Shuru
Apke Nagar Ki App…
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ವರ್ಗಾವಣೆ ನೂತನ ಜಿಲ್ಲಾಧಿಕಾರಿಯಾಗಿ ಪ್ರಭು.ಜಿ ಆಯ್ಕೆ!
NAYAN NEWS
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ವರ್ಗಾವಣೆ ನೂತನ ಜಿಲ್ಲಾಧಿಕಾರಿಯಾಗಿ ಪ್ರಭು.ಜಿ ಆಯ್ಕೆ!
More news from Chikkaballapura and nearby areas
- ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ವರ್ಗಾವಣೆ ನೂತನ ಜಿಲ್ಲಾಧಿಕಾರಿಯಾಗಿ ಪ್ರಭು.ಜಿ ಆಯ್ಕೆ!1
- ಹೊಸ ವರ್ಷಕ್ಕೆ ಎಣ್ಣೆ ಕುಡಿದು ಶುರು ಮಾಡಬೇಕ.ಸರ್ಕಾರದ ವಿರುದ್ದ ಗರಂ ಆದ ಮಹಿಳೆ1
- ಭೂನೀಲ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಬಾಗೇಪಲ್ಲಿ:- ಪಟ್ಟಣದ ಹೊರವಲಯದ ಭೂನೀಲ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದ್ದು,ಬೆಳ್ಳಗೆ 4 ಘಂಟೆಯಿಂದಲೇ ದೇವಸ್ಥಾನಗಳಲ್ಲಿ ಭಕ್ತಸಾಗರವೇ ಹರಿದುಬಂದಿದೆ. ದೇವಾಲಯಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಸುಪ್ರಭಾತ ಸೇವೆ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿದೆ. ಮುಂಜಾನೆಯಿಂದಲೇ ಭಕ್ತರು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಪ್ರಧಾನ ಅರ್ಚಕ ಪ್ರಕಾಶ್ ರಾವ್ ಮಾತನಾಡಿ ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ವೈಕುಂಠ ಏಕಾದಶಿಯಂದು ದೇವತೆಗಳು ಭೂ ಲೋಕಕ್ಕೆ ಬಂದು ಜಗದೊಡೆಯ ಶ್ರೀವಿಷ್ಣು ದೇವರನ್ನು ಪೂಜಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಹೀಗಾಗಿಯೇ ಈ ದಿನದಂದು ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ನಂಬಿಕೆ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹಾಗೂ ಕುಟುಂಬ ಸಮೇತವಾಗಿ ಬಂದು ದೇವರ ದರ್ಶನ ಪಡೆದರು ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ದೇವಾಲಯದ ಆವರಣವನ್ನು ವಿವಿಧ ಹೂವಿನಿಂದ ಸಿಂಗರಿಸಲಾಗಿದೆ. ಇಂದು ಸಂಜೆಯವರೆಗೆ ಒಂದು ಹದಿನೈದು ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆಯುವ ನಿರೀಕ್ಷೆಯಿದೆ. ಆಂದ್ರಪ್ರದೇಶ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿದ್ದು, ದೇವಾಲಯ ಆಡಳಿತ ಮಂಡಳಿ ಹಾಗೂ ದಾನಿಗಳಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ಆರ್ ವರ್ಣಿ ನೇತೃತ್ವದಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.2
- "ನಮಸ್ಕಾರ ಶಿರಾ ನಗರದ ಬಂಧುಗಳೇ... ಈಗ ನಮ್ಮ ಶಿರಾ ನಗರಕ್ಕೆ ಬಂದಿದೆ 'ನಮಸ್ತೆ ಶಿರಾ ಫ್ಯಾಮಿಲಿ ರೆಸ್ಟೋರೆಂಟ್'. ವಿಶೇಷವಾಗಿ, ನಮ್ಮ ಹೈದರಾಬಾದ್ ದಮ್ ಬಿರಿಯಾನಿ ಮತ್ತು ಸ್ಪೆಷಲ್ ಮಂದಿ ಬಿರಿಯಾನಿ ಒಮ್ಮೆ ತಿಂದರೆ ನೀವು ಖಂಡಿತ ಮತ್ತೆ ಮತ್ತೆ ಬರುತ್ತೀರಿ! ಬನ್ನಿ, ನಿಮ್ಮ ಮನೆಮಂದಿಯೆಲ್ಲಾ ಕೂಡಿ ನಮ್ಮ ಹೊಸ ವರ್ಷದ ಆಫರ್ ಸವಿಯಿರಿ. ಕೇವಲ 600 ರೂಪಾಯಿಗೆ ಇಡೀ ಕುಟುಂಬವೇ ಸವಿಯಬಹುದಾದ ಭರ್ಜರಿ ಕಾಂಬೊ ಪ್ಯಾಕ್ ನಿಮಗಾಗಿ ಕಾಯುತ್ತಿದೆ. ಬನ್ನಿ, ನಮಸ್ತೆ ಶಿರಾ ಫ್ಯಾಮಿಲಿ ರೆಸ್ಟೋರೆಂಟ್ಗೆ... ಇದು ನಿಮ್ಮ ಮನೆಯ ರುಚಿ, ನಮ್ಮ ಪ್ರೀತಿಯ ಸವಿ!" ನೆನಪಿರಲಿ ವಿಳಾಸ: ಜಿಯೋ ಪೆಟ್ರೋಲ್ ಬಂಕ್ ಎದುರು, ಬುಕ್ಕಾಪಟ್ಟಣ ರಸ್ತೆ, ಶಿರಾ. ನಿಮಗೆ ಬರಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ, ನಮ್ಮ ಹೋಮ್ ಡೆಲಿವರಿ ಸೌಲಭ್ಯವನ್ನೂ ಬಳಸಿ. ಇಂದೇ ಕರೆ ಮಾಡಿ: 8073168024.1
- ಹನೂರು ಪಟ್ಟಣ ವಿವೇಕಾನಂದ ಶಾಲೆಯ ವಾರ್ಷಿಕೋತ್ಸವದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಅವರು ಮಾತನಾಡಿ, ಶಾಲಾ ಹಂತದಲ್ಲಿಯೇ ರೈತ ದಿನಾಚರಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು. ಪ್ರಸ್ತುತ ನಾವು ಸೇವಿಸುತ್ತಿರುವ ಆಹಾರಗಳು ರೈತರ ಪರಿಶ್ರಮದ ಫಲವಾಗಿವೆ ಎಂಬುದನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ಇದರಿಂದ ಭವಿಷ್ಯದಲ್ಲಿ ದುಡಿಯುವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬಹುದು. ಈ ಎಲ್ಲಾ ಮೌಲ್ಯಗಳನ್ನು ರೂಪಿಸುವಲ್ಲಿ ಶಿಕ್ಷಣವೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು. ಆದ್ದರಿಂದ ಸರ್ಕಾರವು ಶಾಲಾ ಹಂತದಲ್ಲಿಯೇ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಪಠ್ಯಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರಿಸಬೇಕು. ಜೊತೆಗೆ ವಿದ್ಯಾರ್ಥಿಗಳಲ್ಲಿ ರೈತರ ಬಗ್ಗೆ ಗೌರವ ಮತ್ತು ಕೃತಜ್ಞತೆ ಮೂಡಿಸುವ ದಿಶೆಯಲ್ಲಿ ಅರಿವು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.1
- ಚಾಮರಾಜನಗರ ಜಿಲ್ಲೆಯ ಖ್ಯಾತ ರಂಗಭೂಮಿ ಕಲಾವಿದರಾದ ಉಮತ್ತೂರು ಬಸವರಾಜ್ ಅವರು ಕೂಡ ಯುವ ನಿರ್ದೇಶಕ ಕಾರ್ತಿಕ್ ಸೂರ್ಯ ಅವರ ಬಗ್ಗೆ ವಿಶೇಷವಾಗಿ ಮಾತನಾಡಿ ಶುಭ ಹಾರೈಸಿದರು.1
- ಚಾಮರಾಜನಗರ ನ್ಯೂಸ್ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂತರ ಪೀಳಿಗೆಯ ಜಾಗೃತಿ, ಉಪನ್ಯಾಸ ಸಂವಾದ ಕಾರ್ಯಕ್ರಮ........ ‘ಪ್ರಸ್ತುತ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಕಿರಿಯರಿಗೆ ತುಂಬಾ ಅವಶ್ಯಕ, ಅದನ್ನು ಸದಪಯೋಗ ಮಾಡಿಕೊಳ್ಳಬೇಕು’ ಎಂದು ಹಿರಿಯ ನಾಗರಿಕರ ಸಹಾಯವಾಣಿ ಸಂಪನ್ಮೂಲ ಅಧಿಕಾರಿ. ಪ್ರಕಾಶ್ ಹೇಳಿದರು. ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಹಿರಿಯ ಸ್ವಯಂಸೇವಕ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂತರ ಪೀಳಿಗೆಯ ಜಾಗೃತಿ, ಉಪನ್ಯಾಸ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಹಾಗೆಯೇ ಹಿರಿಯರ ಜೀವನ ಉತ್ತಮವಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಕಿರಿಯರು ನಿರ್ವಹಿಸಬೇಕು’ ಹಿರಿಯ ನಾಗರಿಕರಿಗೆ ಇರುವ ಸರ್ಕಾರದ ಸೌಲಭ್ಯ ಹಾಗೂ ಕಾನೂನುಗಳ ವಿಚಾರವನ್ನು ವಿದ್ಯಾರ್ಥಿಗಳಿಗೆ ತಿಳಿದು ಹಿರಿಯರಿಗೆ ತಲುಪಿಸಲು ಕ್ರಮವಹಿಸಬೇಕು’ ಎಂದು ಹೇಳಿದರು. ನಂತರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಉಪ ಪ್ರಾಂಶುಪಾಲ ಆರ್. ನಂಜುಂಡಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿ ಪ್ರಸ್ತುತ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಕಿರಿಯರಿಗೆ ತುಂಬಾ ಅವಶ್ಯಕ, ಅದನ್ನು ಸದಪಯೋಗ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರ ಸಹಾಯ ವಾಣಿ ಸಂಪನ್ಮೂಲ ವ್ಯಕ್ತಿ ಪ್ರಕಾಶ್, ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಉಪ ಪ್ರಾಂಶುಪಾಲ ಆರ್. ನಂಜುಂಡಯ್ಯ,ಚಂದಕವಾಡಿ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿ ಟಿ.ಚಂದ್ರಶೇಖರ. ಮತ್ತು ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ ಎಸ್. ಪುಟ್ಟಸ್ವಾಮಿಹೊನ್ನೂರು3
- ಜನವರಿ 3ರಂದು ಶ್ರೀ ರಾಮಲಿಂಗೇಶ್ವರಸ್ವಾಮಿ ವೈಭವದ ಬ್ರಹ್ಮರಥೋತ್ಸವ...! ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಲು ತಹಸೀಲ್ದಾರ್ ಗಗನ ಸಿಂಧು ಮನವಿ!1