Shuru
Apke Nagar Ki App…
ಕಣಿವೆನಹಳ್ಳಿ ಗೇಟ್ ಬಳಿ ಭೀಕರ ಅಪಘಾತ: ಮೂವರ ದುರ್ಮರಣ ಬೆನ್ನಲ್ಲೇ ಪಿಡಬ್ಲ್ಯೂಡಿ ಇಲಾಖೆ, ಶಾಸಕರ ವಿರುದ್ಧ ಜೆಡಿಎಸ್ ಮುಖಂಡ ಕಾವಲಗೆರೆ ರಾಮಾಂಜಿ ಆಕ್ರೋಶ!
MSMEDIACHANNEL
ಕಣಿವೆನಹಳ್ಳಿ ಗೇಟ್ ಬಳಿ ಭೀಕರ ಅಪಘಾತ: ಮೂವರ ದುರ್ಮರಣ ಬೆನ್ನಲ್ಲೇ ಪಿಡಬ್ಲ್ಯೂಡಿ ಇಲಾಖೆ, ಶಾಸಕರ ವಿರುದ್ಧ ಜೆಡಿಎಸ್ ಮುಖಂಡ ಕಾವಲಗೆರೆ ರಾಮಾಂಜಿ ಆಕ್ರೋಶ!
More news from ಕರ್ನಾಟಕ and nearby areas
- ಆಶಾ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆ ಎನ್ ಡಿಎ ನಾಯಕರಿಗಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು, ನ. 27: “ಆಶಾ ಕಾರ್ಯಕರ್ತೆಯರ ಬಗ್ಗೆ ಮಾತನಾಡುವ ನೈತಿಕತೆ ಎನ್ ಡಿಎ ನಾಯಕರಿಗೆ ಇಲ್ಲ. ಅವರಿಗೆ ಆಶಾ ಕಾರ್ಯಕರ್ತೆಯರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರ ನೀಡಬೇಕಿರುವ ಹಣದ ಬಗ್ಗೆ ಧ್ವನಿ ಎತ್ತಲಿ. ಇದುವರೆಗೂ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಈ ವಿಚಾರವಾಗಿ ಮಾತನಾಡಿಲ್ಲ" ಎಂದು ಸಿಎಂ ಡಿ ಕೆ ಶಿವಕುಮಾರ್ ಕಿಡಿಕಾರಿದರು. ಕೆಂಗೇರಿಯ ಬಿಜಿಎಸ್ ಮೈದಾನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಎನ್ ಡಿಎ ನಾಯಕರ ಹೇಳಿಕೆಗಳ ಬಗ್ಗೆ ಕೇಳಿದಾಗ, “ನಾನು ಎನ್ ಡಿಎನ ಯಾವುದೇ ನಾಯಕರ ಹೇಳಿಕೆಗೆ ಉತ್ತರ ನೀಡುವುದಿಲ್ಲ. ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಈವರೆಗೂ 1 ರೂ. ಹೆಚ್ಚಳ ಮಾಡಿಲ್ಲ. ಅವರ ವೇತನ ಹೆಚ್ಚಳ ಮಾಡಿರುವುದು ನಾವು. ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ಆಶಾ ಕಾರ್ಯಕರ್ತೆಯರ ಯೋಜನೆ ತಂದಿದ್ದು ಮನಮೋಹನ್ ಸಿಂಗ್ ಅವರು. ಆಶಾ ಕಾರ್ಯಕರ್ತೆಯರ ಪರವಾಗಿ ಕಾಂಗ್ರೆಸ್ ಸರ್ಕಾರ ಇದೆ ಎಂದು ಬಿಜೆಪಿಗೆ ಅವರ ಬಗ್ಗೆ ದ್ವೇಷ ಇದೆ. ಹೀಗಾಗಿ ನಾನು ಹೆಚ್ಚು ಮಾತನಾಡುತ್ತಿಲ್ಲ” ಎಂದರು. *ಸಹಿ ಹಾಕಲೇಬೇಕು ಎಂದು ಪಟ್ಟು ಹಿಡಿದರೆ ಅದು ಸಾಧ್ಯವಿಲ್ಲ* “ನಿಮ್ಮ ಮೇಲೆ ನಮಗೆ ನಂಬಿಕೆ ಇದೆ. ನಮಗೆ ಅವಕಾಶ ಕೊಟ್ಟರೆ ನಾವು ಹೋಗಿ ನಮ್ಮ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಅನೇಕ ಆಶಾ ಕಾರ್ಯಕರ್ತೆಯರು ಕರೆ ಹಾಗೂ ಸಂದೇಶದ ಮೂಲಕ ನನಗೆ ಹೇಳುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಲ್ಲೇ ಬಿರುಕು ತರಬಾರದು ಎಂಬ ಉದ್ದೇಶಕ್ಕೆ ನಾನು ಕೂಡ ಮೌನವಾಗಿದ್ದೇನೆ. ನಿಮ್ಮ ಕಷ್ಟಗಳ ಬಗ್ಗೆ ನಮಗೆ ಅರಿವಿದೆ. ನೀವು ನಿಮ್ಮ ಕೆಲಸದಲ್ಲಿ ನಿರತರಾಗಿ. ನೀವು ಸೇವೆಯ ಉದ್ದೇಶದಿಂದ ಬಂದಿದ್ದು, ಹೋರಾಟಕ್ಕಲ್ಲ. ಹೋರಾಟ ಎಲ್ಲರ ಹಕ್ಕು ಇದೆ. ನಾವು ನಿಮ್ಮ ಜತೆ ಚರ್ಚೆ ಮಾಡುತ್ತೇನೆ. ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರು ನಿಮ್ಮ ಜತೆ ಏನು ಮಾತನಾಡಿದ್ದಾರೆ ಎಂಬ ಅರಿವು ನನಗಿದೆ. ಆದರೆ ಸಹಿ ಹಾಕಲೇಬೇಕು ಎಂದು ಪಟ್ಟು ಹಿಡಿದರೆ ಅದು ಸಾಧ್ಯವಿಲ್ಲ. ನನ್ನ ಮೇಲೆ ವಿಶ್ವಾಸ ಇಟ್ಟರೆ ನಾನು ಖಂಡಿತವಾಗಿ ಸಹಾಯ ಮಾಡುವೆ” ಎಂದು ಭರವಸೆ ನೀಡಿದರು. *ಆಶಾ ಕಾರ್ಯಕರ್ತೆಯರು ನಮ್ಮ ಸಹೋದರಿಯರು. ಅವರ ಬಗ್ಗೆ ಕಾಳಜಿ ಇದೆ* ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ರಾಜಕಾರಣ ಮಾಡುವವರು ರಾಜಕಾರಣ ಮಾಡಲಿ. ನನ್ನ ಅಭ್ಯಂತರವಿಲ್ಲ. ನನಗೆ ಈ ವಿಚಾರದಲ್ಲಿ ರಾಜಕಾರಣದ ಅವಶ್ಯಕತೆ ಇಲ್ಲ. ಆಶಾ ಕಾರ್ಯಕರ್ತೆಯರು ನಮ್ಮ ಸಹೋದರಿಯರು. ಅವರ ಹಿತದ ಬಗ್ಗೆ ನಮಗೆ ಕಾಳಜಿ ಇದೆ. ನೀವು ಪ್ರತಿಭಟನೆ ಕೈಬಿಡಿ ಎಂದು ನಾನು ಮತ್ತೊಮ್ಮೆ ವಿನಯದಿಂದ ಮನವಿ ಮಾಡುವೆ. ನಾನು ಎಲ್ಲರನ್ನು ಕರೆದು ತೀರ್ಮಾನ ಮಾಡುವೆ” ಎಂದರು. *ನಾವು ನುಡಿದಂತೆ ನಡೆಯುತ್ತೇವೆ* ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಿರಿ ಎಂದು ಕೇಳಿದಾಗ, “ಹೌದು, ನಾವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ನಾವು ನುಡಿದಂತೆ ನಡೆಯುತ್ತೇವೆ. ಕೇಂದ್ರ ಸರ್ಕಾರ ತನ್ನ ಪಾಲಿನ ಮೊತ್ತವನ್ನು ಹೆಚ್ಚಳ ಮಾಡಲು ಅವರು ಒತ್ತಡ ಹಾಕಲಿ” ಎಂದು ಸವಾಲೆಸೆದರು.1
- *ಏಕಾಏಕಿ ಅಂಗಡಿಯನ್ನು ತೆರವುಗೊಳಿಸಿದ ಡಿ.ಪಾಳ್ಯ ಗ್ರಾ.ಪಂ. ಅಧಬಿವೃದ್ದಿ ಅಧಿಕಾರಿ* *ಬಡ ವ್ಯಾಪಾರಿಯ ಹೊಟ್ಟೆ ಮೇಲೆ ಹೊಡೆದ ಡಿ.ಪಾಳ್ಯ ಗ್ರಾಮ ಪಂಚಾಯಿತಿ ಅಧಿಕಾರಿಗಳ* ಗೌರಿಬಿದನೂರು: ಕಾನೂನುಬದ್ಧ ಭೂ ಸ್ವಾದೀನ ಪ್ರಕ್ರಿಯೆ ನಡೆಸದೆ, ಅಂಗಡಿ ಮಾಲಿಕರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಸಾರ್ವಜನಿಕ ಅನುಕೂಲದ ಹೆಸರನ್ನು ಬಳಸಿಕೊಂಡು. ಉದ್ದೇಶ ಪೂರ್ವಕವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಖುದ್ದಾಗಿ ಪಂಚಾಯಿತಿ ಅಧಿಕಾರಿಗಳೇ ಅಂಗಡಿಯಲ್ಲಿನ ದಿನಸಿ ವಸ್ತುಗಳನ್ನು ಅಂಗಡಿಯಿಂದ ಹೊರಗೆಸೆದಿರುವ ಘಟನೆ ನಡೆದಿದೆ. ತಾಲ್ಲೂಕಿನ ಡಿ.ಪಾಳ್ಯ ಗ್ರಾಮದ 3ನೇ ವಾರ್ಡಿನಲ್ಲಿ ಜಗಲಿ ಕಟ್ಟೆ ಪಕ್ಕದಲ್ಲಿ ಕಳೆದ 25 ವರ್ಷಗಳಿಂದ ದಿನಸಿ ವಸ್ತುಗಳ ಮಾರಾಟದ ಅಂಗಡಿ ನಡೆಸಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ, ಅಶುದ್ ಬಾಷಾ ಎಂಬುವರ ಅಂಗಡಿಯನ್ನು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಯಾವುದೇ ಪೂರ್ವ ಸೂಚನೆ ನೋಟಿಸ್ ನೀಡದೆ ಖುದ್ದಾಗಿ ಪಂಚಾಯಿತಿ ಅಧಿಕಾರಿಗಳೇ ಅಂಗಡಿಯಲ್ಲಿನ ದಿನಸಿ ವಸ್ತುಗಳನ್ನು ಅಂಗಡಿಯಿಂದ ಹೊರಹಾಕುವುದರೊಂದಿಗೆ ಏಕಾಏಕಿ ಸ್ಥಳಕ್ಕೆ ಆಗಮಿಸಿ ಜೆಸಿಬಿ ಮೂಲಕ ಅಂಗಡಿಯನ್ನು ತೆರವುಗೊಳಿಸಿರುವ ಘಟನೆ ನಡೆದಿದೆ. ಅಂಗಡಿ ಮಾಲಿಕರಾದ ನ್ಯಾಮದ್ ಬೀ ಮಾತನಾಡಿ ಪಂಚಾಯಿತಿ ಅಧಿಕಾರಿಗಳು ಯಾವುದೇ ಪೂರ್ವ ನೋಟಿಸ್ ನೀಡದೆ ಏಕಾಏಕಿ ಅಂಗಡಿಯನ್ನು ತೆರವುಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಒತ್ತುವರಿ ಅಥವಾ ಅನಧಿಕೃತ ನಿರ್ಮಾಣದ ಕಾರಣವಿದ್ದರೂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಮೊದಲು ಲಿಖಿತ ನೋಟಿಸ್ ನೀಡಿ, ಅಂಗಡಿ ಮಾಲೀಕರಿಗೆ ತಮ್ಮ ದಾಖಲೆಗಳನ್ನು ಸಲ್ಲಿಸಲು ಮತ್ತು ವಿವರಣೆ ನೀಡಲು ಕಾಲಾವಕಾಶ ನೀಡಬೇಕಿತ್ತು ಆದರೆ ಪಿ.ಡಿಓ.ರವರು ತನ್ನ ಮಾತುಗಳನ್ನು ಕೇಳುವಷ್ಟು ಸಹನೆ ಇಲ್ಲದೆ ಪ್ರವರ್ತಿಸಿದ್ದಾರೆ, ಪಂಚಾಯಿತಿ ಅಧಿಕಾರಿಗಳು ತಮ್ಮ ಮನಸಾ ಇಚ್ಚೆ ವರ್ತಿಸಿದ್ದಾರೆಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಅಂಗಡಿಯು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅಥವಾ ಪರವಾನಗಿ ಇಲ್ಲದೆ ನಿರ್ಮಿಸಿದ್ದರೆ, ಪಂಚಾಯಿತಿಯು ಮೊದಲು ಕಾರಣ ಕೇಳಿ ನೋಟಿಸ್ ನೀಡಬೇಕು. ನಂತರ ನಿಗದಿತ ದಿನಗಳ ಒಳಗೆ ಅಂಗಡಿ ಮಾಲೀಕರು ತಮ್ಮ ಬಳಿ ಇರುವ ದಾಖಲೆಗಳನ್ನು ಹಾಜರುಪಡಿಸಲು ಅವಕಾಶ ನೀಡಬೇಕು. ದಾಖಲೆಗಳು ಸರಿಯಿಲ್ಲದಿದ್ದರೆ ಅಥವಾ ಒತ್ತುವರಿ ಸಾಬೀತಾದರೆ ಮಾತ್ರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು, ತೆರವುಗೊಳಿಸಲು ಅಂತಿಮ ಆದೇಶ ಹೊರಡಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಸರ್ಕಾರದ ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ತೆರವುಗೊಳಿಸಿದ್ದಾರೆಂದು ದೂರಿದರು. ಅಕ್ಟಬರ್ ಅಲಿ(ಅಲ್ಲು) ನ್ಯಾಮದ್ ಬೀ ಪತಿ ಮಾತನಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ಒತ್ತುವರಿ ಅಂಗಡಿಯನ್ನು ತೆರವು ಗೊಳಿಸಲಾಗಿದೆ ಎಂದು ಪಿ.ಡಿ.ಓ.ರವರು ತಿಳಿಸಿದ್ದಾರೆ, ಹಾಗಾದರೆ ಗ್ರಾ.ಪಂ. ಮುಂಭಾಗದಲ್ಲೇ ಸರ್ಕಾರಿ ಜಾಗವನ್ನು ಒತ್ತುವರಿ, ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿರುವ ಒತ್ತುವರಿ ಮತ್ತು ಗ್ರಾಮದ ಅನೇಕ ಕಡೆಗಳಲ್ಲಿ ನಡೆದಿರುವ ಒತ್ತುವರಿಯನ್ನು ತೆರವುಗೊಳಿಸುವವರು ಯಾರು ಎಂದು ಪ್ರಶ್ನೆಸಿದರು. ನಮ್ಮ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಮಹಿಳೆಯರು ಪಡಿಪಾಟಲು ಪಡುತ್ತಿದ್ದಾರೆ, ಇಂತಹ ಸೂಕ್ಷ್ಮ ವಿಚಾರಗಳ ಅಭಿವೃದ್ದಿಯನ್ನು ಮಾಡದೆ ಬಡಪಾಯಿಗಳ ಮೇಲೆ ತಮ್ಮ ಅಧಿಕಾರ ದರ್ಪವನ್ನು ತೋರುತ್ತಿದ್ದಾರೆ ಎನ್ನುತ್ತಿದ್ದಾರೆ ಸಾರ್ವಜನಿಕರು ಮೇಲಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಬಡ ವ್ಯಾಪಾರಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ವ್ಯಾಪಾರ ಮುಂದುವರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. *ಅಂಗಡಿ ಮಾಲೀಕ ಅಕ್ಬಬರ್ ಅಲಿ(ಅಲ್ಲು)* ಸಾರ್ವಜನಿಕರು ದೂರಿನೊಂದಿಗೆ ಪಂಚಾಯಿತಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಅಂಗಡಿಯನ್ನು ತೆರವುಗೊಳಿಸಿ, ಶುದ್ದ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಬೇಕೆಂಬ ಮೇಲಾಧಿಕಾರಿಗಳು ಆದೇಶ ಮೇರಿಗೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಮಾಡಲಾಗಿದೆ. *ಡಿ.ಪಾಳ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮಮ್ಮ*4
- Post by Onlinetv24x71
- ಬಿಳಿ ಜೋಳದ ಚಿಗುರು ಸೆಪ್ಪೆ ತಿಂದು 41 ಕುರಿಗಳು ಸಾವುಕುರಿಗಾಯಿ ಮಂಜುನಾಥಗೆ ಅರ್ಥಿಕ ಸಂಕಷ್ಟ ಚಳ್ಳಕೆರೆ ಬಿಳಿ ಜೋಳದ ಚಿಗುರು ಸೆಪ್ಪೆ ತಿಂದು 41 ಕುರಿಗಳು ಸಾವು... ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೆರೆಹಿಂದಹಟ್ಟಿ ಗ್ರಾಮದಲ್ಲಿ ಕುರಿಗಾಹಿ ಮಂಜುನಾಥಗೆ ದೊಡ್ಡ ಆಘಾತ ಎದುರಾಗಿದೆ. ಬುಡ್ನಹಟ್ಟಿ ಗ್ರಾಮದ ಸಮೀಪದ ಕೆರೆಯಿಂದಲಹಟ್ಟಿಯ ಗ್ರಾಮದ ಕುರಿಗಾಯಿ ಮಂಜುನಾಥ್ 110 ಕುರಿ 36 ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕುರಿಗಳು ಮೇವಿಗೆಂದ ಹೋದಾಗ ಬಿಳಿ ಜೋಳದ ಚಿಗುರು ತಿಂದ ಪರಿಣಾಮ 41 ಕುರಿಗಳು ಸಾವನ್ನಪ್ಪಿವೆ. ಒಟ್ಟು 155 ಕುರಿಗಳನ್ನು ಹೊಂದಿದ್ದ ಮಂಜುನಾಥ್ ಅವರಿಗೆ ಈ ಘಟನೆಯಿಂದ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಪಶುಸಂಗೋಪನಾ ಇಲಾಖೆಯ ಗಮನಕ್ಕೆ ಬಂದಿದ್ದು, ತಕ್ಷಣವೇ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸ್ವಸ್ಥಗೊಂಡಿದ್ದ 30 ಕುರಿಗಳಿಗೆ ಚಿಕಿತ್ಸೆ ನೀಡಿ ಅವುಗಳ ಜೀವ ಉಳಿಸಲಾಗಿದೆ. ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶ್ರೀನಿವಾಸ್ ಬಾಬು ತಿಳಿಸಿದ್ದಾರೆ. ಇನ್ನು ಈ ಘಟನೆ ಕುರಿಗಾಹಿಗಳಿಗೆ ಮತ್ತು ರೈತರಿಗೆ ಎಚ್ಚರಿಕೆಯ ಪಾಠವಾಗಿದೆ. ಬಿಳಿ ಜೋಳದ ಚಿಗುರು ಮೇಯಿಸುವುದರಿಂದ ಜಾನುವಾರುಗಳಿಗೆ ಎದುರಾಗಬಹುದಾದ ಅಪಾಯ, ಇಂತಹ ಸಂದರ್ಭದಲ್ಲಿ ರೈತರು ಹಾಗೂ ಕುರಿಗಾಹಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶ್ರೀನಿವಾಸ್ ಬಾಬು ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.1
- ಹೊಳಲ್ಕೆರೆ ಸ್ನೇಹ ಪಬ್ಲಿಕ್ ಸ್ಕೂಲ್ನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜನೆ ಎಲ್ಲರೂ ಸಂವಿಧಾನದ ಆಶಯಗಳನ್ನು ಈಡೇರಿಸಬೇಕು ಎಂದು ಹೊಳಲ್ಕೆರೆಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅರ್ಶದ್ ಎ ಅನ್ಸಾರಿ ಸಲಹೆ ನೀಡಿದರು. ಹೊಳಲ್ಕೆರೆ ಪಟ್ಟಣದ ಸ್ನೇಹ ಪಬ್ಲಿಕ್ ಸ್ಕೂಲ್ನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ನೇಹ ಪಬ್ಲಿಕ್ ಸ್ಕೂಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನ ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಎಲ್ಲರೂ ಬದ್ದರಾಗಬೇಕು. ಸಂವಿಧಾನ ನಮಗೆ ನೀಡಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಹೊಳಲ್ಕೆರೆಯ ಅಪರ ಸಿವಿಲ್ ನ್ಯಾಯಾಧೀಶರಾದ ಹನುಮಂತರಾಯಪ್ಪ ಬಿ.ಆರ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.1
- ತುಮಕೂರು ಸಾಹೇ ಶ್ರೀ ಸಿದ್ಧಾರ್ಥ ಅಕಾಡೆಮಿ 15ನೇ ವರುಷದ ಘಟಿಕೋತ್ಸವ ಸಮಾರಂಭ 28-11-20261
- ಕಣಿವೆನಹಳ್ಳಿ ಗೇಟ್ ಬಳಿ ಭೀಕರ ಅಪಘಾತ: ಮೂವರ ದುರ್ಮರಣ ಬೆನ್ನಲ್ಲೇ ಪಿಡಬ್ಲ್ಯೂಡಿ ಇಲಾಖೆ, ಶಾಸಕರ ವಿರುದ್ಧ ಜೆಡಿಎಸ್ ಮುಖಂಡ ಕಾವಲಗೆರೆ ರಾಮಾಂಜಿ ಆಕ್ರೋಶ!1
- ಮನೆಗೆ ಮರಳುವ ಹಾದಿಯಲ್ಲೇ ಮಸಣದ ಹಾದಿ ಹಿಡಿದ ಮೂವರು! PAVAGADA ಕೆಲಸ ಮುಗಿಸಿ ಬಂದ ದಾರಿಯಲ್ಲೇ ಬಾರದ ಲೋಕಕ್ಕೆ ಪಯಣ! ಕೆಲಸ ಮುಗಿಸಿ ಬಂದ ದಾರಿಯಲ್ಲೇ ಬಾರದ ಲೋಕಕ್ಕೆ ಪಯಣ! PAVAGADA ಸಾವಿನ ರೂಪದಲ್ಲಿ ಬಂದ ಕಾರು; ಮೂವರ ಬದುಕು ಬಲಿ! ದುಡಿದು ಮನೆಗೆ ಹೊರಟವರ ಬದುಕಿಗೆ ಅಪಘಾತವೇ ಮುಕ್ತಾಯ! #ಕಾರು #ಬೈಕ್ #ದ್ವಿಚಕ್ರವಾಹನ #ಮಧುಗಿರಿ #ಅಪಘಾತ1