logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಕ್ಕಳು ಪೌಷ್ಟಿಕ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು: ಡಾ. ಕವನ್ ದೇಶಪಾಂಡೆ ಅಳ್ನಾವರ ಸುದ್ದಿ : ಅಳ್ನಾವರ: ವಿಜ್ಞಾನ ಮತ್ತು ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ದೇಶದ ಭವಿಷ್ಯ ರೂಪಿಸುವ ಮಕ್ಕಳ ಆರೋಗ್ಯ ಸದೃಢವಾಗಿರುವುದು ಅತ್ಯಂತ ಅಗತ್ಯ. ಮಕ್ಕಳ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ ಎಂದು ಮಕ್ಕಳ ತಜ್ಞ ಡಾ. ಕವನ್ ಆರ್. ದೇಶಪಾಂಡೆ ಹೇಳಿದರು. ಇಲ್ಲಿನ ಅಳ್ನಾವರ ಎಜುಕೇಶನ್ ಸೊಸೈಟಿಯ ಶ್ರೀಮತಿ ಅನ್ನಪೂರ್ಣಾ ಚಂದ್ರಶೇಖರಯ್ಯ ಹಿರೇಮಠ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್, ಧಾರವಾಡ ಜಿಲ್ಲಾ ಶಾಖೆ ಹಾಗೂ ಧಾರವಾಡದ ಎಸ್.ಡಿ.ಎಂ. ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಬೇಕು. ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗದಂತೆ ಜಂಕ್‌ಫುಡ್‌ನಿಂದ ದೂರವಿದ್ದು, ಪೌಷ್ಟಿಕ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎಸ್.ಡಿ.ಎಂ. ಆಸ್ಪತ್ರೆಯ ನುರಿತ ವೈದ್ಯರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆಗಳನ್ನು ನೀಡಿದರು. ದಂತ ವೈದ್ಯ ಡಾ. ವಿಜಯ ತ್ರಾಸಾದ್ ಅವರು ಹಲ್ಲಿನ ಆರೋಗ್ಯದ ಕುರಿತು ಮಾಹಿತಿ ನೀಡಿ, ಪ್ರತಿದಿನ ಸರಿಯಾದ ರೀತಿಯಲ್ಲಿ ಹಲ್ಲುಜ್ಜುವ ಮೂಲಕ ದಂತ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಡಾ. ಮಾಧುರಿ ಕಬಾಡಿ ಅವರು ಹೆಣ್ಣುಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆಗಳನ್ನು ನೀಡಿದರು. ಆಹಾರ ಮತ್ತು ಪೌಷ್ಟಿಕ ತಜ್ಞೆ ರೇಖಾ ಮಾನೆ ಮಾತನಾಡಿ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಟಿಕಾಂಶಯುಕ್ತ ಆಹಾರ ಅತ್ಯಗತ್ಯ. ತರಕಾರಿ, ಹಣ್ಣು, ಮೊಟ್ಟೆ, ಹಾಲು, ಮೊಸರು, ಕಾಳು-ಬೆಳೆಗಳು ಹಾಗೂ ಸಾಕಷ್ಟು ನೀರನ್ನು ಸೇವಿಸಬೇಕು. ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ನಾರಿನಾಂಶ ಹೊಂದಿರುವ ಆಹಾರವನ್ನು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುವುದರ ಜತೆಗೆ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸಿ. ಹಿರೇಮಠ ಮಾತನಾಡಿ, ದಿನನಿತ್ಯದ ಪಾಠದ ಜತೆಗೆ ಮಕ್ಕಳು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ನುರಿತ ವೈದ್ಯರ ಸಲಹೆ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ವಿನಾಯಕ ಹಿರೇಮಠ, ಆಶೀಷ್ ಪಟೇಲ್, ಮುಖ್ಯ ಶಿಕ್ಷಕಿ ಶೋಭಾ ನಾಯಕ್, ಡಾ. ವಿ.ಡಿ. ಆದಿತ್ಯ, ಡಾ. ಸಿದ್ದಾರ್ಥ್, ಡಾ. ಪ್ರಶಾಂತ, ಡಾ. ರಿಚ್ಚು, ಡಾ. ಪ್ರತೀಕ್ಷಾ, ಡಾ. ಶ್ರುತಿ ಸೇರಿದಂತೆ ವೈದ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕಿ ಶಶಿಕಲಾ ಪೀಟರ್ ನಿರೂಪಿಸಿದರು. ಶ್ವೇತಾ ಮುಗಬಸ್ತಿ ವಂದಿಸಿದರು

2 hrs ago
user_Vineetmiskin Alnavar
Vineetmiskin Alnavar
Photographer Alnavar, Dharwad•
2 hrs ago
b5e23a62-7c71-4dbe-aabe-c4fe2da0ccb7

More news from ಕರ್ನಾಟಕ and nearby areas
  • ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ವಿಶೇಷ ಕಾರ್ಯಕ್ರಮ ಈದ್ ಮಿಲಾದ್ ಹಬ್ಬದ ಅಂಗವಾಗಿ ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಮಾಳಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ಹಾಗೂ ಆದರ್ಶಗಳ ಕುರಿತು ಜಾಗೃತಿ ಮೂಡಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಗುರುಗಳು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ, ಆದರ್ಶ ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.
    1
    ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ವಿಶೇಷ ಕಾರ್ಯಕ್ರಮ
ಈದ್ ಮಿಲಾದ್ ಹಬ್ಬದ ಅಂಗವಾಗಿ ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಮಾಳಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ಹಾಗೂ ಆದರ್ಶಗಳ ಕುರಿತು ಜಾಗೃತಿ ಮೂಡಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಗುರುಗಳು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ, ಆದರ್ಶ ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    16 hrs ago
  • ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ಲಿ ಪೂಜೆ ನೆರವೇರಿಸಿದ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ
    1
    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ಲಿ ಪೂಜೆ ನೆರವೇರಿಸಿದ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    35 min ago
  • ಕುಡಚಿ ಮತಕ್ಷೇತ್ರದ ಸುಟ್ಟಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ಮಹೇಶ ತಮ್ಮಣವರ ಸುಟ್ಟಟ್ಟಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಧ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.
    1
    ಕುಡಚಿ ಮತಕ್ಷೇತ್ರದ ಸುಟ್ಟಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ಮಹೇಶ ತಮ್ಮಣವರ
ಸುಟ್ಟಟ್ಟಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಧ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    56 min ago
  • *ಕುಡಚಿ ಶಾಸಕರಿಂದ ಮೃತ ವಿದ್ಯಾರ್ಥಿ ಗೌತಮ್ ಕುಟುಂಬಕ್ಕೆ ಸಾಂತ್ವನ* ಸುಟ್ಟಟ್ಟಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಗೌತಮ್ ಹಣಮಂತ ಭಜಂತ್ರಿ ಅವರ ಅನುಮಾನಸ್ಪದ ಸಾವು ರಾಜ್ಯಾದ್ಯಂತ ತೀವ್ರ ಆಘಾತ ಮೂಡಿಸಿದ್ದು, ಇದೀಗ ಕುಡಚಿ ಶಾಸಕ ಮಹೇಂದ್ರ ತಮ್ಮನವರ್ ಅವರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. *ಕುಡಚಿ ಶಾಸಕರಿಂದ ಮೃತ ವಿದ್ಯಾರ್ಥಿ ಗೌತಮ್ ಕುಟುಂಬಕ್ಕೆ ಸಾಂತ್ವನ* ಸುಟ್ಟಟ್ಟಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಗೌತಮ್ ಹಣಮಂತ ಭಜಂತ್ರಿ ಅವರ ಅನುಮಾನಸ್ಪದ ಸಾವು ರಾಜ್ಯಾದ್ಯಂತ ತೀವ್ರ ಆಘಾತ ಮೂಡಿಸಿದ್ದು, ಇದೀಗ ಕುಡಚಿ ಶಾಸಕ ಮಹೇಂದ್ರ ತಮ್ಮನವರ್ ಅವರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಗೌತಮ್ ಲಕ್ಷ್ಮಣ್ ಭಜಂತ್ರಿ ಮೃತಪಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಘಟನೆ ನಡೆದು ಕುಟುಂಬಸ್ಥರು ಆಘಾತದಲ್ಲಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ​ಈ ಹಿನ್ನೆಲೆಯಲ್ಲಿ ನಿಡಗುಂದಿ ಗ್ರಾಮಕ್ಕೆ ತೆರಳಿದ ಕುಡಚಿ ಕ್ಷೇತ್ರದ ಶಾಸಕರಾದ ಮಹೇಂದ್ರ ತಮ್ಮನವರ್ ಅವರು, ಮೃತ ಗೌತಮ್ ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಮಗುವನ್ನು ಕಳೆದುಕೊಂಡ ಪೋಷಕರ ನೋವಿನಲ್ಲಿ ಭಾಗಿಯಾದ ಶಾಸಕರು, ಕುಟುಂಬಕ್ಕೆ ಧೈರ್ಯ ತುಂಬಿದರು. *ಬೈಟ್* ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಂದ್ರ ತಮ್ಮನವರ್, "ವಿದ್ಯಾರ್ಥಿಯ ಸಾವಿನ ಕುರಿತು ಯಾವುದೇ ಮುಚ್ಚುಮರೆ ಇಲ್ಲದೆ ಉನ್ನತ ಮಟ್ಟದ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಯಾರೇ ಆಗಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು. ​ಜೊತೆಗೆ, ಸರ್ಕಾರದ ವತಿಯಿಂದ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವುದಾಗಿಯೂ ಶಾಸಕರು ಭರವಸೆ ನೀಡಿದ್ದಾರೆ. ಈ ವೇಳೆ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ ಲೋಕೇಶ್ ನಸಲಾಪುರೆ 85 ನ್ಯೂಸ್ box ಕನ್ನಡ
    1
    *ಕುಡಚಿ ಶಾಸಕರಿಂದ ಮೃತ ವಿದ್ಯಾರ್ಥಿ ಗೌತಮ್ ಕುಟುಂಬಕ್ಕೆ ಸಾಂತ್ವನ*

ಸುಟ್ಟಟ್ಟಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಗೌತಮ್ ಹಣಮಂತ ಭಜಂತ್ರಿ ಅವರ ಅನುಮಾನಸ್ಪದ ಸಾವು ರಾಜ್ಯಾದ್ಯಂತ ತೀವ್ರ ಆಘಾತ ಮೂಡಿಸಿದ್ದು, ಇದೀಗ ಕುಡಚಿ ಶಾಸಕ ಮಹೇಂದ್ರ ತಮ್ಮನವರ್ ಅವರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಗೌತಮ್ ಲಕ್ಷ್ಮಣ್ ಭಜಂತ್ರಿ ಮೃತಪಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಘಟನೆ ನಡೆದು ಕುಟುಂಬಸ್ಥರು ಆಘಾತದಲ್ಲಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
​ಈ ಹಿನ್ನೆಲೆಯಲ್ಲಿ ನಿಡಗುಂದಿ ಗ್ರಾಮಕ್ಕೆ ತೆರಳಿದ ಕುಡಚಿ ಕ್ಷೇತ್ರದ ಶಾಸಕರಾದ ಮಹೇಂದ್ರ ತಮ್ಮನವರ್ ಅವರು, ಮೃತ ಗೌತಮ್ ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಮಗುವನ್ನು ಕಳೆದುಕೊಂಡ ಪೋಷಕರ ನೋವಿನಲ್ಲಿ ಭಾಗಿಯಾದ ಶಾಸಕರು, ಕುಟುಂಬಕ್ಕೆ ಧೈರ್ಯ ತುಂಬಿದರು.
*ಬೈಟ್*
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಂದ್ರ ತಮ್ಮನವರ್, "ವಿದ್ಯಾರ್ಥಿಯ ಸಾವಿನ ಕುರಿತು ಯಾವುದೇ ಮುಚ್ಚುಮರೆ ಇಲ್ಲದೆ ಉನ್ನತ ಮಟ್ಟದ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಯಾರೇ ಆಗಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.
​ಜೊತೆಗೆ, ಸರ್ಕಾರದ ವತಿಯಿಂದ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವುದಾಗಿಯೂ ಶಾಸಕರು ಭರವಸೆ ನೀಡಿದ್ದಾರೆ. ಈ ವೇಳೆ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಲೋಕೇಶ್ ನಸಲಾಪುರೆ 85 ನ್ಯೂಸ್ box ಕನ್ನಡ
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    2 hrs ago
  • ರಾಯಬಾಗ ತಾಲೂಕಿನ ಕಂಕನವಾಡಿಯಲ್ಲಿ ಸ್ಟೋನ್ ರಾಖಿಗಳು ಲಭ್ಯ ಶ್ರೀರಂಗನಾಥ ಪಾನ್ ಶಾಪ್ ರಾಯಬಾಗ ತಾಲೂಕಿನ ಕಂಕನವಾಡಿ ಪಟ್ಟಣದ ಪ್ರತಿಷ್ಠಿತ ಪಾಂಡ್ ಶಾಪ್ ಆದಂತಹ ಶ್ರೀರಂಗನಾಥ ಪಾಂಡ್ ಶಾಪ್ ಮತ್ತು ಜನರಲ್ ಸ್ಟೋರ್ ಈ ಅಂಗಡಿಯಲ್ಲಿ ಎಲ್ಲ ರೀತಿಯ ರಾಖಿಗಳು ಒಳ್ಳೆಯ ಗುಣಮಟ್ಟದ ಸ್ಟೋನ್ ಹಾಗೂ ಡಿಸೈನ್ ರಾಕಿಗಳು ಎಲ್ಲ ರೀತಿಯ ರಾಖಿಗಳು ಇಲ್ಲಿ ಲಭ್ಯ ಇರುತ್ತವೆ
    4
    ರಾಯಬಾಗ ತಾಲೂಕಿನ ಕಂಕನವಾಡಿಯಲ್ಲಿ ಸ್ಟೋನ್ ರಾಖಿಗಳು ಲಭ್ಯ ಶ್ರೀರಂಗನಾಥ ಪಾನ್ ಶಾಪ್ 
ರಾಯಬಾಗ ತಾಲೂಕಿನ ಕಂಕನವಾಡಿ ಪಟ್ಟಣದ ಪ್ರತಿಷ್ಠಿತ ಪಾಂಡ್ ಶಾಪ್ ಆದಂತಹ ಶ್ರೀರಂಗನಾಥ ಪಾಂಡ್ ಶಾಪ್ ಮತ್ತು ಜನರಲ್ ಸ್ಟೋರ್ ಈ ಅಂಗಡಿಯಲ್ಲಿ ಎಲ್ಲ ರೀತಿಯ ರಾಖಿಗಳು ಒಳ್ಳೆಯ ಗುಣಮಟ್ಟದ ಸ್ಟೋನ್ ಹಾಗೂ ಡಿಸೈನ್ ರಾಕಿಗಳು ಎಲ್ಲ ರೀತಿಯ ರಾಖಿಗಳು ಇಲ್ಲಿ ಲಭ್ಯ ಇರುತ್ತವೆ
    user_Mahanagar news
    Mahanagar news
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    18 hrs ago
  • ಹುಡುಗಿ ಕೊಟ್ಟ ಮುತ್ತಿಗೆ ಬಿತ್ತು 5000 ಫೈನ್ ಹುಡುಗಿ ಕೊಟ್ಟ ಮುತ್ತಿಗೆ ಬಿತ್ತು 5000 ಫೈನ್
    1
    ಹುಡುಗಿ ಕೊಟ್ಟ ಮುತ್ತಿಗೆ ಬಿತ್ತು 5000 ಫೈನ್ ಹುಡುಗಿ ಕೊಟ್ಟ ಮುತ್ತಿಗೆ ಬಿತ್ತು 5000 ಫೈನ್
    user_ತಾಯ್ನಾಡು ನ್ಯೂಸ್ ಕನ್ನಡ
    ತಾಯ್ನಾಡು ನ್ಯೂಸ್ ಕನ್ನಡ
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    19 hrs ago
  • ಕೆಸ್ರೇಕರ್ ದಂಪತಿಗೆ ನ್ಯಾಯ ಸಿಗಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಮೆರವಣಿಗೆಗೆ ಎಲ್ಲರೂ ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ. [: 📍ಸಾಂಗ್ಲಿಯಲ್ಲಿ ನಡೆದ ಖಾನಾಪುರ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಕೇಸರೆಕರ ದಂಪತಿ ಹತ್ಯಾಕಾಂಡ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂಬ ಆಗ್ರಹದೊಂದಿಗೆ ನಾಳೆ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಸಮಸ್ತ ಖಾನಾಪುರ ತಾಲ್ಲೂಕಿನ ಹಿಂದೂ ಬಾಂಧವರ ವತಿಯಿಂದ ಭವ್ಯ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಮೆರವಣಿಗೆಯು ಖಾನಾಪುರದ ಲಕ್ಷ್ಮೀ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ನಡೆಯಲಿದೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲ್ಲೂಕಿನ ಎಲ್ಲಾ ನಾಗರಿಕರು, ವಿಶೇಷವಾಗಿ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕರಾದ ವಿಠ್ಠಲರಾವ್ ಹಲಗೇಕರ ಅವರು ಮನವಿ ಮಾಡಿದ್ದಾರೆ. 📍 ಮೆರವಣಿಗೆಯ ಸಮಯ: ನಾಳೆ ಬೆಳಿಗ್ಗೆ ಸರಿಯಾಗಿ 10:00 ಗಂಟೆಗೆ 📍 ಮಾರ್ಗ: ಲಕ್ಷ್ಮೀ ದೇವಸ್ಥಾನ → ತಹಶೀಲ್ದಾರ್ ಕಚೇರಿ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆಯೊಂದಿಗೆ ನಡೆಯಲಿರುವ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ. 🙏 [26/08, 5:21 pm] +91 97433 40230: ಕೆಸ್ರೇಕರ್ ದಂಪತಿ ಕೊಲೆ ಪ್ರಕರಣ: ನ್ಯಾಯಕ್ಕಾಗಿ ಮೆರವಣಿಗೆ ಖಾನಾಪುರ: ಕೆಸ್ರೇಕರ್ ದಂಪತಿ ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಪ್ರಕರಣದ ಸತ್ಯಾಸತ್ಯತೆ ಹೊರಬಂದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದೊಂದಿಗೆ ನಾಳೆ ಖಾನಾಪುರದಲ್ಲಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನ್ಯಾಯದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಖಾನಾಪುರ ಬಿಜೆಪಿ ಹಿರಿಯ ನಾಯಕ ಪ್ರಮೋದ್ ಕೊಚೇರಿ ಅವರು ಮನವಿ ಮಾಡಿದ್ದಾರೆ. “ಕೆಸ್ರೇಕರ್ ದಂಪತಿಗೆ ನ್ಯಾಯ ಸಿಗಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಮೆರವಣಿಗೆಗೆ ಎಲ್ಲರೂ ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.
    1
    ಕೆಸ್ರೇಕರ್ ದಂಪತಿಗೆ ನ್ಯಾಯ ಸಿಗಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಮೆರವಣಿಗೆಗೆ ಎಲ್ಲರೂ ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.
[: 📍ಸಾಂಗ್ಲಿಯಲ್ಲಿ ನಡೆದ ಖಾನಾಪುರ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಕೇಸರೆಕರ ದಂಪತಿ ಹತ್ಯಾಕಾಂಡ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂಬ ಆಗ್ರಹದೊಂದಿಗೆ ನಾಳೆ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಸಮಸ್ತ ಖಾನಾಪುರ ತಾಲ್ಲೂಕಿನ ಹಿಂದೂ ಬಾಂಧವರ ವತಿಯಿಂದ ಭವ್ಯ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ.
ಈ ಮೆರವಣಿಗೆಯು ಖಾನಾಪುರದ ಲಕ್ಷ್ಮೀ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ನಡೆಯಲಿದೆ.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲ್ಲೂಕಿನ ಎಲ್ಲಾ ನಾಗರಿಕರು, ವಿಶೇಷವಾಗಿ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕರಾದ ವಿಠ್ಠಲರಾವ್ ಹಲಗೇಕರ ಅವರು ಮನವಿ ಮಾಡಿದ್ದಾರೆ.
📍 ಮೆರವಣಿಗೆಯ ಸಮಯ: ನಾಳೆ ಬೆಳಿಗ್ಗೆ ಸರಿಯಾಗಿ 10:00 ಗಂಟೆಗೆ
📍 ಮಾರ್ಗ: ಲಕ್ಷ್ಮೀ ದೇವಸ್ಥಾನ → ತಹಶೀಲ್ದಾರ್ ಕಚೇರಿ
ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆಯೊಂದಿಗೆ ನಡೆಯಲಿರುವ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ. 🙏
[26/08, 5:21 pm] +91 97433 40230: ಕೆಸ್ರೇಕರ್ ದಂಪತಿ ಕೊಲೆ ಪ್ರಕರಣ: ನ್ಯಾಯಕ್ಕಾಗಿ ಮೆರವಣಿಗೆ
ಖಾನಾಪುರ: ಕೆಸ್ರೇಕರ್ ದಂಪತಿ ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಪ್ರಕರಣದ ಸತ್ಯಾಸತ್ಯತೆ ಹೊರಬಂದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದೊಂದಿಗೆ ನಾಳೆ ಖಾನಾಪುರದಲ್ಲಿ ಮೆರವಣಿಗೆ ನಡೆಯಲಿದೆ.
ಈ ಮೆರವಣಿಗೆಯಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನ್ಯಾಯದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಖಾನಾಪುರ ಬಿಜೆಪಿ ಹಿರಿಯ ನಾಯಕ ಪ್ರಮೋದ್ ಕೊಚೇರಿ ಅವರು ಮನವಿ ಮಾಡಿದ್ದಾರೆ.
“ಕೆಸ್ರೇಕರ್ ದಂಪತಿಗೆ ನ್ಯಾಯ ಸಿಗಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಮೆರವಣಿಗೆಗೆ ಎಲ್ಲರೂ ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.
    user_ನಮ್ಮ ಬೆಳಗಾವಿ  ವಾರ್ತಾ
    ನಮ್ಮ ಬೆಳಗಾವಿ ವಾರ್ತಾ
    Photographer ಬೆಳಗಾವಿ, ಬೆಳಗಾವಿ, ಕರ್ನಾಟಕ•
    20 hrs ago
  • ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
    1
    ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ
ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು.
ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು.
ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.