logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಲಾಕಪ್ ಡೆತ್...ಠಾಣೆಯ ಮುಂದೆ ಜಮಾಯಿಸಿದ ಜನರು...ಪೊಲೀಸರ ವಿರುದ್ಧ ಸಂಬಂಧಿಕರ ಆಕ್ರೋಶ... ಆಸ್ಪತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಂಬಂಧಿಕರು, ಗ್ರಾಮಸ್ಥರು.. ಹೌದು! ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಡೆದಿರುವ ಲಾಕಪ್ ಡೆತ್ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಹರಪನಹಳ್ಳಿ ಮೂಲದ 38 ವರ್ಷದ ಖಲೀಲ್‌ ಎಂದು ಗುರುತಿಸಲಾಗಿದೆ.ಕಟ್ಟಡ ಕಾರ್ಮಿಕನಾಗಿದ್ದ ಖಲೀಲ್, ಕುಟುಂಬದೊಂದಿಗೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ವಾಸವಾಗಿದ್ದ. ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಪತ್ನಿ ನೀಡಿದ ದೂರಿನ ಮೇರೆಗೆ ನಿನ್ನೆ ರಾತ್ರಿ ಪೊಲೀಸರು ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದರು. ವಿಚಾರಣೆ ಮಾಡೋದು ಬಿಟ್ಟು ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ ಖಲೀಲ್ ಠಾಣೆಯಲ್ಲೇ ಸಾವನ್ನಪ್ಪಿದ್ದಾರೆ. ಆದ್ರೆ ಪೊಲೀಸರು ಫಿಟ್ಸ್ ನಿಂದ ಸಾವನ್ನಪ್ಪಿದ್ದಾನೆ ಅಂತಾ ಕಥೆ ಕಟ್ಟಲು ನೋಡಿದ್ದಾರೆ. ಆದ್ರೆ ತಲೆಯಿಂದ ರಕ್ತ ಸೋರುತ್ತಿರುವುದು ಹಾಗೂ ಮೈಮೇಲಿನ ಗಾಯಗಳಿಂದಾಗಿ ಪೊಲೀಸರ ಏಟಿನಿಂದಲೇ ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸ್ಥಳೀಯ ಶಾಸಕ ನೇಮಿರಾಜ್ ನಾಯ್ಕ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮೃತನ ಕುಟುಂಬಸ್ಥರೊಂದಿಗೆ ಘಟನೆಯ ಮಾಹಿತಿ ಪಡೆದು, ಎಸ್ ಪಿ ಅವರನ್ನು ಭೇಟಿ ಮಾಡಿ ಪಾರದರ್ಶಕವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ತಕ್ಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಇತ್ತ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಹಗರಿಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಯಾರನ್ನು ಕೇಳಬೇಕು ಅಂತ ಆಕ್ರೋಶ ಹೊರಹಾಕಿದ್ರು. ಪೊಲೀಸರ ಏಟಿನಿಂದ ಖಲೀಲ್ ಠಾಣೆಯಲ್ಲಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆ ಬಳಿ ನೂರಾರು ಜನರು ಜಮಾಯಿಸಿ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಯ್ತು. ಖುದ್ದು ಎಸ್ಪಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನ್ಯಾಯಾಧೀಶರು, ತಹಶೀಲ್ದಾರ್ ಸಮ್ಮುಖದಲ್ಲಿ ಪಂಚನಾಮೆ ಮಾಡಲಾಗಿದ್ದು, ಸಾವನ್ನಪ್ಪಿದ ಖಲೀಲ್ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಕೊಪ್ಪಳ ಕಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಇನ್ನು ಲಾಕಪ್ ಡೆತ್ ಕೇಸ್ ವಿಚಾರದಲ್ಲಿ ಒಬ್ಬಎಎಸ್ ಐ ರಾಘವೇಂದ್ರ, ಪೊಲೀಸ್ ಪೇದೆವೆಂಕಟೇಶ್‌ ಇಬ್ಬರ ಮೇಲು FIR ದಾಖಲಾಗಿದೆ. ಲಾಕಪ್ ಡೆತ್ ಪ್ರಕರಣದ ಬಗ್ಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ಹಗರಿಬೊಮ್ಮನಹಳ್ಳಿ ಠಾಣೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬಹುದಿತ್ತು. ಆದ್ರೆ ತಾವೇ ಕಾನೂನು ಕೈಗೆ ತೆಗೆದುಕೊಂಡು ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಾರೆ. ಮೇಲ್ನೋಟಕ್ಕೆ ಪೊಲೀಸರ ಏಟಿನಿಂದಲೇ ಸಾವನ್ನಪ್ಪಿರುವುದು ಗೊತ್ತಾಗುತ್ತದೆ. ಆದ್ರೆ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಮಾಹಿತಿ ತಿಳಿಯಲಿದೆ.

19 hrs ago
user_YSRmedia vijayanagaraupsates
YSRmedia vijayanagaraupsates
Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
19 hrs ago

ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಲಾಕಪ್ ಡೆತ್...ಠಾಣೆಯ ಮುಂದೆ ಜಮಾಯಿಸಿದ ಜನರು...ಪೊಲೀಸರ ವಿರುದ್ಧ ಸಂಬಂಧಿಕರ ಆಕ್ರೋಶ... ಆಸ್ಪತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಂಬಂಧಿಕರು, ಗ್ರಾಮಸ್ಥರು.. ಹೌದು! ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಡೆದಿರುವ ಲಾಕಪ್ ಡೆತ್ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಹರಪನಹಳ್ಳಿ ಮೂಲದ 38 ವರ್ಷದ ಖಲೀಲ್‌ ಎಂದು ಗುರುತಿಸಲಾಗಿದೆ.ಕಟ್ಟಡ ಕಾರ್ಮಿಕನಾಗಿದ್ದ ಖಲೀಲ್, ಕುಟುಂಬದೊಂದಿಗೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ವಾಸವಾಗಿದ್ದ. ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಪತ್ನಿ ನೀಡಿದ ದೂರಿನ ಮೇರೆಗೆ ನಿನ್ನೆ ರಾತ್ರಿ ಪೊಲೀಸರು ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದರು. ವಿಚಾರಣೆ ಮಾಡೋದು ಬಿಟ್ಟು ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ ಖಲೀಲ್ ಠಾಣೆಯಲ್ಲೇ ಸಾವನ್ನಪ್ಪಿದ್ದಾರೆ. ಆದ್ರೆ ಪೊಲೀಸರು ಫಿಟ್ಸ್ ನಿಂದ ಸಾವನ್ನಪ್ಪಿದ್ದಾನೆ ಅಂತಾ ಕಥೆ ಕಟ್ಟಲು ನೋಡಿದ್ದಾರೆ. ಆದ್ರೆ ತಲೆಯಿಂದ ರಕ್ತ ಸೋರುತ್ತಿರುವುದು ಹಾಗೂ ಮೈಮೇಲಿನ ಗಾಯಗಳಿಂದಾಗಿ ಪೊಲೀಸರ ಏಟಿನಿಂದಲೇ ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸ್ಥಳೀಯ ಶಾಸಕ ನೇಮಿರಾಜ್ ನಾಯ್ಕ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮೃತನ ಕುಟುಂಬಸ್ಥರೊಂದಿಗೆ ಘಟನೆಯ ಮಾಹಿತಿ ಪಡೆದು, ಎಸ್ ಪಿ ಅವರನ್ನು ಭೇಟಿ ಮಾಡಿ ಪಾರದರ್ಶಕವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ತಕ್ಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಇತ್ತ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಹಗರಿಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಯಾರನ್ನು ಕೇಳಬೇಕು ಅಂತ ಆಕ್ರೋಶ ಹೊರಹಾಕಿದ್ರು. ಪೊಲೀಸರ ಏಟಿನಿಂದ ಖಲೀಲ್ ಠಾಣೆಯಲ್ಲಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆ ಬಳಿ ನೂರಾರು ಜನರು ಜಮಾಯಿಸಿ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಯ್ತು. ಖುದ್ದು ಎಸ್ಪಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನ್ಯಾಯಾಧೀಶರು, ತಹಶೀಲ್ದಾರ್ ಸಮ್ಮುಖದಲ್ಲಿ ಪಂಚನಾಮೆ ಮಾಡಲಾಗಿದ್ದು, ಸಾವನ್ನಪ್ಪಿದ ಖಲೀಲ್ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಕೊಪ್ಪಳ ಕಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಇನ್ನು ಲಾಕಪ್ ಡೆತ್ ಕೇಸ್ ವಿಚಾರದಲ್ಲಿ ಒಬ್ಬಎಎಸ್ ಐ ರಾಘವೇಂದ್ರ, ಪೊಲೀಸ್ ಪೇದೆವೆಂಕಟೇಶ್‌ ಇಬ್ಬರ ಮೇಲು FIR ದಾಖಲಾಗಿದೆ. ಲಾಕಪ್ ಡೆತ್ ಪ್ರಕರಣದ ಬಗ್ಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ಹಗರಿಬೊಮ್ಮನಹಳ್ಳಿ ಠಾಣೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬಹುದಿತ್ತು. ಆದ್ರೆ ತಾವೇ ಕಾನೂನು ಕೈಗೆ ತೆಗೆದುಕೊಂಡು ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಾರೆ. ಮೇಲ್ನೋಟಕ್ಕೆ ಪೊಲೀಸರ ಏಟಿನಿಂದಲೇ ಸಾವನ್ನಪ್ಪಿರುವುದು ಗೊತ್ತಾಗುತ್ತದೆ. ಆದ್ರೆ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಮಾಹಿತಿ ತಿಳಿಯಲಿದೆ.

More news from ಕರ್ನಾಟಕ and nearby areas
  • ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಮುಂಡರಗಿ ಹಾಗೂ ಕಪ್ಪತ್ತಹಿಲ್ಸ್ ಅರಣ್ಯ ವಲಯ, ಮುಂಡರಗಿ ಇವರ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಸಮಾವೇಶ ಹಾಗೂ ಕಪ್ಪತ್ತಗುಡ್ಡ ಕುರಿತು ಕವಿಗೋಷ್ಠಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಕೈಜೋಡಿಸಿ, ಸಾಹಿತ್ಯದ ಬೆಳಕನ್ನು ಸಮಾಜದ ಮೂಲೆಮೂಲೆಗೂ ಹರಡುತ್ತಿರುವ ಎಲ್ಲ ಕವಿಮಿತ್ರರ ಸಾಹಿತ್ಯ ಸೇವೆ ನಿಜಕ್ಕೂ ಶ್ಲಾಘನೀಯ. ನಿಮ್ಮ ಬರಹಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಲಿ, ನಿಮ್ಮ ಕಾವ್ಯಧಾರೆ ಸಮಾಜದಲ್ಲಿ ಪರಿಸರ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಬೆಳೆಸಲಿ. ಕವಿ ಮನಸ್ಸುಗಳು ಜಾಗೃತಿಯಾದರೆ ಸಮಾಜ ಜಾಗೃತಿಯಾಗುತ್ತದೆ ಸಾಹಿತ್ಯ ಅರಳಿದರೆ ಸಂಸ್ಕೃತಿ ಉಳಿಯುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡರಗಿ
    1
    ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಮುಂಡರಗಿ ಹಾಗೂ ಕಪ್ಪತ್ತಹಿಲ್ಸ್ ಅರಣ್ಯ ವಲಯ, ಮುಂಡರಗಿ ಇವರ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಸಮಾವೇಶ ಹಾಗೂ ಕಪ್ಪತ್ತಗುಡ್ಡ ಕುರಿತು ಕವಿಗೋಷ್ಠಿ ಕಾರ್ಯಕ್ರಮ
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಕೈಜೋಡಿಸಿ, ಸಾಹಿತ್ಯದ ಬೆಳಕನ್ನು ಸಮಾಜದ ಮೂಲೆಮೂಲೆಗೂ ಹರಡುತ್ತಿರುವ ಎಲ್ಲ ಕವಿಮಿತ್ರರ ಸಾಹಿತ್ಯ ಸೇವೆ ನಿಜಕ್ಕೂ ಶ್ಲಾಘನೀಯ.
ನಿಮ್ಮ ಬರಹಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಲಿ, ನಿಮ್ಮ ಕಾವ್ಯಧಾರೆ ಸಮಾಜದಲ್ಲಿ ಪರಿಸರ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಬೆಳೆಸಲಿ.
ಕವಿ ಮನಸ್ಸುಗಳು ಜಾಗೃತಿಯಾದರೆ ಸಮಾಜ ಜಾಗೃತಿಯಾಗುತ್ತದೆ
ಸಾಹಿತ್ಯ ಅರಳಿದರೆ ಸಂಸ್ಕೃತಿ ಉಳಿಯುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡರಗಿ
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    6 hrs ago
  • ದೇವರ ಹೆಸರಿನಲ್ಲಿ ಪ್ರಮಾಣದ ಪತ್ರ ಸ್ವೀಕರಿಸಿದ ನೂತನ ಸಚಿವ ಟಿ ರಘುಮೂರ್ತಿ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಟಿ .ರಘುಮೂರ್ತಿ ಅವರಿಗೆ ಮಂತ್ರಿ ಸ್ಥಾನ ಒಲಿದು ಬಂದಿದೆ.. ನೂತನ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ..
    1
    ದೇವರ ಹೆಸರಿನಲ್ಲಿ ಪ್ರಮಾಣದ ಪತ್ರ ಸ್ವೀಕರಿಸಿದ ನೂತನ ಸಚಿವ ಟಿ ರಘುಮೂರ್ತಿ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಟಿ .ರಘುಮೂರ್ತಿ ಅವರಿಗೆ ಮಂತ್ರಿ ಸ್ಥಾನ ಒಲಿದು ಬಂದಿದೆ.. ನೂತನ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ..
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    6 hrs ago
  • ನೂತನ ಸಂಪುಟದಲ್ಲಿ ಸಚಿವರಾಗಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಆಯ್ಕೆ ಹಿನ್ನೆಲೆ ಚಿತ್ರದುರ್ಗದಲ್ಲಿ ಸಂಭ್ರಮಾಚರಣೆ ನೂತನ ಸಂಪುಟದಲ್ಲಿ ಸಚಿವರಾಗಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಆಯ್ಕೆ ಹಿನ್ನೆಲೆ ಚಿತ್ರದುರ್ಗದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಇನ್ನೂ ಸತತ ಮೂರು ಬಾರಿ ಆಯ್ಕಯಾಗಿರುವ ಶಾಸಕ ರಘುಮೂರ್ತಿ ಅವರಿಗೆ ಡಿ ಕೆ ಶಿವಕುಮಾರ್ ರ ನೂತನ ಸಂಪುಟದಲ್ಲಿ ಸಚಿವರಾಗಿ ಆಯ್ಕೆ ಹಿನ್ನೆಲೆ ನಗರದ ಓಬವ್ವ ವೃತ್ತದಲ್ಲಿ ಟಿ ರಘೂಮೂರ್ತಿ ಅಭಿಮಾನಿ ಬಳಗ ಹಾಗೂ ಕರುನಾಡ ವಿಜಯ ಸೇನೆ ಜಿಲ್ಲಾ ಘಟಕದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದು ಕಾಂಗ್ರೆಸ್ ಕಚೇರಿ ಬಳಿ ಸಂಘಟನೆ ಜಿಲ್ಲಾಧ್ಯಕ್ಷರಾದ ಕೆ ಟಿ ಶಿವಕುಮಾರ್ ಅವರ ನೇತೃತ್ವದಲ್ಲಿ 20 ಅಡಿ‌ ಉದ್ದದ ಫ್ಲಕ್ಸ್ ನಿರ್ಮಿಸಿ ಸಂಭ್ರಮಾಚರಣೆ ನಡೆಸಿದರು. ಇನ್ನೂ ಎರಡನೇ ಹಂತದ ಸಂಪುಟ ವಿಸ್ತರಣೆಗೆ ಇಂದು ಅಧಿಕೃತವಾಗಿ ಮುದ್ರೆ ಬಿದ್ದಿದೆ. ಈ ಬಾರಿ ಮೂರು ಬಾರಿ ಹ್ಯಾಟ್ರಿಕ್ ಜಯಗಳಿಸಿ, ಅಭಿವೃದ್ದಿಯ ಹರಿಕಾರ ಎಂದು ಮಚ್ಚುಗೆ ಗಳಿಸಿರುವ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಇದರಿಂದ ಅವರ ಬೆಂಬಲಿಗರ ಸಂಭ್ರಮಕ್ಕೆ ಎಣೆಯೇ ಇಲ್ಲದಾಗಿದೆ. ಕರುನಾಡ ವಿಜಯಸೇನೆ ಮತ್ತು ಟಿ. ರಘುಮೂರ್ತಿ ತುವ ಸೇನೆ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿ ಬಳಿ ಡಿಕೆಶಿವಕುಮಾರ್ ಮತ್ತು ಶಾಸಕ ಟಿ. ರಘುಮೂರ್ತಿ ಅವರ ರಕ್ತದಿಂದ ಬರೆದಿರುವ ಭಾವಚಿತ್ರ ಹಿಡಿದು ಪಟಾಕಿ ಸಿಡಿಸಿ, ಸಂಭ್ರಮ ಆಚರಿಸಿದರು. ಕಾರ್ಯಕರ್ತರಿಗೆ ಸಿಹಿ ತಿನಿಸಿ ಸಂತೋಷ ಹಂಚಿಕೊಂಡರು.
    1
    ನೂತನ ಸಂಪುಟದಲ್ಲಿ ಸಚಿವರಾಗಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಆಯ್ಕೆ ಹಿನ್ನೆಲೆ ಚಿತ್ರದುರ್ಗದಲ್ಲಿ ಸಂಭ್ರಮಾಚರಣೆ
ನೂತನ ಸಂಪುಟದಲ್ಲಿ ಸಚಿವರಾಗಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಆಯ್ಕೆ ಹಿನ್ನೆಲೆ ಚಿತ್ರದುರ್ಗದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಇನ್ನೂ
ಸತತ ಮೂರು ಬಾರಿ ಆಯ್ಕಯಾಗಿರುವ ಶಾಸಕ ರಘುಮೂರ್ತಿ ಅವರಿಗೆ ಡಿ ಕೆ ಶಿವಕುಮಾರ್ ರ ನೂತನ ಸಂಪುಟದಲ್ಲಿ ಸಚಿವರಾಗಿ ಆಯ್ಕೆ ಹಿನ್ನೆಲೆ ನಗರದ ಓಬವ್ವ ವೃತ್ತದಲ್ಲಿ ಟಿ ರಘೂಮೂರ್ತಿ ಅಭಿಮಾನಿ ಬಳಗ ಹಾಗೂ ಕರುನಾಡ ವಿಜಯ ಸೇನೆ ಜಿಲ್ಲಾ ಘಟಕದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದು ಕಾಂಗ್ರೆಸ್ ಕಚೇರಿ ಬಳಿ ಸಂಘಟನೆ ಜಿಲ್ಲಾಧ್ಯಕ್ಷರಾದ ಕೆ ಟಿ ಶಿವಕುಮಾರ್  ಅವರ ನೇತೃತ್ವದಲ್ಲಿ 20 ಅಡಿ‌ ಉದ್ದದ ಫ್ಲಕ್ಸ್ ನಿರ್ಮಿಸಿ ಸಂಭ್ರಮಾಚರಣೆ ನಡೆಸಿದರು. ಇನ್ನೂ ಎರಡನೇ ಹಂತದ ಸಂಪುಟ ವಿಸ್ತರಣೆಗೆ ಇಂದು ಅಧಿಕೃತವಾಗಿ ಮುದ್ರೆ  ಬಿದ್ದಿದೆ. ಈ ಬಾರಿ ಮೂರು ಬಾರಿ ಹ್ಯಾಟ್ರಿಕ್ ಜಯಗಳಿಸಿ, ಅಭಿವೃದ್ದಿಯ ಹರಿಕಾರ ಎಂದು ಮಚ್ಚುಗೆ ಗಳಿಸಿರುವ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿಗೆ  ಸಚಿವ ಸ್ಥಾನ ಒಲಿದು ಬಂದಿದೆ. ಇದರಿಂದ ಅವರ ಬೆಂಬಲಿಗರ ಸಂಭ್ರಮಕ್ಕೆ ಎಣೆಯೇ ಇಲ್ಲದಾಗಿದೆ. ಕರುನಾಡ ವಿಜಯಸೇನೆ ಮತ್ತು ಟಿ. ರಘುಮೂರ್ತಿ ತುವ ಸೇನೆ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿ ಬಳಿ ಡಿಕೆಶಿವಕುಮಾರ್ ಮತ್ತು ಶಾಸಕ ಟಿ. ರಘುಮೂರ್ತಿ ಅವರ ರಕ್ತದಿಂದ ಬರೆದಿರುವ ಭಾವಚಿತ್ರ ಹಿಡಿದು ಪಟಾಕಿ ಸಿಡಿಸಿ, ಸಂಭ್ರಮ ಆಚರಿಸಿದರು. ಕಾರ್ಯಕರ್ತರಿಗೆ ಸಿಹಿ ತಿನಿಸಿ ಸಂತೋಷ ಹಂಚಿಕೊಂಡರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    6 hrs ago
  • ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ನನ್ನ ಸಹೋದ್ಯೋಗಿ ಮಿತ್ರರಿಗೆ, ಹಾಗೆಯೇ ವಿಧಾನಸಭಾ ಸಭಾಧ್ಯಕ್ಷರಾಗಿ ಹಾಗೂ ಉಪಸಭಾಧ್ಯಕ್ಷರಾಗಿ, ವಿಧಾನಪರಿಷತ್ ಸಭಾಪತಿಯಾಗಿ ಹಾಗೂ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಎಲ್ಲಾ ನಾಯಕರಿಗೆ ಹಾರ್ದಿಕ ಶುಭಾಶಯಗಳು. ನಿಮ್ಮೆಲ್ಲರ ಅಪಾರ ರಾಜಕೀಯ ಅನುಭವ ಹಾಗೂ ಬದ್ಧತೆ ನಮ್ಮ ಸರ್ಕಾರದ ಆಡಳಿತ ಯಂತ್ರಕ್ಕೆ ಇನ್ನಷ್ಟು ಚುರುಕು ಮತ್ತು ಶಕ್ತಿ ತುಂಬಲಿದೆ ಎಂಬ ವಿಶ್ವಾಸ ನನಗಿದೆ. ಪಾರದರ್ಶಕ, ದಕ್ಷ ಹಾಗೂ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ಜನರ ಆಶೋತ್ತರಗಳಿಗೆ ನಾವು ಸ್ಪಂದಿಸಬೇಕಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ನಾವೆಲ್ಲರೂ ಒಟ್ಟಾಗಿ ನಿಭಾಯಿಸೋಣ. ಸುಭದ್ರ, ಜನಪರ ಹಾಗೂ ಪ್ರಗತಿಪರ ಆಡಳಿತದೊಂದಿಗೆ ಕರುನಾಡನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸೋಣ. ಬಲಿಷ್ಠ ಕರ್ನಾಟಕಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡೋಣ.
    1
    ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ನನ್ನ ಸಹೋದ್ಯೋಗಿ ಮಿತ್ರರಿಗೆ, ಹಾಗೆಯೇ ವಿಧಾನಸಭಾ ಸಭಾಧ್ಯಕ್ಷರಾಗಿ ಹಾಗೂ ಉಪಸಭಾಧ್ಯಕ್ಷರಾಗಿ, ವಿಧಾನಪರಿಷತ್ ಸಭಾಪತಿಯಾಗಿ ಹಾಗೂ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಎಲ್ಲಾ ನಾಯಕರಿಗೆ ಹಾರ್ದಿಕ ಶುಭಾಶಯಗಳು.

ನಿಮ್ಮೆಲ್ಲರ ಅಪಾರ ರಾಜಕೀಯ ಅನುಭವ ಹಾಗೂ ಬದ್ಧತೆ ನಮ್ಮ ಸರ್ಕಾರದ ಆಡಳಿತ ಯಂತ್ರಕ್ಕೆ ಇನ್ನಷ್ಟು ಚುರುಕು ಮತ್ತು ಶಕ್ತಿ ತುಂಬಲಿದೆ ಎಂಬ ವಿಶ್ವಾಸ ನನಗಿದೆ. ಪಾರದರ್ಶಕ, ದಕ್ಷ ಹಾಗೂ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ಜನರ ಆಶೋತ್ತರಗಳಿಗೆ ನಾವು ಸ್ಪಂದಿಸಬೇಕಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ನಾವೆಲ್ಲರೂ ಒಟ್ಟಾಗಿ ನಿಭಾಯಿಸೋಣ.

ಸುಭದ್ರ, ಜನಪರ ಹಾಗೂ ಪ್ರಗತಿಪರ ಆಡಳಿತದೊಂದಿಗೆ ಕರುನಾಡನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸೋಣ. ಬಲಿಷ್ಠ ಕರ್ನಾಟಕಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡೋಣ.
    user_ಸುನೀಲ್ ಲ್ ಬೆಟಗೇರಿ
    ಸುನೀಲ್ ಲ್ ಬೆಟಗೇರಿ
    Spa ಹಾವೇರಿ, ಹಾವೇರಿ, ಕರ್ನಾಟಕ•
    7 hrs ago
  • ಹೇಳಿದಂಗೆ ಹೊಸಬರಿಗೆ ಅವಕಾಶ ನೀಡಿದ್ದಾರೆ, ಡಿಸಿಎಂ ಸ್ಥಾನಕ್ಕೆ ಇನ್ನೂ ಅವಕಾಶ ಇದೆ ಕಾದು ನೋಡಿ: ಸಚಿವ ಸತೀಶ ಜಾರಕಿಹೊಳಿ.
    1
    ಹೇಳಿದಂಗೆ ಹೊಸಬರಿಗೆ ಅವಕಾಶ ನೀಡಿದ್ದಾರೆ, ಡಿಸಿಎಂ ಸ್ಥಾನಕ್ಕೆ ಇನ್ನೂ ಅವಕಾಶ ಇದೆ ಕಾದು ನೋಡಿ: ಸಚಿವ ಸತೀಶ ಜಾರಕಿಹೊಳಿ.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    4 hrs ago
  • ರೋಣ ಕ್ಷೇತ್ರದ ಶಾಸಕರಾದ ಶ್ರೀ ಜಿ.ಎಸ್. ಪಾಟೀಲ್ ಅವರ ತಾಯಿ ಮಾತೋಶ್ರೀ ಬಸಮ್ಮ ಎಸ್. ಪಾಟೀಲ್ ಅವರ 22ನೇ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದೆ. "ಮಹಿಳೆಗೆ ಶಿಕ್ಷಣವೇ ನಿಜವಾದ ಶಕ್ತಿ. ಶಿಕ್ಷಣ ಪಡೆದ ಮಹಿಳೆ ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನವನ್ನು ನಿರ್ಮಿಸಿಕೊಳ್ಳುತ್ತಾಳೆ. ಮಕ್ಕಳಲ್ಲಿ ಓದುವ ಹವ್ಯಾಸ, ಉತ್ತಮ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದು. ಪ್ರತಿಯೊಬ್ಬ ತಾಯಿಯೂ ಉತ್ತಮ ಪ್ರಜೆಯನ್ನು ರೂಪಿಸುವ ಶಿಲ್ಪಿಯಾಗಿದ್ದಾಳೆ. ಆದ್ದರಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರತಿಯೊಂದು ಕುಟುಂಬವೂ ಆದ್ಯತೆ ನೀಡಬೇಕು," ಎಂದು ತಿಳಿಸಿದರು
    1
    ರೋಣ ಕ್ಷೇತ್ರದ ಶಾಸಕರಾದ ಶ್ರೀ ಜಿ.ಎಸ್. ಪಾಟೀಲ್ ಅವರ ತಾಯಿ ಮಾತೋಶ್ರೀ ಬಸಮ್ಮ ಎಸ್. ಪಾಟೀಲ್ ಅವರ 22ನೇ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದೆ.

"ಮಹಿಳೆಗೆ ಶಿಕ್ಷಣವೇ ನಿಜವಾದ ಶಕ್ತಿ. ಶಿಕ್ಷಣ ಪಡೆದ ಮಹಿಳೆ ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನವನ್ನು ನಿರ್ಮಿಸಿಕೊಳ್ಳುತ್ತಾಳೆ. ಮಕ್ಕಳಲ್ಲಿ ಓದುವ ಹವ್ಯಾಸ, ಉತ್ತಮ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದು. ಪ್ರತಿಯೊಬ್ಬ ತಾಯಿಯೂ ಉತ್ತಮ ಪ್ರಜೆಯನ್ನು ರೂಪಿಸುವ ಶಿಲ್ಪಿಯಾಗಿದ್ದಾಳೆ. ಆದ್ದರಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರತಿಯೊಂದು ಕುಟುಂಬವೂ ಆದ್ಯತೆ ನೀಡಬೇಕು," ಎಂದು ತಿಳಿಸಿದರು
    user_ಸುನೀಲ್ ಲ್ ಬೆಟಗೇರಿ
    ಸುನೀಲ್ ಲ್ ಬೆಟಗೇರಿ
    Spa ಹಾವೇರಿ, ಹಾವೇರಿ, ಕರ್ನಾಟಕ•
    8 hrs ago
  • ಶಿಗ್ಗಾವಿ ಜಿಟಿಟಿಸಿ ಕೇಂದ್ರದಲ್ಲಿ ಪ್ರಾಂಶುಪಾಲರಿಂದ ದೌರ್ಜನ್ಯ ಆರೋಪ : ಎಬಿವಿಪಿ ಪ್ರತಿಭಟನೆ ಶಿಗ್ಗಾವಿ ಜಿಟಿಟಿಸಿ ಕೇಂದ್ರದಲ್ಲಿ ಪ್ರಾಂಶುಪಾಲರಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಆರೋಪ : ಎಬಿವಿಪಿ ಸಹಯೋಗದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಶಿಗ್ಗಾವಿ : ತಾಲೂಕಿನ ಕಲ್ಯಾಣ ಗ್ರಾಮದಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಇತ್ತೀಚೆಗೆ ಸೇರ್ಪಡೆಯಾದ ಪ್ರಾಂಶುಪಾಲರಿಂದ ಹಾಗೂ ಅಟೆಂಡರ್‌ಗಳಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಎಬಿವಿಪಿ ಮತ್ತು ಕನ್ನಡ ಜಾಗೃತ ವೇಧಿಕೆ ಸಹಯೋಗದಲ್ಲಿ ಕೇಂದ್ರದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜಿಟಿಟಿಸಿ ಕೇಂದ್ರದಲ್ಲಿ ಹಲವಾರು ಸಮಸ್ಯೆಗಳಿವೆ ಅವುಗಳನ್ನ ಮೌಖಿಕವಾಗಿ ತಿಳಿಸಿ ಮನವಿಯನ್ನೂ ಸಲ್ಲಿಸಿದರೂ ಪ್ರಶ್ನೆ ಮಾಡುವ ವಿದ್ಯಾರ್ಥಿಗಳ ವೀಡಿಯೋ ಮಾಡಿ, ಇದರಿಂದ ಟಾರ್ಗೆಟ್ ಮಾಡುವುದು, ಮತ್ತು ಪಾಲಕರಿಗೆ ಕಳುಹಿಸುವುದಾಗಿ ಹೇಳಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ, ಸದ್ಯ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ, ಸೆಮಿಸ್ಟರ್ ಪರೀಕ್ಷೆಗಳು ಇನ್ನು ಕೇವಲ ಮೂರೇ ತಿಂಗಳಿನ ಅಂತರದಲ್ಲಿದ್ದು ಬೋಧಕರ ಕೊರತೆ ಇರುವುದು, ಇದರಿಂದ ಇನ್ನೂ ಎರಡು ಮೂರು ವಿಷಯಗಳು ಇನ್ನೂ ಪ್ರಾರಂಭವಾಗದೇ ಇರುವುದು ಶೈಕ್ಷಣಿಕ ಹಿನ್ನೆಡೆಗೆ ಕಾರಣವಾಗುತ್ತಿದೆ, ಪ್ರವೇಶಾತಿ ಪಡೆಯುವಾಗ ಶೇ. 70 ರಷ್ಟು ಪ್ರಾಯೋಗಿಕ ತರಬೇತಿ ಎಂದು ಹೇಳಿದ್ದರು ಆದರೆ ಈ ಸೆಮಿಸ್ಟರ್‌ಗೆ ಬೇಕಾದ ಯಂತ್ರೋಪಕರಣಗಳು ಇಲ್ಲ ಇದರಿಂದ ತಮ್ಮ ಭವಿಷ್ಯ ಕೌಶಲ್ಯಯುತವಾಗುವುದೇ ? ಜೊತೆಗೆ ಇಂತಹ ತರಬೇತಿಯಿಂದ ಉದ್ಯೋಗ ಸಿಗುವುದೇ ಎಂಬ ಆತಂಕ ವ್ಯಕ್ತಪಡಿಸಿದರು. ಇತ್ತೀಚೆಗೆ ಬಂದ ಉಪನ್ಯಾಸಕರ ಪಾಠಗಳು ಅರ್ಥವಾಗಲು ಕಪ್ಪವಾಗುತ್ತಿದೆ, ಈ ವಿಷಯ ಪ್ರಾಂಶುಪಾಲರ ಗಮನಕ್ಕೆ ತಂದರೂ ಅವರು ವಿದ್ಯಾರ್ಥಿಗಳದೇ ತಪ್ಪು ಎಂಬAತೆ ಬಿಂಬಿಸುತ್ತಿದ್ದಾರೆ, ಸುಮಾರು ೨೫ ಸಾವಿರ ವಿದ್ಯಾರ್ಥಿ ವೇತನ ಬರುವುದಾಗಿ ಭರವಸೆ ನೀಡಿದ್ದರು, ಆದರೆ ಒಂದು ವರ್ಷ ಮೇಲಾದರೂ ಇನ್ನೂ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ಆರೋಪಿಸಲಾಗಿದೆ. ಯಾವುದಾದರೂ ಸಮಸ್ಯೆಯನ್ನು ವಿದ್ಯಾರ್ಥಿಗಳು ಪ್ರಾಂಶುಪಾಲರ ಬಳಿ ಹೇಳಲು ಹೊರಟರೆ " ಬ್ಯುಸಿ ಆಗಿದ್ದಾರೆ. ಮೀಟಿಂಗ್ ನಡೆಲಿದೆ. ನಾಳೆ ಬನ್ನಿ" ಎಂದು ನಿಷ್ಕಾಳಜಿ ಕಾರಣ ನೀಡಿ ತಡೆಹಿಡಿಯಲಾಗುತ್ತಿದೆ, ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲ, ಈ ಮೊದಲಿದ್ದ ಉಪನ್ಯಾಸಕರನ್ನ ಯಾವುದೇ ಋಣಾತ್ಮಕ ಕಾರಣಗಳಿಲ್ಲದಿದ್ದರೂ ಕೇಂದ್ರ ಕಛೇರಿಯ ಮೇಲೆ ಆಪಾದನೆ ಹಾಕಿ ಸೇವೆಯಿಂದ ತೆಗೆಯಲಾಗಿದೆ, ಇನ್ನು ಹಾಸ್ಟೆಲ್‌ನ ಕ್ಯಾಂಟೀನ್‌ನಲ್ಲಿ ಯಾವುದೇ ರೀತಿಯಲ್ಲಿ ಸ್ವಚ್ಛತೆ ಇಲ್ಲದೇ ಹಾಗೇ ಊಟ ನೀಡುತ್ತಿರುವ ಕಾರಣ ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗುತ್ತಿದೆ, ಇದರಿಂದ ವಿದ್ಯಾಭ್ಯಾಸಕ್ಕೂಸಹ ಅಡಚಣೆಯಾಗುತ್ತಿದೆ ಎನ್ನಲಾಗಿದೆ. ಇತ್ತೀಚೆಗೆ ಬಂದ ಉಪನ್ಯಾಸಕರು, ವಿದ್ಯಾರ್ಥಿಗಳ ಸಣ್ಯ ಸಣ್ಣ ತಪ್ಪಿಗೂ ಇನ್ನೂರು ಬಸ್ಕಿಗಳನ್ನು ಹೊಡೆಸಿ ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಸಮಸ್ಯೆಗೆ ಗುರಿ ಮಾಡುತ್ತಿದ್ದಾರೆ, ಈ ಎಲ್ಲ ಶೈಕ್ಷಣಿಕ ಸಮಸ್ಯೆಗಳನ್ನ ಪ್ರಾಂಶುಪಾಲರ ಬಳಿ ಹೇಳಲು ಹೋದರೆ ಅಟೆಂಡರ್‌ಗಳೇ ಇಲ್ಲಿ ಪ್ರಾಂಶುಪಾಲರAತೆ ವರ್ತಿಸುತ್ತಿದ್ದಾರೆ ಎಂದು ದೂರಿದರಲ್ಲದೇ ಹೊಸದಾಗಿ ಬಂದ ಪ್ರಾಂಶುಪಾಲರು ಮತ್ತು ಅಟೆಂಡರ್‌ಗಳಿಂದ ಅಭಿವೃದ್ಧಿಗಿಂತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೇ ಹೆಚ್ಚು ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಬಂಕಾಪೂರ ಪಿಎಸ್‌ಐ ಶ್ರೀಶೈಲ್ ಕೆಂಚಣ್ಣವರ, ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ, ಬಸವರಾಜ ಕಲ್ಲಪ್ಪನವರ, ವಿನಾಯಕ ಕುಮ್ಮೂರ, ಕನ್ನಡ ಜಾಗೃತ ವೇಧಿಕೆಯ ಜಿಲ್ಲಾದ್ಯಕ್ಷ ಹರೀಶಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ದೊಡ್ಡಮನಿ, ಲಂಕೇಶ ಛಲವಾದಿ ಆಕಾಶ ವನಹಳ್ಳಿ, ವಿನಾಯಕ ಆಚಾರ್ಯ, ಗಗನ ಹಡಪದ, ರಕ್ಷೀತ್ ಎಂ, ಗುರುರಾಜ, ವಿರೇಶ ಸೇರಿದಂತೆ ಜಿಟಿಟಿಸಿ ಕೇಂದ್ರದ ಎಲ್ಲ ವಿದ್ಯಾರ್ಥಿಗಳು, ಪೋಲೀಸ್ ಸಿಬ್ಬಂದಿಗಳು ಇದ್ದರು. *ಬಾಕ್ಸ್ ಸುದ್ದಿ* : ನಾನೇ ಖುದ್ದಾಗಿ ವಿದ್ಯಾರ್ಥಿಗಳ ಸ್ಕಾಲರ್‌ಶಿಫ್ ವಿಚಾರವಾಗಿ ಹಿಂದುಳಿದ ಇಲಾಖೆಗೆ ಬೇಟಿ ಮಾಡಿದ್ದೇನೆ ಅವರು ಬರುತ್ತದೆ ಎಂದು ಹೇಳಿದ್ದಾರೆ, ಇನ್ನು ಅಟೆಂಡರ್‌ಗಳೇ ಡೆಮೋ ತೆಗೆದುಕೊಳ್ಳುತ್ತಾರೆ ಎಂಬ ವಿಚಾರವಾಗಿ, ಕ್ಲಾಸ್‌ಗಳು ನಡೆಯುತ್ತಿರುವುದನ್ನ ಬರೆದುಕೊಂಡು ಬರುತ್ತಾರೆ ಹೊರತು ಅಟೆಂಡರ್‌ಗಳೇ ಡೆಮೋ ತೆಗೆದುಕೊಳ್ಳುವುದಿಲ್ಲ, ನಮ್ಮ ಉಪನ್ಯಾಸಕರು ನೇರವಾಗಿ ಹೋಗಿ ಬೋಧನೆ ಮಾಡುವುದಿಲ್ಲ, ಅವರೂ ಸಹಿತ ಹೋಮ್‌ವರ್ಕ ಮಾಡಿಕೊಂಡು ಬಂದು ಬೋಧನೆ ಮಾಡುತ್ತಾರೆ, ನಾನು ಕೇಂದ್ರಕ್ಕೆ ಬಂದು ಈಗ ಒಂದು ತಿಂಗಳಾಗಿದೆ ಆದರೂ ಶಕ್ತಿಮೀರಿ ಕೇಂದ್ರದ ಬೆಳವಣಿಗೆಗೆ ಶ್ರಮಿಸುತ್ತೇವೆ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಗಮನ ಹರಿಸುತ್ತೇವೆ. ಭಾರತಿ ದೊಡ್ಡಮನಿ ಜಿಟಿಟಿಸಿ ಕೇಂದ್ರದ ಪ್ರಾಂಶುಪಾಲೆ
    3
    ಶಿಗ್ಗಾವಿ ಜಿಟಿಟಿಸಿ ಕೇಂದ್ರದಲ್ಲಿ
ಪ್ರಾಂಶುಪಾಲರಿಂದ ದೌರ್ಜನ್ಯ ಆರೋಪ : ಎಬಿವಿಪಿ ಪ್ರತಿಭಟನೆ
ಶಿಗ್ಗಾವಿ ಜಿಟಿಟಿಸಿ ಕೇಂದ್ರದಲ್ಲಿ
ಪ್ರಾಂಶುಪಾಲರಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಆರೋಪ : ಎಬಿವಿಪಿ ಸಹಯೋಗದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಶಿಗ್ಗಾವಿ : ತಾಲೂಕಿನ ಕಲ್ಯಾಣ ಗ್ರಾಮದಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಇತ್ತೀಚೆಗೆ ಸೇರ್ಪಡೆಯಾದ ಪ್ರಾಂಶುಪಾಲರಿಂದ ಹಾಗೂ ಅಟೆಂಡರ್‌ಗಳಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಎಬಿವಿಪಿ ಮತ್ತು ಕನ್ನಡ ಜಾಗೃತ ವೇಧಿಕೆ ಸಹಯೋಗದಲ್ಲಿ ಕೇಂದ್ರದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಜಿಟಿಟಿಸಿ ಕೇಂದ್ರದಲ್ಲಿ ಹಲವಾರು ಸಮಸ್ಯೆಗಳಿವೆ ಅವುಗಳನ್ನ ಮೌಖಿಕವಾಗಿ ತಿಳಿಸಿ ಮನವಿಯನ್ನೂ ಸಲ್ಲಿಸಿದರೂ ಪ್ರಶ್ನೆ ಮಾಡುವ ವಿದ್ಯಾರ್ಥಿಗಳ ವೀಡಿಯೋ ಮಾಡಿ, ಇದರಿಂದ ಟಾರ್ಗೆಟ್ ಮಾಡುವುದು, ಮತ್ತು ಪಾಲಕರಿಗೆ ಕಳುಹಿಸುವುದಾಗಿ ಹೇಳಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ, ಸದ್ಯ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ, ಸೆಮಿಸ್ಟರ್ ಪರೀಕ್ಷೆಗಳು ಇನ್ನು ಕೇವಲ ಮೂರೇ ತಿಂಗಳಿನ ಅಂತರದಲ್ಲಿದ್ದು ಬೋಧಕರ ಕೊರತೆ ಇರುವುದು, ಇದರಿಂದ ಇನ್ನೂ ಎರಡು ಮೂರು ವಿಷಯಗಳು ಇನ್ನೂ ಪ್ರಾರಂಭವಾಗದೇ ಇರುವುದು ಶೈಕ್ಷಣಿಕ ಹಿನ್ನೆಡೆಗೆ ಕಾರಣವಾಗುತ್ತಿದೆ, ಪ್ರವೇಶಾತಿ ಪಡೆಯುವಾಗ ಶೇ. 70 ರಷ್ಟು ಪ್ರಾಯೋಗಿಕ ತರಬೇತಿ ಎಂದು ಹೇಳಿದ್ದರು ಆದರೆ ಈ ಸೆಮಿಸ್ಟರ್‌ಗೆ ಬೇಕಾದ ಯಂತ್ರೋಪಕರಣಗಳು ಇಲ್ಲ ಇದರಿಂದ ತಮ್ಮ ಭವಿಷ್ಯ ಕೌಶಲ್ಯಯುತವಾಗುವುದೇ ? ಜೊತೆಗೆ ಇಂತಹ ತರಬೇತಿಯಿಂದ ಉದ್ಯೋಗ ಸಿಗುವುದೇ ಎಂಬ ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗೆ ಬಂದ ಉಪನ್ಯಾಸಕರ ಪಾಠಗಳು ಅರ್ಥವಾಗಲು ಕಪ್ಪವಾಗುತ್ತಿದೆ, ಈ ವಿಷಯ ಪ್ರಾಂಶುಪಾಲರ ಗಮನಕ್ಕೆ ತಂದರೂ ಅವರು ವಿದ್ಯಾರ್ಥಿಗಳದೇ ತಪ್ಪು ಎಂಬAತೆ ಬಿಂಬಿಸುತ್ತಿದ್ದಾರೆ, ಸುಮಾರು ೨೫ ಸಾವಿರ ವಿದ್ಯಾರ್ಥಿ ವೇತನ ಬರುವುದಾಗಿ ಭರವಸೆ ನೀಡಿದ್ದರು, ಆದರೆ ಒಂದು ವರ್ಷ ಮೇಲಾದರೂ ಇನ್ನೂ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ಆರೋಪಿಸಲಾಗಿದೆ.
ಯಾವುದಾದರೂ ಸಮಸ್ಯೆಯನ್ನು ವಿದ್ಯಾರ್ಥಿಗಳು ಪ್ರಾಂಶುಪಾಲರ ಬಳಿ ಹೇಳಲು ಹೊರಟರೆ " ಬ್ಯುಸಿ ಆಗಿದ್ದಾರೆ. ಮೀಟಿಂಗ್ ನಡೆಲಿದೆ. ನಾಳೆ ಬನ್ನಿ" ಎಂದು ನಿಷ್ಕಾಳಜಿ ಕಾರಣ ನೀಡಿ ತಡೆಹಿಡಿಯಲಾಗುತ್ತಿದೆ, ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲ, ಈ ಮೊದಲಿದ್ದ ಉಪನ್ಯಾಸಕರನ್ನ ಯಾವುದೇ ಋಣಾತ್ಮಕ ಕಾರಣಗಳಿಲ್ಲದಿದ್ದರೂ ಕೇಂದ್ರ ಕಛೇರಿಯ ಮೇಲೆ ಆಪಾದನೆ ಹಾಕಿ ಸೇವೆಯಿಂದ ತೆಗೆಯಲಾಗಿದೆ, ಇನ್ನು ಹಾಸ್ಟೆಲ್‌ನ ಕ್ಯಾಂಟೀನ್‌ನಲ್ಲಿ ಯಾವುದೇ ರೀತಿಯಲ್ಲಿ ಸ್ವಚ್ಛತೆ ಇಲ್ಲದೇ ಹಾಗೇ ಊಟ ನೀಡುತ್ತಿರುವ ಕಾರಣ ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗುತ್ತಿದೆ, ಇದರಿಂದ ವಿದ್ಯಾಭ್ಯಾಸಕ್ಕೂಸಹ ಅಡಚಣೆಯಾಗುತ್ತಿದೆ ಎನ್ನಲಾಗಿದೆ.
ಇತ್ತೀಚೆಗೆ ಬಂದ ಉಪನ್ಯಾಸಕರು, ವಿದ್ಯಾರ್ಥಿಗಳ ಸಣ್ಯ ಸಣ್ಣ ತಪ್ಪಿಗೂ ಇನ್ನೂರು ಬಸ್ಕಿಗಳನ್ನು ಹೊಡೆಸಿ ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಸಮಸ್ಯೆಗೆ ಗುರಿ ಮಾಡುತ್ತಿದ್ದಾರೆ, ಈ ಎಲ್ಲ ಶೈಕ್ಷಣಿಕ ಸಮಸ್ಯೆಗಳನ್ನ ಪ್ರಾಂಶುಪಾಲರ ಬಳಿ ಹೇಳಲು ಹೋದರೆ ಅಟೆಂಡರ್‌ಗಳೇ ಇಲ್ಲಿ ಪ್ರಾಂಶುಪಾಲರAತೆ ವರ್ತಿಸುತ್ತಿದ್ದಾರೆ ಎಂದು ದೂರಿದರಲ್ಲದೇ ಹೊಸದಾಗಿ ಬಂದ ಪ್ರಾಂಶುಪಾಲರು ಮತ್ತು ಅಟೆಂಡರ್‌ಗಳಿಂದ ಅಭಿವೃದ್ಧಿಗಿಂತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೇ ಹೆಚ್ಚು ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಬಂಕಾಪೂರ ಪಿಎಸ್‌ಐ ಶ್ರೀಶೈಲ್ ಕೆಂಚಣ್ಣವರ, ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ, ಬಸವರಾಜ ಕಲ್ಲಪ್ಪನವರ, ವಿನಾಯಕ ಕುಮ್ಮೂರ, ಕನ್ನಡ ಜಾಗೃತ ವೇಧಿಕೆಯ ಜಿಲ್ಲಾದ್ಯಕ್ಷ ಹರೀಶಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ದೊಡ್ಡಮನಿ, ಲಂಕೇಶ ಛಲವಾದಿ ಆಕಾಶ ವನಹಳ್ಳಿ, ವಿನಾಯಕ ಆಚಾರ್ಯ, ಗಗನ ಹಡಪದ, ರಕ್ಷೀತ್ ಎಂ, ಗುರುರಾಜ, ವಿರೇಶ ಸೇರಿದಂತೆ ಜಿಟಿಟಿಸಿ ಕೇಂದ್ರದ ಎಲ್ಲ ವಿದ್ಯಾರ್ಥಿಗಳು, ಪೋಲೀಸ್ ಸಿಬ್ಬಂದಿಗಳು ಇದ್ದರು.
*ಬಾಕ್ಸ್ ಸುದ್ದಿ* : ನಾನೇ ಖುದ್ದಾಗಿ ವಿದ್ಯಾರ್ಥಿಗಳ ಸ್ಕಾಲರ್‌ಶಿಫ್ ವಿಚಾರವಾಗಿ ಹಿಂದುಳಿದ ಇಲಾಖೆಗೆ ಬೇಟಿ ಮಾಡಿದ್ದೇನೆ ಅವರು ಬರುತ್ತದೆ ಎಂದು ಹೇಳಿದ್ದಾರೆ, ಇನ್ನು ಅಟೆಂಡರ್‌ಗಳೇ ಡೆಮೋ ತೆಗೆದುಕೊಳ್ಳುತ್ತಾರೆ ಎಂಬ ವಿಚಾರವಾಗಿ, ಕ್ಲಾಸ್‌ಗಳು ನಡೆಯುತ್ತಿರುವುದನ್ನ ಬರೆದುಕೊಂಡು ಬರುತ್ತಾರೆ ಹೊರತು ಅಟೆಂಡರ್‌ಗಳೇ ಡೆಮೋ ತೆಗೆದುಕೊಳ್ಳುವುದಿಲ್ಲ, ನಮ್ಮ ಉಪನ್ಯಾಸಕರು ನೇರವಾಗಿ ಹೋಗಿ ಬೋಧನೆ ಮಾಡುವುದಿಲ್ಲ, ಅವರೂ ಸಹಿತ ಹೋಮ್‌ವರ್ಕ ಮಾಡಿಕೊಂಡು ಬಂದು ಬೋಧನೆ ಮಾಡುತ್ತಾರೆ, ನಾನು ಕೇಂದ್ರಕ್ಕೆ ಬಂದು ಈಗ ಒಂದು ತಿಂಗಳಾಗಿದೆ ಆದರೂ ಶಕ್ತಿಮೀರಿ ಕೇಂದ್ರದ ಬೆಳವಣಿಗೆಗೆ ಶ್ರಮಿಸುತ್ತೇವೆ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಗಮನ ಹರಿಸುತ್ತೇವೆ.
ಭಾರತಿ ದೊಡ್ಡಮನಿ
ಜಿಟಿಟಿಸಿ ಕೇಂದ್ರದ ಪ್ರಾಂಶುಪಾಲೆ
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.