Shuru
Apke Nagar Ki App…
ಭದ್ರಾವತಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅದ್ದೂರಿಯಾಗಿ ಸ್ವಾಗತಿಸಿದ ಶಾಸಕರಾದ ಬಿಕೆ ಸಂಗಮೇಶ್ ಇಂದು ತರೀಕೆರೆಯ ಶಾಸಕರಾದ ಶ್ರೀನಿವಾಸ್ ಅವರ ಪುತ್ರಿ ರಚನಾ ಅವರ ಮದುವೆ ಕಾರ್ಯಕ್ರಮಕ್ಕೆ ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪಾಲ್ಗೊಳ್ಳುವುದಕ್ಕೆ ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಭದ್ರಾವತಿಯ ಬೈಪಾಸ್ ರಸ್ತೆಯ ಆಂಜನೇಯ ದೇವಸ್ಥಾನ ಮುಂಬಾಗ ಮಾರ್ಗ ಮಧ್ಯೆ ಕೆ ಆರ್ ಐ ಡಿ ಎಲ್ ಅಧ್ಯಕ್ಷರು ಹಾಗೂ ಭದ್ರಾವತಿ ಶಾಸಕರಾದ ಬಿ ಕೆ ಸಂಗಮೇಶ್ವರ ಅವರು ಸ್ವಾಗತಿಸದರು ಹಾಗೂ ಮುಖ್ಯಮಂತ್ರಿಗಳ ಜೊತೆಗೂಡಿ ವದು ವರರರಿಗೆ ಶುಭಕೋರಲಾಯಿತು . ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸುಪುತ್ರದ ಯತೀಂದ್ರ ಸಿದ್ದರಾಮಯ್ಯ , ನಗರಾಡಳಿತ ಸಚಿವರಾದ ಬೈರತಿ ಸುರೇಶ್ , ಉನ್ನತ ಶಿಕ್ಷಣ ಸಚಿವರಾದ ಎಂ ಸಿ ಸುಧಾಕರ್ , ಚಿಕ್ಕಮಂಗಳೂರು ಕ್ಷೇತ್ರದ ಶಾಸಕರಾದ ಡಿ ತಮ್ಮಯ್ಯ , ಹಾಗೂ ಇನ್ನೂ ಕೆಲ ರಾಜ್ಯ ನಾಯಕರು ಜಿಲ್ಲಾ ಮುಖಂಡರುಗಳು ಹಾಗೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು .
ಪ್ರವೀಣ್ ಅಧ್ಯಕ್ಷ NAYAKA
ಭದ್ರಾವತಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅದ್ದೂರಿಯಾಗಿ ಸ್ವಾಗತಿಸಿದ ಶಾಸಕರಾದ ಬಿಕೆ ಸಂಗಮೇಶ್ ಇಂದು ತರೀಕೆರೆಯ ಶಾಸಕರಾದ ಶ್ರೀನಿವಾಸ್ ಅವರ ಪುತ್ರಿ ರಚನಾ ಅವರ ಮದುವೆ ಕಾರ್ಯಕ್ರಮಕ್ಕೆ ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪಾಲ್ಗೊಳ್ಳುವುದಕ್ಕೆ ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಭದ್ರಾವತಿಯ ಬೈಪಾಸ್ ರಸ್ತೆಯ ಆಂಜನೇಯ ದೇವಸ್ಥಾನ ಮುಂಬಾಗ ಮಾರ್ಗ ಮಧ್ಯೆ ಕೆ ಆರ್ ಐ ಡಿ ಎಲ್ ಅಧ್ಯಕ್ಷರು ಹಾಗೂ ಭದ್ರಾವತಿ ಶಾಸಕರಾದ ಬಿ ಕೆ ಸಂಗಮೇಶ್ವರ ಅವರು ಸ್ವಾಗತಿಸದರು ಹಾಗೂ ಮುಖ್ಯಮಂತ್ರಿಗಳ ಜೊತೆಗೂಡಿ ವದು ವರರರಿಗೆ ಶುಭಕೋರಲಾಯಿತು . ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸುಪುತ್ರದ ಯತೀಂದ್ರ ಸಿದ್ದರಾಮಯ್ಯ , ನಗರಾಡಳಿತ ಸಚಿವರಾದ ಬೈರತಿ ಸುರೇಶ್ , ಉನ್ನತ ಶಿಕ್ಷಣ ಸಚಿವರಾದ ಎಂ ಸಿ ಸುಧಾಕರ್ , ಚಿಕ್ಕಮಂಗಳೂರು ಕ್ಷೇತ್ರದ ಶಾಸಕರಾದ ಡಿ ತಮ್ಮಯ್ಯ , ಹಾಗೂ ಇನ್ನೂ ಕೆಲ ರಾಜ್ಯ ನಾಯಕರು ಜಿಲ್ಲಾ ಮುಖಂಡರುಗಳು ಹಾಗೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು .
More news from ಕರ್ನಾಟಕ and nearby areas
- ಚಿತ್ರದುರ್ಗ: ಗ್ರಾಮ ದೇವರ ಜಾತ್ರೆಯಲ್ಲಿ ಅತ್ತಿಗೆ-ನಾದಿನಿಯರ ಡಿಚ್ಚಿ ಟಗರು ಕಾಳಗದಂತೆ ಅತ್ತಿಗೆ ನಾದಿನಿಯರು ಡಿಚ್ಚಿ ಕೊಡೆಯೋ ಜಾತ್ರೆ ತಲೆ-ತಲೆ ಹಿಡಿದು ಡಿಚ್ಚಿ ಹೊಡೆಯೋ ಅತ್ತಿಗೆ-ನಾದಿನಿಯರು ಡಿಚ್ಚಿ ಹೊಡೆದು ದೇವರ ಸಮ್ಮುಖ ಹಳೆಯ ವೈಮನಸ್ಸು ಮರೆಯುವ ಜಾತ್ರೆ ಜಾತ್ರೆಲಿ ಡಿಚ್ಚಿ ಹೊಡೆಯದಿದ್ರೆ ಹೆಣ್ಣು ಮಕ್ಕಳಿಗೆ ತಲೆ ನೋವು ಬರುತ್ತೆ ಎಂಬ ನಂಬಿಕೆ ಬುಡಕಟ್ಟು ಸಂಸ್ಕೃತಿಯ ಜಾತ್ರೆಯಲ್ಲಿ ಡಿಚ್ಚಿ ವಿಶೇಷ ಆಚರಣೆ ಅಹೋಬಲ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ವಿಶಿಷ್ಠ ಆಚರಣೆ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ CN ಮಾಳಿಗೆ ಗ್ರಾಮ ಜಾತ್ರೆಗೆ ಬರುವ ಮದುವೆಯಾಗಿ ಹೋದ ಹೆಣ್ಣು ಮಕ್ಕಳು ಅತ್ತಿಗೆಯರೊಂದಿಗೆ ಆದ ವೈಮನಸ್ಸು ಮರೆಯಲು ವಿಶಿಷ್ಠ ಆಚರಣೆ ಡಿಚ್ಚಿ ಆಚರಿಸಿದ್ರೆ ಮಳೆ-ಬೆಳೆ ಚೆನ್ನಾಗಿ ಆಗುತ್ತೆ ಅನ್ನೋದು ಗ್ರಾಮಸ್ಥರ ನಂಬಿಕೆ ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮಸ್ಥರ ಮಣೇವು ಆಚರಣೆ ಮಣೇವು ಮೂಲಕ ಸಕ್ಕರೆ ಬಾಳೆಹಣ್ಣು, ಹಂಚಿ ಹರಕೆ ತೀರಿಸುವ ಗ್ರಾಮಸ್ಥರು ಕುರಿಗಳಿಂದ ಅಹೋಬಲ ನರಸಿಂಹ ಸ್ವಾಮಿಗೆ ಪ್ರದಕ್ಷಿಣೆ ರೋಗ-ರುಜಿನ ಬಾರದಿರಲಿ ಅಂತಾ ಪ್ರದಕ್ಷಿಣೆ ಹಾಕಿ ದೇವರಿಗೆ ಮೊರೆ1
- ಹೊಳಲ್ಕೆರೆ ಪಟ್ಟಣದ ಮೈರಾಡದ ತೋಟದಲ್ಲಿನ ಬಣವೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ದಾವಣಗೆರೆ ರಸ್ತೆಯ ಮೈರಾಡದ ಪಾನಿಪುರಿ ಮಂಜುನಾಥ್ ಅವರ ತೋಟದಲ್ಲಿನ ಹುಲ್ಲಿನ ಬಣವೆಗೆ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆಗಿ 300 ಪೆಂಡಿ ಹುಲ್ಲಿನ ಬವಣೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದರಿಂದಾಗಿ ಮಂಜುನಾಥ್ ಅವರಿಗೆ ಅಪಾರ ನಷ್ಟ ಅನುಭವಿಸಿದೆ1
- ಚಳ್ಳಕೆರೆ ತ್ಯಾಗರಾಜ ನಗರದಲ್ಲಿ “ಮೈ ಚೋಟ ಸ್ಕೂಲ್” – ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೊಸ ಹೆಜ್ಜೆ 🌟 MY CHHOTA SCHOOL ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ಬೆಂಗಳೂರು ರಾಜಧಾನಿಯಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದ ದಂಪತಿಗಳು ಕೋವಿಡ್ ಲಾಕ್‌ಡೌನ್ ಸಂದರ್ಭ ಊರಿಗೆ ಮರಳಿ ಬಂದು, ತಮ್ಮ ಮಕ್ಕಳಿಗೆ ಹಾಗೂ ಸ್ಥಳೀಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿ “ಮೈ ಚೋಟ ಸ್ಕೂಲ್” ನರ್ಸರಿ, ಎಲ್‌ಕೆಜಿ ಹಾಗೂ ಯುಕೆಜಿ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಬಹುತೇಕ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೂ ಪರೀಕ್ಷೆ ನಡೆಸಿ, ಬುದ್ಧಿವಂತ ಮಕ್ಕಳಿಗೆ ಮಾತ್ರ ಅವಕಾಶ ನೀಡುವ ಪದ್ಧತಿ ಇರುವ ಸಂದರ್ಭದಲ್ಲೂ, ದಂಪತಿಗಳಾದ ಚಂದ್ರಕಲಾ – ವೀರೇಶ್ ಅವರು ಅಕ್ಷರ ಪರಿಚಯವಿಲ್ಲದ ಮಕ್ಕಳಿಗೂ ಪ್ರವೇಶ ನೀಡಿ, ಮೂಲಭೂತ ಶಿಕ್ಷಣದ ಮೂಲಕ ಅವರನ್ನು ರೂಪಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷಾ ಪಾಠಗಳ ಜೊತೆಗೆ ಗಣಿತ, ಪರಿಸರ ಜ್ಞಾನ, ಸ್ವಯಂ ಪರಿಚಯ ಹಾಗೂ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಸಮಗ್ರ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣದ ಜೊತೆಗೆ ಶಿಸ್ತು, ದೇಶಭಕ್ತಿ ಮತ್ತು ಉತ್ತಮ ಸಂಸ್ಕಾರಗಳನ್ನು ಮಕ್ಕಳಲ್ಲಿ ಬೆಳೆಸಲಾಗುತ್ತಿದೆ. ಪ್ರಾರಂಭದಲ್ಲಿ 18 ಮಕ್ಕಳಿಂದ ಆರಂಭವಾದ ಶಾಲೆ, ಮೂರನೇ ವರ್ಷಕ್ಕೆ 53 ಮಕ್ಕಳ ದಾಖಲಾತಿಯೊಂದಿಗೆ ಉತ್ತಮ ಬೆಳವಣಿಗೆ ಸಾಧಿಸಿದೆ. 🎯 ಶಾಲೆಯ ಪ್ರಮುಖ ವೈಶಿಷ್ಟ್ಯಗಳು: ✅ ಭಾಷಾ ಕೌಶಲ್ಯ (ಕನ್ನಡ / ಇಂಗ್ಲಿಷ್ / ಹಿಂದಿ) ✅ ಅಕ್ಷರ ಗುರುತಿಸುವಿಕೆ ✅ ಗಣಿತದ ಮೂಲಭೂತ ಪಾಠಗಳು ✅ ಪರಿಸರ ಜ್ಞಾನ ✅ ಸ್ವಯಂ ಪರಿಚಯ ✅ ಕ್ರಿಯಾತ್ಮಕ ಚಟುವಟಿಕೆಗಳು ✅ ಸಾಮಾಜಿಕ ಹಾಗೂ ದೈಹಿಕ ಬೆಳವಣಿಗೆ ✅ ಒಳಾಂಗಣ ಮತ್ತು ಹೊರಾಂಗಣ ಆಟಗಳು ✅ ವ್ಯಾಯಾಮ ಮತ್ತು ಸಂಸ್ಕಾರ ಶಿಕ್ಷಣ 📌 ನರ್ಸರಿ, ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿದೆ. 📍 ಸ್ಥಳ: ತ್ಯಾಗರಾಜ ನಗರ, ಚಳ್ಳಕೆರೆ 📞 ಸಂಪರ್ಕಿಸಿ: ಚಂದ್ರಕಲಾ – 8310045314 ಗಿರೀಶ್ – 9902216878 🌞 ಜೊತೆಗೆ ಟಾಲೆಂಟ್ ಪಾರ್ಕ್ – ಸಮರ್ ಕ್ಯಾಂಪ್ 🌞 📅 ಏಪ್ರಿಲ್ 10 ರಿಂದ ಮೇ 10ರವರೆಗೆ 📍 1ನೇ ಕ್ರಾಸ್, ಟಿ.ಆರ್. ನಗರ, ಮಾಸ್ಟರ್ ಮೈಂಡ್ ಕಂಪ್ಯೂಟರ್ ಸೆಂಟರ್ ಹತ್ತಿರ, ಚಳ್ಳಕೆರೆ ⚠️ ಸೀಮಿತ ಆಸನಗಳು – ಕೂಡಲೇ ನೋಂದಣಿ ಮಾಡಿಕೊಳ್ಳಿ 👨👩👧👦 ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ – ಇಂದೇ ಸೇರಿಸಿ!1
- ಕರ್ನಾಟಕ ರಕ್ಷಣಾ ವೇದಿಕೆ. ಕುಂದಾಪುರ ತಾಲೂಕು ಘಟಕದ. ನೂತನ ಅಧ್ಯಕ್ಷರ ಆಯ್ಕೆ. ಕಾರ್ಯಕ್ರಮ. ಜಿಲ್ಲಾಧ್ಯಕ್ಷರಾದ ಅ ರಾ ಪ್ರಭಾಕರ್ ಪೂಜಾರಿ. ನೇತೃತ್ವದಲ್ಲಿ ಸ್ಥಳೀಯ ಕನ್ನಡಪರ ನಾಯಕರ ಸಹಯೋಗದಲ್ಲಿ1
- ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಕಡು ಬಡತನದ ಬಡವರ ಅಕ್ರಮ ಮನೆಗಳನ್ನು,ಸಕ್ರಮ ಮನೆಗಳನ್ನಾಗಿ ಪಟ್ಟಾ ನೀಡುವಂತೆ ಶಾಸಕರಿಗೆ ಸಾರ್ವಜನಿಕರು ಮನವಿ ಮಾಡಿದಾಗ ಶಾಸಕ ಯಾಸೀರ್ ಖಾನ್ ಪಠಾಣ ಈ ಹಿಂದೆ ಅಧಿಕಾರದಲ್ಲಿದ್ದವರು ಸುಮಾರ 4 ಸಾವಿರ ಅರ್ಜಿಗಳನ್ನು ತಿರಸ್ಕರಿಸಿದ್ದು ಅದರಲ್ಲಿ ತಾವು ಶಾಸಕರಾಗಿ ಆಯ್ಕೆಯಾದ ನಂತರ 41 ಫಲಾನುಭವಿಗಳಿಗೆ ಪಟ್ಟಾ ನೀಡಲು ಅರ್ಹರಾಗಿರುತ್ತಾರೆ ಎಂದು ಅಧಿಕಾರಿಗಳಿಗೆ ತಾಕಿತ್ತು ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತೆ ಅಧಿಕಾರಿಗಳು ಪ್ರಾಮಾಣಿಕ ಕೆಲಸವನ್ನು ನಿರ್ವಹಿಸಬೇಕೆಂದು ಶಾಸಕರು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದರು ಈ ಸಂದರ್ಭದಲ್ಲಿ ಉಭಯ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಫಲಾನುಭವಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು,1
- ಶಿಗ್ಗಾಂವಿ: ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ನಾವು ನಮ್ಮ ಮಕ್ಕಳನ್ನ ತಯಾರಿ ಮಾಡಬೇಕಿದ್ದು ತಂತ್ರಜ್ಞಾನದ ಜ್ಞಾನವನ್ನ ನಮ್ಮ ಮಕ್ಕಳು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜನಯ್ಯಾ ಎಂ ಎಚ್ ಹೇಳಿದರು.ಪಟ್ಟಣದ ಪೀನೀಕ್ಸ್ ಇಂಟರ್ ನ್ಯಾಷನಲ್ ಸಮೂಹ ಶಿಕ್ಷಣ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ 2025-26 ರ ವಿಜ್ಞಾನದ ಕ್ರೀಯಾತ್ಮಕ ಚಟುವಟಿಕೆಗಳ ಕಾರ್ಯಾಗಾರವನ್ನ (ವಸ್ತು ಪ್ರದರ್ಶನ) ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆ ಮತ್ತು ಕೌಶಲ್ಯಗಳನ್ನ ಪ್ರೇರೇಪಿಸುವ ಮೂಲಕ ಇಂದಿನ ತಂತ್ರಜ್ಞಾನದ ಮಹತ್ವದ ಜ್ಞಾನ ನಮ್ಮ ಮಕ್ಕಳಿಗೆ ಅವಶ್ಯವಾಗಿದ್ದು ಪೀನೀಕ್ಸ್ ಶಾಲೆ ದಾಪುಗಾಲು ಇಟ್ಟಿದೆ. ದೇಶಾಭಿಮಾನ ಎಲ್ಲರಿಗೂ ಮುಖ್ಯ, ವಿಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಮುಖ್ಯವಾಗಿದೆ. ನಮ್ಮ ಆರೋಗ್ಯದ ದೃಷ್ಟಿಯಿಂದಲೂ ವಿಜ್ಞಾನ ಬಹಳಷ್ಟು ಸಹಕಾರಿಯಾಗಿದೆ. ನಮ್ಮ ವಿಜ್ಞಾನದ ಜ್ಞಾನ ನಮ್ಮ ಜೀವನಕ್ಕೆ ಪೂರಕವಾಗಿರಬೇಕೆ ಹೊರತು ಮಾರಕವಾಗಿರಬಾರದು. ಇಂತಹ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು ಎಂದರು. ಸಂಸ್ಥೆಯ ಕಾರ್ಯದರ್ಶಿ ಡಾ. ರಾಣಿ ತಿರ್ಲಾಪೂರ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋ ಮನೋಭಾವ ಸೃಜನಶೀಲತೆ ಮತ್ತು ಕುತೂಹಲವನ್ನು ಬೆಳೆಸುವ ಒಂದು ಪ್ರಮುಖ ಶೈಕ್ಷಣಿಕ ಕಾರ್ಯಕ್ರಮವಾಗಿದೆ. ಇದು ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಲು ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ತಂಡದ ಕೆಲಸದ ಮೌಲ್ಯವನ್ನು ಕಲಿಯಲು ವೇದಿಕೆ ಕಲ್ಪಿಸುತ್ತದೆ. ಶಾಲೆಗಳಲ್ಲಿ ಆಯೋಜಿಸಲಾಗುವ ಈ ಪ್ರದರ್ಶನಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ವಿಜ್ಞಾನ ಮತ್ತು ತಂತ್ರಜ್ಞಾನದತ್ತ ಆಸಕ್ತಿ ಮೂಡಿಸುತ್ತವೆ ಎಂದರು. ಪ್ರಾಚಾರ್ಯ ಗಿರಿಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ನಡೆದ ಶಾಲೆಯ ವಿದ್ಯಾರ್ಥಿಗಳಿಂದ ರಚನೆಗೊಂಡ ವಿಜ್ಞಾನ ವಸ್ತುಪ್ರದರ್ಶನಗಳು ಎಲ್ಲರ ಗಮನ ಸೆಳೆದವು. ಸಂಸ್ಥೆಯ ಅದ್ಯಕ್ಷ ಡಾ. ಎಂ ಎಂ ತಿರ್ಲಾಪೂರ, ಉಪಾದ್ಯಕ್ಷ ನರಹರಿ ಕಟ್ಟಿ, ಕಾರ್ಯದರ್ಶಿ ಡಾ. ರಾಣಿ ತಿರ್ಲಾಪೂರ, ನಿರ್ದೇಶಕರಾದ ಸಿದ್ದನಗೌಡ ಪಾಟೀಲ, ಸುಮಿತ್ರಾ ಪಾಟೀಲ, ಲಕ್ಷ್ಮೀಬಾಯಿ ಕಟ್ಟಿ, ಸೇರಿದಂತೆ ಶಾಲೆಯ ಶಿಕ್ಷಕರು ಸಿಬ್ಬಂದಿಗಳು ಇದ್ದರು. ವಿದ್ಯಾರ್ಥಿಗಳಾದ ಹರ್ಷಿತಾ ಕಟ್ಟಿ ಸಂಗಡಿಗರು ಪ್ರಾರ್ಥಿಸಿದರು.4
- Post by ಮಂಜು ಪಾಟೀಲ1
- ಶಿಗ್ಗಾವಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಮಟ್ಟದ ಆತ್ಮರಕ್ಷಣಾ ಕಲೆಯನ್ನು ಕಲಿಯುವುದು ಇಂದಿನ ಕಾಲದ ಅವಶ್ಯಕತೆಯಾಗಿದೆ ಕರಾಟೆ ತರಬೇತಿಯು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಎಂದು ಕಾಂಗ್ರೆಸ್ ಮುಖಂಡ ಮುನ್ನಾ ಪಠಾಣ ಹೇಳಿದರು. ಪಟ್ಟಣದ ಡಾ| ಅಂಬೇಡ್ಕರ ಭವನದಲ್ಲಿ ಲಯನ್ ಮಾರ್ಷಲ್ ಆರ್ಟ್ಸ್ನ ಶಾಟೋಕಾನ್ ಕರಾಟೆ ಡೋ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬ್ಲ್ಯಾಕ್ ಬೆಲ್ಟ್ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರಾಟೆ ಕೇವಲ ಹೊಡೆದಾಟದ ಕಲೆಯಲ್ಲ, ಅದೊಂದು ಶಿಸ್ತಿನ ಜೀವನ ಕ್ರಮ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಸ್ಥಿರತೆ ಬಹಳ ಮುಖ್ಯವಾಗಿರುವುದರಿಂದ ಪಾಲಕರು ಮಕ್ಕಳಿಗೆ ಇಂತಹ ಕಲೆಗಳನ್ನು ಕಲಿಸಲು ಮುಂದಾಗಬೇಕು ಎಂದು ಹೇಳಿದರು. ಗ್ಯಾರಂಟಿ ಸಮೀತಿಯ ಅಧ್ಯಕ್ಷ ಎಸ್.ಎಪ್ ಮಣಕಟ್ಟಿ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭಾನ್ವಿತ ಕರಾಟೆ ಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸಿರುವ ಶಾಟೋಕಾನ್ ಕರಾಟೆ ಡೋ ಸಂಸ್ಥೆಯಯ ಕಾರ್ಯ ಸ್ಲಾಘನೀಯವಾಗಿದೆ. ಇಂದು ಬ್ಲ್ಯಾಕ್ ಬೆಲ್ಟ್ ಪಡೆದ ಸಾಧಕರು ಇಷ್ಟಕ್ಕೆ ತೃಪ್ತರಾಗದೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ನಾಡಿಗೆ ಕೀರ್ತಿ ತರಬೇಕು. ಪೋಷಕರು ತಮ್ಮ ಮಕ್ಕಳ ಕ್ರೀಡಾಸಕ್ತಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ತರಬೇತಿ ಮುಗಿಸಿದ ಕರಾಟೆ ಪಟುಗಳಿಗೆ ಅಧಿಕೃತವಾಗಿ 'ಬ್ಲ್ಯಾಕ್ ಬೆಲ್ಟ್' ಹಾಗೂ ಸಾಧನಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಗೌಸಖಾನ ಮುನಸಿ, ಮಂಜು ತಿಮ್ಮಾಪುರ, ಅಣ್ಣಪ್ಪ ಲಮಾಣಿ, ಮುನ್ನಾ ಲಕ್ಷಮೇಶ್ವರ, ಶಂಕರಗೌಡ ಪಾಟೀಲ, ಮಂಜುನಾಥ ಹಿರೂರ, ಬಾಬರ ಬಾವೋಜಿ, ಶಂಬು ನೆರ್ತಿ, ಈರಣ್ಣ ಬಳಿಗಾರ, ಕರಾಟೆ ತರಬೇತುದಾರರಾದ ಹನುಮಂತ ಗದಗ, ಬಸವರಾಜ ಕುಲಕರ್ಣಿ, ಶ್ರೇಯಸ್ ಕಲಾಲ, ಚಂದ್ರು ಕಲ್ಲಕಟ್ಟಿ ಮೊಹನ ಗದಗ, ಅರುಣ ಪ್ರಭಾಳಕರ, ಜಯಂಗೀರ ಬೇಗ್ ಮಿರ್ಜಾ ಸೇರಿದಂತೆ ಇತರರಿದ್ದರು.4
- Post by ಗಿರೀಶ್ B2