Shuru
Apke Nagar Ki App…
ಭಾರತದ ಸಂವಿಧಾನವನ್ನು ಭಾರತದ ಗ್ರಂಥವನ್ನಾಗಿ ಮಾಡಿ: ಸಿ.ತಿಪ್ಪೇಸ್ವಾಮಿ ಆಗ್ರಹ. ಜಗಳೂರು ಪಟ್ಟಣದ ತಾಲ್ಲೂಕು ಪಂಚಾಯುತಿ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆಯನ್ನು ಕುರಿತಿ ನಿವೃತ್ತಿ ಸಮಾಜ ಕಲ್ಯಾಣ ಇಲಾಖೆಯ ಸಿ. ತಿಪ್ಪೇಸ್ವಾಮಿ ಯವರು ಮಾತನಾಡಿದರು.
Basavaraja B Press Reporter AP
ಭಾರತದ ಸಂವಿಧಾನವನ್ನು ಭಾರತದ ಗ್ರಂಥವನ್ನಾಗಿ ಮಾಡಿ: ಸಿ.ತಿಪ್ಪೇಸ್ವಾಮಿ ಆಗ್ರಹ. ಜಗಳೂರು ಪಟ್ಟಣದ ತಾಲ್ಲೂಕು ಪಂಚಾಯುತಿ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆಯನ್ನು ಕುರಿತಿ ನಿವೃತ್ತಿ ಸಮಾಜ ಕಲ್ಯಾಣ ಇಲಾಖೆಯ ಸಿ. ತಿಪ್ಪೇಸ್ವಾಮಿ ಯವರು ಮಾತನಾಡಿದರು.
More news from ಕರ್ನಾಟಕ and nearby areas
- ಭಾರತದ ಸಂವಿಧಾನವನ್ನು ಭಾರತದ ಗ್ರಂಥವನ್ನಾಗಿ ಮಾಡಿ: ಸಿ.ತಿಪ್ಪೇಸ್ವಾಮಿ ಆಗ್ರಹ. ಜಗಳೂರು ಪಟ್ಟಣದ ತಾಲ್ಲೂಕು ಪಂಚಾಯುತಿ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆಯನ್ನು ಕುರಿತಿ ನಿವೃತ್ತಿ ಸಮಾಜ ಕಲ್ಯಾಣ ಇಲಾಖೆಯ ಸಿ. ತಿಪ್ಪೇಸ್ವಾಮಿ ಯವರು ಮಾತನಾಡಿದರು.2
- ಜನರ ಧ್ವನಿಯಾದವರಿಗೆ ಆರೋಗ್ಯದ ತಪಾಸಣ ಪತ್ರಕರ್ತರಿಗಾಗಿ ಬಸವೇಶ್ವರ ಆಸ್ಪತ್ರೆಯ ವಿಶೇಷ ಕಾಳಜಿ! #ಪತ್ರಕರ್ತರು #ಪತ್ರಕರ್ತರಆರೋಗ್ಯ #ಬಸವೇಶ್ವರಆಸ್ಪತ್ರೆ #ಉಚಿತಆರೋಗ್ಯತಪಾಸಣೆ #ಚಿತ್ರದುರ್ಗ #ವಿಶ್ವಮಧುಮೇಹದಿನ #ಆರೋಗ್ಯಜಾಗೃತಿ #ಮಾಧ್ಯಮಮಿತ್ರರು #ಪತ್ರಕರ್ತರಸಂಘ #ಬಸವೇಶ್ವರಮೆಡಿಕಲ್ಕಾಲೇಜು #ಮಾನವೀಯಕಾಳಜಿ #JournalistsHealth #BasaveshwaraHospital #FreeHealthCheckup #ChitradurgaNews #KannadaNews #MediaFriends #HealthAwareness #Journalists1
- ### ಹೆಚ್ಚುವರಿ ಹಣ ವಸೂಲಿ ಆರೋಪ: ಜಗಳೂರು ತಹಶೀಲ್ದಾರ್ ಕಚೇರಿಯ ಡಾಟಾ ಎಂಟ್ರಿ ಆಪರೇಟರ್ ವಜಾ **ಜಗಳೂರು:** ವಿವಿಧ ಸರ್ಕಾರಿ ಅರ್ಜಿಗಳ ಸಲ್ಲಿಕೆಗೆ ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಜಗಳೂರು ತಹಶೀಲ್ದಾರ್ ಕಚೇರಿಯ ಡಾಟಾ ಎಂಟ್ರಿ ಆಪರೇಟರ್ನನ್ನು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ವಜಾಗೊಳಿಸಿದ್ದಾರೆ. ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಮನೀಶ್ ಗೌಡ ಅವರು ಹದ್ದುಬಸ್ತು, ಮೋಜಣಿ ಸೇರಿದಂತೆ ವಿವಿಧ ಅರ್ಜಿಗಳ ಪ್ರಕ್ರಿಯೆಗಾಗಿ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘಟನೆಯ ನೇತೃತ್ವದಲ್ಲಿ ರೈತರು ಹಾಗೂ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕರಿಂದಲೂ ಗಂಭೀರ ದೂರುಗಳು ಬಂದಿದ್ದವು. ಪ್ರತಿಭಟನೆ ಹಾಗೂ ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಹೆಚ್ಚುವರಿ ಹಣ ವಸೂಲಿ ಆರೋಪದ ಹಿನ್ನೆಲೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಮನೀಶ್ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿ ಕ್ರಮ ಕೈಗೊಂಡಿದೆ. ಈ ಕ್ರಮದಿಂದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ಅನಗತ್ಯವಾಗಿ ಹೆಚ್ಚುವರಿ ಹಣ ವಸೂಲಿ ಮಾಡುವ ಸಿಬ್ಬಂದಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದಂತಾಗಿದೆ.1
- ಸಂವಿಧಾನ ದಿನಾಚರಣೆ: ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ. ಶಿವಕುಮಾರ್ ಪುಷ್ಪ ನಮನ ಬೆಂಗಳೂರು: ಸಂವಿಧಾನ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್, ಸಚಿವ ಕೆ.ಎಚ್. ಮುನಿಯಪ್ಪ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಸನಗೌಡ ದದ್ದಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.1
- ಗ್ರಾಹಕರ ಗಮನಕ್ಕೆ ಬಾರದಂತೆ ₹17.55 ಲಕ್ಷ ಸಾಲ ಮಂಜೂರು; ₹3.83 ಲಕ್ಷ ವಂಚಕರ ಪಾಲು ದಾವಣಗೆರೆ: ಗ್ರಾಹಕರ ಗಮನಕ್ಕೆ ಬಾರದಂತೆ ಖಾಸಗಿ ಬ್ಯಾಂಕ್ನಲ್ಲಿ ₹17.55 ಲಕ್ಷ ಸಾಲ ಮಂಜೂರು ಮಾಡಿಸಿ, ಅದರಲ್ಲಿ ₹3.83 ಲಕ್ಷ ಹಣವನ್ನು ಸೈಬರ್ ವಂಚಕರು ಎಗರಿಸಿರುವ ಘಟನೆ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಚನ್ನಗಿರಿ ಪಟ್ಟಣದ ಎಸ್.ವಿ. ರಸ್ತೆ ನಿವಾಸಿಯೊಬ್ಬರಿಗೆ ಸೇರಿದ ಬ್ಯಾಂಕ್ ಖಾತೆಯಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ₹17.55 ಲಕ್ಷ ಸಾಲ ಮಂಜೂರಾಗಿದೆ. ಬ್ಯಾಂಕ್ ಶುಲ್ಕ ಕಡಿತಗೊಂಡು ₹16.98 ಲಕ್ಷ ಹಣ ಅವರ ಖಾತೆಗೆ ಜಮೆಯಾಗಿದೆ. ಅಕ್ಟೋಬರ್ 1ರಂದು ಸೈಬರ್ ವಂಚಕರು ಹಂತ ಹಂತವಾಗಿ ₹52,108, ₹1.17 ಲಕ್ಷ ಹಾಗೂ ₹30 ಸಾವಿರ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಕರೆ ಮಾಡಿ ಸಾಲದ ಕುರಿತು ಮಾಹಿತಿ ನೀಡಿದ ಬಳಿಕವಷ್ಟೇ ಗ್ರಾಹಕರಿಗೆ ವಂಚನೆಯ ವಿಚಾರ ತಿಳಿದುಬಂದಿದೆ. ಈ ಸಂಬಂಧ ವಂಚನೆಗೊಳಗಾದ ಗ್ರಾಹಕರು ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಗ್ರಾಹಕರ ಗಮನಕ್ಕೆ ಬಾರದಂತೆ ಸಾಲ ಮಂಜೂರಾಗಿರುವುದು ಹಾಗೂ ಹಣ ವರ್ಗಾವಣೆಯಾಗಿರುವ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.1
- ವಿನೋದ ರಾಜ್ ಒಂದು ಮನಮುಟ್ಟುವ ಬೆಂಬಲ #ಆಶಾ #protest #ASHA #AIUTUC ವಿನೋದ ರಾಜ್ ಒಂದು ಮನಮುಟ್ಟುವ ಬೆಂಬಲ #ಆಶಾ #protest #ASHA #AIUTUC1
- # ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ನ.30ರಂದು ಬೆಂಗಳೂರಿನಲ್ಲಿ ರೈತಾಕ್ರೋಶ ಆಂದೋಲನ **ಚನ್ನಗಿರಿ ತಾಲ್ಲೂಕಿನ ರೈತರು, ಅಡಿಕೆ ಬೆಳೆಗಾರರು ಪ್ರತಿಭಟನೆಯಲ್ಲಿ ಭಾಗವಹಿಸಲು ಭಾರತೀಯ ಕಿಸಾನ್ ಸಂಘದ ಕರೆ** **ಚನ್ನಗಿರಿ, ನ.26:** ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನವೆಂಬರ್ 30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಬೃಹತ್ ‘ರೈತಾಕ್ರೋಶ ಆಂದೋಲನ’ ಹಮ್ಮಿಕೊಳ್ಳಲಾಗಿದ್ದು, ಚನ್ನಗಿರಿ ತಾಲ್ಲೂಕಿನ ರೈತರು, ಅಡಿಕೆ ಬೆಳೆಗಾರರು ಸೇರಿದಂತೆ ಸಮಸ್ತ ರೈತ ಸಮುದಾಯ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರಭು ಬಿ. ಗೊಲ್ಲರಹಳ್ಳಿ ಮನವಿ ಮಾಡಿದರು. ಗುರುವಾರ ಚನ್ನಗಿರಿ ಪಟ್ಟಣದ ಪತ್ರಿಕಾ ಭವನದಲ್ಲಿ ಭಾರತೀಯ ಕಿಸಾನ್ ಸಂಘದ ಚನ್ನಗಿರಿ ತಾಲ್ಲೂಕು ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಹಾಲಿನ ಖರೀದಿ ಬೆಲೆ ಮತ್ತು ಹೈನುಗಾರಿಕೆಗೆ ಸೂಕ್ತ ಪ್ರೋತ್ಸಾಹಧನ, ಕೃಷಿ ಪಂಪ್ಸೆಟ್ಗಳ ದುರಸ್ತಿಗೆ ಹಳೆಯ ದರದ ವ್ಯವಸ್ಥೆ ಮರುಜಾರಿ, ಕಾಡಂಚಿನ ಪ್ರದೇಶಗಳಲ್ಲಿ ವನ್ಯಜೀವಿಗಳ ಹಾವಳಿ ನಿಯಂತ್ರಣ ಹಾಗೂ ರೈತರಿಗೆ ಹಗಲಿನ ವೇಳೆಯೇ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು. ಕಂದಾಯ ಇಲಾಖೆಯಲ್ಲಿನ ಪಹಣಿ, ಭೂಮಾಪನ, ಪೋಡಿ ಮತ್ತು ಭೂದಾಖಲೆಗಳ ದೋಷಗಳನ್ನು ತ್ವರಿತವಾಗಿ ಸರಿಪಡಿಸಬೇಕು. ರೈತರ ಸಾಲ ಮತ್ತು ಬೆಳೆಸಾಲದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಂಬಲ ಬೆಲೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಪಾರದರ್ಶಕತೆ ಹಾಗೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕಿಸಬೇಕು ಎಂದು ಒತ್ತಾಯಿಸಿದರು. ಇದಲ್ಲದೆ, ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನ, ಕೆರೆಗಳ ಹೂಳೆತ್ತುವಿಕೆ, ಪಶ್ಚಿಮ ಘಟ್ಟದ ರೈತರ ಸಮಸ್ಯೆಗಳಿಗೆ ಪರಿಹಾರ, ರೈತರ ಭೂಹಕ್ಕುಗಳ ರಕ್ಷಣೆ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು. **“ಕೃಷಿ ಉಳಿದರೆ ದೇಶದ ಆಹಾರ ಭದ್ರತೆ ಉಳಿಯುತ್ತದೆ. ರೈತರ ನ್ಯಾಯಯುತ ಹಕ್ಕುಗಳಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು”** ಎಂದು ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥ್, ತಾಲ್ಲೂಕು ಕಾರ್ಯದರ್ಶಿ ಜಿ.ಸಿ. ಕುಮಾರಸ್ವಾಮಿ, ತಾಲ್ಲೂಕು ಕಾರ್ಯಕಾರಿಣಿ ಸದಸ್ಯ ಮಹಾಬಲೇಶ್ ಹಾಗೂ ಪ್ರದೀಪ್ ಉಪಸ್ಥಿತರಿದ್ದರು. ವರದಿ :ದೇವರಾಜ್ ಕೆ ನೆಲ್ಲಿಹಂಕಲು ದಾವಣಗೆರೆ4
- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕಾರಟಗಿ ಪಟ್ಟಣದಲ್ಲಿನ ಸಾಂಸ್ಕೃತಿಕ ಭವನದಲ್ಲಿ ನವೆಂಬರ್ 26ರಂದು ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಉದ್ಘಾಟಿಸಿದರು.2