logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಳ್ಳೇಗಾಲ ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ವರದಿ ಎಸ್. ಪುಟ್ಟಸ್ವಾಮಿಹೊನ್ನೂರು ಕೊಳ್ಳೇಗಾಲ ಪಟ್ಟಣದ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಚಾಮರಾಜನಗರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ, ಕೊಳ್ಳೇಗಾಲ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ–2026 ರ ಕಾರ್ಯಕ್ರಮಕೆ ಶಾಸಕ ಎ ಆರ್. ಕೃಷ್ಣಮೂರ್ತಿ ಚಾಲನೆ ನೀಡಿದ್ದರು.. ಈ ವೇಳೆ ಮಾತನಾಡಿ, ಕ್ರೀಡೆ ಕೇವಲ ಗೆಲುವು–ಸೋಲಿನ ಸ್ಪರ್ಧೆಯಲ್ಲ; ಅದು ಶಿಸ್ತು, ಆತ್ಮವಿಶ್ವಾಸ, ಪರಿಶ್ರಮ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಶಕ್ತಿಯುತ ವೇದಿಕೆಯಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ದೊರೆತಾಗ ಅವರು ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಯುವಕರು ಕ್ರೀಡೆಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಿ, ಗೆಲುವನ್ನು ಗುರಿಯಾಗಿಸಿಕೊಂಡು ನಿರಂತರ ಪರಿಶ್ರಮದಿಂದ ಮುನ್ನಡೆಯಬೇಕು. ಕೊಳ್ಳೇಗಾಲದ ಕ್ರೀಡಾ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಮುಖಂಡರು, ಕ್ರಿಡಾಪಟುಗಳು ಉಪಸ್ಥಿತರಿದ್ದರು

2 hrs ago
user_S.Puttaswamyhonnur
S.Puttaswamyhonnur
Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
2 hrs ago
4f4bd230-8174-452f-aeab-9d3a3b2b780f

ಕೊಳ್ಳೇಗಾಲ ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ವರದಿ ಎಸ್. ಪುಟ್ಟಸ್ವಾಮಿಹೊನ್ನೂರು ಕೊಳ್ಳೇಗಾಲ ಪಟ್ಟಣದ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಚಾಮರಾಜನಗರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ, ಕೊಳ್ಳೇಗಾಲ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ–2026 ರ ಕಾರ್ಯಕ್ರಮಕೆ ಶಾಸಕ ಎ ಆರ್. ಕೃಷ್ಣಮೂರ್ತಿ ಚಾಲನೆ ನೀಡಿದ್ದರು.. ಈ ವೇಳೆ ಮಾತನಾಡಿ, ಕ್ರೀಡೆ ಕೇವಲ ಗೆಲುವು–ಸೋಲಿನ ಸ್ಪರ್ಧೆಯಲ್ಲ; ಅದು ಶಿಸ್ತು, ಆತ್ಮವಿಶ್ವಾಸ, ಪರಿಶ್ರಮ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಶಕ್ತಿಯುತ ವೇದಿಕೆಯಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ದೊರೆತಾಗ ಅವರು ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಯುವಕರು ಕ್ರೀಡೆಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಿ, ಗೆಲುವನ್ನು ಗುರಿಯಾಗಿಸಿಕೊಂಡು ನಿರಂತರ ಪರಿಶ್ರಮದಿಂದ ಮುನ್ನಡೆಯಬೇಕು. ಕೊಳ್ಳೇಗಾಲದ ಕ್ರೀಡಾ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಮುಖಂಡರು, ಕ್ರಿಡಾಪಟುಗಳು ಉಪಸ್ಥಿತರಿದ್ದರು

More news from ಕರ್ನಾಟಕ and nearby areas
  • ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ ವರದಿ:ಹೊಮ್ಮನಂಜುಂಡನಾಯಕ ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ ಚಾಮರಾಜನಗರ: ಜಿಲ್ಲೆಯಲ್ಲಿ ಈ ಸಾರಿಯ ದಸರಾ ಮಹೋತ್ಸವವನ್ನು ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ  ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ಗಡಿಪ್ರದೇಶವಾದ ಚಾಮರಾಜನಗರವು ಐತಿಹಾಸಿಕ ಮತ್ತು ಜಾನಪದ ಹಿನ್ನಲೆಯನ್ನು ಹೊಂದಿದೆ ಮತ್ತು ಈ ಹಿಂದೆ ಇದು ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು ಮತ್ತು ೯ನೇ ಖಾಸಾ ಚಾಮರಾಜ ಒಡೆಯರ್‌ರವರು ಇಲ್ಲಿ ೧೭೭೪ರಲ್ಲಿ ಜನಿಸಿದ ಅಂಗವಾಗಿ ಈ ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು. ಮೈಸೂರು ಸಂಸ್ಥಾನಕ್ಕೂ, ಚಾಮರಾಜನಗರ ಅವಿನಾಭವ ಸಂಬಂಧವಿದೆ. ಕಳೆದ ೨೦೧೩ರಲ್ಲಿ ಅಂದಿನ ಮುಖ್ಯಮಂತ್ರಿ  ಸಿದ್ದರಾಮಯ್ಯರವರು ಮತ್ತು ಅಂದಿನ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ವಿ. ಶ್ರೀನಿವಾಸಪ್ರಸಾದ ರವರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ  ಹೆಚ್.ಎಸ್. ಮಹದೇವಪ್ರಸಾದ್‌ರವರು ತೀರ್ಮಾನಿಸಿ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮ ಪ್ರಾರಂಭ ಮಾಡಿದರು. ಇದು ಬಹಳಷ್ಟು ವರ್ಷಗಳಿಂದ ಚಾಮರಾಜನಗರ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಕಳೆದ ವರ್ಷದಿಂದ ಚಾಮರಾಜನಗರದಲ್ಲಿ  ದಸರಾ ನಿಂತು ಹೋಗಿದೆ ಮತ್ತು ಈ ಸಾರಿಯು  ಸರ್ಕಾರದಿಂದ ಚಾಮರಾಜನಗರ ದಸರಾ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಸಾವಿರಾರು ಜನ ಜನಪದ, ಕಲೆ, ಸಾಂಸ್ಕೃತಿಕ, ಶೋಭಾನೆ, ಗೊರವರ ಕುಣಿತ, ಭಜನೆ, ತಂಬೂರಿ ಸೇರಿದಂತೆ ಇನ್ನೂ ಕಲೆಗಳನ್ನು ಬಲ್ಲಕಲಾವಿದರು ಇರುತ್ತಾರೆ. ಆದರೆ ರಾಜ್ಯ ಸರ್ಕಾರ ಏಕಾಏಕಿ ಯಾವುದೇ ಕಾರಣಗಳಿಲ್ಲದೆ ಚಾಮರಾಜನಗರ ದಸರಾ ನಿಲ್ಲಿಸಿರುವುದು ನೋವಿನ ಸಂಗತಿಯಾಗಿದೆ. ಒಂದು ಹೊಸ ಪರಂಪರೆಯನ್ನು ಸೃಷ್ಟಿಸಿರುವ ಸರ್ಕಾರ ಈಗ ಅದೇ ಪರಂಪರೆಯನ್ನು ನಿಲ್ಲಿಸಿರುವುದು ವಿಷಾಧನಿಯ. ಆದ್ದರಿಂದ ತಾವು ಈ ಸಾರಿಯ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮವನ್ನು ನಡೆಸಬೇಕೆಂದು ಜಿಲ್ಲೆಯ ಜನತೆಯ  ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ಮುತ್ತಿಗೆ ಗೋವಿಂದರಾಜು, ರವಿಚಂದ್ರಪ್ರಸಾದ್ ಕಹಳೆ, ತತ್ವಪದ ರಾಚಪ್ಪ, ಸಿದ್ದರಾಜು, ರಾಚಪ್ಪ, ವೀರಗಾಸೆ ಡಾ. ಶಿವರುದ್ರಸ್ವಾಮಿ, ಜಯರಾಜು, ಮಂಗಲದ ಹೊಸೂರು ಶಿವಣ್ಣ,ರಂಗಸ್ವಾಮಿ, ಸುರೇಶ್ ಇತರರು ಹಾಜರಿದ್ದರು.
    4
    ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ
ವರದಿ:ಹೊಮ್ಮನಂಜುಂಡನಾಯಕ
ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ
ಚಾಮರಾಜನಗರ: ಜಿಲ್ಲೆಯಲ್ಲಿ ಈ ಸಾರಿಯ ದಸರಾ ಮಹೋತ್ಸವವನ್ನು ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ  ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಗಡಿಪ್ರದೇಶವಾದ ಚಾಮರಾಜನಗರವು ಐತಿಹಾಸಿಕ ಮತ್ತು ಜಾನಪದ ಹಿನ್ನಲೆಯನ್ನು ಹೊಂದಿದೆ ಮತ್ತು ಈ ಹಿಂದೆ ಇದು ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು ಮತ್ತು ೯ನೇ ಖಾಸಾ ಚಾಮರಾಜ ಒಡೆಯರ್‌ರವರು ಇಲ್ಲಿ ೧೭೭೪ರಲ್ಲಿ ಜನಿಸಿದ ಅಂಗವಾಗಿ ಈ ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು. ಮೈಸೂರು ಸಂಸ್ಥಾನಕ್ಕೂ, ಚಾಮರಾಜನಗರ ಅವಿನಾಭವ ಸಂಬಂಧವಿದೆ. ಕಳೆದ ೨೦೧೩ರಲ್ಲಿ ಅಂದಿನ ಮುಖ್ಯಮಂತ್ರಿ  ಸಿದ್ದರಾಮಯ್ಯರವರು ಮತ್ತು ಅಂದಿನ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ವಿ. ಶ್ರೀನಿವಾಸಪ್ರಸಾದ ರವರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ  ಹೆಚ್.ಎಸ್. ಮಹದೇವಪ್ರಸಾದ್‌ರವರು ತೀರ್ಮಾನಿಸಿ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮ ಪ್ರಾರಂಭ ಮಾಡಿದರು. ಇದು ಬಹಳಷ್ಟು ವರ್ಷಗಳಿಂದ ಚಾಮರಾಜನಗರ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಕಳೆದ ವರ್ಷದಿಂದ ಚಾಮರಾಜನಗರದಲ್ಲಿ  ದಸರಾ ನಿಂತು ಹೋಗಿದೆ ಮತ್ತು ಈ ಸಾರಿಯು  ಸರ್ಕಾರದಿಂದ ಚಾಮರಾಜನಗರ ದಸರಾ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಸಾವಿರಾರು ಜನ ಜನಪದ, ಕಲೆ, ಸಾಂಸ್ಕೃತಿಕ, ಶೋಭಾನೆ, ಗೊರವರ ಕುಣಿತ, ಭಜನೆ, ತಂಬೂರಿ ಸೇರಿದಂತೆ ಇನ್ನೂ ಕಲೆಗಳನ್ನು ಬಲ್ಲಕಲಾವಿದರು ಇರುತ್ತಾರೆ. ಆದರೆ ರಾಜ್ಯ ಸರ್ಕಾರ ಏಕಾಏಕಿ ಯಾವುದೇ ಕಾರಣಗಳಿಲ್ಲದೆ ಚಾಮರಾಜನಗರ ದಸರಾ ನಿಲ್ಲಿಸಿರುವುದು ನೋವಿನ ಸಂಗತಿಯಾಗಿದೆ. ಒಂದು ಹೊಸ ಪರಂಪರೆಯನ್ನು ಸೃಷ್ಟಿಸಿರುವ ಸರ್ಕಾರ ಈಗ ಅದೇ ಪರಂಪರೆಯನ್ನು ನಿಲ್ಲಿಸಿರುವುದು ವಿಷಾಧನಿಯ.
ಆದ್ದರಿಂದ ತಾವು ಈ ಸಾರಿಯ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮವನ್ನು ನಡೆಸಬೇಕೆಂದು ಜಿಲ್ಲೆಯ ಜನತೆಯ  ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು,  ಮುತ್ತಿಗೆ ಗೋವಿಂದರಾಜು,
ರವಿಚಂದ್ರಪ್ರಸಾದ್ ಕಹಳೆ,  ತತ್ವಪದ ರಾಚಪ್ಪ, ಸಿದ್ದರಾಜು, ರಾಚಪ್ಪ, ವೀರಗಾಸೆ ಡಾ. ಶಿವರುದ್ರಸ್ವಾಮಿ, ಜಯರಾಜು,  ಮಂಗಲದ ಹೊಸೂರು ಶಿವಣ್ಣ,ರಂಗಸ್ವಾಮಿ, ಸುರೇಶ್ ಇತರರು ಹಾಜರಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    41 min ago
  • ಮೈಸೂರಿನಲ್ಲಿ ಮಲಬಾರಿ ರುಚಿಯ ಸವಿರುಚಿ – ಮಲಬಾರಿ ರೆಸ್ಟೋ ಕೆಫೆ ಸಿಗುತ್ತದೆ ಮೈಸೂರು ನಗರದ ರಾಜೇಂದ್ರನಗರ–ಹಳೇ ಕೇಸರೆ ಭಾಗದಲ್ಲಿರುವ ಮಲಬಾರಿ ರೆಸ್ಟೋ ಕೆಫೆ ಮಲಬಾರ್ ಹಾಗೂ ಕೇರಳ ಶೈಲಿಯ ಆಹಾರ ಪ್ರಿಯರಿಗೆ ಗಮನ ಸೆಳೆಯುವ ಆಹಾರ ತಾಣವಾಗಿದೆ. ಇಲ್ಲಿ ಭಾರತೀಯ, ಅರೇಬಿಕ್ ಮತ್ತು ದಕ್ಷಿಣ ಭಾರತೀಯ ಖಾದ್ಯಗಳ ವೈವಿಧ್ಯಮಯ ಮೆನು ಲಭ್ಯವಿದೆ. ಮಲಬಾರ್ ಚಿಕನ್ ಬಿರಿಯಾನಿ, ಚಿಕನ್ ದಮ್ ಬಿರಿಯಾನಿ, ವಿವಿಧ ಬಗೆಯ ಮಂಧಿ, ಅಲ್ಫಹಮ್, ಶವಾಯಿ ಗ್ರಿಲ್, ಶವರ್ಮಾ, ಕೇರಳ ಪರೋಟ, ಪುಟ್ಟು ಸೇರಿದಂತೆ ಹಲವು ಖಾದ್ಯಗಳನ್ನು ಇಲ್ಲಿ ಸವಿಯಬಹುದು. ವಿಶೇಷವಾಗಿ ಪೆಪ್ಪರ್ ಅಲ್ಫಹಮ್, ಪೆರಿ ಪೆರಿ ಅಲ್ಫಹಮ್, ಹನಿ ಚಿಲ್ಲಿ ಅಲ್ಫಹಮ್ ಹಾಗೂ ವಿವಿಧ ಬಗೆಯ ಚಿಕನ್ ಮಂಧಿ ಮೆನುವಿನಲ್ಲಿವೆ. ಆಹಾರದ ಜೊತೆಗೆ ತಾಜಾ ಜ್ಯೂಸ್, ಮಿಲ್ಕ್‌ಶೇಕ್, ಮೊಜಿಟೋ, ಚಹಾ, ಕಾಫಿ ಹಾಗೂ ಸ್ನ್ಯಾಕ್ಸ್‌ಗಳಿಗೂ ಆಯ್ಕೆಗಳಿವೆ. ಸಸ್ಯಾಹಾರಿಗಳಿಗೆ ಕಡಲ ಕರಿ, ಪನೀರ್, ಮಶ್ರೂಮ್ ಸೇರಿದಂತೆ ಹಲವು ಖಾದ್ಯಗಳಿವೆ. ವಿಳಾಸ: 21, 3ನೇ ಹಂತ, ಹಳೇ ಕೇಸರೆ, ಆರ್.ಎಸ್. ನಾಯ್ಡುನಗರ, ಮೈಸೂರು–570007.
    1
    ಮೈಸೂರಿನಲ್ಲಿ ಮಲಬಾರಿ ರುಚಿಯ ಸವಿರುಚಿ – ಮಲಬಾರಿ ರೆಸ್ಟೋ ಕೆಫೆ ಸಿಗುತ್ತದೆ 
ಮೈಸೂರು ನಗರದ ರಾಜೇಂದ್ರನಗರ–ಹಳೇ ಕೇಸರೆ ಭಾಗದಲ್ಲಿರುವ ಮಲಬಾರಿ ರೆಸ್ಟೋ ಕೆಫೆ ಮಲಬಾರ್ ಹಾಗೂ ಕೇರಳ ಶೈಲಿಯ ಆಹಾರ ಪ್ರಿಯರಿಗೆ ಗಮನ ಸೆಳೆಯುವ ಆಹಾರ ತಾಣವಾಗಿದೆ. ಇಲ್ಲಿ ಭಾರತೀಯ, ಅರೇಬಿಕ್ ಮತ್ತು ದಕ್ಷಿಣ ಭಾರತೀಯ ಖಾದ್ಯಗಳ ವೈವಿಧ್ಯಮಯ ಮೆನು ಲಭ್ಯವಿದೆ. 
ಮಲಬಾರ್ ಚಿಕನ್ ಬಿರಿಯಾನಿ, ಚಿಕನ್ ದಮ್ ಬಿರಿಯಾನಿ, ವಿವಿಧ ಬಗೆಯ ಮಂಧಿ, ಅಲ್ಫಹಮ್, ಶವಾಯಿ ಗ್ರಿಲ್, ಶವರ್ಮಾ, ಕೇರಳ ಪರೋಟ, ಪುಟ್ಟು ಸೇರಿದಂತೆ ಹಲವು ಖಾದ್ಯಗಳನ್ನು ಇಲ್ಲಿ ಸವಿಯಬಹುದು. ವಿಶೇಷವಾಗಿ ಪೆಪ್ಪರ್ ಅಲ್ಫಹಮ್, ಪೆರಿ ಪೆರಿ ಅಲ್ಫಹಮ್, ಹನಿ ಚಿಲ್ಲಿ ಅಲ್ಫಹಮ್ ಹಾಗೂ ವಿವಿಧ ಬಗೆಯ ಚಿಕನ್ ಮಂಧಿ ಮೆನುವಿನಲ್ಲಿವೆ. 
ಆಹಾರದ ಜೊತೆಗೆ ತಾಜಾ ಜ್ಯೂಸ್, ಮಿಲ್ಕ್‌ಶೇಕ್, ಮೊಜಿಟೋ, ಚಹಾ, ಕಾಫಿ ಹಾಗೂ ಸ್ನ್ಯಾಕ್ಸ್‌ಗಳಿಗೂ ಆಯ್ಕೆಗಳಿವೆ. ಸಸ್ಯಾಹಾರಿಗಳಿಗೆ ಕಡಲ ಕರಿ, ಪನೀರ್, ಮಶ್ರೂಮ್ ಸೇರಿದಂತೆ ಹಲವು ಖಾದ್ಯಗಳಿವೆ. 
ವಿಳಾಸ: 21, 3ನೇ ಹಂತ, ಹಳೇ ಕೇಸರೆ, ಆರ್.ಎಸ್. ನಾಯ್ಡುನಗರ, ಮೈಸೂರು–570007.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Chamarajanagar, Chamarajanagara•
    7 hrs ago
  • ಕಿಲಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ‌ಪೂಜೆ ನೆರವೇರಿಸಿದ‌‌ ಸಚಿವ ಪುಟ್ಟರಂಗಶೆಟ್ಟಿ ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಎಸ್ಇಪಿ ಯೋಜನೆಯಡಿ ಒಂದು ಕೋಟಿ ರೂ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ ಅವರು ರಸ್ತೆಗಳು ಗ್ರಾಮೀಣ ಜನರ ಜೀವನಾಡಿಯಾಗಿದೆ ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಚರಂಡಿ ಸೇತುವೆ ಅಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜನರ ಅಭಿವೃದ್ಧಿ ಕೆಲಸಗಳೆ ನನ್ನ ಗುರಿಯಾಗಿದ್ದು ವಿವಿಧ ಅಭಿವೃದ್ಧಿ ಯೋಜನೆಯಡಿ ಅನುದಾನ ತಂದು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು
    2
    ಕಿಲಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ‌ಪೂಜೆ ನೆರವೇರಿಸಿದ‌‌ ಸಚಿವ ಪುಟ್ಟರಂಗಶೆಟ್ಟಿ 

ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಎಸ್ಇಪಿ ಯೋಜನೆಯಡಿ ಒಂದು ಕೋಟಿ ರೂ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ ಅವರು ರಸ್ತೆಗಳು ಗ್ರಾಮೀಣ ಜನರ ಜೀವನಾಡಿಯಾಗಿದೆ ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಚರಂಡಿ ಸೇತುವೆ ಅಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಜನರ ಅಭಿವೃದ್ಧಿ ಕೆಲಸಗಳೆ ನನ್ನ ಗುರಿಯಾಗಿದ್ದು ವಿವಿಧ ಅಭಿವೃದ್ಧಿ ಯೋಜನೆಯಡಿ ಅನುದಾನ ತಂದು ಸಾಕಷ್ಟು ಕೆಲಸಗಳನ್ನು  ಮಾಡುತ್ತಿದ್ದೇವೆ ಎಂದು ತಿಳಿಸಿದರು
    user_ಚಾಮರಾಜನಗರ ಸುದ್ದಿ ಮನೆ
    ಚಾಮರಾಜನಗರ ಸುದ್ದಿ ಮನೆ
    ಪತ್ರಕರ್ತ ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    21 hrs ago
  • ರಾಮನಗುಡ್ಡ ಕೆರೆ ಭರ್ತಿ; ಕೋಡಿ ಬಿದ್ದು ಹರಿದ ನೀರು ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನಕ್ಕೆ ರೈತರ ಮೆಚ್ಚುಗೆ; 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಭರವಸೆ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ನೀರು ಹರಿಯುತ್ತಿದ್ದು, ಹನೂರು ಸುತ್ತಮುತ್ತಲಿನ ಗ್ರಾಮಗಳ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಹಲವು ವರ್ಷಗಳಿಂದ ನೀರಿನ ಕೊರತೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕೃಷಿಕರಿಗೆ ಕೆರೆ ಭರ್ತಿಯಾಗಿರುವುದು ಹೊಸ ಆಶಾಭಾವನೆ ಮೂಡಿಸಿದೆ. ಸತತ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿದ್ದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದ ಫಲವಾಗಿ ಕಾವೇರಿ ನದಿ ಮೂಲದಿಂದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಇದರ ಪರಿಣಾಮ ಬೇಸಿಗೆಯ ದಿನಗಳಲ್ಲಿಯೂ ಕೆರೆಯಲ್ಲಿ ನೀರು ಸಂಗ್ರಹವಾಗಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದೆ. ಕೆರೆಯಿಂದ ನೀರು ಹರಿಯುತ್ತಿರುವ ದೃಶ್ಯ ಸ್ಥಳೀಯರಲ್ಲಿ ಹರ್ಷದ ವಾತಾವರಣ ಮೂಡಿಸಿದೆ. ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ರಾಮನಗುಡ್ಡ ಕೆರೆಯ ಅಚ್ಚುಕಟ್ಟು ಪ್ರದೇಶ ಸುಮಾರು 980 ಎಕರೆಗಳಷ್ಟಿದೆ. ಕೆರೆ ಸಂಪೂರ್ಣ ಭರ್ತಿಯಾಗಿರುವುದರಿಂದ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ಇದ್ದು, ರೈತರು ಕೃಷಿ ಚಟುವಟಿಕೆಗಳನ್ನು ಹೆಚ್ಚಿನ ಆತ್ಮವಿಶ್ವಾಸದಿಂದ ಕೈಗೊಳ್ಳಲು ಅನುಕೂಲವಾಗಲಿದೆ. ಈಗಾಗಲೇ ಕೆರೆಯ ಅಚ್ಚುಕಟ್ಟು ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಉತ್ತಮ ಬೆಳೆಯ ನಿರೀಕ್ಷೆ ರೈತರಲ್ಲಿ ಮೂಡಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಳದ ನಿರೀಕ್ಷೆ:ರಾಮನಗುಡ್ಡ ಕೆರೆ ಭರ್ತಿಯಾಗಿರುವುದರಿಂದ ಕೇವಲ ಅಚ್ಚುಕಟ್ಟು ಪ್ರದೇಶದ ಕೃಷಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆಯಾಗುವ ನಿರೀಕ್ಷೆಯೂ ಹೆಚ್ಚಾಗಿದೆ. ಕೆರೆಯಿಂದ ಹಾಗೂ ಹಳ್ಳದ ಮೂಲಕ ನೀರು ಹರಿದು ಬರುವುದರಿಂದ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳಿಗೆ ನೀರಿನ ಮರುಪೂರೈಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದ ತೆರೆದ ಬಾವಿಗಳು ಹಾಗೂ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾದರೆ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಕುಡಿಯುವ ನೀರಿನ ಮೂಲಗಳ ಮೇಲಿನ ಒತ್ತಡವೂ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆಯಿಂದ ಸಂಕಷ್ಟಕ್ಕೊಳಗಾಗುವ ಜಾನುವಾರುಗಳಿಗೂ ಕೆರೆಯ ನೀರು ಆಶ್ರಯವಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಾಮನಗುಡ್ಡ ಕೆರೆಯ ಎಡದಂಡೆಯ ವಿಸ್ತೀರ್ಣ ಸುಮಾರು 3.95 ಎಕರೆ ಹಾಗೂ ಬಲದಂಡೆಯ ವಿಸ್ತೀರ್ಣ ಸುಮಾರು 4.20 ಎಕರೆ ಇದ್ದು, ಕೆರೆ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿರುವುದು ಕೆರೆಯ ಜಲಸಂಗ್ರಹ ಸಾಮರ್ಥ್ಯದ ಸದುಪಯೋಗಕ್ಕೆ ಸಾಕ್ಷಿಯಾಗಿದೆ. ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವುದರ ಜೊತೆಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಕಾರ್ಯದಿಂದ ಕೆರೆಗೆ ನೀರಿನ ಲಭ್ಯತೆ ಹೆಚ್ಚಾಗಿರುವುದು ರೈತರಲ್ಲಿ ವಿಶ್ವಾಸ ಮೂಡಿಸಿದೆ. ಕೆರೆ ಭರ್ತಿಯಾಗಿರುವುದರಿಂದ ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಕೃಷಿ ಚಟುವಟಿಕೆಗಳ ಕುರಿತು ಉತ್ಸಾಹ ಹೆಚ್ಚಾಗಿದೆ. ನೀರಿನ ಲಭ್ಯತೆಯಿಂದ ಬೆಳೆ ಬೆಳೆಯಲು ಅನುಕೂಲವಾಗುವುದರ ಜೊತೆಗೆ ಕೃಷಿ ಆಧಾರಿತ ಕುಟುಂಬಗಳ ಆದಾಯಕ್ಕೂ ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಕೆರೆಯ ನೀರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಕೃಷಿ ಆರ್ಥಿಕತೆಗೆ ಬಲ ನೀಡುವ ಮೂಲಕ ರೈತರ ಬದುಕಿನಲ್ಲಿ ಸ್ಥಿರತೆ ತರಲು ಸಹಕಾರಿಯಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಶಾಸಕ ಮಂಜುನಾಥ್ ಅವರ ಪ್ರಯತ್ನಕ್ಕೆ ಮೆಚ್ಚುಗೆ :ರಾಮನಗುಡ್ಡ ಕೆರೆಗೆ ನೀರು ಹರಿದು ಬರುವಂತೆ ಮಾಡುವ ನಿಟ್ಟಿನಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರು ಕೈಗೊಂಡ ಪ್ರಯತ್ನಗಳು ಇದೀಗ ಫಲ ನೀಡಿವೆ ಎಂದು ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರದ ಸಂದರ್ಭದಲ್ಲಿ ನೀರಿನ ಲಭ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಂಡಿದ್ದು, ಇದೀಗ ಉತ್ತಮ ಮಳೆಯೊಂದಿಗೆ ಕೆರೆ ಸಂಪೂರ್ಣ ಭರ್ತಿಯಾಗಿರುವುದು ಈ ಭಾಗದ ಕೃಷಿಕರಿಗೆ ಅನುಕೂಲವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ಕೆರೆಗಳ ಸಂರಕ್ಷಣೆ, ಹೂಳು ತೆರವು, ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಮಳೆ ನೀರು ಸಮರ್ಪಕವಾಗಿ ಕೆರೆಗೆ ಹರಿಯುವಂತೆ ಮಾಡುವ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ರೈತರ ಬಹುಕಾಲದ ಬೇಡಿಕೆಯಾಗಿದೆ. ರಾಮನಗುಡ್ಡ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ನೀರಿನ ಸಂಗ್ರಹವನ್ನು ಕಾಪಾಡಿಕೊಳ್ಳಲು ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಕೆರೆಯಲ್ಲಿ ಸಂಗ್ರಹವಾಗಿರುವ ನೀರು ವ್ಯರ್ಥವಾಗಿ ಹರಿದುಹೋಗದಂತೆ ಕಾಲುವೆಗಳ ನಿರ್ವಹಣೆ, ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಮರ್ಪಕ ಬಳಕೆ ಹಾಗೂ ಜಲಸಂಪನ್ಮೂಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ. ಕೆರೆಯ ನೀರು ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳಿಗೆ ಮರುಪೂರೈಕೆಯಾಗುವ ಮೂಲಕ ಅಂತರ್ಜಲ ಮಟ್ಟ ಸುಧಾರಿಸಿದರೆ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಮತ್ತಷ್ಟು ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆ ರೈತರಲ್ಲಿದೆ. ಕಳೆದ ಕೆಲವು ದಿನಗಳಿಂದ ರಾಮನಗುಡ್ಡ ಕೆರೆಯ ಕೋಡಿ ಮೂಲಕ ನೀರು ಹರಿಯುತ್ತಿರುವ ದೃಶ್ಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕೆರೆಯ ಬಳಿ ಸೇರುತ್ತಿರುವ ರೈತರು ಹಾಗೂ ಸಾರ್ವಜನಿಕರು ನೀರಿನ ಹರಿವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಲವು ವರ್ಷಗಳಿಂದ ನೀರಿಗಾಗಿ ಎದುರು ನೋಡುತ್ತಿದ್ದ ಕೃಷಿಕರ ಪಾಲಿಗೆ ಕೆರೆ ಭರ್ತಿಯಾಗಿರುವುದು ಸಂತಸದ ಸಂಗತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಒಟ್ಟಿನಲ್ಲಿ, ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿರುವುದು ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶದ ಕೃಷಿಗೆ ನೀರಿನ ಭರವಸೆ ನೀಡುವುದರ ಜೊತೆಗೆ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳ ಅಂತರ್ಜಲ ಮಟ್ಟ ಸುಧಾರಣೆಗೆ ಪೂರಕ ವಾತಾವರಣ ನಿರ್ಮಿಸಿದೆ. ಕೆರೆಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಜಲಸಂಪನ್ಮೂಲವನ್ನು ಮುಂದಿನ ವರ್ಷಗಳಲ್ಲಿಯೂ ಕಾಪಾಡಿಕೊಳ್ಳುವುದು ರೈತರ ಆಶಯವಾಗಿದೆ.
    1
    ರಾಮನಗುಡ್ಡ ಕೆರೆ ಭರ್ತಿ; ಕೋಡಿ ಬಿದ್ದು ಹರಿದ ನೀರು ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನಕ್ಕೆ ರೈತರ ಮೆಚ್ಚುಗೆ; 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಭರವಸೆ

ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ನೀರು ಹರಿಯುತ್ತಿದ್ದು, ಹನೂರು ಸುತ್ತಮುತ್ತಲಿನ ಗ್ರಾಮಗಳ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಹಲವು ವರ್ಷಗಳಿಂದ ನೀರಿನ ಕೊರತೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕೃಷಿಕರಿಗೆ ಕೆರೆ ಭರ್ತಿಯಾಗಿರುವುದು ಹೊಸ ಆಶಾಭಾವನೆ ಮೂಡಿಸಿದೆ.
ಸತತ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿದ್ದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದ ಫಲವಾಗಿ ಕಾವೇರಿ ನದಿ ಮೂಲದಿಂದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಇದರ ಪರಿಣಾಮ ಬೇಸಿಗೆಯ ದಿನಗಳಲ್ಲಿಯೂ ಕೆರೆಯಲ್ಲಿ ನೀರು ಸಂಗ್ರಹವಾಗಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದೆ. ಕೆರೆಯಿಂದ ನೀರು ಹರಿಯುತ್ತಿರುವ ದೃಶ್ಯ ಸ್ಥಳೀಯರಲ್ಲಿ ಹರ್ಷದ ವಾತಾವರಣ ಮೂಡಿಸಿದೆ.
ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ರಾಮನಗುಡ್ಡ ಕೆರೆಯ ಅಚ್ಚುಕಟ್ಟು ಪ್ರದೇಶ ಸುಮಾರು 980 ಎಕರೆಗಳಷ್ಟಿದೆ. ಕೆರೆ ಸಂಪೂರ್ಣ ಭರ್ತಿಯಾಗಿರುವುದರಿಂದ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ಇದ್ದು, ರೈತರು ಕೃಷಿ ಚಟುವಟಿಕೆಗಳನ್ನು ಹೆಚ್ಚಿನ ಆತ್ಮವಿಶ್ವಾಸದಿಂದ ಕೈಗೊಳ್ಳಲು ಅನುಕೂಲವಾಗಲಿದೆ. ಈಗಾಗಲೇ ಕೆರೆಯ ಅಚ್ಚುಕಟ್ಟು ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಉತ್ತಮ ಬೆಳೆಯ ನಿರೀಕ್ಷೆ ರೈತರಲ್ಲಿ ಮೂಡಿದೆ.
ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಳದ ನಿರೀಕ್ಷೆ:ರಾಮನಗುಡ್ಡ ಕೆರೆ ಭರ್ತಿಯಾಗಿರುವುದರಿಂದ ಕೇವಲ ಅಚ್ಚುಕಟ್ಟು ಪ್ರದೇಶದ ಕೃಷಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆಯಾಗುವ ನಿರೀಕ್ಷೆಯೂ ಹೆಚ್ಚಾಗಿದೆ. ಕೆರೆಯಿಂದ ಹಾಗೂ ಹಳ್ಳದ ಮೂಲಕ ನೀರು ಹರಿದು ಬರುವುದರಿಂದ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳಿಗೆ ನೀರಿನ ಮರುಪೂರೈಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಭಾಗದ ತೆರೆದ ಬಾವಿಗಳು ಹಾಗೂ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾದರೆ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಕುಡಿಯುವ ನೀರಿನ ಮೂಲಗಳ ಮೇಲಿನ ಒತ್ತಡವೂ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆಯಿಂದ ಸಂಕಷ್ಟಕ್ಕೊಳಗಾಗುವ ಜಾನುವಾರುಗಳಿಗೂ ಕೆರೆಯ ನೀರು ಆಶ್ರಯವಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ರಾಮನಗುಡ್ಡ ಕೆರೆಯ ಎಡದಂಡೆಯ ವಿಸ್ತೀರ್ಣ ಸುಮಾರು 3.95 ಎಕರೆ ಹಾಗೂ ಬಲದಂಡೆಯ ವಿಸ್ತೀರ್ಣ ಸುಮಾರು 4.20 ಎಕರೆ ಇದ್ದು, ಕೆರೆ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿರುವುದು ಕೆರೆಯ ಜಲಸಂಗ್ರಹ ಸಾಮರ್ಥ್ಯದ ಸದುಪಯೋಗಕ್ಕೆ ಸಾಕ್ಷಿಯಾಗಿದೆ. ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವುದರ ಜೊತೆಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಕಾರ್ಯದಿಂದ ಕೆರೆಗೆ ನೀರಿನ ಲಭ್ಯತೆ ಹೆಚ್ಚಾಗಿರುವುದು ರೈತರಲ್ಲಿ ವಿಶ್ವಾಸ ಮೂಡಿಸಿದೆ.
ಕೆರೆ ಭರ್ತಿಯಾಗಿರುವುದರಿಂದ ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಕೃಷಿ ಚಟುವಟಿಕೆಗಳ ಕುರಿತು ಉತ್ಸಾಹ ಹೆಚ್ಚಾಗಿದೆ. ನೀರಿನ ಲಭ್ಯತೆಯಿಂದ ಬೆಳೆ ಬೆಳೆಯಲು ಅನುಕೂಲವಾಗುವುದರ ಜೊತೆಗೆ ಕೃಷಿ ಆಧಾರಿತ ಕುಟುಂಬಗಳ ಆದಾಯಕ್ಕೂ ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಕೆರೆಯ ನೀರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಕೃಷಿ ಆರ್ಥಿಕತೆಗೆ ಬಲ ನೀಡುವ ಮೂಲಕ ರೈತರ ಬದುಕಿನಲ್ಲಿ ಸ್ಥಿರತೆ ತರಲು ಸಹಕಾರಿಯಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಶಾಸಕ ಮಂಜುನಾಥ್ ಅವರ ಪ್ರಯತ್ನಕ್ಕೆ ಮೆಚ್ಚುಗೆ :ರಾಮನಗುಡ್ಡ ಕೆರೆಗೆ ನೀರು ಹರಿದು ಬರುವಂತೆ ಮಾಡುವ ನಿಟ್ಟಿನಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರು ಕೈಗೊಂಡ ಪ್ರಯತ್ನಗಳು ಇದೀಗ ಫಲ ನೀಡಿವೆ ಎಂದು ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರದ ಸಂದರ್ಭದಲ್ಲಿ ನೀರಿನ ಲಭ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಂಡಿದ್ದು, ಇದೀಗ ಉತ್ತಮ ಮಳೆಯೊಂದಿಗೆ ಕೆರೆ ಸಂಪೂರ್ಣ ಭರ್ತಿಯಾಗಿರುವುದು ಈ ಭಾಗದ ಕೃಷಿಕರಿಗೆ ಅನುಕೂಲವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ಕೆರೆಗಳ ಸಂರಕ್ಷಣೆ, ಹೂಳು ತೆರವು, ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಮಳೆ ನೀರು ಸಮರ್ಪಕವಾಗಿ ಕೆರೆಗೆ ಹರಿಯುವಂತೆ ಮಾಡುವ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ರೈತರ ಬಹುಕಾಲದ ಬೇಡಿಕೆಯಾಗಿದೆ. ರಾಮನಗುಡ್ಡ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ನೀರಿನ ಸಂಗ್ರಹವನ್ನು ಕಾಪಾಡಿಕೊಳ್ಳಲು ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಕೆರೆಯಲ್ಲಿ ಸಂಗ್ರಹವಾಗಿರುವ ನೀರು ವ್ಯರ್ಥವಾಗಿ ಹರಿದುಹೋಗದಂತೆ ಕಾಲುವೆಗಳ ನಿರ್ವಹಣೆ, ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಮರ್ಪಕ ಬಳಕೆ ಹಾಗೂ ಜಲಸಂಪನ್ಮೂಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ. ಕೆರೆಯ ನೀರು ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳಿಗೆ ಮರುಪೂರೈಕೆಯಾಗುವ ಮೂಲಕ ಅಂತರ್ಜಲ ಮಟ್ಟ ಸುಧಾರಿಸಿದರೆ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಮತ್ತಷ್ಟು ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆ ರೈತರಲ್ಲಿದೆ.
ಕಳೆದ ಕೆಲವು ದಿನಗಳಿಂದ ರಾಮನಗುಡ್ಡ ಕೆರೆಯ ಕೋಡಿ ಮೂಲಕ ನೀರು ಹರಿಯುತ್ತಿರುವ ದೃಶ್ಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕೆರೆಯ ಬಳಿ ಸೇರುತ್ತಿರುವ ರೈತರು ಹಾಗೂ ಸಾರ್ವಜನಿಕರು ನೀರಿನ ಹರಿವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಲವು ವರ್ಷಗಳಿಂದ ನೀರಿಗಾಗಿ ಎದುರು ನೋಡುತ್ತಿದ್ದ ಕೃಷಿಕರ ಪಾಲಿಗೆ ಕೆರೆ ಭರ್ತಿಯಾಗಿರುವುದು ಸಂತಸದ ಸಂಗತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಒಟ್ಟಿನಲ್ಲಿ, ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿರುವುದು ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶದ ಕೃಷಿಗೆ ನೀರಿನ ಭರವಸೆ ನೀಡುವುದರ ಜೊತೆಗೆ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳ ಅಂತರ್ಜಲ ಮಟ್ಟ ಸುಧಾರಣೆಗೆ ಪೂರಕ ವಾತಾವರಣ ನಿರ್ಮಿಸಿದೆ. ಕೆರೆಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಜಲಸಂಪನ್ಮೂಲವನ್ನು ಮುಂದಿನ ವರ್ಷಗಳಲ್ಲಿಯೂ ಕಾಪಾಡಿಕೊಳ್ಳುವುದು ರೈತರ ಆಶಯವಾಗಿದೆ.
    user_Vijay kumar
    Vijay kumar
    Hanur, Chamarajanagara•
    4 hrs ago
  • ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯರು ನೀರಿಗಾಗಿ ಕೆಲಸಕಾರ್ಯಗಳನ್ನು ಬಿಟ್ಟು ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಮನಗುಡ್ಡೆಯಿಂದ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸ್ವಚ್ಛವಾಗಿಲ್ಲ ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಆರೋಪಿಸಿದರು. ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಗಿರೀಶ್, ಬಾಬು, ಅಜಯ್, ಪ್ರಯಾಗ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು. ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯರು ನೀರಿಗಾಗಿ ಕೆಲಸಕಾರ್ಯಗಳನ್ನು ಬಿಟ್ಟು ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಮನಗುಡ್ಡೆಯಿಂದ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸ್ವಚ್ಛವಾಗಿಲ್ಲ ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಆರೋಪಿಸಿದರು. ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಗಿರೀಶ್, ಬಾಬು, ಅಜಯ್, ಪ್ರಯಾಗ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
    1
    ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯರು ನೀರಿಗಾಗಿ ಕೆಲಸಕಾರ್ಯಗಳನ್ನು ಬಿಟ್ಟು ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಮನಗುಡ್ಡೆಯಿಂದ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸ್ವಚ್ಛವಾಗಿಲ್ಲ ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಆರೋಪಿಸಿದರು.

ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಗಿರೀಶ್, ಬಾಬು, ಅಜಯ್, ಪ್ರಯಾಗ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯರು ನೀರಿಗಾಗಿ ಕೆಲಸಕಾರ್ಯಗಳನ್ನು ಬಿಟ್ಟು ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಮನಗುಡ್ಡೆಯಿಂದ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸ್ವಚ್ಛವಾಗಿಲ್ಲ ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಆರೋಪಿಸಿದರು.
ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಗಿರೀಶ್, ಬಾಬು, ಅಜಯ್, ಪ್ರಯಾಗ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    22 hrs ago
  • ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ ತಪ್ಪಿದ ಅನಾಹುತ, ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಘಟನೆ ಮಳವಳ್ಳಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿರುವ ಘಟನೆ ತಾಲೂಕಿನ ಬಿ.ಜಿ.ಪುರ ಹೋಬಳಿಯ ಚಿಕ್ಕ ಬಾಗಿಲು ಗ್ರಾಮದಲ್ಲಿ ‌ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಗ್ರಾಮದ ನಿವಾಸಿ ಮಹದೇ ವಪ್ಪ ಎಂಬುವರಿಗೆ ಸೇರಿದ ಹಳೆಯ ಮಣ್ಣಿನ ಮನೆಯ ಗೋಡೆ ನಿರಂತರ ಮಳೆಗೆ ನೆನೆದು ಮಂಗಳವಾರ ರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆ ಸಂಭವಿಸಿದ ವೇಳೆ ಮನೆಯೊಳಗಿನ ಒಂದು ಭಾಗದಲ್ಲಿ ಕುಟುಂಬದವರು ಮಲಗಿದ್ದ ಕಾರಣ ಭಾರೀ ದುರಂತ ತಪ್ಪಿದೆ. ಮನೆಯೊಳಗಿದ್ದ ಪಾತ್ರೆ- ಎಲೆಕ್ಟ್ರಾನಿಕ್‌ ಹಾಗೂ ದಿನಬಳಕೆ ವಸ್ತುಗಳು ಮಣ್ಣಿನಡಿ ಸಿಲುಕಿ ಹಾನಿಗೀಡಾಗಿವೆ. ಹಲವು ದಿನಗಳಿಂದ ತಾಲೂಕಿ ನಾದ್ಯಂತ ಮಳೆ ಇಲ್ಲದೇ ಕಂಗಾಲಾಗಿದ್ದ ಜನತೆಗೆ ಕಳೆದ ರಾತ್ರಿ ವರುಣ ದಿಡೀರ್ ಆರ್ಭಟಿಸಿದೆ. ಚಿಕ್ಕಬಾಗಿಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬುಧವಾರ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಸಿದ ಮನೆಯ ಫೋಟೋ ಹಾಗೂ ಹಾನಿಯ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಸಂತ್ರಸ್ತ ಮಹದೇವಪ್ಪ ಅವರು ಬಡ ಕುಟುಂಬಕ್ಕೆ ಸೇರಿದ್ದು, ವಾಸಕ್ಕೆ ಬೇರೆ ಸೂರು ಇಲ್ಲದಂತಾಗಿದೆ. ಕೂಡಲೇ ಸೂಕ್ತ ಪರಿಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.
    1
    ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ ತಪ್ಪಿದ ಅನಾಹುತ, ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಘಟನೆ
ಮಳವಳ್ಳಿ  ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ  ಮನೆಯ ಗೋಡೆ ಕುಸಿದು ಬಿದ್ದಿರುವ ಘಟನೆ  ತಾಲೂಕಿನ ಬಿ.ಜಿ.ಪುರ ಹೋಬಳಿಯ ಚಿಕ್ಕ ಬಾಗಿಲು ಗ್ರಾಮದಲ್ಲಿ ‌ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಗ್ರಾಮದ ನಿವಾಸಿ ಮಹದೇ ವಪ್ಪ ಎಂಬುವರಿಗೆ ಸೇರಿದ ಹಳೆಯ ಮಣ್ಣಿನ ಮನೆಯ ಗೋಡೆ ನಿರಂತರ ಮಳೆಗೆ ನೆನೆದು ಮಂಗಳವಾರ ರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆ ಸಂಭವಿಸಿದ ವೇಳೆ ಮನೆಯೊಳಗಿನ ಒಂದು ಭಾಗದಲ್ಲಿ ಕುಟುಂಬದವರು ಮಲಗಿದ್ದ ಕಾರಣ ಭಾರೀ ದುರಂತ ತಪ್ಪಿದೆ. ಮನೆಯೊಳಗಿದ್ದ ಪಾತ್ರೆ- ಎಲೆಕ್ಟ್ರಾನಿಕ್‌  ಹಾಗೂ ದಿನಬಳಕೆ ವಸ್ತುಗಳು ಮಣ್ಣಿನಡಿ ಸಿಲುಕಿ ಹಾನಿಗೀಡಾಗಿವೆ.
ಹಲವು  ದಿನಗಳಿಂದ ತಾಲೂಕಿ ನಾದ್ಯಂತ ಮಳೆ ಇಲ್ಲದೇ ಕಂಗಾಲಾಗಿದ್ದ ಜನತೆಗೆ ಕಳೆದ ರಾತ್ರಿ ವರುಣ ದಿಡೀರ್ ಆರ್ಭಟಿಸಿದೆ.  ಚಿಕ್ಕಬಾಗಿಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬುಧವಾರ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಸಿದ ಮನೆಯ ಫೋಟೋ ಹಾಗೂ ಹಾನಿಯ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಸಂತ್ರಸ್ತ ಮಹದೇವಪ್ಪ ಅವರು ಬಡ ಕುಟುಂಬಕ್ಕೆ ಸೇರಿದ್ದು, ವಾಸಕ್ಕೆ ಬೇರೆ ಸೂರು ಇಲ್ಲದಂತಾಗಿದೆ. ಕೂಡಲೇ ಸೂಕ್ತ ಪರಿಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    20 min ago
  • ಗೌರಿ ಗಣೇಶ ಹಬ್ಬಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ: ಕೃಷಿ ಸಚಿವ ನರೇಂದ್ರಸ್ವಾಮಿ ಗೌರಿ ಗಣೇಶ ಹಬ್ಬ ಅಂಗವಾಗಿ ನಿಮ್ಮೆಲ್ಲರಿಗೂ ಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ ಎಂದು ಕೃಷಿ ಸಚಿವ ನರೇಂದ್ರಸ್ವಾಮಿ ತಿಳಿಸಿದರು. ಮಳವಳ್ಳಿ ಪಟ್ಟಣದ 33 ಎಕರೆ ನಿವೇಶನದ ಆವರಣದಲ್ಲಿ ನಗರಾಭಿವೃದ್ದಿ ಇಲಾಖೆ , ರಾಜೀವ್ ಗಾಂಧಿ ವಸತಿ ನಿಗಮ , ಜಿಲ್ಲಾಢಳಿತ, ಪುರಸಭೆ ವತಿಯಿಂದ ಆರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯ ವಿರೋಧವಿದ್ದರೂ ನಾನು ಅಂಜದೆ ಛಲ ಬಿಡದೆ ನಿವೇಶನ ಹಂಚಿಕೆ ಮಾಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರರನ್ನು ಇದೇ ನಿವೇಶನಕ್ಕೆ ಕರೆಸಿ ವಿವಿಧ ಕಾಮಗಾರಿಗಳ ಜೊತೆಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರು. ಈ ವೇಳೆ ಜಿಲ್ಲಾಧಿಕಾರಿ ಡಾಕ್ಟರ್ ಕುಮಾರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಸೇರಿದಂತೆ ಹಲವರು ಇದ್ದರು.
    1
    ಗೌರಿ ಗಣೇಶ ಹಬ್ಬಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ: ಕೃಷಿ ಸಚಿವ ನರೇಂದ್ರಸ್ವಾಮಿ 
ಗೌರಿ ಗಣೇಶ ಹಬ್ಬ ಅಂಗವಾಗಿ ನಿಮ್ಮೆಲ್ಲರಿಗೂ  ಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ ಎಂದು  ಕೃಷಿ ಸಚಿವ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ 33 ಎಕರೆ  ನಿವೇಶನದ ಆವರಣದಲ್ಲಿ  ನಗರಾಭಿವೃದ್ದಿ ಇಲಾಖೆ , ರಾಜೀವ್ ಗಾಂಧಿ ವಸತಿ ನಿಗಮ , ಜಿಲ್ಲಾಢಳಿತ, ಪುರಸಭೆ ವತಿಯಿಂದ ಆರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯ ವಿರೋಧವಿದ್ದರೂ ನಾನು ಅಂಜದೆ  ಛಲ ಬಿಡದೆ  ನಿವೇಶನ ಹಂಚಿಕೆ ಮಾಡುತ್ತಿದ್ದೇನೆ ಮುಂದಿನ ದಿನಗಳಲ್ಲಿ  ಮುಖ್ಯಮಂತ್ರಿ ಡಿ ಕೆ ಶಿವಕುಮಾರರನ್ನು  ಇದೇ ನಿವೇಶನಕ್ಕೆ ಕರೆಸಿ ವಿವಿಧ ಕಾಮಗಾರಿಗಳ ಜೊತೆಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರು.
ಈ  ವೇಳೆ  ಜಿಲ್ಲಾಧಿಕಾರಿ ಡಾಕ್ಟರ್ ಕುಮಾರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    23 hrs ago
  • ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರ: ಅಬ್ದುಲ್‌ಅಜೀಜ್ ದೀನಾ ವರದಿ: ಹೊಮ್ಮನಂಜುಂಡನಾಯಕ ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರ: ಅಬ್ದುಲ್‌ಅಜೀಜ್ ದೀನಾ ರೋಟರಿ ಸಂಸ್ಥೆ ವತಿಯಿಂದ ಇಂಜಿನಿಯ‌ರ್ ದಿನಾಚರಣೆ ಚಾಮರಾಜನಗರ: ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ' ಎಂದು ರೋಟರಿ ಅಧ್ಯಕ್ಷ ಅಬ್ದುಲ್‌ ಅಜೀಜ್ ದೀನಾ ಹೇಳಿದರು. ನಗರದ ರೋಟರಿ ಭವನದಲ್ಲಿ ನಡೆದ ರೋಟರಿ ಸಂಸ್ಥೆ ವತಿಯಿಂದ ನಡೆದ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ‌ ಮಾತನಾಡಿ, ಭಾರತದ ಮಹಾನ್ ಇಂಜಿನಿಯರ್, ಭಾರತರತ್ನ ಮೊಕ್ಷಗುಂಡಂವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿಗಾಗಿ ಇಂಜಿನಿಯ‌ರ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತ ಸರ್ಕಾರವು 1986ರಲ್ಲಿ ಸೆ.15 ನ್ನು ರಾಷ್ಟ್ರೀಯ ಇಂಜಿನಿಯರ್ ದಿನವೆಂದು ಘೋಷಿಸಿದೆ ಎಂದರು. ದೇಶದ ಮೂಲಭೂತ ಸೌಲಭ್ಯ, ನೀರಾವರಿ ವ್ಯವಸ್ಥೆ, ಸುಂದರ ಕಟ್ಟಡಗಳ ನಿರ್ಮಾಣ ಕೈಗಾರಿಕಾ ಅಭಿವೃದ್ಧಿಗೆ ಇಂಜಿನಿಯರ್ ಗಳು ಅಪಾರ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ' ಎಂದರು. ಸನ್ಮಾನ ಸ್ವೀಕರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿ.ರಮೇಶ್ ಮಾತನಾಡಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಇಂಜಿನಿಯರ್‌ಗಳ ಸೇವೆಯನ್ನು ಗುರುತಿಸಿ ತಮ್ಮಗಳನ್ನು ಸನ್ಮಾನಿಸಿ ತಮ್ಮಗಳ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ಇದಕ್ಕಾಗಿ ರೋಟರಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ರೋಟರಿ ಸಂಸ್ಥೆಯು ಮತ್ತಷ್ಟು ಸೇವಾ ಕಾರ್ಯಗಳ ಮೂಲಕ ಜನಸೇವೆ ಮಾಡುವಂತಾಗಲಿ ಎಂದು ಆಶಿಸಿದರು. ಸನ್ಮಾನ: ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿ.ರಮೇಶ್, ಹರದನಹಳ್ಳಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ. ಧ್ರುಪದ್, ಕಿರಿಯ ಇಂಜಿನಿಯರ್ ಎಸ್‌.ಮಂಜುನಾಥ್, ರೋಟರಿ ಸಂಸ್ಥೆಯ ಇಂಜಿನಿಯರ್‌ಗಳಾದ ಮೋಹನ್, ರಾಜುವರ್ಗೀಸ್, ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥಾಪಕ ಸದಸ್ಯರಾದ ಜಿ.ಆ‌ರ್.ಅಶ್ವಥನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ,ಕಾರ್ಯದರ್ಶಿ ಅಂಕಶೆಟ್ಟಿ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
    4
    ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರ: ಅಬ್ದುಲ್‌ಅಜೀಜ್ ದೀನಾ
ವರದಿ: ಹೊಮ್ಮನಂಜುಂಡನಾಯಕ
ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರ: ಅಬ್ದುಲ್‌ಅಜೀಜ್ ದೀನಾ
ರೋಟರಿ ಸಂಸ್ಥೆ ವತಿಯಿಂದ ಇಂಜಿನಿಯ‌ರ್ ದಿನಾಚರಣೆ
ಚಾಮರಾಜನಗರ: ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ' ಎಂದು ರೋಟರಿ ಅಧ್ಯಕ್ಷ ಅಬ್ದುಲ್‌ ಅಜೀಜ್ ದೀನಾ ಹೇಳಿದರು.
ನಗರದ ರೋಟರಿ ಭವನದಲ್ಲಿ ನಡೆದ ರೋಟರಿ ಸಂಸ್ಥೆ ವತಿಯಿಂದ ನಡೆದ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ‌ ಮಾತನಾಡಿ, ಭಾರತದ ಮಹಾನ್ ಇಂಜಿನಿಯರ್, ಭಾರತರತ್ನ ಮೊಕ್ಷಗುಂಡಂವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿಗಾಗಿ ಇಂಜಿನಿಯ‌ರ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತ ಸರ್ಕಾರವು 1986ರಲ್ಲಿ ಸೆ.15 ನ್ನು ರಾಷ್ಟ್ರೀಯ ಇಂಜಿನಿಯರ್ ದಿನವೆಂದು ಘೋಷಿಸಿದೆ ಎಂದರು.
ದೇಶದ ಮೂಲಭೂತ ಸೌಲಭ್ಯ, ನೀರಾವರಿ ವ್ಯವಸ್ಥೆ, ಸುಂದರ ಕಟ್ಟಡಗಳ ನಿರ್ಮಾಣ ಕೈಗಾರಿಕಾ ಅಭಿವೃದ್ಧಿಗೆ ಇಂಜಿನಿಯರ್ ಗಳು ಅಪಾರ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ' ಎಂದರು.
ಸನ್ಮಾನ ಸ್ವೀಕರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿ.ರಮೇಶ್ ಮಾತನಾಡಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಇಂಜಿನಿಯರ್‌ಗಳ ಸೇವೆಯನ್ನು ಗುರುತಿಸಿ ತಮ್ಮಗಳನ್ನು ಸನ್ಮಾನಿಸಿ ತಮ್ಮಗಳ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ಇದಕ್ಕಾಗಿ ರೋಟರಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ರೋಟರಿ ಸಂಸ್ಥೆಯು ಮತ್ತಷ್ಟು ಸೇವಾ ಕಾರ್ಯಗಳ ಮೂಲಕ ಜನಸೇವೆ ಮಾಡುವಂತಾಗಲಿ ಎಂದು ಆಶಿಸಿದರು.
ಸನ್ಮಾನ: ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿ.ರಮೇಶ್, ಹರದನಹಳ್ಳಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ. ಧ್ರುಪದ್, ಕಿರಿಯ ಇಂಜಿನಿಯರ್ ಎಸ್‌.ಮಂಜುನಾಥ್, ರೋಟರಿ ಸಂಸ್ಥೆಯ ಇಂಜಿನಿಯರ್‌ಗಳಾದ ಮೋಹನ್, ರಾಜುವರ್ಗೀಸ್, ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥಾಪಕ ಸದಸ್ಯರಾದ ಜಿ.ಆ‌ರ್.ಅಶ್ವಥನಾರಾಯಣ್,  ಸಿ.ವಿ.ಶ್ರೀನಿವಾಸಶೆಟ್ಟಿ,ಕಾರ್ಯದರ್ಶಿ ಅಂಕಶೆಟ್ಟಿ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    18 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.