logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಉತ್ತಮ ಸ್ಪಂದನೆ: ನಗರದಲ್ಲಿ ಇದುವರೆಗೆ 827 ಖಾಲಿ ನಿವೇಶನಗಳ ಸ್ವಚ್ಛತೆ, ಮಾಲೀಕರಿಂದಲೇ 815 ಸೈಟ್‌ಗಳ ಕಸ ತೆರವು: ಆಯುಕ್ತ ಕೆ.ಎನ್. ರಮೇಶ್ ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಪರಿಸರ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರಿಂದ ಹಾಗೂ ನಿವೇಶನ ಮಾಲೀಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರ ಸೂಚನೆ ಮೇರೆಗೆ ಪಾಲಿಕೆಯ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರ ನೇತೃತ್ವದಲ್ಲಿ ಖಾಲಿ ನಿವೇಶನಗಳ ತ್ಯಾಜ್ಯ ಮತ್ತು ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ತೀವ್ರಗೊಂಡಿದ್ದು, ನಿವೇಶನಗಳ ಮಾಲೀಕರು ಸ್ವಯಂಪ್ರೇರಿತರಾಗಿ ಕೈಜೋಡಿಸುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,847 ಖಾಲಿ ನಿವೇಶನಗಳನ್ನು ಗುರುತಿಸಲಾಗಿದ್ದು, ಈವರೆಗೆ 300 ನಿವೇಶನಗಳ ಮಾಲೀಕರಿಗೆ ಸ್ವಚ್ಛತೆಗಾಗಿ ನೋಟಿಸ್ ಜಾರಿ ಮಾಡಲಾಗಿದೆ. ಪಾಲಿಕೆಯ ಜಾಗೃತಿ ಹಾಗೂ ನೋಟಿಸ್‌ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಇದುವರೆಗೆ 1,847 ಖಾಲಿ ನಿವೇಶನಗಳ ಪೈಕಿ 815 ನಿವೇಶನಗಳನ್ನು ಸ್ವತಃ ಮಾಲೀಕರೇ ಸ್ವಚ್ಛಗೊಳಿಸಿದ್ದಾರೆ. ಮುಂದುವರೆದು ನೋಟಿಸ್ ಗೆ ಸ್ಪಂದಿಸದ 12 ಖಾಲಿ ನಿವೇಶನಗಳನ್ನು ಪಾಲಿಕೆ ವತಿಯಿಂದಲೇ ಸ್ವಚ್ಛಗೊಳಿಸಲಾಗಿದೆ. ಪ್ರಸ್ತುತ ಇನ್ನೂ 1,020 ನಿವೇಶನಗಳ ಸ್ವಚ್ಛತೆ ಬಾಕಿಯಿದ್ದು, ಉಳಿದ 738 ನಿವೇಶನಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಆಯುಕ್ತರು ತಿಳಿಸಿದರು.

10 hrs ago
user_ಶಿವನಿ
ಶಿವನಿ
Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
10 hrs ago

‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಉತ್ತಮ ಸ್ಪಂದನೆ: ನಗರದಲ್ಲಿ ಇದುವರೆಗೆ 827 ಖಾಲಿ ನಿವೇಶನಗಳ ಸ್ವಚ್ಛತೆ, ಮಾಲೀಕರಿಂದಲೇ 815 ಸೈಟ್‌ಗಳ ಕಸ ತೆರವು: ಆಯುಕ್ತ ಕೆ.ಎನ್. ರಮೇಶ್ ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಪರಿಸರ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರಿಂದ ಹಾಗೂ ನಿವೇಶನ ಮಾಲೀಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರ ಸೂಚನೆ ಮೇರೆಗೆ ಪಾಲಿಕೆಯ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರ ನೇತೃತ್ವದಲ್ಲಿ ಖಾಲಿ ನಿವೇಶನಗಳ ತ್ಯಾಜ್ಯ ಮತ್ತು ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ತೀವ್ರಗೊಂಡಿದ್ದು, ನಿವೇಶನಗಳ ಮಾಲೀಕರು ಸ್ವಯಂಪ್ರೇರಿತರಾಗಿ ಕೈಜೋಡಿಸುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,847 ಖಾಲಿ ನಿವೇಶನಗಳನ್ನು ಗುರುತಿಸಲಾಗಿದ್ದು, ಈವರೆಗೆ 300 ನಿವೇಶನಗಳ ಮಾಲೀಕರಿಗೆ ಸ್ವಚ್ಛತೆಗಾಗಿ ನೋಟಿಸ್ ಜಾರಿ ಮಾಡಲಾಗಿದೆ. ಪಾಲಿಕೆಯ ಜಾಗೃತಿ ಹಾಗೂ ನೋಟಿಸ್‌ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಇದುವರೆಗೆ 1,847 ಖಾಲಿ ನಿವೇಶನಗಳ ಪೈಕಿ 815 ನಿವೇಶನಗಳನ್ನು ಸ್ವತಃ ಮಾಲೀಕರೇ ಸ್ವಚ್ಛಗೊಳಿಸಿದ್ದಾರೆ. ಮುಂದುವರೆದು ನೋಟಿಸ್ ಗೆ ಸ್ಪಂದಿಸದ 12 ಖಾಲಿ ನಿವೇಶನಗಳನ್ನು ಪಾಲಿಕೆ ವತಿಯಿಂದಲೇ ಸ್ವಚ್ಛಗೊಳಿಸಲಾಗಿದೆ. ಪ್ರಸ್ತುತ ಇನ್ನೂ 1,020 ನಿವೇಶನಗಳ ಸ್ವಚ್ಛತೆ ಬಾಕಿಯಿದ್ದು, ಉಳಿದ 738 ನಿವೇಶನಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಆಯುಕ್ತರು ತಿಳಿಸಿದರು.

More news from ಕರ್ನಾಟಕ and nearby areas
  • ನಿಯಮಾನುಸಾರ ಪರಿಶೀಲಿಸಿ ಬರ ಪೀಡಿತ ತಾಲ್ಲೂಕು ಘೋಷಣೆ:ಸಿಎಂ ಡಿಕೆ ಶಿವಕುಮಾರ್ ಬೆಂಗಳೂರು:ರಾಜ್ಯದಲ್ಲಿ ಈಗಾಗಲೇ ಉಪಮುಖ್ಯಂತ್ರಿ ಡಾ. ಜಿ.ಪರಮೇಶ್ವರ್ ಅವರು 102 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದಾರೆ. ಇನ್ನೂ ಕೆಲವು ತಾಲೂಕುಗಳ ಕುರಿತು ಪರಿಶೀಲನೆ ನಡೆಯುತ್ತಿದ್ದು, ಪ್ರತಿ ತಾಲೂಕಿನಿಂದ ನಿರಂತರವಾಗಿ ವರದಿ ಪಡೆದು, ನಿಯಮಾನುಸಾರ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸದಾಶಿವನಗರದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಕೇಂದ್ರ ಸರಕಾರದ ತಂಡ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ಸಮರ್ಥನೆ ಮಾಡಿಕೊಳ್ಳಬೇಕಿರುವುದರಿಂದ ಬರ ಘೋಷಣೆಯ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು. ಧಾರವಾಡ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬರ ಘೋಷಣೆಗೆ ಸಂಬಂಧಿಸಿದಂತೆ ಮಾಹಿತಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ ಅವರು, ಬಾಗಲಕೋಟೆಗೂ ಭೇಟಿ ನೀಡುವುದಾಗಿ ಹೇಳಿದರು. ಯಾವ ತಾಲೂಕಿನಲ್ಲಿ, ಯಾವ ಜಿಲ್ಲೆಯಲ್ಲಿ ನಿಜವಾಗಿಯೂ ಬರ ಪರಿಸ್ಥಿತಿ ಉಂಟಾಗಿದೆಯೋ ಅದನ್ನು ಪರಿಶೀಲಿಸುತ್ತೇವೆ. ನನಗೆ ನನ್ನದೇ ಕ್ಷೇತ್ರ ಎಂಬ ಯಾವುದೇ ಪ್ರಶ್ನೆಯಿಲ್ಲ. ಬರ ಘೋಷಣೆಗೆ ಕೇಂದ್ರ ಸರಕಾರದ ನಿಯಮಗಳಿವೆ. ಕಂದಾಯ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಒಟ್ಟಾಗಿ ಪರಿಶೀಲನೆ ನಡೆಸಿ, ನಿಯಮದ ಪ್ರಕಾರವೇ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು. *ರಾಹುಲ್ ವಿರುದ್ಧ ಎಫ್ಐಆರ್ ಗೆ ಖಂಡನೆ* ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನು ರಾಜಕೀಯ ಪ್ರೇರಿತ ಕ್ರಮ ಎಂದು ಎಂದು ಹೇಳಿದರು. ‘ರಾಹುಲ್ ಗಾಂಧಿ ಅವರು ತಪ್ಪೇನು ಮಾಡಿದ್ದಾರೆ ? ಯುವಜನತೆ ಮತ್ತು ದೇಶಕ್ಕಾಗಿ ಹೋರಾಡುವುದು ಅವರ ಹಕ್ಕು. ಅದು ಸಂವಿಧಾನ ನೀಡಿರುವ ಹಕ್ಕು. ಅವರು ಹೋರಾಡುತ್ತಿರುವ ವಿಚಾರದಲ್ಲಿ ನಾವೆಲ್ಲರೂ ಅವರೊಂದಿಗೆ ಇದ್ದೇವೆ’ ಎಂದು ಹೇಳಿದರು. ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು, ‘ಅವರು ಪಾದಯಾತ್ರೆ ಮಾಡುವುದು ಒಳ್ಳೆಯದೇ. ಅವರು ನೀಡುತ್ತಿರುವುದು ನಮಗೆ ಒಳ್ಳೆಯ ಅವಕಾಶ. ಅದಕ್ಕೆ ಬೇಕಾದ ಪ್ರತಿತಂತ್ರ ರೂಪಿಸಲು ನಮ್ಮ ಪಕ್ಷವೂ ಸಿದ್ಧವಿದೆ’ ಎಂದು ಹೇಳಿದರು.
    1
    ನಿಯಮಾನುಸಾರ ಪರಿಶೀಲಿಸಿ ಬರ ಪೀಡಿತ ತಾಲ್ಲೂಕು ಘೋಷಣೆ:ಸಿಎಂ ಡಿಕೆ ಶಿವಕುಮಾರ್
ಬೆಂಗಳೂರು:ರಾಜ್ಯದಲ್ಲಿ ಈಗಾಗಲೇ  ಉಪಮುಖ್ಯಂತ್ರಿ ಡಾ. ಜಿ.ಪರಮೇಶ್ವರ್ ಅವರು 102 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದಾರೆ. ಇನ್ನೂ ಕೆಲವು ತಾಲೂಕುಗಳ ಕುರಿತು ಪರಿಶೀಲನೆ ನಡೆಯುತ್ತಿದ್ದು, ಪ್ರತಿ ತಾಲೂಕಿನಿಂದ ನಿರಂತರವಾಗಿ ವರದಿ ಪಡೆದು, ನಿಯಮಾನುಸಾರ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸದಾಶಿವನಗರದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು.
ಕೇಂದ್ರ ಸರಕಾರದ ತಂಡ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ಸಮರ್ಥನೆ ಮಾಡಿಕೊಳ್ಳಬೇಕಿರುವುದರಿಂದ ಬರ ಘೋಷಣೆಯ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು.
ಧಾರವಾಡ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬರ ಘೋಷಣೆಗೆ ಸಂಬಂಧಿಸಿದಂತೆ ಮಾಹಿತಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ ಅವರು, ಬಾಗಲಕೋಟೆಗೂ ಭೇಟಿ ನೀಡುವುದಾಗಿ ಹೇಳಿದರು.
ಯಾವ ತಾಲೂಕಿನಲ್ಲಿ, ಯಾವ ಜಿಲ್ಲೆಯಲ್ಲಿ ನಿಜವಾಗಿಯೂ ಬರ ಪರಿಸ್ಥಿತಿ ಉಂಟಾಗಿದೆಯೋ ಅದನ್ನು ಪರಿಶೀಲಿಸುತ್ತೇವೆ. ನನಗೆ ನನ್ನದೇ ಕ್ಷೇತ್ರ ಎಂಬ ಯಾವುದೇ ಪ್ರಶ್ನೆಯಿಲ್ಲ. ಬರ ಘೋಷಣೆಗೆ ಕೇಂದ್ರ ಸರಕಾರದ ನಿಯಮಗಳಿವೆ. ಕಂದಾಯ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಒಟ್ಟಾಗಿ ಪರಿಶೀಲನೆ ನಡೆಸಿ, ನಿಯಮದ ಪ್ರಕಾರವೇ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.
*ರಾಹುಲ್ ವಿರುದ್ಧ ಎಫ್ಐಆರ್ ಗೆ ಖಂಡನೆ*
ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನು ರಾಜಕೀಯ ಪ್ರೇರಿತ ಕ್ರಮ ಎಂದು ಎಂದು ಹೇಳಿದರು.
‘ರಾಹುಲ್ ಗಾಂಧಿ ಅವರು ತಪ್ಪೇನು ಮಾಡಿದ್ದಾರೆ ? ಯುವಜನತೆ ಮತ್ತು ದೇಶಕ್ಕಾಗಿ ಹೋರಾಡುವುದು ಅವರ ಹಕ್ಕು. ಅದು ಸಂವಿಧಾನ ನೀಡಿರುವ ಹಕ್ಕು. ಅವರು ಹೋರಾಡುತ್ತಿರುವ ವಿಚಾರದಲ್ಲಿ ನಾವೆಲ್ಲರೂ ಅವರೊಂದಿಗೆ ಇದ್ದೇವೆ’ ಎಂದು ಹೇಳಿದರು.
ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು, ‘ಅವರು ಪಾದಯಾತ್ರೆ ಮಾಡುವುದು ಒಳ್ಳೆಯದೇ. ಅವರು ನೀಡುತ್ತಿರುವುದು ನಮಗೆ ಒಳ್ಳೆಯ ಅವಕಾಶ. ಅದಕ್ಕೆ ಬೇಕಾದ ಪ್ರತಿತಂತ್ರ ರೂಪಿಸಲು ನಮ್ಮ ಪಕ್ಷವೂ ಸಿದ್ಧವಿದೆ’ ಎಂದು ಹೇಳಿದರು.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    10 hrs ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    22 hrs ago
  • ಬಾಯಿಯ ತುದಿಯಲ್ಲಿ ಎಷ್ಟು ಸೊಗಸಾಗಿ ಗೂಡು ಕಟ್ಟಿದ ಪಕ್ಷಿಯ ನೋಟ #onlinetv247
    1
    ಬಾಯಿಯ ತುದಿಯಲ್ಲಿ ಎಷ್ಟು ಸೊಗಸಾಗಿ ಗೂಡು ಕಟ್ಟಿದ ಪಕ್ಷಿಯ ನೋಟ  #onlinetv247
    user_Onlinetv24x7
    Onlinetv24x7
    ತುಮಕೂರು, ತುಮಕೂರು, ಕರ್ನಾಟಕ•
    2 hrs ago
  • ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ BLA-2 ಕಾರ್ಯಾಗಾರ ಹಾಗೂ ನಗರ ಮತ್ತು ಮಂಡಲ ಪದಾಧಿಕಾರಿಗಳ ಪ್ರಮುಖ ಸಭೆಯನ್ನು
    1
    ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ 
BLA-2 ಕಾರ್ಯಾಗಾರ ಹಾಗೂ ನಗರ ಮತ್ತು ಮಂಡಲ ಪದಾಧಿಕಾರಿಗಳ ಪ್ರಮುಖ ಸಭೆಯನ್ನು
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    2 hrs ago
  • ದೇಶಿಹಳ್ಳಿ ಆಶ್ರಯ ಬಡಾವಣೆಯಲ್ಲಿ ಬಡವರ ಮನೆ ತೆರವುಕ್ಕೆ ನೋಟಿಸ್: 40 ಅಡಿ ರಸ್ತೆ ಎಲ್ಲಿದೆ? ದಾಖಲೆ ತೋರಿಸಿ; ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ ಬಂಗಾರಪೇಟೆ: ಸರ್ಕಾರದ ಆಶ್ರಯ ಯೋಜನೆಯಡಿ 1992ರಲ್ಲಿ ನಿವೇಶನ ಪಡೆದು, ಗ್ರಾಮ ಪಂಚಾಯಿತಿಯ ಅನುಮತಿ, ಇ-ಸ್ವತ್ತು, ತೆರಿಗೆ ಪಾವತಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಕಳೆದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಇದೀಗ ಏಕಾಏಕಿ ಒತ್ತುವರಿ ಆರೋಪದ ನೋಟಿಸ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಹೊರವಲಯದ ದೇಶಿಹಳ್ಳಿ ಗ್ರಾಮದ ಆಶ್ರಯ ಬಡಾವಣೆಯಲ್ಲಿ 1992ರಲ್ಲಿ ಅಂದಿನ ಮಂಡಲ ಪಂಚಾಯಿತಿಯಿಂದ ಬಡವರಿಗೆ ಉಚಿತವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಬಳಿಕ ಫಲಾನುಭವಿಗಳು ಗ್ರಾಮ ಪಂಚಾಯಿತಿಯಿಂದ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇ-ಸ್ವತ್ತು ಮಾಡಲಾಗಿದ್ದು, ಪ್ರತಿವರ್ಷ ತೆರಿಗೆ ಪಾವತಿಸುತ್ತಿದ್ದಾರೆ. ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕವನ್ನೂ ಸಂಬಂಧಪಟ್ಟ ಇಲಾಖೆಗಳು ಕಲ್ಪಿಸಿವೆ. ಇಷ್ಟೆಲ್ಲ ದಾಖಲೆಗಳಿದ್ದರೂ ಇದೀಗ ಸರ್ವೆ ನಂಬರ್ 15 ಹಾಗೂ 103ರ ವ್ಯಾಪ್ತಿಯ ಮನೆಗಳು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿವೆ ಎಂದು ಆರೋಪಿಸಿ ತೆರವು ನೋಟಿಸ್ ನೀಡಿರುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 40 ಅಡಿ ರಸ್ತೆ ಎಲ್ಲಿದೆ? ‘ಬಡವರ ಮನೆಗಳ ಮುಂದೆ 40 ಅಡಿ ರಸ್ತೆ ಅಗಲೀಕರಣ ಮಾಡುವುದಾಗಿ ಹೇಳಲಾಗುತ್ತಿದೆ. ಆದರೆ ನಕ್ಷೆಯಲ್ಲಿ 40 ಅಡಿ ರಸ್ತೆ ಎಲ್ಲಿದೆ? ಅದರ ದಾಖಲೆ, ಯೋಜನೆ ಅಥವಾ ಮೂಲ ನಕ್ಷೆಯನ್ನು ಅಧಿಕಾರಿಗಳು ತೋರಿಸಬೇಕು. ಹಲವು ವರ್ಷಗಳಿಂದ ಜನರು ವಾಸಿಸುತ್ತಿರುವ ಮನೆಗಳನ್ನು ಏಕಾಏಕಿ ಒತ್ತುವರಿ ಎಂದು ಗುರುತಿಸುವುದು ಯಾವ ನ್ಯಾಯ?’ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್ ಪ್ರಶ್ನಿಸಿದರು. ಸ್ಥಳಕ್ಕೆ ಕೆಸರನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮುನಿರಾಜು ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು. ಬಿ.ವಿ.ಮಹೇಶ್ ಮಾತನಾಡಿ, ‘30–35 ವರ್ಷಗಳಿಂದ ಬಡವರು ಇಲ್ಲಿ ವಾಸಿಸುತ್ತಿದ್ದಾರೆ. ಅಂದಿನ ಮಂಡಲ ಪಂಚಾಯಿತಿ ಹಾಗೂ ತಾಲೂಕು ಆಡಳಿತದ ದಾಖಲೆಗಳ ಆಧಾರದಲ್ಲೇ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯೇ ಮನೆ ನಿರ್ಮಾಣಕ್ಕೆ ಪರವಾನಗಿ ನೀಡಿ, ಇ-ಸ್ವತ್ತು ಮಾಡಿದೆ. ತೆರಿಗೆ ವಸೂಲಿ ಮಾಡಿದೆ. ನೀರು ಮತ್ತು ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ. ಈಗ ಅದೇ ಮನೆಗಳನ್ನು ಒತ್ತುವರಿ ಎಂದು ಹೇಳುವುದು ಬಡವರ ಬದುಕಿನೊಂದಿಗೆ ಚೆಲ್ಲಾಟವಾಡಿದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ತಾಲೂಕಿನ ವಿವಿಧೆಡೆ ಸರ್ಕಾರಿ ಗೋಮಾಳ ಒತ್ತುವರಿ ಪ್ರಕರಣಗಳಿವೆ. ಅವುಗಳ ವಿರುದ್ಧ ಕ್ರಮ ಕೈಗೊಳ್ಳದೆ, ದೇಶಿಹಳ್ಳಿಯ ಬಡವರ ಮನೆಗಳ ತೆರವಿಗೆ ಮುಂದಾಗಿರುವುದು ರಾಜಕೀಯ ಪ್ರೇರಿತ ಕ್ರಮದ ಅನುಮಾನ ಮೂಡಿಸಿದೆ. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ದಾಖಲೆ ಪರಿಶೀಲಿಸಿ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಇಲ್ಲವಾದರೆ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು. ನೋಟಿಸ್ ನೀಡಿ ಅಧಿಕಾರಿಗಳೇ ಗೈರು! ದೇಶಿಹಳ್ಳಿ ಗ್ರಾಮದ ಸರ್ವೆ ನಂಬರ್ 15 ಮತ್ತು 13ರ ಸರ್ಕಾರಿ ಗೋಮಾಳ ಜಮೀನುಗಳ ಒತ್ತುವರಿ ತೆರವಿಗೆ ಸೆ.7ರಂದು ಕ್ರಮ ನಿಗದಿಪಡಿಸಲಾಗಿತ್ತು. ಆದರೆ ಸೋಮವಾರ ಏಕಾಏಕಿ ನೋಟಿಸ್ ನೀಡಿ ಮರುದಿನವೇ ಸರ್ವೆ ನಡೆಸಿ ತೆರವುಗೊಳಿಸಲು ಮುಂದಾಗಿರುವುದು ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದೆ. ಲೋಕಾಯುಕ್ತದ ಆದೇಶದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ, ಸ್ಥಳೀಯರು ದಾಖಲೆಗಳ ಸಮಗ್ರ ಪರಿಶೀಲನೆಗೆ ಆಗ್ರಹಿಸಿದರು. ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಗ್ರಾಮಸ್ಥೆ ಲಕ್ಷ್ಮಮ್ಮ ಮಾತನಾಡಿ, ‘ನಾವು ಬಡವರು. ಕೂಲಿ ಕೆಲಸ ಮಾಡಿ ಮನೆ ಕಟ್ಟಿಕೊಂಡಿದ್ದೇವೆ. ಸರ್ಕಾರ ಹಾಗೂ ಗ್ರಾಮ ಪಂಚಾಯಿತಿಯ ದಾಖಲೆಗಳ ಆಧಾರದಲ್ಲೇ ಮನೆ ನಿರ್ಮಿಸಿಕೊಂಡಿದ್ದೇವೆ. ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಈಗ ಏಕಾಏಕಿ ಮನೆ ತೆರವು ಮಾಡುವಂತೆ ಹೇಳಿದರೆ ನಾವು ಎಲ್ಲಿಗೆ ಹೋಗಬೇಕು? ಈ ರಸ್ತೆಗೆ 40 ಅಡಿ ಅಗಲೀಕರಣದ ಅಗತ್ಯವೇ ಇಲ್ಲ’ ಎಂದು ಕಣ್ಣೀರಿಟ್ಟರು. ಹೇಮಾಬಾಯಿ ಮಾತನಾಡಿ, ‘ಹತ್ತು ವರ್ಷ ದುಡಿದು ಹಣ ಕೂಡಿಸಿ ಲಕ್ಷಾಂತರ ರೂಪಾಯಿ ನೀಡಿ ಸೈಟ್ ಖರೀದಿಸಿದ್ದೇವೆ. ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವೆ. ಈಗ ಬಂದು ಇದು ಸರ್ಕಾರಿ ಜಾಗ, ತೆರವು ಮಾಡಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ನ್ಯಾಯ?’ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಮುಖಂಡರಾದ ಹುಣಸನಹಳ್ಳಿ ಶ್ರೀನಿವಾಸ, ನೆರನಹಳ್ಳಿ ಹನುಮಪ್ಪ, ಚಿಕ್ಕವಲಗಮಾದಿ ಚೌಡಪ್ಪ, ಕೆಸರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಂ.ಮಂಜುನಾಥ್, ದಲಿತ ರೈತ ಸೇನೆ ರಾಜ್ಯ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್, ಪುರಸಭೆ ಮಾಜಿ ಸದಸ್ಯ ಪ್ರಭಾಕರ ರಾವ್, ದೇಶಿಹಳ್ಳಿ ಶ್ರೀನಿವಾಸ್, ಸುರೇಂದ್ರ, ಚಂದ್ರಪ್ಪ, ಬೂದಿಕೋಟೆ ಶಿವು, ಚಂದ್ರಶೇಖರ್, ಕೊಪ್ಪ ಜಯರಾಮ್, ಹಿರೇಕರಪನಹಳ್ಳಿ ಮುನಿರಾಜು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಇದ್ದರು. ಬಡವರ ಬದುಕು ಉಳಿಸುವುದು ಆಡಳಿತದ ಕರ್ತವ್ಯ ದಶಕಗಳಿಂದ ತೆರಿಗೆ ಪಡೆದು, ದಾಖಲೆ ನೀಡಿ, ಮೂಲಸೌಕರ್ಯ ಕಲ್ಪಿಸಿದ ಬಳಿಕ ಅದೇ ಮನೆಗಳನ್ನು ಒತ್ತುವರಿ ಎಂದು ಗುರುತಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕಾಗಿದೆ. ರಸ್ತೆ ಅಗಲೀಕರಣ ನಿಜವಾಗಿಯೂ ಅಗತ್ಯವಿದ್ದರೆ ಅದರ ಮೂಲ ನಕ್ಷೆ, ಯೋಜನೆ ಹಾಗೂ ಕಾನೂನುಬದ್ಧ ದಾಖಲೆಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಇಲ್ಲವಾದರೆ ಬಡವರ ಮನೆಗಳ ಮೇಲೆ ಕೈ ಹಾಕುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂಬುದು ಗ್ರಾಮಸ್ಥರ ಸ್ಪಷ್ಟ ಎಚ್ಚರಿಕೆಯಾಗಿದೆ.
    1
    ದೇಶಿಹಳ್ಳಿ ಆಶ್ರಯ ಬಡಾವಣೆಯಲ್ಲಿ ಬಡವರ ಮನೆ ತೆರವುಕ್ಕೆ ನೋಟಿಸ್: 40 ಅಡಿ ರಸ್ತೆ ಎಲ್ಲಿದೆ? ದಾಖಲೆ ತೋರಿಸಿ; ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ
ಬಂಗಾರಪೇಟೆ: ಸರ್ಕಾರದ ಆಶ್ರಯ ಯೋಜನೆಯಡಿ 1992ರಲ್ಲಿ ನಿವೇಶನ ಪಡೆದು, ಗ್ರಾಮ ಪಂಚಾಯಿತಿಯ ಅನುಮತಿ, ಇ-ಸ್ವತ್ತು, ತೆರಿಗೆ ಪಾವತಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಕಳೆದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಇದೀಗ ಏಕಾಏಕಿ ಒತ್ತುವರಿ ಆರೋಪದ ನೋಟಿಸ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಹೊರವಲಯದ ದೇಶಿಹಳ್ಳಿ ಗ್ರಾಮದ ಆಶ್ರಯ ಬಡಾವಣೆಯಲ್ಲಿ 1992ರಲ್ಲಿ ಅಂದಿನ ಮಂಡಲ ಪಂಚಾಯಿತಿಯಿಂದ ಬಡವರಿಗೆ ಉಚಿತವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಬಳಿಕ ಫಲಾನುಭವಿಗಳು ಗ್ರಾಮ ಪಂಚಾಯಿತಿಯಿಂದ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇ-ಸ್ವತ್ತು ಮಾಡಲಾಗಿದ್ದು, ಪ್ರತಿವರ್ಷ ತೆರಿಗೆ ಪಾವತಿಸುತ್ತಿದ್ದಾರೆ. ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕವನ್ನೂ ಸಂಬಂಧಪಟ್ಟ ಇಲಾಖೆಗಳು ಕಲ್ಪಿಸಿವೆ.
ಇಷ್ಟೆಲ್ಲ ದಾಖಲೆಗಳಿದ್ದರೂ ಇದೀಗ ಸರ್ವೆ ನಂಬರ್ 15 ಹಾಗೂ 103ರ ವ್ಯಾಪ್ತಿಯ ಮನೆಗಳು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿವೆ ಎಂದು ಆರೋಪಿಸಿ ತೆರವು ನೋಟಿಸ್ ನೀಡಿರುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
40 ಅಡಿ ರಸ್ತೆ ಎಲ್ಲಿದೆ?
‘ಬಡವರ ಮನೆಗಳ ಮುಂದೆ 40 ಅಡಿ ರಸ್ತೆ ಅಗಲೀಕರಣ ಮಾಡುವುದಾಗಿ ಹೇಳಲಾಗುತ್ತಿದೆ. ಆದರೆ ನಕ್ಷೆಯಲ್ಲಿ 40 ಅಡಿ ರಸ್ತೆ ಎಲ್ಲಿದೆ? ಅದರ ದಾಖಲೆ, ಯೋಜನೆ ಅಥವಾ ಮೂಲ ನಕ್ಷೆಯನ್ನು ಅಧಿಕಾರಿಗಳು ತೋರಿಸಬೇಕು. ಹಲವು ವರ್ಷಗಳಿಂದ ಜನರು ವಾಸಿಸುತ್ತಿರುವ ಮನೆಗಳನ್ನು ಏಕಾಏಕಿ ಒತ್ತುವರಿ ಎಂದು ಗುರುತಿಸುವುದು ಯಾವ ನ್ಯಾಯ?’ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್ ಪ್ರಶ್ನಿಸಿದರು.
ಸ್ಥಳಕ್ಕೆ ಕೆಸರನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮುನಿರಾಜು ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.
ಬಿ.ವಿ.ಮಹೇಶ್ ಮಾತನಾಡಿ, ‘30–35 ವರ್ಷಗಳಿಂದ ಬಡವರು ಇಲ್ಲಿ ವಾಸಿಸುತ್ತಿದ್ದಾರೆ. ಅಂದಿನ ಮಂಡಲ ಪಂಚಾಯಿತಿ ಹಾಗೂ ತಾಲೂಕು ಆಡಳಿತದ ದಾಖಲೆಗಳ ಆಧಾರದಲ್ಲೇ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯೇ ಮನೆ ನಿರ್ಮಾಣಕ್ಕೆ ಪರವಾನಗಿ ನೀಡಿ, ಇ-ಸ್ವತ್ತು ಮಾಡಿದೆ. ತೆರಿಗೆ ವಸೂಲಿ ಮಾಡಿದೆ. ನೀರು ಮತ್ತು ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ. ಈಗ ಅದೇ ಮನೆಗಳನ್ನು ಒತ್ತುವರಿ ಎಂದು ಹೇಳುವುದು ಬಡವರ ಬದುಕಿನೊಂದಿಗೆ ಚೆಲ್ಲಾಟವಾಡಿದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ತಾಲೂಕಿನ ವಿವಿಧೆಡೆ ಸರ್ಕಾರಿ ಗೋಮಾಳ ಒತ್ತುವರಿ ಪ್ರಕರಣಗಳಿವೆ. ಅವುಗಳ ವಿರುದ್ಧ ಕ್ರಮ ಕೈಗೊಳ್ಳದೆ, ದೇಶಿಹಳ್ಳಿಯ ಬಡವರ ಮನೆಗಳ ತೆರವಿಗೆ ಮುಂದಾಗಿರುವುದು ರಾಜಕೀಯ ಪ್ರೇರಿತ ಕ್ರಮದ ಅನುಮಾನ ಮೂಡಿಸಿದೆ. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ದಾಖಲೆ ಪರಿಶೀಲಿಸಿ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಇಲ್ಲವಾದರೆ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ನೋಟಿಸ್ ನೀಡಿ ಅಧಿಕಾರಿಗಳೇ ಗೈರು!
ದೇಶಿಹಳ್ಳಿ ಗ್ರಾಮದ ಸರ್ವೆ ನಂಬರ್ 15 ಮತ್ತು 13ರ ಸರ್ಕಾರಿ ಗೋಮಾಳ ಜಮೀನುಗಳ ಒತ್ತುವರಿ ತೆರವಿಗೆ ಸೆ.7ರಂದು ಕ್ರಮ ನಿಗದಿಪಡಿಸಲಾಗಿತ್ತು. ಆದರೆ ಸೋಮವಾರ ಏಕಾಏಕಿ ನೋಟಿಸ್ ನೀಡಿ ಮರುದಿನವೇ ಸರ್ವೆ ನಡೆಸಿ ತೆರವುಗೊಳಿಸಲು ಮುಂದಾಗಿರುವುದು ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದೆ. ಲೋಕಾಯುಕ್ತದ ಆದೇಶದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ, ಸ್ಥಳೀಯರು ದಾಖಲೆಗಳ ಸಮಗ್ರ ಪರಿಶೀಲನೆಗೆ ಆಗ್ರಹಿಸಿದರು.
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಗ್ರಾಮಸ್ಥೆ ಲಕ್ಷ್ಮಮ್ಮ ಮಾತನಾಡಿ, ‘ನಾವು ಬಡವರು. ಕೂಲಿ ಕೆಲಸ ಮಾಡಿ ಮನೆ ಕಟ್ಟಿಕೊಂಡಿದ್ದೇವೆ. ಸರ್ಕಾರ ಹಾಗೂ ಗ್ರಾಮ ಪಂಚಾಯಿತಿಯ ದಾಖಲೆಗಳ ಆಧಾರದಲ್ಲೇ ಮನೆ ನಿರ್ಮಿಸಿಕೊಂಡಿದ್ದೇವೆ. ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಈಗ ಏಕಾಏಕಿ ಮನೆ ತೆರವು ಮಾಡುವಂತೆ ಹೇಳಿದರೆ ನಾವು ಎಲ್ಲಿಗೆ ಹೋಗಬೇಕು? ಈ ರಸ್ತೆಗೆ 40 ಅಡಿ ಅಗಲೀಕರಣದ ಅಗತ್ಯವೇ ಇಲ್ಲ’ ಎಂದು ಕಣ್ಣೀರಿಟ್ಟರು.
ಹೇಮಾಬಾಯಿ ಮಾತನಾಡಿ, ‘ಹತ್ತು ವರ್ಷ ದುಡಿದು ಹಣ ಕೂಡಿಸಿ ಲಕ್ಷಾಂತರ ರೂಪಾಯಿ ನೀಡಿ ಸೈಟ್ ಖರೀದಿಸಿದ್ದೇವೆ. ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವೆ. ಈಗ ಬಂದು ಇದು ಸರ್ಕಾರಿ ಜಾಗ, ತೆರವು ಮಾಡಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ನ್ಯಾಯ?’ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಮುಖಂಡರಾದ ಹುಣಸನಹಳ್ಳಿ ಶ್ರೀನಿವಾಸ, ನೆರನಹಳ್ಳಿ ಹನುಮಪ್ಪ, ಚಿಕ್ಕವಲಗಮಾದಿ ಚೌಡಪ್ಪ, ಕೆಸರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಂ.ಮಂಜುನಾಥ್, ದಲಿತ ರೈತ ಸೇನೆ ರಾಜ್ಯ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್, ಪುರಸಭೆ ಮಾಜಿ ಸದಸ್ಯ ಪ್ರಭಾಕರ ರಾವ್, ದೇಶಿಹಳ್ಳಿ ಶ್ರೀನಿವಾಸ್, ಸುರೇಂದ್ರ, ಚಂದ್ರಪ್ಪ, ಬೂದಿಕೋಟೆ ಶಿವು, ಚಂದ್ರಶೇಖರ್, ಕೊಪ್ಪ ಜಯರಾಮ್, ಹಿರೇಕರಪನಹಳ್ಳಿ ಮುನಿರಾಜು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಇದ್ದರು.
ಬಡವರ ಬದುಕು ಉಳಿಸುವುದು ಆಡಳಿತದ ಕರ್ತವ್ಯ
ದಶಕಗಳಿಂದ ತೆರಿಗೆ ಪಡೆದು, ದಾಖಲೆ ನೀಡಿ, ಮೂಲಸೌಕರ್ಯ ಕಲ್ಪಿಸಿದ ಬಳಿಕ ಅದೇ ಮನೆಗಳನ್ನು ಒತ್ತುವರಿ ಎಂದು ಗುರುತಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕಾಗಿದೆ. ರಸ್ತೆ ಅಗಲೀಕರಣ ನಿಜವಾಗಿಯೂ ಅಗತ್ಯವಿದ್ದರೆ ಅದರ ಮೂಲ ನಕ್ಷೆ, ಯೋಜನೆ ಹಾಗೂ ಕಾನೂನುಬದ್ಧ ದಾಖಲೆಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಇಲ್ಲವಾದರೆ ಬಡವರ ಮನೆಗಳ ಮೇಲೆ ಕೈ ಹಾಕುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂಬುದು ಗ್ರಾಮಸ್ಥರ ಸ್ಪಷ್ಟ ಎಚ್ಚರಿಕೆಯಾಗಿದೆ.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    13 hrs ago
  • ಶ್ರೀ ಆದಿಶಕ್ತಿ ದ್ರೌಪತಾಂಭ ದೇವಿ ಜಯಂತ್ಯೋತ್ಸವ ಪ್ರಯುಕ್ತ ಕರಗ ಪೂಜಾರಿ ಕೃಷ್ಣಮೂರ್ತಿ ರವರಿಂದ ಅದ್ಧೂರಿ ಕಳಶೋತ್ಸವ ಬೇತಮಂಗಲ: ಐತಿಹಾಸಿಕ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಶ್ರೀ ಆದಿಶಕ್ತಿ ದ್ರೌಪತಾಂಭ ದೇವಿಯ ಜಯಂತ್ಯೋತ್ಸವದ ಪ್ರಯುಕ್ತ ಬೇತಮಂಗಲದ ಕರಗ ಪೂಜಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ವೈಭವದ ಕಳಶೋತ್ಸವ ಜರುಗಿತು. ಕಳಶ ಹೊತ್ತ ಪೂಜಾರಿಯವರು ಸಾಗಿದ ಮಾರ್ಗದುದ್ದಕ್ಕೂ ಭಕ್ತರು ರಂಗೋಲಿ ಹಾಕಿ, ಪುಷ್ಪವೃಷ್ಟಿ ಗರೆದು ಹಾಗೂ ಕರ್ಪೂರದಾರತಿ ಬೆಳಗಿ ಭಕ್ತಿ ಸಮರ್ಪಿಸಿದರು. ತಮಟೆ, ಮಂಗಳವಾದ್ಯಗಳ ನಿನಾದ ಮತ್ತು ಭಕ್ತರ ‘ಗೋವಿಂದಾ... ಗೋವಿಂದಾ’ ಎಂಬ ಜಯಘೋಷಗಳು ಮೆರವಣಿಗೆಗೆ ಕಳೆಗಟ್ಟಿದವು. ​ಈ ಧಾರ್ಮಿಕ ಸಂಭ್ರಮದಲ್ಲಿ ವಹ್ನಿಕುಲ ಸಮಾಜದ ಪ್ರಮುಖರು, ಗ್ರಾಮದ ಮುಖಂಡರು, ಮಹಿಳೆಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಭಕ್ತಾದಿಗಳಿಗೆ ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿತು.
    1
    ಶ್ರೀ ಆದಿಶಕ್ತಿ ದ್ರೌಪತಾಂಭ ದೇವಿ ಜಯಂತ್ಯೋತ್ಸವ ಪ್ರಯುಕ್ತ ಕರಗ ಪೂಜಾರಿ ಕೃಷ್ಣಮೂರ್ತಿ ರವರಿಂದ ಅದ್ಧೂರಿ ಕಳಶೋತ್ಸವ

ಬೇತಮಂಗಲ: ಐತಿಹಾಸಿಕ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಶ್ರೀ ಆದಿಶಕ್ತಿ ದ್ರೌಪತಾಂಭ ದೇವಿಯ ಜಯಂತ್ಯೋತ್ಸವದ ಪ್ರಯುಕ್ತ ಬೇತಮಂಗಲದ ಕರಗ ಪೂಜಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ವೈಭವದ ಕಳಶೋತ್ಸವ ಜರುಗಿತು. ಕಳಶ ಹೊತ್ತ ಪೂಜಾರಿಯವರು ಸಾಗಿದ ಮಾರ್ಗದುದ್ದಕ್ಕೂ ಭಕ್ತರು ರಂಗೋಲಿ ಹಾಕಿ, ಪುಷ್ಪವೃಷ್ಟಿ ಗರೆದು ಹಾಗೂ ಕರ್ಪೂರದಾರತಿ ಬೆಳಗಿ ಭಕ್ತಿ ಸಮರ್ಪಿಸಿದರು. ತಮಟೆ, ಮಂಗಳವಾದ್ಯಗಳ ನಿನಾದ ಮತ್ತು ಭಕ್ತರ ‘ಗೋವಿಂದಾ... ಗೋವಿಂದಾ’ ಎಂಬ ಜಯಘೋಷಗಳು ಮೆರವಣಿಗೆಗೆ ಕಳೆಗಟ್ಟಿದವು.
​ಈ ಧಾರ್ಮಿಕ ಸಂಭ್ರಮದಲ್ಲಿ ವಹ್ನಿಕುಲ ಸಮಾಜದ ಪ್ರಮುಖರು, ಗ್ರಾಮದ ಮುಖಂಡರು, ಮಹಿಳೆಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಭಕ್ತಾದಿಗಳಿಗೆ ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿತು.
    user_Prashanth  Vibes
    Prashanth Vibes
    Video Creator ಕೋಲಾರ ಗೋಲ್ಡ್ ಫೀಲ್ಡ್, ಕೋಲಾರ, ಕರ್ನಾಟಕ•
    1 hr ago
  • ಡ್ರೈವರ್‌ಲೆಸ್ ಕಾರು ಪ್ರದರ್ಶನದಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ ನೆಟ್‌ವರ್ಕ್ ಕಟ್, ನಿಯಂತ್ರಣ ಕಳೆದುಕೊಂಡ ಕಾರಿನ ವಿಡಿಯೋ ವೈರಲ್ ಡ್ರೈವರ್‌ಲೆಸ್ ಕಾರು ಪ್ರದರ್ಶನದಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ ನೆಟ್‌ವರ್ಕ್ ಕಟ್, ನಿಯಂತ್ರಣ ಕಳೆದುಕೊಂಡ ಕಾರಿನ ವಿಡಿಯೋ ವೈರಲ್
    1
    ಡ್ರೈವರ್‌ಲೆಸ್ ಕಾರು ಪ್ರದರ್ಶನದಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ
ನೆಟ್‌ವರ್ಕ್ ಕಟ್, ನಿಯಂತ್ರಣ ಕಳೆದುಕೊಂಡ ಕಾರಿನ ವಿಡಿಯೋ ವೈರಲ್
ಡ್ರೈವರ್‌ಲೆಸ್ ಕಾರು ಪ್ರದರ್ಶನದಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ
ನೆಟ್‌ವರ್ಕ್ ಕಟ್, ನಿಯಂತ್ರಣ ಕಳೆದುಕೊಂಡ ಕಾರಿನ ವಿಡಿಯೋ ವೈರಲ್
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಉತ್ತಮ ಸ್ಪಂದನೆ: ನಗರದಲ್ಲಿ ಇದುವರೆಗೆ 827 ಖಾಲಿ ನಿವೇಶನಗಳ ಸ್ವಚ್ಛತೆ, ಮಾಲೀಕರಿಂದಲೇ 815 ಸೈಟ್‌ಗಳ ಕಸ ತೆರವು: ಆಯುಕ್ತ ಕೆ.ಎನ್. ರಮೇಶ್ ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಪರಿಸರ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರಿಂದ ಹಾಗೂ ನಿವೇಶನ ಮಾಲೀಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರ ಸೂಚನೆ ಮೇರೆಗೆ ಪಾಲಿಕೆಯ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರ ನೇತೃತ್ವದಲ್ಲಿ ಖಾಲಿ ನಿವೇಶನಗಳ ತ್ಯಾಜ್ಯ ಮತ್ತು ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ತೀವ್ರಗೊಂಡಿದ್ದು, ನಿವೇಶನಗಳ ಮಾಲೀಕರು ಸ್ವಯಂಪ್ರೇರಿತರಾಗಿ ಕೈಜೋಡಿಸುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,847 ಖಾಲಿ ನಿವೇಶನಗಳನ್ನು ಗುರುತಿಸಲಾಗಿದ್ದು, ಈವರೆಗೆ 300 ನಿವೇಶನಗಳ ಮಾಲೀಕರಿಗೆ ಸ್ವಚ್ಛತೆಗಾಗಿ ನೋಟಿಸ್ ಜಾರಿ ಮಾಡಲಾಗಿದೆ. ಪಾಲಿಕೆಯ ಜಾಗೃತಿ ಹಾಗೂ ನೋಟಿಸ್‌ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಇದುವರೆಗೆ 1,847 ಖಾಲಿ ನಿವೇಶನಗಳ ಪೈಕಿ 815 ನಿವೇಶನಗಳನ್ನು ಸ್ವತಃ ಮಾಲೀಕರೇ ಸ್ವಚ್ಛಗೊಳಿಸಿದ್ದಾರೆ. ಮುಂದುವರೆದು ನೋಟಿಸ್ ಗೆ ಸ್ಪಂದಿಸದ 12 ಖಾಲಿ ನಿವೇಶನಗಳನ್ನು ಪಾಲಿಕೆ ವತಿಯಿಂದಲೇ ಸ್ವಚ್ಛಗೊಳಿಸಲಾಗಿದೆ. ಪ್ರಸ್ತುತ ಇನ್ನೂ 1,020 ನಿವೇಶನಗಳ ಸ್ವಚ್ಛತೆ ಬಾಕಿಯಿದ್ದು, ಉಳಿದ 738 ನಿವೇಶನಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಆಯುಕ್ತರು ತಿಳಿಸಿದರು.
    1
    ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಉತ್ತಮ ಸ್ಪಂದನೆ: ನಗರದಲ್ಲಿ ಇದುವರೆಗೆ 827 ಖಾಲಿ ನಿವೇಶನಗಳ ಸ್ವಚ್ಛತೆ, ಮಾಲೀಕರಿಂದಲೇ 815 ಸೈಟ್‌ಗಳ ಕಸ ತೆರವು: ಆಯುಕ್ತ ಕೆ.ಎನ್. ರಮೇಶ್


ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಪರಿಸರ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರಿಂದ ಹಾಗೂ ನಿವೇಶನ ಮಾಲೀಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರ ಸೂಚನೆ ಮೇರೆಗೆ ಪಾಲಿಕೆಯ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರ ನೇತೃತ್ವದಲ್ಲಿ ಖಾಲಿ ನಿವೇಶನಗಳ ತ್ಯಾಜ್ಯ ಮತ್ತು ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ತೀವ್ರಗೊಂಡಿದ್ದು, ನಿವೇಶನಗಳ ಮಾಲೀಕರು ಸ್ವಯಂಪ್ರೇರಿತರಾಗಿ ಕೈಜೋಡಿಸುತ್ತಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,847 ಖಾಲಿ ನಿವೇಶನಗಳನ್ನು ಗುರುತಿಸಲಾಗಿದ್ದು, ಈವರೆಗೆ 300 ನಿವೇಶನಗಳ ಮಾಲೀಕರಿಗೆ ಸ್ವಚ್ಛತೆಗಾಗಿ ನೋಟಿಸ್ ಜಾರಿ ಮಾಡಲಾಗಿದೆ. ಪಾಲಿಕೆಯ ಜಾಗೃತಿ ಹಾಗೂ ನೋಟಿಸ್‌ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಇದುವರೆಗೆ 1,847 ಖಾಲಿ ನಿವೇಶನಗಳ ಪೈಕಿ 815 ನಿವೇಶನಗಳನ್ನು ಸ್ವತಃ ಮಾಲೀಕರೇ ಸ್ವಚ್ಛಗೊಳಿಸಿದ್ದಾರೆ.
ಮುಂದುವರೆದು ನೋಟಿಸ್ ಗೆ ಸ್ಪಂದಿಸದ 12 ಖಾಲಿ ನಿವೇಶನಗಳನ್ನು ಪಾಲಿಕೆ ವತಿಯಿಂದಲೇ ಸ್ವಚ್ಛಗೊಳಿಸಲಾಗಿದೆ. ಪ್ರಸ್ತುತ ಇನ್ನೂ 1,020 ನಿವೇಶನಗಳ ಸ್ವಚ್ಛತೆ ಬಾಕಿಯಿದ್ದು, ಉಳಿದ 738 ನಿವೇಶನಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಆಯುಕ್ತರು ತಿಳಿಸಿದರು.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    10 hrs ago
  • ಆಡುವ ವಯಸ್ಸಿನಲ್ಲಿ ದುಡಿಯೋದಿಕ್ಕೆ ನಿಂತ ಪುಟ್ಟ ಬಾಲಕಿ ಬಡತನ ಶಾಶ್ವತವಾಗಿ ಎಂದು ನಿರ್ಮೂಲನೆ ಆಗುವುದಿಲ್ಲ
    1
    ಆಡುವ ವಯಸ್ಸಿನಲ್ಲಿ ದುಡಿಯೋದಿಕ್ಕೆ 
ನಿಂತ ಪುಟ್ಟ ಬಾಲಕಿ ಬಡತನ ಶಾಶ್ವತವಾಗಿ 
ಎಂದು ನಿರ್ಮೂಲನೆ ಆಗುವುದಿಲ್ಲ
    user_Onlinetv24x7
    Onlinetv24x7
    ತುಮಕೂರು, ತುಮಕೂರು, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.