Shuru
Apke Nagar Ki App…
Onlinetv24x7
More news from ಕರ್ನಾಟಕ and nearby areas
- Post by Onlinetv24x71
- ನೆಲಮಂಗಲ ದಲ್ಲಿ ಕನಕದಾಸರ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ನೆಲಮಂಗಲ ದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿರುವ ಕನಕ ದಸರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಲತಂಡಗಳ ಮೆರವಣಿಗೆ ಮುಕಾಂತರ ನೆಲಮಂಗಲ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.4
- *ಏಕಾಏಕಿ ಅಂಗಡಿಯನ್ನು ತೆರವುಗೊಳಿಸಿದ ಡಿ.ಪಾಳ್ಯ ಗ್ರಾ.ಪಂ. ಅಧಬಿವೃದ್ದಿ ಅಧಿಕಾರಿ* *ಬಡ ವ್ಯಾಪಾರಿಯ ಹೊಟ್ಟೆ ಮೇಲೆ ಹೊಡೆದ ಡಿ.ಪಾಳ್ಯ ಗ್ರಾಮ ಪಂಚಾಯಿತಿ ಅಧಿಕಾರಿಗಳ* ಗೌರಿಬಿದನೂರು: ಕಾನೂನುಬದ್ಧ ಭೂ ಸ್ವಾದೀನ ಪ್ರಕ್ರಿಯೆ ನಡೆಸದೆ, ಅಂಗಡಿ ಮಾಲಿಕರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಸಾರ್ವಜನಿಕ ಅನುಕೂಲದ ಹೆಸರನ್ನು ಬಳಸಿಕೊಂಡು. ಉದ್ದೇಶ ಪೂರ್ವಕವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಖುದ್ದಾಗಿ ಪಂಚಾಯಿತಿ ಅಧಿಕಾರಿಗಳೇ ಅಂಗಡಿಯಲ್ಲಿನ ದಿನಸಿ ವಸ್ತುಗಳನ್ನು ಅಂಗಡಿಯಿಂದ ಹೊರಗೆಸೆದಿರುವ ಘಟನೆ ನಡೆದಿದೆ. ತಾಲ್ಲೂಕಿನ ಡಿ.ಪಾಳ್ಯ ಗ್ರಾಮದ 3ನೇ ವಾರ್ಡಿನಲ್ಲಿ ಜಗಲಿ ಕಟ್ಟೆ ಪಕ್ಕದಲ್ಲಿ ಕಳೆದ 25 ವರ್ಷಗಳಿಂದ ದಿನಸಿ ವಸ್ತುಗಳ ಮಾರಾಟದ ಅಂಗಡಿ ನಡೆಸಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ, ಅಶುದ್ ಬಾಷಾ ಎಂಬುವರ ಅಂಗಡಿಯನ್ನು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಯಾವುದೇ ಪೂರ್ವ ಸೂಚನೆ ನೋಟಿಸ್ ನೀಡದೆ ಖುದ್ದಾಗಿ ಪಂಚಾಯಿತಿ ಅಧಿಕಾರಿಗಳೇ ಅಂಗಡಿಯಲ್ಲಿನ ದಿನಸಿ ವಸ್ತುಗಳನ್ನು ಅಂಗಡಿಯಿಂದ ಹೊರಹಾಕುವುದರೊಂದಿಗೆ ಏಕಾಏಕಿ ಸ್ಥಳಕ್ಕೆ ಆಗಮಿಸಿ ಜೆಸಿಬಿ ಮೂಲಕ ಅಂಗಡಿಯನ್ನು ತೆರವುಗೊಳಿಸಿರುವ ಘಟನೆ ನಡೆದಿದೆ. ಅಂಗಡಿ ಮಾಲಿಕರಾದ ನ್ಯಾಮದ್ ಬೀ ಮಾತನಾಡಿ ಪಂಚಾಯಿತಿ ಅಧಿಕಾರಿಗಳು ಯಾವುದೇ ಪೂರ್ವ ನೋಟಿಸ್ ನೀಡದೆ ಏಕಾಏಕಿ ಅಂಗಡಿಯನ್ನು ತೆರವುಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಒತ್ತುವರಿ ಅಥವಾ ಅನಧಿಕೃತ ನಿರ್ಮಾಣದ ಕಾರಣವಿದ್ದರೂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಮೊದಲು ಲಿಖಿತ ನೋಟಿಸ್ ನೀಡಿ, ಅಂಗಡಿ ಮಾಲೀಕರಿಗೆ ತಮ್ಮ ದಾಖಲೆಗಳನ್ನು ಸಲ್ಲಿಸಲು ಮತ್ತು ವಿವರಣೆ ನೀಡಲು ಕಾಲಾವಕಾಶ ನೀಡಬೇಕಿತ್ತು ಆದರೆ ಪಿ.ಡಿಓ.ರವರು ತನ್ನ ಮಾತುಗಳನ್ನು ಕೇಳುವಷ್ಟು ಸಹನೆ ಇಲ್ಲದೆ ಪ್ರವರ್ತಿಸಿದ್ದಾರೆ, ಪಂಚಾಯಿತಿ ಅಧಿಕಾರಿಗಳು ತಮ್ಮ ಮನಸಾ ಇಚ್ಚೆ ವರ್ತಿಸಿದ್ದಾರೆಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಅಂಗಡಿಯು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅಥವಾ ಪರವಾನಗಿ ಇಲ್ಲದೆ ನಿರ್ಮಿಸಿದ್ದರೆ, ಪಂಚಾಯಿತಿಯು ಮೊದಲು ಕಾರಣ ಕೇಳಿ ನೋಟಿಸ್ ನೀಡಬೇಕು. ನಂತರ ನಿಗದಿತ ದಿನಗಳ ಒಳಗೆ ಅಂಗಡಿ ಮಾಲೀಕರು ತಮ್ಮ ಬಳಿ ಇರುವ ದಾಖಲೆಗಳನ್ನು ಹಾಜರುಪಡಿಸಲು ಅವಕಾಶ ನೀಡಬೇಕು. ದಾಖಲೆಗಳು ಸರಿಯಿಲ್ಲದಿದ್ದರೆ ಅಥವಾ ಒತ್ತುವರಿ ಸಾಬೀತಾದರೆ ಮಾತ್ರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು, ತೆರವುಗೊಳಿಸಲು ಅಂತಿಮ ಆದೇಶ ಹೊರಡಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಸರ್ಕಾರದ ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ತೆರವುಗೊಳಿಸಿದ್ದಾರೆಂದು ದೂರಿದರು. ಅಕ್ಟಬರ್ ಅಲಿ(ಅಲ್ಲು) ನ್ಯಾಮದ್ ಬೀ ಪತಿ ಮಾತನಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ಒತ್ತುವರಿ ಅಂಗಡಿಯನ್ನು ತೆರವು ಗೊಳಿಸಲಾಗಿದೆ ಎಂದು ಪಿ.ಡಿ.ಓ.ರವರು ತಿಳಿಸಿದ್ದಾರೆ, ಹಾಗಾದರೆ ಗ್ರಾ.ಪಂ. ಮುಂಭಾಗದಲ್ಲೇ ಸರ್ಕಾರಿ ಜಾಗವನ್ನು ಒತ್ತುವರಿ, ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿರುವ ಒತ್ತುವರಿ ಮತ್ತು ಗ್ರಾಮದ ಅನೇಕ ಕಡೆಗಳಲ್ಲಿ ನಡೆದಿರುವ ಒತ್ತುವರಿಯನ್ನು ತೆರವುಗೊಳಿಸುವವರು ಯಾರು ಎಂದು ಪ್ರಶ್ನೆಸಿದರು. ನಮ್ಮ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಮಹಿಳೆಯರು ಪಡಿಪಾಟಲು ಪಡುತ್ತಿದ್ದಾರೆ, ಇಂತಹ ಸೂಕ್ಷ್ಮ ವಿಚಾರಗಳ ಅಭಿವೃದ್ದಿಯನ್ನು ಮಾಡದೆ ಬಡಪಾಯಿಗಳ ಮೇಲೆ ತಮ್ಮ ಅಧಿಕಾರ ದರ್ಪವನ್ನು ತೋರುತ್ತಿದ್ದಾರೆ ಎನ್ನುತ್ತಿದ್ದಾರೆ ಸಾರ್ವಜನಿಕರು ಮೇಲಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಬಡ ವ್ಯಾಪಾರಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ವ್ಯಾಪಾರ ಮುಂದುವರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. *ಅಂಗಡಿ ಮಾಲೀಕ ಅಕ್ಬಬರ್ ಅಲಿ(ಅಲ್ಲು)* ಸಾರ್ವಜನಿಕರು ದೂರಿನೊಂದಿಗೆ ಪಂಚಾಯಿತಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಅಂಗಡಿಯನ್ನು ತೆರವುಗೊಳಿಸಿ, ಶುದ್ದ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಬೇಕೆಂಬ ಮೇಲಾಧಿಕಾರಿಗಳು ಆದೇಶ ಮೇರಿಗೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಮಾಡಲಾಗಿದೆ. *ಡಿ.ಪಾಳ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮಮ್ಮ*4
- ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು1
- ವರ್ತೂರು ರಸ್ತೆಯಲ್ಲಿ ಮತ್ತೊಂದು ಅವಘಡ! ರಸ್ತೆ ಅಭಿವೃದ್ಧಿ ಕಾಮಗಾರಿ ನಡುವೆ ಪಲ್ಟಿ ಹೊಡೆದ ಕಾರು ವರ್ತೂರು ಕೋಡಿಯಿಂದ ವರ್ತೂರು ಕಡೆ ಸಾಗುವ ರಸ್ತೆಯಲ್ಲಿ ಘಟನೆ ವರ್ತೂರು ಕೆರೆ ಮಾರ್ಗವಾಗಿ ಸಾಗುವ ರಸ್ತೆಯಲ್ಲಿ ಅವಘಡ ರಸ್ತೆ ದುರಸ್ತಿ ಹೆಸರಲ್ಲಿ ಅಲ್ಲಲ್ಲಿ ಜಲ್ಲಿ ಕಲ್ಲು ಸುರಿದು ಸಮತಟ್ಟು! ರಾತ್ರಿ ವೇಳೆ ಜಲ್ಲಿ ಕಲ್ಲಿನ ಮೇಲೆ ಸಂಚರಿಸಿದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಅಭಿವೃದ್ಧಿ ಕಾಮಗಾರಿಯೇ ವಾಹನ ಸವಾರರಿಗೆ ಸಂಕಷ್ಟ ತಂದಿದೆಯೇ? ವರ್ತೂರು ರಸ್ತೆ ಅಭಿವೃದ್ಧಿಗೆ ಇನ್ನೂ ಎಷ್ಟು ವರ್ಷ ಬೇಕು? ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ವಾಹನ ಸವಾರರ ಆಕ್ರೋಶ! ರಸ್ತೆ ಅವ್ಯವಸ್ಥೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!1
- ತುಮಕೂರು ಸಾಹೇ ಶ್ರೀ ಸಿದ್ಧಾರ್ಥ ಅಕಾಡೆಮಿ 15ನೇ ವರುಷದ ಘಟಿಕೋತ್ಸವ ಸಮಾರಂಭ 28-11-20261
- ಮನೆಗೆ ಮರಳುವ ಹಾದಿಯಲ್ಲೇ ಮಸಣದ ಹಾದಿ ಹಿಡಿದ ಮೂವರು! PAVAGADA ಕೆಲಸ ಮುಗಿಸಿ ಬಂದ ದಾರಿಯಲ್ಲೇ ಬಾರದ ಲೋಕಕ್ಕೆ ಪಯಣ! ಕೆಲಸ ಮುಗಿಸಿ ಬಂದ ದಾರಿಯಲ್ಲೇ ಬಾರದ ಲೋಕಕ್ಕೆ ಪಯಣ! PAVAGADA ಸಾವಿನ ರೂಪದಲ್ಲಿ ಬಂದ ಕಾರು; ಮೂವರ ಬದುಕು ಬಲಿ! ದುಡಿದು ಮನೆಗೆ ಹೊರಟವರ ಬದುಕಿಗೆ ಅಪಘಾತವೇ ಮುಕ್ತಾಯ! #ಕಾರು #ಬೈಕ್ #ದ್ವಿಚಕ್ರವಾಹನ #ಮಧುಗಿರಿ #ಅಪಘಾತ1
- ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಜಮೀನು ಬಗ್ಗೆ ನಡೆದ ಗಲಾಟೆ ವೇಳೆ ಕೃತ್ಯ. ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಮಂಜೂರು ಬಗ್ಗೆ ಗಲಾಟೆ ನಡೆದು ಕೃತ್ಯ. ಸೋಲೂರು ಬಳಿ ಆಶ್ರಯ ಮನೆ ನಿರ್ಮಾಣಕ್ಕೆ ಜಮೀನು ಮಂಜೂರು. ಜಮೀನು ಮಾರ್ಕ್ ಮಾಡಿ ಲೆವೆಲ್ ಮಾಡುವ ವೇಳೆ ಘಟನೆ. ಸ್ಥಳೀಯ ಅಧಿಕಾರಿಗಳ ಜೊತೆ ಜಮೀನು ಮಾರ್ಕ್ ಮಾಡಿಸುತ್ತಿದ್ದ ಲಿಖಿತ್ ಗೌಡ. ಆಶ್ರಯ ಯೋಜನೆ ಮನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ರಮೇಶ್ ಎಂಬಾತ. ಇಂದು ಬೆಳಗ್ಗೆ ಜಮೀನು ಮಾರ್ಕ್ ಮಾಡುವ ವೇಳೆ ರಮೇಶ್, ಲಿಖಿತ್ ಗೌಡ ನಡುವೆ ಗಲಾಟೆ. ಈ ವೇಳೆ ಮನೆಗೆ ಹೋಗಿ ಗನ್ ನಿಂದ ಫೈರಿಂಗ್. ರಮೇಶ್ ಮನೆ ಬಳಿ ಸೇರಿದ್ದ ಜನ. ಈ ವೇಳೆ ಮನೆಯೊಳಗಿನಿಂದ ಗುಂಡು ಹಾರಿಸಿದ ರಮೇಶ್. ಲಿಖಿತ್ ಗೌಡನಿಗೆ ಗುಂಡು ತಾಗಿ ಸಾವು. ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ದೌಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೋಲೂರು4