logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. ಕಳೆದ 27 ದಿನಗಳ ಅವಧಿಯಲ್ಲಿ ಒಟ್ಟು ₹2.73 ಕೋಟಿ ಹಣ ಸಂಗ್ರಹವಾಗಿದೆ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಬೆಳಗ್ಗೆ 7:00 ಗಂಟೆಗೆ ಪ್ರಾರಂಭವಾದ ಎಣಿಕೆ ಕಾರ್ಯ ಸಂಜೆ 5:30 ರವರೆಗೆ ನಡೆಯಿತು. ಭಾನುವಾರ, ಬೇಸಿಗೆ ರಜೆ ಮತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ, ಹರಕೆಯ ರೂಪದಲ್ಲಿ ಒಟ್ಟು ₹2,73,57,105 ನಗದು, 44 ಗ್ರಾಂ ಚಿನ್ನ ಮತ್ತು 977 ಗ್ರಾಂ ಬೆಳ್ಳಿ ಪದಾರ್ಥಗಳು ಹುಂಡಿಯಲ್ಲಿ ಸಂಗ್ರಹವಾಗಿವೆ. ಹುಂಡಿಯಲ್ಲಿ ಚಲಾವಣೆಯಲ್ಲಿ ಇಲ್ಲದ 2000 ರೂಪಾಯಿ ಮುಖಬೆಲೆಯ 10 ನೋಟುಗಳು ಮತ್ತು 7 ವಿದೇಶಿ ನೋಟುಗಳು ಸಹ ಪತ್ತೆಯಾಗಿವೆ. ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಶ್ರೀ ಮರಿಸ್ವಾಮಿ, ಕಾಗಲವಾಡಿ, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರರಾದ ಶ್ರೀ ಮಹದೇವು, ಉಪ ಕಾರ್ಯದರ್ಶಿ ಶ್ರೀ ಚಂದ್ರಶೇಖರ.ಜಿ.ಎಲ್ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಶ್ರೀಮತಿ ಸ್ವರ್ಣ. ಪಿ, ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

5 hrs ago
user_Vijay kumar
Vijay kumar
ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
5 hrs ago

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. ಕಳೆದ 27 ದಿನಗಳ ಅವಧಿಯಲ್ಲಿ ಒಟ್ಟು ₹2.73 ಕೋಟಿ ಹಣ ಸಂಗ್ರಹವಾಗಿದೆ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಬೆಳಗ್ಗೆ 7:00 ಗಂಟೆಗೆ ಪ್ರಾರಂಭವಾದ ಎಣಿಕೆ ಕಾರ್ಯ ಸಂಜೆ 5:30 ರವರೆಗೆ ನಡೆಯಿತು. ಭಾನುವಾರ, ಬೇಸಿಗೆ ರಜೆ ಮತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ, ಹರಕೆಯ ರೂಪದಲ್ಲಿ ಒಟ್ಟು ₹2,73,57,105 ನಗದು, 44 ಗ್ರಾಂ ಚಿನ್ನ ಮತ್ತು 977 ಗ್ರಾಂ ಬೆಳ್ಳಿ ಪದಾರ್ಥಗಳು ಹುಂಡಿಯಲ್ಲಿ ಸಂಗ್ರಹವಾಗಿವೆ. ಹುಂಡಿಯಲ್ಲಿ ಚಲಾವಣೆಯಲ್ಲಿ ಇಲ್ಲದ 2000 ರೂಪಾಯಿ ಮುಖಬೆಲೆಯ 10 ನೋಟುಗಳು ಮತ್ತು 7 ವಿದೇಶಿ ನೋಟುಗಳು ಸಹ ಪತ್ತೆಯಾಗಿವೆ. ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಶ್ರೀ ಮರಿಸ್ವಾಮಿ, ಕಾಗಲವಾಡಿ, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರರಾದ ಶ್ರೀ ಮಹದೇವು, ಉಪ ಕಾರ್ಯದರ್ಶಿ ಶ್ರೀ ಚಂದ್ರಶೇಖರ.ಜಿ.ಎಲ್ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಶ್ರೀಮತಿ ಸ್ವರ್ಣ. ಪಿ, ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. ಕಳೆದ 27 ದಿನಗಳ ಅವಧಿಯಲ್ಲಿ ಒಟ್ಟು ₹2.73 ಕೋಟಿ ಹಣ ಸಂಗ್ರಹವಾಗಿದೆ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಬೆಳಗ್ಗೆ 7:00 ಗಂಟೆಗೆ ಪ್ರಾರಂಭವಾದ ಎಣಿಕೆ ಕಾರ್ಯ ಸಂಜೆ 5:30 ರವರೆಗೆ ನಡೆಯಿತು. ಭಾನುವಾರ, ಬೇಸಿಗೆ ರಜೆ ಮತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ, ಹರಕೆಯ ರೂಪದಲ್ಲಿ ಒಟ್ಟು ₹2,73,57,105 ನಗದು, 44 ಗ್ರಾಂ ಚಿನ್ನ ಮತ್ತು 977 ಗ್ರಾಂ ಬೆಳ್ಳಿ ಪದಾರ್ಥಗಳು ಹುಂಡಿಯಲ್ಲಿ ಸಂಗ್ರಹವಾಗಿವೆ. ಹುಂಡಿಯಲ್ಲಿ ಚಲಾವಣೆಯಲ್ಲಿ ಇಲ್ಲದ 2000 ರೂಪಾಯಿ ಮುಖಬೆಲೆಯ 10 ನೋಟುಗಳು ಮತ್ತು 7 ವಿದೇಶಿ ನೋಟುಗಳು ಸಹ ಪತ್ತೆಯಾಗಿವೆ. ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಶ್ರೀ ಮರಿಸ್ವಾಮಿ, ಕಾಗಲವಾಡಿ, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರರಾದ ಶ್ರೀ ಮಹದೇವು, ಉಪ ಕಾರ್ಯದರ್ಶಿ ಶ್ರೀ ಚಂದ್ರಶೇಖರ.ಜಿ.ಎಲ್ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಶ್ರೀಮತಿ ಸ್ವರ್ಣ. ಪಿ, ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
    1
    ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. ಕಳೆದ 27 ದಿನಗಳ ಅವಧಿಯಲ್ಲಿ ಒಟ್ಟು ₹2.73 ಕೋಟಿ ಹಣ ಸಂಗ್ರಹವಾಗಿದೆ.

ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಬೆಳಗ್ಗೆ 7:00 ಗಂಟೆಗೆ ಪ್ರಾರಂಭವಾದ ಎಣಿಕೆ ಕಾರ್ಯ ಸಂಜೆ 5:30 ರವರೆಗೆ ನಡೆಯಿತು.

ಭಾನುವಾರ, ಬೇಸಿಗೆ ರಜೆ ಮತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ, ಹರಕೆಯ ರೂಪದಲ್ಲಿ ಒಟ್ಟು ₹2,73,57,105 ನಗದು, 44 ಗ್ರಾಂ ಚಿನ್ನ ಮತ್ತು 977 ಗ್ರಾಂ ಬೆಳ್ಳಿ ಪದಾರ್ಥಗಳು ಹುಂಡಿಯಲ್ಲಿ ಸಂಗ್ರಹವಾಗಿವೆ. ಹುಂಡಿಯಲ್ಲಿ ಚಲಾವಣೆಯಲ್ಲಿ ಇಲ್ಲದ 2000 ರೂಪಾಯಿ ಮುಖಬೆಲೆಯ 10 ನೋಟುಗಳು ಮತ್ತು 7 ವಿದೇಶಿ ನೋಟುಗಳು ಸಹ ಪತ್ತೆಯಾಗಿವೆ.

ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಶ್ರೀ ಮರಿಸ್ವಾಮಿ, ಕಾಗಲವಾಡಿ, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರರಾದ ಶ್ರೀ ಮಹದೇವು, ಉಪ ಕಾರ್ಯದರ್ಶಿ ಶ್ರೀ ಚಂದ್ರಶೇಖರ.ಜಿ.ಎಲ್ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಶ್ರೀಮತಿ ಸ್ವರ್ಣ. ಪಿ, ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    5 hrs ago
  • ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ವಿನಾಯಕನಗರ ಬಡಾವಣೆಯಲ್ಲಿ ದೊಡ್ಡ ಗಾತ್ರದ ಕೇರೆಹಾವು ಮನೆಯೊಂದರ ವರಾಂಡಕ್ಕೆ ದಿಢೀರ್ ಪ್ರವೇಶಿಸಿದ್ದು, ನಂತರ ಅದನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ವಿನಾಯಕನಗರ ಬಡಾವಣೆಯ ಸುಮ ಎಂಬುವರ ಮನೆಗೆ ಕೇರೆಹಾವು ನುಗ್ಗಿದ್ದನ್ನು ಗಮನಿಸಿದ ಮನೆಯವರು ಗಾಬರಿಗೊಂಡು ಉರಗ ರಕ್ಷಕ ಪ್ರಭು ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪ್ರಭು, ಬೃಹತ್ ಕೇರೆಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
    1
    ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ವಿನಾಯಕನಗರ ಬಡಾವಣೆಯಲ್ಲಿ ದೊಡ್ಡ ಗಾತ್ರದ ಕೇರೆಹಾವು ಮನೆಯೊಂದರ ವರಾಂಡಕ್ಕೆ ದಿಢೀರ್ ಪ್ರವೇಶಿಸಿದ್ದು, ನಂತರ ಅದನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ವಿನಾಯಕನಗರ ಬಡಾವಣೆಯ ಸುಮ ಎಂಬುವರ ಮನೆಗೆ ಕೇರೆಹಾವು ನುಗ್ಗಿದ್ದನ್ನು ಗಮನಿಸಿದ ಮನೆಯವರು ಗಾಬರಿಗೊಂಡು ಉರಗ ರಕ್ಷಕ ಪ್ರಭು ಅವರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪ್ರಭು, ಬೃಹತ್ ಕೇರೆಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    7 hrs ago
  • ಕೊಳ್ಳೇಗಾಲದ ಮೈಸೂರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಎಟಿಎಂಗಳಲ್ಲಿ ಪದೇ ಪದೇ ನಗದು ಇಲ್ಲದಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಈ ರಸ್ತೆಯು ಹೆಚ್ಚು ಜನದಟ್ಟಣೆ ಇರುವ ಪ್ರದೇಶವಾಗಿದ್ದು, ಇಲ್ಲಿಯ ಎಟಿಎಂಗಳನ್ನು ನಂಬಿ ಬರುವ ಸಾರ್ವಜನಿಕರಿಗೆ ನಿರಂತರವಾಗಿ ಈ ಸಮಸ್ಯೆ ಕಾಡುತ್ತಿದೆ. ಅಗತ್ಯ ಕೆಲಸಗಳಿಗಾಗಿ ಅಥವಾ ತುರ್ತು ಸಂದರ್ಭದಲ್ಲಿ ಹಣ ಪಡೆಯಲು ಎಟಿಎಂಗಳಿಗೆ ಬರುವ ಗ್ರಾಹಕರು, ಹಣ ಸಿಗದೆ ಬರಿಗೈಯಲ್ಲಿ ಹಿಂತಿರುಗುವಂತಾಗಿದೆ. ಕಾರ್ಡ್ ಹಿಡಿದು ಎಟಿಎಂ ಕೇಂದ್ರಗಳಿಗೆ ಹೋದರೆ 'ನಗದು ಲಭ್ಯವಿಲ್ಲ' (Cash out of service) ಎಂಬ ಸಂದೇಶವೇ ಅವರನ್ನು ಸ್ವಾಗತಿಸುತ್ತದೆ. ಈ ನಿರಂತರ ಸಮಸ್ಯೆಯಿಂದ ಬೇಸತ್ತ ಸಾರ್ವಜನಿಕರು, ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು ಕೂಡಲೇ ಎಟಿಎಂಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರಂತರವಾಗಿ ನಗದು ಲಭ್ಯವಿರುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
    1
    ಕೊಳ್ಳೇಗಾಲದ ಮೈಸೂರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಎಟಿಎಂಗಳಲ್ಲಿ ಪದೇ ಪದೇ ನಗದು ಇಲ್ಲದಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಈ ರಸ್ತೆಯು ಹೆಚ್ಚು ಜನದಟ್ಟಣೆ ಇರುವ ಪ್ರದೇಶವಾಗಿದ್ದು, ಇಲ್ಲಿಯ ಎಟಿಎಂಗಳನ್ನು ನಂಬಿ ಬರುವ ಸಾರ್ವಜನಿಕರಿಗೆ ನಿರಂತರವಾಗಿ ಈ ಸಮಸ್ಯೆ ಕಾಡುತ್ತಿದೆ. 

ಅಗತ್ಯ ಕೆಲಸಗಳಿಗಾಗಿ ಅಥವಾ ತುರ್ತು ಸಂದರ್ಭದಲ್ಲಿ ಹಣ ಪಡೆಯಲು ಎಟಿಎಂಗಳಿಗೆ ಬರುವ ಗ್ರಾಹಕರು, ಹಣ ಸಿಗದೆ ಬರಿಗೈಯಲ್ಲಿ ಹಿಂತಿರುಗುವಂತಾಗಿದೆ. ಕಾರ್ಡ್ ಹಿಡಿದು ಎಟಿಎಂ ಕೇಂದ್ರಗಳಿಗೆ ಹೋದರೆ 'ನಗದು ಲಭ್ಯವಿಲ್ಲ' (Cash out of service) ಎಂಬ ಸಂದೇಶವೇ ಅವರನ್ನು ಸ್ವಾಗತಿಸುತ್ತದೆ. ಈ ನಿರಂತರ ಸಮಸ್ಯೆಯಿಂದ ಬೇಸತ್ತ ಸಾರ್ವಜನಿಕರು, ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು ಕೂಡಲೇ ಎಟಿಎಂಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರಂತರವಾಗಿ ನಗದು ಲಭ್ಯವಿರುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    10 hrs ago
  • ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಬೆಂಗಳೂರು ಅಡಿಯಲ್ಲಿ ಬರುವ ಮಂಡ್ಯ ಮತ್ತು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಗಳ ವಿರುದ್ಧ ಅವ್ಯವಸ್ಥೆ, ದುರುಪಯೋಗ ಮತ್ತು ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳು ಭಾರತದಲ್ಲಿ ವೈರಲ್ ಆಗಿವೆ. ಈ ಕುರಿತು 'ಆಲ್ ಅಬೌಟ್' ಎಂಬ ಶೀರ್ಷಿಕೆಯಡಿಯಲ್ಲಿ ವರದಿಯಾಗಿದೆ.
    1
    ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಬೆಂಗಳೂರು ಅಡಿಯಲ್ಲಿ ಬರುವ ಮಂಡ್ಯ ಮತ್ತು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಗಳ ವಿರುದ್ಧ ಅವ್ಯವಸ್ಥೆ, ದುರುಪಯೋಗ ಮತ್ತು ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳು ಭಾರತದಲ್ಲಿ ವೈರಲ್ ಆಗಿವೆ. ಈ ಕುರಿತು 'ಆಲ್ ಅಬೌಟ್' ಎಂಬ ಶೀರ್ಷಿಕೆಯಡಿಯಲ್ಲಿ ವರದಿಯಾಗಿದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    5 hrs ago
  • ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಡಿ. ಹಲಸಹಳ್ಳಿ ಗ್ರಾಮದ ಬಳಿ ಇರುವ ಗವಿಮಠಕ್ಕೆ ಮಠಾಧ್ಯಕ್ಷರಾದ ಷಡಕ್ಷರ ಸ್ವಾಮೀಜಿಯವರು ಹೊಸ ರೂಪ ನೀಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ತುಮಕೂರಿನ ಸಿದ್ದಗಂಗಾ ಮಠದ ಮಠಾಧೀಶರಾದ ಸಿದ್ದಲಿಂಗ ಮಹಾಸ್ವಾಮೀಜಿಯವರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಕ್ತರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು, ಭಕ್ತರು ನೀಡಿದ ಸಹಕಾರದಿಂದ ಮಠದ ಅಭಿವೃದ್ಧಿಗಾಗಿ ಷಡಕ್ಷರ ಸ್ವಾಮೀಜಿಯವರು ನಿರಂತರವಾಗಿ ಶ್ರಮಿಸಿದ್ದಾರೆ. ಗವಿಮಠದಲ್ಲಿ ಮೇ ಒಂದರಂದು ನಡೆದ ಕಳಶಾರೋಹಣ, ರಾಜಗೋಪುರ, ಬಸವ ವಿಗ್ರಹ, ಶ್ರೀ ಷಡಕ್ಷರ ಮಂಗಳ ಮಂಟಪ, ಹಾಗೂ ಅನ್ನದಾಸೋಹ ಕಟ್ಟಡದ ಉದ್ಘಾಟನೆ ಮತ್ತು ಧಾರ್ಮಿಕ ಸಭೆಗಳಿಗೆ ಇಂದಿಗೆ 48 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದಗಂಗಾ ಶ್ರೀಗಳು, ಹಲಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಬೆಂಬಲದಿಂದ ಷಡಕ್ಷರ ಸ್ವಾಮಿಗಳು ಕಳೆದ ಮೇ ಒಂದರಂದು ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಿಂದ ಅವರು ತುಂಬಾ ಶ್ರಮಪಟ್ಟು, ಹಿಂದೆ ಬಂಡೆಗಳಿಂದ ತುಂಬಿ, ಸಾರ್ವಜನಿಕ ಸಂಪರ್ಕ ಸೌಲಭ್ಯಗಳಿಲ್ಲದ ಗವಿಮಠಕ್ಕೆ ಹೊಸ ರೂಪವನ್ನು ತಂದುಕೊಟ್ಟಿದ್ದಾರೆ. ಈಗ ಭಕ್ತರಿಗೆ ಶುಭ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ಕಲ್ಯಾಣ ಮಂಟಪ, ಅನ್ನದಾಸೋಹ ಗೃಹ ನಿರ್ಮಿಸಿರುವುದಲ್ಲದೆ, ರಾಜಗೋಪುರ ನಿರ್ಮಾಣ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಗಿಡಮರಗಳನ್ನು ಬೆಳೆಸಿ ಸುಂದರವಾದ ವಾತಾವರಣ ನಿರ್ಮಿಸಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಮಠದ ಶೋಭೆಯನ್ನು ಹೆಚ್ಚಿಸಿದ್ದಾರೆ. ತಾನು ಚಿಕ್ಕವನಿದ್ದಾಗ ಈ ಮಠಕ್ಕೆ ಬಂದಾಗ ಜಡೆ ಸ್ವಾಮಿಗಳು ಈ ಮಠದಲ್ಲಿದ್ದರು ಎಂಬುದನ್ನು ಸ್ಮರಿಸಿದ ಸಿದ್ದಗಂಗಾ ಶ್ರೀಗಳು, ಆಗಿನಿಂದಲೂ ಕನಕಪುರದ ದೇಗುಲ ಮಠಕ್ಕೂ, ಈ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಈಗಲೂ ಆ ಬಾಂಧವ್ಯ ಮುಂದುವರೆದಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು. ಈ ಸ್ಥಳವು ಷಡಕ್ಷರ ದೇವನ ತಪೋನಿಷ್ಠ ಸ್ಥಳವಾಗಿದ್ದು, ರಾಜಶೇಖರ ವಿಲಾಸ ಎಂಬ ಗ್ರಂಥವನ್ನು ಬರೆದ ಸ್ಥಳವೆಂದು ತಿಳಿದುಬಂದಿದೆ. ಹಲವಾರು ಪುಣ್ಯ ಪುರುಷರ ತಪೋಭೂಮಿಯಾಗಿದ್ದ ಈ ಮಠವನ್ನು ಇನ್ನಷ್ಟು ಅಭಿವೃದ್ಧಿಪಡಿಸುವಲ್ಲಿ ಷಡಕ್ಷರ ಸ್ವಾಮೀಜಿಗೆ ನಿಮ್ಮ ಬೆಂಬಲ ಮತ್ತು ಸಹಕಾರ ಹೀಗೆ ಇರಲಿ ಎಂದು ಭಕ್ತಾದಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಗವಿಮಠದ ಷಡಕ್ಷರ ಸ್ವಾಮೀಜಿಯವರು ಸಿದ್ದಗಂಗಾ ಶ್ರೀಗಳಿಗೆ ಪಾದಪೂಜೆಯನ್ನು ನೆರವೇರಿಸಿ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಅಪಾರ ಭಕ್ತಾದಿಗಳು ಆಗಮಿಸಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮಿಗಳು, ಡಾ. ಚನ್ನಬಸವಸ್ವಾಮಿಗಳು, ಆಂಗ್ರಾಪುರದ ಬಸವಲಿಂಗ ದೇಶಿ ಕೇಂದ್ರಸ್ವಾಮೀಜಿಗಳು, ಹೊಸಹಳ್ಳಿ ಮಠದ ಓಂಕಾರ ಸ್ವಾಮಿಗಳು, ಮೇದಿನಿ ಗ್ರಾಮ ಮಠದ ಶಿವಲಿಂಗ ಸ್ವಾಮಿಗಳು, ಪುರಿಗಾಲಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಹರಚರ ಮೂರ್ತಿಗಳು ಹಾಗೂ ಡಿ. ಹಲಸಳ್ಳಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
    1
    ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಡಿ. ಹಲಸಹಳ್ಳಿ ಗ್ರಾಮದ ಬಳಿ ಇರುವ ಗವಿಮಠಕ್ಕೆ ಮಠಾಧ್ಯಕ್ಷರಾದ ಷಡಕ್ಷರ ಸ್ವಾಮೀಜಿಯವರು ಹೊಸ ರೂಪ ನೀಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ತುಮಕೂರಿನ ಸಿದ್ದಗಂಗಾ ಮಠದ ಮಠಾಧೀಶರಾದ ಸಿದ್ದಲಿಂಗ ಮಹಾಸ್ವಾಮೀಜಿಯವರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಕ್ತರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು, ಭಕ್ತರು ನೀಡಿದ ಸಹಕಾರದಿಂದ ಮಠದ ಅಭಿವೃದ್ಧಿಗಾಗಿ ಷಡಕ್ಷರ ಸ್ವಾಮೀಜಿಯವರು ನಿರಂತರವಾಗಿ ಶ್ರಮಿಸಿದ್ದಾರೆ.

ಗವಿಮಠದಲ್ಲಿ ಮೇ ಒಂದರಂದು ನಡೆದ ಕಳಶಾರೋಹಣ, ರಾಜಗೋಪುರ, ಬಸವ ವಿಗ್ರಹ, ಶ್ರೀ ಷಡಕ್ಷರ ಮಂಗಳ ಮಂಟಪ, ಹಾಗೂ ಅನ್ನದಾಸೋಹ ಕಟ್ಟಡದ ಉದ್ಘಾಟನೆ ಮತ್ತು ಧಾರ್ಮಿಕ ಸಭೆಗಳಿಗೆ ಇಂದಿಗೆ 48 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದಗಂಗಾ ಶ್ರೀಗಳು, ಹಲಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಬೆಂಬಲದಿಂದ ಷಡಕ್ಷರ ಸ್ವಾಮಿಗಳು ಕಳೆದ ಮೇ ಒಂದರಂದು ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಿಂದ ಅವರು ತುಂಬಾ ಶ್ರಮಪಟ್ಟು, ಹಿಂದೆ ಬಂಡೆಗಳಿಂದ ತುಂಬಿ, ಸಾರ್ವಜನಿಕ ಸಂಪರ್ಕ ಸೌಲಭ್ಯಗಳಿಲ್ಲದ ಗವಿಮಠಕ್ಕೆ ಹೊಸ ರೂಪವನ್ನು ತಂದುಕೊಟ್ಟಿದ್ದಾರೆ. ಈಗ ಭಕ್ತರಿಗೆ ಶುಭ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ಕಲ್ಯಾಣ ಮಂಟಪ, ಅನ್ನದಾಸೋಹ ಗೃಹ ನಿರ್ಮಿಸಿರುವುದಲ್ಲದೆ, ರಾಜಗೋಪುರ ನಿರ್ಮಾಣ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಗಿಡಮರಗಳನ್ನು ಬೆಳೆಸಿ ಸುಂದರವಾದ ವಾತಾವರಣ ನಿರ್ಮಿಸಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಮಠದ ಶೋಭೆಯನ್ನು ಹೆಚ್ಚಿಸಿದ್ದಾರೆ.

ತಾನು ಚಿಕ್ಕವನಿದ್ದಾಗ ಈ ಮಠಕ್ಕೆ ಬಂದಾಗ ಜಡೆ ಸ್ವಾಮಿಗಳು ಈ ಮಠದಲ್ಲಿದ್ದರು ಎಂಬುದನ್ನು ಸ್ಮರಿಸಿದ ಸಿದ್ದಗಂಗಾ ಶ್ರೀಗಳು, ಆಗಿನಿಂದಲೂ ಕನಕಪುರದ ದೇಗುಲ ಮಠಕ್ಕೂ, ಈ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಈಗಲೂ ಆ ಬಾಂಧವ್ಯ ಮುಂದುವರೆದಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು. ಈ ಸ್ಥಳವು ಷಡಕ್ಷರ ದೇವನ ತಪೋನಿಷ್ಠ ಸ್ಥಳವಾಗಿದ್ದು, ರಾಜಶೇಖರ ವಿಲಾಸ ಎಂಬ ಗ್ರಂಥವನ್ನು ಬರೆದ ಸ್ಥಳವೆಂದು ತಿಳಿದುಬಂದಿದೆ. ಹಲವಾರು ಪುಣ್ಯ ಪುರುಷರ ತಪೋಭೂಮಿಯಾಗಿದ್ದ ಈ ಮಠವನ್ನು ಇನ್ನಷ್ಟು ಅಭಿವೃದ್ಧಿಪಡಿಸುವಲ್ಲಿ ಷಡಕ್ಷರ ಸ್ವಾಮೀಜಿಗೆ ನಿಮ್ಮ ಬೆಂಬಲ ಮತ್ತು ಸಹಕಾರ ಹೀಗೆ ಇರಲಿ ಎಂದು ಭಕ್ತಾದಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗವಿಮಠದ ಷಡಕ್ಷರ ಸ್ವಾಮೀಜಿಯವರು ಸಿದ್ದಗಂಗಾ ಶ್ರೀಗಳಿಗೆ ಪಾದಪೂಜೆಯನ್ನು ನೆರವೇರಿಸಿ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಅಪಾರ ಭಕ್ತಾದಿಗಳು ಆಗಮಿಸಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮಿಗಳು, ಡಾ. ಚನ್ನಬಸವಸ್ವಾಮಿಗಳು, ಆಂಗ್ರಾಪುರದ ಬಸವಲಿಂಗ ದೇಶಿ ಕೇಂದ್ರಸ್ವಾಮೀಜಿಗಳು, ಹೊಸಹಳ್ಳಿ ಮಠದ ಓಂಕಾರ ಸ್ವಾಮಿಗಳು, ಮೇದಿನಿ ಗ್ರಾಮ ಮಠದ ಶಿವಲಿಂಗ ಸ್ವಾಮಿಗಳು, ಪುರಿಗಾಲಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಹರಚರ ಮೂರ್ತಿಗಳು ಹಾಗೂ ಡಿ. ಹಲಸಳ್ಳಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    13 hrs ago
  • ರಾಜ್ಯದ ರೈತರಿಗೆ ಸಂಕಷ್ಟ ಉಂಟುಮಾಡುವ ವಿದ್ಯುತ್ ಖಾಸಗೀಕರಣಕ್ಕೆ ಟಾಟಾ ಕಂಪನಿ ಅರ್ಜಿ ಸಲ್ಲಿಸಿದೆ ಎಂದು ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಆಗ್ರಹಿಸಲಾಗಿದೆ. ಈ ಖಾಸಗೀಕರಣದಿಂದ 'ಭಾಗ್ಯ ಲಕ್ಷ್ಮಿ', 'ಗೃಹಜ್ಯೋತಿ' ಯೋಜನೆಗಳು ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ಸರ್ಕಾರ ನೀಡುವ ವಿದ್ಯುತ್ ಕಡಿತಗೊಳ್ಳಲಿದೆ ಎಂದು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಈ ಸಂಬಂಧ ರಾಜ್ಯ ಸರ್ಕಾರವು ಟಾಟಾ ಕಂಪನಿಯ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಸಭೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ, ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ರವಿಚಂದ್ರ ಗಂಜಾಂ, ಹತ್ತಳ್ಳಿ ದೇವರಾಜ್ ಮತ್ತು ಮಿಲಿಟರಿ ಕುಮಾರ ಮುಂತಾದವರು ಉಪಸ್ಥಿತರಿದ್ದರು. ರೈತರಿಗೆ ತೀವ್ರ ಸಂಕಷ್ಟ ತಂದೊಡ್ಡುವ ವಿದ್ಯುತ್ ಖಾಸಗೀಕರಣದ ಹಿಂದಿನ ಟಾಟಾ ಕಂಪನಿಯ ಹುನ್ನಾರವನ್ನು ಖಂಡಿಸಲಾಯಿತು.
    1
    ರಾಜ್ಯದ ರೈತರಿಗೆ ಸಂಕಷ್ಟ ಉಂಟುಮಾಡುವ ವಿದ್ಯುತ್ ಖಾಸಗೀಕರಣಕ್ಕೆ ಟಾಟಾ ಕಂಪನಿ ಅರ್ಜಿ ಸಲ್ಲಿಸಿದೆ ಎಂದು ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಆಗ್ರಹಿಸಲಾಗಿದೆ. ಈ ಖಾಸಗೀಕರಣದಿಂದ 'ಭಾಗ್ಯ ಲಕ್ಷ್ಮಿ', 'ಗೃಹಜ್ಯೋತಿ' ಯೋಜನೆಗಳು ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ಸರ್ಕಾರ ನೀಡುವ ವಿದ್ಯುತ್ ಕಡಿತಗೊಳ್ಳಲಿದೆ ಎಂದು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಈ ಸಂಬಂಧ ರಾಜ್ಯ ಸರ್ಕಾರವು ಟಾಟಾ ಕಂಪನಿಯ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಭೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ, ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ರವಿಚಂದ್ರ ಗಂಜಾಂ, ಹತ್ತಳ್ಳಿ ದೇವರಾಜ್ ಮತ್ತು ಮಿಲಿಟರಿ ಕುಮಾರ ಮುಂತಾದವರು ಉಪಸ್ಥಿತರಿದ್ದರು. ರೈತರಿಗೆ ತೀವ್ರ ಸಂಕಷ್ಟ ತಂದೊಡ್ಡುವ ವಿದ್ಯುತ್ ಖಾಸಗೀಕರಣದ ಹಿಂದಿನ ಟಾಟಾ ಕಂಪನಿಯ ಹುನ್ನಾರವನ್ನು ಖಂಡಿಸಲಾಯಿತು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    9 hrs ago
  • ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿ ಕ್ಷೇತ್ರದ ಸಂತೆಮರಳ್ಳಿ ಭಾಗದ ಕಾಂಗ್ರೆಸ್ ಮುಖಂಡರು ಮತ್ತು ಹಲವಾರು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಸಂತೆಮರಳ್ಳಿಯ ವೃತ್ತದಲ್ಲಿ ಎ.ಆರ್. ಕೃಷ್ಣಮೂರ್ತಿ ಅವರ ಭಾವಚಿತ್ರವನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್‌ಗೆ ಒತ್ತಾಯಿಸಲಾಯಿತು. ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಗೌಡಹಳ್ಳಿ ರೇವಣ್ಣ ಮಾತನಾಡಿ, ಎ.ಆರ್. ಕೃಷ್ಣಮೂರ್ತಿ ಅವರು ರಾಜಕೀಯ ಹಿರಿತನ ಹೊಂದಿರುವ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಕ್ಷೇತ್ರವನ್ನು ಮಾದರಿ ಮಾಡುವ ಕನಸನ್ನು ಹೊಂದಿರುವ ಇವರು, ಇಡೀ ಜಿಲ್ಲೆ ಹಾಗೂ ರಾಜ್ಯದ ರಾಜಕೀಯ ಅನುಭವದ ಹಿನ್ನೆಲೆಯ ಕುಟುಂಬದಿಂದ ಬಂದ ನಾಯಕರಾಗಿದ್ದಾರೆ. ದಲಿತ ಸಮುದಾಯದ ಪ್ರಭಾವಿ ಶಾಸಕರಾಗಿರುವ ಇವರು, ತಮ್ಮ ತಂದೆ ಬಿ. ರಾಚಯ್ಯನವರ ಕಾಲದಿಂದಲೂ ರಾಜಕೀಯದ ಅನೇಕ ಸೂಕ್ಷ್ಮಗಳನ್ನು ಕಲಿತಿದ್ದಾರೆ. ರಾಜಕೀಯ ಮುತ್ಸದ್ದಿತನವನ್ನು ಹೊಂದಿರುವ ಅವರಿಗೆ ಯಾವ ಖಾತೆಯನ್ನು ನೀಡಿದರೂ ನಿಭಾಯಿಸುವ ಶಕ್ತಿ ಇದೆ. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು, ದಾಖಲೆಯ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಕ್ಷೇತ್ರಕ್ಕೆ ₹500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಮಾದರಿ ಮಾಡಲು ಪಣ ತೊಟ್ಟಿದ್ದು, ಎಲ್ಲಾ ಜಾತಿ, ಧರ್ಮ, ಸಮುದಾಯದ ಜನರೂ ಅವರನ್ನು ಪ್ರೀತಿಸುತ್ತಾರೆ ಹಾಗೂ ಇಷ್ಟಪಡುತ್ತಾರೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಚತುರತೆ ಇವರಿಗಿದ್ದು, ಎಲ್ಲ ದೃಷ್ಟಿಯಿಂದಲೂ ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಇವರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು. ಅಹಿಂದ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಕೋಟಂಬಳ್ಳಿ ಸಿದ್ದು ಮಾತನಾಡಿ, ಎ.ಆರ್.ಕೆ. ಸಾಹೇಬರು ತಮ್ಮ ತಂದೆಯ ಕಾಲದಿಂದಲೂ ರಾಜಕೀಯದಲ್ಲಿದ್ದಾರೆ. ಕ್ಷೇತ್ರಕ್ಕೆ ತಾಲೂಕು ಆಸ್ಪತ್ರೆ, ವಿಭಾಗೀಯ ಆಸ್ಪತ್ರೆ, ರಸ್ತೆ, ಸಮುದಾಯ ಭವನಗಳು, ಎಳನೀರು ಮಾರುಕಟ್ಟೆ, ಸಿಲ್ಕ್ ಪಾರ್ಕ್, ಬಸ್ ನಿಲ್ದಾಣಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೇವಲ ಮೂರು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿ ಅನುದಾನವನ್ನು ತಂದಿರುವ ಇವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಟ್ಟುಬಿಡದೆ ಅನುದಾನಗಳನ್ನು ತರುತ್ತಾ ಶ್ರಮಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಮತ್ತು ಕ್ಷೇತ್ರ ಮತ್ತಷ್ಟು ಪ್ರಗತಿಯಾಗುತ್ತದೆ ಎಂದು ರಾಜ್ಯ ಹೈಕಮಾಂಡ್‌ಗೆ ಒತ್ತಾಯಿಸಿದರು.
    1
    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿ ಕ್ಷೇತ್ರದ ಸಂತೆಮರಳ್ಳಿ ಭಾಗದ ಕಾಂಗ್ರೆಸ್ ಮುಖಂಡರು ಮತ್ತು ಹಲವಾರು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಸಂತೆಮರಳ್ಳಿಯ ವೃತ್ತದಲ್ಲಿ ಎ.ಆರ್. ಕೃಷ್ಣಮೂರ್ತಿ ಅವರ ಭಾವಚಿತ್ರವನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್‌ಗೆ ಒತ್ತಾಯಿಸಲಾಯಿತು.

ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಗೌಡಹಳ್ಳಿ ರೇವಣ್ಣ ಮಾತನಾಡಿ, ಎ.ಆರ್. ಕೃಷ್ಣಮೂರ್ತಿ ಅವರು ರಾಜಕೀಯ ಹಿರಿತನ ಹೊಂದಿರುವ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಕ್ಷೇತ್ರವನ್ನು ಮಾದರಿ ಮಾಡುವ ಕನಸನ್ನು ಹೊಂದಿರುವ ಇವರು, ಇಡೀ ಜಿಲ್ಲೆ ಹಾಗೂ ರಾಜ್ಯದ ರಾಜಕೀಯ ಅನುಭವದ ಹಿನ್ನೆಲೆಯ ಕುಟುಂಬದಿಂದ ಬಂದ ನಾಯಕರಾಗಿದ್ದಾರೆ. ದಲಿತ ಸಮುದಾಯದ ಪ್ರಭಾವಿ ಶಾಸಕರಾಗಿರುವ ಇವರು, ತಮ್ಮ ತಂದೆ ಬಿ. ರಾಚಯ್ಯನವರ ಕಾಲದಿಂದಲೂ ರಾಜಕೀಯದ ಅನೇಕ ಸೂಕ್ಷ್ಮಗಳನ್ನು ಕಲಿತಿದ್ದಾರೆ. ರಾಜಕೀಯ ಮುತ್ಸದ್ದಿತನವನ್ನು ಹೊಂದಿರುವ ಅವರಿಗೆ ಯಾವ ಖಾತೆಯನ್ನು ನೀಡಿದರೂ ನಿಭಾಯಿಸುವ ಶಕ್ತಿ ಇದೆ. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು, ದಾಖಲೆಯ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಕ್ಷೇತ್ರಕ್ಕೆ ₹500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಮಾದರಿ ಮಾಡಲು ಪಣ ತೊಟ್ಟಿದ್ದು, ಎಲ್ಲಾ ಜಾತಿ, ಧರ್ಮ, ಸಮುದಾಯದ ಜನರೂ ಅವರನ್ನು ಪ್ರೀತಿಸುತ್ತಾರೆ ಹಾಗೂ ಇಷ್ಟಪಡುತ್ತಾರೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಚತುರತೆ ಇವರಿಗಿದ್ದು, ಎಲ್ಲ ದೃಷ್ಟಿಯಿಂದಲೂ ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಇವರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಅಹಿಂದ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಕೋಟಂಬಳ್ಳಿ ಸಿದ್ದು ಮಾತನಾಡಿ, ಎ.ಆರ್.ಕೆ. ಸಾಹೇಬರು ತಮ್ಮ ತಂದೆಯ ಕಾಲದಿಂದಲೂ ರಾಜಕೀಯದಲ್ಲಿದ್ದಾರೆ. ಕ್ಷೇತ್ರಕ್ಕೆ ತಾಲೂಕು ಆಸ್ಪತ್ರೆ, ವಿಭಾಗೀಯ ಆಸ್ಪತ್ರೆ, ರಸ್ತೆ, ಸಮುದಾಯ ಭವನಗಳು, ಎಳನೀರು ಮಾರುಕಟ್ಟೆ, ಸಿಲ್ಕ್ ಪಾರ್ಕ್, ಬಸ್ ನಿಲ್ದಾಣಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೇವಲ ಮೂರು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿ ಅನುದಾನವನ್ನು ತಂದಿರುವ ಇವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಟ್ಟುಬಿಡದೆ ಅನುದಾನಗಳನ್ನು ತರುತ್ತಾ ಶ್ರಮಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಮತ್ತು ಕ್ಷೇತ್ರ ಮತ್ತಷ್ಟು ಪ್ರಗತಿಯಾಗುತ್ತದೆ ಎಂದು ರಾಜ್ಯ ಹೈಕಮಾಂಡ್‌ಗೆ ಒತ್ತಾಯಿಸಿದರು.
    user_Prasad Prasad
    Prasad Prasad
    TV News Anchor ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    18 hrs ago
  • ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲ್ಲಿಗೌಡನಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಪುಟ್ಟಮ್ಮ ಮತ್ತು ಆನಂದ ದಂಪತಿಯ ನಾಲ್ಕು ವರ್ಷದ ಪುತ್ರಿ ಅದ್ವಿತಾ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾಳೆ. ನೀರು ಕುಡಿಯಲು ಅಡುಗೆ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಚಾಲನೆಯಲ್ಲಿರುವ ಗ್ರೈಂಡರ್ ಅನ್ನು ಮುಟ್ಟಿದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆಕೆ ಪ್ರಾಣ ಕಳೆದುಕೊಂಡಿರುವುದನ್ನು ದೃಢಪಡಿಸಿದ್ದಾರೆ. ಈ ದುರ್ಘಟನೆಯಿಂದ ಮೃತಳ ಸಂಬಂಧಿಕರು, ಬಂಧುಬಳಗದವರು ಹಾಗೂ ಸ್ನೇಹಿತರು ತೀವ್ರ ದುಃಖದಲ್ಲಿದ್ದಾರೆ.
    3
    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲ್ಲಿಗೌಡನಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಪುಟ್ಟಮ್ಮ ಮತ್ತು ಆನಂದ ದಂಪತಿಯ ನಾಲ್ಕು ವರ್ಷದ ಪುತ್ರಿ ಅದ್ವಿತಾ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾಳೆ. ನೀರು ಕುಡಿಯಲು ಅಡುಗೆ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಚಾಲನೆಯಲ್ಲಿರುವ ಗ್ರೈಂಡರ್ ಅನ್ನು ಮುಟ್ಟಿದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆಕೆ ಪ್ರಾಣ ಕಳೆದುಕೊಂಡಿರುವುದನ್ನು ದೃಢಪಡಿಸಿದ್ದಾರೆ. ಈ ದುರ್ಘಟನೆಯಿಂದ ಮೃತಳ ಸಂಬಂಧಿಕರು, ಬಂಧುಬಳಗದವರು ಹಾಗೂ ಸ್ನೇಹಿತರು ತೀವ್ರ ದುಃಖದಲ್ಲಿದ್ದಾರೆ.
    user_Prasad Prasad
    Prasad Prasad
    TV News Anchor ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.