್ ಸಂಖ್ಯೆ ಅಥವಾ ದೃಢೀಕರಣವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೂ ಶಿಕ್ಷಕರು ಮನೆ ಬಂದಿರುವ id ತೋರಿಸಿದರೆ ಸಾಕು ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸಾರ್ವಜನಿಕರಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದ್ದು, ಡಿಜಿಟಲ್ ಜನಗಣತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು. ಸೆಲ್ಫ್ ಜನಗಣತಿ ವಿಧಾನದಿಂದ ಸಮಯ ಉಳಿತಾಯವಾಗುವುದರ ಜೊತೆಗೆ ಮಾಹಿತಿ ಸಂಗ್ರಹ ಪ್ರಕ್ರಿಯೆ ವೇಗವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು. ನಗರದಲ್ಲಿ ಜನಗಣತಿ ಕಾರ್ಯ ಯಶಸ್ವಿಯಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸ್ವಯಂವಾಗಿ ಮಾಹಿತಿ ಸಲ್ಲಿಸಿ ಸಹಕರಿಸುವಂತೆ ಪಾಲಿಕೆ ಮನವಿ ಮಾಡಿದೆ.
    1
    ಮೈಸೂರು: ನಗರದ ಜನಗಣತಿ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಜನಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲಿರುವ ಶಿಕ್ಷಕರು, ಮೇಲ್ವಿಚಾರಕರು ಹಾಗೂ ಸಿಬ್ಬಂದಿಗೆ ಡಿಜಿಟಲ್ ಪದ್ಧತಿಯ ಜನಗಣತಿ ಹಾಗೂ ಸೆಲ್ಫ್ ಜನಗಣತಿ (Self Enumeration) ಕುರಿತು ವಿವರವಾದ ಮಾರ್ಗದರ್ಶನ ನೀಡಲಾಯಿತು.
ತರಬೇತಿ ವೇಳೆ ಅಧಿಕಾರಿಗಳು ಮಾತನಾಡಿ, ಜನಗಣತಿ ದೇಶದ ಯೋಜನೆ ರೂಪಿಸುವಲ್ಲಿ ಪ್ರಮುಖ ಅಂಕಿಅಂಶಗಳನ್ನು ಒದಗಿಸುವ ಮಹತ್ವದ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು. ಜನಸಂಖ್ಯೆ, ಶಿಕ್ಷಣ, ಉದ್ಯೋಗ, ವಾಸಸ್ಥಿತಿ, ಸಾಮಾಜಿಕ ಹಾಗೂ ಆರ್ಥಿಕ ಮಾಹಿತಿಗಳು ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಆಧಾರವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ನಿಖರ ಮಾಹಿತಿಯನ್ನು ನೀಡುವುದು ಅಗತ್ಯ ಎಂದು ತಿಳಿಸಲಾಯಿತು.
ಈ ಬಾರಿ ಜನಗಣತಿಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಾಗರಿಕರು ತಮ್ಮ ಮನೆಗಳಿಂದಲೇ ಸ್ವಯಂವಾಗಿ ಮಾಹಿತಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಇದನ್ನೇ ಸೆಲ್ಫ್ ಜನಗಣತಿ ಎಂದು ಕರೆಯಲಾಗುತ್ತದೆ.
ಸೆಲ್ಫ್ ಜನಗಣತಿ ಮಾಡಿಕೊಳ್ಳುವುದು ಹೇಗೆ?
ನಾಗರಿಕರು ಕೆಳಗಿನ ವಿಧಾನವನ್ನು ಅನುಸರಿಸಿ ಸೆಲ್ಫ್ ಜನಗಣತಿ ಪೂರ್ಣಗೊಳಿಸಬಹುದು:
ಅಧಿಕೃತ ಜನಗಣತಿ ವೆಬ್‌ಸೈಟ್  ಗೆ ಭೇಟಿ ನೀಡಬೇಕು.
ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಮೂಲಕ ನೋಂದಣಿ ಮಾಡಿಕೊಂಡು OTP ಮೂಲಕ ಲಾಗಿನ್ ಆಗಬೇಕು.
ಮನೆಯ ವಿವರ, ಕುಟುಂಬದ ಸದಸ್ಯರ ಸಂಖ್ಯೆ, ವಯಸ್ಸು, ಶಿಕ್ಷಣ, ಉದ್ಯೋಗ ಹಾಗೂ ಇತರೆ ಅಗತ್ಯ ಮಾಹಿತಿಗಳನ್ನು ಸರಿಯಾಗಿ ನಮೂದಿಸಬೇಕು.
ನೀಡಿದ ಮಾಹಿತಿಯನ್ನು ಪರಿಶೀಲಿಸಿ ಅಂತಿಮವಾಗಿ Submit ಮಾಡಬೇಕು.
ಸಲ್ಲಿಸಿದ ನಂತರ ಸಿಗುವ ರೆಫರೆನ್ಸ್ ಸಂಖ್ಯೆ ಅಥವಾ ದೃಢೀಕರಣವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೂ ಶಿಕ್ಷಕರು ಮನೆ ಬಂದಿರುವ id ತೋರಿಸಿದರೆ ಸಾಕು 
ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸಾರ್ವಜನಿಕರಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದ್ದು, ಡಿಜಿಟಲ್ ಜನಗಣತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು. ಸೆಲ್ಫ್ ಜನಗಣತಿ ವಿಧಾನದಿಂದ ಸಮಯ ಉಳಿತಾಯವಾಗುವುದರ ಜೊತೆಗೆ ಮಾಹಿತಿ ಸಂಗ್ರಹ ಪ್ರಕ್ರಿಯೆ ವೇಗವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಗರದಲ್ಲಿ ಜನಗಣತಿ ಕಾರ್ಯ ಯಶಸ್ವಿಯಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸ್ವಯಂವಾಗಿ ಮಾಹಿತಿ ಸಲ್ಲಿಸಿ ಸಹಕರಿಸುವಂತೆ ಪಾಲಿಕೆ ಮನವಿ ಮಾಡಿದೆ.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Nanjangud, Mysuru•
    21 hrs ago
  • Post by Ahmed Rasool
    1
    Post by Ahmed Rasool
    user_Ahmed Rasool
    Ahmed Rasool
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಹುಲಿಯೊಂದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಸಿಗರತ್ತ ಗಾಂಭೀರ್ಯದಿಂದ ನೋಡುತ್ತಾ ನಿಧಾನವಾಗಿ ಸಾಗಿದ ಹುಲಿಯ ದೃಶ್ಯ ಸಫಾರಿ ಪ್ರಿಯರಿಗೆ ರೋಮಾಂಚನಕಾರಿ ಅನುಭವ ನೀಡಿದೆ. ಕಬಿನಿಯ ನೈಸರ್ಗಿಕ ಸೌಂದರ್ಯದ ನಡುವೆ ಕಾಣಿಸಿಕೊಂಡ ಈ ಅಪರೂಪದ ಕ್ಷಣ ಪ್ರಕೃತಿ ಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕಾಡಿನ ರಾಜನ ಗಾಂಭೀರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದ್ದು, ಕಬಿನಿ ಸಫಾರಿಯ ವಿಶೇಷತೆಯನ್ನು ಮತ್ತೊಮ್ಮೆ ನೆನಪಿಸಿದೆ.
    1
    ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಹುಲಿಯೊಂದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಸಿಗರತ್ತ ಗಾಂಭೀರ್ಯದಿಂದ ನೋಡುತ್ತಾ ನಿಧಾನವಾಗಿ ಸಾಗಿದ ಹುಲಿಯ ದೃಶ್ಯ ಸಫಾರಿ ಪ್ರಿಯರಿಗೆ ರೋಮಾಂಚನಕಾರಿ ಅನುಭವ ನೀಡಿದೆ. ಕಬಿನಿಯ ನೈಸರ್ಗಿಕ ಸೌಂದರ್ಯದ ನಡುವೆ ಕಾಣಿಸಿಕೊಂಡ ಈ ಅಪರೂಪದ ಕ್ಷಣ ಪ್ರಕೃತಿ ಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕಾಡಿನ ರಾಜನ ಗಾಂಭೀರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದ್ದು, ಕಬಿನಿ ಸಫಾರಿಯ ವಿಶೇಷತೆಯನ್ನು ಮತ್ತೊಮ್ಮೆ ನೆನಪಿಸಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ಮಳವಳ್ಳಿ: ಅಭಿವೃದ್ಧಿಯಲ್ಲಿ ಹಿಂದುಳಿರುವ ಮಳವಳ್ಳಿಯ ಪ್ರಗತಿಗೆ ನಾನಾ ಮೂಲಗಳಿಂದ ಅನುದಾನ ತಂದು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಸೋಮವಾರ ಸಿಎಸ್ಆರ್ ಅನುದಾನದಡಿ 3.28 ಕೋಟಿ ರೂ.ವೆಚ್ಚದ ನಾಲ್ಕು ಪೊಲೀಸ್ ವಾಹನಗಳಿಗೆ ಚಾಲನೆ ನೀಡಿಕೆ, ಸಂಚಾರ ಸುರಕ್ಷತೆಗಾಗಿ ಅಳವಡಿಸಿರುವ ಪೊಲೀಸ್ ಚೌಕಿ ಹಾಗೂ ಆಧುನಿಕ ತಂತ್ರಜ್ಞಾನವುಳ್ಳ ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿ ಕ್ಯಾಮಾರಗಳು, ಸಿಸಿಟಿವಿ ಕಮಾಂಡ್ ಸೆಂಟರ್ ಗಳನ್ನು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಳವಳ್ಳಿ ತಾಲ್ಲೂಕಿನಲ್ಲಿ ಯಾವುದೇ ಉದ್ದಿಮೆಗಳಿಲ್ಲದೇ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕ್ಷೇತ್ರದಲ್ಲಿ ಹಲವು ಗ್ರಾಮಗಳಲ್ಲಿ ಕನ್ನಂಬಾಡಿ ಕಟ್ಟೆಯಿಂದ ಅರ್ಧ ಭಾಗಕ್ಕೆ ನೀರು ಸಿಕ್ಕರೆ, ಮತ್ತರ್ಥ ಭಾಗ ಒಣ ಪ್ರದೇಶವಾಗಿದೆ ಎಂದರು. ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲ್ಲೂಕು ನಮ್ಮದಾಗಿದೆ. ಇತರೆ ತಾಲ್ಲೂಕುಗಳಲ್ಲಿ ಉದ್ಯಮಗಳಿದ್ದು, ಅಭಿವೃದ್ಧಿ ಪಥದಲ್ಲಿ ಇವೆ. ತಾಲ್ಲೂಕಿನ ಅರ್ಧ ಭಾಗಕ್ಕೆ ಕನ್ನಂಬಾಡಿ ಕಟ್ಟೆಯ ನೀರು ಸಿಕ್ಕರೆ, ಉಳಿದೆಡೆ ಒಣ ಪ್ರದೇಶವಾಗಿದೆ. ಇಂಥ ವ್ಯವಸ್ಥೆಗೆ ಹೊಸ ಆಯಾಮ ನೀಡಲು ಹಲಗೂರು, ಕಸಬಾ, ಬೊಪ್ಪೇಗೌಡನಪುರ ಹೋಬಳಿಯ ಬರಡು ಭೂಮಿಯಲ್ಲಿ ಈಗ ಅಂತರ್ಜಲ ಹೆಚ್ಚಳವಾಗಿದೆ. ಇದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ ಎಂದು ಹೇಳಿದರು. 600 ಕೋಟಿ ವೆಚ್ಚದಲ್ಲಿ ನಾಲಾ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲೂ ರೈತರ ನೆರವಿಗೆ ನಿಲ್ಲುವೆ ಕೆಲಸ ಮಾಡಲಾಗುವುದು. ನನಗೆ ವೈಯಕ್ತಿಕವಾಗಿ ತಾಲ್ಲೂಕಿನ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶ ಇದ್ದು, ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆದು, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರಕುವಂತೆ ಪರಿಸ್ಥಿತಿ ನಿರ್ಮಾಣ ಮಾಡಲಾಗುವುದು ಎಂದರು. ಹಳೆಯ ವಾಹನಗಳ ಬಳಕೆಯಿಂದ ಆಗುವ ಸಮಸ್ಯೆ ಅರಿತು ಸನ್ಸೆರಾ ಫೌಂಡೇಶನ್ ವತಿಯಿಂದ 4 ಮಹೀಂದ್ರಾ ಕಂಪನಿಯ ಜೀಪುಗಳನ್ನು ನೀಡಿದ್ದು, ಸಮಸ್ಯೆ ಬಗೆಹರಿದಂತಾಗಿದೆ. ಸನ್ಸೆರಾ ಫೌಂಡೇಶನ್ ವತಿಯಿಂದ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕಿನಲ್ಲಿ ಪ್ರತಿ ಕ್ಲಸ್ಟರ್ ಗೆ ಒಬ್ಬ ಪರಿಣಿತ ಆಂಗ್ಲ ಶಿಕ್ಷಕರನ್ನು 10 ತಿಂಗಳ ಅವಧಿಗೆ ನೇಮಿಸಿಕೊಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ದಕ್ಷಿಣ ವಲಯ ಐಜಿಪಿ ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಯಾವುದೇ ಘಟನೆ ನಡೆದಾಗ ಮತ್ತು ನಂತರ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಬಹಳ ಸಹಾಯಕಾರಿಯಾಗಲಿದೆ. ನಮ್ಮ ಇಲಾಖೆ ಸದ್ಬಳಕೆ ಮಾಡಿಕೊಳ್ಳಲಿದೆ. ಮಹಾನಗರಗಲ್ಲಿರುವ ಇಂತಹ ಪೊಲೀಸ್ ಚೌಕಿ ವ್ಯವಸ್ಥೆ, ಮಳವಳ್ಳಿ ಪಟ್ಟಣದಲ್ಲಿ ಇರುವುದು ಒಂದು ಉತ್ತಮ ಬೆಳವಣಿಗೆ. ಅಭಿವೃದ್ಧಿಗೆ ಸಿಎಸ್ ಆರ್ ನಿಧಿಯನ್ನು ಬಳಸುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ಇಂಥ ಸಾರ್ವಜನಿಕ ಉಪಯೋಗ ಕೆಲಸಕ್ಕೆ ತಮ್ಮದೇ ಶ್ರೇಷ್ಠತೆ ಮತ್ತು ದೂರದೃಷ್ಟಿ ಚಿಂತನೆ ಬೇಕು. ಅದು ಪಿ.ಎಂ.ನರೇಂದ್ರಸ್ವಾಮಿ ಅವರಲ್ಲಿದೆ. ಶಾಸಕರ ವಿಶೇಷ ಕಾಳಜಿಯಿಂದ ಪೊಲೀಸ್ ಇಲಾಖೆಗೆ ನೀಡಿರುವ ವಾಹನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಾಲ್ಲೂಕಿನ ಶೈಕ್ಷಣಿಕ ಪ್ರಗತಿ ರಾಜ್ಯದಲ್ಲಿ ಮಾದರಿಯಾಗಿದೆ ಎಂದು ಹೇಳಿದರು. ಒಳ್ಳೆಯ ಕೆಲಸ ಮಾಡಲಿಕ್ಕೆ ಅವಕಾಶ ಸಿಕ್ಕಿದಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮುಖ್ಯವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಇದರ ಪರಿಣಾಮ ತಿಳಿಯಲಿದೆ. ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಡಿಜಿಟಲೀಕರಣ ಪರಿಣಾಮ ಬೀರಲಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ, ಆದರೆ ಒಳ್ಳೆಯ ಕೆಲಸಗಳು ಜನರು ಮನದಲ್ಲಿ ಉಳಿಯಲಿದೆ ಎಂದು ಹೇಳಿದರು. ಜಿ.ಪ.ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕಾಲಘಟ್ಟ ಬದಲಾದಂತೆ ನಾವು ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಪೊಲೀಸ್ ಇಲಾಖೆಗೆ ನೀಡಿರುವ ಸವಲತ್ತುಗಳಿಂದ ಮಳವಳ್ಳಿಗೆ ಅನುಕೂಲವಾಗಲಿದೆ. ಶಾಸಕರ ಕಾಳಜಿಯನ್ನು ಎಲ್ಲರೂ ಪ್ರಶಂಸಿಸಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯ ಅನುಕೂಲತೆಗಾಗಿ 8 ಸಾವಿರ ಮಕ್ಕಳಿಗೆ ಕಲಿಕಾ ಮಿತ್ರದಂಥ ಪುಸ್ತಕಗಳನ್ನು ನೀಡಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಇದ್ದರಿಂದ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಮಾತನಾಡಿ, ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ 78 ಸಿಸಿ ಕ್ಯಾಮರಾಗಳ ಅಳವಡಿಕೆ, ಟ್ರಾಫಿಕ್ ಸಿಗ್ನಲ್ ನಿಂದ ಸಂಚಾರ ನಿಯಂತ್ರಣವಾಗಲಿದೆ. ನಾಲ್ಕು ವಾಹನಗಳು ಸೇರಿದಂತೆ ಇಂಥ ಸೌಲಭ್ಯಗಳನ್ನು ಬಳಸಿಕೊಂಡು ಜನಪರ ಕೆಲಸ ಮಾಡಲಾಗುವುದು ಎಂದು ಹೇಳಿದರು. ಸನ್ಸೆರಾ ಫೌಂಡೇಶನ್ ನ ವ್ಯವಸ್ಥಾಪ ಮನೋಹರ್ ಮಾತನಾಡಿ, ನಮ್ಮ ಕಂಪನಿಯು ಆಟೋ ಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಕೆರೆಗಳ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಉನ್ನತೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಶಾಸಕರ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಮಳವಳ್ಳಿ ತಾಲೂಕಿಗೂ ವಿಸ್ತರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಚಂದನ್, ತಹಶೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಸನ್ಸೆರಾ ಫೌಂಡೇಶನ್ ನ ಮನೋಹರ್, ವಸಂತ್ ಭಾರದ್ವಾಜ್, ಗಿರೀಶ್ ರಾವ್, ಇತರೆ ಕಂಪನಿಗಳ ಸೂರ್ಯನಾರಾಯಣ, ಬಾಬು ಪಾಲ್ಗೊಂಡಿದ್ದರು.
    1
    ಮಳವಳ್ಳಿ: ಅಭಿವೃದ್ಧಿಯಲ್ಲಿ ಹಿಂದುಳಿರುವ ಮಳವಳ್ಳಿಯ ಪ್ರಗತಿಗೆ ನಾನಾ ಮೂಲಗಳಿಂದ ಅನುದಾನ ತಂದು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಸೋಮವಾರ ಸಿಎಸ್ಆರ್ ಅನುದಾನದಡಿ 3.28 ಕೋಟಿ ರೂ.ವೆಚ್ಚದ ನಾಲ್ಕು ಪೊಲೀಸ್ ವಾಹನಗಳಿಗೆ ಚಾಲನೆ ನೀಡಿಕೆ, ಸಂಚಾರ ಸುರಕ್ಷತೆಗಾಗಿ ಅಳವಡಿಸಿರುವ ಪೊಲೀಸ್ ಚೌಕಿ ಹಾಗೂ ಆಧುನಿಕ ತಂತ್ರಜ್ಞಾನವುಳ್ಳ ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿ ಕ್ಯಾಮಾರಗಳು, ಸಿಸಿಟಿವಿ ಕಮಾಂಡ್ ಸೆಂಟರ್ ಗಳನ್ನು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಳವಳ್ಳಿ ತಾಲ್ಲೂಕಿನಲ್ಲಿ ಯಾವುದೇ ಉದ್ದಿಮೆಗಳಿಲ್ಲದೇ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕ್ಷೇತ್ರದಲ್ಲಿ ಹಲವು ಗ್ರಾಮಗಳಲ್ಲಿ ಕನ್ನಂಬಾಡಿ ಕಟ್ಟೆಯಿಂದ ಅರ್ಧ ಭಾಗಕ್ಕೆ ನೀರು ಸಿಕ್ಕರೆ, ಮತ್ತರ್ಥ ಭಾಗ ಒಣ ಪ್ರದೇಶವಾಗಿದೆ ಎಂದರು.
ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲ್ಲೂಕು ನಮ್ಮದಾಗಿದೆ. ಇತರೆ ತಾಲ್ಲೂಕುಗಳಲ್ಲಿ ಉದ್ಯಮಗಳಿದ್ದು, ಅಭಿವೃದ್ಧಿ ಪಥದಲ್ಲಿ ಇವೆ. ತಾಲ್ಲೂಕಿನ ಅರ್ಧ ಭಾಗಕ್ಕೆ ಕನ್ನಂಬಾಡಿ ಕಟ್ಟೆಯ ನೀರು ಸಿಕ್ಕರೆ, ಉಳಿದೆಡೆ ಒಣ ಪ್ರದೇಶವಾಗಿದೆ. ಇಂಥ ವ್ಯವಸ್ಥೆಗೆ ಹೊಸ ಆಯಾಮ ನೀಡಲು ಹಲಗೂರು, ಕಸಬಾ, ಬೊಪ್ಪೇಗೌಡನಪುರ ಹೋಬಳಿಯ ಬರಡು ಭೂಮಿಯಲ್ಲಿ ಈಗ ಅಂತರ್ಜಲ ಹೆಚ್ಚಳವಾಗಿದೆ. ಇದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ ಎಂದು ಹೇಳಿದರು.
600 ಕೋಟಿ ವೆಚ್ಚದಲ್ಲಿ ನಾಲಾ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲೂ ರೈತರ ನೆರವಿಗೆ ನಿಲ್ಲುವೆ ಕೆಲಸ ಮಾಡಲಾಗುವುದು. ನನಗೆ ವೈಯಕ್ತಿಕವಾಗಿ ತಾಲ್ಲೂಕಿನ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶ ಇದ್ದು, ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆದು, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರಕುವಂತೆ ಪರಿಸ್ಥಿತಿ ನಿರ್ಮಾಣ ಮಾಡಲಾಗುವುದು ಎಂದರು.
ಹಳೆಯ ವಾಹನಗಳ ಬಳಕೆಯಿಂದ ಆಗುವ ಸಮಸ್ಯೆ ಅರಿತು ಸನ್ಸೆರಾ ಫೌಂಡೇಶನ್ ವತಿಯಿಂದ 4 ಮಹೀಂದ್ರಾ ಕಂಪನಿಯ ಜೀಪುಗಳನ್ನು ನೀಡಿದ್ದು, ಸಮಸ್ಯೆ ಬಗೆಹರಿದಂತಾಗಿದೆ. ಸನ್ಸೆರಾ ಫೌಂಡೇಶನ್ ವತಿಯಿಂದ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕಿನಲ್ಲಿ ಪ್ರತಿ ಕ್ಲಸ್ಟರ್ ಗೆ ಒಬ್ಬ ಪರಿಣಿತ ಆಂಗ್ಲ ಶಿಕ್ಷಕರನ್ನು 10 ತಿಂಗಳ ಅವಧಿಗೆ ನೇಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ದಕ್ಷಿಣ ವಲಯ ಐಜಿಪಿ ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಯಾವುದೇ ಘಟನೆ ನಡೆದಾಗ ಮತ್ತು ನಂತರ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಬಹಳ ಸಹಾಯಕಾರಿಯಾಗಲಿದೆ. ನಮ್ಮ ಇಲಾಖೆ ಸದ್ಬಳಕೆ ಮಾಡಿಕೊಳ್ಳಲಿದೆ. ಮಹಾನಗರಗಲ್ಲಿರುವ ಇಂತಹ ಪೊಲೀಸ್ ಚೌಕಿ ವ್ಯವಸ್ಥೆ, ಮಳವಳ್ಳಿ ಪಟ್ಟಣದಲ್ಲಿ ಇರುವುದು ಒಂದು ಉತ್ತಮ ಬೆಳವಣಿಗೆ. ಅಭಿವೃದ್ಧಿಗೆ ಸಿಎಸ್ ಆರ್ ನಿಧಿಯನ್ನು ಬಳಸುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ಇಂಥ ಸಾರ್ವಜನಿಕ ಉಪಯೋಗ ಕೆಲಸಕ್ಕೆ ತಮ್ಮದೇ ಶ್ರೇಷ್ಠತೆ ಮತ್ತು ದೂರದೃಷ್ಟಿ ಚಿಂತನೆ ಬೇಕು. ಅದು ಪಿ.ಎಂ.ನರೇಂದ್ರಸ್ವಾಮಿ ಅವರಲ್ಲಿದೆ. ಶಾಸಕರ ವಿಶೇಷ ಕಾಳಜಿಯಿಂದ ಪೊಲೀಸ್ ಇಲಾಖೆಗೆ ನೀಡಿರುವ ವಾಹನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಾಲ್ಲೂಕಿನ ಶೈಕ್ಷಣಿಕ ಪ್ರಗತಿ ರಾಜ್ಯದಲ್ಲಿ ಮಾದರಿಯಾಗಿದೆ ಎಂದು ಹೇಳಿದರು.
ಒಳ್ಳೆಯ ಕೆಲಸ ಮಾಡಲಿಕ್ಕೆ ಅವಕಾಶ ಸಿಕ್ಕಿದಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮುಖ್ಯವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಇದರ ಪರಿಣಾಮ ತಿಳಿಯಲಿದೆ. ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಡಿಜಿಟಲೀಕರಣ ಪರಿಣಾಮ ಬೀರಲಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ, ಆದರೆ ಒಳ್ಳೆಯ ಕೆಲಸಗಳು ಜನರು ಮನದಲ್ಲಿ ಉಳಿಯಲಿದೆ ಎಂದು ಹೇಳಿದರು.
ಜಿ.ಪ.ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕಾಲಘಟ್ಟ ಬದಲಾದಂತೆ ನಾವು ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಪೊಲೀಸ್ ಇಲಾಖೆಗೆ ನೀಡಿರುವ ಸವಲತ್ತುಗಳಿಂದ ಮಳವಳ್ಳಿಗೆ ಅನುಕೂಲವಾಗಲಿದೆ. ಶಾಸಕರ ಕಾಳಜಿಯನ್ನು ಎಲ್ಲರೂ ಪ್ರಶಂಸಿಸಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯ ಅನುಕೂಲತೆಗಾಗಿ 8 ಸಾವಿರ ಮಕ್ಕಳಿಗೆ ಕಲಿಕಾ ಮಿತ್ರದಂಥ ಪುಸ್ತಕಗಳನ್ನು ನೀಡಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಇದ್ದರಿಂದ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಮಾತನಾಡಿ, ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ 78 ಸಿಸಿ ಕ್ಯಾಮರಾಗಳ ಅಳವಡಿಕೆ, ಟ್ರಾಫಿಕ್ ಸಿಗ್ನಲ್ ನಿಂದ ಸಂಚಾರ ನಿಯಂತ್ರಣವಾಗಲಿದೆ. ನಾಲ್ಕು ವಾಹನಗಳು ಸೇರಿದಂತೆ ಇಂಥ ಸೌಲಭ್ಯಗಳನ್ನು ಬಳಸಿಕೊಂಡು ಜನಪರ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಸನ್ಸೆರಾ ಫೌಂಡೇಶನ್ ನ ವ್ಯವಸ್ಥಾಪ ಮನೋಹರ್ ಮಾತನಾಡಿ, ನಮ್ಮ ಕಂಪನಿಯು ಆಟೋ ಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಕೆರೆಗಳ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಉನ್ನತೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಶಾಸಕರ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಮಳವಳ್ಳಿ ತಾಲೂಕಿಗೂ ವಿಸ್ತರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಚಂದನ್, ತಹಶೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಸನ್ಸೆರಾ ಫೌಂಡೇಶನ್ ನ ಮನೋಹರ್, ವಸಂತ್ ಭಾರದ್ವಾಜ್, ಗಿರೀಶ್ ರಾವ್, ಇತರೆ ಕಂಪನಿಗಳ ಸೂರ್ಯನಾರಾಯಣ, ಬಾಬು ಪಾಲ್ಗೊಂಡಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.