Shuru
Apke Nagar Ki App…
ಶಾಸಕರಿಂದ ಶ್ರೀ ಅಂಬಾ ಮಹೋತ್ಸವ ಉತ್ಸವದ ಲಾಂಛನ ಬಿಡುಗಡೆ ಜನವರಿ 2ರಿಂದ ಆರಂಭವಾಗಲಿರುವ ಶ್ರೀ ಅಂಬಾ ಮಹೋತ್ಸವದ ಲಾಂಛನ ಬಿಡುಗಡೆಯನ್ನು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಬಿಡುಗಡೆ ಮಾಡಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಮಂಗಳವಾರ 4 ಗಂಟೆಗೆ ವಿವರಣೆ ನೀಡಿದರು. ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಅಂಬಾ ಮಹೋತ್ಸವಕ್ಕೆ ಸಂಬಂಧಿಸಿದ ಲಾಂಛನ ಬಿಡುಗಡೆ ಮಾಡಿದರು. ಈ ವೇಳೆ ಸಿಂಧನೂರು ತಹಶಿಲ್ದಾರ ಅರುಣ್ ಹೆಚ್ ದೇಸಾಯಿ ಇದ್ದರು.
K2 kannada News
ಶಾಸಕರಿಂದ ಶ್ರೀ ಅಂಬಾ ಮಹೋತ್ಸವ ಉತ್ಸವದ ಲಾಂಛನ ಬಿಡುಗಡೆ ಜನವರಿ 2ರಿಂದ ಆರಂಭವಾಗಲಿರುವ ಶ್ರೀ ಅಂಬಾ ಮಹೋತ್ಸವದ ಲಾಂಛನ ಬಿಡುಗಡೆಯನ್ನು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಬಿಡುಗಡೆ ಮಾಡಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಮಂಗಳವಾರ 4 ಗಂಟೆಗೆ ವಿವರಣೆ ನೀಡಿದರು. ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಅಂಬಾ ಮಹೋತ್ಸವಕ್ಕೆ ಸಂಬಂಧಿಸಿದ ಲಾಂಛನ ಬಿಡುಗಡೆ ಮಾಡಿದರು. ಈ ವೇಳೆ ಸಿಂಧನೂರು ತಹಶಿಲ್ದಾರ ಅರುಣ್ ಹೆಚ್ ದೇಸಾಯಿ ಇದ್ದರು.
More news from Karnataka and nearby areas
- ಚಿತ್ರದುರ್ಗದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಗೀಸರ್ ಸೋರಿಕೆಯಾಗಿ ಉಸಿರುಗಟ್ಟಿ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿಎಸ್ ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೂತನ (20) ಗ್ಯಾಸ್ ಗೀಸರ್ ಸೋರಿಕೆಯಾಗಿ ಮೃತಪಟ್ಟಿದ್ದಾರೆ. ವೈದ್ಯರು ಸಾವು ಖಚಿತ ಪಡಿಸಿ ಶವಾಗಾರಕ್ಕೆ ಸ್ಥಳಾಂತರಿಸಲು ಯತ್ನಿಸಿದ್ದಾರೆ.ಪೋಷಕರು ಪೋಸ್ಟ್ ಮಾರ್ಟಂ ಆಗದೆ ಶವವನ್ನು ಬೈಕ್ ಮೇಲೆ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಮರಣೋತ್ತರ ಪರೀಕ್ಷೆಗೆ ವಿರೋಧಿಸಿ ಶವ ಕೊಂಡೊಯ್ದಿದ್ದಾರೆ. ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.1
- ಚಿತ್ರದುರ್ಗದಲ್ಲಿ ಯುವತಿಯ ಉಸಿರು ನಿಲ್ಲಿಸಿದ ಗ್ಯಾಸ್ ಗೀಜರ್1
- ಚಿತ್ರದುರ್ಗ ಜಿಲ್ಲೆಯಲ್ಲಿ ಬಸ್ಸಿನ ಹಾಗೂ ದ್ವಿಚಕ್ರ ವಾಹನಗಳ ಟ್ರಾಫಿಕ್ ಚಾಲನೆಯಲ್ಲಿ ತೊಂದರೆ ಉಂಟು ಮಾಡುತ್ತಿರುವ ದೃಶ್ಯ1
- ಭೂನೀಲ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಬಾಗೇಪಲ್ಲಿ:- ಪಟ್ಟಣದ ಹೊರವಲಯದ ಭೂನೀಲ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದ್ದು,ಬೆಳ್ಳಗೆ 4 ಘಂಟೆಯಿಂದಲೇ ದೇವಸ್ಥಾನಗಳಲ್ಲಿ ಭಕ್ತಸಾಗರವೇ ಹರಿದುಬಂದಿದೆ. ದೇವಾಲಯಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಸುಪ್ರಭಾತ ಸೇವೆ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿದೆ. ಮುಂಜಾನೆಯಿಂದಲೇ ಭಕ್ತರು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಪ್ರಧಾನ ಅರ್ಚಕ ಪ್ರಕಾಶ್ ರಾವ್ ಮಾತನಾಡಿ ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ವೈಕುಂಠ ಏಕಾದಶಿಯಂದು ದೇವತೆಗಳು ಭೂ ಲೋಕಕ್ಕೆ ಬಂದು ಜಗದೊಡೆಯ ಶ್ರೀವಿಷ್ಣು ದೇವರನ್ನು ಪೂಜಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಹೀಗಾಗಿಯೇ ಈ ದಿನದಂದು ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ನಂಬಿಕೆ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹಾಗೂ ಕುಟುಂಬ ಸಮೇತವಾಗಿ ಬಂದು ದೇವರ ದರ್ಶನ ಪಡೆದರು ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ದೇವಾಲಯದ ಆವರಣವನ್ನು ವಿವಿಧ ಹೂವಿನಿಂದ ಸಿಂಗರಿಸಲಾಗಿದೆ. ಇಂದು ಸಂಜೆಯವರೆಗೆ ಒಂದು ಹದಿನೈದು ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆಯುವ ನಿರೀಕ್ಷೆಯಿದೆ. ಆಂದ್ರಪ್ರದೇಶ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿದ್ದು, ದೇವಾಲಯ ಆಡಳಿತ ಮಂಡಳಿ ಹಾಗೂ ದಾನಿಗಳಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ಆರ್ ವರ್ಣಿ ನೇತೃತ್ವದಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.2
- ಕೇರಳ ಸರ್ಕಾರಕ್ಕೆ ತಲೆಬಾಗಿದ ಕರ್ನಾಟಕ ಸರ್ಕಾರ1
- ದುರ್ಗಶಕ್ತಿ ಚಿತ್ರಕ್ಕೆ ನೃತ್ಯ ಮಾಡಿದ ಮಿಂಚು ಮತ್ತು ಟೀಮ್1
- ಜನವರಿ 2ರಿಂದ ಆರಂಭವಾಗಲಿರುವ ಶ್ರೀ ಅಂಬಾ ಮಹೋತ್ಸವದ ಲಾಂಛನ ಬಿಡುಗಡೆಯನ್ನು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಬಿಡುಗಡೆ ಮಾಡಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಮಂಗಳವಾರ 4 ಗಂಟೆಗೆ ವಿವರಣೆ ನೀಡಿದರು. ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಅಂಬಾ ಮಹೋತ್ಸವಕ್ಕೆ ಸಂಬಂಧಿಸಿದ ಲಾಂಛನ ಬಿಡುಗಡೆ ಮಾಡಿದರು. ಈ ವೇಳೆ ಸಿಂಧನೂರು ತಹಶಿಲ್ದಾರ ಅರುಣ್ ಹೆಚ್ ದೇಸಾಯಿ ಇದ್ದರು.1
- ಗದಗ್ ಜಿಲ್ಲೆಯ ಗಂಗಿಮಡಿಯಲ್ಲಿ ವಿಶ್ವಗುರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆ ಪ್ರದರ್ಶನ1
- ಜುಂಜಪ್ಪನ ಗುಡ್ಡೆ ಅಭಿವೃದ್ಧಿ ಅನುದಾನ ವಿಭಜಿಸಿದರೆ ಉಗ್ರ ಹೋರಾಟ: ಮಗೋಡು ಪ್ರತಾಪ್ ಎಚ್ಚರಿಕೆ ಶಿರಾ: ತಾಲೂಕಿನ ಕಳುವರಹಳ್ಳಿ ಜುಂಜಪ್ಪ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ವಿಭಜಿಸಬಾರದು. ಒಂದು ವೇಳೆ ಹಣವನ್ನು ಎರಡು ಭಾಗ ಮಾಡಲು ಮುಂದಾದರೆ ಕಾಡುಗೊಲ್ಲ ಸಮುದಾಯದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡ ಬಿಜೆಪಿ ಓ ಬಿ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಗೋಡು ಪ್ರತಾಪ್ ಎಚ್ಚರಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಗೂ ಶಿರಾ ಉಪಚುನಾವಣೆಯ ವೇಳೆ ಜುಂಜಪ್ಪನ ಗುಡ್ಡೆ ಅಭಿವೃದ್ಧಿಗಾಗಿ 1 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದರು. ಈ ಹಣವು ಜುಂಜಪ್ಪನ ಗುಡ್ಡೆಯ ಸರ್ವತೋಮುಖ ಅಭಿವೃದ್ಧಿಗಾಗಿ ಮೀಸಲಿಟ್ಟದ್ದಾಗಿದೆ ಎಂದರು. ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಅವರು ಈ ಹಿಂದೆ ಸುದ್ದಿ ಗೋಷ್ಠಿ ನಡೆಸಿ, ಈ 1 ಕೋಟಿ ರೂಪಾಯಿ ಅನುದಾನವನ್ನು ಎರಡು ಭಾಗಗಳಾಗಿ ವಿಂಗಡಿಸಲು ಕೆಲವರು ಸಂಚು ರೂಪಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ಪ್ರಸ್ತಾಪಿಸಿದ್ದರು. ಜುಂಜಪ್ಪನ ಗುಡ್ಡೆಯ ಅಭಿವೃದ್ಧಿಗೆಂದೇ ಮೀಸಲಾಗಿರುವ ಈ ಪೂರ್ಣ ಮೊತ್ತವನ್ನು ಅದೇ ಉದ್ದೇಶಕ್ಕೆ ಬಳಸಬೇಕು ಎಂಬುದು ಸಮುದಾಯದ ಒತ್ತಾಯವಾಗಿದೆ. ಹೋರಾಟದ ಎಚ್ಚರಿಕೆ: "ನಮಗೆ ಸರ್ಕಾರದ ಮೇಲೆ ವಿಶ್ವಾಸವಿದೆ. ಆದರೆ ನಮ್ಮ ಸಮುದಾಯದ ಆರಾಧ್ಯ ದೈವ ಜುಂಜಪ್ಪ ಸ್ವಾಮಿಯ ನೆಲದ ಅಭಿವೃದ್ಧಿಗೆ ಬಂದಿರುವ ಹಣಕ್ಕೆ ಕತ್ತರಿ ಹಾಕುವ ಕೆಲಸ ಮಾಡಬೇಡಿ. ಒಂದು ವೇಳೆ ಈ 1 ಕೋಟಿ ರೂಪಾಯಿಯನ್ನು ಎರಡು ಭಾಗ ಮಾಡಿದರೆ, ಕಾಡುಗೊಲ್ಲ ಸಮುದಾಯವು ಸುಮ್ಮನಿರುವುದಿಲ್ಲ. ಸಮುದಾಯದ ಹಿತದೃಷ್ಟಿಯಿಂದ ಬೀದಿಗಿಳಿದು ಹೋರಾಟ ಮಾಡುವುದು ಖಚಿತ" ಎಂದು ಮಗೋಡು ಪ್ರತಾಪ್ ಈ ಸಂದರ್ಭದಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಕಾಡುಗೋಲ್ಲ ಸಮಾಜದ ಮುಖಂಡರಾದ ಬಂದಕುಂಟೆ ಮಂಜುನಾಥ್ ಮಾಗೋಡ್ ಪ್ರತಾಪ್ ಈರಣ್ಣ ಪಟೇಲ್ ಗೌಡಪ್ಪ ಅಜ್ಜಣ್ಣ ಓಜಗುಂಟೆ ಶ್ರೀಧರ್ ಕರಿಯಪ್ಪ ಮಧು ತಾವರೆಕೆರೆ ಶಿವಣ್ಣ ಮುದ್ದಣ್ಣ ದೊಡ್ಡಿರಪ್ಪ ಮಹೇಶ್ ಪ್ರಸನ್ನ ಶಿವರಾಜ್ ಈರಣ್ಣ ವ್ಯೆ ಕೆ ಸಿದ್ದೇಶ್ ಹರೀಶ್ ಇನ್ನಿತರರು ಉಪಸ್ಥಿತಿ1