logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

  : ಕೆಪಿಎಸ್ಸಿ ಹಗರಣದಲ್ಲಿ ಯಾರೇ ಇದ್ದರೂ ಕ್ರಮ --ಪ್ರಿಯಾಂಕ್ ಖರ್ಗೆ : ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ದೂರು ನೀಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಇನ್ನೂ ಪತ್ರವನ್ನು ನೋಡಿಲ್ಲ. ಇನ್ನು ಮೂರು ಪ್ರಕರಣಗಳನ್ನು ದಾಖಲಿಸುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಕಾನೂನು ಅಭಿಪ್ರಾಯ ಪಡೆದು ಪರಿಶೀಲನೆ ನಡೆಸಲಾಗುವುದು ಎಂದರು. ಅವರು ಇಂದು ತಾಲ್ಲೂಕಿನ ಜಾನಪದ ಲೋಕದಲ್ಲಿ ನಡೆದ ಶಾಸಕ ದರ್ಶನ್ ಧ್ರುವನಾರಾಯಣ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೆಪಿಎಸ್ಸಿ ಹಗರಣ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ (ಆರ್‌ಡಬ್ಲ್ಯುಎಸ್), ಬಿಬಿಎಂಪಿ ಅಥವಾ ಕೆಎಎಸ್ ನೇಮಕಾತಿ ವಿಚಾರ ಯಾವುದೇ ಇರಲಿ, ಸರ್ಕಾರ ಹಿಂದೆ ಸರಿಯುವುದಿಲ್ಲ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಐಟಿ ಮತ್ತು ಇಡಿ ಅಧಿಕಾರಿಗಳು ಬಿಬಿಎಂಪಿ ಎಂದಾಕ್ಷಣ ಡಿ.ಕೆ. ಶಿವಕುಮಾರ್ ಅವರ ಹೆಸರು, ಆರ್‌ಡಬ್ಲ್ಯುಎಸ್ ಎಂದಾಕ್ಷಣ ನನ್ನ ಹೆಸರು ಪ್ರಸ್ತಾಪಿಸುತ್ತಾರೆ. ಆದರೆ ಇವತ್ತಲ್ಲ ನಾಳೆ ಸತ್ಯ ಹೊರಬರಲೇಬೇಕು  ಈಗಾಗಲೇ ಸಿಐಡಿ, ಎಸ್‌ಐಟಿ ತನಿಖೆಗಳು ನಡೆದಿವೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಪ್ರಕರಣದ ಅಂತಿಮ ಪರಿಣಾಮ ಯಾರ ಮನೆ ಬಾಗಿಲಿಗೆ ಹೋಗಿ ಬೀಳಲಿದೆ ಎಂಬುದನ್ನು ಕಾದು ನೋಡೋಣ  ಎಂದರು ವಿರೋಧ ಪಕ್ಷಗಳ ನಾಯಕರ ವಿರುದ್ಧ ಇಡಿ ಸಾವಿರಾರು ಪ್ರಕರಣಗಳನ್ನು ದಾಖಲಿಸಿದೆ. ಆದರೆ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಶಿಕ್ಚೆಯ ಪ್ರಮಾಣ ಶೇ2 ಕ್ಕೂ ಕಡಿಮೆಯಿದೆ. ಇದು ರಾಜಕೀಯ ದುರುದ್ದೇಶವಲ್ಲವೇ! ಇದನ್ನು ನಾವು ಹೇಳುತ್ತಿಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸಂಸತ್ತಿನಲ್ಲಿ ಈ ಅಂಕಿ-ಅಂಶಗಳನ್ನು ನೀಡಿದ್ದಾರೆ. ಸಾವಿರಾರು ದಾಳಿಗಳನ್ನು ನಡೆಸಿ ಬಳಿಕ ಆರೋಪಿಗಳನ್ನು ಕೈಬಿಡುವ ಮೂಲಕ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ, ಇಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ. ಚುನಾವಣೆ ಹತ್ತಿರ ಬಂದಾಗ ಇಡಿ ದಾಳಿಗಳು ಹೆಚ್ಚಾಗುತ್ತವೆ. ಬಿಜೆಪಿ, ಮೋದಿ ಹಾಗೂ ಅಮಿತ್ ಶಾ ವಿರುದ್ಧ ಮಾತನಾಡಿದರೆ ಇಡಿ ಕಾಟ ತಪ್ಪಿದ್ದಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗೃಹ ಸಚಿವ ಪ್ರಿಯಾಂಕಾ ಖರ್ಗೆ ಹರಿಹಾಯ್ದರು.

10 hrs ago
user_ರಮೇಶ್.ಆರ್
ರಮೇಶ್.ಆರ್
ಚನ್ನಪಟ್ಟಣ, ರಾಮನಗರ, ಕರ್ನಾಟಕ•
10 hrs ago

: ಕೆಪಿಎಸ್ಸಿ ಹಗರಣದಲ್ಲಿ ಯಾರೇ ಇದ್ದರೂ ಕ್ರಮ --ಪ್ರಿಯಾಂಕ್ ಖರ್ಗೆ : ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ದೂರು ನೀಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಇನ್ನೂ ಪತ್ರವನ್ನು ನೋಡಿಲ್ಲ. ಇನ್ನು ಮೂರು ಪ್ರಕರಣಗಳನ್ನು ದಾಖಲಿಸುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಕಾನೂನು ಅಭಿಪ್ರಾಯ ಪಡೆದು ಪರಿಶೀಲನೆ ನಡೆಸಲಾಗುವುದು ಎಂದರು. ಅವರು ಇಂದು ತಾಲ್ಲೂಕಿನ ಜಾನಪದ ಲೋಕದಲ್ಲಿ ನಡೆದ ಶಾಸಕ ದರ್ಶನ್ ಧ್ರುವನಾರಾಯಣ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೆಪಿಎಸ್ಸಿ ಹಗರಣ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ (ಆರ್‌ಡಬ್ಲ್ಯುಎಸ್), ಬಿಬಿಎಂಪಿ ಅಥವಾ ಕೆಎಎಸ್ ನೇಮಕಾತಿ ವಿಚಾರ ಯಾವುದೇ ಇರಲಿ, ಸರ್ಕಾರ ಹಿಂದೆ ಸರಿಯುವುದಿಲ್ಲ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಐಟಿ ಮತ್ತು ಇಡಿ ಅಧಿಕಾರಿಗಳು ಬಿಬಿಎಂಪಿ ಎಂದಾಕ್ಷಣ ಡಿ.ಕೆ. ಶಿವಕುಮಾರ್ ಅವರ ಹೆಸರು, ಆರ್‌ಡಬ್ಲ್ಯುಎಸ್ ಎಂದಾಕ್ಷಣ ನನ್ನ ಹೆಸರು ಪ್ರಸ್ತಾಪಿಸುತ್ತಾರೆ. ಆದರೆ ಇವತ್ತಲ್ಲ ನಾಳೆ ಸತ್ಯ ಹೊರಬರಲೇಬೇಕು  ಈಗಾಗಲೇ ಸಿಐಡಿ, ಎಸ್‌ಐಟಿ ತನಿಖೆಗಳು ನಡೆದಿವೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಪ್ರಕರಣದ ಅಂತಿಮ ಪರಿಣಾಮ ಯಾರ ಮನೆ ಬಾಗಿಲಿಗೆ ಹೋಗಿ ಬೀಳಲಿದೆ ಎಂಬುದನ್ನು ಕಾದು ನೋಡೋಣ  ಎಂದರು ವಿರೋಧ ಪಕ್ಷಗಳ ನಾಯಕರ ವಿರುದ್ಧ ಇಡಿ ಸಾವಿರಾರು ಪ್ರಕರಣಗಳನ್ನು ದಾಖಲಿಸಿದೆ. ಆದರೆ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಶಿಕ್ಚೆಯ ಪ್ರಮಾಣ ಶೇ2 ಕ್ಕೂ ಕಡಿಮೆಯಿದೆ. ಇದು ರಾಜಕೀಯ ದುರುದ್ದೇಶವಲ್ಲವೇ! ಇದನ್ನು ನಾವು ಹೇಳುತ್ತಿಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸಂಸತ್ತಿನಲ್ಲಿ ಈ ಅಂಕಿ-ಅಂಶಗಳನ್ನು ನೀಡಿದ್ದಾರೆ. ಸಾವಿರಾರು ದಾಳಿಗಳನ್ನು ನಡೆಸಿ ಬಳಿಕ ಆರೋಪಿಗಳನ್ನು ಕೈಬಿಡುವ ಮೂಲಕ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ, ಇಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ. ಚುನಾವಣೆ ಹತ್ತಿರ ಬಂದಾಗ ಇಡಿ ದಾಳಿಗಳು ಹೆಚ್ಚಾಗುತ್ತವೆ. ಬಿಜೆಪಿ, ಮೋದಿ ಹಾಗೂ ಅಮಿತ್ ಶಾ ವಿರುದ್ಧ ಮಾತನಾಡಿದರೆ ಇಡಿ ಕಾಟ ತಪ್ಪಿದ್ದಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗೃಹ ಸಚಿವ ಪ್ರಿಯಾಂಕಾ ಖರ್ಗೆ ಹರಿಹಾಯ್ದರು.

More news from ಕರ್ನಾಟಕ and nearby areas
  • ಜಪಾನ್ ಪ್ರವಾಸ ಹಾರೋಹಳ್ಳಿಗೆ ಲಾಟರಿ ಹೊಡೆದಿದೆ - ಸಿಎಂ ಡಿ.ಕೆ.ಶಿವಕುಮಾರ್  : ರಾಮನಗರ -- ಜಪಾನ್ ಪ್ರವಾಸ ಮಾಡಿ ಬಂದಿದ್ದೇನೆ. ನಮ್ಮ‌ ಹರೋಹಳ್ಳಿಗೆ ಲಾಟರಿ ಹೊಡೆದಿದೆ. ಸುಮಾರು 600-700  ಜನಕ್ಕೆ ಉದ್ಯೋಗ ಅವಕಾಶ ಒದಗಿ ಬಂದಿದೆ. ಜಪಾನ್ ಪ್ರವಾದ ಬಗ್ಗೆ ನಾಳೆ ಸುದೀರ್ಘವಾಗಿ ಪತ್ರಿಕಾಗೋಷ್ಠಿ ಮಾತನಾಡುತ್ತೃನೆ ಎಂದು ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಅವರು ಇಂದು ಶಾಸಕ ದರ್ಶನ್ ದ್ರುವನಾರಾಯಣ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ಪೋಲಿಸ್ ಟ್ರೈನಿಂಗ್ ಶಾಲೆಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು‌. ಸದ್ಯದಲ್ಲೇ  ಮತ್ತೆ ರಾಮನಗರಕ್ಕೆ ಬರ್ತೀನಿ, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರಾಜೀವ್ ಗಾಂಧಿ ಮೆಡಿಕಲ್ ಇನ್ಸ್ಟಿಟ್ಯೂಷನ್ ಹಾಗೂ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಕಾಮಾಗಾರಿ ಪ್ರಗತಿಯಲ್ಲಿದೆ. ಮತ್ತೊಮ್ಮೆ ಜಿಲ್ಲೆಯ ಪ್ರವಾಸ ಕೈಗೊಂಡು ರಿವ್ಯೂ ಮಾಡ್ತುತ್ತೇನೆ, ಇಂದು ದರ್ಶನ ದ್ರುವ ನಾರಾಯಣ ಮದುವೆಯಲ್ಲಿ ಪಾಲ್ಗೊಂಡು ನಂತತ ಮೈಸೂರಿನಲ್ಲಿ ಹಮ್ಮಿಕೊಂಡಿರುವ   ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ತೆರಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಆಶಾ ಕಾರ್ಯಕರ್ತೆಯರ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸುಮ್ಮನೆ ಯಾರ ಒತ್ತಡಕ್ಕೆ ಮಣಿಯ ಬೇಡಿ ಎಂದು ಮನವಿ ಮಾಡಿದ್ದೇನೆ. ಆಶಾ ಕಾರ್ಯಕರ್ತೆಯರು ಯಾಕೆ  ಕೇಂದ್ರ ಸರ್ಕಾರವನ್ನ ಕೇಳ್ತಾ ಇಲ್ವಲ್ಲ.?   ಇದು ಕೇವಲ ನಮ್ಮ ಒಬ್ಬರದ್ದೇ ಹೊಣೆ ಅಲ್ವಲ್ಲ. ನಾವಂತೂ ಸಹಾಯ ಮಾಡೋಕೆ ರೆಡಿ ಇದೀವಿ. ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ‌. ಆಶಾ ಕಾರ್ಯಕರ್ತೆಯರು ಯಾಕೆ ಕೇಳುತ್ತಿಲ್ಲ. ಕೇಂದ್ರ ಸರ್ಕಾರ ಮೇಲೆ ಅವರು ಒತ್ತಡ ಹಾಕಬೇಕು ಎಂದರು. ಇನ್ನೂ ಅಶಾ ಕಾರ್ಯಕರ್ತೆಯರಿಗೆ  1500 ಗೌರವಧನ ಹೆಚ್ಚಿಸಲು ಕೇಂದ್ರ ಚಿಂತನೆ ನಡೆಸಿದೆ ಎಂಬ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಹೇಳಿಕೆಗೆ, ಅದು ನನಗೆ ಗೊತ್ತಿಲ್ಲ, ಅವರು ಬಹಳ  ದೊಡ್ಡವರು. ನನಗೆ ಮಾಹಿತಿ ಇಲ್ಲ ಎಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು‌.
    1
    ಜಪಾನ್ ಪ್ರವಾಸ ಹಾರೋಹಳ್ಳಿಗೆ ಲಾಟರಿ ಹೊಡೆದಿದೆ - ಸಿಎಂ ಡಿ.ಕೆ.ಶಿವಕುಮಾರ್  :
ರಾಮನಗರ -- ಜಪಾನ್ ಪ್ರವಾಸ ಮಾಡಿ ಬಂದಿದ್ದೇನೆ. ನಮ್ಮ‌ ಹರೋಹಳ್ಳಿಗೆ ಲಾಟರಿ ಹೊಡೆದಿದೆ. ಸುಮಾರು 600-700  ಜನಕ್ಕೆ ಉದ್ಯೋಗ ಅವಕಾಶ ಒದಗಿ ಬಂದಿದೆ. ಜಪಾನ್ ಪ್ರವಾದ ಬಗ್ಗೆ ನಾಳೆ ಸುದೀರ್ಘವಾಗಿ ಪತ್ರಿಕಾಗೋಷ್ಠಿ ಮಾತನಾಡುತ್ತೃನೆ ಎಂದು ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಅವರು ಇಂದು ಶಾಸಕ ದರ್ಶನ್ ದ್ರುವನಾರಾಯಣ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ಪೋಲಿಸ್ ಟ್ರೈನಿಂಗ್ ಶಾಲೆಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು‌.
ಸದ್ಯದಲ್ಲೇ  ಮತ್ತೆ ರಾಮನಗರಕ್ಕೆ ಬರ್ತೀನಿ, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರಾಜೀವ್ ಗಾಂಧಿ ಮೆಡಿಕಲ್ ಇನ್ಸ್ಟಿಟ್ಯೂಷನ್ ಹಾಗೂ ಹೈಟೆಕ್
ರೇಷ್ಮೆ ಮಾರುಕಟ್ಟೆ ನಿರ್ಮಾಣ ಕಾಮಾಗಾರಿ ಪ್ರಗತಿಯಲ್ಲಿದೆ. ಮತ್ತೊಮ್ಮೆ ಜಿಲ್ಲೆಯ ಪ್ರವಾಸ ಕೈಗೊಂಡು ರಿವ್ಯೂ ಮಾಡ್ತುತ್ತೇನೆ, ಇಂದು ದರ್ಶನ ದ್ರುವ ನಾರಾಯಣ ಮದುವೆಯಲ್ಲಿ ಪಾಲ್ಗೊಂಡು ನಂತತ ಮೈಸೂರಿನಲ್ಲಿ ಹಮ್ಮಿಕೊಂಡಿರುವ   ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ತೆರಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಆಶಾ ಕಾರ್ಯಕರ್ತೆಯರ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,
ಸುಮ್ಮನೆ ಯಾರ ಒತ್ತಡಕ್ಕೆ ಮಣಿಯ ಬೇಡಿ ಎಂದು ಮನವಿ ಮಾಡಿದ್ದೇನೆ. ಆಶಾ ಕಾರ್ಯಕರ್ತೆಯರು ಯಾಕೆ  ಕೇಂದ್ರ ಸರ್ಕಾರವನ್ನ ಕೇಳ್ತಾ ಇಲ್ವಲ್ಲ.?   ಇದು ಕೇವಲ ನಮ್ಮ ಒಬ್ಬರದ್ದೇ ಹೊಣೆ ಅಲ್ವಲ್ಲ. ನಾವಂತೂ ಸಹಾಯ ಮಾಡೋಕೆ ರೆಡಿ ಇದೀವಿ. ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ‌. ಆಶಾ ಕಾರ್ಯಕರ್ತೆಯರು ಯಾಕೆ ಕೇಳುತ್ತಿಲ್ಲ.
ಕೇಂದ್ರ ಸರ್ಕಾರ ಮೇಲೆ ಅವರು ಒತ್ತಡ ಹಾಕಬೇಕು ಎಂದರು.
ಇನ್ನೂ ಅಶಾ ಕಾರ್ಯಕರ್ತೆಯರಿಗೆ  1500 ಗೌರವಧನ ಹೆಚ್ಚಿಸಲು ಕೇಂದ್ರ ಚಿಂತನೆ ನಡೆಸಿದೆ ಎಂಬ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಹೇಳಿಕೆಗೆ, ಅದು ನನಗೆ ಗೊತ್ತಿಲ್ಲ, ಅವರು ಬಹಳ 
ದೊಡ್ಡವರು. ನನಗೆ ಮಾಹಿತಿ ಇಲ್ಲ ಎಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು‌.
    user_ರಮೇಶ್.ಆರ್
    ರಮೇಶ್.ಆರ್
    ಚನ್ನಪಟ್ಟಣ, ರಾಮನಗರ, ಕರ್ನಾಟಕ•
    10 hrs ago
  • ಸರ್ಕಾರಿ ಶಾಲೆ ಉಳಿವಿಗಾಗಿ ಯಾತ್ರೆ, ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕೃಷ್ಣೇಗೌಡ ಹೇಳಿಕೆ ಮಳವಳ್ಳಿ : ಸರ್ಕಾರಿ ಶಾಲೆ ಉಳಿವು ಹಾಗೂ ಪುನರುಜ್ಜೀವನಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ರಾಜ್ಯಾ ಧ್ಯಂತ ಸಾವಿರಾರು ಹೋರಾಟ ಗಾರರು ಜೊತೆಗೂಡಿ ಜೈ ಕನ್ನಡ ಯಾತ್ರೆಯನ್ನು ಹಮ್ಮಿಕೊಳ್ಳಲಾ ಗಿದೆ ಎಂದು ರಾಜ್ಯಾಧ್ಯಕ್ಷ ಕೃಷ್ಣೇಗೌಡ ತಿಳಿಸಿದರು. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಧ್ಯಾಹ್ನ 3.30 ರ ಸಮಯ ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸಮಾನ ಶಿಕ್ಷಣ ನೀತಿ ಜಾರಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ಒತ್ತಾಯದ ಮೇರೆಗೆ ಡಿ. 28 ರಿಂದ ಅತ್ತಿಬೆಲೆ, ಬೆಂಗಳೂರು, ಕೋಲಾರ ಸೇರಿದಂತೆ 30 ಜಿಲ್ಲೆಗಳಲ್ಲಿ ಜೈ ಕನ್ನಡಯಾತ್ರೆ ಯನ್ನು ಹಮ್ಮಿಕೊಂಡಿದ್ದು ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾ ಗುವುದು ಎಂದರು. ಶಿಕ್ಷಣ ವ್ಯಾಪಾರೀಕರಣವನ್ನು ಖಂಡಿಸುತ್ತೇವೆ. ಪೋಷಕರು ಸಾಲ ಮಾಡಿ ಖಾಸಗಿ ಶಾಲೆಗ ಳಲ್ಲಿ ತಮ್ಮ ಮಕ್ಕಳನ್ನು ಓದಿಸು ತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿ ಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಇಲ್ಲದೇ ಪ್ರತಿಯೊಬ್ಬರಿಗೂ ಒಂದೇ ಶಿಕ್ಷಣ ಸಿಗುವಂತಾಗಬೇಕೆಂದು ಆಗ್ರಹಿಸಿದರು. ಕೆಪಿಎಸ್‌ಸಿ ಶಾಲೆಗಳನ್ನು ತೆರದು ಆಡಂಬರ ಮಾಡುವು ದರ ಬದಲು ಹಳ್ಳಿಯ ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಬೇಕು. ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯದ ಜೊತೆಗೆ ಡಿಜಿಟಲೀ ಕರಣಗೊಳಿಸಿ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾಹಿತಿ ನೀಡಿದರು. ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಷ್ಯ ವಹಿಸುವ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ಮುಕ್ತಿ ಗೊಳಿಸಬೇಕು. ಜನಪ್ರತಿನಿಧಿ ಹಾಗೂ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿಯೇ ಓದಿಸುವಂತೆ ಸರ್ಕಾರ ಅದೇಶ ನೀಡಬೇಕು. ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮ ಶಿರ್ಷಿಕೆಯಡಿಯಲ್ಲಿ ಶೇ. 60 ರಷ್ಟು ಸರ್ಕಾರಿ ಕೆಲಸವನ್ನು ಸರ್ಕಾರಿ ಶಾಲೆಯಲ್ಲಿ ಓದಿದ ವರಿಗೆ ನೀಡಬೇಕು ಎಂಬುವು ದರ ಬಗ್ಗೆ ಹೋರಾಟವನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಏಜೆಂಟ್‌ಗಳಾಗಿ ಕೆಲಸ ನಿರ್ವಹಿಸುತ್ತಿವೆ. ಅಧಿಕಾರಿಗಳು ಸರ್ಕಾರಿ ಸಂಬಳ ತೆಗೆದುಕೊಂಡು ಖಾಸಗಿ ಶಾಲೆಗ ಳನ್ನು ಪೋಷಿಸುತ್ತಿದ್ದಾರೆ. ಶಿಕ್ಷಣದಲ್ಲಿ ಬಡವ ಶ್ರೀಮಂತ ಎಂಬ ತಾರತಮ್ಯ ಮಾಡದೇ ಸಮಾನ ಶಿಕ್ಷಣ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಸಿಗುವಂತಾ ಗಲಿ ಎಂಬುವುದು ನಮ್ಮ ಒತ್ತಾಯವಾಗಿದೆ. 20 ದಿನದಲ್ಲಿ 30 ಜಿಲ್ಲೆಗಳಲ್ಲಿ ಸಂಚರಿಸಿ ಜೈ ಕನ್ನಡಯಾತ್ರೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಅಧಿಕಾರಗಳನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು. ಸಭೆಯಲ್ಲಿ ಹಲವು ಮುಖಂಡರು ಸಂಘಟನೆಗೆ ಸೇರ್ಪಡೆಗೊಂಡರು. ತಾಲ್ಲೂಕು ಘಟಕದ ವತಿಯಿಂದ ರಾಜಾಧ್ಯ ಕ್ಷರಿಗೆ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮಂಡ್ಯ ಜಿಲ್ಲಾಧ್ಯಕ್ಷ ಮಹಮದ್ ಇರ್ಫಾನ್ , ತಾಲ್ಲೂಕು ಅಧ್ಯಕ್ಷ ಫೈರೋಜ್ ಖಾನ್, ಉಪಾಧ್ಯಕ್ಷ ಅಜೀಂ ಖಾನ್, ಟೌನ್ ಅಧ್ಯಕ್ಷ ಅಲೀಂ ಖಾನ್, ಚಾಮರಾಜ ನಗರ ಜಿಲ್ಲಾಧ್ಯಕ್ಷೆ ಭಾಗ್ಯಲಕ್ಷ್ಮಿ, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷೆ ವಿಜಯರಾಣಿ, ಮುಖಂಡರಾದ ಮನ್ಸೂರ್ ಪಾಷಾ, ಫೀರ್ ಪಾಷಾ, ಸೈಯದ್ ಆದಿಲ್, ರಾಜಣ್ಣ, ಮುನೀರ್ ಪಾಷಾ, ಇಮ್ರಾನ್ ಪಾಷಾ, ಮೌಲಾನ ಷರೀಫ್ ಮತ್ತಿತರರು ಹಾಜರಿ ದ್ದರು.
    1
    ಸರ್ಕಾರಿ ಶಾಲೆ ಉಳಿವಿಗಾಗಿ ಯಾತ್ರೆ, ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕೃಷ್ಣೇಗೌಡ ಹೇಳಿಕೆ
ಮಳವಳ್ಳಿ : ಸರ್ಕಾರಿ ಶಾಲೆ ಉಳಿವು ಹಾಗೂ ಪುನರುಜ್ಜೀವನಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ರಾಜ್ಯಾ ಧ್ಯಂತ ಸಾವಿರಾರು ಹೋರಾಟ ಗಾರರು ಜೊತೆಗೂಡಿ ಜೈ ಕನ್ನಡ ಯಾತ್ರೆಯನ್ನು ಹಮ್ಮಿಕೊಳ್ಳಲಾ ಗಿದೆ ಎಂದು ರಾಜ್ಯಾಧ್ಯಕ್ಷ ಕೃಷ್ಣೇಗೌಡ ತಿಳಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಧ್ಯಾಹ್ನ 3.30 ರ ಸಮಯ ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸಮಾನ ಶಿಕ್ಷಣ ನೀತಿ ಜಾರಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ಒತ್ತಾಯದ ಮೇರೆಗೆ ಡಿ. 28 ರಿಂದ ಅತ್ತಿಬೆಲೆ, ಬೆಂಗಳೂರು, ಕೋಲಾರ ಸೇರಿದಂತೆ 30 ಜಿಲ್ಲೆಗಳಲ್ಲಿ ಜೈ ಕನ್ನಡಯಾತ್ರೆ ಯನ್ನು ಹಮ್ಮಿಕೊಂಡಿದ್ದು ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾ ಗುವುದು ಎಂದರು.
ಶಿಕ್ಷಣ ವ್ಯಾಪಾರೀಕರಣವನ್ನು ಖಂಡಿಸುತ್ತೇವೆ. ಪೋಷಕರು ಸಾಲ ಮಾಡಿ ಖಾಸಗಿ ಶಾಲೆಗ ಳಲ್ಲಿ ತಮ್ಮ ಮಕ್ಕಳನ್ನು ಓದಿಸು ತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿ ಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಇಲ್ಲದೇ ಪ್ರತಿಯೊಬ್ಬರಿಗೂ ಒಂದೇ ಶಿಕ್ಷಣ ಸಿಗುವಂತಾಗಬೇಕೆಂದು ಆಗ್ರಹಿಸಿದರು.
ಕೆಪಿಎಸ್‌ಸಿ ಶಾಲೆಗಳನ್ನು ತೆರದು ಆಡಂಬರ ಮಾಡುವು ದರ ಬದಲು ಹಳ್ಳಿಯ ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಬೇಕು. ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯದ ಜೊತೆಗೆ ಡಿಜಿಟಲೀ ಕರಣಗೊಳಿಸಿ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಷ್ಯ ವಹಿಸುವ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ಮುಕ್ತಿ ಗೊಳಿಸಬೇಕು. ಜನಪ್ರತಿನಿಧಿ ಹಾಗೂ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿಯೇ ಓದಿಸುವಂತೆ ಸರ್ಕಾರ ಅದೇಶ ನೀಡಬೇಕು. ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮ ಶಿರ್ಷಿಕೆಯಡಿಯಲ್ಲಿ ಶೇ. 60 ರಷ್ಟು ಸರ್ಕಾರಿ ಕೆಲಸವನ್ನು ಸರ್ಕಾರಿ ಶಾಲೆಯಲ್ಲಿ ಓದಿದ ವರಿಗೆ ನೀಡಬೇಕು ಎಂಬುವು ದರ ಬಗ್ಗೆ ಹೋರಾಟವನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಏಜೆಂಟ್‌ಗಳಾಗಿ ಕೆಲಸ ನಿರ್ವಹಿಸುತ್ತಿವೆ. ಅಧಿಕಾರಿಗಳು ಸರ್ಕಾರಿ ಸಂಬಳ ತೆಗೆದುಕೊಂಡು ಖಾಸಗಿ ಶಾಲೆಗ ಳನ್ನು ಪೋಷಿಸುತ್ತಿದ್ದಾರೆ. ಶಿಕ್ಷಣದಲ್ಲಿ ಬಡವ ಶ್ರೀಮಂತ ಎಂಬ ತಾರತಮ್ಯ ಮಾಡದೇ ಸಮಾನ ಶಿಕ್ಷಣ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಸಿಗುವಂತಾ ಗಲಿ ಎಂಬುವುದು ನಮ್ಮ ಒತ್ತಾಯವಾಗಿದೆ. 20 ದಿನದಲ್ಲಿ 30 ಜಿಲ್ಲೆಗಳಲ್ಲಿ ಸಂಚರಿಸಿ ಜೈ ಕನ್ನಡಯಾತ್ರೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಅಧಿಕಾರಗಳನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು.
ಸಭೆಯಲ್ಲಿ ಹಲವು ಮುಖಂಡರು ಸಂಘಟನೆಗೆ ಸೇರ್ಪಡೆಗೊಂಡರು. ತಾಲ್ಲೂಕು ಘಟಕದ ವತಿಯಿಂದ ರಾಜಾಧ್ಯ ಕ್ಷರಿಗೆ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮಂಡ್ಯ ಜಿಲ್ಲಾಧ್ಯಕ್ಷ ಮಹಮದ್ ಇರ್ಫಾನ್ ,  ತಾಲ್ಲೂಕು ಅಧ್ಯಕ್ಷ ಫೈರೋಜ್ ಖಾನ್,  ಉಪಾಧ್ಯಕ್ಷ ಅಜೀಂ ಖಾನ್, ಟೌನ್ ಅಧ್ಯಕ್ಷ ಅಲೀಂ ಖಾನ್, ಚಾಮರಾಜ ನಗರ ಜಿಲ್ಲಾಧ್ಯಕ್ಷೆ ಭಾಗ್ಯಲಕ್ಷ್ಮಿ, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷೆ ವಿಜಯರಾಣಿ, ಮುಖಂಡರಾದ ಮನ್ಸೂರ್ ಪಾಷಾ, ಫೀರ್ ಪಾಷಾ, ಸೈಯದ್ ಆದಿಲ್, ರಾಜಣ್ಣ, ಮುನೀರ್ ಪಾಷಾ, ಇಮ್ರಾನ್ ಪಾಷಾ, ಮೌಲಾನ ಷರೀಫ್ ಮತ್ತಿತರರು ಹಾಜರಿ ದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    13 hrs ago
  • ಹಲಗೂರಿನಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ: 30 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಳವಳ್ಳಿ: ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಸುಮಾರು 75 ಹೆಚ್ಚು ಶಿಬಿರಾರ್ಥಿಗಳನ್ನು ಪರೀಕ್ಷಿಸಿ, ಅದರಲ್ಲಿ 30 ಜನರಿಗೆ ಶಸ್ತ ಚಿಕಿತ್ಸೆ ಅವಶ್ಯಕತೆ ಇದ್ದು ,ಅವರನ್ನು ಸೋಮವಾರ ಬೆಂಗಳೂರು ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ , ಎಂದು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಗಣೇಶ್ ತಿಳಿಸಿದರು. ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಚನ್ನಪಟ್ಟಣ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಆವರಣದಲ್ಲಿ ಬಿ ಡಬ್ಲ್ಯೂ ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಲಯನ್ಸ್ ಕಣ್ಣು ಆಸ್ಪತ್ರೆ ರಸ್ತೆ ಬೆಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮಂಡ್ಯ , ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಹಲಗೂರು ಲಯನ್ಸ್ ಕ್ಲಬ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ , ಹಲಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಸಹ ಇಂತಹ ಕಾರ್ಯಕ್ರಮ ಆಯೋಜಿಸುತ್ತೇವೆ ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ವೈದ್ಯಾಧಿಕಾರಿ ಎಸ್. ದರ್ಶನ್ ಮಾತನಾಡಿ , ಈ ಶಿಬಿರದಲ್ಲಿ ನಾವು ಸುಮಾರು 75 ಜನರಿಗೆ ಬಿಪಿ ತಪಾಸಣೆ ನಡೆಸಿ ಹಾಗೂ ಕಣ್ಣಿನ ತಪಾಸಣೆ ನಡೆಸಲಾಗಿದ್ದು ಅದರಲ್ಲಿ 30 ಜನರಿಗೆ ಅತ್ಯವಶ್ಯಕವಾಗಿ ಶಸ್ತ್ರ ಚಿಕಿತ್ಸೆ ಬೇಕಾಗಿದ್ದು ಅವರನ್ನು ಬೆಂಗಳೂರಿಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಕ್ಲಬ್ಬಿನ ಎ. ಎಸ್ ನಾಗೇಶ್ ,ಡಿ ವೈ ನಾಗರಾಜು (ಬಾಬು), ಎನ್ .ಯೋಗೇಶ್, ಡಿ ಎಲ್. ಮಾದೇಗೌಡ, ಕೆ. ಶಿವರಾಜು, ಗುರುಸಿದ್ಧು ಹಾಗೂ ಶಿಬಿರದ ಮೇಲ್ವಿಚಾರಕ ನಾಗೇಶ್ ಸೇರಿದಂತೆ ಇತರರು ಇದ್ದರು.
    1
    ಹಲಗೂರಿನಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ:  30 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ
ಮಳವಳ್ಳಿ: ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಸುಮಾರು 75 ಹೆಚ್ಚು ಶಿಬಿರಾರ್ಥಿಗಳನ್ನು  ಪರೀಕ್ಷಿಸಿ, ಅದರಲ್ಲಿ 30 ಜನರಿಗೆ ಶಸ್ತ ಚಿಕಿತ್ಸೆ ಅವಶ್ಯಕತೆ ಇದ್ದು ,ಅವರನ್ನು ಸೋಮವಾರ ಬೆಂಗಳೂರು ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ , ಎಂದು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಗಣೇಶ್ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ  ಚನ್ನಪಟ್ಟಣ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್  ಆವರಣದಲ್ಲಿ
ಬಿ ಡಬ್ಲ್ಯೂ  ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ 
ಲಯನ್ಸ್ ಕಣ್ಣು ಆಸ್ಪತ್ರೆ ರಸ್ತೆ ಬೆಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮಂಡ್ಯ ,
ಜಿಲ್ಲಾ ಆರೋಗ್ಯ ಇಲಾಖೆ  ಹಾಗೂ ಹಲಗೂರು ಲಯನ್ಸ್ ಕ್ಲಬ್ 
ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ , ಹಲಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು  ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಸಹ ಇಂತಹ ಕಾರ್ಯಕ್ರಮ ಆಯೋಜಿಸುತ್ತೇವೆ ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. 
ವೈದ್ಯಾಧಿಕಾರಿ ಎಸ್. ದರ್ಶನ್ ಮಾತನಾಡಿ , ಈ ಶಿಬಿರದಲ್ಲಿ ನಾವು ಸುಮಾರು 75 ಜನರಿಗೆ ಬಿಪಿ ತಪಾಸಣೆ ನಡೆಸಿ ಹಾಗೂ ಕಣ್ಣಿನ ತಪಾಸಣೆ ನಡೆಸಲಾಗಿದ್ದು ಅದರಲ್ಲಿ 30 ಜನರಿಗೆ ಅತ್ಯವಶ್ಯಕವಾಗಿ ಶಸ್ತ್ರ ಚಿಕಿತ್ಸೆ ಬೇಕಾಗಿದ್ದು ಅವರನ್ನು ಬೆಂಗಳೂರಿಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದರು. 
ಈ ಸಂದರ್ಭದಲ್ಲಿ  ಕ್ಲಬ್ಬಿನ ಎ. ಎಸ್ ನಾಗೇಶ್ ,ಡಿ ವೈ ನಾಗರಾಜು (ಬಾಬು), ಎನ್ .ಯೋಗೇಶ್, ಡಿ ಎಲ್. ಮಾದೇಗೌಡ, ಕೆ. ಶಿವರಾಜು, ಗುರುಸಿದ್ಧು  ಹಾಗೂ ಶಿಬಿರದ ಮೇಲ್ವಿಚಾರಕ ನಾಗೇಶ್ ಸೇರಿದಂತೆ ಇತರರು ಇದ್ದರು.
    user_ಎ.ಎನ್ ಲೋಕೇಶ್  ವರದಿಗಾರರು
    ಎ.ಎನ್ ಲೋಕೇಶ್ ವರದಿಗಾರರು
    ಮಳವಳ್ಳಿ, ಮಂಡ್ಯ, ಕರ್ನಾಟಕ•
    15 hrs ago
  • ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟುಗೂಡಿ ಮಾಡಬೇಕು ಎಂಬ ನಿರ್ಧಾರ ಇವತ್ತು ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಎಲ್ಲ ಪ್ರಮುಖರ ಸಭೆ ಇಂದು ನಡೆದಿದೆ. ನಾನು ನಮ್ಮ ವಿಪಕ್ಷ ನಾಯಕರು, ಪಕ್ಷದ ಇತರ ಮುಖಂಡರು, ಜೆಡಿಎಸ್ ವತಿಯಿಂದ ಮಾನ್ಯ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಬೋಜೇಗೌಡರು, ಎರಡು ಪಕ್ಷದ ಪ್ರಮುಖ ಶಾಸಕರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು. ಬೆಳಗಾವಿಯಲ್ಲಿ ಎರಡನೇ ತಾರೀಕಿನಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಯಾವ ಯಾವ ವಿಚಾರಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಬರಗಾಲ ತೀವ್ರವಾಗಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಇಲ್ಲ ಎಂದು ಟೀಕಿಸಿದರು. ₹5,000 ಕೊಡುತ್ತೇವೆ ಅಂತ ಹೇಳಿ ಘೋಷಣೆ ಮಾಡಿ, ನಾಮಕಾವಾಸ್ತೆಗೆ 45,000 ರೈತರಿಗೆ ಹಣ ಅಧರ್ಂಬರ್ಧ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಚಾಳಿಯನ್ನು ಮುಂದುವರಿಸಿದ್ದಾರೆ. ರೈತರಿಗೆ ಪರಿಹಾರ ಕೊಡುವುದಕ್ಕೂ ಸಾಧ್ಯ ಆಗಿಲ್ಲ. ಕುಡಿಯುವ ನೀರಿನ ಹಾಹಾಕಾರ ಇದೆ, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಕೂಡ ಇಲ್ಲ ಎಂದು ಟೀಕಿಸಿದರು. ಮತ್ತೊಂದು ಕಡೆ ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ, ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಆಶಾ ಕಾರ್ಯಕರ್ತರ ಬವಣೆ- ಇವೆಲ್ಲವನ್ನು ಸದನದಲ್ಲಿ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು. ಈ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಿಗೆ ಮಾಡಬೇಕು ಅನ್ನುವ ನಿರ್ಧಾರ ಇವತ್ತು ಆಗಿದೆ ಎಂದು ವಿವರ ನೀಡಿದರು.
    1
    ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟುಗೂಡಿ ಮಾಡಬೇಕು ಎಂಬ ನಿರ್ಧಾರ ಇವತ್ತು ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಎಲ್ಲ ಪ್ರಮುಖರ ಸಭೆ ಇಂದು ನಡೆದಿದೆ. ನಾನು ನಮ್ಮ ವಿಪಕ್ಷ ನಾಯಕರು, ಪಕ್ಷದ ಇತರ ಮುಖಂಡರು, ಜೆಡಿಎಸ್ ವತಿಯಿಂದ ಮಾನ್ಯ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಬೋಜೇಗೌಡರು, ಎರಡು ಪಕ್ಷದ ಪ್ರಮುಖ ಶಾಸಕರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.
ಬೆಳಗಾವಿಯಲ್ಲಿ ಎರಡನೇ ತಾರೀಕಿನಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಯಾವ ಯಾವ ವಿಚಾರಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಬರಗಾಲ ತೀವ್ರವಾಗಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಇಲ್ಲ ಎಂದು ಟೀಕಿಸಿದರು.
₹5,000 ಕೊಡುತ್ತೇವೆ ಅಂತ ಹೇಳಿ ಘೋಷಣೆ ಮಾಡಿ, ನಾಮಕಾವಾಸ್ತೆಗೆ 45,000 ರೈತರಿಗೆ ಹಣ ಅಧರ್ಂಬರ್ಧ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಚಾಳಿಯನ್ನು ಮುಂದುವರಿಸಿದ್ದಾರೆ. ರೈತರಿಗೆ ಪರಿಹಾರ ಕೊಡುವುದಕ್ಕೂ ಸಾಧ್ಯ ಆಗಿಲ್ಲ. ಕುಡಿಯುವ ನೀರಿನ ಹಾಹಾಕಾರ ಇದೆ, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಕೂಡ ಇಲ್ಲ ಎಂದು ಟೀಕಿಸಿದರು.
ಮತ್ತೊಂದು ಕಡೆ ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ, ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಆಶಾ ಕಾರ್ಯಕರ್ತರ ಬವಣೆ- ಇವೆಲ್ಲವನ್ನು ಸದನದಲ್ಲಿ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು. ಈ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಿಗೆ ಮಾಡಬೇಕು ಅನ್ನುವ ನಿರ್ಧಾರ ಇವತ್ತು ಆಗಿದೆ ಎಂದು ವಿವರ ನೀಡಿದರು.
    user_Anil
    Anil
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    11 hrs ago
  • ಲೋಕಾಯುಕ್ತಕ್ಕೆ ದೂರು ಕೆರೆ ಅಭಿವೃದ್ಧಿ ಸಭೆಯಲ್ಲಿ ಶಾಸಕರ ಸಿಟ್ಟು ಲೋಕಾಯುಕ್ತಕ್ಕೆ ದೂರು ಕೆರೆ ಅಭಿವೃದ್ಧಿ ಸಭೆಯಲ್ಲಿ ಶಾಸಕರ ಸಿಟ್ಟು ಕೆರೆ ಎಂದರೆ ಕೇವಲ ನೀರಿನ ತಾಣವಲ್ಲ. ಅದು ಜನರ ಭಾವನೆ, ನೆನಪು, ಬದುಕು. ಅಂತಹ ಕೆರೆಯ ವಿಚಾರದಲ್ಲಿ ಪದೇಪದೇ ಆರೋಪ, ದೂರು, ನೋಟಿಸ್ ಬರುತ್ತಿದ್ದರೆ ಜನಪ್ರತಿನಿಧಿಗೆ ಸಿಟ್ಟು ಬರದೇ ಇರುತ್ತದೆಯೇ? ಎಂದು ಶಾಸಕ ಎಸ್.ಟಿ. ಸೋಮಶೇಖರ್ ಅಧಿಕಾರಿಗಳ ಮುಂದೆಯೇ ತಮ್ಮ ಅಸಮಾಧಾನವನ್ನು ಮುಚ್ಚುಮರೆ ಇಲ್ಲದೆ ಹೊರಹಾಕಿದರು. ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗಲ್ ಹನುಮಂತಯ್ಯ ವಾರ್ಡ್ ವ್ಯಾಪ್ತಿಯ ಗಾಂಧಿನಗರ ಹೊಸಕೆರೆ ಅಭಿವೃದ್ಧಿ ಕುರಿತು ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ರೋಲ್ ಕಾಲ್ ಗಿರಾಕಿಗಳು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕೆರೆಯ ಅಭಿವೃದ್ಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅಧಿಕಾರಿಗಳು ಆತನ ವಿರುದ್ಧ ಲೋಕಾಯುಕ್ತಕ್ಕೆ ಮರು ದೂರು ನೀಡಿ, ಯಾರೂ ಹೆದರಬೇಕಾದ ಅಗತ್ಯವಿಲ್ಲ ಎಂದು ಶಾಸಕರು ಖಡಕ್ ಆಗಿ ಹೇಳಿದರು. ಕೆರೆಯ ವಿಚಾರ ಸ್ಥಳೀಯ ಜನರ ಭಾವನಾತ್ಮಕ ಸಂಬಂಧ ಹೊಂದಿದೆ. ಅದರ ಲಾಭ ಪಡೆಯಲು ಪದೇಪದೇ ಆ ವ್ಯಕ್ತಿ ಕೆರೆಯ ಸುತ್ತಮುತ್ತ ಮನೆ ಕಟ್ಟಿಕೊಂಡಿರುವ ಕುಟುಂಬಗಳಿಗೆ ಅಧಿಕಾರಿಗಳ ಜೊತೆ ಶಾಮೀಲಾಗಿ ನೋಟಿಸ್ ಕೊಡಿಸುತ್ತಿದ್ದಾನೆ ಎಂದು ಆರೋಪಗಳ ಸುರಿಮಳೆಗೈದರು. 2008ಕ್ಕೂ ಮುನ್ನ ಗೆದ್ದಿದ್ದ ಅಭ್ಯರ್ಥಿಯೊಬ್ಬರು ಕೆರೆಯಲ್ಲಿ ಬೋಟ್ ವ್ಯವಸ್ಥೆ ಮಾಡಿಸಿ ಪ್ರವಾಸಿ ತಾಣವಾಗಿಸುವುದಾಗಿ ಭರವಸೆ ನೀಡಿದ್ದರು. ಅದು ಇನ್ನೂ ಈಡೇರಿಲ್ಲ. ನಾನು ಈವರೆಗೆ ಯಾವೊಬ್ಬ ಅಧಿಕಾರಿಗೂ ಏರು ಧ್ವನಿಯಲ್ಲಿ ಮಾತನಾಡಿಲ್ಲ, ಗೌರವಯುತವಾಗಿ ನಡೆಸಿಕೊಂಡಿದ್ದೇನೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು. ₹8.4 ಕೋಟಿ ಅನುದಾನದಲ್ಲಿ ಕೆರೆಗೆ ತಂತಿಬೇಲಿ, ತಡೆಏರಿ ನಿರ್ಮಾಣ, ಒಳಹರಿವು ಹಾಗೂ ಹೊರಹರಿವು, ಯುಜಿಡಿ ನೀರಿನ ಹರಿವು ತಡೆ, ರಾಜಕಾಲುವೆ ವ್ಯವಸ್ಥೆ ಸುಧಾರಣೆ ಸೇರಿದಂತೆ ಕೆರೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆದ ಆದರೆ ಕೆರೆಯ ದೊಡ್ಡ ಸಮಸ್ಯೆ ಈಗಲೂ ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದುಬರುವ ಕೊಳಚೆ ನೀರಿನ ಸಮಸ್ಯೆ ಗಂಭೀರವಾಗಿದೆ. ಯಾವ ಯಾವ ಭಾಗಗಳಿಂದ ಯುಜಿಡಿ ನೀರು ಕೆರೆಗೆ ಸೇರುತ್ತಿದೆ ಎಂಬುದನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು. ಶ್ರೀಗಂಧ ಕಾವಲ್ ಭಾಗದಿಂದ ಹೇರೋಹಳ್ಳಿ ಕೆರೆ ಮೂಲಕ ಗಾಂಧಿನಗರ ಕೆರೆಗೆ ನೀರು ಹರಿದುಬರುತ್ತಿದೆ. ವಿವಿಧ ಪ್ರದೇಶಗಳಿಂದ ಸೇರುತ್ತಿರುವ ಯುಜಿಡಿ ನೀರನ್ನು ಗುರುತಿಸಿ ಡೈವರ್ಷನ್ ಚಾನಲ್‌ಗೆ ಹರಿಸುವ ಯೋಜನೆ ರೂಪಿಸಬೇಕು. ಮಳೆಗಾಲದಲ್ಲಿ ಹೆಚ್ಚಿನ ನೀರು ಕೆರೆಗೆ ಹರಿದು ಬರುತ್ತಿರುವುದರಿಂದ ಕಲುಷಿತ ನೀರನ್ನು ಬೇರ್ಪಡಿಸಿ ಡೈವರ್ಷನ್ ಚಾನಲ್ ಮೂಲಕ ಬೇರೆಡೆಗೆ ಹರಿಸುವ ವ್ಯವಸ್ಥೆ ಮಾಡಬೇಕು.ಸ್ಥಳೀಯವಾಗಿ ಕೆಎಚ್‌ಬಿ ಅಪಾರ್ಟ್‌ಮೆಂಟ್ ಸೇರಿದಂತೆ ಕೆಲವು ವಸತಿ ಪ್ರದೇಶಗಳಿಂದ ಕೊಳಚೆ ನೀರು ಕೆರೆಗೆ ಸೇರುತ್ತಿರುವ ಆರೋಪ ಕೇಳಿಬಂದಿದೆ ಎಂದರು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ ಶಾಸಕರು, ಗಾಂಧಿನಗರ ಕೆರೆಯ ಸಂರಕ್ಷಣೆ ಹಾಗೂ ಕಲುಷಿತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಜಲಮಂಡಳಿ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ಪ್ರಸಾದ್, ಚಂದ್ರಶೇಖರ್, ಎಇಇಗಳಾದ ದೀಪಕ್, ಯಶಾಂತ್, ಗೀತಾ, ಎಇ ಚಂದನ್, ಜಿಬಿಎ ಎಇಇ ನಟರಾಜ್, ಎಇ ಧನಂಜಯ್, ಘನತ್ಯಾಜ್ಯ ವಿಭಾಗದ ಎಇಇ ಸಿದ್ದರಾಜೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
    1
    ಲೋಕಾಯುಕ್ತಕ್ಕೆ ದೂರು ಕೆರೆ ಅಭಿವೃದ್ಧಿ ಸಭೆಯಲ್ಲಿ ಶಾಸಕರ ಸಿಟ್ಟು
ಲೋಕಾಯುಕ್ತಕ್ಕೆ ದೂರು ಕೆರೆ ಅಭಿವೃದ್ಧಿ ಸಭೆಯಲ್ಲಿ ಶಾಸಕರ ಸಿಟ್ಟು
ಕೆರೆ ಎಂದರೆ ಕೇವಲ ನೀರಿನ ತಾಣವಲ್ಲ. ಅದು ಜನರ ಭಾವನೆ, ನೆನಪು, ಬದುಕು. ಅಂತಹ ಕೆರೆಯ ವಿಚಾರದಲ್ಲಿ ಪದೇಪದೇ ಆರೋಪ, ದೂರು, ನೋಟಿಸ್ ಬರುತ್ತಿದ್ದರೆ ಜನಪ್ರತಿನಿಧಿಗೆ ಸಿಟ್ಟು ಬರದೇ ಇರುತ್ತದೆಯೇ? ಎಂದು ಶಾಸಕ ಎಸ್.ಟಿ. ಸೋಮಶೇಖರ್  ಅಧಿಕಾರಿಗಳ ಮುಂದೆಯೇ ತಮ್ಮ ಅಸಮಾಧಾನವನ್ನು ಮುಚ್ಚುಮರೆ ಇಲ್ಲದೆ ಹೊರಹಾಕಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗಲ್ ಹನುಮಂತಯ್ಯ ವಾರ್ಡ್ ವ್ಯಾಪ್ತಿಯ ಗಾಂಧಿನಗರ ಹೊಸಕೆರೆ ಅಭಿವೃದ್ಧಿ ಕುರಿತು ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು 
ರೋಲ್ ಕಾಲ್ ಗಿರಾಕಿಗಳು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕೆರೆಯ ಅಭಿವೃದ್ಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅಧಿಕಾರಿಗಳು ಆತನ ವಿರುದ್ಧ ಲೋಕಾಯುಕ್ತಕ್ಕೆ ಮರು ದೂರು ನೀಡಿ, ಯಾರೂ ಹೆದರಬೇಕಾದ ಅಗತ್ಯವಿಲ್ಲ ಎಂದು ಶಾಸಕರು ಖಡಕ್ ಆಗಿ ಹೇಳಿದರು.
ಕೆರೆಯ ವಿಚಾರ ಸ್ಥಳೀಯ ಜನರ ಭಾವನಾತ್ಮಕ ಸಂಬಂಧ ಹೊಂದಿದೆ. ಅದರ ಲಾಭ ಪಡೆಯಲು ಪದೇಪದೇ ಆ ವ್ಯಕ್ತಿ ಕೆರೆಯ ಸುತ್ತಮುತ್ತ ಮನೆ ಕಟ್ಟಿಕೊಂಡಿರುವ ಕುಟುಂಬಗಳಿಗೆ ಅಧಿಕಾರಿಗಳ ಜೊತೆ ಶಾಮೀಲಾಗಿ ನೋಟಿಸ್ ಕೊಡಿಸುತ್ತಿದ್ದಾನೆ ಎಂದು ಆರೋಪಗಳ ಸುರಿಮಳೆಗೈದರು.
2008ಕ್ಕೂ ಮುನ್ನ ಗೆದ್ದಿದ್ದ ಅಭ್ಯರ್ಥಿಯೊಬ್ಬರು ಕೆರೆಯಲ್ಲಿ ಬೋಟ್ ವ್ಯವಸ್ಥೆ ಮಾಡಿಸಿ ಪ್ರವಾಸಿ ತಾಣವಾಗಿಸುವುದಾಗಿ ಭರವಸೆ ನೀಡಿದ್ದರು. ಅದು ಇನ್ನೂ ಈಡೇರಿಲ್ಲ. ನಾನು ಈವರೆಗೆ ಯಾವೊಬ್ಬ ಅಧಿಕಾರಿಗೂ ಏರು ಧ್ವನಿಯಲ್ಲಿ ಮಾತನಾಡಿಲ್ಲ, ಗೌರವಯುತವಾಗಿ ನಡೆಸಿಕೊಂಡಿದ್ದೇನೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
₹8.4 ಕೋಟಿ ಅನುದಾನದಲ್ಲಿ ಕೆರೆಗೆ ತಂತಿಬೇಲಿ, ತಡೆಏರಿ ನಿರ್ಮಾಣ, ಒಳಹರಿವು ಹಾಗೂ ಹೊರಹರಿವು, ಯುಜಿಡಿ ನೀರಿನ ಹರಿವು ತಡೆ, ರಾಜಕಾಲುವೆ ವ್ಯವಸ್ಥೆ ಸುಧಾರಣೆ ಸೇರಿದಂತೆ ಕೆರೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆದ ಆದರೆ ಕೆರೆಯ ದೊಡ್ಡ ಸಮಸ್ಯೆ ಈಗಲೂ ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದುಬರುವ ಕೊಳಚೆ ನೀರಿನ ಸಮಸ್ಯೆ ಗಂಭೀರವಾಗಿದೆ. ಯಾವ ಯಾವ ಭಾಗಗಳಿಂದ ಯುಜಿಡಿ ನೀರು ಕೆರೆಗೆ ಸೇರುತ್ತಿದೆ ಎಂಬುದನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಶ್ರೀಗಂಧ ಕಾವಲ್ ಭಾಗದಿಂದ ಹೇರೋಹಳ್ಳಿ ಕೆರೆ ಮೂಲಕ ಗಾಂಧಿನಗರ ಕೆರೆಗೆ ನೀರು ಹರಿದುಬರುತ್ತಿದೆ. ವಿವಿಧ ಪ್ರದೇಶಗಳಿಂದ ಸೇರುತ್ತಿರುವ ಯುಜಿಡಿ ನೀರನ್ನು ಗುರುತಿಸಿ ಡೈವರ್ಷನ್ ಚಾನಲ್‌ಗೆ ಹರಿಸುವ ಯೋಜನೆ ರೂಪಿಸಬೇಕು. ಮಳೆಗಾಲದಲ್ಲಿ ಹೆಚ್ಚಿನ ನೀರು ಕೆರೆಗೆ ಹರಿದು ಬರುತ್ತಿರುವುದರಿಂದ ಕಲುಷಿತ ನೀರನ್ನು ಬೇರ್ಪಡಿಸಿ ಡೈವರ್ಷನ್ ಚಾನಲ್ ಮೂಲಕ ಬೇರೆಡೆಗೆ ಹರಿಸುವ ವ್ಯವಸ್ಥೆ ಮಾಡಬೇಕು.ಸ್ಥಳೀಯವಾಗಿ ಕೆಎಚ್‌ಬಿ ಅಪಾರ್ಟ್‌ಮೆಂಟ್ ಸೇರಿದಂತೆ ಕೆಲವು ವಸತಿ ಪ್ರದೇಶಗಳಿಂದ ಕೊಳಚೆ ನೀರು ಕೆರೆಗೆ ಸೇರುತ್ತಿರುವ ಆರೋಪ ಕೇಳಿಬಂದಿದೆ ಎಂದರು.
ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ ಶಾಸಕರು, ಗಾಂಧಿನಗರ ಕೆರೆಯ ಸಂರಕ್ಷಣೆ ಹಾಗೂ ಕಲುಷಿತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಜಲಮಂಡಳಿ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ಪ್ರಸಾದ್, ಚಂದ್ರಶೇಖರ್, ಎಇಇಗಳಾದ ದೀಪಕ್, ಯಶಾಂತ್, ಗೀತಾ, ಎಇ ಚಂದನ್, ಜಿಬಿಎ ಎಇಇ ನಟರಾಜ್, ಎಇ ಧನಂಜಯ್, ಘನತ್ಯಾಜ್ಯ ವಿಭಾಗದ ಎಇಇ ಸಿದ್ದರಾಜೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
    user_Asha N
    Asha N
    Bengaluru Urban, Karnataka•
    11 hrs ago
  • ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶ ಎಂ. ಆನಂದ್ ರವರು ಸಸಿಗೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು.
    4
    ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶ ಎಂ. ಆನಂದ್ ರವರು ಸಸಿಗೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು.
    user_Shivraj
    Shivraj
    Singer ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    12 hrs ago
  • : ಕೆಪಿಎಸ್ಸಿ ಹಗರಣದಲ್ಲಿ ಯಾರೇ ಇದ್ದರೂ ಕ್ರಮ --ಪ್ರಿಯಾಂಕ್ ಖರ್ಗೆ : ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ದೂರು ನೀಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಇನ್ನೂ ಪತ್ರವನ್ನು ನೋಡಿಲ್ಲ. ಇನ್ನು ಮೂರು ಪ್ರಕರಣಗಳನ್ನು ದಾಖಲಿಸುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಕಾನೂನು ಅಭಿಪ್ರಾಯ ಪಡೆದು ಪರಿಶೀಲನೆ ನಡೆಸಲಾಗುವುದು ಎಂದರು. ಅವರು ಇಂದು ತಾಲ್ಲೂಕಿನ ಜಾನಪದ ಲೋಕದಲ್ಲಿ ನಡೆದ ಶಾಸಕ ದರ್ಶನ್ ಧ್ರುವನಾರಾಯಣ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೆಪಿಎಸ್ಸಿ ಹಗರಣ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ (ಆರ್‌ಡಬ್ಲ್ಯುಎಸ್), ಬಿಬಿಎಂಪಿ ಅಥವಾ ಕೆಎಎಸ್ ನೇಮಕಾತಿ ವಿಚಾರ ಯಾವುದೇ ಇರಲಿ, ಸರ್ಕಾರ ಹಿಂದೆ ಸರಿಯುವುದಿಲ್ಲ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಐಟಿ ಮತ್ತು ಇಡಿ ಅಧಿಕಾರಿಗಳು ಬಿಬಿಎಂಪಿ ಎಂದಾಕ್ಷಣ ಡಿ.ಕೆ. ಶಿವಕುಮಾರ್ ಅವರ ಹೆಸರು, ಆರ್‌ಡಬ್ಲ್ಯುಎಸ್ ಎಂದಾಕ್ಷಣ ನನ್ನ ಹೆಸರು ಪ್ರಸ್ತಾಪಿಸುತ್ತಾರೆ. ಆದರೆ ಇವತ್ತಲ್ಲ ನಾಳೆ ಸತ್ಯ ಹೊರಬರಲೇಬೇಕು  ಈಗಾಗಲೇ ಸಿಐಡಿ, ಎಸ್‌ಐಟಿ ತನಿಖೆಗಳು ನಡೆದಿವೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಪ್ರಕರಣದ ಅಂತಿಮ ಪರಿಣಾಮ ಯಾರ ಮನೆ ಬಾಗಿಲಿಗೆ ಹೋಗಿ ಬೀಳಲಿದೆ ಎಂಬುದನ್ನು ಕಾದು ನೋಡೋಣ  ಎಂದರು ವಿರೋಧ ಪಕ್ಷಗಳ ನಾಯಕರ ವಿರುದ್ಧ ಇಡಿ ಸಾವಿರಾರು ಪ್ರಕರಣಗಳನ್ನು ದಾಖಲಿಸಿದೆ. ಆದರೆ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಶಿಕ್ಚೆಯ ಪ್ರಮಾಣ ಶೇ2 ಕ್ಕೂ ಕಡಿಮೆಯಿದೆ. ಇದು ರಾಜಕೀಯ ದುರುದ್ದೇಶವಲ್ಲವೇ! ಇದನ್ನು ನಾವು ಹೇಳುತ್ತಿಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸಂಸತ್ತಿನಲ್ಲಿ ಈ ಅಂಕಿ-ಅಂಶಗಳನ್ನು ನೀಡಿದ್ದಾರೆ. ಸಾವಿರಾರು ದಾಳಿಗಳನ್ನು ನಡೆಸಿ ಬಳಿಕ ಆರೋಪಿಗಳನ್ನು ಕೈಬಿಡುವ ಮೂಲಕ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ, ಇಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ. ಚುನಾವಣೆ ಹತ್ತಿರ ಬಂದಾಗ ಇಡಿ ದಾಳಿಗಳು ಹೆಚ್ಚಾಗುತ್ತವೆ. ಬಿಜೆಪಿ, ಮೋದಿ ಹಾಗೂ ಅಮಿತ್ ಶಾ ವಿರುದ್ಧ ಮಾತನಾಡಿದರೆ ಇಡಿ ಕಾಟ ತಪ್ಪಿದ್ದಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗೃಹ ಸಚಿವ ಪ್ರಿಯಾಂಕಾ ಖರ್ಗೆ ಹರಿಹಾಯ್ದರು.
    1
    : ಕೆಪಿಎಸ್ಸಿ ಹಗರಣದಲ್ಲಿ ಯಾರೇ ಇದ್ದರೂ ಕ್ರಮ --ಪ್ರಿಯಾಂಕ್ ಖರ್ಗೆ :
ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ದೂರು ನೀಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಇನ್ನೂ ಪತ್ರವನ್ನು ನೋಡಿಲ್ಲ. ಇನ್ನು ಮೂರು ಪ್ರಕರಣಗಳನ್ನು ದಾಖಲಿಸುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಕಾನೂನು ಅಭಿಪ್ರಾಯ ಪಡೆದು ಪರಿಶೀಲನೆ ನಡೆಸಲಾಗುವುದು ಎಂದರು.
ಅವರು ಇಂದು ತಾಲ್ಲೂಕಿನ ಜಾನಪದ ಲೋಕದಲ್ಲಿ ನಡೆದ ಶಾಸಕ ದರ್ಶನ್ ಧ್ರುವನಾರಾಯಣ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕೆಪಿಎಸ್ಸಿ ಹಗರಣ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ (ಆರ್‌ಡಬ್ಲ್ಯುಎಸ್), ಬಿಬಿಎಂಪಿ ಅಥವಾ ಕೆಎಎಸ್ ನೇಮಕಾತಿ ವಿಚಾರ ಯಾವುದೇ ಇರಲಿ, ಸರ್ಕಾರ ಹಿಂದೆ ಸರಿಯುವುದಿಲ್ಲ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಐಟಿ ಮತ್ತು ಇಡಿ ಅಧಿಕಾರಿಗಳು ಬಿಬಿಎಂಪಿ ಎಂದಾಕ್ಷಣ ಡಿ.ಕೆ. ಶಿವಕುಮಾರ್ ಅವರ ಹೆಸರು, ಆರ್‌ಡಬ್ಲ್ಯುಎಸ್ ಎಂದಾಕ್ಷಣ ನನ್ನ ಹೆಸರು ಪ್ರಸ್ತಾಪಿಸುತ್ತಾರೆ. ಆದರೆ ಇವತ್ತಲ್ಲ ನಾಳೆ ಸತ್ಯ ಹೊರಬರಲೇಬೇಕು 
ಈಗಾಗಲೇ ಸಿಐಡಿ, ಎಸ್‌ಐಟಿ ತನಿಖೆಗಳು ನಡೆದಿವೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಪ್ರಕರಣದ ಅಂತಿಮ ಪರಿಣಾಮ ಯಾರ ಮನೆ ಬಾಗಿಲಿಗೆ ಹೋಗಿ ಬೀಳಲಿದೆ ಎಂಬುದನ್ನು ಕಾದು ನೋಡೋಣ 
ಎಂದರು
ವಿರೋಧ ಪಕ್ಷಗಳ ನಾಯಕರ ವಿರುದ್ಧ ಇಡಿ ಸಾವಿರಾರು ಪ್ರಕರಣಗಳನ್ನು ದಾಖಲಿಸಿದೆ. ಆದರೆ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಶಿಕ್ಚೆಯ ಪ್ರಮಾಣ ಶೇ2 ಕ್ಕೂ ಕಡಿಮೆಯಿದೆ. ಇದು ರಾಜಕೀಯ ದುರುದ್ದೇಶವಲ್ಲವೇ! ಇದನ್ನು ನಾವು ಹೇಳುತ್ತಿಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸಂಸತ್ತಿನಲ್ಲಿ ಈ ಅಂಕಿ-ಅಂಶಗಳನ್ನು ನೀಡಿದ್ದಾರೆ.
ಸಾವಿರಾರು ದಾಳಿಗಳನ್ನು ನಡೆಸಿ ಬಳಿಕ ಆರೋಪಿಗಳನ್ನು ಕೈಬಿಡುವ ಮೂಲಕ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ, ಇಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ. ಚುನಾವಣೆ ಹತ್ತಿರ ಬಂದಾಗ ಇಡಿ ದಾಳಿಗಳು ಹೆಚ್ಚಾಗುತ್ತವೆ. ಬಿಜೆಪಿ, ಮೋದಿ ಹಾಗೂ ಅಮಿತ್ ಶಾ ವಿರುದ್ಧ ಮಾತನಾಡಿದರೆ ಇಡಿ ಕಾಟ ತಪ್ಪಿದ್ದಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗೃಹ ಸಚಿವ ಪ್ರಿಯಾಂಕಾ ಖರ್ಗೆ ಹರಿಹಾಯ್ದರು.
    user_ರಮೇಶ್.ಆರ್
    ರಮೇಶ್.ಆರ್
    ಚನ್ನಪಟ್ಟಣ, ರಾಮನಗರ, ಕರ್ನಾಟಕ•
    10 hrs ago
  • ನ್ಯಾಯಾಲಯದ ಆವರಣದಲ್ಲೇ ಕೊಲೆ ಆರೋಪಿಗೆ ಭೀಕರ ದಾಳಿ ಗುಂಡಿನ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ; ಗಂಭೀರ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು ನ್ಯಾಯಾಲಯದ ಆವರಣದಲ್ಲೇ ಕೊಲೆ ಆರೋಪಿಗೆ ಭೀಕರ ದಾಳಿ ಗುಂಡಿನ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ; ಗಂಭೀರ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು
    1
    ನ್ಯಾಯಾಲಯದ ಆವರಣದಲ್ಲೇ ಕೊಲೆ ಆರೋಪಿಗೆ ಭೀಕರ ದಾಳಿ
ಗುಂಡಿನ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ; ಗಂಭೀರ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು
ನ್ಯಾಯಾಲಯದ ಆವರಣದಲ್ಲೇ ಕೊಲೆ ಆರೋಪಿಗೆ ಭೀಕರ ದಾಳಿ
ಗುಂಡಿನ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ; ಗಂಭೀರ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು
    user_Veega News Kannada
    Veega News Kannada
    Software company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.