ಭದ್ರಾವತಿ-ಕೆರೆಯಲ್ಲಿ ಅಡಗಿ ಕುಳಿತ ರೌಡಿಶೀಟರ್: ಪೊಲೀಸರು ಬಂಧಿಸಿದ್ದೇಗೆ? ಭದ್ರಾವತಿ: ಪೊಲೀಸರಿಂದ ತಪ್ಪಿಸಿ ಕೊಳ್ಳಲು ಕೆರೆಯ ನೀರಿನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸು ವಲ್ಲಿ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ. ನಗರದ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಹಾಗೂ ಪ್ರಸನ್ನ ಎಂಬುವರು ಕೆರೆಯ ನೀರಿಗೆ ಧುಮುಕಿ, ಜೀವದ ಹಂಗು ತೊರೆದು ಆರೋಪಿಯ ಹೆಡೆಮುರಿಕಟ್ಟಿದ್ದಾರೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ನ್ಯಾಯಾಲಯದಿಂದ 3 ಬಾರಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದ ಆರೋಪಿಯನ್ನ ಪೊಲೀಸರು ಕೊನೆಗೂ ಲಾಕ್ ಮಾಡಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ 'ದಿಲೀಪ @ ಕರಿಯಾ' ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಕಳ್ಳತನ, ಕೊಲೆ ಯತ್ನ ಸೇರಿದಂತೆ ಬಂಧಿತ ಆರೋಪಿ ಕರಿಯಾ ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಅರೆಸ್ಟ್ ಮಾಡಲು ಬರುತ್ತಿದ್ದಾರೆ ಎಂಬ ವಿಷಯ ತಿಳಿದ ಆರೋಪಿ ತಪ್ಪಿಸಿಕೊಳ್ಳಲು ಕೆರೆಯ ನೀರಿನಲ್ಲಿ ಅಡಗಿ ಕುಳಿತಿದ್ದನು. ಆರೋಪಿಯ ಸುಳಿವು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಿ.ಹೆಚ್.ಸಿ. ಗಂಗಾಧರ ಹಾಗೂ ಹಾಲಪ್ಪ ಪ್ರಮುಖ ಪಾತ್ರ ವಹಿಸಿದ್ದು, ಸಿನಿಮಾ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ ನ್ಯೂಟೌನ್ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭದ್ರಾವತಿ-ಕೆರೆಯಲ್ಲಿ ಅಡಗಿ ಕುಳಿತ ರೌಡಿಶೀಟರ್: ಪೊಲೀಸರು ಬಂಧಿಸಿದ್ದೇಗೆ? ಭದ್ರಾವತಿ: ಪೊಲೀಸರಿಂದ ತಪ್ಪಿಸಿ ಕೊಳ್ಳಲು ಕೆರೆಯ ನೀರಿನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸು ವಲ್ಲಿ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ. ನಗರದ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಹಾಗೂ ಪ್ರಸನ್ನ ಎಂಬುವರು ಕೆರೆಯ ನೀರಿಗೆ ಧುಮುಕಿ, ಜೀವದ ಹಂಗು ತೊರೆದು ಆರೋಪಿಯ ಹೆಡೆಮುರಿಕಟ್ಟಿದ್ದಾರೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ನ್ಯಾಯಾಲಯದಿಂದ 3 ಬಾರಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದ ಆರೋಪಿಯನ್ನ ಪೊಲೀಸರು ಕೊನೆಗೂ ಲಾಕ್ ಮಾಡಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ 'ದಿಲೀಪ @ ಕರಿಯಾ' ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಕಳ್ಳತನ, ಕೊಲೆ ಯತ್ನ ಸೇರಿದಂತೆ ಬಂಧಿತ ಆರೋಪಿ ಕರಿಯಾ ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಅರೆಸ್ಟ್ ಮಾಡಲು ಬರುತ್ತಿದ್ದಾರೆ ಎಂಬ ವಿಷಯ ತಿಳಿದ ಆರೋಪಿ ತಪ್ಪಿಸಿಕೊಳ್ಳಲು ಕೆರೆಯ ನೀರಿನಲ್ಲಿ ಅಡಗಿ ಕುಳಿತಿದ್ದನು. ಆರೋಪಿಯ ಸುಳಿವು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಿ.ಹೆಚ್.ಸಿ. ಗಂಗಾಧರ ಹಾಗೂ ಹಾಲಪ್ಪ ಪ್ರಮುಖ ಪಾತ್ರ ವಹಿಸಿದ್ದು, ಸಿನಿಮಾ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ ನ್ಯೂಟೌನ್ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- ಭದ್ರಾವತಿ-ಕೆರೆಯಲ್ಲಿ ಅಡಗಿ ಕುಳಿತ ರೌಡಿಶೀಟರ್: ಪೊಲೀಸರು ಬಂಧಿಸಿದ್ದೇಗೆ? ಭದ್ರಾವತಿ: ಪೊಲೀಸರಿಂದ ತಪ್ಪಿಸಿ ಕೊಳ್ಳಲು ಕೆರೆಯ ನೀರಿನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸು ವಲ್ಲಿ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ. ನಗರದ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಹಾಗೂ ಪ್ರಸನ್ನ ಎಂಬುವರು ಕೆರೆಯ ನೀರಿಗೆ ಧುಮುಕಿ, ಜೀವದ ಹಂಗು ತೊರೆದು ಆರೋಪಿಯ ಹೆಡೆಮುರಿಕಟ್ಟಿದ್ದಾರೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ನ್ಯಾಯಾಲಯದಿಂದ 3 ಬಾರಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದ ಆರೋಪಿಯನ್ನ ಪೊಲೀಸರು ಕೊನೆಗೂ ಲಾಕ್ ಮಾಡಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ 'ದಿಲೀಪ @ ಕರಿಯಾ' ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಕಳ್ಳತನ, ಕೊಲೆ ಯತ್ನ ಸೇರಿದಂತೆ ಬಂಧಿತ ಆರೋಪಿ ಕರಿಯಾ ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಅರೆಸ್ಟ್ ಮಾಡಲು ಬರುತ್ತಿದ್ದಾರೆ ಎಂಬ ವಿಷಯ ತಿಳಿದ ಆರೋಪಿ ತಪ್ಪಿಸಿಕೊಳ್ಳಲು ಕೆರೆಯ ನೀರಿನಲ್ಲಿ ಅಡಗಿ ಕುಳಿತಿದ್ದನು. ಆರೋಪಿಯ ಸುಳಿವು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಿ.ಹೆಚ್.ಸಿ. ಗಂಗಾಧರ ಹಾಗೂ ಹಾಲಪ್ಪ ಪ್ರಮುಖ ಪಾತ್ರ ವಹಿಸಿದ್ದು, ಸಿನಿಮಾ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ ನ್ಯೂಟೌನ್ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.1
- ಶಿವಮೊಗ್ಗ ಫುಡ್ ಕೋರ್ಟ್‌ಗೆ ಎಸಿ ದಿಢೀರ್ ಎಂಟ್ರಿ; ವ್ಯಾಪಾರಸ್ಥರಲ್ಲಿ ಸಂಚಲನ! ಫುಡ್ ಕೋರ್ಟ್‌ನಲ್ಲಿ ಹೈಜೀನ್ ಚೆಕ್; ಅಂಗಡಿ ಮಾಲೀಕರಿಗೆ 15 ದಿನಗಳ ಗಡುವು1
- ಶಿವಮೊಗ್ಗ-ತಹಶೀಲ್ದಾರ್ ರವರ ಕಾರ್ಯ ವೈಖರಿ: ಸಾಗರ ಶಾಸಕ ಬೇಳೂರು ಅಸಮಾಧಾನ ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ನಿರಂತರ ದಾಳಿ ಹಾಗೂ ಕಾರ್ಯಾಚರಣೆ ನಡೆಸುತ್ತಿರುವ ತಹಶೀಲ್ದಾರ್ ಪ್ರತೀಭಾ ಅವರ ಕಾರ್ಯ ವೈಖರಿ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ನಿನ್ನೆ ಸಾಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆ ನಡೆಸುವ ವೇಳೆ ವಿಡಿಯೋ ಮಾಡಿ ಅದನ್ನು ಮಾಧ್ಯಮಗಳಿಗೆ ನೀಡುವ ಮೂಲಕ ಪ್ರಚಾರ ಪಡೆಯುವ ಕ್ರಮವನ್ನು ತಕ್ಷಣವೇ ನಿಲ್ಲಿಸುವಂತೆ ಅಧಿಕಾರಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದ್ದಾರೆ. ಪ್ರಚಾರ ಮೊದಲು ಅಲ್ಲ, ಕೆಲಸ ಮೊದಲು. ಕಾರ್ಯಾಚರಣೆಗಳ ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡುವುದನ್ನು ನಿಲ್ಲಿಸಿ. ಪ್ರಚಾರದ ಧಾಟಿ ಬಿಟ್ಟು ನಿಯಮಾನುಸಾರ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿ” ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ಸಭೆಯಲ್ಲಿ ಗಮನ ಸೆಳೆಯಿತು.1
- ಸರ್ಕಾರಿ ಪ್ರೌಢಶಾಲೆ ಕುಂಟಿನಮಡು ನಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ದಿನಾಂಕ 01/09/2026 ರಂದು ಸರ್ಕಾರಿ ಪ್ರೌಢಶಾಲೆ ಕುಂಟಿನಮಡು ನಲ್ಲಿ ಶಾಲಾ ವತಿಯಿಂದ ಮಕ್ಕಳ ಸಂತೆ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳು ನಾನಾ ರೀತಿಯ ಬಗೆ ಬಗೆಯ ತರಕಾರಿ, ಹಣ್ಣುಗಳು, ಲಘು ಉಪಹಾರ ಗಳ ಮಾರಾಟ ಮಾಡಿದರು.1
- ಮನೆ ಮೇಲೆ ಮನೆ ಅಕ್ಕ ಪಕ್ಕ ಪಕ್ಷಿಗಳಿಗೆ ನೀರು ಕಾಳು ಇಡುವ ಮೂಲಕ ಪಕ್ಷಿ ಸಂಕುಲ ಉಳಿಸಿ.1
- ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡರಿಗೆ ಭಾವನಾತ್ಮಕ ಬೀಳ್ಕೊಡುಗೆ! 💐 | ಪೊಲೀಸ್ ಸಿಬ್ಬಂದಿಯಿಂದ ಅಪರೂಪದ ಗೌರವ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಐಪಿಎಸ್ ಅವರು 31.08.2026ರಂದು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಆತ್ಮೀಯ ಹಾಗೂ ಗೌರವಯುತ ಬೀಳ್ಕೊಡುಗೆ ಸಮಾರಂಭ ನಡೆಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೂಮಳೆ ಸುರಿಸಿ ಗೌರವ ಸಲ್ಲಿಸಿದರು. ಕುಟುಂಬದ ಸದಸ್ಯರೂ ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು. ಕರ್ತವ್ಯನಿಷ್ಠೆ ಹಾಗೂ ಜನಸ್ನೇಹಿ ಸೇವೆಯ ಮೂಲಕ ಪೊಲೀಸ್ ಇಲಾಖೆಯಲ್ಲಿ ವಿಶೇಷ ಛಾಪು ಮೂಡಿಸಿದ ರವಿಕಾಂತೇಗೌಡರ ನಿವೃತ್ತಿ ಸಿಬ್ಬಂದಿಗೆ ಭಾವನಾತ್ಮಕ ಕ್ಷಣವಾಗಿತ್ತು. ಈ ವಿಶೇಷ ಬೀಳ್ಕೊಡುಗೆಯ ದೃಶ್ಯಗಳನ್ನು ಸಂಪೂರ್ಣವಾಗಿ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. #BRRavikantheGowda #RavikantheGowda #IPS #IGP #KarnatakaPolice #PoliceNews #KarnatakaNews #Chitradurga #PoliceDepartment #Retirement #Farewell #BreakingNews #KannadaNews #IndiaNews #asnnews24kannada1
- ಕೋನಿಗರಹಳ್ಳಿ ಗ್ರಾಮದ ವೇದಾವತಿ ನದಿಗೆ ನಿರ್ಮಿಸಲಾದ ಸೇತುವೆ ದುರಸ್ತಿ ಕುರಿತು ಸಚಿವ ಟಿ ರಘೂಮೂರ್ತಿ ಪ್ರತಿಕ್ರಿಯೆ ಕೋನಿಗರಹಳ್ಳಿ ಗ್ರಾಮದ ವೇದಾವತಿ ನದಿಗೆ ನಿರ್ಮಿಸಲಾದ ಸೇತುವೆ ದುರಸ್ತಿ ಕುರಿತು ಸಚಿವ ಟಿ ರಘೂಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ನೆನ್ನೆ ತಾನೆ ಕೋನಿಗರಹಳ್ಳಿ ಗ್ರಾಮದ ವೇದಾವತಿ ನದಿಗೆ ನಿರ್ಮಿಸಲಾದ ಸೇತುವೆ ಬಿರುಕು ಬಿಟ್ಟ ಬಗ್ಗೆ ಪಬ್ಲಿಕ್ ಆಪ್ ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ಈ ಬಗ್ಗೆ ಚಿತ್ರದುರ್ಗದಲ್ಲಿ ಅವರು ಮಾತನಾಡಿದ್ದು ಈಗಾಗಲೇ ಈ ಸಂಬಂದ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇನೆ. ಮುಂದಿನ ಕ್ಯಾಬಿನೆಟ್ ಬರಲಿದ್ದು ಡಿ ಪಿ ಆರ್ ಮಾಡಲು ತಿಳಿಸಿದ್ದೇನೆ. ಪಿ ಡಬ್ಲ್ಯೂ ಡಿ ಇಲಾಖೆ ವತಿಯಿಂದ ಡಿ ಪಿ ಆರ್ ಮಾಡಿ ಮುಂದಿನ ಸಭೆಯಲ್ಲಿ 35 ರಿಂದ 40 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರು ಡಿ ಪಿ ಆರ್ ಮಾಡಲು ನಿರ್ದೇಶನ ಕೊಟ್ಟಿದ್ದಾರೆ. ಮುಂದಿನ 15 ರ ಒಳಗೆ ಅದು ಅನುಮೋದನೆ ಆಗಿ ಟೆಂಡರ್ ಕರದು ಕಾಮಗಾರಿಗೆ ಚಾಲನೆ ಕೊಡಲಿದ್ದೇವೆ. ಸೇತುವೆ ಬಿರುಕು ಬಿಟ್ಟ ಕಡೆ ಸೂಕ್ತ ಅಧಿಕಾರಿಗಳ ತಂಡ ರಚಿಸಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಹಾಗೂ ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಬೇಕಾದ ಸಿದ್ದತೆ ಮಾಡಿಕೊಳ್ಳುವುದಾಗಿ ಟಿ ರಘೂಮೂರ್ತಿ ಅವರು ಮಾಹಿತಿ ನೀಡಿದ್ದಾರೆ.1
- ಇನ್ನರ್ವಿಲ್ ಕ್ಲಬ್ ವತಿಯಿಂದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ಕಾಳು ನೀರಿನ ವ್ಯವಸ್ಥೆ.. ಇನ್ನರ್ವಿಲ್ ಕ್ಲಬ್ ವತಿಯಿಂದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ಕಾಳು ನೀರಿನ ವ್ಯವಸ್ಥೆ.. ಚಳ್ಳಕೆರೆ:ಈ ವರ್ಷ ಬರ, ಬೇಸಿಗೆ ಧಗೆಯ ಮಧ್ಯೆ ಪ್ರಾಣಿ ಹಾಗೂ ಪಕ್ಷಿಗಳು ಎದುರಿಸುತ್ತಿರುವ ಸಮಸ್ಯೆ ಅರಿತು ಸಾರ್ವಜನಿಕರು ಪಕ್ಷಿ, ಪ್ರಾಣಿ ಪ್ರೀಯರು ಅಲ್ಲಲ್ಲಿ ನೀರು, ಕಾಳಿನ ವ್ಯವಸ್ಥೆ ಕಲ್ಪಿಸಿ ಪಕ್ಷಿ ಸಂಕುಲವನ್ನು ಉಳಿಸುವಂತೆ ಇನ್ನರ್ವಿಲ್ ಕ್ಲಬ್ ನ ಅಧ್ಯಕ್ಷ ಅಪರ್ಣ ದೇವೆಂದ್ರಪ್ಪ ಮನವಿ ಮಾಡಿದ್ದಾರೆ ನಗರದ ಚಿತ್ರದುರ್ಗ ರಸ್ತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಇಂದು ಇನ್ನರ್ವಿಲ್ ಕ್ಲಬ್ ವತಿಯಿಂದ ಪಕ್ಷಿಗಳಿಗೆ ಕಾಳು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿ ನಂತರ ಉದ್ಯಾನವನದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿ ನಂತರ ಅವರು ಮಾತನಾಡಿದರು.. ಈಗಾಗಲೆ ಮಳೆಗಾಲ ವಾದರೂ ಮಳೆ ಬಾರದೆ ನೀರಿನ ತಾಣಗಳಾದ ಕೆರೆ .ಕಟ್ಟೆ. ಗೋಕಟ್ಟೆ ಸೇರಿದಂತೆ ಎಲ್ಲೂ ನೀರು ಸಿಗುತ್ತಿಲ್ಲಾ ಇಂದರಿಂದ ಪ್ರಾಣಿ ಪಕ್ಷಿಗಳ ಸಾವನ್ನಪ್ಪುತ್ತಿದ್ದು ಇದರಿಂದ ಪಕ್ಷೀಯ ಸಂಕುಲ ಕ್ಷೆಣಿಸುತ್ತಿದೆ.. ಮಾನವರಾದ ನಾವು ಇದನ್ನು ಅರಿತು. ಮನೆಯ ಮೇಲೆ ಕಾಂಪೌಂಡ್ ಮೇಲೆ ಮನೆಯ ಮುಂದೆ ಪಕ್ಷಿಗಳು ಇರುವಂತಹ ಗಿಡ ಗಳನ್ನು ಗುರುತಿಸಿ ಇಂತಹ ಸ್ಥಳಗಳಲ್ಲಿ ನೀರು ಕಾಳುಗಳನ್ನು ಇಡುವ ಮೂಲಕ ಅಳಿದುಳಿದ ಪಕ್ಷಗಳ ಸಂಕುಲವನ್ನು ಉಳಿಸಬೇಕಿದೆ. ನಾವು ಎಲ್ಲ ಕಡೆನೂ ನೀರು ಇಡಲಾಗದು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರು ಅವಕಾಶ ಸಿಗು ಕಡೆ ನೀರು ಕಾಳು ವ್ಯವಸ್ಥೆ ಮಾಡಿದರೆ ಪಕ್ಷಿಗಳಿಗೆ ಅನುಕೂಲವಾಗುತ್ತದೆ. ಪ್ರಮುಖ್ಯವಾಗಿ ಈಗ ಈ ನಗರದಲ್ಲಿ ಇರುವುದು ಒಂದೇ ಉದ್ಯಾನವನ ವೃಕ್ಷ ಮಾತೇ ಸಾಲುಮರದ ತಿಮ್ಮಕ್ಕ ಉದ್ಯಾನವನ ಉದ್ಯಾನವನಕ್ಕೆ ಬರುವಂತಹ ಸಾರ್ವಜನಿಕರು ಪ್ಲಾಸ್ಟಿಕ್ ಬಾಟಲಿ,ಪ್ಲಾಸ್ಟಿಕ್ ಕವರ್ ಕಸದ ತ್ಯಾಜ್ಯವನ್ನ ಎಲ್ಲಂದರೆ ಹಾಕ ಇಲ್ಲಿನ ಸುಂದರ ಪರಿಸರವನ್ನ ಹಾಳು ಮಾಡದಿರಿ.. ಕಸದ ತ್ಯಾಜ್ಯವನ್ನು ಹಾಕಲು ಕೆಲವು ಕಡೆ ಕಸದ ಬುಟ್ಟಿಗಳನ್ನು ಇಡಲಾಗಿದೆ.ನೀವು ತಂದಂತಹ ಪ್ಲಾಸ್ಟಿಕ್ ಬಾಟಲಿ ಕವರ್ ಎಲ್ಲವನ್ನ ಕಸದ ತೊಟ್ಟಿ ಒಳಗೆ ಹಾಕಿ ಪರಿಸರವನ್ನ ಸ್ವಚ್ಛವಾಗಿ ಇಡಲು ಪ್ರಯತ್ನ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇನ್ನರ್ವಿಲ್ ಕ್ಲಬ್ ನ ಖಜಾಂಚಿ ಡಾ. ಕವಿತಾ ನಾಗೇಶ್ ಮಾತನಾಡಿ, ಮಾನವನ ಆಹಾರ ಸರಪಳಿಯಲ್ಲಿ ಪ್ರಾಣಿ-ಪಕ್ಷಿಗಳ ಪ್ರಮುಖ ಪಾತ್ರವಿದೆ. ಇಂತಹ ಪ್ರಾಣಿ ಪಕ್ಷಿ ಉಳಿವಿಗಾಗಿ ನೀರು ಕಾಳು ಆಹಾರಗಳನ್ನು ಇಡುವ ಮೂಲಕ. ಪ್ರಾಣಿ ಪಕ್ಷಿಗಳ ಸಂಕುಲನ ಉಳಿಸಬೇಕಿದೆ.. ಈಗ ನಗರದಲ್ಲಿ ಸಾಕಷ್ಟು ಕೋತಿಗಳು ಆಹಾರಕ್ಕಾಗಿ ಮನೆ ಒಳಗೆ ನುಗ್ಗುತ್ತಿವೆ. ಮನೆಯ ಮೇಲೆ ಅವುಳಿಗಾಗಿನೇ ನೀರು ಆಹಾರ ಹಣ್ಣುಗಳ ಇಟ್ಟರೆ ಅವುಗಳನ್ನು ತಿಂದು ಜೀವ ಉಳಿಸಿಕೊಳ್ಳುತ್ತವೆ ಎಂದರು.. ಶುಭಸೋಮುಶೇಖರ್ ಮಾತನಾಡಿ. ಕಳೆದ ವರ್ಷವೂ ಸಹ ಇದೇ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ಕಾಳು ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು ಒಂದು ತಿಂಗಳ ವರೆಗೂ ನಾವು ಬಂದು ನೀರು ಕಾಳಿಗಳನ್ನು ಹಾಕುತ್ತಿದ್ದೆವು. ಇಂದು ಸಹ ಇದೇ ರೀತಿಯಾಗಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ನೀರು ಕಾಳಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.. ಈ ಕಾರ್ಯಕ್ರಮದಲ್ಲಿ ಇನ್ನರ್ವಿಲ್ ಕ್ಲಬ್ ನ ಕಾರ್ಯದರ್ಶಿ ಡಾ. ವಿದ್ಯಾಐತಾಳ್ ಸದಸ್ಯರಾದ ನೀನಾ ವಿನಯ ಕುಮಾರ್. ಮೀರಾ ರಮೇಶ್ ನಳಿನ ಬಾಬು ಯತೀಶ್ ಸೇರಿದಂತೆ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಇದ್ದರು..1