ಸೊರಬ ತಾಲ್ಲೂಕು ಚುಂಚಾದ್ರಿ ಮಹಿಳಾ ವೇದಿಕೆ ಆಯೋಜಿಸಿದ್ದ 4ನೇ ವರ್ಷದ ಮಹಿಳಾ ದಿನಾಚರಣೆ ಸೊರಬ: ಮಹಿಳೆಯರು ಸಾಂಸಾರಿಕ ಜೀವನಕ್ಕೆ ಮಾತ್ರ ಸೀಮಿತರಾಗದೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಮೂಲಕ ಮಹಿಳಾ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಎಂದು ಸೊರಬ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ರಾಧಾ ಉಮೇಶ್ ಭದ್ರಾಪುರ ಹೇಳಿದರು. ಪಟ್ಟಣದ ಗಿರಿಜಾಶಂಕರ ಸಭಾಭವನದಲ್ಲಿ ತಾಲ್ಲೂಕು ಚುಂಚಾದ್ರಿ ಮಹಿಳಾ ವೇದಿಕೆ ಆಯೋಜಿಸಿದ್ದ 4ನೇ ವರ್ಷದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಿಳೆಯರನ್ನು ಗೌರವಿಸುವ ಸಮಾಜಗಳಲ್ಲಿ ಶಾಂತಿ ನೆಲೆಸುತ್ತದೆ. ಮಹಿಳಾ ಸಬಲೀಕರಣ ಮನೆಯಿಂದಲೇ ಆರಂಭವಾಗಬೇಕು. ಗ್ರಾಮೀಣ ಮಹಿಳೆಯರ ಶೈಕ್ಷಣಿಕ ಪ್ರಗತಿ ಮತ್ತು ಸಂಘಟನೆ ಚುಂಚಾದ್ರಿ ಮಹಿಳಾ ವೇದಿಕೆಯ ಧ್ಯೇಯ. ಕೃಷಿಕ ಮಹಿಳೆಯರು ಕೃಷಿಯ ಜೊತೆಯಲ್ಲಿ ಕೈಕಸುಬುಗಳನ್ನು ಮಾಡುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಬೇಕು. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುವ ಮೂಲಕ ಹೊರ ಪ್ರಪಂಚದ ಅರಿವು ಹೊಂದಬೇಕು. ಮಹಿಳೆ ಇಂದು ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಕ್ರೀಡೆ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ. ಮಹಿಳೆಯರ ಪ್ರತಿಭೆಯನ್ನು ಪುರಸ್ಕರಿಸಿ ಗೌರವಿಸುವುದು ವೇದಿಕೆಯ ಉದ್ದೇಶ ಎಂದರು. ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದ ಶಿರಾಳಕೊಪ್ಪದ ಶ್ರೀಧರ ಇಂಟರ್ ನ್ಯಾಷನಲ್ ಸ್ಕೂಲ್ ನ ಶಿಕ್ಷಕಿ ಸುನಿತಾ ಪಿ.ಎಸ್ ಮಾತನಾಡಿ ಮಹಿಳೆ ಎದುರಿಸುತ್ತಿರುವ ಸವಾಲುಗಳಿಂದ ಹೊರಬಂದು ಸಬಲೀಕರಣಗೊಂಡಾಗ ಮಾತ್ರ ಶೋಷಣೆಯಿಂದ ಮುಕ್ತಿ ಹೊಂದಬಹುದು. ಭಾರತೀಯ ಸಂಸ್ಕೃತಿಯ ಸಂರಕ್ಷಕಿಯಾಗಿ ಸ್ತ್ರೀ ಪ್ರಧಾನ ಮೌಲ್ಯಗಳನ್ನು ಉಳಿಸಿ ಬೆಳೆಸುವ ಬಾಧ್ಯತೆಯನ್ನು ಮಹಿಳೆ ಹೊಂದಿದ್ದಾಳೆ. ಮಹಿಳೆ ತನ್ನ ನಿತ್ಯ ಜೀವನದಲ್ಲಿ ಧನಾತ್ಮಕವಾಗಿ ಆಲೋಚಿಸಿ ಪ್ರಗತಿ ಪಥದತ್ತ ಸಾಗಬೇಕು. ಸ್ತ್ರೀ ಸಮಾಜದ ಮುಖ್ಯ ವಾಹಿನಿಗೆ ಬಂದು ತನ್ನ ನಿರ್ಧಾರವನ್ನು ತಾನು ತೆಗೆದುಕೊಳ್ಳುವಂತಾದಾಗ ಮಾತ್ರ ಸಬಲೀಕರಣಕ್ಕೆ ಅರ್ಥ ಬರುತ್ತದೆ. ಸಾಧನೆ ಎಂದರೆ ಕೇವಲ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಎಂದು ಭಾವಿಸದೆ ಮಹಿಳೆ ತಾನು ಜೀವಿಸುತ್ತಿರುವ ಪ್ರದೇಶದಲ್ಲಿಯೇ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಂಡು ಆ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು ಎಂದರು. ಸೊರಬ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಬಿ ಮಂಜಪ್ಪ ಬನದಕೊಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿ ಮಹಿಳೆ ಇಂದು ವಿವಿಧ ರಂಗಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ. ಮಹಿಳೆಯರೆ ಕುಟುಂಬದಲ್ಲಿ ನಿರ್ಣಾಯಕ ಎಂದರು. ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಉಮಾಕಾಂತ ನೆಲ್ಲೂರು, ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ, ಸಾಗರ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಉಮಾ ಬಸವರಾಜ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಲೋಚನ ಸುಬ್ರಾಯ ನೆಲ್ಲೂರು, ಅಶ್ವಿನಿ ಹೊಸಕೊಪ್ಪ, ಮಮತಾ ಭೈರಪ್ಪ ನಿಸರಾಣಿ, ಗೋದಾವರಿ ಹೊಸಕೊಪ್ಪ, ಕವನ ಹುಲೇಮರಡಿ, ಗೋದಾವರಿ ಗಣಪತಪ್ಪ ಯಕ್ಷಿ, ಜ್ಯೋತಿ ಉಮಾಕಾಂತ ನೆಲ್ಲೂರು. ನೇತ್ರಾ ನಾಯ್ಕ್, ಸರಿತಾ ರಂಗಸ್ವಾಮಿ, ವೀಣಾ ಗೋಸಿ, ಪ್ರೇಮ ಮಂಜಪ್ಪ, ವರದರಾಜ, ಕನ್ನಮ ಉಪಸ್ಥಿತರಿದ್ದರು. ಸವಿತ ಕೃಷ್ಣಪ್ಪ ನಿರೂಪಿಸಿ ಸವಿತಾ ರಂಗಸ್ವಾಮಿ ಸ್ವಾಗತಿಸಿ ಜ್ಯೋತಿ ಉಮಾಕಾಂತ ನೆಲ್ಲೂರು ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಮಹಿಳೆಯರಿಗೆ ವಿವಿಧ ಒಳಾಂಗಣ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

- ಕಂಬದಾಳ್ ಹೊಸೂರು ಕ್ಯಾಂಪ್ ಆಟದ ಮೈದಾನ ಆವರಣದಲ್ಲಿ ನಡೆದ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ವ್ಯಾಪ್ತಿಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರನ್ನು ಕಂಡು ಮನತುಂಬಿ ಬಂತು, ಈ ಕಾರ್ಯಕ್ರಮಕ್ಕೆ ಇಡೀ ಗ್ರಾಮವನ್ನೇ ಹಬ್ಬದ ರೀತಿಯಲ್ಲಿ ಸಿಂಗರಿಸಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿಯ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸದಸ್ಯರುಗಳು, ಸರ್ಕಾರಿ ಅಧಿಕಾರಿಗಳು ಮತ್ತು ಆರಕ್ಷಕ ಅಧಿಕಾರಿಗಳಿಗೂ ವಿಶೇಷ ಧನ್ಯವಾದಗಳು. ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಒಂದೇಡೆ ಸೇರಿಸಿ ಜನರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ಮಾಡುವಲ್ಲಿ ಯಶಸ್ವಿಗೊಳ್ಳಲಾಯಿತು.ನಿಮ್ಮ ಈ ಪ್ರೀತಿ ಅಭಿಮಾನ ಚಿರಕಾಲ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಬಯಸುತ್ತೆನೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಟ್ಟ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ನಮ್ಮ ಕುಟುಂಬದ ಅಭಿಮಾನಿಗಳಿಗೂ ನನ್ನ ಸಾಷ್ಟಂಗ ನಮಸ್ಕಾರ1
- ಕಡೂರು: ವಿಧಾನ ಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಮನೆಗಳಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಆದರೆ ಅಗ್ನಿ ಅವಘಡ ಯಾಕೆ ಆಯಿತು ಎಂಬ ಕಾರಣ ತಿಳಿಯದೆ ಮನೆಗಳು ಸುಟ್ಟು ಹೋದಾಗ ಜನರಿಗೆ ಪರಿಹಾರ ದೊರೆಯದೇ ಅತ್ಯಂತ ಕಷ್ಟವಾಗುತ್ತಿದ್ದು ಮನೆ ಸುಟ್ಟು ಹೋಗಲು ಸ್ಪಷ್ಟ ಕಾರಣ ತಿಳಿಯದೇ ಹೋದಾಗ ಕೂಡಾ ಆ ಮನೆಗಳಿಗೆ ಎಸ್ಡಿಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ಮೂಲಕ ಪರಿಹಾರ ನೀಡಬೇಕಾಗಿ ಸದನದಲ್ಲಿ ಮನವಿ ಮಾಡಿದರು. ಕಳೆದ ಆರು ತಿಂಗಳಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತಗಳಿಗೆ ಸುಮಾರು 7 ಮನೆಗಳು ಸುಟ್ಟು ಹೋಗಿದ್ದು ಈ ರೀತಿ ಬೆಂಕಿ ಅವಘಡಗಳಿಗೆ ಸುಟ್ಟು ಹೋದ ಮನೆಗಳಿಗೆ ಸರ್ಕಾರ ಹೆಚ್ಚಿನ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಲ್ಲಿ ಒತ್ತಾಯಿಸಿದರು.1
- ದಾವಣಗೆರೆ : ದಾವಣಗೆರೆ ದಕ್ಷಿಣ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಬಿಟ್ಟ ವಿಚಾರ. ಯುಗಾದಿ ಹಬ್ಬದ ನಂತರ ನೋಡೋಣ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್ . ಮಲ್ಲಿಕಾರ್ಜುನ್ ಅವರು ರೂ.1061 ಲಕ್ಷಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.1
- ತೋಡ್ಲರಹಟ್ಟಿ ಗ್ರಾಮದಲ್ಲಿ ಮಕ್ಕಳ ಕಳ್ಳಿಯೆಂದು ಅನುಮಾನಗೊಂಡು ಮಹಿಳೆಗೆ ಧರ್ಮದೇಟು ಕೊಟ್ಟ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತೋಡ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ಘಟನೆ ನಡೆದಿದ್ದು ಪ್ರಖರಣ ತಡವಾಗಿ ಬೆಳಕಿಗೆ ಬಂದಿದೆ. ಮಕ್ಕಳು ಕಳ್ಳಿಯೆಂದು ಅನುಮಾನಗೊಂಡ ಗ್ರಾಮದ ಮಹಿಳೆಯರು ಮಹಿಳೆಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ತೋಡ್ಲರಹಟ್ಟಿಯಲ್ಲಿ ನಡೆದಿದೆ1
- ಇತ್ತೀಚಿನ ದಿನಗಳಲ್ಲಿ ಮಣ್ಣಿನ ಮನೆಗಳ ನಿರ್ಮಾಣ ಇಲ್ಲದ ಕಾರಣ ಸಿಮೆಂಟು ಮನೆಗಳ ನಿರ್ಮಾಣದಿಂದಾಗಿ ಮನೆಗಳಿಗೆ ಸುಣ್ಣ ಬದಲು ಬಣ್ಣಗಳ ಮರೆ ಹೋಗುತ್ತಿರುವುದರಿಂದ ಸುಣ್ಣಗಾರರ ಬದುಕು ಬಣ್ಣ ಕಳೆದುಕೊಳ್ಳುತ್ತಿದೆ... ಸುಣ್ಣಗಾರರ ಬದಕು ಕುರಿತು ಒಂದು ವರದಿ . ಸುರೇಶ ಬೆಳಗೆರೆ 97398757291
- ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇಶನ ದರ್ಶನಕ್ಕೆ ಭಕ್ತರ ಸಾಗರ ನಾಯಕನಹಟ್ಟಿಯಲ್ಲಿ ಸೋಮವಾರ ಶ್ರೀ ಗುರು ತಿಪ್ಪೇಶನ ಸ್ವಾಮಿ ದರ್ಶನ ಪಡೆಯಲು ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಭಕ್ತಿಭಾವದಿಂದ ದರ್ಶನ ಪಡೆದರು. ಭಕ್ತರು ದೇವರ ಬಳಿ ಮನಸಿನ ಹರಕೆ ತೀರಿಸಲು ಗೊಬರಿ ಸುಡುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೇತೂರು ಗ್ರಾಮದ ಉದ್ಯಮಿಯೊಬ್ಬರು ಅನ್ನದಾಸೋಹ ವ್ಯವಸ್ಥೆ ಮಾಡಿದ್ದರೆ, ದಾವಣಗೆರೆ ಮೂಲದ ಉದ್ಯಮಿಯೊಬ್ಬರು ಭಕ್ತರಿಗೆ ಉಚಿತ ಲಾಡು ವಿತರಣೆ ಮಾಡಿದರು. ಕಾರ್ಯಕ್ರಮದ ವೇಳೆ ಆಡಳಿತಾಧಿಕಾರಿ ಗಂಗಾಧರಪ್ಪ, ಸಿಬ್ಬಂದಿ ಸತೀಶ್ ಸೇರಿದಂತೆ ಇತರರು ಭಕ್ತರಿಗೆ ಲಾಡು ವಿತರಣೆ ಮಾಡಿ ಸೇವೆಯಲ್ಲಿ ಭಾಗವಹಿಸಿದರು.1
- ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ ಕಚೇರಿ ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs1
- ಚಳ್ಳಕೆರೆ ತಾಲ್ಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ವಡ್ಡನಾಹಾಳ್‌ನ ಶ್ರೀ ವಿಶ್ವಕರ್ಮ ಮಹಾ ಸಂಸ್ಥಾನ ಸರಸ್ವತಿ ಪೀಠದಲ್ಲಿ 2026ರ ಏಪ್ರಿಲ್ 19ರಂದು ನಡೆಯಲಿರುವ ಶ್ರೀ ಗಾಯತ್ರಿ ಮಹಾಯಜ್ಞ ಹಾಗೂ ಸಾವಿತ್ರೀ ದೇವಸ್ಥಾನದ ಅಡಿಗಲ್ಲು ಸಮಾರಂಭದ ಪೂರ್ವಸಿದ್ಧತೆ ಕುರಿತು ಸಭೆ ನಡೆಯಿತು.1