Shuru
Apke Nagar Ki App…
ಯಾದವ ಕುಲಬಾಂಧವರಿಂದ ಶಾಸಕ ಡಾ!ಎಂ ಸಿ ಸುಧಾಕರ್ ಅವರಿಗೆ ಅದ್ದೂರಿ ಸನ್ಮಾನ ಯಾದವ ಕುಲಬಾಂಧವರಿಂದ ಶಾಸಕ ಡಾ!ಎಂ ಸಿ ಸುಧಾಕರ್ ಅವರಿಗೆ ಅದ್ದೂರಿ ಸನ್ಮಾನ
Rownak Ali khan
ಯಾದವ ಕುಲಬಾಂಧವರಿಂದ ಶಾಸಕ ಡಾ!ಎಂ ಸಿ ಸುಧಾಕರ್ ಅವರಿಗೆ ಅದ್ದೂರಿ ಸನ್ಮಾನ ಯಾದವ ಕುಲಬಾಂಧವರಿಂದ ಶಾಸಕ ಡಾ!ಎಂ ಸಿ ಸುಧಾಕರ್ ಅವರಿಗೆ ಅದ್ದೂರಿ ಸನ್ಮಾನ
More news from ಕರ್ನಾಟಕ and nearby areas
- ನರೇಂದ್ರ ಮೋದಿ ರವರ 75 ಜನ್ಮದಿನದ ಪ್ರಯುಕ್ತ ಕೋಲಾರಮ್ಮ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ ಕೋಲಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನ್ಮದಿನದ ಪ್ರಯುಕ್ತ ಕೋಲಾರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಆರಾಧ್ಯ ದೇವತೆ ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಧಾನಮಂತ್ರಿಯವರ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು. ಮೋದಿಯವರ ಜನ್ಮದಿನದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಪ್ರತಿ ಮನೆಯಲ್ಲೂ ದೀಪ ಹಚ್ಚುವ ಮೂಲಕ ಶುಭ ಹಾರೈಸಲಾಯಿತು. ಬಳಿಕ ಕೋಲಾರಮ್ಮ ದೇವಸ್ಥಾನದಲ್ಲಿ ಮೋದಿಯವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೋಲಾರಮ್ಮ ತಾಯಿ ನರೇಂದ್ರ ಮೋದಿ ಅವರಿಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ಆಯಸ್ಸು ನೀಡಲಿ. ದೇಶದ ಘನತೆ ಹಾಗೂ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ನೀಡಲಿ. ದೀನ ದಲಿತರು, ಬಡವರು ಹಾಗೂ ಶೋಷಿತ ವರ್ಗಗಳ ಪರವಾಗಿ ಇನ್ನಷ್ಟು ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ದೇವರು ಕರುಣಿಸಲಿ ಎಂದು ಮುಖಂಡರು ಹಾಗೂ ಕಾರ್ಯಕರ್ತರು ಪ್ರಾರ್ಥಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂ ಶಕ್ತಿ ಚಲಪತಿ, ಮಾಜಿ ಸಂಸದ ಮುನಿಸ್ವಾಮಿ, ವಿಜಯ್ ಕುಮಾರ್, ಸಮಾ ಅನಿಲ್ ಬಾಬು, ಕೆಂಬೋಡಿ ನಾರಾಯಣಸ್ವಾಮಿ, ನಾಗಭೂಷಣ್, ಬಾಲಾಜಿ, ಅಪ್ಪಿ, ತಿಮ್ಮರಾಯಪ್ಪ, ರಾಜೇಶ್ ಸಿಂಗ್, ಕೋಲಾರ್ ಶ್ರೀನಿವಾಸ್, ಶ್ರೀಧರ್, ಪ್ರವೀಣ್, ವೆಂಕಟೇಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಶುಭಾಶಯಗಳನ್ನು ಸಲ್ಲಿಸಿ, ದೇಶದ ಅಭಿವೃದ್ಧಿ ಮತ್ತು ಜನಸೇವೆಯ ಸಂಕಲ್ಪದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೋಲಾರ್ ಶ್ರೀನಿವಾಸ್1
- ಯಾದವ ಕುಲಬಾಂಧವರಿಂದ ಶಾಸಕ ಡಾ!ಎಂ ಸಿ ಸುಧಾಕರ್ ಅವರಿಗೆ ಅದ್ದೂರಿ ಸನ್ಮಾನ ಯಾದವ ಕುಲಬಾಂಧವರಿಂದ ಶಾಸಕ ಡಾ!ಎಂ ಸಿ ಸುಧಾಕರ್ ಅವರಿಗೆ ಅದ್ದೂರಿ ಸನ್ಮಾನ1
- ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ. ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. “ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು. ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು. ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ. ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. “ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು. ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು.1
- * ಜಾಲಪ್ಪ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಎಸ್.ಡಿ.ಯು.ಎಂ.ಸಿ ವಿನಾಯಕ ಮಕ್ಕಳ ಬಳಗದಿಂದ ಐದು ದಿನಗಳ ಗಣೇಶ ಹಬ್ಬ ಆಚರಣೆ * ಕೋಲಾರ : ನಗರ ಹೊರವಲಯದ ಟಮಕ ಬಳಿಯ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಕಳೆದ 15 ವರ್ಷಗಳಿಂದ ಎಸ್.ಡಿ.ಯು.ಎಂ.ಸಿ. ವಿನಾಯಕ ಮಕ್ಕಳ ಬಳಗ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬರುತ್ತಿದೆ. ಕ್ಯಾಂಪಸ್ ನ ಕಾಂತರಾಜು ರವರು ಮಾತನಾಡಿ ಒಂದು ಅಡಿ ಗಣೇಶ ವಿಗ್ರಹ ಇಡುವ ಮೂಲಕ ಪ್ರಾರಂಭವಾದ ಗಣೇಶ ಹಬ್ಬದ ಆಚರಣೆ ಈ ಬಾರಿಯೂ ಮುಂದುವರೆದಿದ್ದು ಈ ಬಾರಿ 10 ಅಡಿಗಳ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಐದು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಕ್ಯಾಂಪಸ್ ನಲ್ಲಿರುವ ಮಕ್ಕಳೊಂದಿಗೆ ಕುಟುಂಬದ ಸದಸ್ಯರುಗಳು ಸೇರಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾ ಬರುತ್ತಿದ್ದು,ಪ್ರತಿದಿನ ಮಕ್ಕಳಿಗೆ ಮಕ್ಕಳಿಂದಲೇ ಮನರಂಜನೆ ಕಾರ್ಯಕ್ರಮಗಳನ್ನು ಹಾಗೂ ಕ್ರೀಡೆಗಳನ್ನು ಐದೂ ದಿನ ನಡೆಸಲಾಗುವುದು ಹಾಗೂ ಪ್ರತಿದಿನ ಪ್ರಸಾದ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು. ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಚಿಕ್ಕಂದಿನಿಂದಲೇ ತಿಳಿಸುವ ಕೆಲಸ ಮಾಡುತ್ತಾ ಬರುತ್ತಿದ್ದೇವೆ ಮುಂದಿನ ವರ್ಷಗಳಲ್ಲಿ ಮಕ್ಕಳೇ ನಮ್ಮ ಧರ್ಮ ಉಳಿಸಿ ಬೆಳಸಲಿ ಹಾಗೂ ಗಣೇಶೋತ್ಸವನ್ನು ಇನ್ನೂ ಅದ್ದೂರಿಯಾಗಿ ಆಚರಣೆ ಮಾಡುವಂತಾಗಲಿ ಎಂದು ಆಶಿಸಿದರು. ಶುಕ್ರವಾರ ಸಂಜೆ ಗಣೇಶನ ವಿಸರ್ಜನೆ ಕಾರ್ಯಕ್ರಮ ಇದ್ದು ಅವತ್ತು ಅದ್ದೂರಿಯಾಗಿ ಮೆರವಣಿಗೆ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಮಹಿಮಾ ಕೆಲ್,ರಮೇಶ್ ಕೆಲ್,ಹೀಮಂತ್, ಹೀತಾ,ಸಂಜಯ್,ಸುಮತಿ, ಯಶಸ್ಸು ಆರ್,ಪುನೀತ್,ಚೇತನ್, ಪ್ರಜ್ವಲ್ ,ರಾಜೇಂದ್ರ ಕುಮಾರ್, ತಲೀಶ್,ಚಿರಾಗ್,ಹರಿಶಿತಾ, ಹಾಗೂ ಕ್ಯಾಂಪಸ್ ನ ಮಕ್ಕಳು ಉಪಸ್ಥಿತರಿದ್ದರು.2
- ಮುನಿಯಮ್ಮ ಲೇಔಟ್‌ನಲ್ಲಿ 30ನೇ ವರ್ಷದ ಗಣೇಶೋತ್ಸವ.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಆಚರಣೆ. ಬಂಗಾರಪೇಟೆ: ಪಟ್ಟಣದ ಮುನಿಯಮ್ಮ ಲೇಔಟ್‌ನಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 30ನೇ ವರ್ಷದ ಗಣೇಶೋತ್ಸವವು ತಾಲೂಕಿನಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಪಟ್ಟಣದಲ್ಲಿ ಗಣೇಶೋತ್ಸವವು ಯಾವುದೇ ಒಂದು ವರ್ಗ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲರೂ ಒಗ್ಗೂಡಿ ಆಚರಿಸುವ ಊರ ಹಬ್ಬವಾಗಿ ರೂಪುಗೊಂಡಿದೆ. ಮುನಿಯಮ್ಮ ಲೇಔಟ್‌ನಲ್ಲಿ ಸುಮಾರು 13 ಅಡಿಗೂ ಹೆಚ್ಚು ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಗಣೇಶ ಚತುರ್ಥಿಯ ದಿನವಾದ ಸೆಪ್ಟೆಂಬರ್ 14ರಿಂದ ಸೆಪ್ಟೆಂಬರ್ 17ರವರೆಗೆ ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸಲಾಗಿದ್ದು, ಪ್ರತಿದಿನ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಗಣೇಶೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಉತ್ಸವದ ಅಂತಿಮ ದಿನವಾದ ಗುರುವಾರ ವೀಣಾ ವೆಂಕಟೇಶ್ ನೇತೃತ್ವದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮ್ಯೂಸಿಕಲ್ ಚೇರ್ ಹಾಗೂ ಯುವಕರಿಗೆ ಮಡಿಕೆ ಹೊಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 10 ಗ್ರಾಂ ಬೆಳ್ಳಿ ಜ್ಯೋತಿ, ದ್ವಿತೀಯ ಬಹುಮಾನವಾಗಿ 8 ಗ್ರಾಂ ಬೆಳ್ಳಿ ಜ್ಯೋತಿ ಹಾಗೂ ತೃತೀಯ ಬಹುಮಾನವಾಗಿ 5 ಗ್ರಾಂ ಬೆಳ್ಳಿ ಜ್ಯೋತಿಯನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೂ ಸಮಾಧಾನಕರ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೀಣಾ ವೆಂಕಟೇಶ್, “ಪ್ರತಿವರ್ಷ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ವರ್ಷ 30ನೇ ವರ್ಷದ ಗಣೇಶೋತ್ಸವವನ್ನು ಆಚರಿಸಿರುವುದು ಸಂತಸ ತಂದಿದೆ. ಭಗವಂತ ಪ್ರತಿವರ್ಷ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಎಲ್ಲರಿಗೂ ಆರೋಗ್ಯ ಮತ್ತು ಸುಖ-ಶಾಂತಿಯನ್ನು ಕರುಣಿಸಲಿ. ಅಂತಿಮ ದಿನದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮೂವರಿಗೆ ಬೆಳ್ಳಿ ಜ್ಯೋತಿಗಳನ್ನು ಹಾಗೂ ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಗಿದೆ” ಎಂದರು. ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ನಂಜೇವಾಡೆಯರ್, ವೀಣಾ ವೆಂಕಟೇಶ್, ಅಂಜನ್, ಶಿವಕುಮಾರ್, ಜೀವನ್ ಬಾಬು, ಸಂತೋಷ್, ವಿಜಯ್ ಕುಮಾರ್, ಸೆಲ್ವಂ, ಪ್ರಸಾದ್ ಸೇರಿದಂತೆ ಮುನಿಯಮ್ಮ ಬಡಾವಣೆಯ ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.1
- ಬಶೆಟ್ಟಿಹಳ್ಳಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸುಮಾರು 45 ರಿಂದ 50 ಜನ ಸೇರ್ಪಡೆ1
- ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ: ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ನ್ಯಾಯಾಧೀಶರುಗಳು ಸಾರಥ್ಯ ವಹಿಸಿದ್ದು ವಿಶೇಷವಾಗಿತ್ತು. ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್, ಮಾಜಿ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ಎಚ್.ವಿ. ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಆದರ್ಶ್ ಹಾಗೂ ಖಜಾಂಚಿ ಪಿ. ಗಾಯಿತ್ರಿ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿ. ಅಂಬರೀಶ್, ಭಗತ್‌ವರ್ಮ, ಜಿ.ಕೆ. ಲೋಕೇಶ್, ಲೋಕೇಶ್ ಗೌಡ, ಕೆ. ಮಂಜುನಾಥ್ ಹಾಗೂ ಎಂ. ಸತೀಶ್ ಉಪಸ್ಥಿತರಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕನ್ನಡ ಭವನದ ಪಕ್ಕದಲ್ಲಿರುವ ನೀರಿನ ಹೊಂಡದಲ್ಲಿ ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ವಿಸರ್ಜಿಸಲಾಯಿತು. 2. ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರ: ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರದ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ಟಮೇಟೋ ಮಾಲೀಕರ ಸಂಘ, ಜಯಭಾರತ್ ವ್ಯಾಪಾರಸ್ಥರ ಸಂಘ, ಹಮಾಲರ ಸಂಘ ಹಾಗೂ ಜೆಎನ್‌ಜಿ ತರಕಾರಿ ವ್ಯಾಪಾರಿಗಳ ಸಂಘದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಜೆಎನ್‌ಜಿ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಸಂತೋಷ್ ಕುಮಾರ್ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ 30ನೇ ವರ್ಷದ ಗಣೇಶೋತ್ಸವವನ್ನು ಸರಳವಾಗಿ ಮೂರು ದಿನಗಳ ಕಾಲ ಆಚರಿಸಿ ಮುಕ್ತಾಯಗೊಳಿಸಲಾಗಿದೆ. ಮಳೆ, ಉತ್ತಮ ಬೆಳೆ, ಸಮೃದ್ಧಿ ಹಾಗೂ ಶಾಂತಿಗಾಗಿ ಗಣಪತಿಯಲ್ಲಿ ಪ್ರಾರ್ಥಿಸಲಾಗಿದೆ ಎಂದರು. ಎಪಿಎಂಸಿ ಮುಖಂಡ ಪುಟ್ಟರಾಜು ಮಾತನಾಡಿ, ನಾಡು ಬರದ ಬೇಗೆಗೆ ಸಿಲುಕಿದ್ದು ರೈತರು ಹಾಗೂ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತಮ ಮಳೆಯಾಗಿ ನಾಡು ಹಸಿರು ತೊಟ್ಟು, ರೈತರು ಸಮೃದ್ಧ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು. ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು. ಸಮಿತಿ ಮುಖಂಡರಾದ ನಾಗೇಶ್ ಗೌಡ, ಬಿವಿಜಿ ವೆಂಕಟೇಶಗೌಡ, ಮಂಜುನಾಥರೆಡ್ಡಿ, ಶಿವಾನಂದ, ಕೆ. ಅಮರೇಶ್ ಹಾಗೂ ರೆಡ್ಡೆಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ: ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ನ್ಯಾಯಾಧೀಶರುಗಳು ಸಾರಥ್ಯ ವಹಿಸಿದ್ದು ವಿಶೇಷವಾಗಿತ್ತು. ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್, ಮಾಜಿ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ಎಚ್.ವಿ. ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಆದರ್ಶ್ ಹಾಗೂ ಖಜಾಂಚಿ ಪಿ. ಗಾಯಿತ್ರಿ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿ. ಅಂಬರೀಶ್, ಭಗತ್‌ವರ್ಮ, ಜಿ.ಕೆ. ಲೋಕೇಶ್, ಲೋಕೇಶ್ ಗೌಡ, ಕೆ. ಮಂಜುನಾಥ್ ಹಾಗೂ ಎಂ. ಸತೀಶ್ ಉಪಸ್ಥಿತರಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕನ್ನಡ ಭವನದ ಪಕ್ಕದಲ್ಲಿರುವ ನೀರಿನ ಹೊಂಡದಲ್ಲಿ ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ವಿಸರ್ಜಿಸಲಾಯಿತು. 2. ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರ: ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರದ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ಟಮೇಟೋ ಮಾಲೀಕರ ಸಂಘ, ಜಯಭಾರತ್ ವ್ಯಾಪಾರಸ್ಥರ ಸಂಘ, ಹಮಾಲರ ಸಂಘ ಹಾಗೂ ಜೆಎನ್‌ಜಿ ತರಕಾರಿ ವ್ಯಾಪಾರಿಗಳ ಸಂಘದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಜೆಎನ್‌ಜಿ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಸಂತೋಷ್ ಕುಮಾರ್ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ 30ನೇ ವರ್ಷದ ಗಣೇಶೋತ್ಸವವನ್ನು ಸರಳವಾಗಿ ಮೂರು ದಿನಗಳ ಕಾಲ ಆಚರಿಸಿ ಮುಕ್ತಾಯಗೊಳಿಸಲಾಗಿದೆ. ಮಳೆ, ಉತ್ತಮ ಬೆಳೆ, ಸಮೃದ್ಧಿ ಹಾಗೂ ಶಾಂತಿಗಾಗಿ ಗಣಪತಿಯಲ್ಲಿ ಪ್ರಾರ್ಥಿಸಲಾಗಿದೆ ಎಂದರು. ಎಪಿಎಂಸಿ ಮುಖಂಡ ಪುಟ್ಟರಾಜು ಮಾತನಾಡಿ, ನಾಡು ಬರದ ಬೇಗೆಗೆ ಸಿಲುಕಿದ್ದು ರೈತರು ಹಾಗೂ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತಮ ಮಳೆಯಾಗಿ ನಾಡು ಹಸಿರು ತೊಟ್ಟು, ರೈತರು ಸಮೃದ್ಧ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು. ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು. ಸಮಿತಿ ಮುಖಂಡರಾದ ನಾಗೇಶ್ ಗೌಡ, ಬಿವಿಜಿ ವೆಂಕಟೇಶಗೌಡ, ಮಂಜುನಾಥರೆಡ್ಡಿ, ಶಿವಾನಂದ, ಕೆ. ಅಮರೇಶ್ ಹಾಗೂ ರೆಡ್ಡೆಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.1
- ಜೆ.ಪಿ.ನಗರದಲ್ಲಿ ಪತ್ನಿಯ ಮೇಲೆ ಮಚ್ಚಿನಿಂದ ದಾಳಿ, ಆಸಿಡ್ ಎರಚಿದ ಪತಿ ಸ್ಥಳೀಯರ ಸಮಯಪ್ರಜ್ಞೆಯಿಂದ ಆರೋಪಿ ವೆಂಕಟೇಶ್ ಪೊಲೀಸ್ ವಶಕ್ಕೆ ಜೆ.ಪಿ.ನಗರದಲ್ಲಿ ಪತ್ನಿಯ ಮೇಲೆ ಮಚ್ಚಿನಿಂದ ದಾಳಿ, ಆಸಿಡ್ ಎರಚಿದ ಪತಿ ಸ್ಥಳೀಯರ ಸಮಯಪ್ರಜ್ಞೆಯಿಂದ ಆರೋಪಿ ವೆಂಕಟೇಶ್ ಪೊಲೀಸ್ ವಶಕ್ಕೆ1