ಬೆಂಗಳೂರು-ಬೆಳಗಾವಿ ಮಾರ್ಗ ಸೇರಿ ಮೂರು ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ - PM FLAGS OFF VANDE BHARAT EXPRESS ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್ ನೀಡಿದರು.ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಬೆಂಗಳೂರಿನಿಂದ ಬೆಳಗಾವಿ, ಅಮೃತಸರದಿಂದ ಮಾತಾ ವೈಷ್ಣೋದೇವಿ ಕತ್ರಾ ಮತ್ತು ನಾಗ್ಪುರ (ಅಜ್ನಿ) ದಿಂದ ಪುಣೆ ಹೋಗುವ ಮೂರು ವಂದೇ ಭಾರತ್ಗೆ ಹಸಿರು ನಿಶಾನೆ ತೋರಿದರು. ಈ ಹೈಸ್ಪೀಡ್ ರೈಲುಗಳು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲಿದೆ. ಬಹುನಿರೀಕ್ಷಿತ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ರಾಜ್ಯದ 11ನೇ ಹೊಸ ವಂದೇ ಭಾರತ್ ರೈಲು ಸೇವೆಯಾಗಿದೆ. ಬೆಳಗಾವಿ-ಬೆಂಗಳೂರು ಮಾರ್ಗವನ್ನು ಈ ವಂದೇ ಭಾರತ್ ರೈಲು ಸುಮಾರು 8.50 ಗಂಟೆಗಳಲ್ಲಿ ಕ್ರಮಿಸಲಿದೆ. ವಿದ್ಯಾರ್ಥಿಗಳ ಜೊತೆ ಸಂವಾದ : ಇದೇ ವೇಳೆ ನೂತನ ವಂದೇ ಭಾರತ್ ರೈಲು ಒಳಗೆ ಹೆಜ್ಜೆ ಹಾಕಿದ ಪ್ರಧಾನಿ ಮೋದಿ ಅವರು ಕೂತಿದ್ದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಖುಷಿ ಹಂಚಿಕೊಂಡರು. ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಿ. ಸೋಮಣ್ಣ, ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಸದ ಪಿ. ಸಿ. ಮೋಹನ್ ಉಪಸ್ಥಿತರಿದ್ದರು. ವಾರದಲ್ಲಿ 6 ದಿನ ಸಂಚಾರ: ಬುಧವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ವಂದೇ ಭಾರತ್ ಬೆಂಗಳೂರು-ಬೆಳಗಾವಿ ಸಂಚರಿಸಲಿದೆ. ಪ್ರತಿದಿನ ಬೆಳಗ್ಗೆ 5.20ಕ್ಕೆ ಬೆಳಗಾವಿಯಿಂದ ಹೊರಡಲಿರುವ ವಂದೇ ಭಾರತ್ ಮಧ್ಯಾಹ್ನ 1.50ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣಕ್ಕೆ ತಲುಪಲಿದೆ. ಮತ್ತೆ ಮಧ್ಯಾಹ್ನ 2.20ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ವಾಪಸ್ ಹೊರಡಲಿದ್ದು, ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಲುಗಡೆ ಎಲ್ಲೆಲ್ಲಿ? ಬೆಳಗಾವಿಯಿಂದ ಬರುವಾಗ ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಎಸ್‌ಎಂಎಂ ಹಾವೇರಿ, ದಾವಣಗೆರೆ, ತುಮಕೂರು, ಯಶವಂತಪುರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 2.28ಕ್ಕೆ ಹೊರಟು ಯಶವಂತಪುರ, ತುಮಕೂರು, ದಾವಣಗೆರೆ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ನಿಲುಗಡೆಯಾಗಲಿದೆ. ದರ ಹೀಗಿದೆ: ಸುಮಾರು 8 ಜಿಲ್ಲೆಗಳನ್ನು ಹಾದು ಹೋಗುವ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು 8 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 4 ಮೋಟಾರ್ ಕಾರ್, 1 ಟ್ರೈಲಿಂಗ್ ಕಾರ್, 1 ಎಕ್ಸಿಕ್ಯುಟಿವ್ ಕ್ಲಾಸ್/ಟ್ರೈಲಿಂಗ್ ಕಾರ್ ಮತ್ತು 2 ಡ್ರೈವಿಂಗ್ ಟ್ರೈಲರ್ ಕಾರ್‌ಗಳನ್ನು ಹೊಂದಿರಲಿದೆ. ಬೆಂಗಳೂರು-ಬೆಳಗಾವಿ ಚೇರ್ ಕಾರ್ (ಸಿಸಿ) ಟಿಕಿಟ್ ದರ 1,264 ರೂ. ಹಾಗೂ ಎಕ್ಸಿಕ್ಯುಟಿವ್ ಚೇರ್ ಕಾರ್ (ಇಸಿ) ಟಿಕೆಟ್ ದರ 2,535 ರೂ. ಇರಲಿದೆ.

- चंदुर ता. चिक्कोडी जिल्हा.बेळगावी मध्ये एक दुर्दैवी घटना घडली आहे बाळू भाऊ माने यांना पाच मुले असता वसंत बाळू माने वडील वारल्यानंतर यांच्या नावे शेताची डायरी झाली,वसंत बाळू माने या चार भावासाठी ते आपला परपंचा न पहाता यांच्यासाठी ते सदैव प्रयत्न केले, आपल्या मुला बाळांच्या कडे न पहाता ते आपल्या भावाच्या कडे सतत पाहून त्यांना आज त्यांच्या पाठीशी असलेला भाऊ दिनकर बाळू माने यांच्याकडे कारभार असल्यामुळे या भावंडांना फसवणूक करून पैसाचे गट्टरे करुन नदीकाठावरील मात्ती विकली आंब्याची झाडे विकली सागवान झाडे विकली नविन घर बांधत असताना पैसा खाल्ला, भावना काही कळू दिला नाही,पण वसंत बाळू माने यांचे जेष्ठ चिरंजीव यांच्या लक्षात आले सर्व काही वडीलांच्या नावे असता आमचा बाप गरीब का? आणि आमच्या बापाची प्रगती का? नाही यांनी आमच्या वडीलाचा ऊस का तिनं वर्षे जात नाही ही एका बापाची पाच मुले असता त्या रानांत वाट हवी व असायला पाहिजे,पण यात राजकारण प्रवेश केल्यामुळे राजकारण करणारे लोक या भावांची ताटातूट करुन या घराण्याचे एकोपा नष्ट करून भावा भावात भांडण पेटवून या घरानाचे पंच लोक वापर करून वसंत बाळू माने या मुलांची वाट लावुन आज तिनं वर्षं ऊस तसाच शेतात असल्यामुळे त्यांच्या मुलांनी पोलिस ठाण्यात न्याय मागण्यासाठी गेले तरी हे पंच लोक तिथे पर्यत जाऊन त्या फॉमिलीवर दाडूक शाही दाखवून एकमेकांच्या वर केसे करुन हा पंच त्या घराची माझ्या बघतच होता हे वसंत बाळू माने यांच्या मुलाच्या लक्षात आल्यानंतर तो बिना घाबरता लढाई सुरुच ठेवला असून आज सदरी न्यायालयात या शेताचा गुन्हा दाखल असून शुध्दा पंच लोक केवल स्वार्थासाठी व खुर्ची साठी या घराण्याचा वापर करत गेला आहे,आणखी या पंच लोकांना गावात न्याय मिटवता येत नसेल ,तर पोलिस स्टेशन मध्ये यांना येण्याचा अधिकार नाही तर पण पोलिस ठाण्यात हे पंच लोक गरीब कुटुंबाला धमकी देणे शिवीगाळ करेने असे सतत पोलिस ठाण्यात घडत चाले आहे यासाठी एस पी यांना तक्रार केली की या पोलिस ठाण्यातील हि सि सी कॅमेरे ओपन करून आम्हाला न्याय द्या अशी प्रार्थना केली तरी या अंकली स्टेशन मध्ये गरीब कुटुंबाची दाद घेतली जात नाही, पंच लोक पुढाकार घेऊन खोटी खोटी केस करण्यात माहीर असतात, मायबाप सरकारला हेवडच सांगणं आहे की गावत न्याय मिटत नसेल आमच्यासाठी पोलिस स्टेशन असतं पोलिस मध्ये न्याय मिळत नसेल तर गरीबांच्या साठी न्यायालय असतं पंच लोकांनी स्वताच्या स्वार्थासाठी राजकीय फायद्यासाठी गावातील भांडण मिटविण्याचा प्रयत्न केला पाहिजे भांडण लावायचा नाही,आज रोजी या घराण्याचा राजकीय खेळ होत आहे तरी सत्य काय आहे याची सखोल चौकशी व्हावी कुणावरती अन्याय होत आहे,कुणाला कोन फसवत आहे, या सर्वांच्या पाठीमागचे कारण शोधावे,1
- S.N.S.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಬೋಳೆ ಕುಮಟಾ. ದಿನಾಂಕ 27-12-2025 ರಂದು ನಡೆದ ವಾಷಿ೯ಕ ಸ್ನೇಹ ಸಮ್ಮೇಳನ.1
- Post by SRI RABINDRANATH TAGORE HIGH SCHOOL BIJAPUR1
- Post by ALTAF,❤️🙏1
- ರೈತರ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ 3ನೇ ವರ್ಷದ ವಿಜಯನಗರ ಜಿಲ್ಲಾ ರೈತರ ಸಮಾವೇಶದಲ್ಲಿ ಶ್ರೀಮತಿ ಬಿ. ಎಲ್. ರಾಣಿ ಸಂಯುಕ್ತ ಅಮ್ಮನವರು ಭಾಗವಹಿಸಿ, ರೈತರ ಹಿತಾಸಕ್ತಿಗಾಗಿ ಇಂದು ಮತ್ತು ಮುಂದಿನ ದಿನಗಳಲ್ಲಿಯೂ ಸದಾಕಾಲ ತಮ್ಮ ಬೆಂಬಲ ಇರಲಿದೆ ಎಂದು ಭರವಸೆ ನೀಡಿದರು.1
- ಚಿತ್ರದುರ್ಗದ ಐತಿಹಾಸಿಕ ಕೋಟೆ ವೀಕ್ಷಣೆಗೆ ಹರಿದು ಬಂದ ಪ್ರವಾಸಿಗರ ದಂಡು1
- ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಯರಗೇರಾ ಗ್ರಾಮದಲ್ಲಿ ಸರ್ವಧರ್ಮ ಭಾವೈಕ್ಯತೆಯ ಸಂಕೇತವಾದ ಶ್ರೀ ದರ್ಗಾ ಹಜರತ್ ಬಡೇಸಾಹೇಬ್ ಉರುಸಿನಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ದದ್ದಲ್ ಅವರು ಭಾಗವಹಿಸಿ ಆಶೀರ್ವಾದ ಪಡೆದರು. ಈ ವೇಳೆ ಊರಿನ ಹಿರಿಯ ಮುಖಂಡರು, ಸುತ್ತಲಿನ ಗ್ರಾಮಗಳ ಮುಖಂಡರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.1
- ಹೊಳಲ್ಕೆರೆ ಪಟ್ಟಣದಲ್ಲಿ ಹಾಡು ಹಗಲೆ ಲಗ್ಗೆ ಇಟ್ಟ ಕರಡಿ..1