logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವಿಶ್ವಕರ್ಮ ಸಮಾಜ ಪುರಾಣ ಕಾಲದಿಂದ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ಮಹತ್ವವನ್ನು ಹೊಂದಿದೆ-ಎಡಿಸಿ ಶಿವಾನಂದ ಮಂಡ್ಯ-ವಿಶ್ವಕರ್ಮ ಸಮಾಜವು ಪುರಾಣ ಕಾಲದಿಂದಲೂ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ತಿಳಿಸಿದರು ಮಂಡ್ಯದ ಅಂಬೇಡ್ಕರ್ ಭವನದಲ್ಲಿಂದು ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು ಜನನದಿಂದ ಮರಣದವರೆಗೆ ನಡೆಯುವ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಸಮುದಾಯದ ಸೇವೆ ಮಹತ್ವದ್ದಾಗಿದೆ ಎಂದರು. ದೇವಾಲಯಗಳು, ಕಟ್ಟಡಗಳು, ಮನೆಗಳು ಹಾಗೂ ವಿವಿಧ ಉಪಕರಣಗಳ ನಿರ್ಮಾಣದಲ್ಲಿ ಶಿಲ್ಪಿಗಳು ಮತ್ತು ಕುಶಲಕರ್ಮಿಗಳ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವದಿಂದ ನಿರ್ವಹಿಸು ವುದರೊಂದಿಗೆ ಸಮಾಜ ಸೇವೆಯಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿಶ್ವಕರ್ಮ ಸಮಾಜದ ಯುವಜನರು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ, ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಹಾಗೂ ಕೌಶಲ್ಯ ಒದಗಿಸುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು

1 hr ago
user_Arunprasad G B
Arunprasad G B
Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
1 hr ago

ವಿಶ್ವಕರ್ಮ ಸಮಾಜ ಪುರಾಣ ಕಾಲದಿಂದ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ಮಹತ್ವವನ್ನು ಹೊಂದಿದೆ-ಎಡಿಸಿ ಶಿವಾನಂದ ಮಂಡ್ಯ-ವಿಶ್ವಕರ್ಮ ಸಮಾಜವು ಪುರಾಣ ಕಾಲದಿಂದಲೂ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ತಿಳಿಸಿದರು ಮಂಡ್ಯದ ಅಂಬೇಡ್ಕರ್ ಭವನದಲ್ಲಿಂದು ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು ಜನನದಿಂದ ಮರಣದವರೆಗೆ ನಡೆಯುವ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಸಮುದಾಯದ ಸೇವೆ ಮಹತ್ವದ್ದಾಗಿದೆ ಎಂದರು. ದೇವಾಲಯಗಳು, ಕಟ್ಟಡಗಳು, ಮನೆಗಳು ಹಾಗೂ ವಿವಿಧ ಉಪಕರಣಗಳ ನಿರ್ಮಾಣದಲ್ಲಿ ಶಿಲ್ಪಿಗಳು ಮತ್ತು ಕುಶಲಕರ್ಮಿಗಳ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವದಿಂದ ನಿರ್ವಹಿಸು ವುದರೊಂದಿಗೆ ಸಮಾಜ ಸೇವೆಯಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿಶ್ವಕರ್ಮ ಸಮಾಜದ ಯುವಜನರು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ, ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಹಾಗೂ ಕೌಶಲ್ಯ ಒದಗಿಸುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು

More news from ಕರ್ನಾಟಕ and nearby areas
  • ವಿಶ್ವಕರ್ಮ ಸಮಾಜ ಪುರಾಣ ಕಾಲದಿಂದ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ಮಹತ್ವವನ್ನು ಹೊಂದಿದೆ-ಎಡಿಸಿ ಶಿವಾನಂದ ಮಂಡ್ಯ-ವಿಶ್ವಕರ್ಮ ಸಮಾಜವು ಪುರಾಣ ಕಾಲದಿಂದಲೂ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ತಿಳಿಸಿದರು ಮಂಡ್ಯದ ಅಂಬೇಡ್ಕರ್ ಭವನದಲ್ಲಿಂದು ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು ಜನನದಿಂದ ಮರಣದವರೆಗೆ ನಡೆಯುವ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಸಮುದಾಯದ ಸೇವೆ ಮಹತ್ವದ್ದಾಗಿದೆ ಎಂದರು. ದೇವಾಲಯಗಳು, ಕಟ್ಟಡಗಳು, ಮನೆಗಳು ಹಾಗೂ ವಿವಿಧ ಉಪಕರಣಗಳ ನಿರ್ಮಾಣದಲ್ಲಿ ಶಿಲ್ಪಿಗಳು ಮತ್ತು ಕುಶಲಕರ್ಮಿಗಳ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವದಿಂದ ನಿರ್ವಹಿಸು ವುದರೊಂದಿಗೆ ಸಮಾಜ ಸೇವೆಯಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿಶ್ವಕರ್ಮ ಸಮಾಜದ ಯುವಜನರು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ, ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಹಾಗೂ ಕೌಶಲ್ಯ ಒದಗಿಸುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು
    1
    ವಿಶ್ವಕರ್ಮ ಸಮಾಜ ಪುರಾಣ ಕಾಲದಿಂದ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ಮಹತ್ವವನ್ನು ಹೊಂದಿದೆ-ಎಡಿಸಿ ಶಿವಾನಂದ
ಮಂಡ್ಯ-ವಿಶ್ವಕರ್ಮ ಸಮಾಜವು ಪುರಾಣ ಕಾಲದಿಂದಲೂ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ತಿಳಿಸಿದರು ಮಂಡ್ಯದ ಅಂಬೇಡ್ಕರ್ ಭವನದಲ್ಲಿಂದು ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು  ಜನನದಿಂದ ಮರಣದವರೆಗೆ ನಡೆಯುವ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಸಮುದಾಯದ ಸೇವೆ ಮಹತ್ವದ್ದಾಗಿದೆ ಎಂದರು.
ದೇವಾಲಯಗಳು, ಕಟ್ಟಡಗಳು, ಮನೆಗಳು ಹಾಗೂ ವಿವಿಧ ಉಪಕರಣಗಳ ನಿರ್ಮಾಣದಲ್ಲಿ ಶಿಲ್ಪಿಗಳು ಮತ್ತು ಕುಶಲಕರ್ಮಿಗಳ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವದಿಂದ ನಿರ್ವಹಿಸು ವುದರೊಂದಿಗೆ ಸಮಾಜ ಸೇವೆಯಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ಯುವಜನರು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ, ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಹಾಗೂ ಕೌಶಲ್ಯ ಒದಗಿಸುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    1 hr ago
  • ಸಾಮೂಹಿಕವಾಗಿ ದೀಪ ಹಚ್ಚಿ ಪ್ರಧಾನಿ ಮೋದಿ ಜನ್ಮದಿನ ಆಚರಿಸಿದ ಅಭಿಮಾನಿಗಳು ಪ್ರಧಾನಮಂತ್ರಿ ನರೇಂದ್ರಮೋದಿ ರವರ 76 ನೇ ಜನ್ಮ ದಿನದ ಅಂಗವಾಗಿ ಮಳವಳ್ಳಿಪಟ್ಟಣದ ಕೋಟೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ದೀಪ ಹಚ್ಚಿ ಮೋದಿ ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಜೆಡಿಎಸ್ ಮುಖಂಡ ನಂದಕುಮಾರ ಮಾತನಾಡಿ, ನರೇಂದ್ರಮೋದಿ ಇನ್ನೂ ಹತ್ತಾರು ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸಲಿ ಎಂದರು. ಇನ್ನೂ ಇದೇ ವೇಳೆ ಪುರಸಭೆ ಮಾಜಿಸದಸ್ಯ ಕೃಷ್ಣ ಮಾತನಾಡಿ, ನರೇಂದ್ರಮೋದಿಜೀ ವಿಶ್ವಗುರು ಎನ್ನಸಿಕೊಂಡಿದ್ದಾರೆ, ಅವರಿಗೆ ದೇವರು ಆರೋಗ್ಯ ಅಯಸ್ಸು ನೀಡಲಿ ಎಂದರು. ಈ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ಕೃಷ್ಣ, ಜೆಡಿಎಸ್ ಮುಖಂಡ ನಂದಕುಮಾರ, ಬಿಜೆಪಿ ಹಿರಿಯ ಮುಖಂಡ ಅಪ್ಪಾಜೀಗೌಡ, ಕೋಟೆ ಸಲೀಂಪಾಷ, ಬಸವರಾಜು ವಿಶ್ವನಾಥ ಸೇರಿದಂತೆ ಹಲವರು ಇದ್ದರು.
    1
    ಸಾಮೂಹಿಕವಾಗಿ ದೀಪ ಹಚ್ಚಿ   ಪ್ರಧಾನಿ ಮೋದಿ  ಜನ್ಮದಿನ ಆಚರಿಸಿದ  ಅಭಿಮಾನಿಗಳು 
ಪ್ರಧಾನಮಂತ್ರಿ ನರೇಂದ್ರಮೋದಿ ರವರ 76 ನೇ ಜನ್ಮ ದಿನದ ಅಂಗವಾಗಿ ಮಳವಳ್ಳಿಪಟ್ಟಣದ ಕೋಟೆ  ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ   ವಿಶೇಷ ಪೂಜೆ ಹಾಗೂ ದೀಪ ಹಚ್ಚಿ  ಮೋದಿ ಅಭಿಮಾನಿಗಳು ಸಂಭ್ರಮಿಸಿದರು.
ಈ ವೇಳೆ  ಜೆಡಿಎಸ್ ಮುಖಂಡ ನಂದಕುಮಾರ ಮಾತನಾಡಿ,  ನರೇಂದ್ರಮೋದಿ ಇನ್ನೂ ಹತ್ತಾರು ವರ್ಷಗಳ ಕಾಲ  ಈ ದೇಶವನ್ನು ಮುನ್ನಡೆಸಲಿ ಎಂದರು.
ಇನ್ನೂ ಇದೇ ವೇಳೆ  ಪುರಸಭೆ ಮಾಜಿಸದಸ್ಯ ಕೃಷ್ಣ ಮಾತನಾಡಿ, ನರೇಂದ್ರಮೋದಿಜೀ  ವಿಶ್ವಗುರು  ಎನ್ನಸಿಕೊಂಡಿದ್ದಾರೆ, ಅವರಿಗೆ  ದೇವರು ಆರೋಗ್ಯ ಅಯಸ್ಸು ನೀಡಲಿ ಎಂದರು.
ಈ ವೇಳೆ  ಬಿಜೆಪಿ ಮಾಜಿ ಅಧ್ಯಕ್ಷ ಕೃಷ್ಣ, ಜೆಡಿಎಸ್ ಮುಖಂಡ ನಂದಕುಮಾರ, ಬಿಜೆಪಿ ಹಿರಿಯ ಮುಖಂಡ  ಅಪ್ಪಾಜೀಗೌಡ, ಕೋಟೆ ಸಲೀಂಪಾಷ, ಬಸವರಾಜು ವಿಶ್ವನಾಥ ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
  • ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ಇಂಜಿನಿಯರ್ಸ್ ದಿನಾಚರಣೆ. ಇಂಜೀನಿಯರ್ ದಂಪತಿಗಳಿಗೆ ಸನ್ಮಾನ ಮಳವಳ್ಳಿ ಪಟ್ಟಣದ ರೋಟರಿ ಶಾಲೆ ಹಾಗೂ ತಾಲೂಕಿನ ದೊಡ್ಡಬೂಹಳ್ಳಿ ಮತ್ತು ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವ ರಯ್ಯ ಜನ್ಮದಿನದ ಅಂಗವಾಗಿ ಎಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮವನ್ನು ರೋಟರಿ ಸಂಸ್ಥೆ ವತಿಯಿಂದ ಆಯೋಜಿಸ ಲಾಗಿತ್ತು. ಬುಧವಾರ ಮಧ್ಯಾಹ್ನ 12.30 ರ ಸಮಯದಲ್ಲಿ ಪಟ್ಟಣದ ರೋಟರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಜಿನಿ ಯರ್ ದಂಪತಿಗಳಾದ ಆರ್.ಜಿ.ಅರುಣ್ ಹಾಗೂ ಸುರಕ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ದಂಪತಿಗಳು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ರೋಟರಿ ಸಂಸ್ಥೆ ಕಾರ್ಯದರ್ಶಿ ಆರ್.ಜಿ.ಮಹದೇವಸ್ವಾಮಿ ಅವರು ವಿಶ್ವ ಓಝೋನ್ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿಯ ಬಗ್ಗೆ ಪ್ರತಿಯೊಬ್ಬರೂ ಜವಾಬ್ದಾರಿ ಹೊಂದಿರಬೇಕು ಎಂದು ತಿಳಿಸಿದರು. ತಾಲೂಕಿನ ನೆಲ್ಲಿಗೆರೆ ಮತ್ತು ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಗಳಲ್ಲೂ ರೋಟರಿ ಸಂಸ್ಥೆ ವತಿಯಿಂದ ಎಂಜಿನಿ ಯರ್ಸ್ ದಿನಾಚರಣೆ ಕಾರ್ಯಕ್ರಮ ನಡೆಯಿತು. ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಎಂಜಿನಿಯರ್ ನರಸಿಂಹಮೂರ್ತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನರಸಿಂಹಮೂರ್ತಿ ಅವರು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ದೊಡ್ಡಬೂಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ನಾಗೇಂದ್ರ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂಜಿನಿಯರ್ಸ್ ದಿನಾಚರಣೆ ಮಾಹಿತಿಯನ್ನು ಎಂಜಿನಿಯರ್ ದಂಪತಿಗಳಾದ ಆರ್.ಜಿ.ಅರುಣ್ ಹಾಗೂ ಸುರಕ್ಷ ಅವರುಗಳು ವಿದ್ಯಾರ್ಥಿಗಳಿಗೆ ವಿವರಿಸಿದರು. ಸಮಾರಂಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಮಹಮದ್ ಜಬೀವುಲ್ಲಾ, ಘನಶ್ಯಾಮ್ ದಾಸ್, ಆರ್.ಜಿ.ಮಹದೇವ ಸ್ವಾಮಿ, ಎಂ.ವಿ.ಸೋಮ ಶೇಖರ್, ಹರೀಶ್ ಸೇರಿದಂತೆ ಇತರ ಗಣ್ಯರು, ಶಿಕ್ಷಕರು ಉಪಸ್ಥಿತರಿದ್ದರು.
    1
    ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ಇಂಜಿನಿಯರ್ಸ್ ದಿನಾಚರಣೆ. ಇಂಜೀನಿಯರ್ ದಂಪತಿಗಳಿಗೆ ಸನ್ಮಾನ
ಮಳವಳ್ಳಿ  ಪಟ್ಟಣದ ರೋಟರಿ ಶಾಲೆ ಹಾಗೂ ತಾಲೂಕಿನ ದೊಡ್ಡಬೂಹಳ್ಳಿ ಮತ್ತು ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವ ರಯ್ಯ ಜನ್ಮದಿನದ ಅಂಗವಾಗಿ ಎಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮವನ್ನು ರೋಟರಿ ಸಂಸ್ಥೆ ವತಿಯಿಂದ ಆಯೋಜಿಸ ಲಾಗಿತ್ತು.
ಬುಧವಾರ ಮಧ್ಯಾಹ್ನ 12.30 ರ ಸಮಯದಲ್ಲಿ ಪಟ್ಟಣದ ರೋಟರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಜಿನಿ ಯರ್ ದಂಪತಿಗಳಾದ ಆರ್.ಜಿ.ಅರುಣ್ ಹಾಗೂ ಸುರಕ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ದಂಪತಿಗಳು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ರೋಟರಿ ಸಂಸ್ಥೆ ಕಾರ್ಯದರ್ಶಿ ಆರ್.ಜಿ.ಮಹದೇವಸ್ವಾಮಿ ಅವರು ವಿಶ್ವ ಓಝೋನ್ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿಯ ಬಗ್ಗೆ ಪ್ರತಿಯೊಬ್ಬರೂ ಜವಾಬ್ದಾರಿ ಹೊಂದಿರಬೇಕು ಎಂದು ತಿಳಿಸಿದರು.
ತಾಲೂಕಿನ ನೆಲ್ಲಿಗೆರೆ ಮತ್ತು ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಗಳಲ್ಲೂ ರೋಟರಿ ಸಂಸ್ಥೆ ವತಿಯಿಂದ ಎಂಜಿನಿ ಯರ್ಸ್ ದಿನಾಚರಣೆ ಕಾರ್ಯಕ್ರಮ ನಡೆಯಿತು. 
ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಬಸವರಾಜು ಅಧ್ಯಕ್ಷತೆಯಲ್ಲಿ  ನಡೆದ ಕಾರ್ಯಕ್ರಮದಲ್ಲಿ  ನಿವೃತ್ತ ಎಂಜಿನಿಯರ್  ನರಸಿಂಹಮೂರ್ತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನರಸಿಂಹಮೂರ್ತಿ ಅವರು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ದೊಡ್ಡಬೂಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ನಾಗೇಂದ್ರ ಮೂರ್ತಿ ಅಧ್ಯಕ್ಷತೆಯಲ್ಲಿ  ನಡೆದ ಸರಳ ಸಮಾರಂಭದಲ್ಲಿ  ಎಂಜಿನಿಯರ್ಸ್ ದಿನಾಚರಣೆ ಮಾಹಿತಿಯನ್ನು ಎಂಜಿನಿಯರ್ ದಂಪತಿಗಳಾದ ಆರ್.ಜಿ.ಅರುಣ್ ಹಾಗೂ ಸುರಕ್ಷ ಅವರುಗಳು ವಿದ್ಯಾರ್ಥಿಗಳಿಗೆ ವಿವರಿಸಿದರು.
ಸಮಾರಂಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಮಹಮದ್ ಜಬೀವುಲ್ಲಾ, ಘನಶ್ಯಾಮ್ ದಾಸ್, ಆರ್.ಜಿ.ಮಹದೇವ ಸ್ವಾಮಿ, ಎಂ.ವಿ.ಸೋಮ ಶೇಖರ್,  ಹರೀಶ್ ಸೇರಿದಂತೆ ಇತರ ಗಣ್ಯರು, ಶಿಕ್ಷಕರು  ಉಪಸ್ಥಿತರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    3 hrs ago
  • ಸೆ.20ರಂದು ಭಾರತೀ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆ, ಪ್ರತಿಭಾ ಪುರಸ್ಕಾರ ರಾಮನಗರ : ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ದಿ ಭಾರತೀ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸರ್ವ ಸದಸ್ಯರ ಸಭೆ ಸೆ.20ರ ಭಾನುವಾರ ವಿವೇಕಾನಂದನಗರ, ಬಿ.ಎಂ. ರಸ್ತೆಯಲ್ಲಿರುವ ರಾಯಲ್ ಕನ್‌ವೆನ್‌ಷನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕೆ.ಚಂದ್ರಯ್ಯ ತಿಳಿಸಿದರು. ನಗರದ ಸೊಸೈಟಿ ಕಚೇರಿ ಆವರಣದಲ್ಲಿ ಗುರುವಾರ ಆಡಳಿತ ಮಂಡಳಿ ಸದಸ್ಯರ ಜೊತೆ ಸರ್ವ ಸದಸ್ಯರ ಸಭೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಬಿ.ಎಲ್. ಲಕ್ಕೇಗೌಡರು ಸಂಸ್ಥಾಪಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕಳೆದ 28 ವರ್ಷಗಳಿಂದ ಸೊಸೈಟಿ ಉತ್ತಮವಾಗಿ ಲಾಭದಲ್ಲಿ ನಡೆಯುತ್ತಾ ಬಂದಿದೆ. ತಾಲ್ಲೂಕಿನಲ್ಲಿ ಜನರ ಸೇವೆ ಮಾಡುತ್ತಾ ಬಂದಿದೆ. 4779 ಸದಸ್ಯರು ಸಂಘದಲ್ಲಿದ್ದು 2025-26ನೇ ಸಾಲಿನಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳ ಉತ್ತಮ ಸಹಕಾರದಿಂದ 44,373,35 ರೂ. ಲಾಭಗಳಿಸಿದೆ. ವಾರ್ಷಿಕವಾಗಿ 41 ಕೋಟಿ ರೂ. ವಹಿವಾಟು ಮಾಡಲಾಗುತ್ತಿದೆ. ಶೇ.12 ರಷ್ಟು ಬಡ್ಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ 33 ಲಕ್ಷ ಸಾಲ ನೀಡಲಾಗಿದೆ ಎಂದರು. ಷೇರು ಬಂಡವಾಳ ಒಂದು ಕೋಟಿ 38 ಲಕ್ಷ ಇದೆ. ವಾರ್ಷಿಕ ಶೇ.10 ರ ಬಡ್ಡಿದರದಲ್ಲಿ ಆಭರಣ ಸಾಲ ನೀಡಲಾಗುತ್ತಿದೆ. ನಮ್ಮಲ್ಲಿ ಠೇವಣ ಸೌಲಭ್ಯ ಸಹ ಇದೆ. ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.85 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಯಲ್ಲಿ 2 ಸಾವಿರ ರೂ.ಗಳ ಕೈ ಗಡಿಯಾರ ನೀಡಲಾಗುತ್ತಿದೆ. ಜೊತೆಗೆ ಸದಸ್ಯರ ಮರಣೋತ್ತರವಾಗಿ ನಾಮಿನಿ ಸದಸ್ಯರಿಗೆ ಮರಣ ಪರಿಹಾರ ನಿಧಿ ನೀಡಲಾಗುತ್ತಿದೆ ಎಂದು ಹೇಳಿದರು. ಸದಸ್ಯರು ಸೆ.20ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ವಿವೇಕಾನಂದನಗರದ ರಾಯಲ್ ಕನ್‌ವೆನ್‌ಷನ್ ಹಾಲ್‌ನಲ್ಲಿ ನಡೆಯುವ ಸಭೆಗೆ ಆಗಮಿಸಿ ಸೊಸೈಟಿ ಮತ್ತಷ್ಟು ಎತ್ತರಕ್ಕೆ ಬೆಳೆದು ಇನ್ನಷ್ಟು ಜನ ಸೇವೆಗೆ ಮುಂದಾಗುವ ದೃಷ್ಟಿಯಿಂದ ಸಲಹೆ ಸಹಕಾರ ನೀಡಬೇಕು ಎಂದರು. ಇದೇ ವೇಳೆ ಸೊಸೈಟಿಯ 2025-26ನೇ ಸಾಲಿನ ಆಹ್ವಾನ ಪತ್ರಿಕೆ ಮತ್ತು ಆಡಿಟ್ ವರದಿ ಲಾಭಾಂಶದ ವಿವರದ ಪುಸ್ತಕ ಬಿಡುಗಡೆ ಮಾಡಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಸಿ. ಸೋಮೇಗೌಡ, ನಿರ್ದೇಶಕರಾದ ಕೆ.ಪಿ.ಉಮೇಶ್, ದೊರೆಸ್ವಾಮಿ, ಜಿ.ಎಲ್.ಆಂಜನೇಯ, ಎಂ.ಶಿವಲಿಂಗಯ್ಯ, ಎ.ಆರ್.ಚಂದ್ರಶೇಖರ್, ಹೆಚ್.ಕೆ.ರುಕ್ಮಿಣ , ಎಸ್.ಕೃಷ್ಣಪ್ಪ ಮುಖ್ಯ ಕಾರ್ಯನಿರ್ವಹಕ ಬಿ.ಎಸ್.ಸುರೇಶ್ ಇದ್ದರು.
    1
    ಸೆ.20ರಂದು ಭಾರತೀ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆ, ಪ್ರತಿಭಾ ಪುರಸ್ಕಾರ
ರಾಮನಗರ : ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ದಿ ಭಾರತೀ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸರ್ವ ಸದಸ್ಯರ ಸಭೆ ಸೆ.20ರ ಭಾನುವಾರ ವಿವೇಕಾನಂದನಗರ, ಬಿ.ಎಂ. ರಸ್ತೆಯಲ್ಲಿರುವ ರಾಯಲ್  ಕನ್‌ವೆನ್‌ಷನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕೆ.ಚಂದ್ರಯ್ಯ ತಿಳಿಸಿದರು.
ನಗರದ ಸೊಸೈಟಿ ಕಚೇರಿ ಆವರಣದಲ್ಲಿ ಗುರುವಾರ ಆಡಳಿತ ಮಂಡಳಿ ಸದಸ್ಯರ ಜೊತೆ ಸರ್ವ ಸದಸ್ಯರ ಸಭೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಬಿ.ಎಲ್. ಲಕ್ಕೇಗೌಡರು ಸಂಸ್ಥಾಪಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕಳೆದ 28 ವರ್ಷಗಳಿಂದ ಸೊಸೈಟಿ ಉತ್ತಮವಾಗಿ ಲಾಭದಲ್ಲಿ ನಡೆಯುತ್ತಾ ಬಂದಿದೆ. ತಾಲ್ಲೂಕಿನಲ್ಲಿ ಜನರ ಸೇವೆ ಮಾಡುತ್ತಾ ಬಂದಿದೆ. 4779 ಸದಸ್ಯರು ಸಂಘದಲ್ಲಿದ್ದು 2025-26ನೇ ಸಾಲಿನಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳ ಉತ್ತಮ ಸಹಕಾರದಿಂದ 44,373,35 ರೂ. ಲಾಭಗಳಿಸಿದೆ. ವಾರ್ಷಿಕವಾಗಿ 41 ಕೋಟಿ ರೂ. ವಹಿವಾಟು ಮಾಡಲಾಗುತ್ತಿದೆ. ಶೇ.12 ರಷ್ಟು ಬಡ್ಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ  10 ಕೋಟಿ 33 ಲಕ್ಷ ಸಾಲ ನೀಡಲಾಗಿದೆ ಎಂದರು.
ಷೇರು ಬಂಡವಾಳ ಒಂದು ಕೋಟಿ 38 ಲಕ್ಷ ಇದೆ. ವಾರ್ಷಿಕ ಶೇ.10 ರ ಬಡ್ಡಿದರದಲ್ಲಿ ಆಭರಣ ಸಾಲ ನೀಡಲಾಗುತ್ತಿದೆ. ನಮ್ಮಲ್ಲಿ ಠೇವಣ  ಸೌಲಭ್ಯ ಸಹ ಇದೆ. ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.85 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಯಲ್ಲಿ 2 ಸಾವಿರ ರೂ.ಗಳ ಕೈ ಗಡಿಯಾರ ನೀಡಲಾಗುತ್ತಿದೆ. ಜೊತೆಗೆ ಸದಸ್ಯರ ಮರಣೋತ್ತರವಾಗಿ ನಾಮಿನಿ ಸದಸ್ಯರಿಗೆ ಮರಣ ಪರಿಹಾರ ನಿಧಿ ನೀಡಲಾಗುತ್ತಿದೆ ಎಂದು ಹೇಳಿದರು. 
ಸದಸ್ಯರು ಸೆ.20ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ವಿವೇಕಾನಂದನಗರದ ರಾಯಲ್ ಕನ್‌ವೆನ್‌ಷನ್ ಹಾಲ್‌ನಲ್ಲಿ ನಡೆಯುವ ಸಭೆಗೆ ಆಗಮಿಸಿ ಸೊಸೈಟಿ ಮತ್ತಷ್ಟು ಎತ್ತರಕ್ಕೆ ಬೆಳೆದು ಇನ್ನಷ್ಟು ಜನ ಸೇವೆಗೆ ಮುಂದಾಗುವ ದೃಷ್ಟಿಯಿಂದ ಸಲಹೆ ಸಹಕಾರ ನೀಡಬೇಕು ಎಂದರು. ಇದೇ ವೇಳೆ ಸೊಸೈಟಿಯ 2025-26ನೇ ಸಾಲಿನ ಆಹ್ವಾನ ಪತ್ರಿಕೆ ಮತ್ತು ಆಡಿಟ್ ವರದಿ ಲಾಭಾಂಶದ ವಿವರದ ಪುಸ್ತಕ ಬಿಡುಗಡೆ ಮಾಡಿದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಸಿ. ಸೋಮೇಗೌಡ, ನಿರ್ದೇಶಕರಾದ ಕೆ.ಪಿ.ಉಮೇಶ್, ದೊರೆಸ್ವಾಮಿ, ಜಿ.ಎಲ್.ಆಂಜನೇಯ, ಎಂ.ಶಿವಲಿಂಗಯ್ಯ, ಎ.ಆರ್.ಚಂದ್ರಶೇಖರ್, ಹೆಚ್.ಕೆ.ರುಕ್ಮಿಣ , ಎಸ್.ಕೃಷ್ಣಪ್ಪ ಮುಖ್ಯ ಕಾರ್ಯನಿರ್ವಹಕ ಬಿ.ಎಸ್.ಸುರೇಶ್ ಇದ್ದರು.
    user_ರಮೇಶ್.ಆರ್
    ರಮೇಶ್.ಆರ್
    ಚನ್ನಪಟ್ಟಣ, ರಾಮನಗರ, ಕರ್ನಾಟಕ•
    2 hrs ago
  • All About,Day Dreamers who are Yet to Come out of Sleep but wanted to become famous overnight by spreading selfish propaganda *ಭಾರತ ನಲ್ಲಿ ವೈರಲ್*
    1
    All About,Day Dreamers who are Yet to Come out of Sleep but wanted to become famous overnight by spreading selfish propaganda 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    3 hrs ago
  • ಜೆಸ್ಕಾಂ ಕಚೇರಿ ಮುಂದೆ ಕೃಷಿಕಂಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ ಟಿ. ನರಸೀಪುರ ಅಸಮರ್ಪಕ ವಿದ್ಯುತ್ ಪೂರೈಕೆ: ರೈತರು ಸಂಕಷ್ಟದಲ್ಲಿ. ಟಿ. ನರಸೀಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಹೊಲಗಳಲ್ಲಿ ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ವೋಲ್ಟೇಜ್‌ನೊಂದಿಗೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಮೋಟಾರ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಬೆಳೆಗಳಿಗೆ ಸಾಕಷ್ಟು ಖರ್ಚು ಮಾಡಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ವಿದ್ಯುತ್ ಸಮಸ್ಯೆಯಿಂದ ಬೆಳೆ ಹಾನಿಯಾದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ತರವಾಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಲೈನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಿ ರೈತರ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ತುರ್ತಾಗಿ ಸಮಸ್ಯೆ ಪರಿಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ರೈತರ ಬೆಳೆ ಉಳಿಸಲು ವಿದ್ಯುತ್ ಪೂರೈಕೆ ಸಮರ್ಪಕವಾಗಲಿಯಂದು ರೈತರ ಒತ್ತಾಯ . ಈ ಪ್ರತಿಭಟನೆಯಲ್ಲಿ ಕಿರಗುಸೂರು ಶಂಕರ್ ಕೆಜಿ ಗುರುಸ್ವಾಮಿ ಕುರುಬುರ್ ಗೌರಿಶಂಕರ್ ವಾಚ್ ಕುಮಾರ್ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ ಅಪ್ಪಣ್ಣ ಕುರುಬೂರು ಸಿದ್ದೇಶ್, ಬಿಪಿ ಪರಶಿವಮೂರ್ತಿ, ಕರುವಟಿ ಉಮೇಶ್ ಕುರುಬೂರ ಪ್ರದೀಪ್ ಸೋಮಶೇಖರ್ ಬನ್ನಳ್ಳಿ ಹುಂಡಿ ರಾಜೇಂದ್ರ ನಿಲ್ಸೋಗೆ ಉಮೇಶ್ ಪ್ರತಾಪ್, ಕುಮಾರ್ ಕೆ ಎಂ, ವಾಟಾಳ್ ಪುರ ಸತೀಶ್ ಕುಮಾರ್ ಹೊಸಪುರ ನಾಗರಾಜು ಮಾದೇಶ್ ಮಾದೇವಮೂರ್ತಿ ಬಸವರಾಜು ಎಸ್ ಕೆಬ್ಬೆ ಹುಂಡಿ, ಮಾದೇವಸ್ವಾಮಿ ಮಾವ್ನಹಳ್ಳಿ, ತರಕಾರಿ ನಿಂಗರಾಜು ಬನ್ನಳ್ಳಿ ಶಾಂತರಾಜು ಆದಿ ಬೆಟ್ಟಳ್ಳಿ ಮಹೇಶ ಕನ್ನಳ್ಳಿ ಮೊಳೆ ಮಣಿಕಂಠ ಲೋಕೇಶ್ ರವೀಂದ್ರ ಮಾದೇಶ್ ನಿಲ್ಸೋಗೆ ನಾಗರಾಜು ಚಿನ್ನಸ್ವಾಮಿ ಕುರುಬೂರು ಶಿವಪ್ರಸಾದ್ ವೀರೇಶ್ ಎಲ್ ಐ ಸಿ ಪ್ರದೀಪ್ ಎಬಿ ಮಂಜುನಾಥ್ ನವೀನ ತೊಟ್ಟುವಾಡಿ ಇನ್ನು ಮುಂತಾದ ರೈತರು ಭಾಗವಹಿಸಿದ್ದರು
    1
    ಜೆಸ್ಕಾಂ ಕಚೇರಿ ಮುಂದೆ ಕೃಷಿಕಂಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ 
ಟಿ. ನರಸೀಪುರ ಅಸಮರ್ಪಕ ವಿದ್ಯುತ್ ಪೂರೈಕೆ: ರೈತರು ಸಂಕಷ್ಟದಲ್ಲಿ.
ಟಿ. ನರಸೀಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಹೊಲಗಳಲ್ಲಿ ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ವೋಲ್ಟೇಜ್‌ನೊಂದಿಗೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಮೋಟಾರ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ಬೆಳೆಗಳಿಗೆ ಸಾಕಷ್ಟು ಖರ್ಚು ಮಾಡಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ವಿದ್ಯುತ್ ಸಮಸ್ಯೆಯಿಂದ ಬೆಳೆ ಹಾನಿಯಾದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ತರವಾಗಲಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಲೈನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಿ ರೈತರ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ತುರ್ತಾಗಿ ಸಮಸ್ಯೆ ಪರಿಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ರೈತರ ಬೆಳೆ ಉಳಿಸಲು ವಿದ್ಯುತ್ ಪೂರೈಕೆ ಸಮರ್ಪಕವಾಗಲಿಯಂದು ರೈತರ ಒತ್ತಾಯ
. ಈ ಪ್ರತಿಭಟನೆಯಲ್ಲಿ ಕಿರಗುಸೂರು  ಶಂಕರ್ ಕೆಜಿ ಗುರುಸ್ವಾಮಿ ಕುರುಬುರ್ ಗೌರಿಶಂಕರ್ ವಾಚ್ ಕುಮಾರ್ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ ಅಪ್ಪಣ್ಣ ಕುರುಬೂರು ಸಿದ್ದೇಶ್,
ಬಿಪಿ ಪರಶಿವಮೂರ್ತಿ, ಕರುವಟಿ ಉಮೇಶ್ ಕುರುಬೂರ ಪ್ರದೀಪ್ 
ಸೋಮಶೇಖರ್ 
ಬನ್ನಳ್ಳಿ ಹುಂಡಿ ರಾಜೇಂದ್ರ 
ನಿಲ್ಸೋಗೆ ಉಮೇಶ್ 
ಪ್ರತಾಪ್, ಕುಮಾರ್ ಕೆ ಎಂ,
ವಾಟಾಳ್ ಪುರ ಸತೀಶ್ ಕುಮಾರ್ 
ಹೊಸಪುರ ನಾಗರಾಜು ಮಾದೇಶ್ ಮಾದೇವಮೂರ್ತಿ 
ಬಸವರಾಜು ಎಸ್ ಕೆಬ್ಬೆ ಹುಂಡಿ, ಮಾದೇವಸ್ವಾಮಿ ಮಾವ್ನಹಳ್ಳಿ,
ತರಕಾರಿ ನಿಂಗರಾಜು ಬನ್ನಳ್ಳಿ ಶಾಂತರಾಜು ಆದಿ ಬೆಟ್ಟಳ್ಳಿ ಮಹೇಶ ಕನ್ನಳ್ಳಿ ಮೊಳೆ ಮಣಿಕಂಠ ಲೋಕೇಶ್ ರವೀಂದ್ರ ಮಾದೇಶ್ ನಿಲ್ಸೋಗೆ ನಾಗರಾಜು ಚಿನ್ನಸ್ವಾಮಿ ಕುರುಬೂರು ಶಿವಪ್ರಸಾದ್ ವೀರೇಶ್ ಎಲ್ ಐ ಸಿ ಪ್ರದೀಪ್ ಎಬಿ ಮಂಜುನಾಥ್ ನವೀನ ತೊಟ್ಟುವಾಡಿ ಇನ್ನು ಮುಂತಾದ ರೈತರು ಭಾಗವಹಿಸಿದ್ದರು
    user_ಪ್ರದೀಪ್ ಎಂ ಕುರುಬೂರು
    ಪ್ರದೀಪ್ ಎಂ ಕುರುಬೂರು
    ತಿರುಮಕೂಡಲು - ನರಸಿಪುರ, ಮೈಸೂರು, ಕರ್ನಾಟಕ•
    15 hrs ago
  • ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ : ನಿಖಿಲ್ ಕುಮಾರಸ್ವಾಮಿ ರಾಮನಗರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದಲೇ ಸ್ಪರ್ದಿಸಲಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪು ಕಾರ್ಯಕರ್ತರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದನ್ನು ಉತ್ತಮ ಫಲಿತಾಂಶದ ಮೂಲಕ ಹೋಗಲಾಡಿಸಿ ಕಾರ್ಯಕರ್ತರಲ್ಲಿ ನೂತನ ಉತ್ಸಾಹ ತುಂಬಬೇಕಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನು ನೋಡುವ ಗುರಿ ನಮ್ಮದಾಗಿದೆ ಎಂದರು. ಕೆಲವು ಕಡೆ ಜೆಡಿಎಸ್‌ಗೆ ಹಿನ್ನಡೆಯಾಗಿದೆ ನಿಜ, ಆದರೆ ರಾಜಕೀಯದಲ್ಲಿ ಹಿನ್ನಡೆ-ಮುನ್ನಡೆ ಶಾಶ್ವತವಲ್ಲ, ಅದು ತಾತ್ಕಾಲಿಕ. ಬದಲಾವಣೆಯೊಂದಿಗೆ ನಾವು ಮತ್ತೆ ಸಂಘಟಿತ ಪ್ರಯತ್ನ ಮಾಡುತ್ತೇವೆ. ಸದ್ಯ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮುಖ್ಯ, ಅವರಿಗೆ ಶಕ್ತಿ ತುಂಬಿದಾಗ ಮಾತ್ರ ಅವರು ಎಂಎಲ್‌ಎ, ಎಂಪಿ ಚುನಾವಣೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದರು.
    1
    ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ : ನಿಖಿಲ್ ಕುಮಾರಸ್ವಾಮಿ
ರಾಮನಗರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದಲೇ ಸ್ಪರ್ದಿಸಲಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪು ಕಾರ್ಯಕರ್ತರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದನ್ನು ಉತ್ತಮ ಫಲಿತಾಂಶದ ಮೂಲಕ ಹೋಗಲಾಡಿಸಿ ಕಾರ್ಯಕರ್ತರಲ್ಲಿ ನೂತನ ಉತ್ಸಾಹ ತುಂಬಬೇಕಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನು ನೋಡುವ ಗುರಿ ನಮ್ಮದಾಗಿದೆ ಎಂದರು.
ಕೆಲವು ಕಡೆ ಜೆಡಿಎಸ್‌ಗೆ ಹಿನ್ನಡೆಯಾಗಿದೆ ನಿಜ, ಆದರೆ ರಾಜಕೀಯದಲ್ಲಿ ಹಿನ್ನಡೆ-ಮುನ್ನಡೆ ಶಾಶ್ವತವಲ್ಲ, ಅದು ತಾತ್ಕಾಲಿಕ. ಬದಲಾವಣೆಯೊಂದಿಗೆ ನಾವು ಮತ್ತೆ ಸಂಘಟಿತ ಪ್ರಯತ್ನ ಮಾಡುತ್ತೇವೆ. ಸದ್ಯ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮುಖ್ಯ, ಅವರಿಗೆ ಶಕ್ತಿ ತುಂಬಿದಾಗ ಮಾತ್ರ ಅವರು ಎಂಎಲ್‌ಎ, ಎಂಪಿ ಚುನಾವಣೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದರು.
    user_Ramanagsra News
    Ramanagsra News
    Photographer ರಾಮನಗರ, ರಾಮನಗರ, ಕರ್ನಾಟಕ•
    4 hrs ago
  • ಪಿಎಂ ವಿಶ್ವಕರ್ಮ ಯೋಜನೆಯ ಸದುಪಯೋಗ ಪಡೆದುಕೊಳ್ಳಿ- ಜಿಲ್ಲಾಧಿಕಾರಿ ಕುಮಾರ ಮಂಡ್ಯ-ಸಾಂಪ್ರದಾಯಿಕ ಕುಶಲಕರ್ಮಿಗಳ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಪಿಎಂ ವಿಶ್ವಕರ್ಮ ಯೋಜನೆಯ ಸದುಪಯೋಗವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಕರೆಯುತ್ತಾರೆ ನೀಡಿದರು. ಮಂಡ್ಯದ ಅಂಬೇಡ್ಕರ್ ಭವನದಲ್ಲಿಂದು ವಿಶ್ವ ಕರ್ಮ ಜಯಂತಿಯಲ್ಲಿ ಬಾಗವಹಿಸಿ ಉದ್ಘಾಟನೆ ನೆರಬಮವೇರಿಸಿ ಮಾತನಾಡಿ ಅವರು ಜಿಲ್ಲೆಯಲ್ಲಿ ಈಗಾಗಲೇ 11 ಸಾವಿರಕ್ಕೂ ಹೆಚ್ಚು ಮಂದಿಗೆ ಯೋಜನೆಯಡಿ ತರಬೇತಿ ನೀಡಲಾಗಿದ್ದು, ಸಾಲ ಸೌಲಭ್ಯವೂ ಮಂಜೂರಾಗಿದೆ. ಫಲಾನುಭವಿಗಳು ಆಧುನಿಕ ತಂತ್ರಜ್ಞಾನ ಹಾಗೂ ಮಾರುಕಟ್ಟೆ ಅವಕಾಶಗಳನ್ನು ಬಳಸಿಕೊಂಡು ತಮ್ಮ ಸಾಂಪ್ರದಾಯಿಕ ವೃತ್ತಿಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು. ತಾಮ್ರ, ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ಲೋಹಗಳ ಕೆಲಸ ಹಾಗೂ ಇತರ ಕರಕುಶಲ ವೃತ್ತಿಗಳಲ್ಲಿ ತೊಡಗಿರುವವರು ತಮ್ಮ ಕೌಶಲ್ಯವನ್ನು ಆಧುನಿಕ ಮಾರುಕಟ್ಟೆಯ ಅಗತ್ಯಗಳಿಗೆ ಹೊಂದಿಸಿಕೊಳ್ಳಬೇಕು. ವೃತ್ತಿಯ ಬಗ್ಗೆ ಹೆಮ್ಮೆ ಹಾಗೂ ಗೌರವ ಹೊಂದುವುದರ ಜತೆಗೆ ತಮ್ಮ ಕಲೆ ಮತ್ತು ಕೌಶಲ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ಕಾರ್ಮಿಕ ಇಲಾಖೆಯ ಅಧಿಕಾರಿ ಸವಿತಾ, ಬಿಳಿಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿದ್ವಾನ್ ಬಿ.ಎಸ್. ಗಂಗಾಧರ ಆಚಾರ್ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು ಉಪಸ್ಥಿತರಿದ್ದರು.
    1
    ಪಿಎಂ ವಿಶ್ವಕರ್ಮ ಯೋಜನೆಯ ಸದುಪಯೋಗ ಪಡೆದುಕೊಳ್ಳಿ- ಜಿಲ್ಲಾಧಿಕಾರಿ ಕುಮಾರ
ಮಂಡ್ಯ-ಸಾಂಪ್ರದಾಯಿಕ ಕುಶಲಕರ್ಮಿಗಳ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಪಿಎಂ ವಿಶ್ವಕರ್ಮ ಯೋಜನೆಯ ಸದುಪಯೋಗವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಕರೆಯುತ್ತಾರೆ ನೀಡಿದರು.
ಮಂಡ್ಯದ ಅಂಬೇಡ್ಕರ್ ಭವನದಲ್ಲಿಂದು ವಿಶ್ವ ಕರ್ಮ ಜಯಂತಿಯಲ್ಲಿ ಬಾಗವಹಿಸಿ ಉದ್ಘಾಟನೆ ನೆರಬಮವೇರಿಸಿ  ಮಾತನಾಡಿ ಅವರು ಜಿಲ್ಲೆಯಲ್ಲಿ ಈಗಾಗಲೇ 11 ಸಾವಿರಕ್ಕೂ ಹೆಚ್ಚು ಮಂದಿಗೆ ಯೋಜನೆಯಡಿ ತರಬೇತಿ ನೀಡಲಾಗಿದ್ದು, ಸಾಲ ಸೌಲಭ್ಯವೂ ಮಂಜೂರಾಗಿದೆ. ಫಲಾನುಭವಿಗಳು ಆಧುನಿಕ ತಂತ್ರಜ್ಞಾನ ಹಾಗೂ ಮಾರುಕಟ್ಟೆ ಅವಕಾಶಗಳನ್ನು ಬಳಸಿಕೊಂಡು ತಮ್ಮ ಸಾಂಪ್ರದಾಯಿಕ ವೃತ್ತಿಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.
ತಾಮ್ರ, ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ಲೋಹಗಳ ಕೆಲಸ ಹಾಗೂ ಇತರ ಕರಕುಶಲ ವೃತ್ತಿಗಳಲ್ಲಿ ತೊಡಗಿರುವವರು ತಮ್ಮ ಕೌಶಲ್ಯವನ್ನು ಆಧುನಿಕ ಮಾರುಕಟ್ಟೆಯ ಅಗತ್ಯಗಳಿಗೆ ಹೊಂದಿಸಿಕೊಳ್ಳಬೇಕು. ವೃತ್ತಿಯ ಬಗ್ಗೆ ಹೆಮ್ಮೆ ಹಾಗೂ ಗೌರವ ಹೊಂದುವುದರ ಜತೆಗೆ ತಮ್ಮ ಕಲೆ ಮತ್ತು ಕೌಶಲ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ಕಾರ್ಮಿಕ ಇಲಾಖೆಯ ಅಧಿಕಾರಿ ಸವಿತಾ, ಬಿಳಿಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿದ್ವಾನ್ ಬಿ.ಎಸ್. ಗಂಗಾಧರ ಆಚಾರ್ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು ಉಪಸ್ಥಿತರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.