Shuru
Apke Nagar Ki App…
ಚಿತ್ರದುರ್ಗ ಜಿಲ್ಲೆಯಲ್ಲಿ ಬಸ್ಸಿನ ಹಾಗೂ ದ್ವಿಚಕ್ರ ವಾಹನಗಳ ಟ್ರಾಫಿಕ್ ಚಾಲನೆಯಲ್ಲಿ ತೊಂದರೆ ಉಂಟು ಮಾಡುತ್ತಿರುವ ದೃಶ್ಯ
Yusuf Bepari
ಚಿತ್ರದುರ್ಗ ಜಿಲ್ಲೆಯಲ್ಲಿ ಬಸ್ಸಿನ ಹಾಗೂ ದ್ವಿಚಕ್ರ ವಾಹನಗಳ ಟ್ರಾಫಿಕ್ ಚಾಲನೆಯಲ್ಲಿ ತೊಂದರೆ ಉಂಟು ಮಾಡುತ್ತಿರುವ ದೃಶ್ಯ
More news from Karnataka and nearby areas
- ಚಿತ್ರದುರ್ಗದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಗೀಸರ್ ಸೋರಿಕೆಯಾಗಿ ಉಸಿರುಗಟ್ಟಿ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿಎಸ್ ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೂತನ (20) ಗ್ಯಾಸ್ ಗೀಸರ್ ಸೋರಿಕೆಯಾಗಿ ಮೃತಪಟ್ಟಿದ್ದಾರೆ. ವೈದ್ಯರು ಸಾವು ಖಚಿತ ಪಡಿಸಿ ಶವಾಗಾರಕ್ಕೆ ಸ್ಥಳಾಂತರಿಸಲು ಯತ್ನಿಸಿದ್ದಾರೆ.ಪೋಷಕರು ಪೋಸ್ಟ್ ಮಾರ್ಟಂ ಆಗದೆ ಶವವನ್ನು ಬೈಕ್ ಮೇಲೆ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಮರಣೋತ್ತರ ಪರೀಕ್ಷೆಗೆ ವಿರೋಧಿಸಿ ಶವ ಕೊಂಡೊಯ್ದಿದ್ದಾರೆ. ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.1
- ಚಿತ್ರದುರ್ಗದಲ್ಲಿ ಯುವತಿಯ ಉಸಿರು ನಿಲ್ಲಿಸಿದ ಗ್ಯಾಸ್ ಗೀಜರ್1
- ಜನವರಿ 2ರಿಂದ ಆರಂಭವಾಗಲಿರುವ ಶ್ರೀ ಅಂಬಾ ಮಹೋತ್ಸವದ ಲಾಂಛನ ಬಿಡುಗಡೆಯನ್ನು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಬಿಡುಗಡೆ ಮಾಡಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಮಂಗಳವಾರ 4 ಗಂಟೆಗೆ ವಿವರಣೆ ನೀಡಿದರು. ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಅಂಬಾ ಮಹೋತ್ಸವಕ್ಕೆ ಸಂಬಂಧಿಸಿದ ಲಾಂಛನ ಬಿಡುಗಡೆ ಮಾಡಿದರು. ಈ ವೇಳೆ ಸಿಂಧನೂರು ತಹಶಿಲ್ದಾರ ಅರುಣ್ ಹೆಚ್ ದೇಸಾಯಿ ಇದ್ದರು.1
- ದುರ್ಗಶಕ್ತಿ ಚಿತ್ರಕ್ಕೆ ನೃತ್ಯ ಮಾಡಿದ ಮಿಂಚು ಮತ್ತು ಟೀಮ್1
- ಕೃಷ್ಣಪುರದಲ್ಲಿ ವೈಕುಂಠ ಏಕಾದಶಿ ಸಡಗರ: ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಕೃಷ್ಣಪುರ: ಇಲ್ಲಿನ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ಅತ್ಯಂತ ಭಕ್ತಿ ಸಡಗರದಿಂದ ಆಚರಿಸಲಾಯಿತು. ಪಾಂಚರಾತ್ರ ಆಗಮ ರೀತ್ಯಾ ಸ್ವಾಮಿಗೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಭಕ್ತರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಧಾರ್ಮಿಕ ವಿಧಿವಿಧಾನಗಳು: ದಿನದ ಆರಂಭದಲ್ಲಿ ಬೆಳಿಗ್ಗೆ 'ಕವಾಟೋದ್ಘಾಟನೆ'ಯೊಂದಿಗೆ ಪೂಜಾ ಕಾರ್ಯಕ್ರಮಗಳು ಚಾಲನೆ ಪಡೆದವು. ನಂತರ ಬೆಳಿಗ್ಗೆ 6:30ಕ್ಕೆ ಸ್ವಾಮಿಗೆ ಸುಪ್ರಭಾತ ಸೇವೆ, ಪ್ರಾಕಾರೋತ್ಸವ, ನೈವೇದ್ಯ ಮತ್ತು ಮಹಾಮಂಗಳಾರತಿಗಳನ್ನು ನೆರವೇರಿಸಲಾಯಿತು. ಬಳಿಕ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ವಿಶೇಷ ಪ್ರಸಾದ ವ್ಯವಸ್ಥೆ: ದೇವಸ್ಥಾನಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಬೆಳಿಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಂದಂತಹ ಎಲ್ಲಾ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಉಚಿತವಾಗಿ ಲಾಡು ವಿತರಣೆ ಹಾಗೂ ಅವಲಕ್ಕಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ನಡೆದ ಕಾರ್ಯಕ್ರಮಗಳು: ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ, ನಂತರ 9:30ಕ್ಕೆ ಉತ್ಸವ ಮೂರ್ತಿಯನ್ನು ಕೆಳಗಿಳಿಸಿ ಸ್ವಾಮಿಗೆ 'ಏಕಾಂತ ಸೇವೆ'ಯನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 'ಚಕ್ರ ಭಜನೆ' ಕಾರ್ಯಕ್ರಮವು ಭಕ್ತರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಅರ್ಚಕರು, "ಪ್ರತಿ ವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿಯನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ," ಎಂದು ತಿಳಿಸಿದರು1
- Post by JAYASIMHA.M.K{JAISEE}1
- ರಾಯಚೂರು ನಗರದ ವಾರ್ಡ ನಂಬರ್ 4 ರ ಮಾವಿನಕೆರೆ ರಸ್ತೆಯಲ್ಲಿ ಅನಧಿಕೃತವಾಗಿ ಕಟ್ಟಿದ ಕಟ್ಟಡಗಳ ತೆರವು ಕಾರ್ಯಚರಣಎ ಮಾಡಲಾಯಿತು. ಈ ವೇಳೆ ಅಗಲಿಕರಣಕ್ಕೆ 25 ಮನೆ, 15 ಕಾಂಪೌಂಡ್ ಸೇರಿ ಹಲವು ಮಳಿಗೆಗಳನ್ನು ಡೆಮಾಲಿಷ್ ಮಾಡಲಾಯಿತು. ರಸ್ತೆ ಎರಡೂ ಬದಿ 20 ಅಡಿ ಡೆಮಾಲಿಷ್ಮಾಡಲಾಗಿದ್ದು ಆದಷ್ಟು ಬೇಗ ರಸ್ತೆ ನಿರ್ಮಾಣ ಕಾಮಗಾರಿ ಆಎಂಬಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.1
- ಜುಂಜಪ್ಪನ ಗುಡ್ಡೆ ಅಭಿವೃದ್ಧಿ ಅನುದಾನ ವಿಭಜಿಸಿದರೆ ಉಗ್ರ ಹೋರಾಟ: ಮಗೋಡು ಪ್ರತಾಪ್ ಎಚ್ಚರಿಕೆ ಶಿರಾ: ತಾಲೂಕಿನ ಕಳುವರಹಳ್ಳಿ ಜುಂಜಪ್ಪ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ವಿಭಜಿಸಬಾರದು. ಒಂದು ವೇಳೆ ಹಣವನ್ನು ಎರಡು ಭಾಗ ಮಾಡಲು ಮುಂದಾದರೆ ಕಾಡುಗೊಲ್ಲ ಸಮುದಾಯದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡ ಬಿಜೆಪಿ ಓ ಬಿ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಗೋಡು ಪ್ರತಾಪ್ ಎಚ್ಚರಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಗೂ ಶಿರಾ ಉಪಚುನಾವಣೆಯ ವೇಳೆ ಜುಂಜಪ್ಪನ ಗುಡ್ಡೆ ಅಭಿವೃದ್ಧಿಗಾಗಿ 1 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದರು. ಈ ಹಣವು ಜುಂಜಪ್ಪನ ಗುಡ್ಡೆಯ ಸರ್ವತೋಮುಖ ಅಭಿವೃದ್ಧಿಗಾಗಿ ಮೀಸಲಿಟ್ಟದ್ದಾಗಿದೆ ಎಂದರು. ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಅವರು ಈ ಹಿಂದೆ ಸುದ್ದಿ ಗೋಷ್ಠಿ ನಡೆಸಿ, ಈ 1 ಕೋಟಿ ರೂಪಾಯಿ ಅನುದಾನವನ್ನು ಎರಡು ಭಾಗಗಳಾಗಿ ವಿಂಗಡಿಸಲು ಕೆಲವರು ಸಂಚು ರೂಪಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ಪ್ರಸ್ತಾಪಿಸಿದ್ದರು. ಜುಂಜಪ್ಪನ ಗುಡ್ಡೆಯ ಅಭಿವೃದ್ಧಿಗೆಂದೇ ಮೀಸಲಾಗಿರುವ ಈ ಪೂರ್ಣ ಮೊತ್ತವನ್ನು ಅದೇ ಉದ್ದೇಶಕ್ಕೆ ಬಳಸಬೇಕು ಎಂಬುದು ಸಮುದಾಯದ ಒತ್ತಾಯವಾಗಿದೆ. ಹೋರಾಟದ ಎಚ್ಚರಿಕೆ: "ನಮಗೆ ಸರ್ಕಾರದ ಮೇಲೆ ವಿಶ್ವಾಸವಿದೆ. ಆದರೆ ನಮ್ಮ ಸಮುದಾಯದ ಆರಾಧ್ಯ ದೈವ ಜುಂಜಪ್ಪ ಸ್ವಾಮಿಯ ನೆಲದ ಅಭಿವೃದ್ಧಿಗೆ ಬಂದಿರುವ ಹಣಕ್ಕೆ ಕತ್ತರಿ ಹಾಕುವ ಕೆಲಸ ಮಾಡಬೇಡಿ. ಒಂದು ವೇಳೆ ಈ 1 ಕೋಟಿ ರೂಪಾಯಿಯನ್ನು ಎರಡು ಭಾಗ ಮಾಡಿದರೆ, ಕಾಡುಗೊಲ್ಲ ಸಮುದಾಯವು ಸುಮ್ಮನಿರುವುದಿಲ್ಲ. ಸಮುದಾಯದ ಹಿತದೃಷ್ಟಿಯಿಂದ ಬೀದಿಗಿಳಿದು ಹೋರಾಟ ಮಾಡುವುದು ಖಚಿತ" ಎಂದು ಮಗೋಡು ಪ್ರತಾಪ್ ಈ ಸಂದರ್ಭದಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಕಾಡುಗೋಲ್ಲ ಸಮಾಜದ ಮುಖಂಡರಾದ ಬಂದಕುಂಟೆ ಮಂಜುನಾಥ್ ಮಾಗೋಡ್ ಪ್ರತಾಪ್ ಈರಣ್ಣ ಪಟೇಲ್ ಗೌಡಪ್ಪ ಅಜ್ಜಣ್ಣ ಓಜಗುಂಟೆ ಶ್ರೀಧರ್ ಕರಿಯಪ್ಪ ಮಧು ತಾವರೆಕೆರೆ ಶಿವಣ್ಣ ಮುದ್ದಣ್ಣ ದೊಡ್ಡಿರಪ್ಪ ಮಹೇಶ್ ಪ್ರಸನ್ನ ಶಿವರಾಜ್ ಈರಣ್ಣ ವ್ಯೆ ಕೆ ಸಿದ್ದೇಶ್ ಹರೀಶ್ ಇನ್ನಿತರರು ಉಪಸ್ಥಿತಿ1
- ಮುಂಬರುವ ಹೋಸ ವರ್ಷದ ದಿನಕ್ಕೆ ನಗರದ ಕಮಿಷನರ್ ಸಾಹೇಬರ ಸಿಂಪಲ್ ಕಡಕ್ ಇಂಟ್ರಕ್ಷನ್ ಇರತ್ತೆ...1