ಏ.22ರಂದು ತೆಗ್ಗಿ ಗ್ರಾಮದ ದ್ಯಾಮವ್ವ ದುರ್ಗವ್ವ ಜಾತ್ರಾ ಮಾಹಾರಥೋತ್ಸವ ಗುಳೇದಗುಡ್ಡ : ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಜರುಗಲಿರುವ ಗ್ರಾಮದೇವತೆ ದ್ಯಾಮವ್ವ ದುರ್ಗವ್ವ ಜಾತ್ರಾ ಮಹೋತ್ಸವದ ಅಂಗವಾಗಿ ಏ.22ರಂದು ಮಧ್ಯಾಹ್ನ 12 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಗ್ರಾಮದ ದೇವಸ್ಥಾನದಿಂದ ಡೊಳ್ಳು, ಶಹನಾಯಿ ಮುಂತಾದ ವಾದ್ಯಗಳೊಂದಿಗೆ ಬಾಬದಮನೆಯ ಕಳಸದವರು ಹಳ್ಳಕ್ಕೆ ಹೋಗಿ ಅಲ್ಲಿ ಗ್ರಾಮ ದೇವತೆಗಳ ಸೀರೆಯನ್ನು ಪೂಜೆ ಮಾಡಿಕೊಂಡು ಬರುತ್ತಾರೆ. ಅಲ್ಲಿಂದ ತಂದ ಸೀರೆಗಳನ್ನು ದೇವತೆಗಳಿಗೆ ಉಡಿಸಿದ ಬಳಿಕ ಗ್ರಾಮದ ಪ್ರತಿಯೊಂದು ಮನೆಯವರು ದೇವತೆಗಳಿಗೆ ಭಕ್ತಿಯಿಂದ ಉಡಿತುಂಬಿಸುತ್ತಾರೆ. ಅಲ್ಲದೆ ದೇವಿಗೆ ಹರಕೆಯನ್ನು ತೀರಿಸುತ್ತಾರೆ. ಬಳಿಕ ಗ್ರಾಮದಲ್ಲಿ ಕಳಸ ಹಾಗೂ ಹಗ್ಗದ ಮೆರವಣಿಗೆ ನಡೆದು, ಮಧ್ಯಾಹ್ನ 12 ಗಂಟೆಗೆ ಗ್ರಾಮದೇವತೆಗಳ ಮೂರ್ತಿಗಳನ್ನು ಇರಿಸಿದ ಮಹಾರಥೋತ್ಸವ ನಡೆಯಲಿದೆ. ರಥೋತ್ಸವದಲ್ಲಿ ತೆಗ್ಗಿ, ರಾಘಾಪೂರು, ತಿಮ್ಮಸಾಗರ, ಕೆಲವಡಿ, ತೋಗಣಸಿ, ಹಂಸನೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಹಾಗೂ ಗೋವಾ ರಾಜ್ಯದ ಭಕ್ತರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಳ್ಳುವವರು. ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

- ಇಲಕಲ್ಲ ತಾಲೂಕಿನ ಬಲಕುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಇಲಕಲ್ಲ ತಾಲೂಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಸಂಘಕ್ಕೆ ಜಾಗವನ್ನು ನೀಡಬೇಕು ಎಂದು ಇಲಕಲ್ಲ ಹಾಗೂ ಹುನಗುಂದ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಇಂದು ಬಲಕುಂದಿ ಗ್ರಾಮ ಪಂಚಾಯತಿ ಕಾರ್ಯಾಲಯ ಮುಂದೆ ಹೋರಾಟ ನಡೆಸಿದರು. ಇದೆ ಸಂದರ್ಭದಲ್ಲಿ ಕರವೆ ಕಾರ್ಯಕರ್ತರು ಹೋರಾಟ ನಡೆಸಿದರು. ಕರವೇ ಹೋರಾಟದ ಮನವಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವೀಕರಿಸಿದರು. ಇ ಸಂದರ್ಭದಲ್ಲಿ ಕರವೆ ಇಲಕಲ್ಲ ತಾಲೂಕ ಅಧ್ಯಕ್ಷ ಅಶೋಕ ಪೂಜಾರಿ ಹಾಗೂ ಹುನಗುಂದ ತಾಲೂಕ ಅಧ್ಯಕ್ಷ ರೋಹಿತ್ ಬಾರಕೇರ ಹಾಗೂ ಮಹೀಳಾ ಅಧ್ಯಕ್ಷ ಶೋಭಾ ಆರಕೇರ ಹಾಗೂ ಬಲಕುಂದಿ ಗ್ರಾಮದ ಅಧ್ಯಕ್ಷ ಬಲನಗೌಡ ಗೌಡರ ಹಾಗೂ ಮೌನೇಶ್ ಬಡಗೇರ ಕಾರ್ಮಿಕ ಘಟಕದ ಅಧ್ಯಕ್ಷರು ಹಾಗೂ ಕುಮಾರ್ ಹಿರೇಮಠ ಬಲಕುಂದಿ ಘಟಕ ಉಪಾಧ್ಯಕ್ಷರು ಹಾಗೂ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.2
- ಇಳಕಲ್ : ಬಿಸಿಲಿನ ಬೇಗೆಯನ್ನು ತಪ್ಪಿಸಿಕೊಳ್ಳಲು ಗೆಳೆಯರೊಂದಿಗೆ ಈಜಲು ತೆರಳಿದ್ದ ಮೂವರು ಬಾಲಕರಲ್ಲಿ ಇಬ್ಬರು ಬಾಲಕರು ನೀರುಪಾಲಾದ ಘಟನೆ ಎಪ್ರಿಲ್ ೨೧ ಮಂಗಳವಾರ ನಡೆದಿದೆ. ಹೊರವಲಯದ ಹನಮನಾಳ ಗ್ರಾಮದ ಸಮೀಪ ಗ್ರಾನೈಟ್ ಕ್ವಾರಿಯಲ್ಲಿ ಈಜುಲು ತೆರಳಿದ್ದ ಬಾಲಕರು ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಗರದ ಅಲಂಪೂಪೇಟೆಯ ನಿವಾಸಿಗಳಾದ ವಿಜಯಮಹಾಂತೇಶ ನಾಗಪ್ಪ ವಾಲಿಕಾರ (೧೬), ವಿನಾಯಕ ಭೀಮಣ್ಣ ಗೋಲ್ಲರ (೧೨) ಮೃತಪಟ್ಟ ಬಾಲಕರು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಹಾಗೂ ಮೀನುಗಾರರು ಸತತ ೪ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರಗಡೆ ತೆಗೆದರು.ಬಾಲಕರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು. ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಸತ್ತಿಗೌಡರ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ನಡೆಸಿದ್ದಾರೆ.4
- Post by Iranna Tarnal1
- ಕರ್ನಾಟಕದ ಜನರೇ ನಾನು ಈ ಎರಡು ಮೂರು ದಿವಸ ಮುಂದೆ ಹೇಳಿದ್ದೆ. ಹಕ್ಕಿ ಜ್ವರ ಬಂದಿದೆ ಚಿಕ್ಕನ ತಿನ್ನಬೇಡಿ ಹೆಗ್ಗ ತಿನ್ನಬೇಡಿ ಅಂತ ನೋಡಿ ಆ ಹೆಣ್ಣು ಮಗಳ ಜೀವನ ಹೇಗೆ ಆಗಿದೆ ಮುಖ ಓದಿಕೊಂಡಿದೆ ಇನ್ನಾದರೂ ಎಚ್ಚೆತ್ತುಕೊಳ್ಳಿ ಮುಂದೆ ತಿನ್ನಬಹುದು ಆದರೆ ಜೀವಕ್ಕೆ ಆನೆಯಾದರೆ ಏನು ಮಾಡಕ್ಕಾಗಲ್ಲ ತಿಳಿದುಕೊಳ್ಳಬೇಕು.1
- ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ಶ್ರೀ ಗುರು ವೀರ ಸಿದ್ದ ಶಿವಯೋಗಿಗಳ 76ನೇ ಜಾತ್ರಾ ಮಹೋತ್ಸವ ಹಾಗೂ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ್ ಮಹಾಸ್ವಾಮಿಗಳ ಚತುರ್ಥಿ ಹಾಗೂ ಪುಣ್ಯರಾಧನೆ ಹಾಗೂ ಮಠದ ಶ್ರೀಗಳಿಗೆ ಬೆಳ್ಳಿ ಕಿರೀಟಧಾರಣೆ ಸಿಹಾಸರೋಹಣ ಹಾಗೂ ಬೆಳ್ಳಿ ನಾಣ್ಯಗಳಿಂದ ತುಲಾಭಾರ ಸೇವೆ ಶ್ರೀ ವೀರಸಿದ್ಧ ಶಿವಯೋಗಿಗಳ ಪಲ್ಲಕಿ ಉತ್ಸವ ಅದ್ದೂರಿಯಾಗಿ ಜರಗಿತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ನಂದಿಸಿರಿ ಪ್ರಶಸ್ತಿ ನೀಡಿ ಗೌರವಿಸಿದರು, ಗ್ರಾಮದ ಮುಖ್ಯ ಬೀದಿಗಳಲ್ಲಿ ಡೊಳ್ಳು ಕುಣಿತ , ಕರಡಿ ಮಜಲ ಗೊಂಬೆ ಕುಣಿತ, ನಂದಿ ಕೋಲು ಕುಣಿತ, ಜೋಗತಿಯರ ಕುಣಿತ, ಪುರುವಂತರ ಸೇವೆ, ದೊಂದಿಗೆ ಅದ್ದೂರಿ ಮೆರವಣಿಗೆ ಜರುಗಿತು ಹೆಬ್ಬಾಳ ಗ್ರಾಮದ ಸದ್ಭಕ್ತರು ಏರ್ಪಡಿಸಿದ ಅಗ್ನಿಕುಂಡವನು ಮಠದ ಪೂಜ್ಯರಿಂದ ಹಾಗೂ ಪರ್ವತರಿಂದ ಅಗ್ನಿಕೊಂಡವನು ಪ್ರವೇಶಿಸಿ ಮಠದಲ್ಲಿ ಬರಮಾಡಿಕೊಂಡ ನಂತರ ಸಾವಿರಾರು ಭಕ್ತರು ಶ್ರೀಗಳ ಆಶೀರ್ವಾದ ಪಡೆದು ಪುನೀತರಾದರು, ಸಾಯಂಕಾಲ 5:00 ಗಂಟೆಗೆ ರಥೋತ್ಸವ ಧೂರಿಯಾಗಿ ಜರುಗಿತು, ನಂತರ ರಂಗು ರಂಗಿನ ಮದ್ದು ಕೊಡುವ ಕಾರ್ಯಕ್ರಮಕ್ಕೆ ಮಠದ ಶ್ರೀಗಳು ಚಾಲನೆ ನೀಡಿದರು ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಪ್ರತಿ ದಿನ ರಾತ್ರಿ 10:00 ಗಂಟೆಗೆ ಬೈಲಾಟ ಮತ್ತು ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು1
- Post by @april14news1
- ವಿಜಯಪುರ: ಮುಸ್ಲಿಂ ಸಮಾಜ ಹತ್ತಿಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ವಿಜಯಪುರದಲ್ಲಿ ಮಂಗಳವಾರ ಮುಸ್ಲಿಂ ಸಮಾಜದ ಮುಖಂಡರು ಮಾಧ್ಯಮಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ರಾಜ್ಯ ಸರ್ಕಾರ ಮುಸ್ಲಿಂ ಸಮಾಜವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಜಕೀಯದಲ್ಲಿ ಮುಸ್ಲಿಂ ಮುಖಂಡರನ್ನು ಪದಚ್ಯುತಿಗೊಳಿಸುವ ಮೂಲಕ, ಅವರನ್ನು ಮುಗಿಸುವಂತಹ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ರಾಜ್ಯದ ಜನಸಂಖ್ಯೆಯಲ್ಲಿ ಒಂದು ಕೋಟಿಗೂ ಅಧಿಕ ಮುಸ್ಲಿಂರು ಇದ್ದಾರೆ ಎಂದು ಅವರು ಹೇಳಿದರು.1
- ಹುನಗುಂದ ಪಟ್ಟಣದಲ್ಲಿ ಇಂದು ಸಾಯಂಕಾಲ ಧಾರಾಕಾರವಾಗಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಅಬ್ಬರದ ಗಾಳಿ, ಗುಡುಗು–ಸಿಡಿಲಿನೊಂದಿಗೆ ಬಂದ ಮಳೆಯಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೆಲವು ಸ್ಥಳಗಳಲ್ಲಿ ನಿಂತಿದ್ದ ವಾಹನಗಳಿಗೂ ಹಾನಿ ಉಂಟಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ರಸ್ತೆಗಳು ಕೆರೆಯಂತಾಗಿವೆ. ಮಳೆಯಿಂದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ. ಸ್ಥಳೀಯರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.1