*ಕಲ್ಬುರ್ಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಿಂದುಳಿದ ವರ್ಗದಲ್ಲಿ ಬರುವ ಕಬ್ಬಲಿಗ ತಳವಾರ ಜಾತಿಯವರು ಸುಳ್ಳು ಮಾಹಿತಿಯನ್ನು ನೀಡಿ ತಳವಾರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆಯುತ್ತಿದ್ದು ಅದನ್ನು ತಕ್ಷಣ ರದ್ದುಪಡಿಸುವ ಕುರಿತು ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಕಲಬುರ್ಗಿ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಸಾಹೇಬರಿಗೆ ಮನವಿ ಪತ್ರ ನೀಡಲಾಯಿತು* ಹಿಂದುಳಿದ ವರ್ಗದಲ್ಲಿ ಬರುವ ಕಬ್ಬಲಿಗ ತಳವಾರರು ಸರಕಾರದ ಕಣ್ಣು ತಪ್ಪಿಸಿ ಸುಳ್ಳು ಮಾಹಿತಿ ನೀಡಿ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿ ತಳವಾರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆಯುವುದು ಕಾನೂನು ಬಹಿರವಾಗಿದೆ ಹಿಂದಿನ ಸರಕಾರ ತಳವಾರರ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ಮಾಡಿ *ನಾಯಕ ತಳವಾರ* ಮತ್ತು *ನಾಯಕ ಪರಿವಾರ* ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿದೆ ಆದರೆ ಇದನ್ನು ನೆಪವಾಗಿಟ್ಟುಕೊಂಡು ಕಲ್ಬುರ್ಗಿ ಜಿಲ್ಲೆಯ ಜಿಲ್ಲಾಡಳಿತ ಮತ್ತು ಕೆಲವು ತಾಲೂಕುಗಳಲ್ಲಿ ತಾಲೂಕಿನ ಶಾಸಕರಗಳ ಒತ್ತಡದಿಂದ ಅಲ್ಲಿಯ ಗ್ರೇಡ್ ಟು ತಹಶೀಲ್ದಾರರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನಾಯ್ಕಡ್ ನಾಯಕ ತಳವಾರ್ ಎಸ್ ಟಿ ಸರ್ಟಿಫಿಕೇಟ್ ಅನ್ನು ಶಾಸಕರು ಮತ್ತು ಅಲ್ಲಿಯ ತಾಲೂಕ ಆಡಳಿತ ಒಗ್ಗಟ್ಟಾಗಿ ಕಾನೂನನ್ನು ಮೀರಿ ಜಾತಿ ಪ್ರಮಾಣ ಪತ್ರವನ್ನು ನೀಡಿರುತ್ತಾರೆ. ಇದನ್ನು ವಿರೋಧಿಸಿ ಇಂದು ಕಲ್ಬುರ್ಗಿ ಜಿಲ್ಲೆಗೆ ಆಗಮಿಸಿರುವ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಜ್ಯ ಎಸ್ ಸಿ /ಎಸ್ ಟಿ ನಕಲಿ ಜಾತಿ ತಡೆ ಸಮಿತಿಯ ರಾಜ್ಯಾಧ್ಯಕ್ಷರು ಶ್ರೀ ಶ್ರವಣ್ ಕುಮಾರ್ ಡಿ ನಾಯಕ್ ಸರ್ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಅಧ್ಯಕ್ಷರು ಮತ್ತು ಕಲ್ಬುರ್ಗಿ ಜಿಲ್ಲೆಯ ಮಾಜಿ ಮಹಾಪೌರರು ಶ್ರೀ ನಂದಕುಮಾರ್ ಮಾಲಿಪಾಟೀಲ್ ಸರ್ ರವರು ಮತ್ತು ಕಲಬುರ್ಗಿ ಜಿಲ್ಲೆಯ ಕಾಂಗ್ರೆಸ್ ಎಸ್ ಟಿ ಮೋರ್ಚದ ಅಧ್ಯಕ್ಷರು ಗುರುರಾಜ್ ಅಣ್ಣನವರು ಮತ್ತು ಜಿಲ್ಲಾಧ್ಯಕ್ಷರು ಶರಣು ಸುಬೇದಾರ್ ಅಣ್ಣನವರು ಮತ್ತು ಮಾರುತಿ ಜಮಾದಾರ್ ಅಣ್ಣನವರು ಮತ್ತು ಸಮಾಜದ ಅನೇಕ ಮುಖಂಡರುಗಳು ಭಾಗಿಯಾಗಿ ಮನವಿ ಪತ್ರ ಸಲ್ಲಿಸಿದರು *ವರದಿ - ಶ್ರೀ ಗಂಗಾಧರ ನಾಯಕ ತಿಂಥಣಿ* ವರದಿಗಾರರು ಕರ್ನಾಟಕ ಸಂದೇಶವಾಣಿ ದಿನಪತ್ರಿಕೆ
*ಕಲ್ಬುರ್ಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಿಂದುಳಿದ ವರ್ಗದಲ್ಲಿ ಬರುವ ಕಬ್ಬಲಿಗ ತಳವಾರ ಜಾತಿಯವರು ಸುಳ್ಳು ಮಾಹಿತಿಯನ್ನು ನೀಡಿ ತಳವಾರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆಯುತ್ತಿದ್ದು ಅದನ್ನು ತಕ್ಷಣ ರದ್ದುಪಡಿಸುವ ಕುರಿತು ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಕಲಬುರ್ಗಿ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಸಾಹೇಬರಿಗೆ ಮನವಿ ಪತ್ರ ನೀಡಲಾಯಿತು* ಹಿಂದುಳಿದ ವರ್ಗದಲ್ಲಿ ಬರುವ ಕಬ್ಬಲಿಗ ತಳವಾರರು ಸರಕಾರದ ಕಣ್ಣು ತಪ್ಪಿಸಿ ಸುಳ್ಳು ಮಾಹಿತಿ ನೀಡಿ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿ ತಳವಾರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆಯುವುದು ಕಾನೂನು ಬಹಿರವಾಗಿದೆ ಹಿಂದಿನ ಸರಕಾರ ತಳವಾರರ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ಮಾಡಿ *ನಾಯಕ ತಳವಾರ* ಮತ್ತು *ನಾಯಕ ಪರಿವಾರ* ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿದೆ ಆದರೆ ಇದನ್ನು ನೆಪವಾಗಿಟ್ಟುಕೊಂಡು ಕಲ್ಬುರ್ಗಿ ಜಿಲ್ಲೆಯ ಜಿಲ್ಲಾಡಳಿತ ಮತ್ತು ಕೆಲವು ತಾಲೂಕುಗಳಲ್ಲಿ ತಾಲೂಕಿನ ಶಾಸಕರಗಳ ಒತ್ತಡದಿಂದ ಅಲ್ಲಿಯ ಗ್ರೇಡ್ ಟು ತಹಶೀಲ್ದಾರರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು
ನಾಯ್ಕಡ್ ನಾಯಕ ತಳವಾರ್ ಎಸ್ ಟಿ ಸರ್ಟಿಫಿಕೇಟ್ ಅನ್ನು ಶಾಸಕರು ಮತ್ತು ಅಲ್ಲಿಯ ತಾಲೂಕ ಆಡಳಿತ ಒಗ್ಗಟ್ಟಾಗಿ ಕಾನೂನನ್ನು ಮೀರಿ ಜಾತಿ ಪ್ರಮಾಣ ಪತ್ರವನ್ನು ನೀಡಿರುತ್ತಾರೆ. ಇದನ್ನು ವಿರೋಧಿಸಿ ಇಂದು ಕಲ್ಬುರ್ಗಿ ಜಿಲ್ಲೆಗೆ ಆಗಮಿಸಿರುವ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಜ್ಯ ಎಸ್ ಸಿ /ಎಸ್ ಟಿ ನಕಲಿ ಜಾತಿ ತಡೆ ಸಮಿತಿಯ ರಾಜ್ಯಾಧ್ಯಕ್ಷರು ಶ್ರೀ ಶ್ರವಣ್ ಕುಮಾರ್ ಡಿ ನಾಯಕ್ ಸರ್ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಅಧ್ಯಕ್ಷರು ಮತ್ತು ಕಲ್ಬುರ್ಗಿ ಜಿಲ್ಲೆಯ ಮಾಜಿ ಮಹಾಪೌರರು ಶ್ರೀ ನಂದಕುಮಾರ್ ಮಾಲಿಪಾಟೀಲ್ ಸರ್ ರವರು ಮತ್ತು ಕಲಬುರ್ಗಿ ಜಿಲ್ಲೆಯ ಕಾಂಗ್ರೆಸ್ ಎಸ್ ಟಿ ಮೋರ್ಚದ ಅಧ್ಯಕ್ಷರು ಗುರುರಾಜ್ ಅಣ್ಣನವರು ಮತ್ತು ಜಿಲ್ಲಾಧ್ಯಕ್ಷರು ಶರಣು ಸುಬೇದಾರ್ ಅಣ್ಣನವರು ಮತ್ತು ಮಾರುತಿ ಜಮಾದಾರ್ ಅಣ್ಣನವರು ಮತ್ತು ಸಮಾಜದ ಅನೇಕ ಮುಖಂಡರುಗಳು ಭಾಗಿಯಾಗಿ ಮನವಿ ಪತ್ರ ಸಲ್ಲಿಸಿದರು *ವರದಿ - ಶ್ರೀ ಗಂಗಾಧರ ನಾಯಕ ತಿಂಥಣಿ* ವರದಿಗಾರರು ಕರ್ನಾಟಕ ಸಂದೇಶವಾಣಿ ದಿನಪತ್ರಿಕೆ
- ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ ಯಾದಗಿರಿ-ರಾಯಚೂರು ಹೆದ್ದಾರಿಯ ಆರ್. ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.1
- "ಧ್ವನಿವರ್ಧಕ ಬಳಸಿ ಯುವ ಮತದಾರರರ ಹೆಸರು ನೋಂದಣಿ ಮಾಡಲು ಜಾಗೃತಿ" ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಲ್ಹೇರಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಆಶಾಪುರ ಗ್ರಾಮದಲ್ಲಿ ಇಂದು ಬೆಳಗ್ಗೆ ಹೊಸದಾಗಿ ಯುವಕರ ಮತದಾರ ನೋಂದಣಿ ಮಾಡಲು ಸ್ವಚ್ಛವಾಹಿನಿ ಮೂಲಕ ಜಾಗೃತಿ ಮೂಡಿಸಲಾಯಿತು.1
- ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಗ್ಯದಲ್ಲಿ ಏರುಪೇರು. 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ. ತಾಳಿಕೋಟಿ ವರದಿ ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಗ್ಯದಲ್ಲಿ ಏರುಪೇರು. 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ. ವಿಜಯಪುರ ಜಿಲ್ಲೆ ತಾಳಿಕೋಟಿ ಪಟ್ಟಣದಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 14ನೇ ದಿನಕ್ಕೆ ಕಾಲಿಟ್ಟಿದೆ. ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರವಾಸಿ ಮಂದಿರದ ಪಕ್ಕದಲ್ಲಿ ನಡೆಯುತ್ತಿರುವ ಧರಣಿ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಅವರಿಗೆ ಬಿಸಿಲಿನ ತಾಪದಿಂದ ತಲೆ ಸುತ್ತಿ ಆರೋಗ್ಯದಲ್ಲಿ ಏರುಪೇರಾದ ಘಟನೆ ನಡೆದಿದೆ. ತಕ್ಷಣ ಸ್ಥಳದಲ್ಲಿದ್ದ ರೈತ ಮುಖಂಡರು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯ ಬಳಿಕ ಅರವಿಂದ ಕುಲಕರ್ಣಿ ಅವರು ಚೇತರಿಸಿಕೊಂಡಿದ್ದು, ಧರಣಿ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ, ವಿಜಯಪುರ ಜಿಲ್ಲೆಯ ಬರಗಾಲ ಘೋಷಣೆಯಿಂದ ಹೊರಗುಳಿದಿರುವ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಎಂದು ರೈತ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ್ ಕುಲಕರ್ಣಿ, ಉಮೇಶ್ ವಾಲಿಕಾರ್, ಬಾಲಪ್ಪ ಗೌಡ ಲಿಂಗದಳ್ಳಿ ವಿಟ್ಟಲ್ ಬಿರಾದರ್, ಮಲ್ಲನಗೌಡ ಹಗರಟಿಗಿ, ಗುರುನಾಥ್ ರೆಡ್ಡಿ, ಪವಿತ್ರ ಬಡಿಗೇರ್, ಸಾವಿತ್ರಿ ಪಂದಗನೂರ್, ಬಸ್ಸು ಮಾಲಿ ಪಾಟೀಲ್, ಗುರುಲಿಂಗಪ್ಪ ಪಡಸಲಗಿ, ಮುತ್ತು ಗೌಡ ಪರ್ಸನಳ್ಳಿ, ರಾಜು ಗೌಡ ಆನಂದ್ ರೆಡ್ಡಿ, ಶಿವಶರಣಪ್ಪ ಸಾಹುಕಾರ್ ಇನ್ನು ಅನೇಕ ರೈತ ಮುಖಂಡರು ಭಾಗಿಯಾಗಿದ್ದರು1
- ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನೆ ದಿನ ಆಚರಣೆ ಉತ್ಸವದಲ್ಲಿ ಭಾಗವಹಿಸಿ ಕೊಲಿವಾಡ್ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ವೃತ್ತ ಪ್ರದರ್ಶನಗಳನ್ನು ಮಾಡಲಾಯಿತು ಆ ಸ್ಕೂಲಿನ ಶಿಕ್ಷಕರು ಬೃಂದಾವರು ಅವರಿಗೆ ಸಾತಿ ನೀಡಿದರು1
- ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಗೆ ಆದ್ಯತೆಗೆ ಯುವ ಕಾಂಗ್ರೆಸ್ ಒತ್ತಾಯ ಲಿಂಗಸುಗೂರು, ಸೆ.17: ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು ಎಂದು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಸೊಪ್ಪಿಮಠ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಕರೆಯ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ‘ನಿರುದ್ಯೋಗ ದಿನ’ವಾಗಿ ಆಚರಿಸಿ, ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಆಡಳಿತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರಿಗೆ ಅಗತ್ಯ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಯುವಕರ ಭವಿಷ್ಯದ ದೃಷ್ಟಿಯಿಂದ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೌನೇಶ ಪೂಜಾರಿ, ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖದೀರ ಪಾನವಾಲೆ, ಮಾಜಿ ಅಧ್ಯಕ್ಷರಾದ ಕುಪ್ಪಣ್ಣ ಕೌತಾಳ, ವಾಸಿಮ್ ಪಾಶಾ ಸೇರಿದಂತೆ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.2
- ಹೋಟೆಲ್‌ಗಳ ಮೇಲೆ ಎಸಿ ದಿಢೀರ್ ದಾಳಿ: ತನು ಜ್ಯೂಸ್ ಸೆಂಟರ್ ಸೀಜ್ ಶಿವಮೊಗ್ಗ: ನಗರದ ವಿವಿಧ ಹೋಟೆಲ್‌ಗಳು ಹಾಗೂ ಜ್ಯೂಸ್ ಸೆಂಟರ್‌ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು. ನಗರದ ದರ್ಗಾ ಕಾಂಪ್ಲೆಕ್ಸ್ ಸೇರಿದಂತೆ ಹಲವು ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ನಡೆದ ತಪಾಸಣೆಯಲ್ಲಿ ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟ, ನೈರ್ಮಲ್ಯ ವ್ಯವಸ್ಥೆ ಹಾಗೂ ಆಹಾರ ತಯಾರಿಕಾ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ, ವ್ಯಾಪಾರ ನಡೆಸಲು ಅಗತ್ಯವಿರುವ ಶಾಸನಬದ್ಧ ಪರವಾನಗಿಗಳ ಬಗ್ಗೆಯೂ ದಾಖಲೆಗಳನ್ನು ಪರಿಶೀಲಿಸಲಾಯಿತು. ತಪಾಸಣೆ ವೇಳೆ ಗಂಭೀರ ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನಗರದ ತನು ಜ್ಯೂಸ್ ಸೆಂಟರ್‌ನ್ನು ಅಧಿಕಾರಿಗಳು ಸ್ಥಳದಲ್ಲೇ ಸೀಜ್ ಮಾಡಿದ್ದಾರೆ. ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯ ಕಾಪಾಡದ ಹೋಟೆಲ್ ಮಾಲೀಕರಿಗೆ ಎಸಿ ಡಾ. ಮೈತ್ರಿ ಅವರು ಸ್ಥಳದಲ್ಲೇ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರ ಆರೋಗ್ಯದೊಂದಿಗೆ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶಿವಮೊಗ್ಗ ನಗರದಲ್ಲಿ ಮುಂದಿನ ದಿನಗಳಲ್ಲಿಯೂ ಹೋಟೆಲ್‌ಗಳು, ಜ್ಯೂಸ್ ಸೆಂಟರ್‌ಗಳು ಸೇರಿದಂತೆ ಆಹಾರ ಮಾರಾಟ ಮಳಿಗೆಗಳ ಮೇಲೆ ದಿಢೀರ್ ತಪಾಸಣೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. #Shivamogga #Shimoga #ACRaid #HotelInspection #TanuJuiceCenter #FoodSafety #FoodHygiene #HealthSafety #ShivamoggaNews #KarnatakaNews #BreakingNews #KannadaNews #yadgirnewslive ಹೋಟೆಲ್‌ಗಳ ಮೇಲೆ ಎಸಿ ದಿಢೀರ್ ದಾಳಿ: ತನು ಜ್ಯೂಸ್ ಸೆಂಟರ್ ಸೀಜ್ ಶಿವಮೊಗ್ಗ: ನಗರದ ವಿವಿಧ ಹೋಟೆಲ್‌ಗಳು ಹಾಗೂ ಜ್ಯೂಸ್ ಸೆಂಟರ್‌ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು. ನಗರದ ದರ್ಗಾ ಕಾಂಪ್ಲೆಕ್ಸ್ ಸೇರಿದಂತೆ ಹಲವು ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ನಡೆದ ತಪಾಸಣೆಯಲ್ಲಿ ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟ, ನೈರ್ಮಲ್ಯ ವ್ಯವಸ್ಥೆ ಹಾಗೂ ಆಹಾರ ತಯಾರಿಕಾ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ, ವ್ಯಾಪಾರ ನಡೆಸಲು ಅಗತ್ಯವಿರುವ ಶಾಸನಬದ್ಧ ಪರವಾನಗಿಗಳ ಬಗ್ಗೆಯೂ ದಾಖಲೆಗಳನ್ನು ಪರಿಶೀಲಿಸಲಾಯಿತು. ತಪಾಸಣೆ ವೇಳೆ ಗಂಭೀರ ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನಗರದ ತನು ಜ್ಯೂಸ್ ಸೆಂಟರ್‌ನ್ನು ಅಧಿಕಾರಿಗಳು ಸ್ಥಳದಲ್ಲೇ ಸೀಜ್ ಮಾಡಿದ್ದಾರೆ. ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯ ಕಾಪಾಡದ ಹೋಟೆಲ್ ಮಾಲೀಕರಿಗೆ ಎಸಿ ಡಾ. ಮೈತ್ರಿ ಅವರು ಸ್ಥಳದಲ್ಲೇ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರ ಆರೋಗ್ಯದೊಂದಿಗೆ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶಿವಮೊಗ್ಗ ನಗರದಲ್ಲಿ ಮುಂದಿನ ದಿನಗಳಲ್ಲಿಯೂ ಹೋಟೆಲ್‌ಗಳು, ಜ್ಯೂಸ್ ಸೆಂಟರ್‌ಗಳು ಸೇರಿದಂತೆ ಆಹಾರ ಮಾರಾಟ ಮಳಿಗೆಗಳ ಮೇಲೆ ದಿಢೀರ್ ತಪಾಸಣೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. #Shivamogga #Shimoga #ACRaid #HotelInspection #TanuJuiceCenter #FoodSafety #FoodHygiene #HealthSafety #ShivamoggaNews #KarnatakaNews #BreakingNews #KannadaNews #yadgirnewslive1
- YADGIR NEWS||ನೀರು ಬೇಕಾಗಿದೆ, ನೀರು ಬಿಡಿ||ಅನ್ನದಾತರ ಭಜನೆ ಮುಖಾಂತರ|| ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಹೋರಾಟ..! ಯಾದಗಿರಿ: ರಾಜ್ಯದಲ್ಲಿ ಆವರಿಸಿರುವ ಭೀಕರ ಬರದ ಹಿನ್ನೆಲೆಯಲ್ಲಿ ಬತ್ತಿಹೋದ ಕೆರೆಗಳಿಗೆ ನೀರು ಹರಿಸಿ ಭರ್ತಿ ಮಾಡುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಹೋರಾಟ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲದೊಂದಿಗೆ ನಡೆದ ಪ್ರತಿಭಟನೆಯಲ್ಲಿ ರೈತರು ಭಜನೆ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು. ಬದ್ದೆಪಲ್ಲಿ ಹಾಗೂ ಮಲ್ಕಪನಳ್ಳಿ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಕೆಬಿಜೆಎನ್‌ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಸಮರ್ಪಕವಾಗಿ ತುಂಬಿಲ್ಲ ಎಂದು ಆರೋಪಿಸಿದರು. ಮಳೆ ಕೈಕೊಟ್ಟ ಪರಿಣಾಮ ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಕೆರೆ ನೀರನ್ನು ನಂಬಿ ಬೆಳೆ ಹಾಕಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾಗೂ ಜಾನುವಾರುಗಳಿಗಾಗಿ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿದ ರೈತರು, “ನೀರು ಬೇಕಾಗಿದೆ, ನೀರು ಬಿಡಿ” ಎಂದು ಭಜನೆ ಮಾಡಿ ಪ್ರತಿಭಟಿಸಿದರು. ಕೆರೆಗಳು ತುಂಬುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.1
- ಸ್ವಚ್ಛ ವಾಹಿನಿ ಮೂಲಕ ಯುವ ಮತದಾರ ನೊಂದಣಿಗೆ ಜಾಗೃತಿ ಮೂಡಿಸಲಾಯಿತು ಗುರುಮಠಕಲ್: ಇಂದು ಬೆಳಗ್ಗೆ ಚಂಡ್ರಿಕಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕೇಶ್ವಾರ ಗ್ರಾಮದಲ್ಲಿ ಸ್ವಚ್ಛ ವಾಹಿನಿ ಮೂಲಕ ಹೊಸದಾಗಿ ಯುವಕರ ಮತದಾರ ನೋಂದಣಿ ಮಾಡಲು ಜಾಗೃತಿ ಮೂಡಿಸಲಾಯಿತು.1