logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಾಮೂಹಿಕವಾಗಿ ದೀಪ ಹಚ್ಚಿ ಪ್ರಧಾನಿ ಮೋದಿ ಜನ್ಮದಿನ ಆಚರಿಸಿದ ಅಭಿಮಾನಿಗಳು ಪ್ರಧಾನಮಂತ್ರಿ ನರೇಂದ್ರಮೋದಿ ರವರ 76 ನೇ ಜನ್ಮ ದಿನದ ಅಂಗವಾಗಿ ಮಳವಳ್ಳಿಪಟ್ಟಣದ ಕೋಟೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ದೀಪ ಹಚ್ಚಿ ಮೋದಿ ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಜೆಡಿಎಸ್ ಮುಖಂಡ ನಂದಕುಮಾರ ಮಾತನಾಡಿ, ನರೇಂದ್ರಮೋದಿ ಇನ್ನೂ ಹತ್ತಾರು ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸಲಿ ಎಂದರು. ಇನ್ನೂ ಇದೇ ವೇಳೆ ಪುರಸಭೆ ಮಾಜಿಸದಸ್ಯ ಕೃಷ್ಣ ಮಾತನಾಡಿ, ನರೇಂದ್ರಮೋದಿಜೀ ವಿಶ್ವಗುರು ಎನ್ನಸಿಕೊಂಡಿದ್ದಾರೆ, ಅವರಿಗೆ ದೇವರು ಆರೋಗ್ಯ ಅಯಸ್ಸು ನೀಡಲಿ ಎಂದರು. ಈ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ಕೃಷ್ಣ, ಜೆಡಿಎಸ್ ಮುಖಂಡ ನಂದಕುಮಾರ, ಬಿಜೆಪಿ ಹಿರಿಯ ಮುಖಂಡ ಅಪ್ಪಾಜೀಗೌಡ, ಕೋಟೆ ಸಲೀಂಪಾಷ, ಬಸವರಾಜು ವಿಶ್ವನಾಥ ಸೇರಿದಂತೆ ಹಲವರು ಇದ್ದರು.

1 hr ago
user_ಸುಮಿತ್ರ‌ ಹೆಚ್‌ ಪಿ
ಸುಮಿತ್ರ‌ ಹೆಚ್‌ ಪಿ
ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
1 hr ago

ಸಾಮೂಹಿಕವಾಗಿ ದೀಪ ಹಚ್ಚಿ ಪ್ರಧಾನಿ ಮೋದಿ ಜನ್ಮದಿನ ಆಚರಿಸಿದ ಅಭಿಮಾನಿಗಳು ಪ್ರಧಾನಮಂತ್ರಿ ನರೇಂದ್ರಮೋದಿ ರವರ 76 ನೇ ಜನ್ಮ ದಿನದ ಅಂಗವಾಗಿ ಮಳವಳ್ಳಿಪಟ್ಟಣದ ಕೋಟೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ದೀಪ ಹಚ್ಚಿ ಮೋದಿ ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಜೆಡಿಎಸ್ ಮುಖಂಡ ನಂದಕುಮಾರ ಮಾತನಾಡಿ, ನರೇಂದ್ರಮೋದಿ ಇನ್ನೂ ಹತ್ತಾರು ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸಲಿ ಎಂದರು. ಇನ್ನೂ ಇದೇ ವೇಳೆ ಪುರಸಭೆ ಮಾಜಿಸದಸ್ಯ ಕೃಷ್ಣ ಮಾತನಾಡಿ, ನರೇಂದ್ರಮೋದಿಜೀ ವಿಶ್ವಗುರು ಎನ್ನಸಿಕೊಂಡಿದ್ದಾರೆ, ಅವರಿಗೆ ದೇವರು ಆರೋಗ್ಯ ಅಯಸ್ಸು ನೀಡಲಿ ಎಂದರು. ಈ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ಕೃಷ್ಣ, ಜೆಡಿಎಸ್ ಮುಖಂಡ ನಂದಕುಮಾರ, ಬಿಜೆಪಿ ಹಿರಿಯ ಮುಖಂಡ ಅಪ್ಪಾಜೀಗೌಡ, ಕೋಟೆ ಸಲೀಂಪಾಷ, ಬಸವರಾಜು ವಿಶ್ವನಾಥ ಸೇರಿದಂತೆ ಹಲವರು ಇದ್ದರು.

More news from ಕರ್ನಾಟಕ and nearby areas
  • ಸಾಮೂಹಿಕವಾಗಿ ದೀಪ ಹಚ್ಚಿ ಪ್ರಧಾನಿ ಮೋದಿ ಜನ್ಮದಿನ ಆಚರಿಸಿದ ಅಭಿಮಾನಿಗಳು ಪ್ರಧಾನಮಂತ್ರಿ ನರೇಂದ್ರಮೋದಿ ರವರ 76 ನೇ ಜನ್ಮ ದಿನದ ಅಂಗವಾಗಿ ಮಳವಳ್ಳಿಪಟ್ಟಣದ ಕೋಟೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ದೀಪ ಹಚ್ಚಿ ಮೋದಿ ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಜೆಡಿಎಸ್ ಮುಖಂಡ ನಂದಕುಮಾರ ಮಾತನಾಡಿ, ನರೇಂದ್ರಮೋದಿ ಇನ್ನೂ ಹತ್ತಾರು ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸಲಿ ಎಂದರು. ಇನ್ನೂ ಇದೇ ವೇಳೆ ಪುರಸಭೆ ಮಾಜಿಸದಸ್ಯ ಕೃಷ್ಣ ಮಾತನಾಡಿ, ನರೇಂದ್ರಮೋದಿಜೀ ವಿಶ್ವಗುರು ಎನ್ನಸಿಕೊಂಡಿದ್ದಾರೆ, ಅವರಿಗೆ ದೇವರು ಆರೋಗ್ಯ ಅಯಸ್ಸು ನೀಡಲಿ ಎಂದರು. ಈ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ಕೃಷ್ಣ, ಜೆಡಿಎಸ್ ಮುಖಂಡ ನಂದಕುಮಾರ, ಬಿಜೆಪಿ ಹಿರಿಯ ಮುಖಂಡ ಅಪ್ಪಾಜೀಗೌಡ, ಕೋಟೆ ಸಲೀಂಪಾಷ, ಬಸವರಾಜು ವಿಶ್ವನಾಥ ಸೇರಿದಂತೆ ಹಲವರು ಇದ್ದರು.
    1
    ಸಾಮೂಹಿಕವಾಗಿ ದೀಪ ಹಚ್ಚಿ   ಪ್ರಧಾನಿ ಮೋದಿ  ಜನ್ಮದಿನ ಆಚರಿಸಿದ  ಅಭಿಮಾನಿಗಳು 
ಪ್ರಧಾನಮಂತ್ರಿ ನರೇಂದ್ರಮೋದಿ ರವರ 76 ನೇ ಜನ್ಮ ದಿನದ ಅಂಗವಾಗಿ ಮಳವಳ್ಳಿಪಟ್ಟಣದ ಕೋಟೆ  ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ   ವಿಶೇಷ ಪೂಜೆ ಹಾಗೂ ದೀಪ ಹಚ್ಚಿ  ಮೋದಿ ಅಭಿಮಾನಿಗಳು ಸಂಭ್ರಮಿಸಿದರು.
ಈ ವೇಳೆ  ಜೆಡಿಎಸ್ ಮುಖಂಡ ನಂದಕುಮಾರ ಮಾತನಾಡಿ,  ನರೇಂದ್ರಮೋದಿ ಇನ್ನೂ ಹತ್ತಾರು ವರ್ಷಗಳ ಕಾಲ  ಈ ದೇಶವನ್ನು ಮುನ್ನಡೆಸಲಿ ಎಂದರು.
ಇನ್ನೂ ಇದೇ ವೇಳೆ  ಪುರಸಭೆ ಮಾಜಿಸದಸ್ಯ ಕೃಷ್ಣ ಮಾತನಾಡಿ, ನರೇಂದ್ರಮೋದಿಜೀ  ವಿಶ್ವಗುರು  ಎನ್ನಸಿಕೊಂಡಿದ್ದಾರೆ, ಅವರಿಗೆ  ದೇವರು ಆರೋಗ್ಯ ಅಯಸ್ಸು ನೀಡಲಿ ಎಂದರು.
ಈ ವೇಳೆ  ಬಿಜೆಪಿ ಮಾಜಿ ಅಧ್ಯಕ್ಷ ಕೃಷ್ಣ, ಜೆಡಿಎಸ್ ಮುಖಂಡ ನಂದಕುಮಾರ, ಬಿಜೆಪಿ ಹಿರಿಯ ಮುಖಂಡ  ಅಪ್ಪಾಜೀಗೌಡ, ಕೋಟೆ ಸಲೀಂಪಾಷ, ಬಸವರಾಜು ವಿಶ್ವನಾಥ ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    1 hr ago
  • ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ಇಂಜಿನಿಯರ್ಸ್ ದಿನಾಚರಣೆ. ಇಂಜೀನಿಯರ್ ದಂಪತಿಗಳಿಗೆ ಸನ್ಮಾನ ಮಳವಳ್ಳಿ ಪಟ್ಟಣದ ರೋಟರಿ ಶಾಲೆ ಹಾಗೂ ತಾಲೂಕಿನ ದೊಡ್ಡಬೂಹಳ್ಳಿ ಮತ್ತು ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವ ರಯ್ಯ ಜನ್ಮದಿನದ ಅಂಗವಾಗಿ ಎಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮವನ್ನು ರೋಟರಿ ಸಂಸ್ಥೆ ವತಿಯಿಂದ ಆಯೋಜಿಸ ಲಾಗಿತ್ತು. ಬುಧವಾರ ಮಧ್ಯಾಹ್ನ 12.30 ರ ಸಮಯದಲ್ಲಿ ಪಟ್ಟಣದ ರೋಟರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಜಿನಿ ಯರ್ ದಂಪತಿಗಳಾದ ಆರ್.ಜಿ.ಅರುಣ್ ಹಾಗೂ ಸುರಕ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ದಂಪತಿಗಳು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ರೋಟರಿ ಸಂಸ್ಥೆ ಕಾರ್ಯದರ್ಶಿ ಆರ್.ಜಿ.ಮಹದೇವಸ್ವಾಮಿ ಅವರು ವಿಶ್ವ ಓಝೋನ್ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿಯ ಬಗ್ಗೆ ಪ್ರತಿಯೊಬ್ಬರೂ ಜವಾಬ್ದಾರಿ ಹೊಂದಿರಬೇಕು ಎಂದು ತಿಳಿಸಿದರು. ತಾಲೂಕಿನ ನೆಲ್ಲಿಗೆರೆ ಮತ್ತು ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಗಳಲ್ಲೂ ರೋಟರಿ ಸಂಸ್ಥೆ ವತಿಯಿಂದ ಎಂಜಿನಿ ಯರ್ಸ್ ದಿನಾಚರಣೆ ಕಾರ್ಯಕ್ರಮ ನಡೆಯಿತು. ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಎಂಜಿನಿಯರ್ ನರಸಿಂಹಮೂರ್ತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನರಸಿಂಹಮೂರ್ತಿ ಅವರು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ದೊಡ್ಡಬೂಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ನಾಗೇಂದ್ರ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂಜಿನಿಯರ್ಸ್ ದಿನಾಚರಣೆ ಮಾಹಿತಿಯನ್ನು ಎಂಜಿನಿಯರ್ ದಂಪತಿಗಳಾದ ಆರ್.ಜಿ.ಅರುಣ್ ಹಾಗೂ ಸುರಕ್ಷ ಅವರುಗಳು ವಿದ್ಯಾರ್ಥಿಗಳಿಗೆ ವಿವರಿಸಿದರು. ಸಮಾರಂಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಮಹಮದ್ ಜಬೀವುಲ್ಲಾ, ಘನಶ್ಯಾಮ್ ದಾಸ್, ಆರ್.ಜಿ.ಮಹದೇವ ಸ್ವಾಮಿ, ಎಂ.ವಿ.ಸೋಮ ಶೇಖರ್, ಹರೀಶ್ ಸೇರಿದಂತೆ ಇತರ ಗಣ್ಯರು, ಶಿಕ್ಷಕರು ಉಪಸ್ಥಿತರಿದ್ದರು.
    1
    ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ಇಂಜಿನಿಯರ್ಸ್ ದಿನಾಚರಣೆ. ಇಂಜೀನಿಯರ್ ದಂಪತಿಗಳಿಗೆ ಸನ್ಮಾನ
ಮಳವಳ್ಳಿ  ಪಟ್ಟಣದ ರೋಟರಿ ಶಾಲೆ ಹಾಗೂ ತಾಲೂಕಿನ ದೊಡ್ಡಬೂಹಳ್ಳಿ ಮತ್ತು ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವ ರಯ್ಯ ಜನ್ಮದಿನದ ಅಂಗವಾಗಿ ಎಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮವನ್ನು ರೋಟರಿ ಸಂಸ್ಥೆ ವತಿಯಿಂದ ಆಯೋಜಿಸ ಲಾಗಿತ್ತು.
ಬುಧವಾರ ಮಧ್ಯಾಹ್ನ 12.30 ರ ಸಮಯದಲ್ಲಿ ಪಟ್ಟಣದ ರೋಟರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಜಿನಿ ಯರ್ ದಂಪತಿಗಳಾದ ಆರ್.ಜಿ.ಅರುಣ್ ಹಾಗೂ ಸುರಕ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ದಂಪತಿಗಳು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ರೋಟರಿ ಸಂಸ್ಥೆ ಕಾರ್ಯದರ್ಶಿ ಆರ್.ಜಿ.ಮಹದೇವಸ್ವಾಮಿ ಅವರು ವಿಶ್ವ ಓಝೋನ್ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿಯ ಬಗ್ಗೆ ಪ್ರತಿಯೊಬ್ಬರೂ ಜವಾಬ್ದಾರಿ ಹೊಂದಿರಬೇಕು ಎಂದು ತಿಳಿಸಿದರು.
ತಾಲೂಕಿನ ನೆಲ್ಲಿಗೆರೆ ಮತ್ತು ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಗಳಲ್ಲೂ ರೋಟರಿ ಸಂಸ್ಥೆ ವತಿಯಿಂದ ಎಂಜಿನಿ ಯರ್ಸ್ ದಿನಾಚರಣೆ ಕಾರ್ಯಕ್ರಮ ನಡೆಯಿತು. 
ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಬಸವರಾಜು ಅಧ್ಯಕ್ಷತೆಯಲ್ಲಿ  ನಡೆದ ಕಾರ್ಯಕ್ರಮದಲ್ಲಿ  ನಿವೃತ್ತ ಎಂಜಿನಿಯರ್  ನರಸಿಂಹಮೂರ್ತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನರಸಿಂಹಮೂರ್ತಿ ಅವರು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ದೊಡ್ಡಬೂಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ನಾಗೇಂದ್ರ ಮೂರ್ತಿ ಅಧ್ಯಕ್ಷತೆಯಲ್ಲಿ  ನಡೆದ ಸರಳ ಸಮಾರಂಭದಲ್ಲಿ  ಎಂಜಿನಿಯರ್ಸ್ ದಿನಾಚರಣೆ ಮಾಹಿತಿಯನ್ನು ಎಂಜಿನಿಯರ್ ದಂಪತಿಗಳಾದ ಆರ್.ಜಿ.ಅರುಣ್ ಹಾಗೂ ಸುರಕ್ಷ ಅವರುಗಳು ವಿದ್ಯಾರ್ಥಿಗಳಿಗೆ ವಿವರಿಸಿದರು.
ಸಮಾರಂಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಮಹಮದ್ ಜಬೀವುಲ್ಲಾ, ಘನಶ್ಯಾಮ್ ದಾಸ್, ಆರ್.ಜಿ.ಮಹದೇವ ಸ್ವಾಮಿ, ಎಂ.ವಿ.ಸೋಮ ಶೇಖರ್,  ಹರೀಶ್ ಸೇರಿದಂತೆ ಇತರ ಗಣ್ಯರು, ಶಿಕ್ಷಕರು  ಉಪಸ್ಥಿತರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
  • ವಿಶ್ವಕರ್ಮ ಸಮಾಜ ಪುರಾಣ ಕಾಲದಿಂದ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ಮಹತ್ವವನ್ನು ಹೊಂದಿದೆ-ಎಡಿಸಿ ಶಿವಾನಂದ ಮಂಡ್ಯ-ವಿಶ್ವಕರ್ಮ ಸಮಾಜವು ಪುರಾಣ ಕಾಲದಿಂದಲೂ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ತಿಳಿಸಿದರು ಮಂಡ್ಯದ ಅಂಬೇಡ್ಕರ್ ಭವನದಲ್ಲಿಂದು ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು ಜನನದಿಂದ ಮರಣದವರೆಗೆ ನಡೆಯುವ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಸಮುದಾಯದ ಸೇವೆ ಮಹತ್ವದ್ದಾಗಿದೆ ಎಂದರು. ದೇವಾಲಯಗಳು, ಕಟ್ಟಡಗಳು, ಮನೆಗಳು ಹಾಗೂ ವಿವಿಧ ಉಪಕರಣಗಳ ನಿರ್ಮಾಣದಲ್ಲಿ ಶಿಲ್ಪಿಗಳು ಮತ್ತು ಕುಶಲಕರ್ಮಿಗಳ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವದಿಂದ ನಿರ್ವಹಿಸು ವುದರೊಂದಿಗೆ ಸಮಾಜ ಸೇವೆಯಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿಶ್ವಕರ್ಮ ಸಮಾಜದ ಯುವಜನರು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ, ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಹಾಗೂ ಕೌಶಲ್ಯ ಒದಗಿಸುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು
    1
    ವಿಶ್ವಕರ್ಮ ಸಮಾಜ ಪುರಾಣ ಕಾಲದಿಂದ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ಮಹತ್ವವನ್ನು ಹೊಂದಿದೆ-ಎಡಿಸಿ ಶಿವಾನಂದ
ಮಂಡ್ಯ-ವಿಶ್ವಕರ್ಮ ಸಮಾಜವು ಪುರಾಣ ಕಾಲದಿಂದಲೂ ಕಲೆ, ನಿರ್ಮಾಣ ಹಾಗೂ ಕರಕುಶಲ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ತಿಳಿಸಿದರು ಮಂಡ್ಯದ ಅಂಬೇಡ್ಕರ್ ಭವನದಲ್ಲಿಂದು ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು  ಜನನದಿಂದ ಮರಣದವರೆಗೆ ನಡೆಯುವ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಸಮುದಾಯದ ಸೇವೆ ಮಹತ್ವದ್ದಾಗಿದೆ ಎಂದರು.
ದೇವಾಲಯಗಳು, ಕಟ್ಟಡಗಳು, ಮನೆಗಳು ಹಾಗೂ ವಿವಿಧ ಉಪಕರಣಗಳ ನಿರ್ಮಾಣದಲ್ಲಿ ಶಿಲ್ಪಿಗಳು ಮತ್ತು ಕುಶಲಕರ್ಮಿಗಳ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವದಿಂದ ನಿರ್ವಹಿಸು ವುದರೊಂದಿಗೆ ಸಮಾಜ ಸೇವೆಯಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ಯುವಜನರು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ, ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಹಾಗೂ ಕೌಶಲ್ಯ ಒದಗಿಸುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    28 min ago
  • ಜೆಸ್ಕಾಂ ಕಚೇರಿ ಮುಂದೆ ಕೃಷಿಕಂಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ ಟಿ. ನರಸೀಪುರ ಅಸಮರ್ಪಕ ವಿದ್ಯುತ್ ಪೂರೈಕೆ: ರೈತರು ಸಂಕಷ್ಟದಲ್ಲಿ. ಟಿ. ನರಸೀಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಹೊಲಗಳಲ್ಲಿ ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ವೋಲ್ಟೇಜ್‌ನೊಂದಿಗೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಮೋಟಾರ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಬೆಳೆಗಳಿಗೆ ಸಾಕಷ್ಟು ಖರ್ಚು ಮಾಡಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ವಿದ್ಯುತ್ ಸಮಸ್ಯೆಯಿಂದ ಬೆಳೆ ಹಾನಿಯಾದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ತರವಾಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಲೈನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಿ ರೈತರ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ತುರ್ತಾಗಿ ಸಮಸ್ಯೆ ಪರಿಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ರೈತರ ಬೆಳೆ ಉಳಿಸಲು ವಿದ್ಯುತ್ ಪೂರೈಕೆ ಸಮರ್ಪಕವಾಗಲಿಯಂದು ರೈತರ ಒತ್ತಾಯ . ಈ ಪ್ರತಿಭಟನೆಯಲ್ಲಿ ಕಿರಗುಸೂರು ಶಂಕರ್ ಕೆಜಿ ಗುರುಸ್ವಾಮಿ ಕುರುಬುರ್ ಗೌರಿಶಂಕರ್ ವಾಚ್ ಕುಮಾರ್ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ ಅಪ್ಪಣ್ಣ ಕುರುಬೂರು ಸಿದ್ದೇಶ್, ಬಿಪಿ ಪರಶಿವಮೂರ್ತಿ, ಕರುವಟಿ ಉಮೇಶ್ ಕುರುಬೂರ ಪ್ರದೀಪ್ ಸೋಮಶೇಖರ್ ಬನ್ನಳ್ಳಿ ಹುಂಡಿ ರಾಜೇಂದ್ರ ನಿಲ್ಸೋಗೆ ಉಮೇಶ್ ಪ್ರತಾಪ್, ಕುಮಾರ್ ಕೆ ಎಂ, ವಾಟಾಳ್ ಪುರ ಸತೀಶ್ ಕುಮಾರ್ ಹೊಸಪುರ ನಾಗರಾಜು ಮಾದೇಶ್ ಮಾದೇವಮೂರ್ತಿ ಬಸವರಾಜು ಎಸ್ ಕೆಬ್ಬೆ ಹುಂಡಿ, ಮಾದೇವಸ್ವಾಮಿ ಮಾವ್ನಹಳ್ಳಿ, ತರಕಾರಿ ನಿಂಗರಾಜು ಬನ್ನಳ್ಳಿ ಶಾಂತರಾಜು ಆದಿ ಬೆಟ್ಟಳ್ಳಿ ಮಹೇಶ ಕನ್ನಳ್ಳಿ ಮೊಳೆ ಮಣಿಕಂಠ ಲೋಕೇಶ್ ರವೀಂದ್ರ ಮಾದೇಶ್ ನಿಲ್ಸೋಗೆ ನಾಗರಾಜು ಚಿನ್ನಸ್ವಾಮಿ ಕುರುಬೂರು ಶಿವಪ್ರಸಾದ್ ವೀರೇಶ್ ಎಲ್ ಐ ಸಿ ಪ್ರದೀಪ್ ಎಬಿ ಮಂಜುನಾಥ್ ನವೀನ ತೊಟ್ಟುವಾಡಿ ಇನ್ನು ಮುಂತಾದ ರೈತರು ಭಾಗವಹಿಸಿದ್ದರು
    1
    ಜೆಸ್ಕಾಂ ಕಚೇರಿ ಮುಂದೆ ಕೃಷಿಕಂಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ 
ಟಿ. ನರಸೀಪುರ ಅಸಮರ್ಪಕ ವಿದ್ಯುತ್ ಪೂರೈಕೆ: ರೈತರು ಸಂಕಷ್ಟದಲ್ಲಿ.
ಟಿ. ನರಸೀಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಹೊಲಗಳಲ್ಲಿ ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ವೋಲ್ಟೇಜ್‌ನೊಂದಿಗೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಮೋಟಾರ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ಬೆಳೆಗಳಿಗೆ ಸಾಕಷ್ಟು ಖರ್ಚು ಮಾಡಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ವಿದ್ಯುತ್ ಸಮಸ್ಯೆಯಿಂದ ಬೆಳೆ ಹಾನಿಯಾದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ತರವಾಗಲಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಲೈನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಿ ರೈತರ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ತುರ್ತಾಗಿ ಸಮಸ್ಯೆ ಪರಿಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ರೈತರ ಬೆಳೆ ಉಳಿಸಲು ವಿದ್ಯುತ್ ಪೂರೈಕೆ ಸಮರ್ಪಕವಾಗಲಿಯಂದು ರೈತರ ಒತ್ತಾಯ
. ಈ ಪ್ರತಿಭಟನೆಯಲ್ಲಿ ಕಿರಗುಸೂರು  ಶಂಕರ್ ಕೆಜಿ ಗುರುಸ್ವಾಮಿ ಕುರುಬುರ್ ಗೌರಿಶಂಕರ್ ವಾಚ್ ಕುಮಾರ್ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ ಅಪ್ಪಣ್ಣ ಕುರುಬೂರು ಸಿದ್ದೇಶ್,
ಬಿಪಿ ಪರಶಿವಮೂರ್ತಿ, ಕರುವಟಿ ಉಮೇಶ್ ಕುರುಬೂರ ಪ್ರದೀಪ್ 
ಸೋಮಶೇಖರ್ 
ಬನ್ನಳ್ಳಿ ಹುಂಡಿ ರಾಜೇಂದ್ರ 
ನಿಲ್ಸೋಗೆ ಉಮೇಶ್ 
ಪ್ರತಾಪ್, ಕುಮಾರ್ ಕೆ ಎಂ,
ವಾಟಾಳ್ ಪುರ ಸತೀಶ್ ಕುಮಾರ್ 
ಹೊಸಪುರ ನಾಗರಾಜು ಮಾದೇಶ್ ಮಾದೇವಮೂರ್ತಿ 
ಬಸವರಾಜು ಎಸ್ ಕೆಬ್ಬೆ ಹುಂಡಿ, ಮಾದೇವಸ್ವಾಮಿ ಮಾವ್ನಹಳ್ಳಿ,
ತರಕಾರಿ ನಿಂಗರಾಜು ಬನ್ನಳ್ಳಿ ಶಾಂತರಾಜು ಆದಿ ಬೆಟ್ಟಳ್ಳಿ ಮಹೇಶ ಕನ್ನಳ್ಳಿ ಮೊಳೆ ಮಣಿಕಂಠ ಲೋಕೇಶ್ ರವೀಂದ್ರ ಮಾದೇಶ್ ನಿಲ್ಸೋಗೆ ನಾಗರಾಜು ಚಿನ್ನಸ್ವಾಮಿ ಕುರುಬೂರು ಶಿವಪ್ರಸಾದ್ ವೀರೇಶ್ ಎಲ್ ಐ ಸಿ ಪ್ರದೀಪ್ ಎಬಿ ಮಂಜುನಾಥ್ ನವೀನ ತೊಟ್ಟುವಾಡಿ ಇನ್ನು ಮುಂತಾದ ರೈತರು ಭಾಗವಹಿಸಿದ್ದರು
    user_ಪ್ರದೀಪ್ ಎಂ ಕುರುಬೂರು
    ಪ್ರದೀಪ್ ಎಂ ಕುರುಬೂರು
    ತಿರುಮಕೂಡಲು - ನರಸಿಪುರ, ಮೈಸೂರು, ಕರ್ನಾಟಕ•
    14 hrs ago
  • ಸೆ.20ರಂದು ಭಾರತೀ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆ, ಪ್ರತಿಭಾ ಪುರಸ್ಕಾರ ರಾಮನಗರ : ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ದಿ ಭಾರತೀ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸರ್ವ ಸದಸ್ಯರ ಸಭೆ ಸೆ.20ರ ಭಾನುವಾರ ವಿವೇಕಾನಂದನಗರ, ಬಿ.ಎಂ. ರಸ್ತೆಯಲ್ಲಿರುವ ರಾಯಲ್ ಕನ್‌ವೆನ್‌ಷನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕೆ.ಚಂದ್ರಯ್ಯ ತಿಳಿಸಿದರು. ನಗರದ ಸೊಸೈಟಿ ಕಚೇರಿ ಆವರಣದಲ್ಲಿ ಗುರುವಾರ ಆಡಳಿತ ಮಂಡಳಿ ಸದಸ್ಯರ ಜೊತೆ ಸರ್ವ ಸದಸ್ಯರ ಸಭೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಬಿ.ಎಲ್. ಲಕ್ಕೇಗೌಡರು ಸಂಸ್ಥಾಪಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕಳೆದ 28 ವರ್ಷಗಳಿಂದ ಸೊಸೈಟಿ ಉತ್ತಮವಾಗಿ ಲಾಭದಲ್ಲಿ ನಡೆಯುತ್ತಾ ಬಂದಿದೆ. ತಾಲ್ಲೂಕಿನಲ್ಲಿ ಜನರ ಸೇವೆ ಮಾಡುತ್ತಾ ಬಂದಿದೆ. 4779 ಸದಸ್ಯರು ಸಂಘದಲ್ಲಿದ್ದು 2025-26ನೇ ಸಾಲಿನಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳ ಉತ್ತಮ ಸಹಕಾರದಿಂದ 44,373,35 ರೂ. ಲಾಭಗಳಿಸಿದೆ. ವಾರ್ಷಿಕವಾಗಿ 41 ಕೋಟಿ ರೂ. ವಹಿವಾಟು ಮಾಡಲಾಗುತ್ತಿದೆ. ಶೇ.12 ರಷ್ಟು ಬಡ್ಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ 33 ಲಕ್ಷ ಸಾಲ ನೀಡಲಾಗಿದೆ ಎಂದರು. ಷೇರು ಬಂಡವಾಳ ಒಂದು ಕೋಟಿ 38 ಲಕ್ಷ ಇದೆ. ವಾರ್ಷಿಕ ಶೇ.10 ರ ಬಡ್ಡಿದರದಲ್ಲಿ ಆಭರಣ ಸಾಲ ನೀಡಲಾಗುತ್ತಿದೆ. ನಮ್ಮಲ್ಲಿ ಠೇವಣ ಸೌಲಭ್ಯ ಸಹ ಇದೆ. ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.85 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಯಲ್ಲಿ 2 ಸಾವಿರ ರೂ.ಗಳ ಕೈ ಗಡಿಯಾರ ನೀಡಲಾಗುತ್ತಿದೆ. ಜೊತೆಗೆ ಸದಸ್ಯರ ಮರಣೋತ್ತರವಾಗಿ ನಾಮಿನಿ ಸದಸ್ಯರಿಗೆ ಮರಣ ಪರಿಹಾರ ನಿಧಿ ನೀಡಲಾಗುತ್ತಿದೆ ಎಂದು ಹೇಳಿದರು. ಸದಸ್ಯರು ಸೆ.20ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ವಿವೇಕಾನಂದನಗರದ ರಾಯಲ್ ಕನ್‌ವೆನ್‌ಷನ್ ಹಾಲ್‌ನಲ್ಲಿ ನಡೆಯುವ ಸಭೆಗೆ ಆಗಮಿಸಿ ಸೊಸೈಟಿ ಮತ್ತಷ್ಟು ಎತ್ತರಕ್ಕೆ ಬೆಳೆದು ಇನ್ನಷ್ಟು ಜನ ಸೇವೆಗೆ ಮುಂದಾಗುವ ದೃಷ್ಟಿಯಿಂದ ಸಲಹೆ ಸಹಕಾರ ನೀಡಬೇಕು ಎಂದರು. ಇದೇ ವೇಳೆ ಸೊಸೈಟಿಯ 2025-26ನೇ ಸಾಲಿನ ಆಹ್ವಾನ ಪತ್ರಿಕೆ ಮತ್ತು ಆಡಿಟ್ ವರದಿ ಲಾಭಾಂಶದ ವಿವರದ ಪುಸ್ತಕ ಬಿಡುಗಡೆ ಮಾಡಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಸಿ. ಸೋಮೇಗೌಡ, ನಿರ್ದೇಶಕರಾದ ಕೆ.ಪಿ.ಉಮೇಶ್, ದೊರೆಸ್ವಾಮಿ, ಜಿ.ಎಲ್.ಆಂಜನೇಯ, ಎಂ.ಶಿವಲಿಂಗಯ್ಯ, ಎ.ಆರ್.ಚಂದ್ರಶೇಖರ್, ಹೆಚ್.ಕೆ.ರುಕ್ಮಿಣ , ಎಸ್.ಕೃಷ್ಣಪ್ಪ ಮುಖ್ಯ ಕಾರ್ಯನಿರ್ವಹಕ ಬಿ.ಎಸ್.ಸುರೇಶ್ ಇದ್ದರು.
    1
    ಸೆ.20ರಂದು ಭಾರತೀ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆ, ಪ್ರತಿಭಾ ಪುರಸ್ಕಾರ
ರಾಮನಗರ : ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ದಿ ಭಾರತೀ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸರ್ವ ಸದಸ್ಯರ ಸಭೆ ಸೆ.20ರ ಭಾನುವಾರ ವಿವೇಕಾನಂದನಗರ, ಬಿ.ಎಂ. ರಸ್ತೆಯಲ್ಲಿರುವ ರಾಯಲ್  ಕನ್‌ವೆನ್‌ಷನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕೆ.ಚಂದ್ರಯ್ಯ ತಿಳಿಸಿದರು.
ನಗರದ ಸೊಸೈಟಿ ಕಚೇರಿ ಆವರಣದಲ್ಲಿ ಗುರುವಾರ ಆಡಳಿತ ಮಂಡಳಿ ಸದಸ್ಯರ ಜೊತೆ ಸರ್ವ ಸದಸ್ಯರ ಸಭೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಬಿ.ಎಲ್. ಲಕ್ಕೇಗೌಡರು ಸಂಸ್ಥಾಪಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕಳೆದ 28 ವರ್ಷಗಳಿಂದ ಸೊಸೈಟಿ ಉತ್ತಮವಾಗಿ ಲಾಭದಲ್ಲಿ ನಡೆಯುತ್ತಾ ಬಂದಿದೆ. ತಾಲ್ಲೂಕಿನಲ್ಲಿ ಜನರ ಸೇವೆ ಮಾಡುತ್ತಾ ಬಂದಿದೆ. 4779 ಸದಸ್ಯರು ಸಂಘದಲ್ಲಿದ್ದು 2025-26ನೇ ಸಾಲಿನಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳ ಉತ್ತಮ ಸಹಕಾರದಿಂದ 44,373,35 ರೂ. ಲಾಭಗಳಿಸಿದೆ. ವಾರ್ಷಿಕವಾಗಿ 41 ಕೋಟಿ ರೂ. ವಹಿವಾಟು ಮಾಡಲಾಗುತ್ತಿದೆ. ಶೇ.12 ರಷ್ಟು ಬಡ್ಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ  10 ಕೋಟಿ 33 ಲಕ್ಷ ಸಾಲ ನೀಡಲಾಗಿದೆ ಎಂದರು.
ಷೇರು ಬಂಡವಾಳ ಒಂದು ಕೋಟಿ 38 ಲಕ್ಷ ಇದೆ. ವಾರ್ಷಿಕ ಶೇ.10 ರ ಬಡ್ಡಿದರದಲ್ಲಿ ಆಭರಣ ಸಾಲ ನೀಡಲಾಗುತ್ತಿದೆ. ನಮ್ಮಲ್ಲಿ ಠೇವಣ  ಸೌಲಭ್ಯ ಸಹ ಇದೆ. ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.85 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಯಲ್ಲಿ 2 ಸಾವಿರ ರೂ.ಗಳ ಕೈ ಗಡಿಯಾರ ನೀಡಲಾಗುತ್ತಿದೆ. ಜೊತೆಗೆ ಸದಸ್ಯರ ಮರಣೋತ್ತರವಾಗಿ ನಾಮಿನಿ ಸದಸ್ಯರಿಗೆ ಮರಣ ಪರಿಹಾರ ನಿಧಿ ನೀಡಲಾಗುತ್ತಿದೆ ಎಂದು ಹೇಳಿದರು. 
ಸದಸ್ಯರು ಸೆ.20ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ವಿವೇಕಾನಂದನಗರದ ರಾಯಲ್ ಕನ್‌ವೆನ್‌ಷನ್ ಹಾಲ್‌ನಲ್ಲಿ ನಡೆಯುವ ಸಭೆಗೆ ಆಗಮಿಸಿ ಸೊಸೈಟಿ ಮತ್ತಷ್ಟು ಎತ್ತರಕ್ಕೆ ಬೆಳೆದು ಇನ್ನಷ್ಟು ಜನ ಸೇವೆಗೆ ಮುಂದಾಗುವ ದೃಷ್ಟಿಯಿಂದ ಸಲಹೆ ಸಹಕಾರ ನೀಡಬೇಕು ಎಂದರು. ಇದೇ ವೇಳೆ ಸೊಸೈಟಿಯ 2025-26ನೇ ಸಾಲಿನ ಆಹ್ವಾನ ಪತ್ರಿಕೆ ಮತ್ತು ಆಡಿಟ್ ವರದಿ ಲಾಭಾಂಶದ ವಿವರದ ಪುಸ್ತಕ ಬಿಡುಗಡೆ ಮಾಡಿದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಸಿ. ಸೋಮೇಗೌಡ, ನಿರ್ದೇಶಕರಾದ ಕೆ.ಪಿ.ಉಮೇಶ್, ದೊರೆಸ್ವಾಮಿ, ಜಿ.ಎಲ್.ಆಂಜನೇಯ, ಎಂ.ಶಿವಲಿಂಗಯ್ಯ, ಎ.ಆರ್.ಚಂದ್ರಶೇಖರ್, ಹೆಚ್.ಕೆ.ರುಕ್ಮಿಣ , ಎಸ್.ಕೃಷ್ಣಪ್ಪ ಮುಖ್ಯ ಕಾರ್ಯನಿರ್ವಹಕ ಬಿ.ಎಸ್.ಸುರೇಶ್ ಇದ್ದರು.
    user_ರಮೇಶ್.ಆರ್
    ರಮೇಶ್.ಆರ್
    ಚನ್ನಪಟ್ಟಣ, ರಾಮನಗರ, ಕರ್ನಾಟಕ•
    2 hrs ago
  • ಯಳಂದೂರು ಪಟ್ಟಣದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಸರಳ ಆಚರಣೆ . ಯಳಂದೂರು ನ್ಯೂಸ್ ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಯಳಂದೂರು ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ ಶ್ರೀ ವಿಶ್ವಕರ್ಮ ಜಯಂತಿ ಸಮಾರಂಭದ ಕಾರ್ಯಕ್ರಮದಲ್ಲಿ ಗಣ್ಯರು ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು  ನಂತರ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಎಸ್ ಪುಷ್ಪಲತಾ ರವರು ಮಾತನಾಡಿ ವಿಶ್ವಕರ್ಮ ಜಯಂತಿ ಒಂದು ಜನಾಂಗಕ್ಕೆ ಸೀಮಿತವಾಗಿರುವುದು ದುರಂತ ಕಲೆ, ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದುದ್ದು ವಿಶ್ವಕರ್ಮ ಸಮುದಾಯವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ’ ‘ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಪೂರಕವಾದ ವ್ಯವಸ್ಥೆ ಕಲ್ಪಿಸಿದಲ್ಲಿ ಸಮುದಾಯವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಅದರಿಂದ ಪ್ರತಿಯೊಬ್ಬ ನಾಗರಿಕರು ವಿಶ್ವಕರ್ಮರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಹೆಚ್. ವಿ . ಚಂದ್ರು, ತಾಲೂಕು ಗ್ಯಾರೆಂಟಿ ಯೋಜನೆ ಅಧ್ಯಕ್ಷರಾದ ಪ್ರಭು ಪ್ರಸಾದ್, ತಹಸಿಲ್ದಾರ್ ಎಸ್. ಎಲ್ ನಯನ ಸಮಾರಂಭವನ್ನು ಉದ್ದೇಶಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ನಾಗರಾಜು, ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯ ಅಧಿಕಾರಿ ಮಹದೇವ ನಾಯಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಅಮೃತೇಶ್, ಶಿಕ್ಷಣ ಇಲಾಖೆ ಬಿ ಆರ್ ಪಿ ರೇಚಣ್ಣ, ಶಿವಣ್ಣಚಾರಿ ತಾಲೂಕಿನ ವಿಶ್ವಕರ್ಮ ಸಮಾಜದ ಮುಖಂಡರು, ಯುವಕರು, ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು.
    1
    ಯಳಂದೂರು ಪಟ್ಟಣದಲ್ಲಿ 
ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಸರಳ ಆಚರಣೆ
.
ಯಳಂದೂರು ನ್ಯೂಸ್ 
ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು 
ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಯಳಂದೂರು ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ ಶ್ರೀ ವಿಶ್ವಕರ್ಮ ಜಯಂತಿ ಸಮಾರಂಭದ
ಕಾರ್ಯಕ್ರಮದಲ್ಲಿ ಗಣ್ಯರು ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು 
ನಂತರ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಎಸ್ ಪುಷ್ಪಲತಾ ರವರು ಮಾತನಾಡಿ ವಿಶ್ವಕರ್ಮ ಜಯಂತಿ ಒಂದು ಜನಾಂಗಕ್ಕೆ ಸೀಮಿತವಾಗಿರುವುದು ದುರಂತ  ಕಲೆ, ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದುದ್ದು  ವಿಶ್ವಕರ್ಮ ಸಮುದಾಯವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ  ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ’ 
‘ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಪೂರಕವಾದ ವ್ಯವಸ್ಥೆ ಕಲ್ಪಿಸಿದಲ್ಲಿ ಸಮುದಾಯವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಅದರಿಂದ ಪ್ರತಿಯೊಬ್ಬ ನಾಗರಿಕರು ವಿಶ್ವಕರ್ಮರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಹೆಚ್. ವಿ . ಚಂದ್ರು, ತಾಲೂಕು ಗ್ಯಾರೆಂಟಿ ಯೋಜನೆ ಅಧ್ಯಕ್ಷರಾದ ಪ್ರಭು ಪ್ರಸಾದ್, ತಹಸಿಲ್ದಾರ್ ಎಸ್. ಎಲ್ ನಯನ ಸಮಾರಂಭವನ್ನು ಉದ್ದೇಶಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ  ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ  ನಾಗರಾಜು, ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯ ಅಧಿಕಾರಿ ಮಹದೇವ ನಾಯಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಅಮೃತೇಶ್, ಶಿಕ್ಷಣ ಇಲಾಖೆ ಬಿ ಆರ್ ಪಿ ರೇಚಣ್ಣ,  ಶಿವಣ್ಣಚಾರಿ ತಾಲೂಕಿನ ವಿಶ್ವಕರ್ಮ ಸಮಾಜದ ಮುಖಂಡರು, ಯುವಕರು, ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು.
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    7 hrs ago
  • ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಕೆರೆ ಭರ್ತಿ: ರೈತರು, ಗ್ರಾಮಸ್ಥರಲ್ಲಿ ಹರ್ಷ ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಕೆರೆಯು ಭರ್ತಿಯಾಗಿ ತುಂಬಿ ತುಳುಕುತ್ತಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರ ಪರಿಣಾಮ, ಬಂಡಳ್ಳಿ ಗ್ರಾಮದ ಕೆರೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು ಸಂಪೂರ್ಣವಾಗಿ ಭರ್ತಿಯಾಗಿದೆ. ಕೆರೆಯು ತುಂಬಿ ತುಳುಕುತ್ತಿರುವ ಮನಮೋಹಕ ದೃಶ್ಯವು ಸ್ಥಳೀಯರ ಹಾಗೂ ಪ್ರವಾಸಿಗರ ಮನ ಸೆಳೆಯುತ್ತಿದೆ. ಕೆರೆಯ ಹಿಂಭಾಗದಲ್ಲಿ ಮಂಜು ಕವಿದ ಸುಂದರ ಗುಡ್ಡಗಳು ಮತ್ತು ಹಸಿರಿನ ಸಿರಿಯ ಮಧ್ಯೆ ಈ ಜಲರಾಶಿಯು ಕಂಗೊಳಿಸುತ್ತಿರುವ ದೃಶ್ಯ ನೋಡುಗರ ಕಣ್ಣಿಗೆ ಹಬ್ಬ ಉಂಟುಮಾಡಿದೆ. ರೈತರಲ್ಲಿ ಮೂಡಿದ ಮಂದಹಾಸ: ಕೆರೆ ಭರ್ತಿಯಾಗಿರುವುದರಿಂದ ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದ್ದು, ಕೊಳವೆಬಾವಿಗಳಲ್ಲಿ ನೀರು ಮರುಪೂರಣಗೊಳ್ಳಲಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನೀಗುವುದರ ಜೊತೆಗೆ, ಮುಂದಿನ ಬೆಳೆಗಳಿಗೆ ಅನುಕೂಲವಾಗಲಿದೆ ಎಂದು ಕೃಷಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
    1
    ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಕೆರೆ ಭರ್ತಿ: ರೈತರು, ಗ್ರಾಮಸ್ಥರಲ್ಲಿ ಹರ್ಷ
ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಕೆರೆಯು ಭರ್ತಿಯಾಗಿ ತುಂಬಿ ತುಳುಕುತ್ತಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಮಳೆಗಾಲದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರ ಪರಿಣಾಮ, ಬಂಡಳ್ಳಿ ಗ್ರಾಮದ ಕೆರೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು ಸಂಪೂರ್ಣವಾಗಿ ಭರ್ತಿಯಾಗಿದೆ. ಕೆರೆಯು ತುಂಬಿ ತುಳುಕುತ್ತಿರುವ ಮನಮೋಹಕ ದೃಶ್ಯವು ಸ್ಥಳೀಯರ ಹಾಗೂ ಪ್ರವಾಸಿಗರ ಮನ ಸೆಳೆಯುತ್ತಿದೆ. ಕೆರೆಯ ಹಿಂಭಾಗದಲ್ಲಿ ಮಂಜು ಕವಿದ ಸುಂದರ ಗುಡ್ಡಗಳು ಮತ್ತು ಹಸಿರಿನ ಸಿರಿಯ ಮಧ್ಯೆ ಈ ಜಲರಾಶಿಯು ಕಂಗೊಳಿಸುತ್ತಿರುವ ದೃಶ್ಯ ನೋಡುಗರ ಕಣ್ಣಿಗೆ ಹಬ್ಬ ಉಂಟುಮಾಡಿದೆ.
ರೈತರಲ್ಲಿ ಮೂಡಿದ ಮಂದಹಾಸ:
ಕೆರೆ ಭರ್ತಿಯಾಗಿರುವುದರಿಂದ ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದ್ದು, ಕೊಳವೆಬಾವಿಗಳಲ್ಲಿ ನೀರು ಮರುಪೂರಣಗೊಳ್ಳಲಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನೀಗುವುದರ ಜೊತೆಗೆ, ಮುಂದಿನ ಬೆಳೆಗಳಿಗೆ ಅನುಕೂಲವಾಗಲಿದೆ ಎಂದು ಕೃಷಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    41 min ago
  • ಪ್ರಧಾನಿ ಮೋದಿ ದಣಿವರಿಯದ ವಿಶ್ವಶ್ರೇಷ್ಠ ನಾಯಕ, ಪಟ್ಟಣದಲ್ಲಿ ಬಿಜೆಪಿ ಮುಖಂಡ ಯಮದೂರು ಸಿದ್ದರಾಜು ಬಣ್ಣನೆ ಮಳವಳ್ಳಿ: ಜನ ಸೇವೆಗಾ ಗಿಯೇ ತಮ್ಮ ಜೀವನವನ್ನು ಮುಡಿಪಾಗಿಸಿರುವ ದಣಿವರಿ ಯದ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ ಯಮದೂರು ಸಿದ್ದರಾಜು ಬಣ್ಣಿಸಿದ್ದಾರೆ. ಗುರುವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಸಾರ್ವ ಜನಿಕ ಆಸ್ಪತ್ರೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ರೋಗಿ ಗಳಿಗೆ ಹಣ್ಣು ಹಂಪಲು ವಿತರಿ ಸುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಕಳೆದ 11 ವರ್ಷಗಳಿಂದ ದೇಶದ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿ ಸುತ್ತಿದ್ದಾರೆ. ಬಡವರ, ರೈತರ, ಮಹಿಳೆಯರ, ಯುವಜನರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವಿಶ್ವದಲ್ಲೇ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಅವರ ಜನ್ಮದಿನವನ್ನು ಸೇವಾ ದಿನವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಧು ಗಂಗಾಧರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ, ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು. ಮೋದಿ ಅವರು ಹುಟ್ಟುಹಬ್ಬ ವನ್ನು ಅದ್ಧೂರಿಯಾಗಿ ಆಚರಿಸಿ ಕೊಳ್ಳದೆ, ಸೇವಾ ಕಾರ್ಯಗಳ ಮೂಲಕ ಆಚರಿಸಲು ಕರೆ ನೀಡಿದ್ದಾರೆ. ಅದರಂತೆ ಇಂದು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗಿದೆ. ಮೋದಿ ಅವರ ಆರೋಗ್ಯ, ದೀರ್ಘಾಯುಷ್ಯ ಕ್ಕಾಗಿ ಪ್ರಾರ್ಥಿಸಿ ಮನೆಗಳಲ್ಲಿ ದೀಪ ಬೆಳಗುವಿಕೆ ದೇವಾಲಯ ಗಳಲ್ಲಿ ವಿಶೇಷ ಪೂಜೆ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿ ದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾ ರಿಗಳಾದ ಡಾ. ಶಿವಸ್ವಾಮಿ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಹೆಬ್ಬಣಿ ಬಸವರಾಜು, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಚಿಕ್ಜಣ್ಣ, ಪ್ರಧಾನ ಕಾರ್ಯದರ್ಶಿ ಉಮೇಶ್, ಜೆಡಿಎಸ್ ಮುಖಂಡ ಕಂಬರಾಜು, ಮುಖಂಡರಾದ ಸಿದ್ದರಾಜು, ದೇವರಾಜು, ವಕ್ಕರಹಳ್ಳಿ ಬಸವರಾಜು, ಮಾದೇಶ, ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.
    1
    ಪ್ರಧಾನಿ ಮೋದಿ ದಣಿವರಿಯದ ವಿಶ್ವಶ್ರೇಷ್ಠ ನಾಯಕ, ಪಟ್ಟಣದಲ್ಲಿ ಬಿಜೆಪಿ ಮುಖಂಡ ಯಮದೂರು ಸಿದ್ದರಾಜು ಬಣ್ಣನೆ
ಮಳವಳ್ಳಿ: ಜನ ಸೇವೆಗಾ ಗಿಯೇ ತಮ್ಮ ಜೀವನವನ್ನು ಮುಡಿಪಾಗಿಸಿರುವ ದಣಿವರಿ ಯದ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ ಯಮದೂರು ಸಿದ್ದರಾಜು ಬಣ್ಣಿಸಿದ್ದಾರೆ.
ಗುರುವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಸಾರ್ವ ಜನಿಕ ಆಸ್ಪತ್ರೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ರೋಗಿ ಗಳಿಗೆ ಹಣ್ಣು ಹಂಪಲು ವಿತರಿ ಸುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಕಳೆದ 11 ವರ್ಷಗಳಿಂದ ದೇಶದ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿ ಸುತ್ತಿದ್ದಾರೆ. ಬಡವರ, ರೈತರ, ಮಹಿಳೆಯರ, ಯುವಜನರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವಿಶ್ವದಲ್ಲೇ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಅವರ ಜನ್ಮದಿನವನ್ನು ಸೇವಾ ದಿನವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಧು ಗಂಗಾಧರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ, ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.
ಮೋದಿ ಅವರು ಹುಟ್ಟುಹಬ್ಬ ವನ್ನು ಅದ್ಧೂರಿಯಾಗಿ ಆಚರಿಸಿ ಕೊಳ್ಳದೆ, ಸೇವಾ ಕಾರ್ಯಗಳ ಮೂಲಕ ಆಚರಿಸಲು ಕರೆ ನೀಡಿದ್ದಾರೆ. ಅದರಂತೆ ಇಂದು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗಿದೆ. ಮೋದಿ ಅವರ ಆರೋಗ್ಯ, ದೀರ್ಘಾಯುಷ್ಯ ಕ್ಕಾಗಿ ಪ್ರಾರ್ಥಿಸಿ ಮನೆಗಳಲ್ಲಿ ದೀಪ ಬೆಳಗುವಿಕೆ ದೇವಾಲಯ ಗಳಲ್ಲಿ  ವಿಶೇಷ ಪೂಜೆ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿ ದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾ ರಿಗಳಾದ ಡಾ. ಶಿವಸ್ವಾಮಿ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಹೆಬ್ಬಣಿ ಬಸವರಾಜು, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಚಿಕ್ಜಣ್ಣ, ಪ್ರಧಾನ ಕಾರ್ಯದರ್ಶಿ ಉಮೇಶ್, ಜೆಡಿಎಸ್ ಮುಖಂಡ ಕಂಬರಾಜು, ಮುಖಂಡರಾದ ಸಿದ್ದರಾಜು, ದೇವರಾಜು, ವಕ್ಕರಹಳ್ಳಿ ಬಸವರಾಜು, ಮಾದೇಶ,  ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.