Shuru
Apke Nagar Ki App…
YADGIR BIG NEWS || “ನನ್ನ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ. ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು”!!! YADGIR BIG NEWS || “ನನ್ನ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ. ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು”!!!
YADGIR NEWS
YADGIR BIG NEWS || “ನನ್ನ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ. ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು”!!! YADGIR BIG NEWS || “ನನ್ನ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ. ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು”!!!
More news from Vijayapura and nearby areas
- Post by Sharanugouda Patil1
- ಹುನಗುಂದ ಪಟ್ಟಣದಲ್ಲಿ ಇಂದು ಸಾಯಂಕಾಲ ಧಾರಾಕಾರವಾಗಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಅಬ್ಬರದ ಗಾಳಿ, ಗುಡುಗು–ಸಿಡಿಲಿನೊಂದಿಗೆ ಬಂದ ಮಳೆಯಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೆಲವು ಸ್ಥಳಗಳಲ್ಲಿ ನಿಂತಿದ್ದ ವಾಹನಗಳಿಗೂ ಹಾನಿ ಉಂಟಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ರಸ್ತೆಗಳು ಕೆರೆಯಂತಾಗಿವೆ. ಮಳೆಯಿಂದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ. ಸ್ಥಳೀಯರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.1
- ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿ. ನೀರಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು. ಹನುಮನಾಳ ಗ್ರಾಮದ ಬಳಿ ನಡೆದ ಘಟನೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗ್ರಾಮ. ಇಳಕಲ್ ಅಗ್ನಿಶಾಮಕದಳ ಸಿಬ್ಬಂದಿಯಿಂದ ಕಾರ್ಯಾಚರಣೆ. ಶವ ಹೊರಕ್ಕೆ ತೆಗೆದ ಅಗ್ನಿಶಾಮಕ ಸಿಬ್ಬಂದಿ. ವಿನಾಯಕ ಗೊಲ್ಲರ(೧೦),ವಿಜಯ್ ವಾಲಿಕಾರ(೧೫) ಮೃತು ಬಾಲಕರು. ಇಬ್ಬರು ಇಳಕಲ್ ನಗರದ ನಿವಾಸಿಗಳು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ. ಇಳಕಲ್ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ1
- ವಿಜಯಪುರ: ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಸಂದೀಪ್ ಪಾಟೀಲ್ ಅಧಿಕಾರಿಗಳು ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸದೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಿದರು ಹಾಗೂ ಗ್ರಾಹಕರಿಗೆ ನಿತ್ಯ ತೊಂದರೆ ಆಗುತ್ತದೆ ಎಂದು ವಿಜಯಪುರದಲ್ಲಿ ಬುಧವಾರದಂದು ಬಿಜೆಪಿ ಮುಖಂಡ ಸಂದೀಪ್ ಪಾಟೀಲ್ ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಕಾಮಗಾರಿ ಕೈಗೊಂಡಿದ್ದಾರೆ, ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ನಿತ್ಯ ತೊಂದರೆಯಾಗುತ್ತದೆ ಕೂಡಲೇ ಜಿಲ್ಲಾಧಿಕಾರಿಗಳು ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.1
- ಕುಷ್ಟಗಿ:- 21-02-2026 ರಂದು ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ, ತಾವರಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಿರೇ ತೆಮ್ಮಿನಾಳ ಗ್ರಾಮದಲ್ಲಿ ನನ್ನ ಗಂಡನಾದ ಗ್ಯಾನಪ್ಪ ಕುರಿಯವರನ್ನು ಮದ್ಯ ರಾತ್ರಿಯಲ್ಲಿ ನನ್ನ ಗ್ರಾಮದ ಶಾವಮ್ಮ ಗಂಡ ತೇಜಪ್ಪ ಸಂಡೂರು ಇವರ ಮನೆಯಲ್ಲಿ ಕೊಲೆ ಮಾಡಲಾಗಿದೆ.ಆದ್ದರಿಂದ ಪೋಲಿಸ್ ಇಲಾಖೆ ಅಧಿಕಾರಿಗಳು ಸೂಕ್ತ ತನಿಕೆ ನೆಡೆಸಿ ಕೊಲೆ ಮಾಡಿದವರನ್ನು ಬಂಧಿಸಿ ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಕೊಲೆಯಾದ ಗ್ಯಾನಪ್ಪನ ಹೆಂಡತಿಯಾದ ಭೀಮಮ್ಮ ದಿ.ಗಂ ಗ್ಯಾನಪ್ಪ ಕುರಿ ಆಗ್ರಹಿಸಿದ್ದಾರೆ. ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಊರಿನಲ್ಲಿ ಅಂದು ನಮ್ಮ ಊರಿನ ಗ್ರಾಮ ದೇವತೆಯಾದ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿತ್ತು.ನನ್ನ ಗಂಡನು ಊರಲ್ಲಿ ನೆಡೆಯುವ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ. ಆದರೆ ನಾನು ಮತ್ತು ನನ್ನ ಕುಟುಂಬದವರು ಸೇರಿ ರಾತ್ರಿಆದರೂ ಸಹ ನನ್ನ ಗಂಡ ಮನೆಗೆ ಬರಲಿಲ್ಲ ಎಂದು ಚಿಂತಿಸಿದೆವು. ಆಗ ನನ್ನ ಮಕ್ಕಳು ಇವತ್ತು ಊರಿನಲ್ಲಿ ಜಾತ್ರೆ ಇದೇ ಎಲ್ಲಾದರೂ ಅಥವಾ ಯಾರ ಮನೆಯಲ್ಲಾದರೂ ಇರಬಹುದು ಬಿಡು ಅವ್ವ ರಾತ್ರಿಯಾಗಿದೆ ಮಲಗಿ ನಿದ್ದೆ ಮಾಡು ಬೆಳಿಗ್ಗೆ ಅಪ್ಪನನ್ನು ನೋಡೋಣ ಎಂದು ನನ್ನ ಮಕ್ಕಳು ಹೇಳಿದರು.ಆಗ ಬೆಳಿಗ್ಗೆ ಬರುತ್ತಾನೆ ಎಂದು ತಿಳಿದೆವು. ಆಗ ಬೆಳಗಾಗುವಷ್ಟರಲ್ಲಿ ಅದೇ ದಿನ 20-02-2026 ರಂದು ರಾತ್ರಿ ಶಾವಮ್ಮ ಗಂಡ ತೇಜಪ್ಪ ಇವರ ಮನೆಗೆ ಹೋಗಿದ್ದಾರೆ. ಆದರೆ 22-02-2026 ರಂದು ಬೆಳಿಗ್ಗೆ ಶಾವಮ್ಮ ಗಂಡ ತೇಜಪ್ಪ ನವರ ಮನೆಯವರು ನಮ್ಮ ಮನೆಗೆ ಬಂದು ನನಗೆ ಮತ್ತು ನನ್ನ ಮಕ್ಕಳಿಗೆ ಹಾಗೂ ನನ್ನ ಕುಟುಂಬಕ್ಕೆ ನಿನ್ನ ಗಂಡ ಗ್ಯಾನಪ್ಪ ಕುರಿ ನಮ್ಮ ಮನೆಯ ಹಿಂದೆ ಇರುವ ಸಿಮೆಂಟ್ ಗುಂಡಿ ಒಳಗೆ ಬಿದ್ದು ಮೃತಪಟ್ಟಿದ್ದಾರೆ. ಬನ್ನಿ ಎಂದು ನನಗೆ ಮತ್ತು ಮನೆಯ ಕುಟುಂಬದವರನ್ನು ಕರೆಯಲು ಬಂದರು.ನನಗೆ ನಿನ್ನ ಗಂಡ ಸತ್ತು ಹೋದ ಎಂದು ಹೇಳಿದರು.ಆಗ ನಾವುಗಳು ಮತ್ತು ನನ್ನ ಗಂಡನ ಅಣ್ಣ ಸೇರಿದಂತೆ ಕುಟುಂಬದ ಇತರರು ಹೋಗಿ ಶಾವಮ್ಮನ ಮನೆಯ ಹಿಂದೆ ನೋಡಿದರೆ ನನ್ನ ಗಂಡನ ಸಾವು ಆಗಿತ್ತು. ಆದರೆ ನಮಗೆ ಒಂದು ಅನುಮಾನ ಹುಟ್ಟಿತು. ಆಗ ನನ್ನ ಗಂಡನ ಕೈಯಲ್ಲಿ ಅಥವಾ ಜೇಬಿನಲ್ಲಿ ಮೊಬೈಲ್ ಇರಲಿಲ್ಲ ಹಾಗೂ ಕಾಲಿನಲ್ಲಿ ಚಪ್ಪಲ್ ಇರಲಿಲ್ಲ.ನಾವುಗಳು ಅದನ್ನು ಗಮನಿಸಿದೇವು. ಆಗ ನನ್ನ ಗಂಡನ ಮೊಬೈಲ್ ಶಾವಮ್ಮನ ಮನೆಯಲ್ಲಿ ಇತ್ತು.ಶಾವಮ್ಮನ ಮನೆಯ ಮಾಳಿಗೆಯ ಮೇಲೆ ಚಪ್ಪಲ್ ಬಿದ್ದಿದ್ದವು. ಆಗ ನಮಗೆ ಅನುಮಾನ ಬಂತು. ನಾನು ಮತ್ತು ನಮ್ಮ ಕುಟುಂಬದವರು ಸೇರಿ ವಿಚಾರಣೆ ಮಾಡಿದೇವು. ಈ ಸಾವು ಹೇಗೆ ಸಾದ್ಯ ಮತ್ತು ಯಾವ ರೀತಿ ಸತ್ತು ಹೋಗಿದ್ದಾನೆ ಎಂದು ಶಾವಮ್ಮನ ಮನೆಯವರನ್ನು ವಿಚಾರಣೆ ಮಾಡಿದ್ದೇವು.ಆಗ ಅವರು ಈ ಸಾವು ಹೇಗೆ ಆಗಿದೆ ನಮಗೆ ಗೊತ್ತಿಲ್ಲವೆಂದು ತಿಳಿಸಿದರು. ಆದರೆ ನಾವುಗಳು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಈ ಹಿಂದೆ ನನ್ನ ಗಂಡನಿಗೆ ಮತ್ತು ನಿಮಗೆ ಹಳೆಯ ರಾಜಕೀಯ ವೈಷಮ್ಯ ಇತ್ತು. ಆ ವೈಷಮ್ಯ ಇಟ್ಟುಕೊಂಡು ನನ್ನ ಗಂಡನನ್ನು ಕೊಲೆ ಮಾಡಲಾಗಿದೆ. ಆದರೆ ಮೊಬೈಲ್ ಮತ್ತು ನನ್ನ ಗಂಡನ ಚಪ್ಪಲ್ ಶಾವಮ್ಮ ಅವರ ಮನೆಯಲ್ಲಿ ಮನೆಯ ಮಾಳಿಗೆಯ ಮೇಲೆ ಬಿದ್ದಿದ್ದರಿಂದ ನಮಗೆ ಅವರ ಮೇಲೆ ಅನುಮಾನ ಇದೆ. ಇದು ಬಿದ್ದು ಸತ್ತಿರುವ ಸಾವಲ್ಲ ಅನುಮಾನಾಸ್ಪದ ಸಾವಾಗಿದ್ದು, ಕೊಲೆ ಮಾಡಿದ್ದಾರೆ ಎಂದು ನಮಗೆ ಗೊತ್ತಾಗಿದೆ.ಬೆಳಿಗ್ಗೆ 22-02-2026 ರಂದು ಬೆಳಿಗ್ಗೆ ತಾವರಗೇರಾ ಪೋಲಿಸ್ ಠಾಣೆಗೆ ಪೋನ್ ಮೂಲಕ ಪೋಲಿಸರನ್ನು ಕರೆಸಿ ದೂರು ನೀಡಿದೆವು. ಆಗ ಪೋಲಿಸರು ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ವಿಚರಣೆ ಮಾಡಿದಾಗ ನಾವುಗಳು ಪೋಲಿಸರಿಗೆ ಹೇಳಿದೇವು. ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ. ಈ ಸಾವಿನ ಬಗ್ಗೆ ನಮಗೆ ಅನುಮಾನ ವಿದೆ ಎಂದು ದೂರು ನೀಡಿದೆವು. ಆದರೆ ಇದು ವರಗೆಗೂ ತಾವರಗೇರಾ ಪೋಲಿಸ್ ಠಾಣೆಯ ಠಾಣಾಧಿಕಾರಿಗಳು ನನ್ನ ಗಂಡನ ಕೊಲೆಯಾದ ಬಗ್ಗೆ ತನಿಖೆ ನೆಡೆಸಿಲ್ಲ. ಅದಕ್ಕಾಗಿ ಸೂಕ್ತ ತನಿಕೆ ನೆಡೆಸಿ ನನಗೆ ಮತ್ತು ನನ್ನ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಕಣ್ಣೀರನ್ನು ಹಾಕುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಒಂದು ವೇಳೆ ಕೊಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸದಿದ್ದರೆ ತಾವರಗೇರಾ ಪೋಲಿಸ್ ಠಾಣೆಯ ಮುಂದೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು. *ಬೈಟ್:- ನನ್ನ ಗಂಡ ಗ್ಯಾನಪ್ಪನನ್ನು ಕೊಲೆ ಮಾಡಿದ್ದು ಲಕ್ಷ್ಮವ್ವ ಗಂಡ ಲಕ್ಷ್ಮಣ್ಣ ಸಂಡೂರು, ರಮೇಶ ಕೊಳ್ಳಿ, ಚಂದ್ರಪ್ಪ ಇವರು ಸೇರಿ ಕೊಲೆ ಮಾಡಿದ್ದಾರೆ. ನಮಗೆ ಇವರ ಮೇಲೆ ಅನುಮಾನವಿದೆ ಇವರನ್ನು ಬಂಧಿಸಿ ಸೂಕ್ತ ತನಿಕೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಪೋಲಿಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಕೊಲೆಯಾಗಿ ಮೃತಪಟ್ಟ ಗ್ಯಾನಪ್ಪ ಕುರಿ ಇವರ ಹೆಂಡತಿ ಭೀಮವ್ವ ಕುರಿ* ------------------------------------ *ಬೈಟ್:- ೨ ಈ ಹಿಂದೆ ಲಕ್ಷ್ಮವ್ವ ಸಂಡೂರು ಇವರ ಜೊತೆಗೆ ನನ್ನ ತಮ್ಮನ ಜೊತೆಗೆ ಅನೈತಿಕ ಸಂಬಂಧ ಇತ್ತು ಸಾಕಷ್ಟು ಬಾರಿ ಊರಿನ ಗುರು ಹಿರಿಯರ ಜೊತೆಗೆ ಕೂಡಿ ಬುದ್ಧಿವಾದ ಹೇಳಲಾಗಿತ್ತು. ಆದರೆ ನನ್ನ ತಮ್ಮ ಗ್ಯಾನಪ್ಪನಿಗೆ ತಿದ್ದಿ ಬುದ್ದಿ ಹೇಳಿದ್ದರಿಂದ ಲಕ್ಷ್ಮವ್ವ ಸಂಡೂರು ಇವರ ಜೊತೆಗಿದ್ದ ಅನೈತಿಕ ಸಂಬಂಧವನ್ನು ಬಿಟ್ಟುಬಿಟ್ಟಿದ್ದರು. ಆದರೆ ಅದೇ ಹಳೆಯ ವೈಶಮ್ಯವನ್ನು ಇಟ್ಟುಕೊಂಡು ನನ್ನ ತಮ್ಮನನ್ನು ಕೊಲೆ ಮಾಡಿದ್ದಾರೆ. ಆದ್ದರಿಂದ ಪೋಲಿಸರು ನಮಗೆ ನ್ಯಾಯ ಕೊಡಿಸಬೇಕು, ಸೂಕ್ತ ತನಿಖೆ ನಡೆಸಬೇಕು ಕೊಲೆ ಮಾಡಿದವರನ್ನು ಬಂದಿಸಬೇಕು. ವಿರುಪಣ್ಣ ಯಮನಪ್ಪ ಕುರಿ ಮೃತ ಗ್ಯಾನಪ್ಪನ ಅಣ್ಣ.*4
- ಬಳ್ಳಾರಿಯಲ್ಲಿ ತಾಪಮಾನ 41°C ದಾಟಿರುವ ಹಿನ್ನೆಲೆ, ಸುಡುವ ಬಿಸಿಲಿಗೆ ತಂಪು ನೀಡಲು ಅರಣ್ಯ ಇಲಾಖೆ “ಮರ ದತ್ತು ಪಡೆಯಿರಿ” ಅಭಿಯಾನ ಆರಂಭಿಸಿದೆ 🌱☀️ ಡಿಸಿಎಫ್ ಬಸವರಾಜ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಳವಳಿ, ಪರಿಸರ ಸಂರಕ್ಷಣೆ ಮತ್ತು ಹಸಿರು ಬಳ್ಳಾರಿ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ. 👉 ಮನೆಗೊಂದು ಮರ ದತ್ತು 👉 ಪ್ರತಿದಿನ ನೀರುಣಿಸಿ ಪೋಷಣೆ 👉 ಬಾಟಲ್ ಹನಿ ನೀರಾವರಿ ವಿಧಾನ 👉 ಇಕೋ ಕ್ಲಬ್ ಮತ್ತು ಸಾರ್ವಜನಿಕರ ಸಹಭಾಗಿತ್ವ ಮುಂದಿನ ತಲೆಮಾರಿಗೆ ಹಸಿರು ಮತ್ತು ತಂಪಾದ ಬಳ್ಳಾರಿ ನೀಡಲು ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ 🌍1
- YADGIR BIG NEWS || “ನನ್ನ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ. ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು”!!!1
- ಕರ್ನಾಟಕದಲ್ಲಿ ಹಕ್ಕಿ ಜ್ವರ ಕಾಣಿಸಿದ ಇನ್ನಲೆ ಚಿಕ್ಕನ ಎಗ್ಗ .ತಿನ್ನುವದನ್ನು ನಿಲ್ಲಿಸಿ ಇಲ್ಲಾ ಅಂದರೆ ಹಲವಾರು ರೋಗಗಳಿಗೆ ತುತ್ತಾಗಿತಿರಾ1
- ವಿಜಯಪುರ: ಮುಸ್ಲಿಂ ಸಮಾಜ ಹತ್ತಿಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ವಿಜಯಪುರದಲ್ಲಿ ಮಂಗಳವಾರ ಮುಸ್ಲಿಂ ಸಮಾಜದ ಮುಖಂಡರು ಮಾಧ್ಯಮಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ರಾಜ್ಯ ಸರ್ಕಾರ ಮುಸ್ಲಿಂ ಸಮಾಜವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಜಕೀಯದಲ್ಲಿ ಮುಸ್ಲಿಂ ಮುಖಂಡರನ್ನು ಪದಚ್ಯುತಿಗೊಳಿಸುವ ಮೂಲಕ, ಅವರನ್ನು ಮುಗಿಸುವಂತಹ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ರಾಜ್ಯದ ಜನಸಂಖ್ಯೆಯಲ್ಲಿ ಒಂದು ಕೋಟಿಗೂ ಅಧಿಕ ಮುಸ್ಲಿಂರು ಇದ್ದಾರೆ ಎಂದು ಅವರು ಹೇಳಿದರು.1