logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಜಿ ಸಚಿವ ಬಿ‌ ಶ್ರೀರಾಮುಲು ಹೇಳಿಕೆ, ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಗಟ್ಟಿ ಮಾಡಿಕೊಳ್ಳೊಕೆ ಅಹಿಂದ ನಾಯಕ ಅಂತ ಹೇಳುತ್ತಾರೆ,ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾರೆ. ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ, ಸಿದ್ದರಾಮಯ್ಯ ಅವರ ಖುರ್ಚಿಗೆ ಯಾವಾಗ ಕಂಟಕ ಬರುತ್ತೊ ಆಗ ಅಹಿಂದ ಸಮಾವೇಶ ನೆನಪಾಗುತ್ತೆ, ಸಿಎಂ ಸಿದ್ದರಾಮಯ್ಯ ಏಕ ದಿನ್‌ಕಾ, ದೋ ದಿನ್‌ಕಾ ಸಿಎಂ ಆಗಿದ್ದಾರೆ. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾ ಕುಳಿತುಕೊಳ್ಳುತ್ತಾರೆ, ರಾಜ್ಯದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

11 hrs ago
user_Ajay  Reporter
Ajay Reporter
Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
11 hrs ago

ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಜಿ ಸಚಿವ ಬಿ‌ ಶ್ರೀರಾಮುಲು ಹೇಳಿಕೆ, ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಗಟ್ಟಿ ಮಾಡಿಕೊಳ್ಳೊಕೆ ಅಹಿಂದ ನಾಯಕ ಅಂತ ಹೇಳುತ್ತಾರೆ,ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾರೆ. ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ, ಸಿದ್ದರಾಮಯ್ಯ ಅವರ ಖುರ್ಚಿಗೆ ಯಾವಾಗ ಕಂಟಕ ಬರುತ್ತೊ ಆಗ ಅಹಿಂದ ಸಮಾವೇಶ ನೆನಪಾಗುತ್ತೆ, ಸಿಎಂ ಸಿದ್ದರಾಮಯ್ಯ ಏಕ ದಿನ್‌ಕಾ, ದೋ ದಿನ್‌ಕಾ ಸಿಎಂ ಆಗಿದ್ದಾರೆ. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾ ಕುಳಿತುಕೊಳ್ಳುತ್ತಾರೆ, ರಾಜ್ಯದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

More news from ಕರ್ನಾಟಕ and nearby areas
  • Post by Karibasava Balal
    1
    Post by Karibasava Balal
    user_Karibasava Balal
    Karibasava Balal
    City Star ದಾವಣಗೆರೆ, ದಾವಣಗೆರೆ, ಕರ್ನಾಟಕ•
    9 min ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    20 hrs ago
  • #ಚಿತ್ರದುರ್ಗ #Chitradurga #MidnightRain #RainNews #BreakingNews #WeatherUpdate #KarnatakaWeather #RainInChitradurga #HeavyRain #SummerHeat #RainRelief #WeatherNews #ಬಿಸಿಲು #ಮಳೆ #ಕರ್ನಾಟಕ #RainStorm #Lightning #StormRain #HeatWave #LocalNews #ಚಿತ್ರದುರ್ಗ #Chitradurga #MidnightRain #BreakingNews #RainUpdate #KarnatakaWeather #HeavyRain #WeatherNews #HeatWave #RainRelief
    1
    #ಚಿತ್ರದುರ್ಗ
#Chitradurga
#MidnightRain
#RainNews
#BreakingNews
#WeatherUpdate
#KarnatakaWeather
#RainInChitradurga
#HeavyRain
#SummerHeat
#RainRelief
#WeatherNews
#ಬಿಸಿಲು
#ಮಳೆ
#ಕರ್ನಾಟಕ
#RainStorm
#Lightning
#StormRain
#HeatWave
#LocalNews
#ಚಿತ್ರದುರ್ಗ
#Chitradurga
#MidnightRain
#BreakingNews
#RainUpdate
#KarnatakaWeather
#HeavyRain
#WeatherNews
#HeatWave
#RainRelief
    user_Ctownnews16
    Ctownnews16
    Astrologer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    21 hrs ago
  • ಕುಷ್ಟಗಿ:- ಪಟ್ಟಣದ ತಾವರಗೇರಾ ರಸ್ತೆಯ ಮಾಹಾಂತ ಸಂಗಮ ನಗರದ ರವಿಕುಮಾರ ಮದ್ದಾನಿ ಹಿರೇಮಠ ಬಂಧುಗಳ ಮದುವೆ ಸಮಾರಂಭ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನಾಳೆ ನೆಡೆಯಲಿದೆ. ಈ ಮದುವೆ ಸಮಾರಂಭ ರವಿಕುಮಾರ ಹಿರೇಮಠ ಇವರು ತಮ್ಮ ಮಗನ ಮದುವೆ ಸಮಾರಂಭ ಜೊತೆಗೆ ಸುಮಾರು 51 ಜೋಡಿ ಉಚಿತ ಸರ್ವ ಧರ್ಮಗಳ ಉಚಿತ ಮದುವೆ ಸಮಾರಂಭವನ್ನು ನಾಳೆ ಏರ್ಪಡಿಸಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಉಚಿತ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆಡೆಯಲಿದೆ. ಮದುವೆಗೆ ಬೇಕಾದ ಎಲ್ಲಾ ಸಕಲ‌ ಸಿದ್ಧಂತೆಗಳನ್ನು ಮಾಡಿಕೊಂಡಿದ್ದು ಒಟ್ಟಾರೆಯಾಗಿ ಈ ಮದುವೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಈ ಉಚಿತ ಮದುವೆ ಸಮಾರಂಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಂಗಮ ಸಮಾಜದ ಪಂಚಪೀಠ ಅಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ರೇಣುಕಾಚಾರ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಮಹಾ ಸ್ವಾಮಿಗಳು ಉಜ್ಜನಿ ಪೀಠದ ಮಹಾಸ್ವಾಮಿಗಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದು ಮತ್ತು ಕೊಪ್ಪಳ ಜಿಲ್ಲೆಯ ಸ್ಥಳೀಯ ಶಾಸಕರು ಕುಷ್ಟಗಿ ಪಟ್ಟಣದ ಜನತೆ ಪಾಲ್ಗೊಳ್ಳಲಿದ್ದು ಈ ಒಂದು ಮದುವೆಯಲ್ಲಿ ಸರಿ ಸುಮಾರು 20 ರಿಂದ 25 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಸೇರಲಿದೆ ಎಂದು ಬಲ್ಲ ಮೂಲಗಳು ತಿಳಿಸಿದ್ದಾರೆ.
    3
    ಕುಷ್ಟಗಿ:- ಪಟ್ಟಣದ ತಾವರಗೇರಾ ರಸ್ತೆಯ ಮಾಹಾಂತ ಸಂಗಮ ನಗರದ ರವಿಕುಮಾರ ಮದ್ದಾನಿ ಹಿರೇಮಠ ಬಂಧುಗಳ ಮದುವೆ ಸಮಾರಂಭ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನಾಳೆ ನೆಡೆಯಲಿದೆ.
ಈ ಮದುವೆ ಸಮಾರಂಭ ರವಿಕುಮಾರ ಹಿರೇಮಠ ಇವರು ತಮ್ಮ  ಮಗನ ಮದುವೆ ಸಮಾರಂಭ ಜೊತೆಗೆ ಸುಮಾರು 51 ಜೋಡಿ ಉಚಿತ ಸರ್ವ ಧರ್ಮಗಳ ಉಚಿತ ಮದುವೆ ಸಮಾರಂಭವನ್ನು ನಾಳೆ ಏರ್ಪಡಿಸಿದ್ದಾರೆ.
ಈ ಮದುವೆ ಸಮಾರಂಭದಲ್ಲಿ ಉಚಿತ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆಡೆಯಲಿದೆ. ಮದುವೆಗೆ ಬೇಕಾದ ಎಲ್ಲಾ ಸಕಲ‌ ಸಿದ್ಧಂತೆಗಳನ್ನು ಮಾಡಿಕೊಂಡಿದ್ದು ಒಟ್ಟಾರೆಯಾಗಿ ಈ ಮದುವೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಈ ಉಚಿತ ಮದುವೆ ಸಮಾರಂಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಂಗಮ ಸಮಾಜದ ಪಂಚಪೀಠ ಅಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ರೇಣುಕಾಚಾರ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಮಹಾ ಸ್ವಾಮಿಗಳು ಉಜ್ಜನಿ ಪೀಠದ ಮಹಾಸ್ವಾಮಿಗಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದು ಮತ್ತು ಕೊಪ್ಪಳ ಜಿಲ್ಲೆಯ ಸ್ಥಳೀಯ ಶಾಸಕರು ಕುಷ್ಟಗಿ ಪಟ್ಟಣದ ಜನತೆ ಪಾಲ್ಗೊಳ್ಳಲಿದ್ದು ಈ ಒಂದು ಮದುವೆಯಲ್ಲಿ ಸರಿ ಸುಮಾರು 20 ರಿಂದ 25 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಸೇರಲಿದೆ ಎಂದು ಬಲ್ಲ ಮೂಲಗಳು ತಿಳಿಸಿದ್ದಾರೆ.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    9 hrs ago
  • Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    1
    Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    user_ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    City Star ಗದಗ, ಗದಗ, ಕರ್ನಾಟಕ•
    11 hrs ago
  • ಶಿಗ್ಗಾವಿ : ಈ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಘೋಷಿಸಿದ ಮೀಸಲಾತಿಯನ್ನು ಪುನಹ ಪರಿಶಿಷ್ಟ ಜಾತಿಗೆ ಜಾರಿ ಮಾಡಿ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಿಗ್ಗಾವಿ ತಾಲೂಕಾ ಪರಿಶಿಷ್ಠ ಜಾತಿಯ ವಿವಿಧ ಮುಖಂಡರಿAದ ಮನವಿ ಅರ್ಪಿಸಿ ಒತ್ತಾಯಿಲಾಯಿತು. ಇತ್ತೀಚೆಗೆ ಕರ್ನಾಟಕ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸಲು ಅಂತಿಮ ನಿರ್ಧಾರ ತೆಗೆದುಕೊಂಡಿದ್ದು ಇದು ಈ ಹಿಂದೆ ೨೦೨೨ ರಲ್ಲಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇಕಡ ೧೭ರಷ್ಟು ಮೀಸಲಾತಿಯನ್ನ ಘೋಷಿಸಿ ಅದರಲ್ಲಿ ಒಳ ಮೀಸಲಾತಿಗಾಗಿ ಅನುಕೂಲ ಮಾಡಿಕೊಟ್ಟಿತ್ತು ಆದರೆ ಪ್ರಸ್ತುತ ಸರ್ಕಾರವು ೧೭% ಘೋಷಣೆ ಮಾಡಿದಂತ ಮೀಸಲಾತಿಯನ್ನು ಶೇಕಡ ೧೫% ಗೆ ಇಳಿಸಿ ಅದರಲ್ಲಿಯೇ ಅವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸುತ್ತಿದೆ ಇದರಿಂದಾಗಿ ಶೇಕಡ ಎರಡರನ್ನು ಮೀಸಲಾತಿ ಪ್ರಮಾಣವೂ ಕಡಿಮೆಯಾಗಿದ್ದರಿಂದ ಬಹಳಷ್ಟು ಅನ್ಯಾಯವಾಗುತ್ತಿದ್ದು ಪ್ರಸ್ತುತ ಕರ್ನಾಟಕವು ಒಬಿಸಿಗಳಿಗೆ ೩೨%, ಎಸ್‌ಸಿ ಗಳಿಗೆ ೧೫% ಮತ್ತು ಎಸ್‌ಟಿ ಗಳಿಗೆ ೩% ಒಟ್ಟು ೫೦% ಮೀಸಲಾತಿಯನ್ನು ಒದಗಿಸುತ್ತದೆ. ಎಸ್‌ಸಿ/ಎಸ್‌ಟಿ ಕೋಟಾವನ್ನು ಹೆಚ್ಚಿಸಲು ಕರ್ನಾಟಕಕ್ಕೆ ಇರುವ ಏಕೈಕ ಮಾರ್ಗವೆಂದರೆ ಸಂವಿಧಾನದ ಶೆಡ್ಯೂಲ್ ೯ ರ ಅಡಿಯಲ್ಲಿ ಲಭ್ಯವಿರುವ ನಿಬಂಧನೆಗಳನ್ನು ಬಳಸಿಕೊಂಡು ಮೀಸಲಾತಿಯನ್ನು ಹೆಚ್ಚಿಸುವುದು. ಶೆಡ್ಯೂಲ್ ೯ ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲ್ಪಟ್ಟಿರುವ ಕೇಂದ್ರ ಮತ್ತು ರಾಜ್ಯ ಕಾನೂನುಗಳ ಪಟ್ಟಿಯನ್ನು ಒಳಗೊಂಡಿದೆ. ಶೆಡ್ಯೂಲ್ ೯ ರ ವ್ಯಾಪ್ತಿಯಲ್ಲಿರುವ ಹೆಚ್ಚಿನ ಕಾನೂನುಗಳು ಕೃಷಿ ಅಥವಾ ಭೂಮಿಗೆ ಸಂಬAಧಿಸಿದ್ದರೂ ಸಹ, ಮೀಸಲಾತಿಯಂತಹ ಇತರ ವಿಷಯಗಳು ಪಟ್ಟಿಯಲ್ಲಿವೆ. ಆದ್ದರಿಂದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಘೋಷಿಸಿದಂತಹ ಶೇಕಡ ೧೭ರ ಮೀಸಲಾತಿಯನ್ನೇ ಪುನಹ ಜಾರಿಗೊಳಿಸಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಈ ಮೂಲಕ ಒತ್ತಾಯಿಸುತ್ತೇವೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಡಿ ಎಸ್ ಮಾಳಗಿ, ಮಂಜುನಾಥ ಬ್ಯಾಹಟ್ಟಿ, ಕರೆಪ್ಪ ಕಟ್ಟಿಮನಿ, ನೀಲವ್ವ ಕಾಲವಾಡ, ಅಶೋಕ ಕಾಳೆ, ರಾಮಚಂದ್ರ ಧಾರವಾಡ,  ಮಲ್ಲೇಶಪ್ಪ ಧಾರವಾಡ, ಲಕ್ಷ್ಮಣ ಬ್ಯಾಹಟ್ಟಿ, ಬಿ ಎಫ್ ಕಟ್ಟಿಮನಿ, ದುರ್ಗಪ್ಪ ಪೂಜಾರ, ಚಂದ್ರಶೇಖರ ಡೊಳ್ಳೆಶ್ವರ, ಮಾಲತೇಶ ಮಾಕಾಪುರ, ಆನಂದ ಬಂಡಿವಡ್ಡರ, ಸಂತೋಷ ಕಟ್ಟಿಮನಿ ಸೇರಿದಂತೆ ಇತರ ಮುಖಂಡರು ಇದ್ದರು.
    1
    ಶಿಗ್ಗಾವಿ : ಈ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಘೋಷಿಸಿದ ಮೀಸಲಾತಿಯನ್ನು ಪುನಹ ಪರಿಶಿಷ್ಟ ಜಾತಿಗೆ ಜಾರಿ ಮಾಡಿ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಿಗ್ಗಾವಿ ತಾಲೂಕಾ ಪರಿಶಿಷ್ಠ ಜಾತಿಯ ವಿವಿಧ ಮುಖಂಡರಿAದ ಮನವಿ ಅರ್ಪಿಸಿ ಒತ್ತಾಯಿಲಾಯಿತು.
ಇತ್ತೀಚೆಗೆ ಕರ್ನಾಟಕ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸಲು ಅಂತಿಮ ನಿರ್ಧಾರ ತೆಗೆದುಕೊಂಡಿದ್ದು ಇದು ಈ ಹಿಂದೆ ೨೦೨೨ ರಲ್ಲಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇಕಡ ೧೭ರಷ್ಟು ಮೀಸಲಾತಿಯನ್ನ ಘೋಷಿಸಿ ಅದರಲ್ಲಿ ಒಳ ಮೀಸಲಾತಿಗಾಗಿ ಅನುಕೂಲ ಮಾಡಿಕೊಟ್ಟಿತ್ತು ಆದರೆ ಪ್ರಸ್ತುತ ಸರ್ಕಾರವು ೧೭% ಘೋಷಣೆ ಮಾಡಿದಂತ ಮೀಸಲಾತಿಯನ್ನು ಶೇಕಡ ೧೫% ಗೆ ಇಳಿಸಿ ಅದರಲ್ಲಿಯೇ ಅವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸುತ್ತಿದೆ ಇದರಿಂದಾಗಿ ಶೇಕಡ ಎರಡರನ್ನು ಮೀಸಲಾತಿ ಪ್ರಮಾಣವೂ ಕಡಿಮೆಯಾಗಿದ್ದರಿಂದ ಬಹಳಷ್ಟು ಅನ್ಯಾಯವಾಗುತ್ತಿದ್ದು ಪ್ರಸ್ತುತ ಕರ್ನಾಟಕವು ಒಬಿಸಿಗಳಿಗೆ ೩೨%, ಎಸ್‌ಸಿ ಗಳಿಗೆ ೧೫% ಮತ್ತು ಎಸ್‌ಟಿ ಗಳಿಗೆ ೩% ಒಟ್ಟು ೫೦% ಮೀಸಲಾತಿಯನ್ನು ಒದಗಿಸುತ್ತದೆ. ಎಸ್‌ಸಿ/ಎಸ್‌ಟಿ ಕೋಟಾವನ್ನು ಹೆಚ್ಚಿಸಲು ಕರ್ನಾಟಕಕ್ಕೆ ಇರುವ ಏಕೈಕ ಮಾರ್ಗವೆಂದರೆ ಸಂವಿಧಾನದ ಶೆಡ್ಯೂಲ್ ೯ ರ ಅಡಿಯಲ್ಲಿ ಲಭ್ಯವಿರುವ ನಿಬಂಧನೆಗಳನ್ನು ಬಳಸಿಕೊಂಡು ಮೀಸಲಾತಿಯನ್ನು ಹೆಚ್ಚಿಸುವುದು. ಶೆಡ್ಯೂಲ್ ೯ ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲ್ಪಟ್ಟಿರುವ ಕೇಂದ್ರ ಮತ್ತು ರಾಜ್ಯ ಕಾನೂನುಗಳ ಪಟ್ಟಿಯನ್ನು ಒಳಗೊಂಡಿದೆ. ಶೆಡ್ಯೂಲ್ ೯ ರ ವ್ಯಾಪ್ತಿಯಲ್ಲಿರುವ ಹೆಚ್ಚಿನ ಕಾನೂನುಗಳು ಕೃಷಿ ಅಥವಾ ಭೂಮಿಗೆ ಸಂಬAಧಿಸಿದ್ದರೂ ಸಹ, ಮೀಸಲಾತಿಯಂತಹ ಇತರ ವಿಷಯಗಳು ಪಟ್ಟಿಯಲ್ಲಿವೆ. ಆದ್ದರಿಂದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಘೋಷಿಸಿದಂತಹ ಶೇಕಡ ೧೭ರ ಮೀಸಲಾತಿಯನ್ನೇ ಪುನಹ ಜಾರಿಗೊಳಿಸಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಈ ಮೂಲಕ ಒತ್ತಾಯಿಸುತ್ತೇವೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಡಿ ಎಸ್ ಮಾಳಗಿ, ಮಂಜುನಾಥ ಬ್ಯಾಹಟ್ಟಿ, ಕರೆಪ್ಪ ಕಟ್ಟಿಮನಿ, ನೀಲವ್ವ ಕಾಲವಾಡ, ಅಶೋಕ ಕಾಳೆ, ರಾಮಚಂದ್ರ ಧಾರವಾಡ,  ಮಲ್ಲೇಶಪ್ಪ ಧಾರವಾಡ, ಲಕ್ಷ್ಮಣ ಬ್ಯಾಹಟ್ಟಿ, ಬಿ ಎಫ್ ಕಟ್ಟಿಮನಿ, ದುರ್ಗಪ್ಪ ಪೂಜಾರ, ಚಂದ್ರಶೇಖರ ಡೊಳ್ಳೆಶ್ವರ, ಮಾಲತೇಶ ಮಾಕಾಪುರ, ಆನಂದ ಬಂಡಿವಡ್ಡರ, ಸಂತೋಷ ಕಟ್ಟಿಮನಿ ಸೇರಿದಂತೆ ಇತರ ಮುಖಂಡರು ಇದ್ದರು.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    12 hrs ago
  • Post by Karibasava Balal
    1
    Post by Karibasava Balal
    user_Karibasava Balal
    Karibasava Balal
    City Star ದಾವಣಗೆರೆ, ದಾವಣಗೆರೆ, ಕರ್ನಾಟಕ•
    10 min ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    23 hrs ago
  • ಶಿಗ್ಗಾವಿ : ಮುಂಗಾರು ಪೂರ್ವದಲ್ಲಿ ರಸಗೊಬ್ಬರ ವಿತರಿಸಲು ರೈತರಿಗೆ ಎಫ್.ಐ.ಡಿ ಯನ್ನ ಕಡ್ಡಾಯ ಮಾಡಿರುವುದನ್ನ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಇದೇ ಮೇ. 2 ರಂದು ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಒಕ್ಕೂಟ ಕಬ್ಬು ಬೆಳೆಗಾರರ ಸಂಘದ ತಾಲೂಕಾದ್ಯಕ್ಷ ಬಸಲಿಂಗಪ್ಪ ನರಗುಂದ ತಿಳಿಸಿದ್ದಾರೆ.. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್.ಐ.ಡಿ ಕಡ್ಡಾಯದಿಂದ ರೈತರಿಗೆ ಸರಿಯಾದ ವೇಳೆಗೆ ಗೊಬ್ಬರ ಸಿಗೋದಿಲ್ಲ, ಸರ್ವರ್ ಸಮಸ್ಯೆಯಾಗಿ ವಿಳಂಬವಾಗುವ ಬೀತಿ ರೈತರಿಗೆ ಕಾಡುತ್ತದೆ, ರಸಗೊಬ್ಬರ ಮಾರಾಟಗಾರರೂ ಸಹಿತ ರಾಜ್ಯಾದ್ಯಂತ ಇದನ್ನ ವಿರೋಧಿಸಿದ್ದಾರೆ, ವಿತರಿಸಲು ತಾಂತ್ರಿಕ ದೋಷ ಸಂಬವವಿದೆ ಆದ್ದರಿಂದ ಮೊದಲು ಆಧಾರ್ ಕಾರ್ಡ್ ಮೂಲಕ ವಿತರಿಸುತ್ತಿದ್ದಂತೆಯೇ ಗೊಬ್ಬರವನ್ನ ವಿತರಿಸಬೇಕು ಎಂದು ಅಗ್ರಹಿಸಿದರು, ಒಂದು ವೇಳೆ ಎಫ್.ಐ.ಡಿ ಕಡ್ಡಾಯವನ್ನ ನಿಲ್ಲಿಸದೇ ಹೋದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದರು. ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯಾದ್ಯಕ್ಷ ಮಂಜುನಾಥ ಕಂಕಣವಾಡ ಮಾತನಾಡಿ, ರಸಗೊಬ್ಬರ ಕಂಪನಿಗಳು ಉತ್ಪಾದಿಸಿರುವ ಗೊಬ್ಬರ ಲಿಂಕ್ ಮೂಲಕ ರೈತರಿಗೆ ನೀಡುತ್ತಿರುವುದರಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಇದನ್ನ ಕೂಡಲೇ ಸರಕಾರ ರಸಗೊಬ್ಬರ ಕಂಪನಿಗಳಿಗೆ ಕಡಿವಾಣ ಹಾಕಬೇಕು, ಎಫ್.ಐ.ಡಿ ಕಡ್ಡಾಯ ಕಾನೂನು ಅವೈಜ್ಞಾನಿಕವಾಗಿರುವುದರಿಂದ ರೈತರಿಗೆ ಇದು ಮಾರಕವಾಗಲಿದ್ದು ಕೂಡಲೇ ಸರಕಾರಗಳು ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದರು. ವಿವಿಧ ರೈತ ಸಂಘಗಳ ಮುಖಂಡರಾದ ನಾಗರಾಜ ದೇಸಾಯಿ, ಗಿರಿಧರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ, ರಮೇಶ ಜೋಳದ, ನಿಂಗಪ್ಪ ಓಲೇಕಾರ, ಸೇರಿದಂತೆ ರೈತ ಮುಖಂಡರು ಇದ್ದರು.
    1
    ಶಿಗ್ಗಾವಿ : ಮುಂಗಾರು ಪೂರ್ವದಲ್ಲಿ ರಸಗೊಬ್ಬರ ವಿತರಿಸಲು ರೈತರಿಗೆ ಎಫ್.ಐ.ಡಿ ಯನ್ನ ಕಡ್ಡಾಯ ಮಾಡಿರುವುದನ್ನ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಇದೇ ಮೇ. 2 ರಂದು ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು
ರೈತ ಒಕ್ಕೂಟ ಕಬ್ಬು ಬೆಳೆಗಾರರ ಸಂಘದ ತಾಲೂಕಾದ್ಯಕ್ಷ ಬಸಲಿಂಗಪ್ಪ ನರಗುಂದ ತಿಳಿಸಿದ್ದಾರೆ..
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್.ಐ.ಡಿ ಕಡ್ಡಾಯದಿಂದ ರೈತರಿಗೆ ಸರಿಯಾದ ವೇಳೆಗೆ ಗೊಬ್ಬರ ಸಿಗೋದಿಲ್ಲ, ಸರ್ವರ್ ಸಮಸ್ಯೆಯಾಗಿ ವಿಳಂಬವಾಗುವ ಬೀತಿ ರೈತರಿಗೆ ಕಾಡುತ್ತದೆ, ರಸಗೊಬ್ಬರ ಮಾರಾಟಗಾರರೂ ಸಹಿತ ರಾಜ್ಯಾದ್ಯಂತ ಇದನ್ನ ವಿರೋಧಿಸಿದ್ದಾರೆ, ವಿತರಿಸಲು ತಾಂತ್ರಿಕ ದೋಷ ಸಂಬವವಿದೆ ಆದ್ದರಿಂದ ಮೊದಲು ಆಧಾರ್ ಕಾರ್ಡ್ ಮೂಲಕ ವಿತರಿಸುತ್ತಿದ್ದಂತೆಯೇ ಗೊಬ್ಬರವನ್ನ ವಿತರಿಸಬೇಕು ಎಂದು ಅಗ್ರಹಿಸಿದರು, ಒಂದು ವೇಳೆ ಎಫ್.ಐ.ಡಿ ಕಡ್ಡಾಯವನ್ನ ನಿಲ್ಲಿಸದೇ ಹೋದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯಾದ್ಯಕ್ಷ ಮಂಜುನಾಥ ಕಂಕಣವಾಡ ಮಾತನಾಡಿ, ರಸಗೊಬ್ಬರ ಕಂಪನಿಗಳು ಉತ್ಪಾದಿಸಿರುವ ಗೊಬ್ಬರ ಲಿಂಕ್ ಮೂಲಕ ರೈತರಿಗೆ ನೀಡುತ್ತಿರುವುದರಿಂದ  ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಇದನ್ನ ಕೂಡಲೇ ಸರಕಾರ ರಸಗೊಬ್ಬರ ಕಂಪನಿಗಳಿಗೆ ಕಡಿವಾಣ ಹಾಕಬೇಕು, ಎಫ್.ಐ.ಡಿ ಕಡ್ಡಾಯ ಕಾನೂನು ಅವೈಜ್ಞಾನಿಕವಾಗಿರುವುದರಿಂದ ರೈತರಿಗೆ ಇದು ಮಾರಕವಾಗಲಿದ್ದು ಕೂಡಲೇ ಸರಕಾರಗಳು ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದರು.
ವಿವಿಧ ರೈತ ಸಂಘಗಳ ಮುಖಂಡರಾದ ನಾಗರಾಜ ದೇಸಾಯಿ, ಗಿರಿಧರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ, ರಮೇಶ ಜೋಳದ, ನಿಂಗಪ್ಪ ಓಲೇಕಾರ,  ಸೇರಿದಂತೆ ರೈತ ಮುಖಂಡರು ಇದ್ದರು.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.