Shuru
Apke Nagar Ki App…
ಭಾರತ್ ಗ್ಯಾಸ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ಗ್ಯಾಸ ವಿತರಣೆ
@april14news
ಭಾರತ್ ಗ್ಯಾಸ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ಗ್ಯಾಸ ವಿತರಣೆ
More news from ಕರ್ನಾಟಕ and nearby areas
- Post by @april14news1
- Khamenei Selling Oil Free For Kim Jong UN & Vladimir Putin, But Ending is surprised for Trump🛢️🛢️🇮🇷1
- ಬೀಳಗಿಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವದ ಆತಂಕ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿಯಿಂದ ಅನಿಲ ಕೊರತೆ ಉಂಟಾಗಬಹುದು ಎಂಬ ವದಂತಿಗಳ ಹಿನ್ನೆಲೆ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಸೇರಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಇಂದು ಬೆಳಗ್ಗೆಯೇ HP ಗ್ಯಾಸ್ ಏಜೆನ್ಸಿ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ನಗರದಲ್ಲಿನ ಬಾಡಗಂಡಿ ರಸ್ತೆಯಲ್ಲಿರುವ ಗ್ಯಾಸ್ ಏಜೆನ್ಸಿಯ ಬಾಗಿಲು ತೆರೆಯುವ ಮೊದಲುಲೇ ಅನೇಕರು ಖಾಲಿ ಸಿಲಿಂಡರ್‌ಗಳನ್ನು ತಂದು ಸರದಿ ಸಾಲಿನಲ್ಲಿ ನಿಂತಿದ್ದರು. ಸರ್ವರ್ ಸಮಸ್ಯೆಯಿಂದಾಗಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಆಗುತ್ತಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮುಂದೆ ಸಿಲಿಂಡರ್ ಸಿಗದಿರಬಹುದು ಎಂಬ ಭಯದಿಂದ ಹಲವರು ನೇರವಾಗಿ ಗ್ಯಾಸ್ ಏಜೆನ್ಸಿಗೆ ಬಂದು ಸಿಲಿಂಡರ್ ಕೇಳಿದ್ದಾರೆ. ಆದರೆ, ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಮಾತ್ರ ಸಿಲಿಂಡರ್ ನೀಡಲಾಗುತ್ತದೆ ಎಂದು ಗ್ಯಾಸ್ ಏಜೆನ್ಸಿ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಕೆಲ ಸಮಯ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದವೂ ನಡೆದಿದೆ. ತಮಗೆ ಸಿಲಿಂಡರ್ ಸಿಗದಿದ್ದಕ್ಕೆ ಆಕ್ರೋಶಗೊಂಡ ಗ್ರಾಹಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಶಾಂತಗೊಳಿಸಲು ಏಜೆನ್ಸಿ ಸಿಬ್ಬಂದಿ ಹರಸಾಹಸ ಪಟ್ಟರು. ಒಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಕುರಿತ ವದಂತಿಗಳು ಜನರಲ್ಲಿ ಆತಂಕ ಮೂಡಿಸಿದ್ದು, ಸರಿಯಾದ ಮಾಹಿತಿ ನೀಡುವಂತೆ ಜನರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ1
- ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ–3ರಡಿ ಭೂಸ್ವಾಧೀನಗೊಳ್ಳುವ ಜಮೀನುಗಳಿಗೆ ಒಪ್ಪಂದದ ದರದಂತೆ ಪರಿಹಾರ ವಿತರಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಇದು ಸಮಾಜದ ಋಣ ತೀರಿಸುವ ಕಾರ್ಯಕ್ರಮ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಲಿಷ್ಠ ಸರ್ಕಾರಕ್ಕೆ ಅವಕಾಶ ನೀಡಿದ ಜನರ ಋಣ ತೀರಿಸಲು ಸರ್ಕಾರ ಸಂಕಲ್ಪ ಮಾಡಿದೆ,” ಎಂದು ಹೇಳಿದರು. ಯುಕೆಪಿ ಮೂರನೇ ಹಂತದ ಯೋಜನೆಗೆ 15 ವರ್ಷಗಳ ಹಿಂದೆ ನ್ಯಾಯಾಲಯದ ಆದೇಶ ಬಂದಿದ್ದರೂ ಅದು ಜಾರಿಯಾಗಿರಲಿಲ್ಲ. ಭೂಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಇದೀಗ 1.33 ಲಕ್ಷ ಎಕರೆ ಜಮೀನಿಗೆ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.1
- Post by Sharanugouda Patil1
- ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರ ಹಿಂದೂ ಸೇವಾ ಟ್ರಸ್ ವತಿಯಿಂದ ಏರ್ಪಡಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಾಗೂ ಭವ್ಯ ಶೋಭಾಯಾತ್ರೆ ಹಿನ್ನಲೆ ನಗರದ ತುಂಬೆಲ್ಲಾ ಕೇಸರಿ ಧ್ವಜಗಳು, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಗಳು, ಶುಭಾಶಯ ಬ್ಯಾನರ್‌ಗಳ ಜೋರಾಗಿವೆ. ಶಿವಾಜಿ ಜಯಂತಿ ಹಿನ್ನಲೆ ಇಳಕಲ್ಲ ನಗರ ಸಂಪೂರ್ಣ ಕೇಸರಿಯಮಯಾಗಿದೆ.1
- ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಶನಿವಾರ ಗದಗ ಜಿಲ್ಲೆಯ ರೋಣ ಪಟ್ಟಣದ ಶಾಸಕ ಜಿ ಎಸ್ ಪಾಟೀಲರ ನಿವಾಸದಲ್ಲಿ ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲರ ಮುಖಾಂತರ ಶಾಸಕ ಜಿ ಎಸ್ ಪಾಟೀಲರಿಗೆ ಮನವಿ ಸಲ್ಲಿಸಿದರು, ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ 50 ವರ್ಷಗಳಾಯಿತು ಸರ್ಕಾರ ಕೂಡ ICDS 50ರ ಕಾರ್ಯಕ್ರಮವನ್ನು ನಡೆಸಿದೆ,ಪಾಲನೆ-ಪೋಷಣೆ-ಶಿಕ್ಷಣ ಸಂವಿಧಾನ ಬದ್ಧ ಕರ್ತವ್ಯಗಳಿವೆ ಮತ್ತು 2013 ರ ಆಹಾರ ಭದ್ರತಾ ಕಾಯ್ದೆ 2009 ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನ ಬದ್ದವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ ಸುಪ್ರಿಂ ಕೋರ್ಟ್ ಮತ್ತು ಗುಜರಾತ್ ಹೈ ಕೋರ್ಟ್‌ಗಳು ಇವರನ್ನು 3 ಮತ್ತು 4ನೇ ಗ್ರೇಡ್ ನೌಕರರಾಗಿ ಪರಿಗಣಿಸಲು ಜಂಟಿ ನಿಯಮಗಳನ್ನು ಕೇಂದ್ರ ರಾಜ್ಯ ಸರ್ಕಾರಗಳು ರೂಪಿಸಬೇಕೆಂದೂ ತೀರ್ಪು ನೀಡಿದೆ, ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಲಹೀನ ಗೊಳಿಸಲು ಶಿಕ್ಷಣ ಇಲಾಖೆ 10000 ಶಾಲೆಗಳಲ್ಲಿ LKG UKG ಪ್ರಾರಂಬಿಸಲು 4 ವರ್ಷದ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸಲು ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಯತ್ನಿಸುತ್ತಿದೆ, ಮ.ಮ.ಅ. ಇಲಾಖೆ ತಡೆಹಾಕಿ ಅಂಗನವಾಡಿ ಕೇಂದ್ರಗಳಲ್ಲಿ LKG-UKG ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳಾಗಿ ಪರಿವರ್ತಿಸಲು ತೀರ್ಮಾನಿಸಿದೆ ಇದೊಂದು ಐತಿಹಾಸಿಕ ತೀರ್ಮಾನ ಆದರೂ ಇದಕ್ಕೆ ಬೇಕಾಂದಂತಹ ಹಣಕಾಸು ಬಿಡುಗಡೆ ಇಲ್ಲದೆ ನಿಧಾನ ಗತಿಯಲ್ಲಿ ಇದೆ ಆದರೆ ಶಿಕ್ಷಣ ಇಲಾಖೆಯಲ್ಲಿ ಎಲ್ಲೆಡೆ LKG-UKG ತೆರೆಯಲು ಅಂಗನವಾಡಿ ಪಲಾನುಭವಿಗಳನ್ನು ಕಸಿಯಲು ಮುಂದಾಗಿ ಯೋಜನೆಯನ್ನು ದುರ್ಬಲ ಗೊಳಿಸಲಾಗುತ್ತಿದೆ,ಈ ಯೋಜನೆಯ ಕೆಲಸಗಳಲ್ಲದೆ ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಜಾರಿ ಮಾಡುವಲ್ಲಿ ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆಯನ್ನ ಜನತೆಗೆ ತಲಪಿಸುವ ಕೆಲಸದಲ್ಲಿ ಸಂಪೂರ್ಣವಾಗಿ ಸರ್ಕಾರಕ್ಕೆ ಬೆನ್ನಲುಬಾಗಿ ಕೆಲಸ ಮಾಡುತ್ತಿದ್ದಾರೆ,ಆದರೂ ರಾಜ್ಯದಲ್ಲಿ ಇರುವ ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ 15,000-10,000 ಇನ್ನ ಹೆಚ್ಚಳ ಮಾಡಲು ಮುಂದಾಗಲಿಲ್ಲ, ರಾಜ್ಯದಲ್ಲಿ ಈ ಬಾರಿ ಬಜೆಟ್‌ನಲ್ಲಿ ತಮ್ಮ ಸರ್ಕಾರ ನೀಡಿದ ಭರವಸೆಯನ್ನು ಪೂರ್ಣಗೊಳಿಸಲು ಸಾದ್ಯವಾಗಲಿಲ್ಲ,1948 ರ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ತಿಳಿಸಿದಂತೆ 4 ಗಂಟೆಗಿಂತ ಹೆಚ್ಚು ಕೆಲಸ ಮಾಡುವವರಿಗೆ ಕನಿಷ್ಠ ವೇತನ ನೀಡಬೇಕು ಎಂದು ತಿಳಿಸಿದರೂ ಯಾವುದೇ ಸರ್ಕಾರಗಳು ಇದನ್ನು ಜಾರಿ ಮಾಡಲು ಮುಂದಾಗಿಲ್ಲ, ನಮ್ಮ ಬೇಡಿಕೆಗಳು 1. 6 ವರ್ಷದೊಳಗಿನ ಮಕ್ಕಳು ICDS ನಡಿಯಲ್ಲಿರುವುದನ್ನು ಖಾತ್ರಿ ಪಡಿಸಿ, ICDS ಯೋಜನೆ ಪ್ರಾರಂಭವಾಗಿರುವುದೇ 6 ವರ್ಷದೊಳಗಿನ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರದ ಮುಖಾಂತರ ಆಹಾರ, ಆರೋಗ್ಯ ಮತ್ತು ಶಿಕ್ಷಣ ಕೊಡಲಾಗುತ್ತಿದೆ, ಇಂದಿನ ಸಾಮಾಜಿಕ ವ್ಯವಸ್ಥೆಗನುಗುಣವಾಗಿ ಅಂಗನವಾಡಿ ಕೇಂದ್ರಗಳು ಬಹಳಷ್ಟು ವೈಜ್ಞಾನಿಕವಾಗಿ ಮುಂದುವರೆದೂ ಕೆಲಸ ಮಾಡುತ್ತಿವೆ,ಈ ಕೇಂದ್ರಗಳಲ್ಲಿ ಇಂದು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಲಾಗುತ್ತಿದೆ,2025 ನವೆಂಬರ್ ನಲ್ಲಿ ರಾಜ್ಯದ ಮುಖ್ಯಮಂತ್ರಿಗಳು 5,000 ಅಂಗನವಾಡಿ ಕೇಂದ್ರಗಳಲ್ಲಿ LKG-UKG ಯನ್ನು ಪ್ರಾರಂಭಿಸಲು ಘೋಷಿಸಿ 12/1l/2025 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶ ಮಾಡಿದೆ, ಶಿಕ್ಷಣ ಇಲಾಖೆ 2025 ರಲ್ಲಿ 5,000 ಸರ್ಕಾರಿ ಶಾಲೆಯಲ್ಲಿ LKG-UKG ಪ್ರಾರಂಭಿಸುವುದಾಗಿ ಹೇಳಿದ್ದಾರೆ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ-1105 ಶಾಲೆ, ಪಿ.ಎಮ್.ಶ್ರೀ-126, KKRDB-1,126, ಮ್ಯಾಗ್ನೆಟ್-1,699, ಸೇರಿದಂತೆ-4,056 ಶಾಲೆಗಳಲ್ಲಿ LKG-UKG ನಡೆಸಲು ಅನುಮತಿ ನೀಡಿದೆ, ಈ ಶಾಲೆಗಳಿಗೆ 4 ರಿಂದ 5 ವರ್ಷದ ಮಕ್ಕಳು ಒಂದು ಶಾಲೆಗೆ 20 ರಿಂದ 40 ಮಕ್ಕಳು ಮಧ್ಯಾಹ್ನದ ಊಟ 418 ಕ್ಯಾಲೋರಿ, 8.7 ಗ್ರಾಂ ಪ್ರೋಟಿನ್ ಇರುವ ಆಹಾರ, ಕೊಡಬೇಕು ಎಂಬ ನಿಯಮಗಳನ್ನು ರೂಪಿಸಿಕೊಂಡಿದ್ದಾರೆ, ಹಾಗೆಯೇ ಶಾಲಾ ಕಾಂಪೌಂಡ್ ನೊಳಗಿರುವ ಅಂಗನವಾಡಿ ಕೇಂದ್ರಗಳಲ್ಲಿ ಇದನ್ನು ಪ್ರಾರಂಭಿಸಲಾಗುತ್ತಿದೆ ಎಂದು ನಡಾವಳಿಯಲ್ಲಿ ಹೇಳಿ 14/14/2025 ರಲ್ಲಿ ಹೇಳಿದ ಆದೇಶದಲ್ಲಿ ಹೇಳಲಿಲ್ಲ,ಆದ್ದರಿಂದ ಇಡೀ ರಾಜ್ಯದಲ್ಲಿ ಶಾಲಾ ಕಾಂಪೌಂಡ್ ಅಲ್ಲದೇ ಎಲ್ಲಡೆ ಪ್ರಾರಂಭಿಸಲಾಗುತ್ತಿದೆ, ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತಿದೆ, ಆದ್ದರಿಂದ 14/11/2025 ಶಿಕ್ಷಣ ಇಲಾಖೆ ಮಾಡಿರುವ ಆದೇಶ ರದ್ದು ಮಾಡಬೇಕು, ಬಜೆಟ್‌ನಲ್ಲಿಘೋಷಿಸಿರುವಂತೆ 800 ಪಬ್ಲಿಕ್ ಶಾಲೆಗಳಲ್ಲಿ LKG-UKG ಪ್ರಾರಂಭಿಸುವಾಗ ಆ ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಯನ್ನು ಅವಲೋಕಿಸಬೇಕು, ರಾಜ್ಯದಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿಯೂ LKG-UKG ಪ್ರಾರಂಭಿಸಲು ಆದೇಶಿಸಿ ಅಗತ್ಯವಿರುವ ಬಜೆಟ್‌ನ್ನು ಮೀಸಲಿಡಬೇಕು ಎಂದು ವಿನಂತಿಸುತ್ತೇವೆ, 2,ಎಲ್ಲ ಅಂಗನವಾಡಿ ನೌಕರರನ್ನು ಕನಿಷ್ಠಕೂಲಿಯ ಕಾಯ್ದೆಯ ವ್ಯಾಪ್ತಿಗೆ ತಂದು ESI, PFನ್ನು ಕೊಡಬೇಕು, 3, ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡುವ ಆಹಾರ ಪದಾರ್ಥಗಳು ಗುಣಮಟ್ಟ ಸರಿ ಇಲ್ಲದ ಕಾರಣ BS ಪರವಾನಿಗೆ ರದ್ದು ಮಾಡಿ ಸ್ಥಳೀಯವಾಗಿ ಸಿಗುವ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯ ಆಹಾರ ಸರಬರಾಜು ಮಾಡಬೇಕು, 4,ಶಿಶು ಅಭಿವೃದ್ಧಿ ಯೋಜನೆಗಾಗಿ ದುಡಿದು ಬರಿಗೈಯಲ್ಲಿ 2011 ರಿಂದ 2023 ಮಾರ್ಚ್ ತನಕ ನಿವೃತ್ತರಾದ ಕಾರ್ಯಕರ್ತ ಸಹಾಯಕಿಯರಿಗೂ ಕೂಡಲೇ ಗ್ರಾಚ್ಯುಟಿ ಹಣ 183 ಕೋಟಿ ಕೂಡಲೇ ಬಿಡುಗಡೆ ಮಾಡಬೇಕು, 5,ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ತುಂಬಬೇಕು ಮತ್ತು ಇಲಾಖೆಯಲ್ಲಿ ಖಾಲಿ ಇರುವ ಮೇಲ್ವಿಚಾರಕಿ, CDPO ಹುದ್ದೆ ತುಂಬಬೇಕು, 6. ಚುನಾವಣೆ ಕೆಲಸಗಳಿಂದ (BLO) ಅಂಗನವಾಡಿ ನೌಕರರನ್ನು ಬಿಡುಗಡೆ ಮಾಡಬೇಕು. ಈಗಾಗಲೇ ರಾಜ್ಯದಲ್ಲಿ BLO ಕಾರಣಗಳಿಂದ ವಜಾಗೊಳಿಸಿರುವ ಕಾರ್ಯಕರ್ತೆಯರ ವಜಾ ಅಮಾನತ್ತು ತೆರವು ಗೊಳಿಸಬೇಕು, 7,ನಗರ ಪ್ರದೇಶಗಳಲ್ಲಿ ಸಹಾಯಕಿ ಆಯ್ಕೆಗೆ ಇರುವ ಮಾನದಂಡ ಬದಲಾಯಿಸಬೇಕು ಮತ್ತು ನಗರ ಪ್ರದೇಶಗಳಲ್ಲಿ ಇರುವ ಖಾಲಿ ಹುದ್ದೆ ಬೇಗ ತುಂಬಬೇಕು, 8, ಮುಂಗಡವಾಗಿ ಮೊಟ್ಟೆ, ಬಾಡಿಗೆ, ಗ್ಯಾಸ್, ಕರೆಸ್ತಿ ಹಣ, ತರಕಾರಿ, ಆಡಳಿತ ವೆಚ್ಚ, ಸಾದಿಲ್ವಾರು ಹಾಕದೇ ಫಲಿತಾಂಶ ಕೇಳಬಾರದು, 9 ಮಾನ್ಯ ಇಲಾಖೆ ಸಚಿವರು ಒಪ್ಪಿಕೊಂಡಂತೆ ಸಾಮೂಹಿಕ ಆರೋಗ್ಯ ವಿಮೆ ಜಾರಿ ಮಾಡಬೇಕು, 10,ಅಂಗನವಾಡಿ ನೌಕರರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ಕೊಡಬೇಕು, 11, FRS ಕೈಬಿಡಬೇಕು ಅಂಗನವಾಡಿ ಕೇಂದ್ರಕ್ಕೆ ಗುಣಮಟ್ಟದ ಮೊಬೈಲ್ ನೀಡಬೇಕು ಮತ್ತು WI-FI ನೀಡಬೇಕು, 12, ರಾಜ್ಯ ಸರ್ಕಾರ ಮತ್ತು ಖಾಸಗೀ ವಲಯಗಳಲ್ಲಿ ದುಡಿಯುವ ಮಹಿಳೆಯರಿಗೆ ನೀಡಿರುವ ಮುಟ್ಟಿನ ರಜೆ ಅಂಗನವಾಡಿ ಕಾರ್ಯಕರ್ತ-ಸಹಾಯಕಿಗೂ ಜಾರಿ ಆಗಬೇಕು, 13, ಅಂಗನವಾಡಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಅನ್ವಯ ಮಾಡಿ ಜಾರಿ ಮಾಡಬೇಕು, 14,ನಿವೃತ್ತರಾದವರಿಗೆ ಇಡಿಗಂಟು ಹೆಚ್ಚಳ ಮಾಡಬೇಕು ಹಾಗೂ ಮಾಸಿಕ 10 ಸಾವಿರ ಪಿಂಚಣಿ ನೀಡಬೇಕು, 15, ICDS ಪ್ರತ್ಯೇಕ ನಿರ್ದೇಶನಾಲಯ ಮಾಡಬೇಕು, 16, ಮೊಟ್ಟೆ ನೀಡುವ ಬದಲಿಗೆ ನೇರ ನಗದು ಜಮಾವಣೆ ಡಿಬಿಟಿ ತರುತ್ತಿರುವುದನ್ನು ಕೈಬಿಡಬೇಕು, 17, ಬಜೆಟ್‌ನಲ್ಲಿ ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಳ ಮಾಡಿಲ್ಲ ಚುನಾವಣಾ ಸಂದರ್ಭದಲ್ಲಿಯ ಭರವಸೆ ನೀಡದಂತೆ ತಕ್ಷಣ ವೇತನ ಹೆಚ್ಚಳ ಮಾಡಬೇಕು, ಮೇಲ್ಕಂಡ ಬೇಡಿಕೆಗಳಿಗಾಗಿ 14-15-ಮಾರ್ಚ-2026 ರಂದು ರಾಜ್ಯದ ಎಲ್ಲಾ ಶಾಸಕರಿಗೆ ಮತ್ತು ಸಚಿವರಿಗೆ ಸಾಮೂಹಿಕವಾಗಿ ಮನವಿ ಪತ್ರ ಸಲ್ಲಿಸಲಾಗುತ್ತಿದೆ. ಮಾರ್ಚ 23 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಹೋರಾಟವನ್ನು ನಡೆಸಲಾಗುತ್ತಿದೆ ಆದ್ದರಿಂದ ಸರ್ಕಾರ ಕೂಡಲೇ ಅಗತ್ಯ ತೆಗೆದುಕೊಳ್ಳಬೇಕೆಂದು ಎಂದರು, ಈ ಸಂದರ್ಭದಲ್ಲಿ ಜಿಲ್ಲಾ ಸಿ ಐ ಟಿ ಯು ಸಂಚಾಲಕರು ಮಹೇಶ್ ಹಿರೇಮಠ, ತಾಲೂಕು ಅಧ್ಯಕ್ಷರು ಗಂಗಮ್ಮ ದ್ಯಾವರೆಡ್ಡಿ, ಗೀತಾ ಪಾಟೀಲ, ಶಶಿಕಲಾ ಗಾಣಿಗೇರ, ಚಂದ್ರಕಲಾ ಕಬರಳ್ಳಿ,ಶ್ರೀದೇವಿ ಕಳಸಣ್ಣವರ,ಶೋಭಾ ಟಂಕಸಾಲಿ, ಸುಶೀಲ ಚಲವಾದಿ, ಸುಮಾ ಡಂಬಳ, ಶರಣಮ್ಮ ವಾಲಿ ಸೇರಿದಂತೆ ಅನೇಕರಿದ್ದರು1
- ವಿಜಯಪುರ: ರಾಜಕೀಯ ಲಾಭಕ್ಕಾಗಿ ಶಾಸಕ ಯತ್ನಾಳ ಹಿಂದುತ್ವ ಬಳಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಹಿಂದುತ್ವದ ಹೆಸರಿನಲ್ಲಿ ಬೆಳೆಯುತ್ತಿದ್ದಾರೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶನಿವಾರದಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಯತ್ನಾಳ ಅವರು ಮುಂದಿನ ಮುಖ್ಯಮಂತ್ರಿ ಆಗುವುದಾಗಿ ಹೇಳುತ್ತಿದ್ದು, ಯಾವ ಪಕ್ಷದಿಂದ ಮುಖ್ಯಮಂತ್ರಿ ಆಗುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಪಟ್ಟಣಶೆಟ್ಟಿ ಸವಾಲು ಹಾಕಿದ್ದಾರೆ.1