logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೆಳಗಾವಿಯ ವಡಗಾಂವದ ರಯತ್ ಗಲ್ಲಿಯ ಮಹಿಳೆಯರು ನೀರಿನ ಸಮಸ್ಯೆಯನ್ನು ಖಂಡಿಸಿ ಹಮ್ಮಿಕೊಂಡಿದ್ದ 'ಘಾಗರ್ ಮೋರ್ಚಾ'ದ (ಕೊಡಗಳ ಮೆರವಣಿಗೆ)

on 10 March
user_Udaysingh Patel
Udaysingh Patel
Content Creator (YouTuber) Belagavi, Karnataka•
on 10 March

ಬೆಳಗಾವಿಯ ವಡಗಾಂವದ ರಯತ್ ಗಲ್ಲಿಯ ಮಹಿಳೆಯರು ನೀರಿನ ಸಮಸ್ಯೆಯನ್ನು ಖಂಡಿಸಿ ಹಮ್ಮಿಕೊಂಡಿದ್ದ 'ಘಾಗರ್ ಮೋರ್ಚಾ'ದ (ಕೊಡಗಳ ಮೆರವಣಿಗೆ)

  • user_User4900
    User4900
    Bidar, Karnataka
    😂
    on 13 March
More news from ಕರ್ನಾಟಕ and nearby areas
  • ಬಾಗಲಕೋಟೆ: ದೇಶದಾದ್ಯಂತ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಜಯಂತಿಯನ್ನು ಅತ್ಯಂತ ಗೌರವಪೂರ್ವಕವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗರಡದಿನ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯಂತಿಯನ್ನು ನಿರ್ಲಕ್ಷ್ಯದಿಂದ ಆಚರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದ ಸಾರ್ವಜನಿಕರು ಹಾಗೂ ಅಂಬೇಡ್ಕರ್ ಸಂಘದ ಸದಸ್ಯರು ನೀಡಿದ ಮಾಹಿತಿಯ ಪ್ರಕಾರ, ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಯಾವುದೇ ಸಮರ್ಪಕ ಸಿದ್ಧತೆಗಳನ್ನು ಕೈಗೊಳ್ಳದೇ, ಕೇವಲ ರೂಢಿಪರವಾಗಿ ಕಾರ್ಯಕ್ರಮ ನಡೆಸಲಾಗಿದೆ. ಮಹಾನ್ ನಾಯಕನ ಭಾವಚಿತ್ರಕ್ಕೆ ಒಂದು ಹೂವಿನ ಹಾರವನ್ನೂ ತರದೇ, ಪೂಜೆ ಮಾಡಿದಂತೆ ತೋರಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಏಪ್ರಿಲ್ ತಿಂಗಳು ದಲಿತ ಸಮುದಾಯದವರಿಗೆ ವಿಶೇಷ ಮಹತ್ವ ಹೊಂದಿದ್ದು, ಈ ಅವಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗಾಗಿ ತಿಂಗಳುಗಟ್ಟಲೆ ಸಿದ್ಧತೆ ನಡೆಸಿ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆಚರಣೆ ನಡೆಸುವುದು ಸಾಮಾನ್ಯವಾಗಿದೆ. ಆದರೆ, ಈ ಶಾಲೆಯಲ್ಲಿ ನಡೆದಿರುವ ಆಚರಣೆ ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಸ್. ಕಾಳಿ ಹಾಗೂ ಶಿಕ್ಷಕಿ ಎ.ಎಸ್. ಜಹಾಂಗೀರದಾರ ಅವರು ಸುಮಾರು 30ರಿಂದ 35 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ಸರಳವಾಗಿ ಕಾರ್ಯಕ್ರಮವನ್ನು ಮುಗಿಸಿರುವುದಾಗಿ ತಿಳಿದುಬಂದಿದೆ. ಮಕ್ಕಳಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು, ಸಂವಿಧಾನ ಮೌಲ್ಯಗಳು ಹಾಗೂ ಸಾಮಾಜಿಕ ಸಮಾನತೆಯ ಅರಿವು ಮೂಡಿಸಬೇಕಾದ ಶಿಕ್ಷಕರೇ ಈ ರೀತಿಯಾಗಿ ನಡೆದುಕೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಪ್ರಶ್ನೆ ಮಾಡಿದ ಸ್ಥಳೀಯ ಅಂಬೇಡ್ಕರ್ ಸಂಘದ ಯುವಕರಿಗೆ ಶಿಕ್ಷಕಿ ಜಹಾಂಗೀರದಾರ ಅವರು, “ಶಾಲೆಗೆ ಅನುದಾನವೇ ಬರುವುದಿಲ್ಲ, ನಾವು ಕೈಯಿಂದ ಏನು ಮಾಡಬೇಕು? ನಾವು ಪೂಜೆ ಮಾಡುವುದೇ ಹೀಗೆ” ಎಂದು ಪ್ರತಿಕ್ರಿಯೆ ನೀಡಿದರೆಂದು ಆರೋಪಿಸಲಾಗಿದೆ. ಈ ಉತ್ತರ ಸ್ಥಳೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಮುಖ್ಯ ಶಿಕ್ಷಕ ಹೆಚ್.ಎಸ್. ಕಾಳಿ ಅವರನ್ನು ಸಂಪರ್ಕಿಸಿದಾಗ, “ನಾನು ಬೇರೆ ಮೀಟಿಂಗ್‌ಗೆ ಹೋಗಿದ್ದೆ. ಪೂಜೆ ಮಾಡಲು ಹೇಳಿದ್ದೆ” ಎಂಬ ಉತ್ತರ ನೀಡಿದ್ದಾರೆ ಎಂದು ಯುವಕರು ತಿಳಿಸಿದ್ದಾರೆ. ಈ ಪ್ರತಿಕ್ರಿಯೆ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದು, ಬೀಳಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕೆಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ವಿಷಯವನ್ನು ಸಮಜಾಯಿಷಿಯಿಂದ ಮುಕ್ತಾಯಗೊಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. “ಇಷ್ಟಕ್ಕೆ ಮುಗಿಸಿ ಬಿಡಿ, ಏನೋ ತಪ್ಪಾಗಿದೆ” ಎಂದು ಅಧಿಕಾರಿಗಳು ಕೇಳಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಅಧಿಕಾರಿಗಳ ನಿರ್ಲಕ್ಷ್ಯವೂ ಸ್ಪಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಅಭಿಪ್ರಾಯದಂತೆ, ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸಂವಿಧಾನದ ಮೌಲ್ಯಗಳು, ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ಬೋಧಿಸುವ ಪ್ರಮುಖ ಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳಲ್ಲೇ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರಿಗೆ ಅಗತ್ಯ ಗೌರವ ನೀಡದಿರುವುದು ದುರಂತಕರ ಸಂಗತಿಯಾಗಿದೆ. ಈ ಘಟನೆ ಕೇವಲ ಒಂದು ಶಾಲೆಯ ನಿರ್ಲಕ್ಷ್ಯವಲ್ಲ, ಸಮಾಜದ ಮೌಲ್ಯಗಳಿಗೆ ಸವಾಲು ಎಸೆದಂತಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
    1
    ಬಾಗಲಕೋಟೆ: ದೇಶದಾದ್ಯಂತ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಜಯಂತಿಯನ್ನು ಅತ್ಯಂತ ಗೌರವಪೂರ್ವಕವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗರಡದಿನ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯಂತಿಯನ್ನು ನಿರ್ಲಕ್ಷ್ಯದಿಂದ ಆಚರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ಸಾರ್ವಜನಿಕರು ಹಾಗೂ ಅಂಬೇಡ್ಕರ್ ಸಂಘದ ಸದಸ್ಯರು ನೀಡಿದ ಮಾಹಿತಿಯ ಪ್ರಕಾರ, ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಯಾವುದೇ ಸಮರ್ಪಕ ಸಿದ್ಧತೆಗಳನ್ನು ಕೈಗೊಳ್ಳದೇ, ಕೇವಲ ರೂಢಿಪರವಾಗಿ ಕಾರ್ಯಕ್ರಮ ನಡೆಸಲಾಗಿದೆ. ಮಹಾನ್ ನಾಯಕನ ಭಾವಚಿತ್ರಕ್ಕೆ ಒಂದು ಹೂವಿನ ಹಾರವನ್ನೂ ತರದೇ, ಪೂಜೆ ಮಾಡಿದಂತೆ ತೋರಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಏಪ್ರಿಲ್ ತಿಂಗಳು ದಲಿತ ಸಮುದಾಯದವರಿಗೆ ವಿಶೇಷ ಮಹತ್ವ ಹೊಂದಿದ್ದು, ಈ ಅವಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗಾಗಿ ತಿಂಗಳುಗಟ್ಟಲೆ ಸಿದ್ಧತೆ ನಡೆಸಿ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆಚರಣೆ ನಡೆಸುವುದು ಸಾಮಾನ್ಯವಾಗಿದೆ. ಆದರೆ, ಈ ಶಾಲೆಯಲ್ಲಿ ನಡೆದಿರುವ ಆಚರಣೆ ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಸ್. ಕಾಳಿ ಹಾಗೂ ಶಿಕ್ಷಕಿ ಎ.ಎಸ್. ಜಹಾಂಗೀರದಾರ ಅವರು ಸುಮಾರು 30ರಿಂದ 35 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ಸರಳವಾಗಿ ಕಾರ್ಯಕ್ರಮವನ್ನು ಮುಗಿಸಿರುವುದಾಗಿ ತಿಳಿದುಬಂದಿದೆ. ಮಕ್ಕಳಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು, ಸಂವಿಧಾನ ಮೌಲ್ಯಗಳು ಹಾಗೂ ಸಾಮಾಜಿಕ ಸಮಾನತೆಯ ಅರಿವು ಮೂಡಿಸಬೇಕಾದ ಶಿಕ್ಷಕರೇ ಈ ರೀತಿಯಾಗಿ ನಡೆದುಕೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರಶ್ನೆ ಮಾಡಿದ ಸ್ಥಳೀಯ ಅಂಬೇಡ್ಕರ್ ಸಂಘದ ಯುವಕರಿಗೆ ಶಿಕ್ಷಕಿ ಜಹಾಂಗೀರದಾರ ಅವರು, “ಶಾಲೆಗೆ ಅನುದಾನವೇ ಬರುವುದಿಲ್ಲ, ನಾವು ಕೈಯಿಂದ ಏನು ಮಾಡಬೇಕು? ನಾವು ಪೂಜೆ ಮಾಡುವುದೇ ಹೀಗೆ” ಎಂದು ಪ್ರತಿಕ್ರಿಯೆ ನೀಡಿದರೆಂದು ಆರೋಪಿಸಲಾಗಿದೆ. ಈ ಉತ್ತರ ಸ್ಥಳೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನು ಮುಖ್ಯ ಶಿಕ್ಷಕ ಹೆಚ್.ಎಸ್. ಕಾಳಿ ಅವರನ್ನು ಸಂಪರ್ಕಿಸಿದಾಗ, “ನಾನು ಬೇರೆ ಮೀಟಿಂಗ್‌ಗೆ ಹೋಗಿದ್ದೆ. ಪೂಜೆ ಮಾಡಲು ಹೇಳಿದ್ದೆ” ಎಂಬ ಉತ್ತರ ನೀಡಿದ್ದಾರೆ ಎಂದು ಯುವಕರು ತಿಳಿಸಿದ್ದಾರೆ. ಈ ಪ್ರತಿಕ್ರಿಯೆ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದು, ಬೀಳಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕೆಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ವಿಷಯವನ್ನು ಸಮಜಾಯಿಷಿಯಿಂದ ಮುಕ್ತಾಯಗೊಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. “ಇಷ್ಟಕ್ಕೆ ಮುಗಿಸಿ ಬಿಡಿ, ಏನೋ ತಪ್ಪಾಗಿದೆ” ಎಂದು ಅಧಿಕಾರಿಗಳು ಕೇಳಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಅಧಿಕಾರಿಗಳ ನಿರ್ಲಕ್ಷ್ಯವೂ ಸ್ಪಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಅಭಿಪ್ರಾಯದಂತೆ, ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸಂವಿಧಾನದ ಮೌಲ್ಯಗಳು, ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ಬೋಧಿಸುವ ಪ್ರಮುಖ ಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳಲ್ಲೇ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರಿಗೆ ಅಗತ್ಯ ಗೌರವ ನೀಡದಿರುವುದು ದುರಂತಕರ ಸಂಗತಿಯಾಗಿದೆ.
ಈ ಘಟನೆ ಕೇವಲ ಒಂದು ಶಾಲೆಯ ನಿರ್ಲಕ್ಷ್ಯವಲ್ಲ, ಸಮಾಜದ ಮೌಲ್ಯಗಳಿಗೆ ಸವಾಲು ಎಸೆದಂತಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    5 hrs ago
  • ಹಕ್ಕುಪತ್ರ ಕೊಡಲು 25 ವರ್ಷ ಬೇಕಾ? ವ್ಯವಸ್ಥೆಯ ‘ಕಿವುಡು’ತನಕ್ಕೆ ಬಡಿದ ತಮಟೆ! ​ ನಮಸ್ಕಾರ, ಇವತ್ತು ನಾವು ತೋರಿಸಲಿರೋದು ಕೇವಲ ಒಂದು ಪ್ರತಿಭಟನೆಯಲ್ಲ, ಇದು ಒಂದು ಜನಾಂಗದ ಸಬ್ರೂರಿ ಪರೀಕ್ಷೆ! ಅಧಿಕಾರಿಗಳ ಮೇಜಿನ ಮೇಲೆ ಫೈಲುಗಳು ಧೂಳು ಹಿಡಿಯುತ್ತಿದ್ದರೆ, ಇಲ್ಲಿ ಬಡವರ ಬದುಕು ಬೀದಿಗೆ ಬಂದಿದೆ. 25 ವರ್ಷ ಅಂದ್ರೆ ಒಂದು ತಲೆಮಾರೇ ಬದಲಾಗಿ ಹೋಗುತ್ತೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದ ಈ 61 ಕುಟುಂಬಗಳ ಹಣೆಬರಹ ಮಾತ್ರ ಬದಲಾಗಿಲ್ಲ. ಇವರ ತಾಳ್ಮೆ ಕಟ್ಟೆ ಹೊಡೆದಿದೆ, ಈಗ ಅಧಿಕಾರಿಗಳ ಕಿವಿಗೆ 'ತಮಟೆ' ಏಟು ಬೀಳುವ ಸಮಯ ಬಂದಿದೆ! ​ ಅತಿಕ್ರಮಣಕಾರರಲ್ಲ, ಇವರು ಅನ್ಯಾಯಗಾರರಲ್ಲ. ಇವರು ತಮ್ಮ ಹಕ್ಕಿಗಾಗಿ 25 ವರ್ಷಗಳಿಂದ ಅಲೆದಾಡುತ್ತಿರುವ ಹೊಸ ಡಂಬಳದ ಮಾದಿಗ ಸಮಾಜದ ಮುಗ್ಧ ಜನ. ​೧. ಮಂಜೂರಾದ ಜಾಗಕ್ಕೆ ಹಕ್ಕುಪತ್ರದ 'ಗ್ರಹಣ'! 2000ನೇ ಇಸವಿಯಲ್ಲೇ ಗ್ರಾಮ ಪಂಚಾಯಿತಿಯಿಂದ ಜಾಗ ಮಂಜೂರಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಇವರಿಗೆ ಮನೆ ಕಟ್ಟಲು ಜಾಗವಿದೆ. ಆದರೆ ವಾಸ್ತವದಲ್ಲಿ ಕೈಗೆ ಹಕ್ಕುಪತ್ರವಿಲ್ಲ! ಅಧಿಕಾರಿಗಳೇ.. ನಿಮ್ಮ ಕಚೇರಿಯಿಂದ ಈ ಹಕ್ಕುಪತ್ರ ಜನರಿಗೆ ತಲುಪಲು ಕಾಲು ಶತಮಾನ ಬೇಕಾ? ನಿಮ್ಮ ಈ ಆಮೆಗತಿಯ ಕೆಲಸಕ್ಕೆ ಬಡವರ ಬದುಕು ಅತಂತ್ರವಾಗಿದೆ. ​೨. ಅಂಬೇಡ್ಕರ್ ಕನಸಿನ ಭಾರತದಲ್ಲಿ ಇದೇನಾ ನ್ಯಾಯ? ಸಂವಿಧಾನ ನಮಗೆ ಹಕ್ಕುಗಳನ್ನು ಕೊಟ್ಟಿದೆ, ಆದರೆ ನೀವು ಆ ಹಕ್ಕುಗಳನ್ನು ಕಬೀಟಿನಲ್ಲಿ ಕೂಡಿಟ್ಟಿದ್ದೀರಿ. ಲಕ್ಷ್ಮಣ ತಗಡಿನಮನಿ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ತಮಟೆ ಚಳುವಳಿ, ಅಧಿಕಾರಶಾಹಿಯ ಅಹಂಕಾರಕ್ಕೆ ಹಿಡಿದ ಕನ್ನಡಿ. "ನಾವು ದುಡಿಯುವುದನ್ನು ಬಿಟ್ಟು ನಿಮ್ಮ ಕಚೇರಿ ಮುಂದೆ ನಿಲ್ಲಬೇಕಾ?" ಎಂಬ ಇವರ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ​ ​"ಸರ್ಕಾರ ಸವಲತ್ತು ಕೊಟ್ಟರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ನ್ಯಾಯ ಸಿಗುತ್ತಿಲ್ಲ. ಇದು ನಮ್ಮ ಹಕ್ಕಿನ ಜಾಗಕ್ಕಾಗಿ ನಡೆಯುತ್ತಿರುವ ಕೊನೆಯ ಎಚ್ಚರಿಕೆ!"ಎಂದು ಲಕ್ಷ್ಮಣ ತಗಡಿನಮನಿ ಮಾತನಾಡಿದರು ​ ಈಗ ಚೆಂಡು ಅಧಿಕಾರಿಗಳ ಅಂಗಳದಲ್ಲಿದೆ. ಬರುವ ಏಪ್ರಿಲ್ 28ರ ಒಳಗಾಗಿ ಈ ಕುಟುಂಬಗಳ ಮುಖದಲ್ಲಿ ನಗು ಕಾಣಿಸದಿದ್ದರೆ, ಈ ಆಕ್ರೋಶ ವಿಧಾನಸೌಧದವರೆಗೂ ತಲುಪುವುದರಲ್ಲಿ ಅನುಮಾನವಿಲ್ಲ. ಜಿಲ್ಲಾಧಿಕಾರಿಗಳೇ ಹಾಗೂ ತಹಶೀಲ್ದಾರರೇ.. ಇನ್ನು ಮುಂದೆ ಭರವಸೆಗಳ ಮಾತು ಬೇಡ, ಫಲಾನುಭವಿಗಳ ಕೈಗೆ ಹಕ್ಕುಪತ್ರ ಸಿಗಲಿ. ​ ನೋಡಿದ್ರಲ್ಲ, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಈ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕಿದೆ. ಒಂದು ಸಣ್ಣ ಕಾಗದಕ್ಕಾಗಿ 25 ವರ್ಷ ಕಾಯಿಸುವುದು ಆಡಳಿತ ಯಂತ್ರಕ್ಕೆ ದೊಡ್ಡ ಅವಮಾನ. ಈ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ​ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾ ಇರಿ ಸಮಗ್ರ ನ್ಯೂಸ್ ಟೈಮ್ಸ್
    1
    ಹಕ್ಕುಪತ್ರ ಕೊಡಲು 25 ವರ್ಷ ಬೇಕಾ? ವ್ಯವಸ್ಥೆಯ ‘ಕಿವುಡು’ತನಕ್ಕೆ ಬಡಿದ ತಮಟೆ!
​
ನಮಸ್ಕಾರ, ಇವತ್ತು ನಾವು ತೋರಿಸಲಿರೋದು ಕೇವಲ ಒಂದು ಪ್ರತಿಭಟನೆಯಲ್ಲ, ಇದು ಒಂದು ಜನಾಂಗದ ಸಬ್ರೂರಿ ಪರೀಕ್ಷೆ! ಅಧಿಕಾರಿಗಳ ಮೇಜಿನ ಮೇಲೆ ಫೈಲುಗಳು ಧೂಳು ಹಿಡಿಯುತ್ತಿದ್ದರೆ, ಇಲ್ಲಿ ಬಡವರ ಬದುಕು ಬೀದಿಗೆ ಬಂದಿದೆ. 25 ವರ್ಷ ಅಂದ್ರೆ ಒಂದು ತಲೆಮಾರೇ ಬದಲಾಗಿ ಹೋಗುತ್ತೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದ ಈ 61 ಕುಟುಂಬಗಳ ಹಣೆಬರಹ ಮಾತ್ರ ಬದಲಾಗಿಲ್ಲ. ಇವರ ತಾಳ್ಮೆ ಕಟ್ಟೆ ಹೊಡೆದಿದೆ, ಈಗ ಅಧಿಕಾರಿಗಳ ಕಿವಿಗೆ 'ತಮಟೆ' ಏಟು ಬೀಳುವ ಸಮಯ ಬಂದಿದೆ!
​
ಅತಿಕ್ರಮಣಕಾರರಲ್ಲ, ಇವರು ಅನ್ಯಾಯಗಾರರಲ್ಲ. ಇವರು ತಮ್ಮ ಹಕ್ಕಿಗಾಗಿ 25 ವರ್ಷಗಳಿಂದ ಅಲೆದಾಡುತ್ತಿರುವ ಹೊಸ ಡಂಬಳದ ಮಾದಿಗ ಸಮಾಜದ ಮುಗ್ಧ ಜನ.
​೧. ಮಂಜೂರಾದ ಜಾಗಕ್ಕೆ ಹಕ್ಕುಪತ್ರದ 'ಗ್ರಹಣ'!
2000ನೇ ಇಸವಿಯಲ್ಲೇ ಗ್ರಾಮ ಪಂಚಾಯಿತಿಯಿಂದ ಜಾಗ ಮಂಜೂರಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಇವರಿಗೆ ಮನೆ ಕಟ್ಟಲು ಜಾಗವಿದೆ. ಆದರೆ ವಾಸ್ತವದಲ್ಲಿ ಕೈಗೆ ಹಕ್ಕುಪತ್ರವಿಲ್ಲ! ಅಧಿಕಾರಿಗಳೇ.. ನಿಮ್ಮ ಕಚೇರಿಯಿಂದ ಈ ಹಕ್ಕುಪತ್ರ ಜನರಿಗೆ ತಲುಪಲು ಕಾಲು ಶತಮಾನ ಬೇಕಾ? ನಿಮ್ಮ ಈ ಆಮೆಗತಿಯ ಕೆಲಸಕ್ಕೆ ಬಡವರ ಬದುಕು ಅತಂತ್ರವಾಗಿದೆ.
​೨. ಅಂಬೇಡ್ಕರ್ ಕನಸಿನ ಭಾರತದಲ್ಲಿ ಇದೇನಾ ನ್ಯಾಯ?
ಸಂವಿಧಾನ ನಮಗೆ ಹಕ್ಕುಗಳನ್ನು ಕೊಟ್ಟಿದೆ, ಆದರೆ ನೀವು ಆ ಹಕ್ಕುಗಳನ್ನು ಕಬೀಟಿನಲ್ಲಿ ಕೂಡಿಟ್ಟಿದ್ದೀರಿ. ಲಕ್ಷ್ಮಣ ತಗಡಿನಮನಿ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ತಮಟೆ ಚಳುವಳಿ, ಅಧಿಕಾರಶಾಹಿಯ ಅಹಂಕಾರಕ್ಕೆ ಹಿಡಿದ ಕನ್ನಡಿ. "ನಾವು ದುಡಿಯುವುದನ್ನು ಬಿಟ್ಟು ನಿಮ್ಮ ಕಚೇರಿ ಮುಂದೆ ನಿಲ್ಲಬೇಕಾ?" ಎಂಬ ಇವರ ಪ್ರಶ್ನೆಗೆ ಉತ್ತರ ಕೊಡುವವರು ಯಾರು?
​
​"ಸರ್ಕಾರ ಸವಲತ್ತು ಕೊಟ್ಟರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ನ್ಯಾಯ ಸಿಗುತ್ತಿಲ್ಲ. ಇದು ನಮ್ಮ ಹಕ್ಕಿನ ಜಾಗಕ್ಕಾಗಿ ನಡೆಯುತ್ತಿರುವ ಕೊನೆಯ ಎಚ್ಚರಿಕೆ!"ಎಂದು ಲಕ್ಷ್ಮಣ ತಗಡಿನಮನಿ ಮಾತನಾಡಿದರು
​
ಈಗ ಚೆಂಡು ಅಧಿಕಾರಿಗಳ ಅಂಗಳದಲ್ಲಿದೆ. ಬರುವ ಏಪ್ರಿಲ್ 28ರ ಒಳಗಾಗಿ ಈ ಕುಟುಂಬಗಳ ಮುಖದಲ್ಲಿ ನಗು ಕಾಣಿಸದಿದ್ದರೆ, ಈ ಆಕ್ರೋಶ ವಿಧಾನಸೌಧದವರೆಗೂ ತಲುಪುವುದರಲ್ಲಿ ಅನುಮಾನವಿಲ್ಲ. ಜಿಲ್ಲಾಧಿಕಾರಿಗಳೇ ಹಾಗೂ ತಹಶೀಲ್ದಾರರೇ.. ಇನ್ನು ಮುಂದೆ ಭರವಸೆಗಳ ಮಾತು ಬೇಡ, ಫಲಾನುಭವಿಗಳ ಕೈಗೆ ಹಕ್ಕುಪತ್ರ ಸಿಗಲಿ.
​
ನೋಡಿದ್ರಲ್ಲ, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಈ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕಿದೆ. ಒಂದು ಸಣ್ಣ ಕಾಗದಕ್ಕಾಗಿ 25 ವರ್ಷ ಕಾಯಿಸುವುದು ಆಡಳಿತ ಯಂತ್ರಕ್ಕೆ ದೊಡ್ಡ ಅವಮಾನ. ಈ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ.
​ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾ ಇರಿ ಸಮಗ್ರ ನ್ಯೂಸ್ ಟೈಮ್ಸ್
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    5 hrs ago
  • ವಿಜಯಪುರ: ಕಾಂಗ್ರೆಸ್ ನಲ್ಲಿ ಮುಸ್ಲಿಮರಿಗೆ ಅಪಮಾನ ವಿಜಯಪುರದಲ್ಲಿ ಶನಿವಾರ ಮುಸ್ಲಿಂ ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ಪಕ್ಷಕ್ಕೆ ಮುಸ್ಲಿಂ ಬಾಂಧವರು ಬೆಂಬಲ ನೀಡಿದರೂ, ಇಂದು ದೇಶದಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಅಪಮಾನವಾಗುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಮುಸ್ಲಿಂ ಸಮಾಜವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಪರಿಣಾಮವಾಗಿ, ಇಂದು ಒಬ್ಬೊಬ್ಬ ಮುಸ್ಲಿಂ ಮುಖಂಡರನ್ನು ಪಕ್ಷದಿಂದ ಹೊರಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ದೂರಿದರು.
    1
    ವಿಜಯಪುರ: ಕಾಂಗ್ರೆಸ್ ನಲ್ಲಿ ಮುಸ್ಲಿಮರಿಗೆ ಅಪಮಾನ
ವಿಜಯಪುರದಲ್ಲಿ ಶನಿವಾರ ಮುಸ್ಲಿಂ ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ಪಕ್ಷಕ್ಕೆ ಮುಸ್ಲಿಂ ಬಾಂಧವರು ಬೆಂಬಲ ನೀಡಿದರೂ, ಇಂದು ದೇಶದಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಅಪಮಾನವಾಗುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಮುಸ್ಲಿಂ ಸಮಾಜವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಪರಿಣಾಮವಾಗಿ, ಇಂದು ಒಬ್ಬೊಬ್ಬ ಮುಸ್ಲಿಂ ಮುಖಂಡರನ್ನು ಪಕ್ಷದಿಂದ ಹೊರಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ದೂರಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    5 hrs ago
  • 105 ಕೆಜಿ ತೂಕದ ಜೋಳದ ಚೀಲ ಹೊತ್ತು ದೀಡ ನಮಸ್ಕಾರ ಹಾಕಿದ ಬಾಲರಾಜ ಇಳಕಲ್ ತಾಲೂಕಿನ ಗೋನಾಳ್ ಎಸ್‌ಟಿ ಗ್ರಾಮದ ಬಾಲಕ ಬಾಲರಾಜ ಹನುಮಂತ ಕುರಿ ಪ್ರಥಮ ಬಾರಿಗೆ 105 ಕೆಜಿ ತೂಕದ ಚೀಲವನ್ನು ತಮ್ಮ ಮನೆಯಿಂದ ಒತ್ತುಕೊಂಡು ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಆರಾಧ್ಯ ದೈವ ಮಾರುತೇಶ್ವರ ದೇವಸ್ಥಾನದವರೆಗೆ ಲೀಡ್ ನಮಸ್ಕಾರ ಹಾಕಿದನು. ಈ ಬಾಲಕನ ವಿಶೇಷ ಸಾಧನೆಗೆ ಗ್ರಾಮದ ಎಲ್ಲಾ ಗುರುಹಿರಿಯರು ಯುವ ಮಿತ್ರರು ಕುಟುಂಬ ವರ್ಗದವರು ಸಾತ್ ನೀಡಿದರು.
    1
    105 ಕೆಜಿ ತೂಕದ ಜೋಳದ ಚೀಲ ಹೊತ್ತು ದೀಡ ನಮಸ್ಕಾರ ಹಾಕಿದ ಬಾಲರಾಜ
ಇಳಕಲ್ ತಾಲೂಕಿನ ಗೋನಾಳ್ ಎಸ್‌ಟಿ ಗ್ರಾಮದ ಬಾಲಕ  ಬಾಲರಾಜ ಹನುಮಂತ ಕುರಿ  ಪ್ರಥಮ ಬಾರಿಗೆ 105 ಕೆಜಿ ತೂಕದ ಚೀಲವನ್ನು ತಮ್ಮ ಮನೆಯಿಂದ ಒತ್ತುಕೊಂಡು ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಆರಾಧ್ಯ ದೈವ ಮಾರುತೇಶ್ವರ ದೇವಸ್ಥಾನದವರೆಗೆ ಲೀಡ್ ನಮಸ್ಕಾರ ಹಾಕಿದನು. ಈ ಬಾಲಕನ ವಿಶೇಷ ಸಾಧನೆಗೆ ಗ್ರಾಮದ ಎಲ್ಲಾ ಗುರುಹಿರಿಯರು ಯುವ ಮಿತ್ರರು ಕುಟುಂಬ ವರ್ಗದವರು ಸಾತ್ ನೀಡಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    22 hrs ago
  • ಕರ್ನಾಟಕದಲ್ಲಿ ಪೊಲೀಸ್ ಸಿಬ್ಬಂದಿ ಸರಿಯಿಲ್ಲ ಅಂತ ಹೇಳುತ್ತಿದ್ದರು ಎಲ್ಲಾ ಸಿಬ್ಬಂದಿ ಹಾಗೆ ಇರಲ್ಲ ಜನರು ತಿಳಿದುಕೊಳ್ಳಬೇಕು
    1
    ಕರ್ನಾಟಕದಲ್ಲಿ ಪೊಲೀಸ್ ಸಿಬ್ಬಂದಿ ಸರಿಯಿಲ್ಲ ಅಂತ ಹೇಳುತ್ತಿದ್ದರು ಎಲ್ಲಾ ಸಿಬ್ಬಂದಿ ಹಾಗೆ ಇರಲ್ಲ ಜನರು ತಿಳಿದುಕೊಳ್ಳಬೇಕು
    user_Sharanugouda Patil
    Sharanugouda Patil
    Muddebihal, Vijayapura•
    1 hr ago
  • ಕುಷ್ಟಗಿ:- ಪಟ್ಟಣದ ಬಸವ ಭವನದಲ್ಲಿ 893 ನೇ ಬಸವ ಜಯಂತೋತ್ಸವ ಅಂಗವಾಗಿ ಇಂದು ಇಲ್ಲಿನ ಬಸವ ಭವನದಲ್ಲಿ ಬಸವ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಕುಷ್ಟಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು 30 ಮಕ್ಕಳು ಹೆಚ್ಚು ಮಕ್ಕಳು ಪರಮ ಪೂಜ್ಯ ಮಹಾಂತಯ್ಯ ಹೀರೇಮಠ ಇವರ ಸಮುಕ್ಯದಲ್ಲಿ ಶರಣ ಶರಣಿಯರ ಮುಂದೆ ಲಿಂಗ ದೀಕ್ಷೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಬಸವ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಕುಷ್ಟಗಿ ಸರ್ವ ಸದಸ್ಯರು ಸೇರಿದಂತೆ ಶರಣ ಶರಣಿಯರು ಅನೇಕರು ಉಪಸ್ಥಿತರಿದ್ದರು.
    4
    ಕುಷ್ಟಗಿ:- ಪಟ್ಟಣದ ಬಸವ ಭವನದಲ್ಲಿ 893 ನೇ ಬಸವ ಜಯಂತೋತ್ಸವ ಅಂಗವಾಗಿ  ಇಂದು ಇಲ್ಲಿನ ಬಸವ ಭವನದಲ್ಲಿ ಬಸವ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಕುಷ್ಟಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಸುಮಾರು 30 ಮಕ್ಕಳು ಹೆಚ್ಚು ಮಕ್ಕಳು ಪರಮ ಪೂಜ್ಯ ಮಹಾಂತಯ್ಯ ಹೀರೇಮಠ ಇವರ ಸಮುಕ್ಯದಲ್ಲಿ ಶರಣ ಶರಣಿಯರ  ಮುಂದೆ ಲಿಂಗ ದೀಕ್ಷೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಬಸವ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಕುಷ್ಟಗಿ ಸರ್ವ ಸದಸ್ಯರು ಸೇರಿದಂತೆ ಶರಣ ಶರಣಿಯರು ಅನೇಕರು ಉಪಸ್ಥಿತರಿದ್ದರು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    3 hrs ago
  • ಸಚಿವ ಸ್ಥಾನ ಕೊಟ್ಟರೂ ಅಷ್ಟೇ ಕೊಡದೇ ಇದ್ದರೂ ನಾವು ಶಾಸಕರಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ ತಿಳಿಸಿದರು. ಧಾರವಾಡ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮಾಡೋದು ಮುಖ್ಯಮಂತ್ರಿಗಳಿಗೆ ಪರಮಾಧಿಕಾರವಿದೆ. ಹೈಕಮಾಂಡ್ ಇನ್ನೂ ಸಚಿವ ಸಂಪುಟ ಬದಲಾವಣೆ ಮಾಡುವ ನಿರ್ಣಯ ಮಾಡಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸುರ್ಜೇವಾಲ್ ಅವರು ಕುಳಿತು ನಿರ್ಣಯ ಮಾಡುತ್ತಾರೆ. ಮೂರ್ನಾಲ್ಕು ಸಲ ಗೆದ್ದ ಶಾಸಕರು ದೆಹಲಿಗೆ ಹೋಗಿದ್ದು ಸತ್ಯ. ಸಚಿವ ಸ್ಥಾನ ಕೇಳುವುದು ಅವರ ಹಕ್ಕು. ಒಮ್ಮೆ, ಎರಡು ಸಲ ಗೆದ್ದ 38 ಶಾಸಕರು ಹೋಟೆಲ್‌ನಲ್ಲಿ ಸೇರಿದ್ದೆವು. ಸಿಎಂ, ಡಿಸಿಎಂ ಒಪ್ಪಿಗೆ ಪಡೆದು ದೆಹಲಿಗೆ ಹೋಗುವ ತೀರ್ಮಾನ ಮಾಡಿದ್ದೆವು. ಎಲ್ಲಾ ಶಾಸಕರಿಗೂ ಅವಕಾಶ ಕೊಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
    1
    ಸಚಿವ ಸ್ಥಾನ ಕೊಟ್ಟರೂ ಅಷ್ಟೇ ಕೊಡದೇ ಇದ್ದರೂ ನಾವು ಶಾಸಕರಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ ತಿಳಿಸಿದರು. ಧಾರವಾಡ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮಾಡೋದು ಮುಖ್ಯಮಂತ್ರಿಗಳಿಗೆ ಪರಮಾಧಿಕಾರವಿದೆ. ಹೈಕಮಾಂಡ್ ಇನ್ನೂ ಸಚಿವ ಸಂಪುಟ ಬದಲಾವಣೆ ಮಾಡುವ ನಿರ್ಣಯ ಮಾಡಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸುರ್ಜೇವಾಲ್ ಅವರು ಕುಳಿತು ನಿರ್ಣಯ ಮಾಡುತ್ತಾರೆ. ಮೂರ್ನಾಲ್ಕು ಸಲ ಗೆದ್ದ ಶಾಸಕರು ದೆಹಲಿಗೆ ಹೋಗಿದ್ದು ಸತ್ಯ. ಸಚಿವ ಸ್ಥಾನ ಕೇಳುವುದು ಅವರ ಹಕ್ಕು. ಒಮ್ಮೆ, ಎರಡು ಸಲ ಗೆದ್ದ 38 ಶಾಸಕರು ಹೋಟೆಲ್‌ನಲ್ಲಿ ಸೇರಿದ್ದೆವು. ಸಿಎಂ, ಡಿಸಿಎಂ ಒಪ್ಪಿಗೆ ಪಡೆದು ದೆಹಲಿಗೆ ಹೋಗುವ ತೀರ್ಮಾನ ಮಾಡಿದ್ದೆವು. ಎಲ್ಲಾ ಶಾಸಕರಿಗೂ ಅವಕಾಶ ಕೊಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    13 hrs ago
  • ವಿಜಯಪುರ ಬಸ್ ನಿಲ್ದಾಣ ಹತ್ತಿರ ಘಟನೆಖಾಸಗಿ ಬಸ್‌ ಇಂದ ಪಾದಚಾರಿ ಸಾವು #viralpost #news #update #vijayapur ...
    1
    ವಿಜಯಪುರ ಬಸ್ ನಿಲ್ದಾಣ ಹತ್ತಿರ ಘಟನೆಖಾಸಗಿ ಬಸ್‌ ಇಂದ ಪಾದಚಾರಿ ಸಾವು #viralpost  #news #update #vijayapur ...
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    13 hrs ago
  • ಇಳಕಲ್ ನಗರದ ಸಮಾಜ ಸೇವಕಿ ಹೋರಾಟಗಾರ್ತಿ ಲಕ್ಷ್ಮೀಬಾಯಿ ಗಾಜಿ ಅವರಿಗೆ ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆ ವಿಜಯ ಕರ್ನಾಟಕ ದಿನಪತ್ರಿಕೆ ಕೊಡ ಮಾಡುವ ವುಮೆನ್ ಹಚಿವರ್ಸ್ ಅವಾರ್ಡ್ ಪಡೆದಿದ್ದಾರೆ. ಹೀಗಾಗಿ ಇಳಕಲ್ ನಗರದ ಪತ್ರಕರ್ತರು ಹಾಗೂ ನಗರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿದರು.
    1
    ಇಳಕಲ್ ನಗರದ ಸಮಾಜ ಸೇವಕಿ ಹೋರಾಟಗಾರ್ತಿ ಲಕ್ಷ್ಮೀಬಾಯಿ ಗಾಜಿ ಅವರಿಗೆ ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆ ವಿಜಯ ಕರ್ನಾಟಕ ದಿನಪತ್ರಿಕೆ ಕೊಡ ಮಾಡುವ ವುಮೆನ್ ಹಚಿವರ್ಸ್ ಅವಾರ್ಡ್ ಪಡೆದಿದ್ದಾರೆ. ಹೀಗಾಗಿ ಇಳಕಲ್ ನಗರದ ಪತ್ರಕರ್ತರು ಹಾಗೂ ನಗರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.