Shuru
Apke Nagar Ki App…
ರಾಯಚೂರು ನಗರದಲ್ಲಿ ಎಲ್‌ಪಿಜಿ ಗ್ಯಾಸ್ ದರ ಏರಿಕೆ, ಆಟೋ ಚಾಲಕರ ಆತಂಕ ರಾಯಚೂರಿನ ಎಲ್‌ಪಿಜಿ ಬಂಕ್‌ಗೆ ಟ್ಯಾಂಕರ್ ಲೋಡ್ ಬಂದಿದ್ದರಿಂದ ಆಟೋ ಚಾಲಕರಲ್ಲಿ ಸಂತಸ ಮೂಡಿದರೂ, ಬೆಲೆ ಏರಿಕೆ ಬಿಸಿ ತಟ್ಟಿದೆ. ಲೀಟರ್‌ಗೆ 60 ರೂ ಇದ್ದ ಗ್ಯಾಸ್ ಈಗ 90.59 ರೂಗೆ ಮಾರಾಟವಾಗುತ್ತಿದೆ. ಟ್ಯಾಂಕರ್‌ನಲ್ಲಿ 6.5 ಟನ್ ಗ್ಯಾಸ್ ಬಂದಿರುವುದರಿಂದ ಒಬ್ಬರಿಗೆ 500 ರೂ ಮಿತಿ ನಿಗದಿ ಮಾಡಲಾಗಿದೆ. ಇದರಿಂದ ಅಂದಾಜು 2 ಸಾವಿರ ಆಟೋರಿಕ್ಷಾಗಳಿಗೆ ಮಾತ್ರ ಗ್ಯಾಸ್ ಸಿಗಲಿದೆ. ಗ್ಯಾಸ್ ಸಿಗದಿದ್ದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ಎಂದು ಆಟೋ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
K2 kannada News
ರಾಯಚೂರು ನಗರದಲ್ಲಿ ಎಲ್‌ಪಿಜಿ ಗ್ಯಾಸ್ ದರ ಏರಿಕೆ, ಆಟೋ ಚಾಲಕರ ಆತಂಕ ರಾಯಚೂರಿನ ಎಲ್‌ಪಿಜಿ ಬಂಕ್‌ಗೆ ಟ್ಯಾಂಕರ್ ಲೋಡ್ ಬಂದಿದ್ದರಿಂದ ಆಟೋ ಚಾಲಕರಲ್ಲಿ ಸಂತಸ ಮೂಡಿದರೂ, ಬೆಲೆ ಏರಿಕೆ ಬಿಸಿ ತಟ್ಟಿದೆ. ಲೀಟರ್‌ಗೆ 60 ರೂ ಇದ್ದ ಗ್ಯಾಸ್ ಈಗ 90.59 ರೂಗೆ ಮಾರಾಟವಾಗುತ್ತಿದೆ. ಟ್ಯಾಂಕರ್‌ನಲ್ಲಿ 6.5 ಟನ್ ಗ್ಯಾಸ್ ಬಂದಿರುವುದರಿಂದ ಒಬ್ಬರಿಗೆ 500 ರೂ ಮಿತಿ ನಿಗದಿ ಮಾಡಲಾಗಿದೆ. ಇದರಿಂದ ಅಂದಾಜು 2 ಸಾವಿರ ಆಟೋರಿಕ್ಷಾಗಳಿಗೆ ಮಾತ್ರ ಗ್ಯಾಸ್ ಸಿಗಲಿದೆ. ಗ್ಯಾಸ್ ಸಿಗದಿದ್ದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ಎಂದು ಆಟೋ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
More news from ಕರ್ನಾಟಕ and nearby areas
- ಶಹಾಪೂರ ತಾಲ್ಲೂಕಿನ ವಿಜಯ ಗ್ಯಾಸ್ ಏಜೆನ್ಸಿ (ಐಒಸಿ), ಸುರಪೂರ ತಾಲ್ಲೂಕಿನ ಫನ್ ಪ್ಲೇಮ್ ಗ್ಯಾಸ್ ಏಜೆನ್ಸಿಗಳಿಗೆ ಮನೆ ಬಾಗಿಲಿಗೆ ಸಿಲಿಂಡರ್ ಸರಬರಾಜು ಮಾಡಲು ಕಟ್ಟು ನಿಟ್ಟಾಗಿ ಸೂಚನೆ ಯಾದಗಿರಿ : ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನ ವಿಜಯ ಗ್ಯಾಸ್ ಏಜೆನ್ಸಿ (ಐಒಸಿ) ಹಾಗೂ ಸುರಪೂರ ತಾಲ್ಲೂಕಿನ ಫನ್ ಪ್ಲೇಮ್ ಗ್ಯಾಸ್ ಏಜೆನ್ಸಿಗಳಿಗೆ ಯಾದಗಿರಿ ಜಿಲ್ಲಾಧಿಕಾರಿ ಅವರು ಮನೆ ಬಾಗಿಲಿಗೆ ಸಿಲಿಂಡರ್‌ಗಳನ್ನು ಸರಬರಾಜು ಮಾಡಲು ಕಟ್ಟು ನಿಟ್ಟಾಗಿ ಸೂಚಿಸಿದೆ ಎಂದು ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ಸೋಮಶೇಖರ ಬಿರಾದಾರ ಅವರು ತಿಳಿಸಿದ್ದಾರೆ. ಈ ಏಜೆನ್ಸಿಗಳು ಮನೆ ಬಾಗಿಲಿಗೆ ಸಿಲಿಂಡರ್ ಸರಬರಾಜು ಮಾಡದೇ ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಉಲ್ಲಂಘನೆ ಮಾಡಿರುವ ಪ್ರಯುಕ್ತ ಈ ಎರಡು ಗ್ಯಾಸ್ ಏಜೆನ್ಸಿಗಳಿಗೆ ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಅನಿಲ ನಿಯಮಗಳ ಉಲ್ಲಂಘನೆ, ದ್ರವೀಕೃತ ಪೆಟ್ರೋಲಿಯಂ ಅನಿಲ (ಪೂರೈಕೆ ಮತ್ತು ವಿತರಣೆ ನಿಯಂತ್ರಣ) ಆದೇಶ 2000 ಮತ್ತು ಅನಿಲ ಸಿಲಿಂಡರ್ ನಿಯಮಗಳು 2004 ಮತ್ತು 2026 ರನ್ವಯ ಪರವಾನಿಗೆಯನ್ನು ಏಕೆ ರದ್ದುಗೊಳಿಸಬಾರದು ಎಂಬುವುದಕ್ಕೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿರುತ್ತದೆ. ಪ್ರಯುಕ್ತ ಯಾದಗಿರಿ ಜಿಲ್ಲೆಯ ಎಲ್ಲಾ ಗ್ಯಾಸ್ ಏಜೆನ್ಸಿಗಳ ಮಾಲೀಕರು ತಮ್ಮ ಗ್ರಾಹಕರಿಗೆ ಈIಈಔ ಅನುಸಾರ ಗ್ಯಾಸ್ ಮೊದಲು ಬುಕ್ ಮಾಡಿದ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ಕಡ್ಡಾಯವಾಗಿ ಸರಬರಾಜು ಮಾಡಲು ಸೂಚಿಸಿದೆ ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.1
- ಕೋಳಿ ತ್ಯಾಜ್ಯ ರಾಜ್ಯ ಹೆದ್ದಾರಿ ಬದಿಗೆ ಎಸೆದರ ಮೇಲೆ ಕಾನೂನಿನ ಕ್ರಮ ಜರುಗಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹ ! ಯಾದಗಿರಿ : ನಗರದ ರೈಲ್ವೆ ಸೇತುವೆ ಮೇಲೆ ಹಾದು ಹೋಗುವ ರಾಜ್ಯ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಇತ್ತೀಚೆಗೆ ಕೋಳಿಯ ತ್ಯಾಜ್ಯವನ್ನು ನಿಬರ್‌ಂಧವಿಲ್ಲದೆ ಎಸೆಯುತ್ತಿರುವ ಘಟನೆಗಳು ದಿನೆ ದಿನೆ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ. ಮಾತನಾಡಿದ ಅವರು ಸಿಂದಗಿ - ಹೈದ್ರಾಬಾದ ರಾಜ್ಯ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಕೋಳಿ ತ್ಯಾಜ್ಯ ವಿವಿಧ ಕಸದ ರಾಶಿ, ಕೊಳೆತ ತರಕಾರಿ ಹಣ್ಣು ಸೇರಿದಂತೆ ಅನೇಕ ಪದಾರ್ಥಗಳು ರಸ್ತೆ ಬದಿಯಲ್ಲಿ ಬಿದ್ದಿರುವುದರಿಂದ ಜಿಲ್ಲಾ ಕೇಂದ್ರಕ್ಕೆ ಬರುವಂತ ವಾಹನ ಸವಾರರಿಗೆ ದುರ್ವಾಸನೆ ಸ್ವಾಗತ ಕೋರುತ್ತಿದೆ ಈ ದುರ್ವಾಸನೆ ವ್ಯಾಪಕವಾಗಿ ಹರಡುತ್ತಿದೆ. ಇದರ ಪರಿಣಾಮವಾಗಿ ಸೊಳ್ಳೆಗಳ ಸಂಖ್ಯೆ ಏರಿ-ಕೆಯಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಏರುಪೇರು ಉಂಟಾಗುವ ನಿರ್ಮಾಣವಾಗಿದೆ. ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ. ಸಾರ್ವಜನಿಕ ಮತ್ತು ವಾಹನ ಸವಾರರಿಗೆ ರೋಗ ಹರಡುವ ತ್ಯಾಜ್ಯವನ್ನು ರಾಜ್ಯ ಹೆದ್ದಾರಿ ಗೆ ಅಕ್ಕ ಪಕ್ಕದ ಎಸೆಯುವವರ ವಿರುದ್ಧ ತಕ್ಷಣ ಕಾನೂನಿನ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸಾರ್ವಜನಿಕ ಆರೋಗ್ಯ ಕಾಯ್ದೆ ಹಾಗೂ ಪರಿಸರ ಸಂರಕ್ಷಣೆ ಕಾಯ್ದೆಗಳ ಅನ್ವಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಸಿದ್ದಾರೆ.3
- ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಮತಗಿ ಪಟ್ಟಣದ ವಿವಿಧ ಬೂತ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಭರ್ಜರಿ ಪ್ರಚಾರ ನಡೆಯಿತು. ಕೆಪಿಸಿಸಿ ಸದಸ್ಯರು ಹಾಗೂ ವಿಜಯನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಕುರಿ ಶಿವಮೂರ್ತಿ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಜಿಲ್ಲಾಧ್ಯಕ್ಷರಾದ ಚಿದನಂದಪ್ಪ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಿದರು .ಈ ಸಂದರ್ಭದಲ್ಲಿ ಹುನಗುಂದ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರಾದ ಮುತ್ತಣ್ಣ ಕಲಗೋಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು1
- ಇಂದು ಇಳಕಲ್ ನಗರದ ಎಸ್ ಆರ್ ಕೆ ಗ್ರಹ ಕಚೇರಿ ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷರು ಶಾಸಕರು ಹುನಗುಂದ ಮತಕ್ಷೇತ್ರ ಡಾ. ವಿಜಯಾನಂದ.ಎಸ್. ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ಶ್ರೀ ಬಾಬು ಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು ಉಪಸ್ಥಿತರಿದ್ದು ಜಿಲ್ಲಾ ಅಂಬೇಡ್ಕರ್ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಅಮದಿಹಾಳ್ ಮೆಹಬೂಬ್ ಗದ್ವಾಲ್ ಶಬ್ಬೀರ್ ಭಾಗವಾನ್ ಮಾದಿಗ ಸಮಾಜದ ಹಿರಿಯರಾದ ರತ್ನಾಕರ ಇದ್ದಲಗಿ ಬಿ ಡಿ ಗೋನಾಳ್ ಕಿರಣ ಹೊಸ್ಮನಿ ಸಿದ್ದಪ್ಪ ಮಾದರ್ ಬಿ ಎಚ್ ಮಾದರ್ ಆನಂದ್ ತುಂಬದ ಎಚ್ ಎಂ ಹಗೆದಾಳ ಸತೀಶ್ ಪೂಜಾರಿ ಸಂತೋಷ ರಾಮವಾಡಗಿ ಯಮನೂರ್ ಮಾದರ್ ದೇವರಾಜ್ ಹೊಸಮನಿ ರವಿ ಹುಲಿಗಿ ಪರಶು ಮಾದರ ದೇವಪ್ಪ ಆದಾಪುರ್ ಚೋಳಪ್ಪ ತೊಂಡಿಹಾಳ ಮತ್ತುಕೆಪಿಸಿಸಿ ಜಿಲ್ಲಾ OBC ಘಟಕ್ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಆಚರಣೆ ಸಮಿತಿ ಅಧ್ಯಕ್ಷ ಮಂಜುನಾಥ ಸಪ್ಪರದ ಉಪಾಧ್ಯಕ್ಷ ಅಹಮದ್ ಭಾಗವಾನ್ ಕಂಡಕ್ಟರ್ ಆಚರಣೆ ಸಮಿತಿಯ ಸದಸ್ಯರುಗಳಾದ ಎಲ್ಲಪ್ಪ ರಾಜಪುರ್ ಕೃಷ್ಣ ಕಾಂಬಳೆ ಆಚರಣೆ ಸಮಿತಿಯ ಮಹಿಳೆಯರಗಳಾದ ಕಲ್ಪನಾ ಗಜೇಂದ್ರಗಡ ಗೀತಾ ಹಿಟ್ನಾಳ ರಮೀಜಾ ಪಿಂಜಾರ್ ಮಾದಿಗ ಸಮಾಜದ ಹಿರಿಯರು ಸಮಾಜದ ಯುವಕ ಮಿತ್ರರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು2
- ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ 15ರವರೆಗೆ ಸ್ವಯಂ ಗಣತಿಯಲ್ಲಿ ವಿವರ ದಾಖಲಿಸಬಹುದು. ಪೋರ್ಟಲ್ ಮೂಲಕ ವಿವರ ದಾಖಲಿಸಿದ ನಂತರ ಬರುವ ‘ಎಇ ಐಡಿ’ಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಗಣತಿದಾರರು ಮನೆಗೆ ಬಂದಾಗ, ಅದನ್ನು ತಿಳಿಸಬೇಕು ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದರು.1
- Post by Sharanugouda Patil1
- ಯಾದಗಿರಿ ಬ್ರೇಕಿಂಗ್:ಕಾಲುವೆಗೆ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆ..! ಜೀವಂತವಾಗಿ ನೀರಿನಲ್ಲಿ ಮುಳುತ್ತಿದ್ದ ಮಹಿಳೆ ರಕ್ಷಣೆ..! ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮಹಿಳೆ ರಕ್ಷಣೆ..! ಯಾದಗಿರಿ ಜಿಲ್ಲೆಯ ಸುರಪುರ ತಾ.ಕೆಂಭಾವಿ ಕಾಲುವೆಯಲ್ಲಿ ನಡೆದ ಘಟನೆ.. ಕಾಲುವೆಗೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ ಯುವಕರು.. ಕಾಲುವೆಯಲ್ಲಿ ಈಜುಕೊಂಡು ಹೋಗಿ ರಕ್ಷಣೆ ಮಾಡಿದ ಸ್ಥಳೀಯರು.. ಮಹಿಳೆ ಯಾರು,ಯಾತಕ್ಕೆ ನೀರಿಗೆ ಬಿದ್ರು ಅಂತ ಗೊತ್ತಾಗಿಲ್ಲ.. ಕೆಂಭಾವಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.. @followers1
- ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ವಿಜಯಾನಂದ ಎಸ್ ಕಾಶಪ್ಪನವರ* ಅವರು ಹಾಗೂ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ *ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ* ಅವರು *ಬೆನಕಟ್ಟಿ*,*ಹಳ್ಳೂರ*, *ಭಗವತಿ*, ಗ್ರಾಮದಲ್ಲಿ ಹಾಗೂ *ಬಾಗಲಕೋಟೆ* ಪಟ್ಟಣದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ *ಶ್ರೀ ಉಮೇಶ್ ಮೇಟಿ* ರವರ *ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು*. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.1
- ಇಲಕಲ್ಲ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಮ್ ಇವರ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಿದರು.1