Shuru
Apke Nagar Ki App…
ಲಿಂಗಸುಗೂರ ಪಟ್ಟಣದಲ್ಲಿ ಅಪ್ರಾಪ್ತ ಮಕ್ಕಳಿಂದ ಕಾರು ಚಾಲನೆ ಹೋಟೆಲ್‌ಗೆ ನುಗ್ಗಿದ ಕಾರು ರಾಯಚೂರು ಜಿಲ್ಲೆಯ ಲಿಂಗಸೂರು ಪಟ್ಟಣದಲ್ಲಿ ಅಪ್ರಾಪ್ತ ಮಕ್ಕಳಿಂದ ಕಾರು ಚಲಾವಣೆ ವೇಳೆ ಭಾರೀ ಅಪಘಾತ! 🚗 ಅತಿ ವೇಗದಲ್ಲಿ ಚಲಾಯಿಸಿದ ಕಾರು 🍽️ ಗುಲಬರ್ಗಾ ರಸ್ತೆಯ ಪಕ್ಕದ ಹೋಟೆಲ್ ಒಳಗೆ ನುಗ್ಗಿತು 🙏 ಚಾಲಕ ಪ್ರಾಣಾಪಾಯದಿಂದ ಪಾರು ಕಾರು ದೇವದುರ್ಗ ಎ.ಪಿ.ಎಂ.ಸಿ ಅಧ್ಯಕ್ಷ ಆದನಗೌಡ ಅವರದ್ದೆಂದು ತಿಳಿದುಬಂದಿದೆ. ಇನ್ನೂ ಪ್ರಕರಣ ದಾಖಲಾಗಿಲ್ಲ. ⚠️ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ!
ASN News24Kannada
ಲಿಂಗಸುಗೂರ ಪಟ್ಟಣದಲ್ಲಿ ಅಪ್ರಾಪ್ತ ಮಕ್ಕಳಿಂದ ಕಾರು ಚಾಲನೆ ಹೋಟೆಲ್‌ಗೆ ನುಗ್ಗಿದ ಕಾರು ರಾಯಚೂರು ಜಿಲ್ಲೆಯ ಲಿಂಗಸೂರು ಪಟ್ಟಣದಲ್ಲಿ ಅಪ್ರಾಪ್ತ ಮಕ್ಕಳಿಂದ ಕಾರು ಚಲಾವಣೆ ವೇಳೆ ಭಾರೀ ಅಪಘಾತ! 🚗 ಅತಿ ವೇಗದಲ್ಲಿ ಚಲಾಯಿಸಿದ ಕಾರು 🍽️ ಗುಲಬರ್ಗಾ ರಸ್ತೆಯ ಪಕ್ಕದ ಹೋಟೆಲ್ ಒಳಗೆ ನುಗ್ಗಿತು 🙏 ಚಾಲಕ ಪ್ರಾಣಾಪಾಯದಿಂದ ಪಾರು ಕಾರು ದೇವದುರ್ಗ ಎ.ಪಿ.ಎಂ.ಸಿ ಅಧ್ಯಕ್ಷ ಆದನಗೌಡ ಅವರದ್ದೆಂದು ತಿಳಿದುಬಂದಿದೆ. ಇನ್ನೂ ಪ್ರಕರಣ ದಾಖಲಾಗಿಲ್ಲ. ⚠️ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ!
More news from Raichur and nearby areas
- ರಾಯಚೂರು ಜಿಲ್ಲೆಯ ಲಿಂಗಸೂರು ಪಟ್ಟಣದಲ್ಲಿ ಅಪ್ರಾಪ್ತ ಮಕ್ಕಳಿಂದ ಕಾರು ಚಲಾವಣೆ ವೇಳೆ ಭಾರೀ ಅಪಘಾತ! 🚗 ಅತಿ ವೇಗದಲ್ಲಿ ಚಲಾಯಿಸಿದ ಕಾರು 🍽️ ಗುಲಬರ್ಗಾ ರಸ್ತೆಯ ಪಕ್ಕದ ಹೋಟೆಲ್ ಒಳಗೆ ನುಗ್ಗಿತು 🙏 ಚಾಲಕ ಪ್ರಾಣಾಪಾಯದಿಂದ ಪಾರು ಕಾರು ದೇವದುರ್ಗ ಎ.ಪಿ.ಎಂ.ಸಿ ಅಧ್ಯಕ್ಷ ಆದನಗೌಡ ಅವರದ್ದೆಂದು ತಿಳಿದುಬಂದಿದೆ. ಇನ್ನೂ ಪ್ರಕರಣ ದಾಖಲಾಗಿಲ್ಲ. ⚠️ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ!1
- ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸಫಾರಿ ಕಾರೊಂದು ಖಾನವಳಿಗೆ ನುಗ್ಗಿದ ಘಟನೆ ನಡೆದಿದೆ. ಪಟ್ಟಣದ ಮಾತಾ ಮಾಣಿಕೇಶ್ವರಿ ದೇವಸ್ಥಾನದ ಬಳಿ ಈ ಅವಘಡ ಸಂಭವಿಸಿದ್ದು, ಖಾನಾವಳಿ ಬಂದ್ ಇದ್ದ ಹಿನ್ನೆಲೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ಸ್ಥಳೀಯರ ನಿಟ್ಟುಸಿರು ಬಿಡುವಂತಾಗಿದೆ. ದೇವದುರ್ಗದ ಎಪಿಎಂಸಿ ಅಧ್ಯಕ್ಷ ಆದನಗೌಡ ಅವರಿಗೆ ಸೇರಿದ ಸಫಾರಿ ವಾಹನವು ಕಲಬುರಗಿಯಿಂದ ಲಿಂಗಸಗೂರಿನತ್ತ ಬರುತ್ತಿದ್ದ ವೇಳೆ ಅತಿವೇಗದಿಂದ ಚಲಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಾರು ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಖಾನವಳಿಗೆ ನುಗ್ಗಿ ಹಾನಿ ಉಂಟುಮಾಡಿದೆ. ಅದೃಷ್ಟ ಅಂದರೆ ಇಂದು ಕಾನಾವಳಿ ಬಂದ್ ಇದ್ದಿದರಿಂದ ಯಾವುದೇ ದೊಡ್ಡ ಅವಘಡ ಜರುಗಿಲ್ಲ.1
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ತೊಂಡಿಹಾಳ ಸಮೀಪದ ಮಾಗ೯ದಶ೯ನ ಶಿಕ್ಷಣ ಸಂಸ್ಥೆಯ ಹತ್ತಿರದ ಅಡವಿಯೊಳಗೆ ರುಂಡ ಇಲ್ಲದ ಪುರುಷನ ಶವವೊಂದು ಫೆ.೧೮ ಬುಧವಾರ ರಾತ್ರಿ ಸಮಯದಲ್ಲಿ ಕಂಡು ಬಂದಿದೆ. ಮೃತನ ಗುರುತು ಸಿಗದ ಹಾಗೆ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಾಗಲಕೋಟ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್,ಡಿವಾಯ್‌ಎಸ್‌ಪಿ, ಸಿಪಿಐ, ಪಿಎಸ್‌ಐ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೈಯಾದ ವ್ಯಕ್ತಿಯ ರುಂಡ್ ಇನ್ನೂ ಪತ್ತೆಯಾಗಿಲ್ಲ ಪೋಲಿಸರ ಕಾರ್ಯಾಚರಣೆಯನ್ನು ನಡೆಸಿದ್ದಾರೆ.3
- Post by Star Kannada News 24×71
- ಇಂದು ಬಾಗಲಕೋಟೆ ನಗರದಲ್ಲಿ ಮಹತ್ವದ ಘಟನೆ ನಡೆದಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಸಾರ್ವಜನಿಕರ ದೂರಿನ ಮೇರೆಗೆ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ ಸಂಘಟನೆ) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ದಿನಾಂಕ ೧೮.೦೨.೨೦೨೬ ರಂದು ಬೆಳಿಗ್ಗೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಪ್ರಾಧಿಕಾರದ ಮುಖ್ಯ ದ್ವಾರದ ಎದುರು ಸೇರಿ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಾಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯ ಪರಿಣಾಮವಾಗಿ ಕೆಲ ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಸಾರ್ವಜನಿಕರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು. ಇದೀಗ ಪ್ರಾಧಿಕಾರದ ಪ್ರತಿಕ್ರಿಯೆ ಏನು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ.1
- ಇಂದು ಫೆಬ್ರವರಿ 19ರಂದು ಜರುಗಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಅಂಗವಾಗಿ ಬಾಗಲಕೋಟೆ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಬುಧವಾರ ಮುಂಜಾಗೃತ ಕ್ರಮ ಕೈಗೊಂಡಿದೆ. ಎಸ್‌ಪಿ ಸಿದ್ದಾರ್ಥ ಗೋಯಲ್ ಅವರ ಆದೇಶದ ಮೇರೆಗೆ ಡಿವೈಎಸ್‌ಪಿ ಗಜಾನನ ಸುತಾರ ಅವರ ನೇತೃತ್ವದಲ್ಲಿ, ಪಿಐ ಆನಂದ ವಾಘಮೋಡೆ ಹಾಗೂ ಪಿಎಸ್‌ಐ ಜಯಶ್ರೀ ನಧಾಪ್ ಮತ್ತು ಶಾಂತಾ ಹಳ್ಳಿ ಅವರ ಮುಂದಾಳತ್ವದಲ್ಲಿ ನಗರ ಪ್ರಮುಖ ರಸ್ತೆಗಳಲ್ಲಿಪೊಲೀಸ್ ಪಥಸಂಚಲನ ನಡೆಯಿತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸಾರ್ವಜನಿಕರು ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.1
- ವಿಜಯಪುರ: ಬಾಲಕಿ ಮೇಲೆ ನಾಯಿಗಳ ಅಟ್ಯಾಕ್ ಸಿಸಿಟಿವಿಯಲ್ಲಿ ಸೆರೆ ವಿಜಯಪುರದಲ್ಲಿ ಬೀದಿ ನಾಯಿಗಳ ದಾಳಿಗೆ 6 ವರ್ಷದ ಅನ್ವಿತಾ ಮಲ್ಲಿಕಾರ್ಜುನ ಶೆಟ್ಟಿ ಎಂಬ ಬಾಲಕಿ ಗಂಭೀರ ಗಾಯಗೊಂಡಿದ್ದಾಳೆ. ಕೆ ಎಸ್ ಆರ್ ಟಿ ಸಿ ಕಾಲೋನಿಯಲ್ಲಿ ಅಂಗಡಿಗೆ ಹೋಗಿ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ. ನಾಯಿಗಳ ದಾಳಿಯಿಂದ ಬಾಲಕಿಯ ಕಣ್ಣು, ಕೈ-ಕಾಲು, ಬೆನ್ನಿಗೆ ಗಾಯಗಳಾಗಿದ್ದು, ಕಣ್ಣಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ ಮತ್ತು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.1
- ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆಬ್ರವರಿ 20 ಫೆಬ್ರವರಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ನಗರದ ರ೦ಗಮ೦ದಿರದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಕುಂಬಾರ ಸಮಾಜದ ಗೌರವಾಧ್ಯಕ್ಷ ವೈ.ಸುರೇಂದ್ರಬಾಬು ಅವರುಹೇಳಿದರು. ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷದ ಮಾದರಿಯಲ್ಲಿ ಈ ವರ್ಷ ಕೂಡ ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.1