Shuru
Apke Nagar Ki App…
ಮಹಿಳಾ ಬಿಲ್‌ಗೆ ಎಲ್ಲಾ ಪಕ್ಷಗಳು ಬೆಂಬಲ ನೀಡಲು ಜೆಡಿಎಸ್ ರಾಯಚೂರಿನಲ್ಲಿ ಆಗ್ರಹ ಮಹಿಳೆಯರಿಗೆ ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಬಿಲ್ ಅನ್ನು ತ್ವರಿತವಾಗಿ ಪಾಸ್ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬುಧವಾರ ಆಗ್ರಹಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ಅನುಕಂಪವನ್ನು ತೋರಿಸುವುದಷ್ಟೇ ಅಲ್ಲದೆ, ಲಿಂಗ ತಾರತಮ್ಯವಿಲ್ಲದೆ ಸಮಾನ ಹಕ್ಕುಗಳನ್ನು ನೀಡುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಎನ್‌ಡಿಎ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಜನರ ಮನಸ್ಸಿನಲ್ಲಿ ಉಳಿಯುವ ಪ್ರಯತ್ನ ಮಾಡುತ್ತಿರುವುದರಿಂದಲೇ ಕೆಲವು ಪಕ್ಷಗಳು ವಿರೋಧಿಸುತ್ತಿವೆ ಎಂದು ಆರೋಪಿಸಿದ ಅವರು, ಈ ರೀತಿಯ ವಿರೋಧವು ಸೂಕ್ತವಲ್ಲ ಎಂದರು.
K2 kannada News
ಮಹಿಳಾ ಬಿಲ್‌ಗೆ ಎಲ್ಲಾ ಪಕ್ಷಗಳು ಬೆಂಬಲ ನೀಡಲು ಜೆಡಿಎಸ್ ರಾಯಚೂರಿನಲ್ಲಿ ಆಗ್ರಹ ಮಹಿಳೆಯರಿಗೆ ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಬಿಲ್ ಅನ್ನು ತ್ವರಿತವಾಗಿ ಪಾಸ್ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬುಧವಾರ ಆಗ್ರಹಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ಅನುಕಂಪವನ್ನು ತೋರಿಸುವುದಷ್ಟೇ ಅಲ್ಲದೆ, ಲಿಂಗ ತಾರತಮ್ಯವಿಲ್ಲದೆ ಸಮಾನ ಹಕ್ಕುಗಳನ್ನು ನೀಡುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಎನ್‌ಡಿಎ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಜನರ ಮನಸ್ಸಿನಲ್ಲಿ ಉಳಿಯುವ ಪ್ರಯತ್ನ ಮಾಡುತ್ತಿರುವುದರಿಂದಲೇ ಕೆಲವು ಪಕ್ಷಗಳು ವಿರೋಧಿಸುತ್ತಿವೆ ಎಂದು ಆರೋಪಿಸಿದ ಅವರು, ಈ ರೀತಿಯ ವಿರೋಧವು ಸೂಕ್ತವಲ್ಲ ಎಂದರು.
More news from ಕರ್ನಾಟಕ and nearby areas
- ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ದಲಿತ ಶಕ್ತಿಪಡೆ ಸಂಘಟನೆ ವತಿಯಿಂದ ಭೀಮ್ ಜಯಂತಿ ಸಂಭ್ರಮವನ್ನು ಏಪ್ರಿಲ್ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಶಕ್ತಿಪಡೆ ಸಂಘಟನೆಯ ಜಿಲ್ಲಾಧ್ಯಕ್ಷ ಆನಂದ್ ರಾಜ್ ಬುಧವಾರ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು,ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸ್ಟೇಷನ್ ಸರ್ಕಲ್ ವೃತ್ತದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಜಾಥಾದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಯುವಕರು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.1
- BIG NEWS || ನಕಲಿ ವೈದ್ಯರೇ ಎಚ್ಚರ! ಸೀಲ್ ಒಡೆದರೆ ಜೈಲು ಗ್ಯಾರಂಟಿ: ಡಿಎಚ್‌ಓ ಸುರೇಂದ್ರ ಬಾಬು ಖಡಕ್ ವಾರ್ನಿಂಗ್ ಲಿಂಗಸುಗೂರು: ತಾಲೂಕಿನಲ್ಲಿ ನಕಲಿ ವೈದ್ಯರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಈಗ 'ಸರ್ಜರಿ'ಗೆ ಸಿದ್ಧವಾಗಿದೆ. "ಕ್ಲಿನಿಕ್ ಸೀಲ್ ಮಾಡಿದ ಮೇಲೂ ಮತ್ತೆ ಬಾಗಿಲು ತೆರೆದರೆ ಮುಲಾಜಿಲ್ಲದೆ ಜೈಲಿಗೆ ಅಟ್ಟುತ್ತೇವೆ" ಎಂದು ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ. ಸುರೇಂದ್ರ ಬಾಬು ನಕಲಿ ವೈದ್ಯರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಪರವಾನಿಗೆ ಇಲ್ಲದಿದ್ದರೆ ಅದು ಅಪರಾಧ! ಲಿಂಗಸುಗೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಕೆಪಿಎಂಇ (KPME) ಪರವಾನಿಗೆ ಇಲ್ಲದೆ ರಾಜಾರೋಷವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಕಠಿಣ ನಿಲುವು ತಳೆದಿದ್ದಾರೆ. "ಪರವಾನಿಗೆ ಇಲ್ಲದೆ ಪ್ರಾಕ್ಟಿಸ್ ಮಾಡುವುದು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದಂತೆ. ಇದು ಅಕ್ಷಮ್ಯ ಅಪರಾಧ" ಎಂದು ಅವರು ಗುಡುಗಿದ್ದಾರೆ. ಸೀಲ್ ಒಡೆದರೆ ಸುಮ್ಮನಿರಲ್ಲ! ಇಲಾಖೆಯಿಂದ ದಾಳಿ ನಡೆಸಿ ಕ್ಲಿನಿಕ್‌ಗಳನ್ನು ಸೀಲ್ ಮಾಡಿದರೂ, ಕೆಲವರು ಕಾನೂನು ಬಾಹಿರವಾಗಿ ಮತ್ತೆ ಕ್ಲಿನಿಕ್ ಓಪನ್ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಎಚ್‌ಓ, "ಸೀಲ್ ತೆಗೆಯುವುದು ಗಂಭೀರ ಅಪರಾಧ. ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಸಹಾಯಕ ಆಯುಕ್ತರ ಸಹಯೋಗದೊಂದಿಗೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು" ಎಂದರು. ಹಳ್ಳಿಹಳ್ಳಿಗಳಲ್ಲೂ ನಿರಂತರ ದಾಳಿ ಕೇವಲ ಪಟ್ಟಣ ಮಾತ್ರವಲ್ಲದೆ ತಾಲೂಕಿನ ಹಟ್ಟಿ, ಗುರುಗುಂಟ, ಆನೆಹೊಸೂರು, ಮುದಗಲ್, ಮಸ್ಕಿ, ನಾಗಲಾಪುರ, ನಾಗರಾಳ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿಯೂ ನಕಲಿ ವೈದ್ಯರ ಜಾಲ ಹರಡಿದೆ. ಈ ಜಾಲವನ್ನು ಬೇರುಸಹಿತ ಕಿತ್ತೆಸೆಯುವವರೆಗೂ ನಮ್ಮ ಇಲಾಖೆಯ ದಾಳಿ ನಿರಂತರವಾಗಿರಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಔಷಧಿ ಸಂಗ್ರಹದ ಮೇಲೂ ಕಣ್ಣು ನಕಲಿ ವೈದ್ಯರು ನಿಯಮ ಮೀರಿ ಔಷಧಿಗಳನ್ನು ಸಂಗ್ರಹಿಸುತ್ತಿರುವುದು ಪತ್ತೆಯಾಗಿದೆ. "ಈ ಔಷಧಿಗಳು ಎಲ್ಲಿಂದ ಪೂರೈಕೆಯಾಗುತ್ತಿವೆ? ಯಾರು ನೀಡುತ್ತಿದ್ದಾರೆ? ಎಂಬ ಬಗ್ಗೆ ಔಷಧಿ ನಿಯಂತ್ರಕರ (Drug Controller) ಗಮನಕ್ಕೆ ತರಲಾಗಿದೆ. ಮೂಲವನ್ನೇ ಕತ್ತರಿಸಲು ನಾವು ಪ್ಲ್ಯಾನ್ ಮಾಡಿದ್ದೇವೆ" ಎಂದು ತಿಳಿಸಿದರು. ಏಪ್ರಿಲ್ 29ಕ್ಕೆ ನಿರ್ಣಾಯಕ ಸಭೆ: "ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಏಪ್ರಿಲ್ 29ರಂದು ಮಹತ್ವದ ಸಭೆ ನಡೆಯಲಿದ್ದು, ತಾಲೂಕಿನ ಪ್ರಸಕ್ತ ವಿದ್ಯಮಾನಗಳ ವರದಿಯನ್ನು ಮಂಡಿಸಲಾಗುವುದು. ಜಿಲ್ಲಾಧಿಕಾರಿಗಳ ಸೂಚನೆಯಂತೆ ನಕಲಿ ವೈದ್ಯರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ತಂಡ ಸನ್ನದ್ಧವಾಗಿದೆ" ಎಂದು ಡಾ. ಸುರೇಂದ್ರ ಬಾಬು ಹೇಳಿದರು. "ವರದಿ: ಅಮರೇಶ ಗೋಸ್ಲೆ" ಮುಖ್ಯಾಂಶಗಳು: ಲೈಸೆನ್ಸ್ ಇಲ್ಲದಿದ್ದರೆ ಬೀಳಲಿದೆ ಬೀಗ! ಜಿಲ್ಲಾಧಿಕಾರಿಗಳ ಸಭೆಯ ಬಳಿಕ ಫುಲ್ ಆ್ಯಕ್ಷನ್. ಔಷಧಿ ಸಂಗ್ರಹಿಸುವವರ ವಿರುದ್ಧವೂ ಕೇಸ್ ದಾಖಲು.1
- ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಮೇ ತಿಂಗಳು ಜೂನ್ ತಿಂಗಳಲ್ಲಿ ಜನರು ಹೊರಗೆ ಹೋಗಬಾರದು ಅವಶ್ಯ ಇದ್ರೆ ಮಾತ್ರ ಹೊರಗಡೆ ಹೋಗಬೇಕು ಡಾ ಶಸ್ತ್ರ ಚಿಕಿತ್ಸೆ ವೈದ್ಯರು ಹೇಳಿದ್ದಾರೆ1
- ಬಂಗಾರದ ಪದಕಕ್ಕೆ ಮುತ್ತಿಟ್ಟ ಘತ್ತರಗಿ ಗ್ರಾಮದ ಕುವರಿ. ಅಕ್ಕಮಹಾದೇವಿ ಮಹಿಳಾ ವಿಶ್ವಾವಿದ್ಯಾಲಯದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ1
- ಲೋಕಾಯುಕ್ತ ಬಲೆಗೆ ಕೆರೂರ ಪಿ.ಎಸ್.ಐ. ಭೀಮಪ್ಪ ಕೆರೂರ - ಸುಳ್ಳು ಕೇಸ್ ದಾಖಲಿಸುತ್ತೇನೆಂದು ವ್ಯಕ್ತಿಯೊಬ್ಬನಿಂದ ಲಂಚ ಪಡೆಯುವಾಗ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಪಿ.ಎಸ್.ಐ.ಭೀಮಪ್ಪ ರಬಕವಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳವಾರ ಫಿರ್ಯಾದಿದಾರ ಬೆಳಗಂಟಿ ಕೆರೂರ ನಿವಾಸಿ ಮುತ್ತಪ್ಪ ಹುಲ್ಲಪ್ಪ ನಾಯ್ಕರ ಇವರು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾದಿ ನೀಡಿದ್ದರಲ್ಲಿ, ಎ.17 ರಂದು ಫಿರ್ಯಾದಿಯ ಸ್ನೇಹಿತ ಶಂಕ್ರಪ್ಪ ನೀಲಪ್ಪ ಬೂದಿಹಾಳ ಸಾ:ಕೆರೂರ ಇವನಿಗೆ ಅವನ ಮೋಟರ ಸೈಕಲ್ ನಂ:ಕೆಎ-29 ಇಸಿ-0914 ಸಮೇತ ಕೆರೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂಡಿಸಿ ಅವನಿಗೆ ಇಸ್ಪೀಟ್ ಆಡಿಸಿದ್ದಿಯಾ. ಬಡ್ಡಿ ಆಡಿದ್ದೀಯಾ ಅಂತಾ ಸುಳ್ಳು ಆಪಾದನೆ ಮಾಡಿ ನಿನ್ನ ಮೇಲೆ ಕೇಸ್ ಮಾಡುತ್ತೇವೆ ಅಂತಾ ಹೆದರಿಸಿ ರೂ.1 ಲಕ್ಷ 70 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಎ.18 ರಂದು ರಾತ್ರಿ ಶಂಕ್ರಪ್ಪ ಬೂದಿಹಾಳ ಇವನಿಗೆ ಕೆರೂರ ಪೊಲೀಸ್ ಠಾಣೆಯಿಂದ ಬಿಟ್ಟು ಕಳುಹಿಸಿ ಲಂಚದ ಹಣ ಕೊಟ್ಟು, ಅವನ ಮೋಟರ ಸೈಕಲ್ ನಂ:ಕೆಎ-29 ಇಸಿ-0914 ನೇದ್ದನ್ನು ಬಿಡಿಸಿಕೊಂಡು ಹೋಗಲು ತಿಳಿಸಿ ಲಂಚಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಫಿರ್ಯಾದಿದಾರರು ದೂರು ನೀಡಿದ್ದರಿಂದ ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇಂದು ಬುಧವಾರ ಪ್ರಕರಣದಲ್ಲಿಯ ಆಪಾದಿತರಾದ ಪಿ.ಎಸ್.ಐ. ಭೀಮಪ್ಪ ರಬಕವಿ, ಪೊಲೀಸ್ ಪೇದೆ ಸಂತೋಷ ಬಿರಾದಾರ ಇಬ್ಬರೂ ಕೆರೂರ ಪೊಲೀಸ್ ಠಾಣೆ, ಇವರುಗಳು ಫಿರ್ಯಾದಿಯಿಂದ ಲಂಚದ ಹಣ ರೂ.1 ಲಕ್ಷ 70 ಸಾವಿರ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುತ್ತಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾಂವಿ, ಇವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ. ಸುರೇಶರೆಡ್ಡಿ, ಬಿ.ಎ. ಬಿರಾದಾರ, ಎಂ.ಬಿ. ಬಿರಾದಾರ, ಮತ್ತು ಎನ್. ಆರ್. ಖಿಲಾರೆ, ಪಿಐ-3 ಕರ್ನಾಟಕ ಲೋಕಾಯುಕ್ತ ಬಾಗಲಕೋಟೆ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.1
- Post by Iranna Tarnal1
- ಮಹಿಳೆಯರಿಗೆ ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಬಿಲ್ ಅನ್ನು ತ್ವರಿತವಾಗಿ ಪಾಸ್ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬುಧವಾರ ಆಗ್ರಹಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ಅನುಕಂಪವನ್ನು ತೋರಿಸುವುದಷ್ಟೇ ಅಲ್ಲದೆ, ಲಿಂಗ ತಾರತಮ್ಯವಿಲ್ಲದೆ ಸಮಾನ ಹಕ್ಕುಗಳನ್ನು ನೀಡುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಎನ್‌ಡಿಎ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಜನರ ಮನಸ್ಸಿನಲ್ಲಿ ಉಳಿಯುವ ಪ್ರಯತ್ನ ಮಾಡುತ್ತಿರುವುದರಿಂದಲೇ ಕೆಲವು ಪಕ್ಷಗಳು ವಿರೋಧಿಸುತ್ತಿವೆ ಎಂದು ಆರೋಪಿಸಿದ ಅವರು, ಈ ರೀತಿಯ ವಿರೋಧವು ಸೂಕ್ತವಲ್ಲ ಎಂದರು.1
- BIG NEWS || ಯಾದಗಿರಿಯಲ್ಲಿ ಲೋಕಾಯುಕ್ತ 'ಸರ್ಜರಿ': ಬೈಕ್ ಬಿಡಿಸಲು ಲಂಚಕ್ಕೆ ಕೈಯೊಡ್ಡಿದ್ದ ಟ್ರಾಫಿಕ್ ಪೊಲೀಸ್ ಈಗ ಬಲೆಗೆ! ಯಾದಗಿರಿ: ಜನಸಾಮಾನ್ಯರ ರಕ್ಷಣೆಗೆ ಇರಬೇಕಾದ 'ಖಾಕಿ' ಭ್ರಷ್ಟಾಚಾರದ ಕೆಸರಿಗೆ ಬಿದ್ದಾಗ ಏನಾಗುತ್ತದೆ ಎಂಬುದಕ್ಕೆ ಜಿಲ್ಲೆಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಅಪಘಾತಕ್ಕೀಡಾದ ಬೈಕ್ ಬಿಟ್ಟುಕೊಡಲು ಬರೋಬ್ಬರಿ ₹13,000 ಲಂಚ ಪಡೆಯುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ನಾಗೇಶ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಕಂಬಿ ಎಣಿಸುವಂತಾಗಿದೆ. ಮುದ್ನಾಳ ದೊಡ್ಡ ತಾಂಡಾ ನಿವಾಸಿ ಅಣ್ಣಯ್ಯ ರಾಠೋಡ ಎಂಬುವವರ ಬೈಕ್ ಅಪಘಾತ ಪ್ರಕರಣವೊಂದರಲ್ಲಿ ಠಾಣೆಯ ವಶದಲ್ಲಿತ್ತು. ನ್ಯಾಯಯುತವಾಗಿ ಸಿಗಬೇಕಾದ ಬೈಕ್ ನೀಡಲು ನಾಗೇಶ ಹಣದ ಬೇಡಿಕೆಯಿಟ್ಟಿದ್ದರು. ಅಣ್ಣಯ್ಯ ಅವರು ನೀಡಿದ ದೂರಿನ ಬೆನ್ನತ್ತಿದ ಲೋಕಾಯುಕ್ತ ಡಿವೈಎಸ್‌ಪಿ ಜೆ.ಎಚ್. ಇನಾಮದಾರ್ ಮತ್ತು ಇನ್‌ಸ್ಪೆಕ್ಟರ್ ಸಿದ್ದರಾಯ ಬಳ್ಳೂರಗಿ ಅವರ ತಂಡ, ಠಾಣೆಯ ಕಚೇರಿಯಲ್ಲಿಯೇ ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿ ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದೆ. ಭ್ರಷ್ಟ ಅಧಿಕಾರಿಗಳಿಗೆ ಈ ಕಾರ್ಯಾಚರಣೆ ನಡುಕ ಹುಟ್ಟಿಸಿದೆ.1
- ಆಸ್ತಿಗಾಗಿ ಕಣ್ಣೀರು ಹಾಕಿದ ಜೆ ಎಂ ಕೋರಬು ಸಹೋದರ.! ನ್ಯಾಯಕ್ಕಾಗಿ ಶಾಸಕರಿಗೆ ಅಂಗಲಾಚಿ ಬೇಡಿಕೊಂಡ ಚಂದ್ರಶಾ ಕೊರಬು.!1