Shuru
Apke Nagar Ki App…
ಶಿವಮೊಗ್ಗ-ನೂತನ ಎಸ್ ಪಿ ನಿಖಿಲ್ ರವರಿಗೆ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಅಭಿನಂದನೆ ಶಿವಮೊಗ್ಗ: ನೂತನ ಜಿಲ್ಲಾ ವರಿಷ್ಟಾದಿ ಕಾರಿಗಳಾಗಿ ಅಧಿಕಾರ ವಹಿಸಿಕೊಂಡ ನಿಖಿಲ್ ರವರಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸ ಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಆಯುಕ್ತರಾದ ಶಕುಂತಲಾ ಚಂದ್ರಶೇಖರ್. ಕೇಂದ್ರ ಸ್ಥಾನಿಕ ಆಯುಕ್ತರುಗಳಾದ ಜಿ ವಿಜಯಕುಮಾರ್. ಕೆ ರವಿ. ಎಸ್ ಜಿ ಆನಂದ್. ಮಲ್ಲಿಕಾರ್ಜುನ ಖಾನೂರ್. ಜಿಲ್ಲಾ ಕಾರ್ಯದರ್ಶಿ ಕೆ ವಿ ಚಂದ್ರಶೇಖರಯ್ಯ ಜಿಲ್ಲಾ ಖಜಾಂಚಿ. ಚೂಡಾಮಣಿ ಈ ಪವಾರ್. ಜಿಲ್ಲಾ ತರಬೇತಿ ಆಯುಕ್ತ ಚಂದ್ರಶೇಖರಯ್ಯ,ಕೃಷ್ಣ ಸ್ವಾಮಿ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳ ಬಗ್ಗೆ ತಿಳಿಸಿ ಮಕ್ಕಳಿಗೆ ರಸ್ತೆ ಅಪಘಾತ ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ಕೇಳಿಕೊಳ್ಳಲಾಯಿತು.
ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ-ನೂತನ ಎಸ್ ಪಿ ನಿಖಿಲ್ ರವರಿಗೆ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಅಭಿನಂದನೆ ಶಿವಮೊಗ್ಗ: ನೂತನ ಜಿಲ್ಲಾ ವರಿಷ್ಟಾದಿ ಕಾರಿಗಳಾಗಿ ಅಧಿಕಾರ ವಹಿಸಿಕೊಂಡ ನಿಖಿಲ್ ರವರಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸ ಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಆಯುಕ್ತರಾದ ಶಕುಂತಲಾ ಚಂದ್ರಶೇಖರ್. ಕೇಂದ್ರ ಸ್ಥಾನಿಕ ಆಯುಕ್ತರುಗಳಾದ ಜಿ ವಿಜಯಕುಮಾರ್. ಕೆ ರವಿ. ಎಸ್ ಜಿ ಆನಂದ್. ಮಲ್ಲಿಕಾರ್ಜುನ ಖಾನೂರ್. ಜಿಲ್ಲಾ ಕಾರ್ಯದರ್ಶಿ ಕೆ ವಿ ಚಂದ್ರಶೇಖರಯ್ಯ ಜಿಲ್ಲಾ ಖಜಾಂಚಿ. ಚೂಡಾಮಣಿ ಈ ಪವಾರ್. ಜಿಲ್ಲಾ ತರಬೇತಿ ಆಯುಕ್ತ ಚಂದ್ರಶೇಖರಯ್ಯ,ಕೃಷ್ಣ ಸ್ವಾಮಿ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳ ಬಗ್ಗೆ ತಿಳಿಸಿ ಮಕ್ಕಳಿಗೆ ರಸ್ತೆ ಅಪಘಾತ ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ಕೇಳಿಕೊಳ್ಳಲಾಯಿತು.
More news from ಕರ್ನಾಟಕ and nearby areas
- ಗದಗ ನ್ಯೂಸ್ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿದೆ ತಾಮ್ರದ ಚಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆ.ಯಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿರಿವುದು ಬೆಳಕಿಗೆ ಬಂದಿದೆ. ಲಕ್ಕುಂಡಿ ವಾರ್ಡ ನಂ.4 ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆ ಜಾಗದಲ್ಲಿ ಪತ್ತೆ.. ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಸಿಕ್ಕ ನಿಧಿ. ಅಂದಾಜು 1 ಕೆಜಿ ತೂಕದ ಚಿನ್ನಾಭರಣಗಳು ಸಿಕ್ಕಿದೆ. ನಿಧಿ ನೋಡಲು ಕುತೂಹಲದಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ಗಂಗಪ್ಪ, ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ. ಚಿನ್ನಾಭರಣಗಳು ಯಾರ ಕಾಲದ್ದು ಎಂದು ತನಿಖೆ.. ನಿಧಿಯನ್ನು ವಶಕ್ಕೆ ಪೋಲೀಸರು ವಶಕ್ಕೆ ಪಡೆದಿದ್ದಾರೆ..1
- "ದ ದಾಪರ್ ಎಕ್ಸ್ ಪೋ" ಚಿತ್ರ ಕಲಾ ಪ್ರದರ್ಶನ ಉದಯ ಕೃಷ್ಣ ಜಿ ಮತ್ತು ನಿಯತಿ. ಯು ಭಟ್ ಬೆಂಗಳೂರು ತಂದೆ ಮತ್ತು ಮಗಳು ಜೊತೆಯಾಗಿ ನಡೆಸುವ ದ ದಾಪರ್ ಎಕ್ಸ್ ಪೋ ಎಂಬ ಚಿತ್ರಕಲಾ ಪ್ರದರ್ಶನವು ಜನವರಿ ೧೭ ರಿಂದ ೧೯ ರ ತನಕ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಖ್ಯಾತ ಚಿತ್ರ ಕಲಾವಿದ ಉದಯ ಕೃಷ್ಣ ಜಿ ತಿಳಿಸಿದ್ದಾರೆ. ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನ ನೀಡಿದ್ರು. ಕಾರ್ಯಕ್ರಮದ ಉದ್ಘಾಟನೆಯು ಜನವರಿ ೧೭ ರಂದು ಅಪರಾಹ್ನ ೩ ಗಂಟೆಗೆ ನಡೆಯಲಿದೆ. ಉದ್ಘಾಟನೆಯನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ. ಜಿ ಎನ್ ಭಟ್, ಖ್ಯಾತ ಜಾದೂ ಕಲಾವಿದ ಪ್ರೊ. ಶಂಕರ್, ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ನಡೆಸಲಿದ್ದಾರೆ. ಈ ಚಿತ್ರಕಲಾ ಪ್ರದರ್ಶನದಲ್ಲಿ ಪೈಂಟಿಂಗ್ ಆರ್ಟ್ , ಡ್ರಾಯಿಂಗ್ , ಫೋಟೋಗ್ರಾಫಿ , ಮಂಡಳ ಆರ್ಟ್ , ಸ್ಟ್ರಿಂಗ್ ಆರ್ಟ್ ಗಳೆಂಬ ೫ ತರದ ಚಿತ್ರಗಳ ಬೇರೆ ಬೇರೆ ಪ್ರದರ್ಶಗಳಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ, ಕೋಟಿ ಪ್ರಸಾದ್ ಆಳ್ವ ಉಪಸ್ಥಿತರಿದ್ದರು. ವರದಿ: ಶಂಶೀರ್ ಬುಡೋಳಿ1
- ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಹೊಸ ಗೊಲ್ಲರಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು . ಇದೇ ವೇಳೆ ಗ್ರಾಮದ ಮುಖಂಡರಾದ ಕೆ ಟಿ ರಾಮಾಂಜನೇಯ ಮತ್ತು ಕುಟುಂಬದವರು ಗೊಲ್ಲರಹಟ್ಟಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ತಟ್ಟೆ ನೋಟಗಳನ್ನು ಕೊಡುಗೆಯಾಗಿ ನೀಡಿದರು . ಮುಖ್ಯ ಶಿಕ್ಷಕ ಕೆ ಟಿ ತಿಪ್ಪೇಶ್ ಮಾತನಾಡದೆ ಸ್ವಾಮಿ ವಿವೇಕಾನಂದರು, ಚಿಕಾಗೋದಲ್ಲಿ ಜರುಗಿದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆಯನ್ನು ವಿಶ್ವ ಮಟ್ಟಕ್ಕೆ ಸಾರಿದರು ಎಂದು ತಿಳಿಸಿದರು . ಮುಖಂಡ ಕೆ ಟಿ ಸೋಮಶೇಖರ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಸ್ತು ಸಂಸ್ಕಾರ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಉತ್ಪಾದ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.. ಇದೇ ವೇಳೆ ಮುಖಂಡರಾದ ಕೆ.ಟಿ ಕರೆ ಗೌಡ ,ಕೆಎ ಮಧು ,ಬಿ ಪರಮೇಶ್ವರಪ್ಪ, ಎಸ್ಡಿಎಂಸಿ ಅಧ್ಯಕ್ಷ ಮಹಾಂತೇಶ್ ,ಉಪಾಧ್ಯಕ್ಷ ಶಿಲ್ಪ ಶ್ರೀ ,ಸದಸ್ಯರಾದ ಗುರುಸ್ವಾಮಿ, ಗಿರೀಶ್ ,ವಿರೂಪಾಕ್ಷಪ್ಪ ,ಮಂಜುಳಮ್ಮ ,ದಿನೇಶ್ ,ಉಮೇಶ್ ,ನೇತ್ರಮ್ಮ, ಗಂಗಮ್ಮ, ಎಸ್ ಮಧು ,ಕಾವ್ಯ ,ಶಿಕ್ಷಕರಾದ ತಿಪ್ಪೇಸ್ವಾಮಿ ಯೋಗೇಶ್ ,ಅನಿತಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಕ್ಯಾತಮ್ಮ ಇತರರಿದ್ದರು2
- ಸ್ಲಂ ಜನಾಂದೋಲನ ನರಸಿಂಹಮೂರ್ತಿ ಗೆ ಅಭಿನಂದಿಸಲಾಯಿತು1
- ಅಯ್ಯಪ್ಪ ಸ್ವಾಮಿ ವೇಷದಲ್ಲಿ ಮದ್ಯಪಾನ@citynextnews2473 https://youtube.com/shorts/ySQ7PjSr6mQ?si=k1oU70EXQEupVy4r1
- ಕಾರ್ಖಾನೆ ತೊಲಗಿಸಿ ಹೋರಾಟಕ್ಕೆ ಗವಿಶ್ರೀಗಳ ಬೆಂಬಲ ಸ್ಪಷ್ಟ - ಬೆಟ್ಟದೂರು ಗವಿಮಠ ಜಾತ್ರೆಯ ಮಿಠಾಯಿ ಪಳಾರ ಅಂಗಡಿಕಾರರಿಗೆ ಸನ್ಮಾನ ಕೊಪ್ಪಳ: ನಗರ, ಭಾಗ್ಯನಗರ ಮತ್ತು ೨೦ ಕ್ಕೂ ಅಧಿಕ ಹಳ್ಳಿಗಳ ಪರಿಸರ ಮಾಲಿನ್ಯಕ್ಕೆ ಕಾರಣವಾದ ದೂಳು, ವಿಷಾನಿಲ ಸೂಸುವ ಮೂಲಕ ಆರೋಗ್ಯಕ್ಕೆ ಮಾರಕವಾದ ಕಾರ್ಖಾನೆ ವಿರೋಧಿ ಹೋರಾಟ ೭೦ ನೇ ದಿನ ಪೂರೈಸಿರು. ಈ ಸಂದರ್ಭದಲ್ಲಿ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಹಾಕಲಾದ ಮಿಠಾಯಿ, ಪಳಾರ ಅಂಗಡಿಗಳಲ್ಲಿ ಕಾರ್ಖಾನೆ ವಿರುದ್ಧ, ಪರಿಸರ ರಕ್ಷಣೆ, ಬಲ್ಡೋಟಾ ಹಠಾವೋ ಘೋಷಣೆ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ ಅಂಗಡಿ ಮಾಲಿಕರಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ, ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದರು. ಜಾತ್ರೆಯ ರಥಬೀದಿಯಲ್ಲಿ ಯುವತಿಯರು ಹಾಕಿದ ರಂಗೋಲಿಯಲ್ಲಿ ಕಾರ್ಖಾನೆ ವಿರೋಧಿ ಹೋರಾಟವನ್ನು ಬೆಂಬಲಿಸಿ ಹಾಕಿದ ರಂಗೋಲಿ ಮತ್ತು ಪಳಾರ, ಮಿಠಾಯಿ ಅಂಗಡಿ ಮಾಲಿಕರು ಬ್ಯಾನರ್ ನಲ್ಲಿ ಎಂ.ಎಸ್.ಪಿ.ಎಲ್ ವಿಸ್ತರಣೆ ನಿಲ್ಲಿಸಿ, ಬಲ್ಡೋಟಾ ಹಠಾವೋ ಕೊಪ್ಪಳ ಬಚಾವೋ, ಕಾರ್ಖಾನೆ ಕಳಿಸಿ ಪರಿಸರ ಉಳಿಸಿ, ಕೃಷಿ ಭೂಮಿ ಉಳಿಸಿ, ಕಾರ್ಖಾನೆ ನಿಲ್ಲಿಸಿ ಕೊಪ್ಪಳ ಉಳಿಸಿ ಎಂಬಿತ್ಯಾದಿ ಘೋಷಣೆಗಳನ್ನು ಬರೆಸುವ ಮೂಲಕ ಹೋರಾಟಕ್ಕೆ ಶಕ್ತಿ ನೀಡುವ ಜೊತೆಗೆ, ಹೋರಾಟವನ್ನು ಜನಸಮಾನ್ಯರ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ, ಇದಕ್ಕೆ ಪ್ರೇರಣೆಯಾದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಎಲ್ಲರೊಟ್ಟಿಗೆ ಇದ್ದಾರೆ, ಅವರ ಬೆಂಬಲ ಇರೋದು ಸ್ವಷ್ಟ ಎಂದು ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಪ್ರತಿ ಅಂಗಡಿಯ ಮುಂದೆ ಹೋಗಿ ಅದರ ಮಾಲಿಕರಿಗೆ ಸನ್ಮಾನ ಮಾಡಿ ಜಯಘೋಷಗಳನ್ನು ಹಾಕುವ ಮೂಲಕ ಜನಜಾಗೃತಿ ಮೂಡಿಸಲಾಯಿತು. ಮಿಠಾಯಿ, ಪಳಾರ ಅಂಗಡಿ ಮಾಲೀಕರಾದ ಪ್ರದೀಪ, ಎಂ.ಡಿ. ರಫೀಕ್, ಎಂ.ಡಿ.ಜಾವೀದ್, ಎಂ.ಡಿ. ಹುಸೇನ ಮಿಠಾಯಿ, ಗುರುರಾಜ ಬಳ್ಳಾರಿ ಅವರಿಗೆ ಸನ್ಮಾನ ನೆರವೇರಿಸಿದ ತಂಡದಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಪ್ರಕಾಶಕ ಡಿ.ಎಂ.ಬಡಿಗೇರ, ಕೃಷಿ ಬೆಲೆ ಆಯೋಗ ಸದಸ್ಯರು ಡಿ.ಎಚ್. ಪೂಜಾರ, ಮಹಿಳಾ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ, ಕವಿಯಿತ್ರಿ ಪುಷ್ಪಲತಾ ಏಳುಬಾವಿ, ವಿದ್ಯಾ ನಾಲವಾಡ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್. ಬಿ. ರಾಜೂರು, ಜಿ. ಬಿ. ಪಾಟೀಲ್, ಕವಿ ಮಹೇಶ ಮನ್ನಾಪುರ, ಶರಣು ಗಡ್ಡಿ, ಪಕೀರಗೌಡ ಕಾಸನಕಂಡಿ, ನಿವೃತ್ತ ಶಿಕ್ಷಕರು ವಿರುಪಾಕ್ಷಪ್ಪ ದೊಡ್ಡಮನಿ ಪಾಲ್ಗೊಂಡರು. ೭೦ನೇ ದಿನದ ವೇದಿಕೆಯ ಧರಣ ಯಲ್ಲಿ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್, ಎ. ಎಂ. ಮದರಿ, ಮಹಾಂತೇಶ ಮಲ್ಲನಗೌಡರ, ಶಿವಾನಂದಯ್ಯ ಬೀಳಗಿಮಠ, ಬಸವರಾಜ ಪೂಜಾರ, ಯಲ್ಲಪ್ಪ ಸಿದ್ದರು ಶಿವಪುರ, ಗವಿಸಿದ್ದಪ್ಪ ಎಫ್. ತೊಂಡಿಹಾಳ, ಬಸವರಾಜ್ ಸೋಮನಾಳ, ಅಂದಪ್ಪ ಹುರಳಿ, ಭೀಮಸೇನ ಕಲಕೇರಿ, ರಮೇಶ ಬೋಚನಹಳ್ಳಿ, ಮಂಜುನಾಥ ಕವಲೂರು ಪಾಲ್ಗೊಂಡರು.6
- *ಭಾರತ ನಲ್ಲಿ ವೈರಲ್*1
- 20 ಅಡಿ ಎತ್ತರದ ಬಾರೆ ನಿರ್ಮಾಣದ ಗುಡಿ ಹತ್ತಿ ಕಳಸ ಕಿತ್ತ ವೀರಗಾಗರು ರೋಮಾಂಚನಗೊಳಿಸಿದ ಬಾರೆಕಳ್ಳೆ ಹತ್ತುವ ಸಹಸದ ದೃಶ್ಯ.. ಕಾಡುಗೊಲ್ಲರ ಬುಡಕಟ್ಟು ಸಂಸ್ಕೃತಿಯ ಜಾತ್ರೆ...ಕೇತೆಲಿಂಗನ ಪರೀಷೆ...1