ಮೋದಿ ನೇತೃತ್ವದಲ್ಲಿ ಭಾರತಕ್ಕೆ ಹೊಸ ರೂಪ: ಶ್ರೀ ಶ್ರೀ ರವಿಶಂಕರ್ ಸ್ವಚ್ಛ ಭಾರತದಿಂದ ದೇಶದ ಚಿತ್ರ ಬದಲಾವಣೆ | ಆರ್ಥಿಕತೆಯಲ್ಲಿ ಭಾರತ 3ನೇ ಸ್ಥಾನಕ್ಕೆ ಏರಿಕೆ ಬೆಂಗಳೂರು : ಆಧ್ಯಾತ್ಮಿಕ ಗುರು Sri Sri Ravi Shankar ಅವರು ಪ್ರಧಾನಿ Narendra Modi ಅವರ ನಾಯಕತ್ವವನ್ನು ಮೆಚ್ಚಿ, ಕಳೆದ 10 ವರ್ಷಗಳಲ್ಲಿ ಭಾರತ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ. Art of Living Foundation ಆಶ್ರಮದಲ್ಲಿ ನಿರ್ಮಿಸಲಾದ ಭವ್ಯ ನೂತನ ಧ್ಯಾನ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಮ್ಮೆ ಜಾಗತಿಕ ಆರ್ಥಿಕತೆಯಲ್ಲಿ 14ನೇ ಸ್ಥಾನದಲ್ಲಿದ್ದ ಭಾರತ ಇಂದು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ” ಎಂದು ಹೇಳಿದರು. “ದೇಶ ಅವ್ಯವಸ್ಥೆಯಿಂದ ಕೂಡಿದ್ದ ಸಂದರ್ಭದಲ್ಲಿ ಮೋದಿ ಅವರು Swachh Bharat Mission ಮೂಲಕ ದೇಶಕ್ಕೆ ಹೊಸ ರೂಪ ನೀಡಿದರು. ಸ್ವಚ್ಛತೆ, ಸುರಕ್ಷತೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿ ಜನರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ” ಎಂದು ಪ್ರಶಂಸಿಸಿದರು. ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಂಡು ದೇಶವನ್ನು ಸುರಕ್ಷಿತಗೊಳಿಸಿರುವುದರ ಜೊತೆಗೆ ಯೋಗ ಮತ್ತು ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸುವಲ್ಲಿ ಮೋದಿ ಸರ್ಕಾರ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು. ಅಯೋಧ್ಯೆಯಲ್ಲಿ Ram Mandir Ayodhya ನಿರ್ಮಾಣವನ್ನು ಉಲ್ಲೇಖಿಸಿದ ಶ್ರೀ ಶ್ರೀ ರವಿಶಂಕರ್, “ಟೆಂಟ್‌ನಲ್ಲಿದ್ದ ರಾಮಲಲ್ಲಾಗೆ ಇಂದು ಭವ್ಯ ಮಂದಿರ ನಿರ್ಮಾಣವಾಗಿದೆ” ಎಂದು ಹೇಳಿದರು. ಈ ವೇಳೆ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಕಮಲದ ಆಕಾರದಲ್ಲಿ ನಿರ್ಮಿಸಲಾದ ಭವ್ಯ ಧ್ಯಾನ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಸುಮಾರು 20 ಸಾವಿರ ಜನರು ಒಂದೇ ಸಮಯದಲ್ಲಿ ಧ್ಯಾನ ಮಾಡಬಹುದಾದ ಸೌಲಭ್ಯ ಈ ಮಂದಿರದಲ್ಲಿದೆ ಎಂದು ತಿಳಿಸಲಾಗಿದೆ.

- ರಾಜಕೀಯ ಅಂದರೆ ಕೇವಲ ಭಾಷಣ ಅಲ್ಲ… ಮಾನವೀಯತೆಯೂ ಹೌದು!.......... ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗಳನ್ನು ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಮೂಡಿಗೆರೆ ಜನಪ್ರಿಯ ಶಾಸಕಿ ನಯನ ಮೋಟಮ್ಮ. 🙏 ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದು ನಿಜವಾದ ಉದಾಹರಣೆ.1
- ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸಂಗಾಪುರ ರಸ್ತೆಯು ಹದಗೆಟ್ಟಿದ್ದು, ಇಲ್ಲಿನ ಜನರಿಗೆ ತೀವ್ರ ತೊಂದರೆಯಾಗಿದೆ. ಈ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.1
- ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಸಚಿವ ಎನ್.ಎಸ್.ಬೋಸರಾಜು ಅವರು ಶ್ರೀಮಹರ್ಷಿ ವಾಲ್ಮೀಕಿ ವೃತ್ತವನ್ನು ಉದ್ಘಾಟಿಸಿದರು. ಈ ವೃತ್ತದ ಲೋಕಾರ್ಪಣೆಯು ಸ್ಥಳೀಯ ಸಮುದಾಯಕ್ಕೆ ಮಹತ್ವದ ಸಂಕೇತವಾಗಿದೆ.1
- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಾಲಹಳ್ಳಿಯ ವಾರ್ಡ್ ನಂ. 07ರಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುಖ್ಯ ರಸ್ತೆಗೆ ಅಡ್ಡವಾಗಿ ಅನಧಿಕೃತವಾಗಿ ಶೇಡ್ ಹಾಗೂ ಮನೆ ನಿರ್ಮಾಣ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು. ರಂಗಯ್ಯ ತಂದೆ ಶಿವಪ್ಪ ವಂದಲಿ ಹಾಗೂ ಶಿವನ ತಂದೆ ಶಿವಪ್ಪ ಅವರು ಅಕ್ರಮವಾಗಿ ಶೇಡ್ ನಿರ್ಮಾಣ ಮಾಡಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಶೇಡ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗಳು ಹಾದು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೂ ಸಮಸ್ಯೆ ಉಂಟಾಗುತ್ತಿದೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಾಲಹಳ್ಳಿಯ ವಾರ್ಡ್ ನಂ. 07ರಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುಖ್ಯ ರಸ್ತೆಗೆ ಅಡ್ಡವಾಗಿ ಅನಧಿಕೃತವಾಗಿ ಶೇಡ್ ಹಾಗೂ ಮನೆ ನಿರ್ಮಾಣ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು. ರಂಗಯ್ಯ ತಂದೆ ಶಿವಪ್ಪ ವಂದಲಿ ಹಾಗೂ ಶಿವನ ತಂದೆ ಶಿವಪ್ಪ ಅವರು ಅಕ್ರಮವಾಗಿ ಶೇಡ್ ನಿರ್ಮಾಣ ಮಾಡಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಶೇಡ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗಳು ಹಾದು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೂ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರ ಸಂಚಾರಕ್ಕೆ ಅಡಚಣೆ ಆಗಿರುವುದರಿಂದ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಟ್ಟಡ ಪರವಾನಗಿಯನ್ನು ರದ್ದುಪಡಿಸಿ, ಅಕ್ರಮ ಶೇಡ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಮುಖಂಡರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನಂದಪ್ಪ ಪಿ. ಮಡ್ಡಿ (ಕರವೇ ತಾಲೂಕು ಅಧ್ಯಕ್ಷರು), ರಂಗಣ್ಣ ಕೋಲ್ಕಾರ್, ಗುರುನಾಥ್ ರೆಡ್ಡಿ (ತಾಲೂಕು ಪ್ರಧಾನ ಕಾರ್ಯದರ್ಶಿ), ಮೌನೇಶ್ ದೇಸಾಯಿ, ರಾಮಣ್ಣ ತೆಗ್ಗಳ್ಳಿ (ಗ್ರಾಮ ಪಂಚಾಯತ್ ಸದಸ್ಯರು), ಚನ್ನಬಸವ (ಗ್ರಾಮ ಪಂಚಾಯತ್ ಸದಸ್ಯರು), ಬಸಮ್ಮ (ಗ್ರಾಮ ಪಂಚಾಯತ್ ಸದಸ್ಯರು), ರಮೇಶ್, ರಂಗಪ್ಪ ಬಂಡಿ, ಭೀಮಣ್ಣ ನಾಯಕ್ (ತಾಲೂಕು ಸಂಚಾಲಕರು), ಅಮರೇಶ್ (ಹೋಬಳಿ ಉಪಾಧ್ಯಕ್ಷರು), ತಮ್ಮಣ್ಣ, ವೆಂಕಟೇಶ್ (ಜಾಲಹಳ್ಳಿ ಗ್ರಾಮ ಘಟಕ ಉಪಾಧ್ಯಕ್ಷರು) ಸೇರಿದಂತೆ ಹಲವರು ಉಪಸ್ಥಿತರಿದ್ದರು. 🖋️ ವರದಿ:ಖಾಜಾ ಹುಸೇನ್ ಬಾಬಾ ಜಾಲಹಳ್ಳಿ1
- ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಬೇಸಿಗೆಯಲ್ಲಿ ಜನರು ನೀರಿಗಾಗಿ ಪರದಾಡುತ್ತಿರುವಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮೂಲ್ಯ ನೀರು ವ್ಯರ್ಥವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಪೈಪ್ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.1
- ಜೈಭೀಮ್ ನ್ಯೂಸ್ ಚಾನಲ್‌ನ ರಾಜ್ಯ ಸಮಿತಿಗೆ ಜಾಕಿರಾ ಹುಸೇನ್ ಅಧ್ಯಕ್ಷರಾಗಿ ಮತ್ತು ಮಲ್ಲಿಕಾರ್ಜುನ ಛಲವಾದಿ ರಾಜಾನಕೊಲ್ಲೂರ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಚಾನಲ್‌ನ 4ನೇ ವಾರ್ಷಿಕೋತ್ಸವ ಮತ್ತು 135ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಂಗವಾಗಿ ಘಟಪ್ರಭದಲ್ಲಿ ಈ ಸಮಿತಿ ರಚಿಸಲಾಯಿತು.2
- ಕರ್ನಾಟಕದಲ್ಲಿ ಸೆಖೆ ಆಗುತ್ತಂತೆ ಹೇಳಿ ರಾತ್ರಿ ಹೊರಗೆ ಮಲಗುವ ಜನರಿಗೆ ಹುಷಾರಾಗಿರಬೇಕು ಇಲ್ಲ ಅಂದರೆ ಜೀವಕ್ಕೆ ಅಪಾಯ ನೋಡಿ ಈ ವಿಡಿಯೋ ನೋಡಿ ಯಾವ ರೀತಿ ಕಲ್ಲ ಎತ್ತಿ ಹಾಕ್ಯಾನ ದುಡ್ಡು ಗೋಸ್ಕರ ಜನ ಜೀವಕ್ಕೂ ಭಯವಿಲ್ಲದಂತೆ ಆಗಿದೆ1
- Post by Sharanugouda Patil1