ಅಪ್ರಾಪ್ತ ಬಾಲಕಿಯನ್ನು ಅಪಹರಿಸಲು ಸ್ನೇಹಿತನಿಗೆ ತನ್ನ ಬೈಕ್‌ನೀಡಿ ಸಹಾಯ ಮಾಡಿದ ಆರೋಪಿಗೆ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ಅಪ್ರಾಪ್ತ ಬಾಲಕಿಯನ್ನು ಅಪಹರಿಸಲು ಸ್ನೇಹಿತನಿಗೆ ತನ್ನ ಬೈಕ್‌ನೀಡಿ ಸಹಾಯ ಮಾಡಿದ ಆರೋಪಿಗೆ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ. ಇನ್ನೂ ಆರೋಪಿಯಾದ ಶ್ರೀನಿವಾಸ ಎಂಬಾತ ತನ್ನ ಸ್ನೇಹಿತನಿಗೆ ಬೈಕ್ ನೀಡಿ ಅಪ್ರಾಪ್ತ ಬಾಲಕಿಯನ್ನು ಹೆದರಿಸಿ ಮನೆ ಒಳಗೆ ಅಕ್ರಮ ಪ್ರವೇಶ ಮಾಡಿ ಬಲವಂತವಾಗಿ ಅಪಹರಿಸಕೊಂಡು ಹೋಗಿ ಅತ್ಯಾಚಾರವೆಸಗಲು ತನ್ನ ಸ್ನೇಹಿತನಿಗೆ ಪ್ರಚೋದನೆ ನೀಡಿ ಸಹಾಯ ಮಾಡಿರುತ್ತಾನೆ ಎಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದ್ದು ಅಂದಿನ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಶ್ರೀ.ಕಾಳಿಕೃಷ್ಣ ರವರು ಪ್ರಕರಣದ ತನಿಖೆ ಕೈಗೊಂಡು ಪ್ರಕರಣದಲ್ಲಿನ ಆರೋಪಿಯನ್ನು ಬಂಧಿಸಿ, ತನಿಖೆ ಪೂರೈಸಿ, ಆರೋಪಿಯ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಘನ 2ನೇ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ ರವರು ಪ್ರಕರಣದ ವಿಚಾರಣೆ ನಡೆಸಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಚ್ ಆರ್.ಜಗದೀಶ್ ರವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ. ಪ್ರಕರಣದಲ್ಲಿ ಆರೋಪಿಯ ಮೇಲೆ ಆರೋಪ ಧೃಢಪಟ್ಟ ಮೇರೆಗೆ ಕಲಂ 363, 376(2) (2), 109 ಐಪಿಸಿ ಕಲಂ 4, 6, 17 : 04.08.2026 ರಂದು 20 ವರ್ಷಗಳ ಕಠಿಣ ಸಜೆ ಮತ್ತು 10,000/- ರೂ ದಂಡವನ್ನು ಮಾನ್ಯ ನ್ಯಾಯಾಧೀಶರು ವಿಧಿಸಿ ಆದೇಶಿಸಿರುತ್ತಾರೆ.
ಅಪ್ರಾಪ್ತ ಬಾಲಕಿಯನ್ನು ಅಪಹರಿಸಲು ಸ್ನೇಹಿತನಿಗೆ ತನ್ನ ಬೈಕ್‌ನೀಡಿ ಸಹಾಯ ಮಾಡಿದ ಆರೋಪಿಗೆ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ಅಪ್ರಾಪ್ತ ಬಾಲಕಿಯನ್ನು ಅಪಹರಿಸಲು ಸ್ನೇಹಿತನಿಗೆ ತನ್ನ ಬೈಕ್‌ನೀಡಿ ಸಹಾಯ ಮಾಡಿದ ಆರೋಪಿಗೆ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ. ಇನ್ನೂ ಆರೋಪಿಯಾದ ಶ್ರೀನಿವಾಸ ಎಂಬಾತ ತನ್ನ ಸ್ನೇಹಿತನಿಗೆ ಬೈಕ್ ನೀಡಿ ಅಪ್ರಾಪ್ತ ಬಾಲಕಿಯನ್ನು ಹೆದರಿಸಿ ಮನೆ ಒಳಗೆ ಅಕ್ರಮ ಪ್ರವೇಶ ಮಾಡಿ ಬಲವಂತವಾಗಿ ಅಪಹರಿಸಕೊಂಡು ಹೋಗಿ ಅತ್ಯಾಚಾರವೆಸಗಲು ತನ್ನ ಸ್ನೇಹಿತನಿಗೆ ಪ್ರಚೋದನೆ ನೀಡಿ ಸಹಾಯ ಮಾಡಿರುತ್ತಾನೆ ಎಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದ್ದು ಅಂದಿನ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಶ್ರೀ.ಕಾಳಿಕೃಷ್ಣ ರವರು ಪ್ರಕರಣದ ತನಿಖೆ ಕೈಗೊಂಡು ಪ್ರಕರಣದಲ್ಲಿನ ಆರೋಪಿಯನ್ನು ಬಂಧಿಸಿ, ತನಿಖೆ ಪೂರೈಸಿ, ಆರೋಪಿಯ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಘನ 2ನೇ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ ರವರು ಪ್ರಕರಣದ ವಿಚಾರಣೆ ನಡೆಸಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಚ್ ಆರ್.ಜಗದೀಶ್ ರವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ. ಪ್ರಕರಣದಲ್ಲಿ ಆರೋಪಿಯ ಮೇಲೆ ಆರೋಪ ಧೃಢಪಟ್ಟ ಮೇರೆಗೆ ಕಲಂ 363, 376(2) (2), 109 ಐಪಿಸಿ ಕಲಂ 4, 6, 17 : 04.08.2026 ರಂದು 20 ವರ್ಷಗಳ ಕಠಿಣ ಸಜೆ ಮತ್ತು 10,000/- ರೂ ದಂಡವನ್ನು ಮಾನ್ಯ ನ್ಯಾಯಾಧೀಶರು ವಿಧಿಸಿ ಆದೇಶಿಸಿರುತ್ತಾರೆ.
- ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬ ಶ್ರದ್ಧಾ–ಭಕ್ತಿಯಿಂದ ಆಚರಣೆ ನಗರದ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗ ರುಜೀನಗಳ ಹರಡದಿರಲಿ ಹಾಗೂ ಊರಿನ ಒಳಿತಿಗಾಗಿ ಪ್ರಾರ್ಥಿಸಿ ಆಷಾಢ ಮಾಸದ ಮಂಗಳವಾರ ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬವನ್ನು ಭಕ್ತರು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.. ಯಾವುದೇ ಜಾತಿ ಭೇದವಿಲ್ಲದೆ ಹೋಳಿಗೆ ಅಮ್ಮನನ್ನು ಶತಮಾನಗಳಿಂದಲೂ ಬುಡಕಟ್ಟು ಸಂಪ್ರದಾಯ, ಸಂಸ್ಕೃತಿಯ ನೆಲದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಭಾಗದಲ್ಲಿ ಅಷ್ಟೇ ಅಲ್ಲದೆ ನಗರದಲ್ಲೂ ಸಹ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. . ಪ್ರತಿಯೊಂದು ಹಬ್ಬ, ಆಚರಣೆಗೆ ಅದರದೇ ಆದ ನಂಬಿಕೆ ಇದೆ. ಸಂಪ್ರದಾಯ ಹಾಗೂ ಸಂಸ್ಕೃತಿಯ ನೆಲೆಯಿದೆ. ಅದರಲ್ಲಿ ಹೋಳಿಗೆ ಅಮ್ಮ ಹಬ್ಬ ಕೂಡ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು ಚಳ್ಳಕೆರೆ ನಗರದ ಅಂಬೇಡ್ಕರ್ ನಗರ ಗಾಂಧಿನಗರ ಸೋಮುಗುದ್ದು ರಸ್ತೆ ತ್ಯಾಗರಾಜನಗರ ಹಳೆ ಟೌನ್ ಹೌಸಿಂಗ್ ಬೋರ್ಡ.ಸೇರಿದಂತೆ ನಗರದಲ್ಲಿ ಹೋಳಿಗೆ ತಯಾರಿಸಿ ಅದನ್ನು ಅರಿಸಿಣ, ಕುಂಕುಮ, ಬಳೆ, ಬೇವಿನ ಸೊಪ್ಪು, ತೆಂಗಿನಕಾಯಿ ಹೋಳುಗಳನ್ನು ಮೊರದಲ್ಲಿ ಇಟ್ಟು ಮನೆಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ನಿಗದಿಪಡಿಸಿದ ಮಾರಮ್ಮನ ದೇವಸ್ಥಾನ ಎಲ್ಲಮ್ಮನ. ದೇವಸ್ಥಾನ. ಕಡಿಮೆ ಮಾರಮ್ಮನ ದೇವಸ್ಥಾನ . ಸುಂಕುದ್ ರಸ್ತೆಯ ಮಾರಮ್ಮನ ದೇವಸ್ಥಾನ ಗಳಲ್ಲಿ ಅವುಗಳನ್ನು ಇಟ್ಟು ಸಾಂಕ್ರಾಮಿಕ ರೋಗ ರಜಿನಾ ಬಾರದಂತೆ ಉತ್ತಮ ಮಳೆ ಬೆಳೆಯಾಗಲಿ ಚಿಕ್ಕ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಮಕ್ಕಳನ್ನು ಕಾಪಾಡು ತಾಯಿ ಎಂದು ನಮಿಸಿದರು. ಇನ್ನು ಎಲ್ಲರೂ ಪ್ರಸಾದವನ್ನು ತಾಯಿಗೆ ಅರ್ಪಿಸಿದ ನಂತರ ಒಂದು ಬಿದುರಿನ ಬುಟ್ಟಿಯಲ್ಲಿ ಹೋಳಿಗೆ ಮತ್ತೊಂದು ಬುಟ್ಟಿಯಲ್ಲಿ ಅನ್ನ ಸಾಂಬಾರು ಹಾಗೂ ತೆಂಗಿನಕಾಯಿ ಬಾಳೆಹಣ್ಣು ತುಂಬಿಕೊಂಡು ಊರ ಹೊರಗಿನ ಹಸಿರು ಮರದ ಕೆಳಗೆ ಇಟ್ಟುಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ಧಡಾರ, ಸಿಡುಬು ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟಶಕ್ತಿ ಊರೊಳಗೆ ಬರದಂತೆ ಹಾಗೂ ಕಾಲಕಾಲಕ್ಕೆ ಮಳೆಯಾಗಿ ಊರು ಸಮೃದ್ಧವಾಗಲಿ ಎಂದು ಬೇಡಿಕೊಳ್ಳಾಯಿತು. ಈ ಹೋಳಿಗಮ್ಮ ಹಬ್ಬದಲ್ಲಿ ದಿನಕರ ಹಾಗೂ ಅಂಬೇಡ್ಕರ್ ನಗರದ ಯುವಕರು ವಾಲಗ ವಾಧ್ಯಕ್ಕೆ.ತಕ್ಕ ಹೆಜ್ಜೆ ಹಾಕಿದ್ದರು.1
- ಬಂಗಾರಕ್ಕನಹಳ್ಳಿ ಗಡಿ ದಾಟುವ 'ಹೋಳಿಗೆ ಅಮ್ಮ', ಆಷಾಢದಲ್ಲಿ ಆಚರಿಸಲಾಗುತ್ತೆ ಈ ವಿಶಿಷ್ಟ ಹಬ್ಬ..! ಚಿತ್ರದುರ್ಗ: ಆಷಾಢ ಮಾಸ ಬಂದರೆ ಮಧ್ಯ ಕರ್ನಾಟಕದ ಗ್ರಾಮೀಣ ಭಾಗದಲ್ಲಿ 'ಹೋಳಿಗೆ ಅಮ್ಮ' ಹಬ್ಬ ಆಚರಿಸುವ ಸಂಭ್ರಮ ಮನೆಮಾಡುತ್ತದೆ. ಜೇಷ್ಠ ಹಾಗೂ ಆಷಾಢ ಮಾಸ ರೈತಾಪಿ ಜನರಿಗೆ ಬಿತ್ತುವ ಕಾಲ. ಈ ಮಾಸದ ಮಂಗಳವಾರ ಅಥವಾ ಶುಕ್ರವಾರ ಅನುಕೂಲವಾದ ಯಾವುದಾದರೂ ಒಂದು ದಿನ ಮೀಸಲಿಟ್ಟು ಭಯ ಭಕ್ತಿಯಿಂದ 'ಹೋಳಿಗೆ ಅಮ್ಮ'ನ ಹಬ್ಬ ಆಚರಿಸುವುದು ವಾಡಿಕೆ. ಚಿತ್ರದುರ್ಗ ತಾಲೂಕಿನ ಬಂಗಾರಕ್ಕನಹಳ್ಳಿ ಹಾಗೂ ಇತರ ಗ್ರಾಮಗಳ ಜನ ತಮ್ಮದೇ ಆದ ಬೇಡಿಕೆಗಳನ್ನು ಸಲ್ಲಿಸುವ ಮೂಲಕ ಈ ಹಬ್ಬ ಆಚರಿಸುತ್ತಾರೆ. ಆಯಾ ಊರ ಮುಂದಿನ ಗಡಿ (ಎಲ್ಲೆ) ಇರುವ ಒಂದು ಬೇವಿನ ಮರದ ಕೆಳಗೆ ಹೋಳಿಗೆ ಎಡೆಯನ್ನು ಇಟ್ಟು ಅಮ್ಮನನ್ನು ಕಳಿಸಿ, ಕೈ ಮುಗಿದು ಹಿಂದಿರುಗಿ ನೋಡದಂತೆ ಬರುವುದು ಸಂಪ್ರದಾಯ. ಹಬ್ಬದ ಆಚರಣೆ ಗೊತ್ತಾದ ದಿನ ಬೆಳಗ್ಗಿನಿಂದಲೇ ಮನೆಯ ಮಹಿಳೆಯರು ಹೋಳಿಗೆ ಮಾಡಿ ಹಬ್ಬದ ಸಿದ್ಧತೆಯಲ್ಲಿ ತೊಡಗುತ್ತಾರೆ. ಪುರುಷರು ಸ್ನಾನ ಮಾಡಿ ಪೂಜೆಗೆ ಸಜ್ಜಾಗುತ್ತಾರೆ. ಒಂದು ಪುಟ್ಟ ಮೊರದಲ್ಲಿ ಹೋಳಿಗೆ, ಕೊಬ್ಬರಿ ಬಟ್ಟಲು, ಬೇವಿನ ಸೊಪ್ಪು, ಬಾಳೆಹಣ್ಣು, ಅರಿಷಿಣ, ಕುಂಕುಮ, ಹಸಿರು ಗಾಜಿನ ಬಳೆ ಇರಿಸುತ್ತಾರೆ. ಇದನ್ನೇ 'ಹೋಳಿಗೆ ಅಮ್ಮ' ಎಂಬ ಹೆಸರಲ್ಲಿ ಪೂಜೆ ಮಾಡುತ್ತಾರೆ. ಜನರನ್ನು, ಹಾಗೂ ಜಾನುವಾರುಗಳನ್ನು ಯಾವುದೇ ಕಾಯಿಲೆ ಬರದಂತೆ ಕಾಪಾಡಮ್ಮ ಎಂದು ಬೇಡಿಕೊಂಡು ಎಲ್ಲರೂ ಆ ಮೊರಕ್ಕೆ ನಮಿಸುತ್ತಾರೆ.1
- ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಹರಪನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀಮತಿ ಲತಾಮಲ್ಲಿಕಾರ್ಜುನರವರಿಗೆ ಸಚಿವೆ ಸ್ಥಾನ ನೀಡಬೇಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ ವಿಜಯನಗರ ಜಿಲ್ಲಾ ಮಹಿಳಾ ಮುಖಂಡರು , ಜಿಲ್ಲಾ ಮುಖಂಡರಾದ ವಿ.ಜಿ.ವೃಷಭೇಂದ್ರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರಿಗೆ ಈ ಮೂಲಕ ಮನವಿ ಮಾಡಿದ್ದಾರೆ. ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಮಾಜಿ ಉಪಮುಖ್ಯಮಂತ್ರಿ ಹಾಗೂ ದಿವಂಗತ ಎಂ.ಪಿ.ಪ್ರಕಾಶರವರ ಪುತ್ರಿಯಾಗಿದ್ದು. ರಾಜ್ಯದಲ್ಲಿ ಕಾಂಗ್ರೇಸ್ ಬಲಗೊಳ್ಳಲು , ಎಂ.ಪಿ.ಪ್ರಕಾಶ ರವರು ಹಾಗೂ ಅವರ ಪುತ್ರ ಎಂ.ಪಿ.ರವಿಯವರು ಶ್ರಮಿಸಿದ್ದಾರೆ. ಅಂತಯೇ ಶ್ರೀಲತಾ ಮಲ್ಲಿಕಾರ್ಜುನ ರವರು , ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಾಸಕರಾಗಿದ್ದು. ಮಹಿಳಾ ಖೋಟದಲ್ಲಿ ಹಾಗೂ ವಿಜಯನಗರ ಜಿಲ್ಲೆಯರೇ ಆದ ಅವರನ್ನು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವೆ ಸ್ಥಾನ ನೀಡಬೇಕಿದೆ. ಇದರಿಂದಾಗಿ ವಿಜಯನಗರ ಉಸ್ತುವಾರಿಯನ್ನು ಸ್ಥಳೀಯರಿಗೆ ನೀಡಿದ , ಹಾಗೂ ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಗೆ ಮಹಿಳಾ ಪ್ರಾತಿನಿಧ್ಯ ನೀಡಿದ ಹೆಗ್ಗಳಿಕೆ ಮುಖ್ಯಮಂತ್ರಿಗಳದ್ದಾಗುತ್ತೆ ಎಂದು ಮಹಿಳಾ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ. ಮತ್ತು ಕಾಂಗ್ರೆಸ್ ಪಕ್ಷದಲ್ಲಿ , ಮಹಿಳೆಯರನ್ನು ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಲು ಪ್ರೇರೇಪಿಸಿದಂತಾಗುತ್ತದೆ. ವೀರಶೈವ ಜಂಗಮ ಸಮುದಾಯದ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಸಚಿವರಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಜಂಗಮ ಸಮಾಜಕ್ಕೆ ಸೂಕ್ತ ಸ್ಥಾನಮಾನಕ್ಕೆ ಗೌರವ ನೀಡಿದ ಕೀರ್ತಿ ಮುಖ್ಯಮಂತ್ರಿಗಳದ್ದಾಗುತ್ತದೆ. ಮತ್ತು ಕಾಂಗ್ರೆಸ್ ಪಕ್ಷವು , ವೀರಶೈವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಕಾರಣ ಕಾಂಗ್ರೇಸ್ ಪಕ್ಷದ ವರಿಷ್ಠರು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ಕೂಲಂಕುಷವಾಗಿ ಪರಾಮರ್ಶಿಸಿ ಸೂಕ್ತ ನಿರ್ಧಾರ ಕೈಗೊಂಡು. ಸಂಪುಟದಲ್ಲಿ ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ , ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇೆಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ , ವಿಜಯನಗರ ಜಿಲ್ಲಾ ಮಹಿಳಾ ಘಟಕ ಈ ಮೂಲಕ. ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ , ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರಲ್ಲಿವಮನವಿ ಮಾಡಿದೆ. ವಂದೇ ಮಾತರಂ ಜಾಗೃತಿ ವೇದಿಕೆಯ ಕೂಡ್ಲಿಗಿ ಹಾಗೂ ವಿಜಯನಗರ ಜಿಲ್ಲಾ ಘಟಕದ ಮಹಿಳಾ ಮುಖಂಡರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಟಿಬಿ ಜಯಚಂದ್ರ ಅವರಿಗೆ ಸಚಿವ ಸ್ಥಾನ ಸಿಗದ ಅಸಮಾಧಾನ ಸ್ಫೋಟ? ನಾಮಿನಿ ಸದಸ್ಯ ಸ್ಥಾನಕ್ಕೆ ರಾಧಾಕೃಷ್ಣ ಗುಡ್‌ಬೈ!1
- ‘ಫ್ರೀಡಂ ಹಬ್ಬ’: ವಿಧಾನಸೌಧದ ಅಂಗಳದಲ್ಲಿ ಇದೇ ಮೊದಲ ಬಾರಿಗೆ ಜನಸಾಮಾನ್ಯರ ಬೃಹತ್ ಸ್ವಾತಂತ್ರ್ಯೋತ್ಸವ ಸಂಭ್ರಮ ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಸರ್ಕಾರಿ ಗಣ್ಯರ ಔಪಚಾರಿಕ ಸಭೆ ಹಾಗೂ ರಜಾದಿನಕ್ಕೆ ಸೀಮಿತಗೊಳಿಸದೆ, ಪ್ರತಿಯೊಬ್ಬ ನಾಗರಿಕನೂ ಭಾಗವಹಿಸುವ ಬೃಹತ್ ಜನೋತ್ಸವವನ್ನಾಗಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಉದ್ದೇಶದಿಂದ ನಗರದಲ್ಲಿ ಇದೇ ಮೊದಲ ಬಾರಿಗೆ ‘ಫ್ರೀಡಂ ಹಬ್ಬ’ (Freedom Habba) ಆಯೋಜನೆ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಅಧಿಕೃತವಾಗಿ ಇದನ್ನು ಘೋಷಿಸಿದ್ದಾರೆ. ಆಗಸ್ಟ್ 15ರಂದು ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಬೆಳಿಗ್ಗೆ ಅಧಿಕೃತ ಧ್ವಜಾರೋಹಣ ಮುಗಿದ ನಂತರ, ಬೆಳಿಗ್ಗೆ 11ರಿಂದ ರಾತ್ರಿ 10 ಗಂಟೆಯವರೆಗೆ ವಿಧಾನಸೌಧದ ಮೆಟ್ಟಿಲುಗಳು ಹಾಗೂ ಸುತ್ತಮುತ್ತಲಿನ ರಸ್ತೆಗಳು ವರ್ಣರಂಜಿತ ಸಾಂಸ್ಕೃತಿಕ ಕಾರಿಡಾರ್ ಆಗಿ ಬದಲಾಗಲಿವೆ. **‘ಫ್ರೀಡಂ ಹಬ್ಬ’ದ ಪ್ರಮುಖ ಆಕರ್ಷಣೆಗಳು** ಇಂಡಿಯಾ ಪೆರೇಡ್: ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ, ಕರ್ನಾಟಕದ ವೈವಿಧ್ಯತೆ ಹಾಗೂ ವಿವಿಧ ಭಾಷಿಕ ಸಮುದಾಯಗಳನ್ನು ಪ್ರತಿನಿಧಿಸುವ 40ಕ್ಕೂ ಹೆಚ್ಚು ತುಕಡಿಗಳಿಂದ ಅದ್ಧೂರಿ ಜಾನಪದ ಮೆರವಣಿಗೆ. * **ಮಕ್ಕಳಿಗಾಗಿ ವಿಧಾನಸೌಧದ ಬಾಗಿಲು ಮುಕ್ತ:** ಇತಿಹಾಸದಲ್ಲೇ ಮೊದಲ ಬಾರಿಗೆ ಮಕ್ಕಳಿಗೆ ವಿಧಾನಸೌಧದ ಒಳಗಡೆ ಹೋಗಿ ಪ್ರಜಾಪ್ರಭುತ್ವದ ಆಡಳಿತ ಕೇಂದ್ರವನ್ನು ಹತ್ತಿರದಿಂದ ನೋಡುವ ಮಾರ್ಗದರ್ಶಿತ ಪ್ರವಾಸ (Guided Tour). ಜೊತೆಗೆ ‘ಮಕ್ಕಳ ಮೇಳ’ ಹಾಗೂ ‘ಚಿಲ್ಡ್ರನ್ಸ್ ಫ್ರೀಡಂ ವಿಲೇಜ್’ ಆಯೋಜನೆ. * **ಲಿವಿಂಗ್ ಮ್ಯೂಸಿಯಂ & ಕರ್ನಾಟಕ ಫ್ರೀಡಂ ಪಾಥ್:** ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಂತಗಳು ಹಾಗೂ ಈ ಹೋರಾಟಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳು ನೀಡಿದ ಅನನ್ಯ ಕೊಡುಗೆಗಳನ್ನು ಬಿಂಬಿಸುವ ಪ್ರದರ್ಶನ ಮಂಟಪಗಳು. * **ಸಂವಿಧಾನ ಚೌಕ:** ಸಂವಿಧಾನ ರಚನಾ ಸಭೆಯ ಅಪರೂಪದ ದಾಖಲೆಗಳ ವೀಕ್ಷಣೆ ಹಾಗೂ ಸಾರ್ವಜನಿಕರಿಂದ ಸಂವಿಧಾನದ ಪ್ರಸ್ತಾವನೆಯ ಸಮೂಹ ವಾಚನ. * **ಸೋಲ್ ಸಂತೆ & 200 ಅಡಿಗಳ ಕಲಾ ಗೋಡೆ:** 120ಕ್ಕೂ ಹೆಚ್ಚು ಸ್ವದೇಶಿ ಉತ್ಪನ್ನ, ಕರಕುಶಲ ಹಾಗೂ ಖಾದ್ಯ ಮಳಿಗೆಗಳು. ನಾಗರಿಕರು ತಮ್ಮ ಕಲ್ಪನೆಯ ಸ್ವಾತಂತ್ರ್ಯವನ್ನು ಚಿತ್ರಿ ಸಲು 200 ಅಡಿಗಳ ಬೃಹತ್ ಸಾರ್ವಜನಿಕ 'ಫ್ರೀಡಂ ವಾಲ್'. * **ಬೃಹತ್ ಸಂಗೀತ ಸಂಜೆ ಹಾಗೂ ಬಾಣಬಿರುಸು:** ಹೆಸರಾಂತ ಕಲಾವಿದರಿಂದ ಕನ್ನಡ ಹಾಗೂ ವಿವಿಧ ಭಾರತೀಯ ಭಾಷೆಗಳ ಸಂಗೀತ ಕಛೇರಿ, ಕೊನೆಯಲ್ಲಿ ವಿಧಾನಸೌಧದ ಮೇಲ್ಭಾಗದಲ್ಲಿ ರೋಮಾಂಚಕ ಪಟಾಕಿ ಪ್ರದರ್ಶನ (Fireworks). ಸಾರ್ವಜನಿಕರು ಕೇವಲ ವೀಕ್ಷಕರಾಗದೆ ಕಲಾವಿದರಾಗಿ, ಸ್ವಯಂಸೇವಕರಾಗಿ ಮತ್ತು ಭಾಗವಹಿಸುವವರಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ವಿವಿಧ ಚಟುವಟಿಕೆಗಳಲ್ಲಿ ನೋಂದಾಯಿಸಿಕೊಳ್ಳಲು ವಿಶೇಷ ವೆಬ್‌ಸೈಟ್ ಹಾಗೂ ಸಹಾಯವಾಣಿಯನ್ನು ಮುಂದಿನ 48 ಗಂಟೆಗಳಲ್ಲಿ ಸರ್ಕಾರ ಪ್ರಕಟಿಸಲಿದೆ.1
- ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ --------------------------- ಚಿಕ್ಕನಾಯಕನಹಳ್ಳಿ: ತಾಲೂಕಿಗೆ ಹೇಮಾವತಿ ನೀರು ಹರಿಸುವ ಕಾಮಗಾರಿ ವಿಳಂಬ ಖಂಡಿಸಿ ಹಾಗೂ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕಳೆದ 7 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನೀರಾವರಿ ಹೋರಾಟ ಸಮಿತಿ ಇಂದು ತಾತ್ಕಾಲಿಕವಾಗಿ ಹಿಂಪಡೆದಿದೆ. ಕಳೆದ ಜುಲೈ 30 ರಿಂದ ಪ್ರಾರಂಭಗೊಂಡಿದ್ದ ಈ ಹೋರಾಟವು ಇಂದು (ಏಳನೇ ದಿನ) ಸುಖಾಂತ್ಯ ಕಂಡಿದೆ. ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ನೀರಾವರಿ ಯೋಜನೆಯ ಕಾಮಗಾರಿಯು ಸಂಪೂರ್ಣವಾಗಿ (ಝೀರೋದಿಂದ ದಬ್ಬೇಘಟ್ಟದವರೆಗೆ) ಮುಕ್ತಾಯಗೊಂಡಿರುವುದನ್ನು ಖಾತರಿಪಡಿಸಿಕೊಂಡ ನಂತರ, ಹೋರಾಟಗಾರರು ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದರು. ಪ್ರತಿಭಟನೆ ಆರಂಭವಾಗುವ ಮೊದಲು ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿತ್ತು. ದಿನಕ್ಕೆ ಕೇವಲ 6 ರಿಂದ 7 ಗಂಟೆಗಳ ಕಾಲ ಕೆಲಸ ನಡೆಯುತ್ತಿದ್ದು, ಒಂದೇ ಒಂದು ಬ್ಲಾಸ್ಟಿಂಗ್ ಹಾಗೂ ಡಿಗ್ಗಿಂಗ್ ಮೆಷಿನ್ ಬಳಸಲಾಗುತ್ತಿತ್ತು. ಆದರೆ, 30 ನೇ ತಾರೀಖಿನಿಂದ ನೀರಾವರಿ ಹೋರಾಟ ಸಮಿತಿಯು ಧರಣಿ ಕುಳಿತ ತಕ್ಷಣವೇ ಆಡಳಿತ ಯಂತ್ರ ಎಚ್ಚೆತ್ತುಕೊಂಡಿತು. ಅಧಿಕಾರಿಗಳು ಯಂತ್ರೋಪಕರಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, ಸತತ 24 ಗಂಟೆಗಳ ಕಾಲ ಹಗಲು-ರಾತ್ರಿ ಕೆಲಸ ಮಾಡಿಸುವ ಮೂಲಕ ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿದ್ದಾರೆ. "ನಾವು ಅಜೆಂಡಾ ಇಟ್ಟುಕೊಂಡು ಬಂದಿದ್ದೆವು; ಕಾಮಗಾರಿ ಮುಗಿಯುವವರೆಗೆ ಜಾಗದಿಂದ ಕದಲುವುದಿಲ್ಲ ಎಂದಿದ್ದೆವು. ಅದರಂತೆ ಇವತ್ತು ಕೆಲಸ ಮುಗಿದಿರುವುದರಿಂದ ಪ್ರತಿಭಟನೆ ಮುಕ್ತಾಯಗೊಳಿಸುತ್ತಿದ್ದೇವೆ" ಎಂದು ಹೋರಾಟಗಾರರು ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ತಹಶೀಲ್ದಾರ್, ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ಗಳು ಹಾಗೂ ಜನಪ್ರತಿನಿಧಿಗಳು ಹೋರಾಟಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಮುಖ್ಯ ನಾಲಾ ಕಾಲುವೆಯಲ್ಲಿ ಗ್ಯಾರೇಹಳ್ಳಿಯವರೆಗೆ ಇರುವ ಹೂಳನ್ನು (ಸ್ಲಶ್) ಮುಂದಿನ 5 ರಿಂದ 6 ದಿನಗಳ ಒಳಗಾಗಿ ಸಂಪೂರ್ಣವಾಗಿ ತೆರವುಗೊಳಿಸಿ ನೀರು ಹರಿಯಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿಯೊಂದು ಹಂತದ ಕಾಮಗಾರಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರತಿ ಸೋಮವಾರ ಸಂಬಂಧಪಟ್ಟ ಮೂರೂ ಯೋಜನೆಗಳ ಅಧಿಕಾರಿಗಳು ಸಭೆ ನಡೆಸಿ, ವರ್ಕ್ ಶೆಡ್ಯೂಲ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸುಧಾರಣೆಗಳ ಹಿನ್ನೆಲೆಯಲ್ಲಿ ಹೋರಾಟಗಾರರು ತಾತ್ಕಾಲಿಕವಾಗಿ ತಮ್ಮ ಧರಣಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. "ಅಧಿಕಾರಿಗಳು ಹಾಗೂ ಶಾಸಕರ ಭರವಸೆಯನ್ನು ನಂಬಿ ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದೇವೆ. ಒಂದು ವೇಳೆ ಕೊಟ್ಟ ಮಾತಿನಂತೆ ಕೆಲಸ ಮುಗಿಸದೆ ನಮಗೆ ಯಾಮಾರಿಸಿದರೆ, ಮುಂದಿನ ದಿನಗಳಲ್ಲಿ ಕುರಿ, ಮೇಕೆಗಳೊಂದಿಗೆ ಬೀದಿಗೆ ಇಳಿದು ಎರಡರಷ್ಟು ಉಗ್ರವಾದ ಹೋರಾಟ ರೂಪಿಸಲಾಗುವುದು" ಎಂದು ಎಚ್ಚರಿಸಿದ್ದಾರೆ. ವಿಜಯದ ಸಂಕೇತವಾಗಿ ಹೋರಾಟಗಾರರು ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಜೈಕಾರ ಕೂಗಿದರು. ಈ 7 ದಿನಗಳ ಅಹೋರಾತ್ರಿ ಹೋರಾಟಕ್ಕೆ ಸಾಥ್ ನೀಡಿದ ವಿವಿಧ ಸಂಘಟನೆಗಳು, ಪೋಲಿಸ್ ಇಲಾಖೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸಿದರು.1
- ಚಿಕ್ಕನಾಯಕನಹಳ್ಳಿಯಲ್ಲಿ ರೈತರ ಹೋರಾಟಕ್ಕೆ ಮೊದಲ ಗೆಲುವು; ಮಾತು ತಪ್ಪಿದರೆ ಮತ್ತೆ ಉಗ್ರ ಹೋರಾಟ: ಹೇಮಾವತಿ ಹೋರಾಟಗಾರರ ಎಚ್ಚರಿಕೆ1
- ಬರ ವೀಕ್ಷಣೆ ನಡೆಸಿದ ಸಚಿವ ಕೆ.ಹೆಚ್ ಮುನಿಯಪ್ಪ; ಬೆಳೆ ವಿಮೆ ಮಾಡಿಸಲು ರೈತರಲ್ಲಿ ಮನವಿ ಬೆಂಗಳೂರು ಗ್ರಾಮಾಂತರ ಜಿಲ್ಲೆ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಸಂದ್ರ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ರಾಗಿ, ಜೋಳ ಬೆಳೆ ಸೇರಿದಂತೆ ವಿವಿಧ ಬೆಳೆಗಳನ್ನು ವೀಕ್ಷಿಸಿ ರೈತರಿಂದ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿ ಜೂನ್, ಜುಲೈ ನಲ್ಲಿ ಕಡಿಮೆ ಮಳೆ ಆಗಿದೆ. ಜೂನ್ 1 ರಿಂದ ಆಗಸ್ಟ್ 4 ವರೆಗೆ 174.2 ಮಳೆ ಆಗಬೇಕಿತ್ತು, 116.3% ಮಳೆ ಮಾತ್ರ ಆಗಿದ್ದು ಶೇ.33% ರಷ್ಟು ಮಳೆ ಕೊರತೆ ಉಂಟಾಗಿದೆ. ಆಗಸ್ಟ್ 15 ರೊಳಗೆ ಮಳೆ ಬರದಿದ್ದಲ್ಲಿ ಬಿತ್ತನೆ ಆಗಿರುವ ಬೆಳೆಗಳಿಗೆ ತೊಂದರೆ ಆಗುತ್ತದೆ. ಸಾಧ್ಯವಾದಷ್ಟು ಶಾರ್ಟ್ ಟರ್ಮ್ ರಾಗಿ ಬೆಳೆ ಆಯ್ಕೆ ಮಾಡಿಕೊಳ್ಳಿ ಬೇಗ ಬೆಳೆ ಬರುತ್ತದೆ ಎಂದು ರೈತರಿಗೆ ಸಲಹೆ ನೀಡಿದರು. *ತಪ್ಪದೇ ಬೆಳೆ ವಿಮೆ ಮಾಡಿಸಿ* ಮಳೆ ಅಭಾವದಿಂದ ಬೆಳೆ ನಷ್ಟ ಆಗುವ ಸಂಭವವಿದೆ. ಹಾಗಾಗಿ ತಪ್ಪದೇ ಎಲ್ಲಾ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಇದರಿಂದ ನಷ್ಟ ಪರಿಹಾರ ಸರಿದೂಗಲಿದೆ ಎಂದರು. ಈಗಾಗಲೇ ಹಲವಾರು ರೈತರು ರಾಗಿ, ಜೋಳ ಬಿತ್ತನೆ ಮಾಡಿದ್ದಾರೆ. ಮಳೆ ಕೊರತೆಯಿಂದ ಸರಿಯಾಗಿ ಹುಟ್ಟಿಲ್ಲ. ಆಗಸ್ಟ್ 30 ವರೆಗೆ ಕಾದು ನೋಡಬೇಕು ಮಳೆ ಬರದಿದಲ್ಲಿ ಸರ್ಕಾರ ಪರಿಹಾರದ ಬಗ್ಗೆ ಚಿಂತನೆ ಮಾಡಲಿದೆ ಎಂದು ಸಚಿವರು ಹೇಳಿದರು. ಜಾನುವಾರುಗಳಿಗೆ ಮೇವಿಗೆ ಸಂಬಂಧಿಸಿದಂತೆ ರೈತರಿಗೆ ಮೇವು ಬಿತ್ತನೆ ಬೀಜ ಪೂರೈಕೆ ಮಾಡಿ. ಮೇವು ಕಿಟ್ ಗಳನ್ನು, ಸೈಲೇಜ್ ಆಹಾರದ ಬಗ್ಗೆ ರೈತರಿಗೆ ಅರಿವು ಮೂಡಿಸಿ, ಪ್ರಸ್ತುತ ಸನ್ನಿವೇಶದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಪಶುಸಂಗೋಪನೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಮಂಗಲ ಕೆರೆಯಲ್ಲಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿದರು. ಕೆರೆಗಳ ಹೂಳೆತ್ತುವ ಕೆಲಸ ಮೊದಲು ಆಗಬೇಕಿದೆ. ನಂತರ ನೀರು ತುಂಬಿಸುವ ಕೆಲಸ ಮಾಡಬೇಕು. ಕೆರೆಗಳಲ್ಲಿರುವ ಬಿದಿರು ತೆಗೆಯಬೇಕು. ಅರಣ್ಯ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೆರೆಗೆ ಹುರಿದು ಬರುವ ನೀರಿನ ಕಾಲುವೆಗಳನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿಯಲು ಅನುಕೂಲವಾದರೆ ಮಳೆಗಾಲದಲ್ಲಿ ನೀರು ತುಂಬಲಿದೆ. ಎಲ್ಲಾ ಕೆರೆಗಳ ಸುತ್ತಲೂ ಬೌಂಡರಿ ಫಿಕ್ಸ್ ಮಾಡಿ ಸುತ್ತಲು ಟ್ರೆಂಚ್ ಅಗೆದು, ಹಣ್ಣಿನ ಗಿಡಗಳನ್ನು ಹಾಕಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.3
- ಅಪ್ರಾಪ್ತ ಬಾಲಕಿಯನ್ನು ಅಪಹರಿಸಲು ಸ್ನೇಹಿತನಿಗೆ ತನ್ನ ಬೈಕ್‌ನೀಡಿ ಸಹಾಯ ಮಾಡಿದ ಆರೋಪಿಗೆ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ಅಪ್ರಾಪ್ತ ಬಾಲಕಿಯನ್ನು ಅಪಹರಿಸಲು ಸ್ನೇಹಿತನಿಗೆ ತನ್ನ ಬೈಕ್‌ನೀಡಿ ಸಹಾಯ ಮಾಡಿದ ಆರೋಪಿಗೆ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ. ಇನ್ನೂ ಆರೋಪಿಯಾದ ಶ್ರೀನಿವಾಸ ಎಂಬಾತ ತನ್ನ ಸ್ನೇಹಿತನಿಗೆ ಬೈಕ್ ನೀಡಿ ಅಪ್ರಾಪ್ತ ಬಾಲಕಿಯನ್ನು ಹೆದರಿಸಿ ಮನೆ ಒಳಗೆ ಅಕ್ರಮ ಪ್ರವೇಶ ಮಾಡಿ ಬಲವಂತವಾಗಿ ಅಪಹರಿಸಕೊಂಡು ಹೋಗಿ ಅತ್ಯಾಚಾರವೆಸಗಲು ತನ್ನ ಸ್ನೇಹಿತನಿಗೆ ಪ್ರಚೋದನೆ ನೀಡಿ ಸಹಾಯ ಮಾಡಿರುತ್ತಾನೆ ಎಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದ್ದು ಅಂದಿನ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಶ್ರೀ.ಕಾಳಿಕೃಷ್ಣ ರವರು ಪ್ರಕರಣದ ತನಿಖೆ ಕೈಗೊಂಡು ಪ್ರಕರಣದಲ್ಲಿನ ಆರೋಪಿಯನ್ನು ಬಂಧಿಸಿ, ತನಿಖೆ ಪೂರೈಸಿ, ಆರೋಪಿಯ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಘನ 2ನೇ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ ರವರು ಪ್ರಕರಣದ ವಿಚಾರಣೆ ನಡೆಸಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಚ್ ಆರ್.ಜಗದೀಶ್ ರವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ. ಪ್ರಕರಣದಲ್ಲಿ ಆರೋಪಿಯ ಮೇಲೆ ಆರೋಪ ಧೃಢಪಟ್ಟ ಮೇರೆಗೆ ಕಲಂ 363, 376(2) (2), 109 ಐಪಿಸಿ ಕಲಂ 4, 6, 17 : 04.08.2026 ರಂದು 20 ವರ್ಷಗಳ ಕಠಿಣ ಸಜೆ ಮತ್ತು 10,000/- ರೂ ದಂಡವನ್ನು ಮಾನ್ಯ ನ್ಯಾಯಾಧೀಶರು ವಿಧಿಸಿ ಆದೇಶಿಸಿರುತ್ತಾರೆ.1