Shuru
Apke Nagar Ki App…
*ಮಾಲೂರು ನಗರದ ಐತಿಹಾಸಿಕ ಹಾಗೂ ಭಕ್ತಿಭಾವದ ಪ್ರತೀಕವಾದ ಶ್ರೀ ಧರ್ಮರಾಯ ಸ್ವಾಮಿ ಹಾಗೂ ದ್ರೌಪತಾಂಬ ದೇವಿ ಕರಗ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಮಾಲೂರು ತಾಲ್ಲೂಕಿನ ಜನಪ್ರಿಯ ಶಾಸಕರು ಹಾಗೂ ಕೋಮುಲ್ ಅಧ್ಯಕ್ಷರಾದ ಶ್ರೀ ಕೆ ವೈ ನಂಜೇಗೌಡ ರವರ ಸಾರಥ್ಯದಲ್ಲಿ ಆಯೋಜಿಸಲಾಗಿರುವ ಅದ್ದೂರಿ ರಸಮಂಜರಿ ಕಾರ್ಯಕ್ರಮಕ್ಕೆ ನಮ್ಮೆಲ್ಲರನ್ನು ರಂಜಿಸಲು ಗಾಯಕಿಯಾದ ಮಮತಾ ರವರು ಆಗಮಿಸುತ್ತಿದ್ದು,* *ಈ ಸಂಗೀತಮಯ ಸಂಭ್ರಮವನ್ನು ತಾಲ್ಲೂಕಿನ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.* 📅 *ದಿನಾಂಕ: 12-04-2026* ⏰ *ಸಮಯ: ಸಂಜೆ 07:00 ಗಂಟೆಗೆ* 📍 *ಸ್ಥಳ: ಕಾಂಗ್ರೆಸ್ ಮೈದಾನ, ಮಾಲೂರು.*
Rownak Ali khan
*ಮಾಲೂರು ನಗರದ ಐತಿಹಾಸಿಕ ಹಾಗೂ ಭಕ್ತಿಭಾವದ ಪ್ರತೀಕವಾದ ಶ್ರೀ ಧರ್ಮರಾಯ ಸ್ವಾಮಿ ಹಾಗೂ ದ್ರೌಪತಾಂಬ ದೇವಿ ಕರಗ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಮಾಲೂರು ತಾಲ್ಲೂಕಿನ ಜನಪ್ರಿಯ ಶಾಸಕರು ಹಾಗೂ ಕೋಮುಲ್ ಅಧ್ಯಕ್ಷರಾದ ಶ್ರೀ ಕೆ ವೈ ನಂಜೇಗೌಡ ರವರ ಸಾರಥ್ಯದಲ್ಲಿ ಆಯೋಜಿಸಲಾಗಿರುವ ಅದ್ದೂರಿ ರಸಮಂಜರಿ ಕಾರ್ಯಕ್ರಮಕ್ಕೆ ನಮ್ಮೆಲ್ಲರನ್ನು ರಂಜಿಸಲು ಗಾಯಕಿಯಾದ ಮಮತಾ ರವರು ಆಗಮಿಸುತ್ತಿದ್ದು,* *ಈ ಸಂಗೀತಮಯ ಸಂಭ್ರಮವನ್ನು ತಾಲ್ಲೂಕಿನ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.* 📅 *ದಿನಾಂಕ: 12-04-2026* ⏰ *ಸಮಯ: ಸಂಜೆ 07:00 ಗಂಟೆಗೆ* 📍 *ಸ್ಥಳ: ಕಾಂಗ್ರೆಸ್ ಮೈದಾನ, ಮಾಲೂರು.*
More news from ಕರ್ನಾಟಕ and nearby areas
- Post by Rownak Ali khan1
- KOLAR KI.AWAAZ KOUSAR1
- ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಸುಮಾರು 120 ಅಡಿ ಎತ್ತರದ ಎಣ್ಣೆ ಸವರಿದ ಹಾಲುಗಂಭವನ್ನು ಅವರು ಲೀಲಾಜಾಲವಾಗಿ ಏರಿ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಕಂಬದ ಮೇಲೆ ಕಟ್ಟಲಾಗಿದ್ದ ಕೊಬ್ಬರಿಯನ್ನು ತಲುಪುವ ಸಾಹಸ ಭಕ್ತಿ ಮತ್ತು ದೈಹಿಕ ಸಾಮರ್ಥ್ಯದ ಸಂಕೇತವಾಗಿ ಕಂಡುಬಂದಿದೆ. ಎಣ್ಣೆ ಸುರಿಯುತ್ತಿದ್ದರೂ ಲೆಕ್ಕಿಸದೇ ಶರಣಪ್ಪ ಅವರ ಸಾಹಸವನ್ನು ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.1
- full dirty please clean this one full y dirty and this honor is not an agree in to clean not anyone cleaning this one. full dirty please clean this one full y dirty and this honor is not an agree in to clean not anyone cleaning this one.1
- ಮಾಗಡಿ : ಮಾಗಡಿ ಕೆರೆಗಳನ್ನು ತುಂಬಿಸಿ ನಂತರ ಡಾಬಸ್‍ಪೇಟೆ ಕೈಗಾರಿಕೆ ಪ್ರದೇಶಕ್ಕೆ ನೀರು ನೀಡಲಿ ಇಲ್ಲದಿದ್ರೆ ಏ. 17 ರಂದು ಬೃಹತ್ ತಡೆ ನಡೆಸುವುದಾಗಿ ತಾಲೂಕು ರೈತಸಂಘದ ಅಧ್ಯಕ್ಷ ಹೋಸಪಾಳ್ಯ ಲೋಕೇಶ್ ಎಚ್ಚರಿಕೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ತುಂಬಿಸಲು ಸರಕಾರ ಇಂತಿಷ್ಟು ನೀರು ಅಲೋಕೇಟ್ ಮಾಡಿದೆ ಈ ನೀರನ್ನು ಮಾಗಡಿಗೆ ನೀಡಲು ತುಮಕೂರಿನ ಚುನಾಯಿತ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಈ ನಡುವೆ ಸತ್ತೆಗಾಲದಿಂದ ಕಣ್ವ ಮಾಗಡಿ ಪಟ್ಟಣದ ಮೂಲಕ ದಾಬಸ್ ಪೇಟೆ ಕೈಗಾರಿಕೆ ಪ್ರದೇಶಕ್ಕೆ ಬೃಹತ್ ಗಾತ್ರದ ಪೈಪು ಮೂಲಕ ನೀಡಲು ಸರಕಾರ ಮುಂದಾಗಿದ್ದು ನೂರಾರು ಮರಗಳಿಗೆ ಹಾಗೂ ರಸ್ತೆಗಳನ್ನು ಹಾನಿ ಮಾಡಿ ಕಾಮಗಾರಿಯೂ ನಡೆಯುತ್ತಿದೆ ಮೊದಲು ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಕೊಟ್ಟು ನಂತರ ಡಾಬಸ್ ಪೇಟೆ ಕೈಗಾರಿಕೆ ಪ್ರದೇಶಕ್ಕೆ ನೀಡಲಿ ಎಂದು ಒತ್ತಾಯಿಸಿದರು. ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರು, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಜಿಲ್ಲೆಯವರೆ ಆಗಿರುವುದರಿಂದ ಕಾವೇರಿ ನದಿ ನೀರನ್ನು ಈ ಭಾಗದ ಕೆರೆ,ಕಟ್ಟೆಗಳಿಗೆ ತುಂಬಿಸಬೇಕು. ಡಾಬಸ್ ಪೇಟೆ ಕೈಗಾರಿಕೆ ಪ್ರದೇಶಕ್ಕೆ ಎಷ್ಟು ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಯಾವ ಮಾನದಂಡದಲ್ಲಿ ನೀರನ್ನು ಕೊಡೋಯ್ಯಲಾಗುತ್ತಿದೆ ಎಂಬುದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ರೈತಸಂಘದೊಂದಿಗೆ ಸಭೆ ನಡೆಸಿ ಸಂಬಂಧ ಪಟ್ಟ ಮಾಹಿತಿ ತಿಳಿಸಬೇಕು ಇಲ್ಲದಿದ್ರೆ ಏ. 17 ರಂದು ಪಟ್ಟಣದ ಹೋಸಪೇಟೆ ವೃತ್ತದಲ್ಲಿ ರಸ್ತೆ ತಡೆನಡೆಸಿ ನಂತರ ಎಲ್ಲಾ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜೆಸಿಬಿ ಮೂಲಕ ಪೈಪುಗಳನ್ನು ಕಿತ್ತುಹಾಕುವ ಕೆಲಸಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸತ್ತೆಗಾಲದಿಂದ ಡಾಬಸ್ ಪೇಟೆ ಕೈಗಾರಿಕೆ ಪ್ರದೇಶ ಸುಮಾರು 100 ಕಿಲೋಮೀಟರ್ ಗೂ ಹೆಚ್ಚಿದ್ದು ಅಲ್ಲಿಂದ ಇಲ್ಲಿಗೆ ನೀರು ಕೊಡುವ ಅಗತ್ಯವಾದರೂ ಏನಿದೆ ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಹರಿಯುವ ಹೇಮಾವತಿ ನೀರನ್ನು ಕೈಗಾರಿಕೆ ಪ್ರದೇಶಕ್ಕೆ ನೀಡಬಹುದಿತ್ತು ಅದನ್ನು ಬಿಟ್ಟು ಕಾವೇರಿ ನೀರನ್ನು ಕೋಡುತ್ತಿರುವುದಾದರು ಏನು ಈ ಬಗ್ಗೆ ಸಾಕಷ್ಟು ಅನುಮಾನ ಮೂಢಿದೆ. ಮಾಗಡಿ ತಾಲೂಕಿನ ಜನರಿಗೆ ಕುಡಿಯುವ ನೀರಿಲ್ಲದೆ ಆಹಾಕಾರ ಉಂಟಾಗಿದೆ. ಅದರಲ್ಲೂ ಮಂಚನಬೆಲೆ ಜಲಾಶಯದಿಂದ ಮಾಗಡಿ ಪಟ್ಟಣಕ್ಕೆ ಸರಬರಾಜು ಮಾಡುವ ನೀರು ಸಮರ್ಪಕವಾಗಿ ನೀಡುತ್ತಿಲ್ಲ ಈಗಿರುವಾಗ ಮಾಗಡಿ ತಾಲೂಕಿನ ಜನರಿಗೆ ಕಾವೇರಿಯ ನೀರು ಅತ್ಯವಶ್ಯಕವಾಗಿದೆ ಎಂದರು. ತಾಲೂಕಿನಲ್ಲಿ ಸಮರ್ಪಕ ವಿದ್ಯುತ್ ನೀಡದೆ ಇರುವುದರಿಂದ ರೈತರ ಮೋಟಾರ್ ಸುಟ್ಟುಹೋಗುತ್ತಿದೆ, ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಫೆಯಿಂದ ಕೂಡಿದೆ, ತಾಲೂಕಿನಲ್ಲಿನ ಎಲ್ಲಾ ಶುದ್ದಕುಡಿಯುವ ನೀರಿನ ಘಟಕಗಳು ಸುಟ್ಟುಹೋಗಿವೆ, ತಾಲೂಕು ಕಚೇರಿಗಳಲ್ಲಿ ರೈತರ ಕೆಲಸವಾಗುತ್ತಿಲ್ಲ, ಬಹುತೇಕ ಗ್ರಾಮಗಳಲ್ಲಿ ಬಸ್ ಸೌಲಭ್ಯಗಳಿಲ್ಲ ರೈತರ ಸಮಸ್ಯೆಗಳು ದಿನೆ,ದಿನೇ ಹೆಚ್ಚಾಗುತ್ತಿದೆ ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಹಶೀಲ್ದಾರ್ ಶರತ್ ಕುಮಾರು ವಿಫಲರಾಗಿದ್ದಾರೆ ಈ ಸಂಬಂಧ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಕೆಲಸ ಮಾಡಲಾಗುವುದು ಎಂದರು. ತಾಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿನ ಹೂಳೆತ್ತಿದ್ದರೆ ಮಾಗಡಿ- ಕುಣಿಗಲ್ ಭಾಗದಲ್ಲಿ ಅಂತರ್ ಜಲವೃದ್ದಿಯಾಗುತ್ತದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಮಾಗಡಿ- ತಿಪ್ಪಗೊಂಡನಹಳ್ಳಿ ವರೆಗೆ ಪಾದಯಾತ್ರೆ ನಡೆಸಿ 3 ಭಾರಿ ರಸ್ತೆ ತಡೆನಡೆಸಿದ ಕಾರಣ ತಿಪ್ಪಗೊಂಡನಹಳ್ಳಿ ಜಲಾಶಯದ ಹೂಳೆತ್ತಲು ಸರಕಾರ 100 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿತು ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಪೂರ್ಣಗೊಳಿಸುವಂತೆ ಹಾಗೂ ಬೆಂಗಳೂರು ಸುತ್ತಮುತ್ತಲಿನಿಂದ ಜಲಾಶಯಕ್ಕೆ ಸೇರುವ ಕಲುಷಿತ ನೀರು ತಡೆಗಟ್ಟುವಂತೆ ಆಗ್ರಹಿಸಿ ಏ. 28 ರಂದು ಮಾಗಡಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ವರೆಗೂ ಬೃಹತ್ ಬೈಕ್ ರ್ಯಾಲಿ ಮೂಲಕ ಉಗ್ರಹೋರಾಟವನ್ನು ತಾಲೂಕು ರೈತಸಂಘ ಹಮ್ಮಿಕೊಳ್ಳಲಿದೆ ಈ ಹೋರಾಟಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡುವಂತೆ ಮನವಿ ಮಾಡಿದರು. ಕಾಂಗ್ರೆಸ್, ಜೆಡಿಎಸ್‍ನ ಮುಖಂಡರು ಪ್ರತಿನಿತ್ಯ ಪತ್ರಿಕಾಘೋಷ್ಠಿ ಏರ್ಪಡಿಸಿ ರಾಜಕೀಯ ಕೆಸೆರೆಚಾಟ ಮಾಡುವುದನ್ನು ಬಿಟ್ಟು ರೈತರ ಸಮಸ್ಯೆಗಳಿಗೆ ಧ್ವನಿಗೂಡಿಸಿ ಎಂದು ಮನವಿ ಮಾಡಿದರು. ರೈತಮುಖಂಡರಾದ ಶಿವಲಿಂಗಯ್ಯ, ರವಿಕುಮಾರು, ರಾಮಣ್ಣ, ಚಿಕ್ಕಣ್ಣ, ವೆಂಕಟೇಶ್, ಶಿವರುದ್ರಯ್ಯ, ಕಾಂತರಾಜು, ನಾಗರಾಜು, ಆಂಜನಪ್ಪ, ನಾರಾಯಣಪ್ಪ, ಕರಿಯಪ್ಪ, ಮುನಿರಾಜು, ಶಂಕರಯ್ಯ, ಹನುಮಂತಯ್ಯ, ಗಂಗಾಧರಯ್ಯ ಇತರರು ಇದ್ದರು.1
- ಹನೂರು : ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ವಿದ್ಯಾವಾರಾದಿ ರವರಿಗೆ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೇಹ್ಲೋಟ್ ರವರು ಪಿ ಎಚ್ ಡಿ ಪದವಿ ಪ್ರಧಾನ ಮಾಡಿದರು. ಏಪ್ರಿಲ್ ಏಳ ರಂದು ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12 ಮತ್ತು 13ನೇ ಘಟಿಕೋತ್ಸವದ ಸಮಾರಂಭದಲ್ಲಿ ವಿತರಿಸಿದ್ದಾರೆ. ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕುಂದೂರು ಮಠದ ಮಠಾಧಿಪತಿಗಳಾದ ಶ್ರೀ ಶರತ್ ಚಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ವೇದಾಂತ ವಿಭಾಗದಲ್ಲಿ ಅಂಶುಮದಾಗಮಮ್ ಸಂಪದನಾತ್ಮಕ ಅಧ್ಯಯನಮ್ ಎಂಬ ವಿಷಯದಲ್ಲಿ ಹಸ್ತಪ್ರತಿ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು. ಘಟಿಕೋತ್ಸವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಸಭಾ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್ ಅವರು ಘಟಿಕೋತ್ಸವ ಭಾಷಣ ಮಾಡಿದರು, ಉಪಕುಲಪತಿ ಶ್ರೀಮತಿ ಅಹಲ್ಯ ಕುಲಸಚಿವರಾದ ಪ್ರೊ. ಗಿರೀಶ್ ಚಂದ್ರ ಉಪಸ್ಥಿತರಿದ್ದರು. ಸಾಲೂರು ಶ್ರೀಗಳ ಸಾಧನೆ: ಗ್ರಂಥಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು 2024ನೇ ಸಾಲಿನ 'ಸಂಸ್ಕೃತ ಗ್ರಂಥ ಪುರಸ್ಕಾರವು ಲಭಿಸಿದೆ. ಪರಮಪೂಜ್ಯ ಲಿಂ. ಶ್ರೀ ಗುರುಸ್ವಾಮೀಜಿ ಆಶೀರ್ವಾದ, ಪ್ರೇರಣೆ ನೀಡಿದ ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ, ಸುತ್ತೂರು ದೇಗುಲಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಅಭ್ಯುದಯಕ್ಕಾಗಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸರ್ಕಾರ ಭಾರತೀಯ ಭಾಷಾ ಸಂಸ್ಥಾನದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅನಂತರ 8 ಆಗಸ್ಟ್ 2020 ರಂದು ಶ್ರೀ ಸಾಲೂರು ಬೃಹನ್ಮಠಕ್ಕೆ ಪಟ್ಟಾಭಿಷೇಕವಾಯಿತು. ಇಂದು ಶ್ರೀ ಕ್ಷೇತ್ರದ ಶ್ರೀ ಸಾಲೂರು ಬೃಹನ್ಮಠದಲ್ಲಿ ಪೂಜ್ಯ ಲಿಂ. ಪಟ್ಟದ ಗುರುಸ್ವಾಮಿಗಳವರು ಮತ್ತು ಭಕ್ತರ ಆಶಯದಂತೆ ಶ್ರೀಮಠದ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರೌಢಪ್ರಬಂಧದಲ್ಲಿ ಶ್ರೀಗಳು ಸಂಪಾದಿಸಿರುವ ಪ್ರೌಢಪ್ರಬಂಧದಲ್ಲಿ ಅಂಕುಮದಾಗಮದಲ್ಲಿ 84 ಅಧ್ಯಾಯಗಳಿವೆ. 84 ಅಧ್ಯಾಯಗಳು ಇವುಗಳೆಲ್ಲ ಪರಿಪೂರ್ಣವಾಗಿ ದೇವಾಲಯಗಳು ಮತ್ತು ಅವುಗಳ ಪೂಜಾದಿ ಆರಂಭಿಸಿ, ಸಕಳ ಸ್ಥಾಪನ, ಅತ್ಯಾರ್ಥಯಜನ ಪವಿತ್ರ ವಿಧಿ, ಪಂಚಾಮೃತ ವಿಧಿ, ಚೂರ್ಣೋತ್ಸವ ವಿಧಿ, ಪರಸುಪ್ರತ್ತಯ ವಿಧಿ, ಪಾದ್ಯಾದಿವಿಧಿಗಳನ್ನು ಇಲ್ಲಿ ಅತ್ಯಂತ ಸುವಿಸ್ತಾರವಾಗಿ ವರ್ಣಿತವಾಗಿವೆ. ವಿವಿಧ ದೇವತೆಗಳಿಗೆ ಸಂಬಂಧಿಸಿದ ಅರ್ಚನಾ ಕ್ರಮಗಳ ವಿವರಗಳೂ ಇವೆ. ಉದಾಹರಣೆಗೆ ವಿನಾಯಕ ವ್ರತ, ಮುಖಲಿಂಗಾರ್ಚನ, ಗೌರೀಪವಿತ್ರ ವಿಧಿ, ನಕ್ಷತ್ರ ಪೂಜಾ ವಿಧಿ. ಅರ್ಧನಾರೀಶ್ವರ ಪೂಜಾ ವಿಧಿ. ಚಂದೇಕಾರ್ಚನ ವಿಧಿ ಮಹಾಶಾಂತಿ ವಿಧಿ, ದೇವೀಪೂಜಾ ವಿಧಿ. ಈ ಆಗಮದ ಅತ್ಯಂತ ಮಹತ್ವದ ಮತ್ತೊಂದು ಸಂಗತಿ ಏನೆಂದರೆ, ಇಲ್ಲಿ ದೇವಾಲಯಗಳ ನಿರ್ಮಾಣ, ಮೂರ್ತಿ ನಿರ್ಮಾಣದ ವಿಧಾನಗಳೂ ಸೇನಾಸ್ಥಂಭ, ಅಶ್ವಸ್ತಂಭಗಳ ಸ್ಥಾಪನೆ ಇತ್ಯಾದಿ ವಿವರಗಳಿವೆ. ಇವುಗಳ ಜತೆಗೆ, ರುದ್ರಾಕ್ರ ಭಸ್ಮಾದಿ ವಿಧಿಗಳು, ಕೃತ್ತಿಕಾದೀಪ ವಿಧಿ, ವಿವಿಧ ಪ್ರಾಯಶ್ಚಿತ್ರಗಳು, ಪ್ರದೋಷ ಪೂಜಾದಿ ವಿಧಿಗಳೆಲ್ಲವೂ ವಿಸ್ತಾರವಾಗಿ ವಿವರಣೆಗೊಂಡಿವೆ. ಇದು ದೇವಾಲಯಗಳ ವಿವಿಧ ಕರ್ಮ ವಿಧಾನಗಳಿಗೆ ಸಹಕಾರಿಯಾಗಲಿವೆ. ಶೈವ ದೇವಾಲಯಗಳ ವಿಧಿವಿಧಾನಗಳ ಬಗ್ಗೆ ಅಧ್ಯಯನ ಮಾಡುವ ಸಂಶೋಧಕರಿಗೆ ಇದು ಅನುಕೂಲವಾಗುತ್ತದೆ. ಸಾಲೂರು ಶ್ರೀಗಳನ್ನು ಪಿಎಚ್. ಡಿವರೆಗೂ ಕೈ ಹಿಡಿದು ಮುನ್ನಡೆಸಿರುವವರು ಮತ್ತೊಬ್ಬ ಶ್ರೀಗಳು. ಕುಂದೂರು ಮಠದ ಮಠಾಧೀಫತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಖ್ಯಾತ ವಿದ್ವಾಂಸರಾದ ಡಾ.ಶರತ್ ಚಂದ್ರ ಸ್ವಾಮೀಜಿ ಮಾರ್ಗದರ್ಶನ ಗುರಿ ತಲುಪಿಸಿದೆ. ಅಂದು ಸೋತು ಬಂದ ಶಿಷ್ಯನನ್ನು ಇಂದು ಗೆಲ್ಲಿಸಿದ್ದಾರೆ. ಶ್ರೀಗಳು ಪಿಯುಸಿ ಫೇಲ್ ಆದ ಸಂದರ್ಭದಲ್ಲಿ ಡಾ.ಶರತ್ ಚಂದ್ರ ಸ್ವಾಮೀಜಿ ಆತ್ಮಸ್ಥೆರ್ಯ ತುಂಬಿದರು. ಸಂಸ್ಕೃತ ಅಧ್ಯಯನ ಮಾಡಿಸಿದರು. ಎಂ.ಎ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಮತ್ತೆ ಪರೀಕ್ಷೆ ಬರೆಯಲು ಸಲಹೆ ನೀಡಿ ಪೂಜ್ಯರು ಎಂ.ಫೀಲ್ ಮತ್ತು ಪಿ.ಎಚ್ಡಿ ಗೆ ಮಾರ್ಗದರ್ಶನ ನೀಡಿದನ್ನು ಸಾಲೂರು ಶ್ರೀಗಳು ಸ್ಮರಿಸಿಕೊಂಡಿದ್ದಾರೆ.1
- Post by Rownak Ali khan1
- ಬುಧವಾರ ಸಂಜೆ ಮತ್ತು ರಾತ್ರಿ ಕುಷ್ಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ರಭಸವಾಗಿ ಮಳೆ ಸುರಿದಿದ್ದು, ಬಿಸಿಲಿನ ತೀವ್ರತೆಯಿಂದ ಕಂಗೆಟ್ಟಿದ್ದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಮಧ್ಯಾಹ್ನದ ಬಳಿಕ ಆಕಾಶದಲ್ಲಿ ಮೋಡ ಕವಿದು ಗಾಳಿ ಜೋರಾಗಿ ಬೀಸತೊಡಗಿದ ಬಳಿಕ ಕೆಲವೇ ಕ್ಷಣಗಳಲ್ಲಿ ಮಳೆ ಆರಂಭವಾಯಿತು. ಗುಡುಗು ಮತ್ತು ಮಿಂಚಿನ ಅಬ್ಬರದಿಂದ ಕೆಲಕಾಲ ಜನರಲ್ಲಿ ಆತಂಕವೂ ಉಂಟಾಯಿತು. ಬಿಸಿಲಿನ ಉಷ್ಣತೆ ಕಡಿಮೆಯಾಗಿದ್ದರೂ ಕೆಲವು ಕಡೆ ಗಾಳಿಯಿಂದ ಸಣ್ಣಪುಟ್ಟ ಹಾನಿ ಸಂಭವಿಸಿರುವ ವರದಿಗಳೂ ಕೇಳಿಬಂದಿವೆ1
- ಹನೂರು :ತಾಲೂಕಿನ ಸೂಳೆರಿಪಾಳ್ಯ ಗ್ರಾ. ಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಶ್ರೀ ಮಕ್ಕಳ ಮಾರಮ್ಮನ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೊದಲ ದಿನವಾದ ಮಂಗಳವಾರ ತಡರಾತ್ರಿ ಶ್ರೀ ಮಕ್ಕಳ ಮಾರಮ್ಮನಿಗೆ ಜಾಗರ ಸಮರ್ಪಣೆ ಮಾಡಲಾಯಿತು. ಜಾತ್ರೆಯ ಮೊದಲ ದಿನ ಶ್ರೀ ಮಕ್ಕಳ ಮಾರಮ್ಮನಿಗೆ ವಿವಿಧ ಪುಷ್ಪಲಂಕಾರ ಮಾಡಿ,ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ತಡರಾತ್ರಿ 12 ಗಂಟೆಯ ಸಮಯದಲ್ಲಿ ಊರಿನ ಪ್ರತಿ ಮನೆಯಲ್ಲೂ ದ್ವಿದಳ ದಾನ್ಯಗಳಿಂದ ಮೊಳಕೆ ಹೊಡೆದ ಪೈರನ್ನ ತಂದು ಶ್ರೀ ಮಕ್ಕಳ ಮಾರಮ್ಮನಿಗೆ ಅರ್ಪಿಸಿದರು. ಮೆರಗು ತಂದ ಗಾಡಿ ಗೊಂಬೆ :ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಬಿದಿರಿನಿಂದ ಮಾಡಿದ ಬೋಂಬೆಯು ನೋಡುಗರ ಕಣ್ಮಣ ಸೆಳೆಯುವಂತಿತ್ತು. ಕಳೆದ 10 ವರ್ಷಗಳ ನಂತರ ವೆಂಕಟಾಚಲಚಾರಿಯವರ ಕಸುಬಾಗಿದ್ದು, ಒಣ ಬಿದಿರಿನಿಂದ ಬೋಂಬೆ ತಯಾರು ಮಾಡಿ, ಬಟ್ಟೆ ಓದಿಸಿಕೊಂಡು ಕುಣಿದರು. ತಮಟೆ ಸದ್ದಿಗೆ ಯುವಕರು, ಯಜಮಾನರು, ಮಕ್ಕಳು ಕುಣಿದು ಕುಪ್ಪಳಿಸಿದರು.4