ಕೂಡ್ಲಿಗಿ : ಸಡಗರ ಸಂಭ್ರಮದಿಂದ ಜರುಗಿದ ಬಾಲೆಯರ ಹೆಂಗಳೆಯರ ಗೌರಿ ಹುಣ್ಣಿಮೆ ಹಬ್ಬ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಕೂಡ್ಲಿಗಿ : ಸಂಭ್ರಮದಿಂದ ಜರುಗಿದ ಬಾಲೆಯರ ಹೆಂಗಳೆಯರ ಗೌರಿ ಹುಣ್ಣಿಮೆ ಹಬ್ಬ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಗೌರಿ ಹುಣ್ಣಿಮೆ ಹಬ್ಬ ಎಂಬುದು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು. ರೈತ ಕುಟುಂಬಗಳ ಬಾಲೆಯರ ಮಹಿಳೆಯರು , ಬಹು ಸಂಭ್ರಮದಿಂದ ಆಚರಿಸುವ ಜಾನಪದೀಯ ಸಂಪ್ರದಾಯಿಕ ಧಾರ್ಮಿಕ ವಿಶಿಷ್ಟವಾದ ಹಬ್ಬವಾಗಿದೆ. ನಾಡಿನ ಎಲ್ಲಾ ವಯೋಮಾನದ , ಸರಂವ ಜನಾಂಗದವರು ಸೌಹಾರ್ದತೆಯಿಂದ. ಮೇಲು ಕೀಳೆನ್ನದೇ ಸಮಾನ ಮನಸ್ಕರಾಗಿ ಸಕಲ ರೀತಿಯ ಸೌಹಾರ್ಧತೆಯಿಂದ , ಮಹಿಳೆಯರೆಲ್ಲರೂ ಬಹು ಸಂಭ್ರಮದಿಂದ ಅಚರಿಸುವ ಏಕೈಕ ಹಬ್ಬವಾಗಿದೆ. ಗೌೆರಿ ಹುಣ್ಣಿಮೆ ಹಬ್ಬವು , (ಕಾರ್ತಿಕ ಹುಣ್ಣಿಮೆ) ಉತ್ತರ ಕರ್ನಾಟಕ ಸೇರಿದಂತೆ. ಹಲವೆಡೆ ಮಹಿಳೆಯರು ಮತ್ತು ಯುವತಿಯರು , ಬಹು ಸಂಭ್ರಮದಿಂದ ಆಚರಿಸುವ ಜನಪದ ಹಬ್ಬವಾಗಿದೆ. ಅಂತಯೇ ಕೂಡ್ಲಿಗಿ ಪಟ್ಟಣ ಸೇರಿದಂತೆ , ಕ್ಷೇತ್ರದೆಲ್ಲೆಡೆಗಳಲ್ಲಿ ಹಬ್ಬವನ್ನು ಬಹು ಸಂಭ್ರಮ ಸಡಗರದಿಂದ ಆಚರಿಸಲಾಯಿತು. *ಹಬ್ಬದ ಮಹತ್ವ ಮತ್ತು ವಿಶೇಷತೆ*:- • ಜನಪದ ಮತ್ತು ಸಾಂಸ್ಕೃತಿಕ ಹಬ್ಬ: ಗೌರಮ್ಮ (ಪಾರ್ವತಿ) ಮತ್ತು ಶಿವನಿಗೆ ಸಮರ್ಪಿತವಾದ ಈ ಹಬ್ಬವು ಬೆಳೆ ಸಮೃದ್ಧಿ, ಕುಟುಂಬದ ಒಳಿತಿಗಾಗಿ ಮತ್ತು ಬಂಧುತ್ವ ಬಲವರ್ಧನೆಗಾಗಿ ನಡೆಯುತ್ತದೆ. • ಹೆಣ್ಣು ಮಕ್ಕಳ ಹಬ್ಬ: ಇದನ್ನು ಹೆಣ್ಣು ಮಕ್ಕಳ ಹಬ್ಬವೆಂದೂ ಕರೆಯಲಾಗುತ್ತದೆ. ಹೊಸದಾಗಿ ಮದುವೆಯಾದ ಅಥವಾ ಮದುವೆ ನಿಶ್ಚಯವಾದ ವಧುವಿಗೆ ವರನ ಕಡೆಯವರು ಸಕ್ಕರೆ ಗೊಂಬೆ, ಸೀರೆ, ಬಳೆ, ಅರಿಶಿನ-ಕುಂಕುಮ ಹಾಗೂ ವಿಶೇಷ ಖಾದ್ಯಗಳೊಂದಿಗೆ ಆರತಿ ಮಾಡುವ ಸಂಪ್ರದಾಯ ಹಲವೆಡೆ ಇದೆ. • ಗೌರಮ್ಮನ ಪೂಜೆ: ಮಣ್ಣು ಅಥವಾ ಕಟ್ಟಿಗೆಯ ಗೌರಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅವರೆ, ಚೆಂಡು ಹೂವು, ಉತ್ತರಾಣಿ ಕಡ್ಡಿ ಮುಂತಾದವುಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. • ಸಕ್ಕರೆ ಆರತಿ ಮತ್ತು ದೀಪೋತ್ಸವ:- ಮಹಿಳೆಯರು ಮತ್ತು ಮಕ್ಕಳು ಸಕ್ಕರೆ ಗೊಂಬೆಗಳ ಆರತಿ ಬೆಳಗುವುದು, ಕಣಕದ ದೀಪ ಹಚ್ಚುವುದು ಹಾಗೂ ದೇವಾಲಯಗಳಲ್ಲಿ ದೀಪದಾನ ಮಾಡುವುದು ವಿಶೇಷವಾಗಿದೆ. •ಕೆಲವೆಡೆಗಳಲ್ಲಿ ಹುಣ್ಣಿಮೆಯಂದು ಕೂರಿಸಿ ಅರಾಧಸಿ ಅಂದು ರಾತ್ರಿಯೆ , ಧಾರ್ಮಿಕ ವಿಧಿ ವಿಧಾನಗಳನುಸಾರ ವಿಸರ್ಜಿಸಲಾಗುತ್ತೆ. ಮತ್ತೆ ಹಲವೆಡೆಗಳಲ್ಲಿ ಎರಡೇನೆ ದಿನದಂದು ಕಳುಹಿಸಲಾಗುತ್ತದೆ. ಬಹುತೇಕ ಕಡೆಗಳಲ್ಲಿ ಮೂರನೇ ದಿನದಲ್ಲಿ ಗಂಗೆ ಕಾಣಿಸಕಾಗುತ್ತದೆ. ರತ್ರಿ ವೇಳೆ ನದಿ ಅಥವಾ ಬಾವಿಗಳ ಕೆರೆ ದಂಡೆಯಲ್ಲಿ , ಗೌರಮ್ಮನ ಮೂರ್ತಿಗೆ ಧಾರ್ಮಿಕ ನಿಯಮಾನುಸಾರ ವಿದಾಯ ಹೇಳಿ ವಿಸರ್ಜಿಸಲಾಗುತ್ತದೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
ಕೂಡ್ಲಿಗಿ : ಸಡಗರ ಸಂಭ್ರಮದಿಂದ ಜರುಗಿದ ಬಾಲೆಯರ ಹೆಂಗಳೆಯರ ಗೌರಿ ಹುಣ್ಣಿಮೆ ಹಬ್ಬ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಕೂಡ್ಲಿಗಿ : ಸಂಭ್ರಮದಿಂದ ಜರುಗಿದ ಬಾಲೆಯರ ಹೆಂಗಳೆಯರ ಗೌರಿ ಹುಣ್ಣಿಮೆ ಹಬ್ಬ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಗೌರಿ ಹುಣ್ಣಿಮೆ ಹಬ್ಬ ಎಂಬುದು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು. ರೈತ ಕುಟುಂಬಗಳ ಬಾಲೆಯರ ಮಹಿಳೆಯರು , ಬಹು ಸಂಭ್ರಮದಿಂದ ಆಚರಿಸುವ ಜಾನಪದೀಯ ಸಂಪ್ರದಾಯಿಕ ಧಾರ್ಮಿಕ ವಿಶಿಷ್ಟವಾದ ಹಬ್ಬವಾಗಿದೆ. ನಾಡಿನ ಎಲ್ಲಾ ವಯೋಮಾನದ , ಸರಂವ ಜನಾಂಗದವರು ಸೌಹಾರ್ದತೆಯಿಂದ. ಮೇಲು ಕೀಳೆನ್ನದೇ ಸಮಾನ
ಮನಸ್ಕರಾಗಿ ಸಕಲ ರೀತಿಯ ಸೌಹಾರ್ಧತೆಯಿಂದ , ಮಹಿಳೆಯರೆಲ್ಲರೂ ಬಹು ಸಂಭ್ರಮದಿಂದ ಅಚರಿಸುವ ಏಕೈಕ ಹಬ್ಬವಾಗಿದೆ. ಗೌೆರಿ ಹುಣ್ಣಿಮೆ ಹಬ್ಬವು , (ಕಾರ್ತಿಕ ಹುಣ್ಣಿಮೆ) ಉತ್ತರ ಕರ್ನಾಟಕ ಸೇರಿದಂತೆ. ಹಲವೆಡೆ ಮಹಿಳೆಯರು ಮತ್ತು ಯುವತಿಯರು , ಬಹು ಸಂಭ್ರಮದಿಂದ ಆಚರಿಸುವ ಜನಪದ ಹಬ್ಬವಾಗಿದೆ. ಅಂತಯೇ ಕೂಡ್ಲಿಗಿ ಪಟ್ಟಣ ಸೇರಿದಂತೆ , ಕ್ಷೇತ್ರದೆಲ್ಲೆಡೆಗಳಲ್ಲಿ ಹಬ್ಬವನ್ನು ಬಹು ಸಂಭ್ರಮ ಸಡಗರದಿಂದ ಆಚರಿಸಲಾಯಿತು. *ಹಬ್ಬದ ಮಹತ್ವ ಮತ್ತು ವಿಶೇಷತೆ*:- • ಜನಪದ ಮತ್ತು ಸಾಂಸ್ಕೃತಿಕ ಹಬ್ಬ: ಗೌರಮ್ಮ (ಪಾರ್ವತಿ) ಮತ್ತು ಶಿವನಿಗೆ ಸಮರ್ಪಿತವಾದ ಈ ಹಬ್ಬವು ಬೆಳೆ ಸಮೃದ್ಧಿ,
ಕುಟುಂಬದ ಒಳಿತಿಗಾಗಿ ಮತ್ತು ಬಂಧುತ್ವ ಬಲವರ್ಧನೆಗಾಗಿ ನಡೆಯುತ್ತದೆ. • ಹೆಣ್ಣು ಮಕ್ಕಳ ಹಬ್ಬ: ಇದನ್ನು ಹೆಣ್ಣು ಮಕ್ಕಳ ಹಬ್ಬವೆಂದೂ ಕರೆಯಲಾಗುತ್ತದೆ. ಹೊಸದಾಗಿ ಮದುವೆಯಾದ ಅಥವಾ ಮದುವೆ ನಿಶ್ಚಯವಾದ ವಧುವಿಗೆ ವರನ ಕಡೆಯವರು ಸಕ್ಕರೆ ಗೊಂಬೆ, ಸೀರೆ, ಬಳೆ, ಅರಿಶಿನ-ಕುಂಕುಮ ಹಾಗೂ ವಿಶೇಷ ಖಾದ್ಯಗಳೊಂದಿಗೆ ಆರತಿ ಮಾಡುವ ಸಂಪ್ರದಾಯ ಹಲವೆಡೆ ಇದೆ. • ಗೌರಮ್ಮನ ಪೂಜೆ: ಮಣ್ಣು ಅಥವಾ ಕಟ್ಟಿಗೆಯ ಗೌರಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅವರೆ, ಚೆಂಡು ಹೂವು, ಉತ್ತರಾಣಿ ಕಡ್ಡಿ ಮುಂತಾದವುಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. • ಸಕ್ಕರೆ ಆರತಿ ಮತ್ತು ದೀಪೋತ್ಸವ:- ಮಹಿಳೆಯರು ಮತ್ತು
ಮಕ್ಕಳು ಸಕ್ಕರೆ ಗೊಂಬೆಗಳ ಆರತಿ ಬೆಳಗುವುದು, ಕಣಕದ ದೀಪ ಹಚ್ಚುವುದು ಹಾಗೂ ದೇವಾಲಯಗಳಲ್ಲಿ ದೀಪದಾನ ಮಾಡುವುದು ವಿಶೇಷವಾಗಿದೆ. •ಕೆಲವೆಡೆಗಳಲ್ಲಿ ಹುಣ್ಣಿಮೆಯಂದು ಕೂರಿಸಿ ಅರಾಧಸಿ ಅಂದು ರಾತ್ರಿಯೆ , ಧಾರ್ಮಿಕ ವಿಧಿ ವಿಧಾನಗಳನುಸಾರ ವಿಸರ್ಜಿಸಲಾಗುತ್ತೆ. ಮತ್ತೆ ಹಲವೆಡೆಗಳಲ್ಲಿ ಎರಡೇನೆ ದಿನದಂದು ಕಳುಹಿಸಲಾಗುತ್ತದೆ. ಬಹುತೇಕ ಕಡೆಗಳಲ್ಲಿ ಮೂರನೇ ದಿನದಲ್ಲಿ ಗಂಗೆ ಕಾಣಿಸಕಾಗುತ್ತದೆ. ರತ್ರಿ ವೇಳೆ ನದಿ ಅಥವಾ ಬಾವಿಗಳ ಕೆರೆ ದಂಡೆಯಲ್ಲಿ , ಗೌರಮ್ಮನ ಮೂರ್ತಿಗೆ ಧಾರ್ಮಿಕ ನಿಯಮಾನುಸಾರ ವಿದಾಯ ಹೇಳಿ ವಿಸರ್ಜಿಸಲಾಗುತ್ತದೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
- *ಮೈಸೂರು : ವೈದ್ಯಕೀಯ ಸಮಾಜ ಸೇವೆ ಕುರಿತು ಅನುಭವ ಹಂಚಿಕೊಂಡು ಸೇವೆ ನೀಡಿದ ಕೂಡ್ಲಿಗಿ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ *ಮೈಸೂರು : ವೈದ್ಯಕೀಯ ಸೇವೆ ಹಾಗೂ ಸಮಾಜ ಸೇವೆ ಕುರಿತು ಅನುಭ ಹಂಚಿಕೊಂಡು ಸೇವೆ ನೀಡಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ *- ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ತಮ್ಮ ವೈದ್ಯಕೀಯ ಹಾಗೂ ಸಮಾಜ ಸೇವೆಯನ್ನು. ಕ್ಷೇತ್ರಕ್ಕೆ ಮಾತ್ರವಲ್ಲದೇ ರಾಜ್ಯದ ಮೂಲೆ ಮೂಲೆಗಳಲ್ಲಿ ಮಾತ್ರವಲ್ಲ , ದೇಶ ವಿದೇಶಗಳಲ್ಲಿಯೂ ನೀಡುತಲಿದ್ದಾರೆ. ನಿದರ್ಶನವೆಂಬಂತೆ ಅವರು ಇತ್ತೀಚೆಗೆ , ಮೈಸೂರಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ. ಅವರು ಅತಿಥಿಗಳಾಗಿ ಭಾಗವಹಿಸಿ , ತಮ್ಮ ವೈಧ್ಯಕೀಯ ಸೇವೆ ನೀಡಿದ್ದಾರೆ , ಹಾಗೂ ಶಾಸಕರಾಗಿ ಕಾರ್ಯನಿರ್ವಹಿಸಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ನಾಡಿನಲ್ಲೆಲ್ಲಾ , ವೈದ್ಯರಾಗಿ ದೃಷ್ಟಿಯ ಬೆಳಕು ಜನಪ್ರತಿನಿಧಿಯಾಗಿ ಜನಸೇವೆಯ ಬೆಳಕು ಪಸರಿಸುತ್ತಿದ್ದಾರೆ. ಅವರು ಕೂಡ್ಲಿಗಿ ಕ್ಷೇತ್ರದ ಜನರ ಆರೋಗ್ಯ , ಮತ್ತು ಕಲ್ಯಾಣಕ್ಕಾಗಿ ವೈದ್ಯಕೀಯ ಸಮುದಾಯದ ಸಹಕಾರದೊಂದಿಗೆ ಸೇವೆಯ ಬೆಳಕು ಹರಿಸುತ್ತಿದ್ದಾರೆ. ಅವರು ಇತ್ತೀಚೆಗೆ ಮೈಸೂರಲ್ಲಿ ಕರ್ನಾಟಕ ನೇತ್ರ ಸಂಘದ ವತಿಯಿಂದ , ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ. ಕರ್ನಾಟಕ ನೇತ್ರಶಾಸ್ತ್ರಜ್ಞರ 45ನೇ ವಾರ್ಷಿಕ ಸಮ್ಮೇಳನ , ಹಾಗೂ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ವೈದ್ಯಕೀಯ ಅನುಭವ , ಹಾಗೂ ಜನಸೇವೆಯ ದೃಷ್ಟಿಕೋನದ ಕುರಿತು ಮಾತನಾಡಿ ಅನುಭಗಳನ್ನು ಹಂಚಿಕೊಂಡರು. “ಸಮುದಾಯ ನೇತ್ರಶಾಸ್ತ್ರ – ಸಾರ್ವಜನಿಕ ಸೇವೆಯಲ್ಲಿ ದೃಷ್ಟಿಕೋನ” ವಿಷಯದ ಕುರಿತು ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಕಣ್ಣಿನ ಆರೋಗ್ಯ ಸೇವೆ ತಲುಪಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ , ಸಹೋದ್ಯೋಗಿ ವೈದ್ಯರು ಮಾತನಾಡಿದರು. “ನೇತ್ರ ತಜ್ಞರಾಗಿ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸಿ, ನಂತರ ಜನಪ್ರತಿನಿಧಿಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ ಸೇವಾ ಕಾರ್ಯಕುರಿತು , ಶ್ಲಾಘಸಿ ಅವರ ಕುರಿತು ಮಾತನಾಡಿದರು. ವಿಶೇಷವಾಗಿ ವೈದ್ಯಕೀಯ ಸಮುದಾಯದ ಪ್ರತಿನಿಧಿಯಾಗಿ , ಅವರು ಮಾಡುತ್ತಿರುವ ಜನಪರ ಕಾರ್ಯಗಳು ಮೆಚ್ಚುವಂತಿವೆ ಎಂದು ಬಣ್ಣಿಸಿದರು. ಮುಂದಿನ ದಿನಗಳಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ನಡೆಯುವ , ಆರೋಗ್ಯ ಶಿಬಿರಗಳಲ್ಲಿ ತಾವೂ ಕೂಡ ಭಾಗವಹಿಸುವ ಮೂಲಕ. ವೈದ್ಯಕೀಯ ಸೇವೆ ನೀಡುವುದಾಗಿ ತಿಳಿಸಿದರು , ಶ್ರೀನಿವಾಸ್ ರವರು ಅತ್ಯನ್ನತ ಸ್ಥಾನಗಳನ್ನು ಪಡೆಯುವಂತಾಗಲಿ , ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸಲಿ ಎಂದು ಅವರು ಹಾರೈಸಿದರು. ಈ ಸಂದರ್ಭದಲ್ಲಿ ಸಹ ಅಧ್ಯಕ್ಷರುಗಳಾದ ಡಾ ॥ ಕೃಷ್ಣಪ್ರಸಾದ್ ಕೂಡ್ಲು , ಡಾ ॥ಸುಜಾತಾ ರಾಥೋಡ್ ಡಾ ॥ ವಿವೇಕ್ ದೊರೈ , ಹಾಗೂ ಡಾ ॥ ಮೊಹಮ್ಮದ್ ಸಲೀಂ ಕಿತ್ತೂರು, ಡಾ ॥ ದಿನೇಶ್ ಕುಮಾರ್, ಡಾ॥ ಹರಿಪ್ರಸಾದ್ ಹೆಚ್.ಟಿ., ಡಾ॥ ರಾಜಶೇಖರ್ ಪಿ. ದ್ಯಾಬೇರಿ ಹಾಗೂ ಡಾ॥ ಪರಸಪ್ಪ ಬಂದ್ರಕಳ್ಳಿ ಸೇರಿದಂತೆ ಹಲವು ವೈದ್ಯಕೀಯ ಗಣ್ಯರು ವೇದಿಕೆಯಲ್ಲಿದ್ದರು. ಜೆಎಸ್ಎಸ್ವ ವೈದ್ಯಕೀಯ ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿಯವರು, ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*3
- ಶ್ರೀ ಗುರು ಕನಕ ವಿದ್ಯಾ ಕೇಂದ್ರದಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆ ಕೂಡ್ಲಿಗಿ: ತಾಲೂಕಿನ ತಾಯಕನಹಳ್ಳಿ ಗ್ರಾಮದ ಶ್ರೀ ಗುರು ಕನಕ ವಿದ್ಯಾ ಕೇಂದ್ರ ಶಾಲೆಯಲ್ಲಿ ಶುಕ್ರವಾರ ನಡೆದ ಭಕ್ತ ಕನಕದಾಸರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಸುನೀತಾ ಗುರುರಾಜ್ ಅವರು ಭಕ್ತ ಕನಕದಾಸರ ಜೀವನ, ಸಾಧನೆ ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಟಿ. ಮಂಜಣ್ಣ ಅವರು ಮಾತನಾಡಿ, ಕನಕದಾಸರ ಕೀರ್ತನೆಗಳು, ದಾಸ ಸಾಹಿತ್ಯ ಹಾಗೂ ಅವರು ರಚಿಸಿರುವ ಮಹತ್ವದ ಕೃತಿಗಳ ಕುರಿತು ವಿವರಿಸಿದರು. ಕನಕದಾಸರ ಸಾಹಿತ್ಯದಲ್ಲಿ ಅಡಕವಾಗಿರುವ ಭಕ್ತಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಕನಕದಾಸರ ದಾಸರ ಕೀರ್ತನೆಗಳನ್ನು ಹಾಡಿ ಗಮನ ಸೆಳೆದರು. ಅಲ್ಲದೆ, ಕನಕದಾಸರ ಕಿರು ಪರಿಚಯವನ್ನು ನೀಡುವ ಮೂಲಕ ಜಯಂತಿಯ ಮಹತ್ವವನ್ನು ತಿಳಿಸಿಕೊಟ್ಟರು. ಕೊನೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಹುಡೇಂ ಗ್ರಾಮ ಪಂಚಾಯಿತಿ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ತುಡುಮ ಗುರುರಾಜ್, ಸಹ ಶಿಕ್ಷಕರಾದ ಜಿ.ಪಿ. ಬಸವರಾಜ್, ಹಂಪಮ್ಮ ಪೂಜಾರ, ಸುಮಿತ್ರ, ಮಂಜುಳಾ, ರುದ್ರಮ್ಮ, ನೇತ್ರಾವತಿ, ಮಮತಾ ಹಾಗೂ ಬೋಧಕೇತರ ಸಿಬ್ಬಂದಿಯಾದ ಮಲ್ಲಿಕಾರ್ಜುನ, ಶಾಂತಕುಮಾರ್ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.1
- "ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟ, ಸ್ಥಳೀಯರ ಬೇಡಿಕೆ ಹಾಗೂ ಗವಿಸಿದ್ದೇಶ್ವರ ಶ್ರೀಗಳ ಒತ್ತಾಯದ ಹಿನ್ನೆಲೆಯಲ್ಲಿ ಕೆರೆ ನಿರ್ಮಾಣದ ಸಾಧ್ಯತೆ ಕುರಿತು ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಇದರ ಬಗ್ಗೆ ವರದಿ ಬಂದ ಬಳಿಕ ಚರ್ಚಿಸಲಾಗುವುದು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಕೊಪ್ಪಳದ ಬಸಾಪುರ ಏರ್ ಸ್ಟ್ರಿಪ್ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು. ಬಲ್ಡೋಟಾ ಕಾರ್ಖಾನೆ ಸ್ಥಗಿತಗೊಳಿಸಲು ಹೋರಾಟ ಹಾಗೂ ಶ್ರೀಗಳೂ ಈ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಕೇಳಿದಾಗ, "ನನಗೂ ಈ ವಿಚಾರ ಗೊತ್ತಿದೆ. ಸಿದ್ದರಾಮಯ್ಯ ಅವರು ಇದ್ದಾಗಲೂ ಈ ಸಮಸ್ಯೆ ಇತ್ತು. ಯಾವುದಾದರೂ ಒಂದು ಕಡೆ ಕೆರೆ ನಿರ್ಮಿಸಬೇಕು ಎಂಬ ಬೇಡಿಕೆಯಿದೆ. ವರದಿ ಬಂದ ನಂತರ ಮಾತನಾಡುತ್ತೇನೆ" ಎಂದರು. ಸಂವಿಧಾನ ವಿಚಾರವಾಗಿ ನಿಮ್ಮ ಹೇಳಿಕೆಗೆ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, "ನಾನು ಹೇಳಿರುವ ಸಂವಿಧಾನ ಬದಲಾವಣೆ ಎಂದರೆ ಬಿಜೆಪಿಯವರು ಹೇಳುವ ರೀತಿಯ ಬದಲಾವಣೆಯಲ್ಲ. ಜನರ ಭಾವನೆ, ಪರಿಸ್ಥಿತಿ, ಸಮಸ್ಯೆ ಮತ್ತು ಅಭಿವೃದ್ಧಿಗೆ ಅನುಗುಣವಾಗಿ ಅಗತ್ಯ ತಿದ್ದುಪಡಿ ಮಾಡುವುದು" ಎಂದು ಹೇಳಿದರು. "371 ಜೆ ಕಲಂ ಜಾರಿಯಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಭಾಗದ ಜನರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು 371ಜೆ ಜಾರಿಗೆ ತರಲಾಯಿತು. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾದವು. ಕಾಲೇಜುಗಳಲ್ಲಿ ಪ್ರವೇಶ ದೊರೆಯಿತು. ವೈದ್ಯರು, ಎಂಜಿನಿಯರ್ಗಳು ಹಾಗೂ ಎಸಿ, ಡಿಸಿ ಹುದ್ದೆಗಳನ್ನು ಪಡೆಯಲು ಈ ಭಾಗದವರಿಗೆ ಅವಕಾಶ ಸಿಕ್ಕಿದೆ. ಇಂತಹ ಬದಲಾವಣೆಗಳನ್ನೇ ನಾನು ತಿಳಿಸಿದ್ದು" ಎಂದು ಹೇಳಿದರು. "ಇಂದಿರಾ ಗಾಂಧಿ ಅವರ ಕಾಲದಲ್ಲಿ ಸಂವಿಧಾನಕ್ಕೆ ಜಾತ್ಯತೀತ ಎಂಬ ಪದವನ್ನು ಸೇರ್ಪಡೆ ಮಾಡಲಾಯಿತು" ಎಂದು ಹೇಳಿದರು. *ಸಿದ್ದರಾಮಯ್ಯ ಅವರು ಅಹಿಂದ ಸಭೆ ಮಾಡಿದರೆ ತಪ್ಪೇನಿದೆ?* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರ ಸಭೆ ನಡೆಸಿರುವ ಬಗ್ಗೆ ಕೇಳಿದಾಗ, "ಅದರಲ್ಲಿ ತಪ್ಪೇನಿದೆ? ತಪ್ಪೇನೂ ಇಲ್ಲವಲ್ಲ" ಎಂದು ಹೇಳಿದರು. ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಒಟ್ಟಿಗೆ ಇದ್ದಾರೆ ಎಂಬ ಚರ್ಚೆಗೆ, "ಒಂದೇ ಪಕ್ಷದವರು ಚೆನ್ನಾಗಿಯೇ ಇದ್ದಾರೆ. ನೀವು ಯಾಕೆ ತಲೆಕೆಡಿಸಿಕೊಳ್ಳುತ್ತೀರಿ?" ಎಂದರು. *ಲಿಖಿತವಾಗಿ ಭರವಸೆ ನೀಡಲು ಸಾಧ್ಯವಿಲ್ಲ* ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಾಗೂ ಬೇಡಿಕೆಗಳ ಬಗ್ಗೆ ಕೇಳಿದಾಗ, "ಆಶಾ ಕಾರ್ಯಕರ್ತರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ. ಆದರೆ, ಅವರು ಕೇಳುತ್ತಿರುವ ಎಲ್ಲ ಭರವಸೆಗಳನ್ನು ಲಿಖಿತವಾಗಿ ನೀಡಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು. "ಆಶಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಬೇಕು. ರಾಜ್ಯ ಸರ್ಕಾರವೊಂದನ್ನೇ ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸುವುದು ಸರಿಯಲ್ಲ. ಲಿಖಿತವಾಗಿ ಭರವಸೆ ಕೊಡಿ ಎಂದು ಕೇಳುತ್ತಿದ್ದಾರೆ. ಯಾವ ಸರ್ಕಾರಕ್ಕೂ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತವಾಗಿ ಬರೆದುಕೊಡಲು ಸಾಧ್ಯವಿಲ್ಲ" ಎಂದರು. "ಆಶಾ ಕಾರ್ಯಕರ್ತೆಯರ ಸೇವೆಯನ್ನು ಸರ್ಕಾರ ಗೌರವಿಸುತ್ತದೆ. ಬೇರೆ ಕೆಲವು ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಇರುವ ಸೌಲಭ್ಯಗಳಿಗಿಂತ ಕರ್ನಾಟಕದಲ್ಲಿ ಉತ್ತಮ ರೀತಿಯಲ್ಲಿ ಗೌರವ ನೀಡಲಾಗುತ್ತಿದೆ ಎಂದು ಹೇಳಿದರು. "ಅವರು ನಮ್ಮ ಹೆಣ್ಣುಮಕ್ಕಳು. ಆಶಾ ಕಾರ್ಯಕರ್ತೆಯರ ವ್ಯವಸ್ಥೆಯನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಆರಂಭಿಸಲಾಯಿತು. ಅವರ ಶ್ರಮದ ಬಗ್ಗೆ ನಮಗೆ ಗೌರವವಿದೆ. ಕೆಲವು ಪ್ರೋತ್ಸಾಹಧನಗಳ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವರ ಬಗ್ಗೆ ನನಗೂ ಸಹಾನುಭೂತಿಯಿದೆ. ಈ ವಿಚಾರವಾಗಿ ನಾನು ಈಗಾಗಲೇ ಅವರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಪ್ರತಿಭಟನೆ ನಡೆಸಿದವರ ನೋವು, ಸಮಸ್ಯೆ ಮತ್ತು ಬೇಡಿಕೆಗಳು ಸರ್ಕಾರಕ್ಕೆ ಅರ್ಥವಾಗಿವೆ" ಎಂದು ತಿಳಿಸಿದರು. ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ರಾಜಕೀಯ ಬೆರೆಸಲಾಗುತ್ತಿದೆ. ಕೆಲವರು ರಾಜಕೀಯಕ್ಕಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರಾಗಿ ಬರುವುದು, ಸಿನಿಮಾ ಕ್ಷೇತ್ರದವರನ್ನು ಕಳುಹಿಸುವುದು, ಕಾರ್ಯಕರ್ತರನ್ನು ಕಳುಹಿಸುವುದು ಹೀಗೆ ಹಲವು ಬೆಳವಣಿಗೆಗಳು ನಡೆಯುತ್ತಿವೆ. ನನಗೆ ಇವೆಲ್ಲವೂ ಗೊತ್ತಿದೆ. ಅವರ ಹೋರಾಟವನ್ನು ರಾಜಕೀಯಗೊಳಿಸಬಾರದು. ಸರ್ಕಾರವನ್ನು ಎದುರಿಸುವ ಹೋರಾಟ ಎಂಬ ಭಾವನೆ ಮೂಡಬಾರದು" ಎಂದು ಹೇಳಿದರು. "ಆಶಾ ಕಾರ್ಯಕರ್ತೆಯರಿಗೆ ಕೆಲಸಕ್ಕೆ ಮರಳುವಂತೆ ಮನವಿ ಮಾಡಿದ್ದೇನೆ. ಸರ್ಕಾರ ಅವರ ಬೇಡಿಕೆಗಳನ್ನು ನಿರ್ಲಕ್ಷಿಸಿಲ್ಲ" ಎಂದರು. ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅನ್ಫಿಟ್ ಆಗಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಟೀಕೆಯ ಬಗ್ಗೆ ಕೇಳಿದಾಗ, "ಫಿಟ್ ಮಾಡಿಕೊಳ್ಳೋಣ. ಅವರೇ ಫಿಟ್ ಮಾಡಲಿ" ಎಂದು ತಿರುಗೇಟು ನೀಡಿದರು. ಆಶಾ ಕಾರ್ಯಕರ್ತೆಯರಿಗೆ ಅಧಿವೇಶನದಲ್ಲಿ ಗುಡ್ನ್ಯೂಸ್ ನೀಡುವುದಾಗಿ ಹೇಳಿದ್ದೀರಿ ಎಂದು ಕೇಳಿದಾಗ, "ಅದೆಲ್ಲವನ್ನೂ ಚರ್ಚೆ ಮಾಡಬೇಕು. ಮಾಧ್ಯಮದವರು ಹೇಳುತ್ತಾರೆ ಎಂಬ ಕಾರಣಕ್ಕೆ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ನಾನು ಅವರೊಂದಿಗೆ ಮಾತನಾಡಿದ್ದೇನೆ" ಎಂದರು.1
- ಗಂಗಾವತಿಯ ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಸಂವಿಧಾನ ದಿವಸ್ ಆಚರಣೆ ಗಂಗಾವತಿ: ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ನ. 26.ಗುರುವಾರ ದಂದು ಸರ್ಕಾರದ ಆದೇಶದಂತೆ ಸಂವಿಧಾನ ಅಂಗೀಕಾರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕಿ ಶ್ರೀಮತಿ ಸುಮಂಗಲಾ ಅವರು, ಭಾರತದ ಸಂವಿಧಾನದ ಮಹತ್ವ, ರಚನೆ ಹಾಗೂ ನಾಗರಿಕರ ಹಕ್ಕು ಮತ್ತು ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಸಹಶಿಕ್ಷಕರಾದ ನೀಲಕಂಠ ಅವರು ಸಂವಿಧಾನದ ಪ್ರಸ್ತಾವನೆಯನ್ನು ವಿವರಿಸಿದರು. ನಂತರ ವಿದ್ಯಾರ್ಥಿಗಳಿಂದ ಸಂವಿಧಾನದ ಪ್ರಸ್ತಾವನೆಯ ಪ್ರತಿಯನ್ನು ವಾಚಿಸಲಾಯಿತು. ವಿದ್ಯಾರ್ಥಿಗಳು ಸಂವಿಧಾನದ ವಿವಿಧ ಮುಖ್ಯಾಂಶಗಳ ಕುರಿತು ಭಾಷಣ ಮಾಡಿ ಗಮನ ಸೆಳೆದರು. ಕಾರ್ಯಕ್ರಮದ ಅಂತ್ಯದಲ್ಲಿ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಿಯಾಕುಮಾರಿ, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ಸಂವಿಧಾನದ ಪ್ರಮಾಣ ವಚನ ಸ್ವೀಕರಿಸಿದರು.1
- ಬಿಳಿ ಜೋಳದ ಚಿಗುರು ಸೆಪ್ಪೆ ತಿಂದು 41 ಕುರಿಗಳು ಸಾವುಕುರಿಗಾಯಿ ಮಂಜುನಾಥಗೆ ಅರ್ಥಿಕ ಸಂಕಷ್ಟ ಚಳ್ಳಕೆರೆ ಬಿಳಿ ಜೋಳದ ಚಿಗುರು ಸೆಪ್ಪೆ ತಿಂದು 41 ಕುರಿಗಳು ಸಾವು... ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೆರೆಹಿಂದಹಟ್ಟಿ ಗ್ರಾಮದಲ್ಲಿ ಕುರಿಗಾಹಿ ಮಂಜುನಾಥಗೆ ದೊಡ್ಡ ಆಘಾತ ಎದುರಾಗಿದೆ. ಬುಡ್ನಹಟ್ಟಿ ಗ್ರಾಮದ ಸಮೀಪದ ಕೆರೆಯಿಂದಲಹಟ್ಟಿಯ ಗ್ರಾಮದ ಕುರಿಗಾಯಿ ಮಂಜುನಾಥ್ 110 ಕುರಿ 36 ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕುರಿಗಳು ಮೇವಿಗೆಂದ ಹೋದಾಗ ಬಿಳಿ ಜೋಳದ ಚಿಗುರು ತಿಂದ ಪರಿಣಾಮ 41 ಕುರಿಗಳು ಸಾವನ್ನಪ್ಪಿವೆ. ಒಟ್ಟು 155 ಕುರಿಗಳನ್ನು ಹೊಂದಿದ್ದ ಮಂಜುನಾಥ್ ಅವರಿಗೆ ಈ ಘಟನೆಯಿಂದ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಪಶುಸಂಗೋಪನಾ ಇಲಾಖೆಯ ಗಮನಕ್ಕೆ ಬಂದಿದ್ದು, ತಕ್ಷಣವೇ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸ್ವಸ್ಥಗೊಂಡಿದ್ದ 30 ಕುರಿಗಳಿಗೆ ಚಿಕಿತ್ಸೆ ನೀಡಿ ಅವುಗಳ ಜೀವ ಉಳಿಸಲಾಗಿದೆ. ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶ್ರೀನಿವಾಸ್ ಬಾಬು ತಿಳಿಸಿದ್ದಾರೆ. ಇನ್ನು ಈ ಘಟನೆ ಕುರಿಗಾಹಿಗಳಿಗೆ ಮತ್ತು ರೈತರಿಗೆ ಎಚ್ಚರಿಕೆಯ ಪಾಠವಾಗಿದೆ. ಬಿಳಿ ಜೋಳದ ಚಿಗುರು ಮೇಯಿಸುವುದರಿಂದ ಜಾನುವಾರುಗಳಿಗೆ ಎದುರಾಗಬಹುದಾದ ಅಪಾಯ, ಇಂತಹ ಸಂದರ್ಭದಲ್ಲಿ ರೈತರು ಹಾಗೂ ಕುರಿಗಾಹಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶ್ರೀನಿವಾಸ್ ಬಾಬು ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.1
- ಹೊಳಲ್ಕೆರೆ ಸ್ನೇಹ ಪಬ್ಲಿಕ್ ಸ್ಕೂಲ್ನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜನೆ ಎಲ್ಲರೂ ಸಂವಿಧಾನದ ಆಶಯಗಳನ್ನು ಈಡೇರಿಸಬೇಕು ಎಂದು ಹೊಳಲ್ಕೆರೆಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅರ್ಶದ್ ಎ ಅನ್ಸಾರಿ ಸಲಹೆ ನೀಡಿದರು. ಹೊಳಲ್ಕೆರೆ ಪಟ್ಟಣದ ಸ್ನೇಹ ಪಬ್ಲಿಕ್ ಸ್ಕೂಲ್ನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ನೇಹ ಪಬ್ಲಿಕ್ ಸ್ಕೂಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನ ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಎಲ್ಲರೂ ಬದ್ದರಾಗಬೇಕು. ಸಂವಿಧಾನ ನಮಗೆ ನೀಡಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಹೊಳಲ್ಕೆರೆಯ ಅಪರ ಸಿವಿಲ್ ನ್ಯಾಯಾಧೀಶರಾದ ಹನುಮಂತರಾಯಪ್ಪ ಬಿ.ಆರ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.1
- ಹರಿಹರದ 158 ವರ್ಷಗಳ ಇತಿಹಾಸ… ಇಂದು ನಿರ್ಲಕ್ಷ್ಯದ ನೆರಳಿನಲ್ಲಿ! ವಿಶೇಷ ವರದಿ: ಕೃಷ್ಣ ಎಂ 1868ರಲ್ಲಿ ನಿರ್ಮಾಣಗೊಂಡ ಹರಿಹರದ ತುಂಗಭದ್ರಾ ನದಿಯ ಮೇಲಿನ ಐತಿಹಾಸಿಕ ಹಳೆಯ ಸೇತುವೆ… ಒಂದು ಕಾಲದಲ್ಲಿ ಬಾಂಬೆ ಕಡೆಗೆ ಸಾಗುವ ಪ್ರಮುಖ ರಸ್ತೆ ಸಂಪರ್ಕದ ಕೊಂಡಿಯಾಗಿದ್ದ ಈ ಸೇತುವೆ ಇಂದು ತನ್ನ ಇತಿಹಾಸವನ್ನು ಮೌನವಾಗಿ ಹೊತ್ತು ನಿಂತಿದೆ. 14 ಕಲ್ಲಿನ ಕಮಾನುಗಳು, ಅಂದಿನ ಇಂಜಿನಿಯರಿಂಗ್ ವೈಭವ, ಸಾವಿರಾರು ಪ್ರಯಾಣಗಳ ನೆನಪುಗಳು… ಇವೆಲ್ಲವನ್ನೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಲ್ಲವೇ? 😡 ಹೊಸ ನಿರ್ಮಾಣಗಳಿಗೆ ಆದ್ಯತೆ ನೀಡುವ ಆಡಳಿತಕ್ಕೆ, ನಮ್ಮ ಇತಿಹಾಸವನ್ನು ಸಂರಕ್ಷಿಸುವ ಜವಾಬ್ದಾರಿ ಇಲ್ಲವೇ? ಸೇತುವೆ ಕುಸಿದ ಮೇಲೆ ಇತಿಹಾಸ ನೆನಪಿಸಿಕೊಳ್ಳುವುದಕ್ಕಿಂತ, ಇಂದು ಉಳಿಸುವ ಪ್ರಯತ್ನ ಮಾಡೋಣ! 🎥 1868ರಿಂದ 2026ರವರೆಗಿನ ತುಂಗಭದ್ರಾ ಸೇತುವೆಯ ಉಗಮ, ಗತವೈಭವ ಮತ್ತು ಇಂದಿನ ಸ್ಥಿತಿಯ ಕುರಿತ ವಿಶೇಷ ವರದಿ. ✊ ಇತಿಹಾಸ ಉಳಿಸಿ… ಪರಂಪರೆ ಉಳಿಸಿ… ತುಂಗಭದ್ರಾ ಸೇತುವೆಯನ್ನು ಉಳಿಸಿ! 📢 ನಿಮ್ಮ ಅಭಿಪ್ರಾಯ ತಿಳಿಸಿ. ಈ ಐತಿಹಾಸಿಕ ವರದಿಯನ್ನು ಎಲ್ಲರಿಗೂ ತಲುಪಿಸಿ. MIRROR OF HARIHAR | ಹರಿಹರ ಕನ್ನಡಿ #ಜನರಧ್ವನಿ #ಹರಿಹರ #ನಗರಾಭಿವೃದ್ಧಿ #harihar #ಸಾರ್ವಜನಿಕಸಮಸ್ಯೆ #davanagere #ದಾವಣಗೆರೆ Chief Minister of Karnataka Santosh Lad Davanagere Zilla Panchayat Davanagere Jille samachara BP Harish Namma Harihar Harihar Krishna M Harihararural Ps #TungabhadraBridge #Harihar #1868 #ಇತಿಹಾಸಉಳಿಸಿ #ಪರಂಪರೆಸಂರಕ್ಷಣೆ #MirrorOfHarihar @highlight Davanagere Updates Namma Nakshatra Harihar Davanagere Smart City Limited1
- ಕೂಡ್ಲಿಗಿ : ಸಡಗರ ಸಂಭ್ರಮದಿಂದ ಜರುಗಿದ ಬಾಲೆಯರ ಹೆಂಗಳೆಯರ ಗೌರಿ ಹುಣ್ಣಿಮೆ ಹಬ್ಬ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಕೂಡ್ಲಿಗಿ : ಸಂಭ್ರಮದಿಂದ ಜರುಗಿದ ಬಾಲೆಯರ ಹೆಂಗಳೆಯರ ಗೌರಿ ಹುಣ್ಣಿಮೆ ಹಬ್ಬ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಗೌರಿ ಹುಣ್ಣಿಮೆ ಹಬ್ಬ ಎಂಬುದು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು. ರೈತ ಕುಟುಂಬಗಳ ಬಾಲೆಯರ ಮಹಿಳೆಯರು , ಬಹು ಸಂಭ್ರಮದಿಂದ ಆಚರಿಸುವ ಜಾನಪದೀಯ ಸಂಪ್ರದಾಯಿಕ ಧಾರ್ಮಿಕ ವಿಶಿಷ್ಟವಾದ ಹಬ್ಬವಾಗಿದೆ. ನಾಡಿನ ಎಲ್ಲಾ ವಯೋಮಾನದ , ಸರಂವ ಜನಾಂಗದವರು ಸೌಹಾರ್ದತೆಯಿಂದ. ಮೇಲು ಕೀಳೆನ್ನದೇ ಸಮಾನ ಮನಸ್ಕರಾಗಿ ಸಕಲ ರೀತಿಯ ಸೌಹಾರ್ಧತೆಯಿಂದ , ಮಹಿಳೆಯರೆಲ್ಲರೂ ಬಹು ಸಂಭ್ರಮದಿಂದ ಅಚರಿಸುವ ಏಕೈಕ ಹಬ್ಬವಾಗಿದೆ. ಗೌೆರಿ ಹುಣ್ಣಿಮೆ ಹಬ್ಬವು , (ಕಾರ್ತಿಕ ಹುಣ್ಣಿಮೆ) ಉತ್ತರ ಕರ್ನಾಟಕ ಸೇರಿದಂತೆ. ಹಲವೆಡೆ ಮಹಿಳೆಯರು ಮತ್ತು ಯುವತಿಯರು , ಬಹು ಸಂಭ್ರಮದಿಂದ ಆಚರಿಸುವ ಜನಪದ ಹಬ್ಬವಾಗಿದೆ. ಅಂತಯೇ ಕೂಡ್ಲಿಗಿ ಪಟ್ಟಣ ಸೇರಿದಂತೆ , ಕ್ಷೇತ್ರದೆಲ್ಲೆಡೆಗಳಲ್ಲಿ ಹಬ್ಬವನ್ನು ಬಹು ಸಂಭ್ರಮ ಸಡಗರದಿಂದ ಆಚರಿಸಲಾಯಿತು. *ಹಬ್ಬದ ಮಹತ್ವ ಮತ್ತು ವಿಶೇಷತೆ*:- • ಜನಪದ ಮತ್ತು ಸಾಂಸ್ಕೃತಿಕ ಹಬ್ಬ: ಗೌರಮ್ಮ (ಪಾರ್ವತಿ) ಮತ್ತು ಶಿವನಿಗೆ ಸಮರ್ಪಿತವಾದ ಈ ಹಬ್ಬವು ಬೆಳೆ ಸಮೃದ್ಧಿ, ಕುಟುಂಬದ ಒಳಿತಿಗಾಗಿ ಮತ್ತು ಬಂಧುತ್ವ ಬಲವರ್ಧನೆಗಾಗಿ ನಡೆಯುತ್ತದೆ. • ಹೆಣ್ಣು ಮಕ್ಕಳ ಹಬ್ಬ: ಇದನ್ನು ಹೆಣ್ಣು ಮಕ್ಕಳ ಹಬ್ಬವೆಂದೂ ಕರೆಯಲಾಗುತ್ತದೆ. ಹೊಸದಾಗಿ ಮದುವೆಯಾದ ಅಥವಾ ಮದುವೆ ನಿಶ್ಚಯವಾದ ವಧುವಿಗೆ ವರನ ಕಡೆಯವರು ಸಕ್ಕರೆ ಗೊಂಬೆ, ಸೀರೆ, ಬಳೆ, ಅರಿಶಿನ-ಕುಂಕುಮ ಹಾಗೂ ವಿಶೇಷ ಖಾದ್ಯಗಳೊಂದಿಗೆ ಆರತಿ ಮಾಡುವ ಸಂಪ್ರದಾಯ ಹಲವೆಡೆ ಇದೆ. • ಗೌರಮ್ಮನ ಪೂಜೆ: ಮಣ್ಣು ಅಥವಾ ಕಟ್ಟಿಗೆಯ ಗೌರಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅವರೆ, ಚೆಂಡು ಹೂವು, ಉತ್ತರಾಣಿ ಕಡ್ಡಿ ಮುಂತಾದವುಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. • ಸಕ್ಕರೆ ಆರತಿ ಮತ್ತು ದೀಪೋತ್ಸವ:- ಮಹಿಳೆಯರು ಮತ್ತು ಮಕ್ಕಳು ಸಕ್ಕರೆ ಗೊಂಬೆಗಳ ಆರತಿ ಬೆಳಗುವುದು, ಕಣಕದ ದೀಪ ಹಚ್ಚುವುದು ಹಾಗೂ ದೇವಾಲಯಗಳಲ್ಲಿ ದೀಪದಾನ ಮಾಡುವುದು ವಿಶೇಷವಾಗಿದೆ. •ಕೆಲವೆಡೆಗಳಲ್ಲಿ ಹುಣ್ಣಿಮೆಯಂದು ಕೂರಿಸಿ ಅರಾಧಸಿ ಅಂದು ರಾತ್ರಿಯೆ , ಧಾರ್ಮಿಕ ವಿಧಿ ವಿಧಾನಗಳನುಸಾರ ವಿಸರ್ಜಿಸಲಾಗುತ್ತೆ. ಮತ್ತೆ ಹಲವೆಡೆಗಳಲ್ಲಿ ಎರಡೇನೆ ದಿನದಂದು ಕಳುಹಿಸಲಾಗುತ್ತದೆ. ಬಹುತೇಕ ಕಡೆಗಳಲ್ಲಿ ಮೂರನೇ ದಿನದಲ್ಲಿ ಗಂಗೆ ಕಾಣಿಸಕಾಗುತ್ತದೆ. ರತ್ರಿ ವೇಳೆ ನದಿ ಅಥವಾ ಬಾವಿಗಳ ಕೆರೆ ದಂಡೆಯಲ್ಲಿ , ಗೌರಮ್ಮನ ಮೂರ್ತಿಗೆ ಧಾರ್ಮಿಕ ನಿಯಮಾನುಸಾರ ವಿದಾಯ ಹೇಳಿ ವಿಸರ್ಜಿಸಲಾಗುತ್ತದೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4