logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಆನೆಗುಂದಿ ರಸ್ತೆ ಕಾಮಗಾರಿ ಅವ್ಯವಸ್ಥೆ; ಹಗಲಲ್ಲೇ ಸೇತುವೆ ಅಗೆದು ರಸ್ತೆ ಬಂದ್ – ಸಾರ್ವಜನಿಕರ ಪರದಾಟ ​ಗಂಗಾವತಿ: ನಗರದ ಪ್ರಮುಖ ಸಂಪರ್ಕ ಕೊಂಡಿಯಾದ ಆನೆಗುಂದಿ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಲಲಿತ್ ಮಹಲ್ ಸಮೀಪದ ಸೇತುವೆಯನ್ನು ಹಗಲು ಹೊತ್ತಿನಲ್ಲೇ ಏಕಾಏಕಿ ಜೆಸಿಬಿ ಮೂಲಕ ಸಂಪೂರ್ಣವಾಗಿ ಅಗೆದು ರಸ್ತೆ ಬಂದ್ ಮಾಡಿರುವುದರಿಂದ ವಾಹನ ಸವಾರರು ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಡುವಂತಾಯಿತು. ​ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್: ಗಂಗಾವತಿ ಮತ್ತು ಆನೆಗುಂದಿ ನಡುವೆ ಪ್ರತಿನಿತ್ಯ ಲಕ್ಷಾಂತರ ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನಗಳು ಸಂಚರಿಸುತ್ತವೆ. ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ, ಯಾವುದೇ ಮುನ್ಸೂಚನೆ ಅಥವಾ ಬದಲಿ ಮಾರ್ಗವಿಲ್ಲದೆ ನೇರವಾಗಿ ಸೇತುವೆಯನ್ನು ಅಗೆಯಲಾಗಿದೆ. ಇದರಿಂದಾಗಿ ಬಸ್ಸು, ಕಾರು ಹಾಗೂ ದ್ವಿಚಕ್ರ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ​ಆಂಬುಲೆನ್ಸ್ ಸಂಚಾರಕ್ಕೂ ಅಡ್ಡಿ: ಇದೇ ಮಾರ್ಗದ ಮುಂದೆ ಸರ್ಕಾರಿ ಮಕ್ಕಳ ಆಸ್ಪತ್ರೆಯಿದ್ದು, ರಸ್ತೆ ಬಂದ್ ಆಗಿದ್ದರಿಂದ ತುರ್ತು ಚಿಕಿತ್ಸೆಗೆ ತೆರಳುವ ಆಂಬುಲೆನ್ಸ್ ಹಾಗೂ ರೋಗಿಗಳಿಗೂ ತೀವ್ರ ತೊಂದರೆಯಾಯಿತು. ಅಲ್ಲದೆ, ರಸ್ತೆ ಅಗಲೀಕರಣದಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ​ಗುತ್ತಿಗೆದಾರರ ವಿರುದ್ಧ ಆಕ್ರೋಶ: ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ರೋಸಿಹೋದ ಸಾರ್ವಜನಿಕರು, ಸ್ಥಳದಲ್ಲಿದ್ದ ಜೆಸಿಬಿ ಆಪರೇಟರ್ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ತೀವ್ರ ವಾದ-ವಿವಾದದ ನಂತರ ಕೇವಲ ಏಕಮುಖ ಸಂಚಾರಕ್ಕೆ (ಒಂದೇ ಬದಿಯಲ್ಲಿ ಹೋಗಲು-ಬರಲು) ಮಾತ್ರ ಅನುವು ಮಾಡಿಕೊಡಲಾಗಿದೆ. ಆದರೂ, ಉಳಿದ ಅರ್ಧ ಕೆಲಸವನ್ನು ಪೂರ್ಣಗೊಳಿಸದೆ ಜೆಸಿಬಿಯನ್ನು ರಸ್ತೆಯಲ್ಲೇ ನಿಲ್ಲಿಸಿ ನಿರ್ಲಕ್ಷ್ಯ ವಹಿಸಲಾಗಿದೆ. ​ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಗುಣಮಟ್ಟದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

21 hrs ago
user_Sharanappa.R
Sharanappa.R
Local News Reporter ಗಂಗಾವತಿ, ಕೊಪ್ಪಳ, ಕರ್ನಾಟಕ•
21 hrs ago
8f6c73ca-b4c2-483d-bc61-68fe92721ad1

ಆನೆಗುಂದಿ ರಸ್ತೆ ಕಾಮಗಾರಿ ಅವ್ಯವಸ್ಥೆ; ಹಗಲಲ್ಲೇ ಸೇತುವೆ ಅಗೆದು ರಸ್ತೆ ಬಂದ್ – ಸಾರ್ವಜನಿಕರ ಪರದಾಟ ​ಗಂಗಾವತಿ: ನಗರದ ಪ್ರಮುಖ ಸಂಪರ್ಕ ಕೊಂಡಿಯಾದ ಆನೆಗುಂದಿ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಲಲಿತ್ ಮಹಲ್ ಸಮೀಪದ ಸೇತುವೆಯನ್ನು ಹಗಲು ಹೊತ್ತಿನಲ್ಲೇ ಏಕಾಏಕಿ ಜೆಸಿಬಿ ಮೂಲಕ ಸಂಪೂರ್ಣವಾಗಿ ಅಗೆದು ರಸ್ತೆ ಬಂದ್ ಮಾಡಿರುವುದರಿಂದ

0c42e52e-e0f3-48a5-b458-4e036937c7c4

ವಾಹನ ಸವಾರರು ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಡುವಂತಾಯಿತು. ​ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್: ಗಂಗಾವತಿ ಮತ್ತು ಆನೆಗುಂದಿ ನಡುವೆ ಪ್ರತಿನಿತ್ಯ ಲಕ್ಷಾಂತರ ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನಗಳು ಸಂಚರಿಸುತ್ತವೆ. ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ, ಯಾವುದೇ ಮುನ್ಸೂಚನೆ ಅಥವಾ ಬದಲಿ ಮಾರ್ಗವಿಲ್ಲದೆ ನೇರವಾಗಿ ಸೇತುವೆಯನ್ನು ಅಗೆಯಲಾಗಿದೆ. ಇದರಿಂದಾಗಿ ಬಸ್ಸು, ಕಾರು ಹಾಗೂ ದ್ವಿಚಕ್ರ ವಾಹನಗಳು

76008235-758e-4ffb-9fea-3897239d040b

ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ​ಆಂಬುಲೆನ್ಸ್ ಸಂಚಾರಕ್ಕೂ ಅಡ್ಡಿ: ಇದೇ ಮಾರ್ಗದ ಮುಂದೆ ಸರ್ಕಾರಿ ಮಕ್ಕಳ ಆಸ್ಪತ್ರೆಯಿದ್ದು, ರಸ್ತೆ ಬಂದ್ ಆಗಿದ್ದರಿಂದ ತುರ್ತು ಚಿಕಿತ್ಸೆಗೆ ತೆರಳುವ ಆಂಬುಲೆನ್ಸ್ ಹಾಗೂ ರೋಗಿಗಳಿಗೂ ತೀವ್ರ ತೊಂದರೆಯಾಯಿತು. ಅಲ್ಲದೆ, ರಸ್ತೆ ಅಗಲೀಕರಣದಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ​ಗುತ್ತಿಗೆದಾರರ ವಿರುದ್ಧ ಆಕ್ರೋಶ: ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ರೋಸಿಹೋದ ಸಾರ್ವಜನಿಕರು, ಸ್ಥಳದಲ್ಲಿದ್ದ ಜೆಸಿಬಿ ಆಪರೇಟರ್ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ

ತೀವ್ರ ವಾದ-ವಿವಾದದ ನಂತರ ಕೇವಲ ಏಕಮುಖ ಸಂಚಾರಕ್ಕೆ (ಒಂದೇ ಬದಿಯಲ್ಲಿ ಹೋಗಲು-ಬರಲು) ಮಾತ್ರ ಅನುವು ಮಾಡಿಕೊಡಲಾಗಿದೆ. ಆದರೂ, ಉಳಿದ ಅರ್ಧ ಕೆಲಸವನ್ನು ಪೂರ್ಣಗೊಳಿಸದೆ ಜೆಸಿಬಿಯನ್ನು ರಸ್ತೆಯಲ್ಲೇ ನಿಲ್ಲಿಸಿ ನಿರ್ಲಕ್ಷ್ಯ ವಹಿಸಲಾಗಿದೆ. ​ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಗುಣಮಟ್ಟದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

More news from ಕರ್ನಾಟಕ and nearby areas
  • ಆನೆಗುಂದಿ ರಸ್ತೆ ಕಾಮಗಾರಿ ಅವ್ಯವಸ್ಥೆ; ಹಗಲಲ್ಲೇ ಸೇತುವೆ ಅಗೆದು ರಸ್ತೆ ಬಂದ್ – ಸಾರ್ವಜನಿಕರ ಪರದಾಟ ​ಗಂಗಾವತಿ: ನಗರದ ಪ್ರಮುಖ ಸಂಪರ್ಕ ಕೊಂಡಿಯಾದ ಆನೆಗುಂದಿ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಲಲಿತ್ ಮಹಲ್ ಸಮೀಪದ ಸೇತುವೆಯನ್ನು ಹಗಲು ಹೊತ್ತಿನಲ್ಲೇ ಏಕಾಏಕಿ ಜೆಸಿಬಿ ಮೂಲಕ ಸಂಪೂರ್ಣವಾಗಿ ಅಗೆದು ರಸ್ತೆ ಬಂದ್ ಮಾಡಿರುವುದರಿಂದ ವಾಹನ ಸವಾರರು ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಡುವಂತಾಯಿತು. ​ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್: ಗಂಗಾವತಿ ಮತ್ತು ಆನೆಗುಂದಿ ನಡುವೆ ಪ್ರತಿನಿತ್ಯ ಲಕ್ಷಾಂತರ ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನಗಳು ಸಂಚರಿಸುತ್ತವೆ. ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ, ಯಾವುದೇ ಮುನ್ಸೂಚನೆ ಅಥವಾ ಬದಲಿ ಮಾರ್ಗವಿಲ್ಲದೆ ನೇರವಾಗಿ ಸೇತುವೆಯನ್ನು ಅಗೆಯಲಾಗಿದೆ. ಇದರಿಂದಾಗಿ ಬಸ್ಸು, ಕಾರು ಹಾಗೂ ದ್ವಿಚಕ್ರ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ​ಆಂಬುಲೆನ್ಸ್ ಸಂಚಾರಕ್ಕೂ ಅಡ್ಡಿ: ಇದೇ ಮಾರ್ಗದ ಮುಂದೆ ಸರ್ಕಾರಿ ಮಕ್ಕಳ ಆಸ್ಪತ್ರೆಯಿದ್ದು, ರಸ್ತೆ ಬಂದ್ ಆಗಿದ್ದರಿಂದ ತುರ್ತು ಚಿಕಿತ್ಸೆಗೆ ತೆರಳುವ ಆಂಬುಲೆನ್ಸ್ ಹಾಗೂ ರೋಗಿಗಳಿಗೂ ತೀವ್ರ ತೊಂದರೆಯಾಯಿತು. ಅಲ್ಲದೆ, ರಸ್ತೆ ಅಗಲೀಕರಣದಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ​ಗುತ್ತಿಗೆದಾರರ ವಿರುದ್ಧ ಆಕ್ರೋಶ: ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ರೋಸಿಹೋದ ಸಾರ್ವಜನಿಕರು, ಸ್ಥಳದಲ್ಲಿದ್ದ ಜೆಸಿಬಿ ಆಪರೇಟರ್ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ತೀವ್ರ ವಾದ-ವಿವಾದದ ನಂತರ ಕೇವಲ ಏಕಮುಖ ಸಂಚಾರಕ್ಕೆ (ಒಂದೇ ಬದಿಯಲ್ಲಿ ಹೋಗಲು-ಬರಲು) ಮಾತ್ರ ಅನುವು ಮಾಡಿಕೊಡಲಾಗಿದೆ. ಆದರೂ, ಉಳಿದ ಅರ್ಧ ಕೆಲಸವನ್ನು ಪೂರ್ಣಗೊಳಿಸದೆ ಜೆಸಿಬಿಯನ್ನು ರಸ್ತೆಯಲ್ಲೇ ನಿಲ್ಲಿಸಿ ನಿರ್ಲಕ್ಷ್ಯ ವಹಿಸಲಾಗಿದೆ. ​ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಗುಣಮಟ್ಟದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
    4
    ಆನೆಗುಂದಿ ರಸ್ತೆ ಕಾಮಗಾರಿ ಅವ್ಯವಸ್ಥೆ; ಹಗಲಲ್ಲೇ ಸೇತುವೆ ಅಗೆದು ರಸ್ತೆ ಬಂದ್ – ಸಾರ್ವಜನಿಕರ ಪರದಾಟ
​ಗಂಗಾವತಿ: ನಗರದ ಪ್ರಮುಖ ಸಂಪರ್ಕ ಕೊಂಡಿಯಾದ ಆನೆಗುಂದಿ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಲಲಿತ್ ಮಹಲ್ ಸಮೀಪದ ಸೇತುವೆಯನ್ನು ಹಗಲು ಹೊತ್ತಿನಲ್ಲೇ ಏಕಾಏಕಿ ಜೆಸಿಬಿ ಮೂಲಕ ಸಂಪೂರ್ಣವಾಗಿ ಅಗೆದು ರಸ್ತೆ ಬಂದ್ ಮಾಡಿರುವುದರಿಂದ ವಾಹನ ಸವಾರರು ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಡುವಂತಾಯಿತು.
​ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್:
ಗಂಗಾವತಿ ಮತ್ತು ಆನೆಗುಂದಿ ನಡುವೆ ಪ್ರತಿನಿತ್ಯ ಲಕ್ಷಾಂತರ ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನಗಳು ಸಂಚರಿಸುತ್ತವೆ. ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ, ಯಾವುದೇ ಮುನ್ಸೂಚನೆ ಅಥವಾ ಬದಲಿ ಮಾರ್ಗವಿಲ್ಲದೆ ನೇರವಾಗಿ ಸೇತುವೆಯನ್ನು ಅಗೆಯಲಾಗಿದೆ. ಇದರಿಂದಾಗಿ ಬಸ್ಸು, ಕಾರು ಹಾಗೂ ದ್ವಿಚಕ್ರ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು.
​ಆಂಬುಲೆನ್ಸ್ ಸಂಚಾರಕ್ಕೂ ಅಡ್ಡಿ:
ಇದೇ ಮಾರ್ಗದ ಮುಂದೆ ಸರ್ಕಾರಿ ಮಕ್ಕಳ ಆಸ್ಪತ್ರೆಯಿದ್ದು, ರಸ್ತೆ ಬಂದ್ ಆಗಿದ್ದರಿಂದ ತುರ್ತು ಚಿಕಿತ್ಸೆಗೆ ತೆರಳುವ ಆಂಬುಲೆನ್ಸ್ ಹಾಗೂ ರೋಗಿಗಳಿಗೂ ತೀವ್ರ ತೊಂದರೆಯಾಯಿತು. ಅಲ್ಲದೆ, ರಸ್ತೆ ಅಗಲೀಕರಣದಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
​ಗುತ್ತಿಗೆದಾರರ ವಿರುದ್ಧ ಆಕ್ರೋಶ:
ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ರೋಸಿಹೋದ ಸಾರ್ವಜನಿಕರು, ಸ್ಥಳದಲ್ಲಿದ್ದ ಜೆಸಿಬಿ ಆಪರೇಟರ್ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ತೀವ್ರ ವಾದ-ವಿವಾದದ ನಂತರ ಕೇವಲ ಏಕಮುಖ ಸಂಚಾರಕ್ಕೆ (ಒಂದೇ ಬದಿಯಲ್ಲಿ ಹೋಗಲು-ಬರಲು) ಮಾತ್ರ ಅನುವು ಮಾಡಿಕೊಡಲಾಗಿದೆ. ಆದರೂ, ಉಳಿದ ಅರ್ಧ ಕೆಲಸವನ್ನು ಪೂರ್ಣಗೊಳಿಸದೆ ಜೆಸಿಬಿಯನ್ನು ರಸ್ತೆಯಲ್ಲೇ ನಿಲ್ಲಿಸಿ ನಿರ್ಲಕ್ಷ್ಯ ವಹಿಸಲಾಗಿದೆ.
​ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಗುಣಮಟ್ಟದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
    user_Sharanappa.R
    Sharanappa.R
    Local News Reporter ಗಂಗಾವತಿ, ಕೊಪ್ಪಳ, ಕರ್ನಾಟಕ•
    21 hrs ago
  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರರಿಗೆ ಹೂಗಾರ ಸಮಾಜದಿಂದ ಸನ್ಮಾನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರರಿಗೆ ಹೂಗಾರ ಸಮಾಜದಿಂದ ಸನ್ಮಾನ ಕಾರಟಗಿ: ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವೆ ಹಾಗೂ ಬಡವರ ಬಂಧುವಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗಂಗಾವತಿಯ ಗಾಂಧಿ ಸರ್ಕಲ್ ನಿವಾಸಿ ಶಂಕ್ರಪ್ಪ ನರಸಪ್ಪ ಹೂಗಾರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ 23ರಂದು ನಡೆದ ಸಮಾರಂಭದಲ್ಲಿ ಟ್ರಸ್ಟ್‌ನ ಮೂರನೇ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮಾಜದ ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಂಕ್ರಪ್ಪ ಹೂಗಾರ ಅವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹೂಗಾರ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 26ರಂದು ಸಂಜೆ ಕಾರಟಗಿಯ ಶರಣಪ್ಪ ಹೂಗಾರ ಅವರ ಕಾರ್ಯಾಲಯದಲ್ಲಿ ಕಾರಟಗಿ, ಗಂಗಾವತಿ ಹಾಗೂ ಕನಕಗಿರಿ ತಾಲೂಕುಗಳ ಹೂಗಾರ ಸಮಾಜದ ವತಿಯಿಂದ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರು, ಸಮಾಜ ಸೇವೆ ಎಂಬುದು ಕೇವಲ ಪ್ರಶಸ್ತಿಗಳಿಗಾಗಿ ಮಾಡುವ ಕೆಲಸವಲ್ಲ. ಬದಲಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅವರ ಬದುಕಿನಲ್ಲಿ ಭರವಸೆ ಮೂಡಿಸುವ ಮಹತ್ತರ ಕಾರ್ಯವಾಗಿದೆ. ಶಂಕ್ರಪ್ಪ ಹೂಗಾರ ಅವರು ಸಮಾಜದ ಬಡವರಿಗಾಗಿ ಸಲ್ಲಿಸಿರುವ ಸೇವೆ ಇತರರಿಗೂ ಪ್ರೇರಣೆಯಾಗಿದ್ದು, ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದು ಇಡೀ ಹೂಗಾರ ಸಮಾಜಕ್ಕೆ ಸಂತಸದ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಬಾಲಪ್ಪ ಹೂಗಾರ, ಕಾರಟಗಿ ತಾಲೂಕು ಹೂಗಾರ ಸಮಾಜದ ಗೌರವಾಧ್ಯಕ್ಷ ಸೋಮಶೇಖರ್ ಹೂಗಾರ ಗುಂಡೂರು, ಕಾರಟಗಿ ತಾಲೂಕು ಅಧ್ಯಕ್ಷ ಶರಣಪ್ಪ ಈರಣ್ಣ ಹೂಗಾರ, ಉಪಾಧ್ಯಕ್ಷ ಆಂಜನೇಯ, ಕಾರ್ಯದರ್ಶಿ ಮಂಜುನಾಥ್ ಹೂಗಾರ, ವೀರೇಶ್ ಹೂಗಾರ, ಹನುಮಂತಪ್ಪ ಹೂಗಾರ ಬೇವಿನಾಳ, ಜಂಬಣ್ಣ ಹೂಗಾರ ಯಮನೂರು, ಸೋಮನಾಳ, ಸಂತೋಷ್ ಕೊನ್ನಾಪುರ, ಧನರಾಜ್ ಪನ್ನಾಪುರ ಸೇರಿದಂತೆ ಕಾರಟಗಿ, ಗಂಗಾವತಿ ಹಾಗೂ ಕನಕಗಿರಿ ಭಾಗದ ಹೂಗಾರ ಸಮಾಜದ ಮುಖಂಡರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು. ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡ ವ್ಯಕ್ತಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಸಮಾಜದ ಯುವಜನತೆಗೆ ಉತ್ತಮ ಪ್ರೇರಣೆಯಾಗಿದೆ ಎಂದು ಈ ಸಂದರ್ಭದಲ್ಲಿ ಮುಖಂಡರು ಹರ್ಷ ವ್ಯಕ್ತಪಡಿಸಿದರು.
    4
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರರಿಗೆ ಹೂಗಾರ ಸಮಾಜದಿಂದ ಸನ್ಮಾನ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರರಿಗೆ ಹೂಗಾರ ಸಮಾಜದಿಂದ ಸನ್ಮಾನ
ಕಾರಟಗಿ: ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವೆ ಹಾಗೂ ಬಡವರ ಬಂಧುವಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗಂಗಾವತಿಯ ಗಾಂಧಿ ಸರ್ಕಲ್ ನಿವಾಸಿ ಶಂಕ್ರಪ್ಪ ನರಸಪ್ಪ ಹೂಗಾರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ 23ರಂದು ನಡೆದ ಸಮಾರಂಭದಲ್ಲಿ ಟ್ರಸ್ಟ್‌ನ ಮೂರನೇ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮಾಜದ ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಂಕ್ರಪ್ಪ ಹೂಗಾರ ಅವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹೂಗಾರ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 26ರಂದು ಸಂಜೆ ಕಾರಟಗಿಯ ಶರಣಪ್ಪ ಹೂಗಾರ ಅವರ ಕಾರ್ಯಾಲಯದಲ್ಲಿ ಕಾರಟಗಿ, ಗಂಗಾವತಿ ಹಾಗೂ ಕನಕಗಿರಿ ತಾಲೂಕುಗಳ ಹೂಗಾರ ಸಮಾಜದ ವತಿಯಿಂದ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರು, ಸಮಾಜ ಸೇವೆ ಎಂಬುದು ಕೇವಲ ಪ್ರಶಸ್ತಿಗಳಿಗಾಗಿ ಮಾಡುವ ಕೆಲಸವಲ್ಲ. ಬದಲಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅವರ ಬದುಕಿನಲ್ಲಿ ಭರವಸೆ ಮೂಡಿಸುವ ಮಹತ್ತರ ಕಾರ್ಯವಾಗಿದೆ. ಶಂಕ್ರಪ್ಪ ಹೂಗಾರ ಅವರು ಸಮಾಜದ ಬಡವರಿಗಾಗಿ ಸಲ್ಲಿಸಿರುವ ಸೇವೆ ಇತರರಿಗೂ ಪ್ರೇರಣೆಯಾಗಿದ್ದು, ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದು ಇಡೀ ಹೂಗಾರ ಸಮಾಜಕ್ಕೆ ಸಂತಸದ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಬಾಲಪ್ಪ ಹೂಗಾರ, ಕಾರಟಗಿ ತಾಲೂಕು ಹೂಗಾರ ಸಮಾಜದ ಗೌರವಾಧ್ಯಕ್ಷ ಸೋಮಶೇಖರ್ ಹೂಗಾರ ಗುಂಡೂರು, ಕಾರಟಗಿ ತಾಲೂಕು ಅಧ್ಯಕ್ಷ ಶರಣಪ್ಪ ಈರಣ್ಣ ಹೂಗಾರ, ಉಪಾಧ್ಯಕ್ಷ ಆಂಜನೇಯ, ಕಾರ್ಯದರ್ಶಿ ಮಂಜುನಾಥ್ ಹೂಗಾರ, ವೀರೇಶ್ ಹೂಗಾರ, ಹನುಮಂತಪ್ಪ ಹೂಗಾರ ಬೇವಿನಾಳ, ಜಂಬಣ್ಣ ಹೂಗಾರ ಯಮನೂರು, ಸೋಮನಾಳ, ಸಂತೋಷ್ ಕೊನ್ನಾಪುರ, ಧನರಾಜ್ ಪನ್ನಾಪುರ ಸೇರಿದಂತೆ ಕಾರಟಗಿ, ಗಂಗಾವತಿ ಹಾಗೂ ಕನಕಗಿರಿ ಭಾಗದ ಹೂಗಾರ ಸಮಾಜದ ಮುಖಂಡರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು.
ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡ ವ್ಯಕ್ತಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಸಮಾಜದ ಯುವಜನತೆಗೆ ಉತ್ತಮ ಪ್ರೇರಣೆಯಾಗಿದೆ ಎಂದು ಈ ಸಂದರ್ಭದಲ್ಲಿ ಮುಖಂಡರು ಹರ್ಷ ವ್ಯಕ್ತಪಡಿಸಿದರು.
    user_ಟಿ.ಉಮೇಶ ಮರ್ಲಾನಹಳ್ಳಿ
    ಟಿ.ಉಮೇಶ ಮರ್ಲಾನಹಳ್ಳಿ
    Local News Reporter ಕಾರಟಗಿ, ಕೊಪ್ಪಳ, ಕರ್ನಾಟಕ•
    12 hrs ago
  • ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕಾರಟಗಿ ಪಟ್ಟಣದಲ್ಲಿನ ಸಾಂಸ್ಕೃತಿಕ ಭವನದಲ್ಲಿ ನವೆಂಬರ್ 26ರಂದು ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಉದ್ಘಾಟಿಸಿದರು.
    2
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕಾರಟಗಿ ಪಟ್ಟಣದಲ್ಲಿನ ಸಾಂಸ್ಕೃತಿಕ ಭವನದಲ್ಲಿ ನವೆಂಬರ್ 26ರಂದು ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಉದ್ಘಾಟಿಸಿದರು.
    user_Rajasab Mullar
    Rajasab Mullar
    ಕೊಪ್ಪಳ, ಕೊಪ್ಪಳ, ಕರ್ನಾಟಕ•
    14 hrs ago
  • ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ಸಮಾಜದ ಸಹಕಾರ ಮುಖ್ಯ: ಬಸ್ಸಯ್ಯ ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ಸಮಾಜದ ಸಹಕಾರ ಮುಖ್ಯ: ಬಸ್ಸಯ್ಯ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ರಾಯಚೂರು ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ನಗರದ ಶ್ರೀ ಬಸವ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಮತ್ತು ಇತರೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ವಿಶೇಷ ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಸಯ್ಯ ಹಾಗೂ ಜವಳಗೇರಾ ಪ್ರಾ.ಆ.ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ಅವರು ಹಾಜರಿದ್ದು, ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. *ಒಂದು ಸಣ್ಣ ಸೊಳ್ಳೆ ಕಚ್ಚಿದರೆ ಏನಾಗುತ್ತದೆ ಎಂಬ ನಿರ್ಲಕ್ಷ್ಯವೇ ಇಂದು ದೊಡ್ಡ ಮಟ್ಟದ ಆರೋಗ್ಯ ಅನಾಹುತಗಳಿಗೆ ಕಾರಣವಾಗುತ್ತಿದೆ.* ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಈ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯ ವಹಿಸುತ್ತಿದ್ದು, ರೋಗ ಉಲ್ಬಣಗೊಂಡು ತೀವ್ರ ಹಂತಕ್ಕೆ ತಲುಪಿದ ನಂತರವಷ್ಟೇ ವೈದ್ಯರ ಬಳಿಗೆ ಬರುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಆರೋಗ್ಯ ಇಲಾಖೆ ಮತ್ತು ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲಿರುವ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಪಾತ್ರ ಸಮುದಾಯದಲ್ಲಿ ಅತ್ಯಂತ ನಿರ್ಣಾಯಕವಾಗಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ನೆರೆಹೊರೆಯವರಿಗೆ ಹಾಗೂ ಸಾರ್ವಜನಿಕರಿಗೆ ಸೊಳ್ಳೆ ನಿಯಂತ್ರಣದ ಕುರಿತು ಸರಿಯಾದ ಮಾರ್ಗದರ್ಶನ ನೀಡಬೇಕು. ಮನೆಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಯಾರಿಗಾದರೂ ಎರಡು-ಮೂರು ದಿನಗಳ ಕಾಲ ನಿರಂತರ ಜ್ವರ ಕಾಣಿಸಿಕೊಂಡರೆ, ನಿರ್ಲಕ್ಷ್ಯ ಮಾಡದೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಅರಿವು ಮೂಡಿಸಬೇಕು ಎಂದು ಸಂಪನ್ಮೂಲ ವ್ಯಕ್ತಿಗಳು ಸಲಹೆ ನೀಡಿದರು. ಸೊಳ್ಳೆ ಕಚ್ಚುವಿಕೆಯಿಂದ ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್‌ಗುನ್ಯಾದಂತಹ ಗಂಭೀರ ರೋಗಗಳು ಹರಡುವುದರಿಂದ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಹಾಗೂ ನೀರಿನ ತೊಟ್ಟಿ, ಡ್ರಮ್‌ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಭದ್ರವಾಗಿ ಮುಚ್ಚಿಡುವುದು ಅತ್ಯಗತ್ಯವಾಗಿದೆ. ಸೊಳ್ಳೆಗಳ ನಿಯಂತ್ರಣ ನಮ್ಮೆಲ್ಲರ ಕೈಯಲ್ಲಿದ್ದು, ಆರೋಗ್ಯ ಇಲಾಖೆಯೊಂದಿಗೆ ಸಮುದಾಯವು ಕೈಜೋಡಿಸಿದಾಗ ಮಾತ್ರ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಎಫ್.ಎ.ಹಣಗಿ ಮಾತನಾಡಿ ಸೊಳ್ಳೆಯ ಜೀವನ ಚಕ್ರ,ಜೀವಿಸುವ ಅವಧಿ,ಬೆಳೆಯುವ ಹಂತಗಳು ಮತ್ತು ಜೀವಿತಾ ಅವಧಿಯಲ್ಲಿ ಸೊಳ್ಳೆಗಳಿಂದ ಆಗುವ ಅನಾಹುತಗಳು ಮತ್ತು ಪರಿಹಾರ ಕ್ರಮದ ಬಗ್ಗೆ ಮಕ್ಕಳಿಗೆ ತರಬೇತಿ ನೀಡಿದರು, ಹಿ.ಆ.ನಿ ಅಧಿಕಾರಿ ಸಂಗನಗೌಡ ಆರೋಗ್ಯ ಸಿಬ್ಬಂದಿಗಳು ಮಾತನಾಡಿ ಸೊಳ್ಳೆಗಳಿಂದ ಹರಡುವ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ& ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಪಾತ್ರ ಮುಂಜಾಗೃತಾ ಕ್ರಮಗಳಾದ ಸೊಳ್ಳೆ ಪರದೆ ಬಳಕೆ,ಸೊಳ್ಳೆ ಕೌಲ್ ಗಳು,ಸ್ಪ್ರೆ ಬಳಕೆ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ತುಂಬು ತೊಳಿನ ಬಟ್ಟೆ ಧರಿಸಲು ಸಲಹೆ ನೀಡುವುದು,ಸೊಳ್ಳೆ ಸಾಂದ್ರತೆ ಹೆಚ್ಚಾದಲ್ಲಿ ಒಣ ಬೇವಿನ ಎಲೆ ಸುಡುವುದು,ಸೊಳ್ಖೆ ನಿಯಂತ್ರಣ ಸಸ್ಯ ಬೆಳೆಸುವ ಬಗ್ಗೆ ಜಾಗೃತಿ ನೀಡಿದರು, ಶ್ರೀ ಬಸವ ಪ್ಯಾರಾ ಮೆಡಿಕಲ್ ಕಾಲೇಜಿನ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    2
    ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ಸಮಾಜದ ಸಹಕಾರ ಮುಖ್ಯ: ಬಸ್ಸಯ್ಯ
ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ಸಮಾಜದ ಸಹಕಾರ ಮುಖ್ಯ: ಬಸ್ಸಯ್ಯ
ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ರಾಯಚೂರು ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ನಗರದ  ಶ್ರೀ ಬಸವ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಮತ್ತು ಇತರೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ವಿಶೇಷ ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಸಯ್ಯ ಹಾಗೂ ಜವಳಗೇರಾ ಪ್ರಾ.ಆ.ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ  ಅವರು ಹಾಜರಿದ್ದು, ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. 
*ಒಂದು ಸಣ್ಣ ಸೊಳ್ಳೆ ಕಚ್ಚಿದರೆ ಏನಾಗುತ್ತದೆ ಎಂಬ ನಿರ್ಲಕ್ಷ್ಯವೇ ಇಂದು ದೊಡ್ಡ ಮಟ್ಟದ ಆರೋಗ್ಯ ಅನಾಹುತಗಳಿಗೆ ಕಾರಣವಾಗುತ್ತಿದೆ.* ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಈ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯ ವಹಿಸುತ್ತಿದ್ದು, ರೋಗ ಉಲ್ಬಣಗೊಂಡು ತೀವ್ರ ಹಂತಕ್ಕೆ ತಲುಪಿದ ನಂತರವಷ್ಟೇ ವೈದ್ಯರ ಬಳಿಗೆ ಬರುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಭವಿಷ್ಯದಲ್ಲಿ ಆರೋಗ್ಯ ಇಲಾಖೆ ಮತ್ತು ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲಿರುವ  ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಪಾತ್ರ ಸಮುದಾಯದಲ್ಲಿ ಅತ್ಯಂತ ನಿರ್ಣಾಯಕವಾಗಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ನೆರೆಹೊರೆಯವರಿಗೆ ಹಾಗೂ ಸಾರ್ವಜನಿಕರಿಗೆ ಸೊಳ್ಳೆ ನಿಯಂತ್ರಣದ ಕುರಿತು ಸರಿಯಾದ ಮಾರ್ಗದರ್ಶನ ನೀಡಬೇಕು. 
ಮನೆಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಯಾರಿಗಾದರೂ ಎರಡು-ಮೂರು ದಿನಗಳ ಕಾಲ ನಿರಂತರ ಜ್ವರ ಕಾಣಿಸಿಕೊಂಡರೆ, ನಿರ್ಲಕ್ಷ್ಯ ಮಾಡದೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಅರಿವು ಮೂಡಿಸಬೇಕು ಎಂದು ಸಂಪನ್ಮೂಲ ವ್ಯಕ್ತಿಗಳು ಸಲಹೆ ನೀಡಿದರು.
ಸೊಳ್ಳೆ ಕಚ್ಚುವಿಕೆಯಿಂದ ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್‌ಗುನ್ಯಾದಂತಹ ಗಂಭೀರ ರೋಗಗಳು ಹರಡುವುದರಿಂದ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಹಾಗೂ ನೀರಿನ ತೊಟ್ಟಿ, ಡ್ರಮ್‌ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಭದ್ರವಾಗಿ ಮುಚ್ಚಿಡುವುದು ಅತ್ಯಗತ್ಯವಾಗಿದೆ. ಸೊಳ್ಳೆಗಳ ನಿಯಂತ್ರಣ ನಮ್ಮೆಲ್ಲರ ಕೈಯಲ್ಲಿದ್ದು, ಆರೋಗ್ಯ ಇಲಾಖೆಯೊಂದಿಗೆ ಸಮುದಾಯವು ಕೈಜೋಡಿಸಿದಾಗ ಮಾತ್ರ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಎಫ್.ಎ.ಹಣಗಿ ಮಾತನಾಡಿ ಸೊಳ್ಳೆಯ ಜೀವನ ಚಕ್ರ,ಜೀವಿಸುವ ಅವಧಿ,ಬೆಳೆಯುವ ಹಂತಗಳು ಮತ್ತು ಜೀವಿತಾ ಅವಧಿಯಲ್ಲಿ ಸೊಳ್ಳೆಗಳಿಂದ ಆಗುವ ಅನಾಹುತಗಳು ಮತ್ತು ಪರಿಹಾರ ಕ್ರಮದ ಬಗ್ಗೆ ಮಕ್ಕಳಿಗೆ ತರಬೇತಿ ನೀಡಿದರು,
ಹಿ.ಆ.ನಿ ಅಧಿಕಾರಿ ಸಂಗನಗೌಡ ಆರೋಗ್ಯ ಸಿಬ್ಬಂದಿಗಳು ಮಾತನಾಡಿ ಸೊಳ್ಳೆಗಳಿಂದ ಹರಡುವ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ& ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ  ಪಾತ್ರ ಮುಂಜಾಗೃತಾ ಕ್ರಮಗಳಾದ ಸೊಳ್ಳೆ ಪರದೆ ಬಳಕೆ,ಸೊಳ್ಳೆ ಕೌಲ್ ಗಳು,ಸ್ಪ್ರೆ ಬಳಕೆ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ತುಂಬು ತೊಳಿನ ಬಟ್ಟೆ ಧರಿಸಲು ಸಲಹೆ ನೀಡುವುದು,ಸೊಳ್ಳೆ ಸಾಂದ್ರತೆ ಹೆಚ್ಚಾದಲ್ಲಿ ಒಣ ಬೇವಿನ ಎಲೆ ಸುಡುವುದು,ಸೊಳ್ಖೆ ನಿಯಂತ್ರಣ ಸಸ್ಯ ಬೆಳೆಸುವ ಬಗ್ಗೆ ಜಾಗೃತಿ ನೀಡಿದರು, ಶ್ರೀ ಬಸವ ಪ್ಯಾರಾ ಮೆಡಿಕಲ್ ಕಾಲೇಜಿನ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    user_Kirangouda halemani
    Kirangouda halemani
    Farmer ಸಿಂಧನೂರು, ರಾಯಚೂರು, ಕರ್ನಾಟಕ•
    17 hrs ago
  • ಆಂಧ್ರ ಸಮಾಜದ ಕಾರ್ಯಕರ್ತರಿಂದ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಸನ್ಮಾನ ಸಿಂಧನೂರು,ನ, 26- ಆಂಧ್ರ ಸಮಾಜದ ಕಾರ್ಯಕರ್ತರಿಂದ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಸನ್ಮಾನ ಸ್ವೀಕರಿಸಿದರು. ಸಿಂಧನೂರು ನಗರದ ತಮ್ಮ ನಿವಾಸದಲ್ಲಿ ಆಗಮಿಸಿದ ಆಂಧ್ರ ಸಮಾಜದ ಕಾರ್ಯಕರ್ತರು ಜೆಡಿಎಸ್ ಪಕ್ಷದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಜೆಡಿಎಸ್ ಪಕ್ಷದಲ್ಲಿ ಆಂಧ್ರ ಸಮುದಾಯದ ಮುಖಂಡರಿಗೆ ಸ್ಥಾನಮಾನ ನೀಡಿರುವುದು ಸಂತೋಷದಾಯಕವಾಗಿದೆ ಎಂದು ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದರು. ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ನೀವು ನನಗೆ ಸನ್ಮಾನ ಮಾಡಿರುವುದು ನಿಮಗೆ ಖುಷಿಯಾಗಿದೆ ಆದರೆ ಇಲ್ಲಿ ನನಗೆ ತುಂಬಾ ಭಾರವಾಗಿದೆ ಮುಂದಿನ ದಿನಗಳಲ್ಲಿ ಇಂದಿನ ಚುನಾವಣೆಯಲ್ಲಿ ಆಂಧ್ರ ಸಮಾಜದ ಮುಖಂಡರುಗಳೇ ನನಗೆ ಹೆಚ್ಚಿನ ಮತಗಳನ್ನು ನೀಡಿ ಶಾಸಕರಾಗಿ ಆಯ್ಕೆ ಮಾಡಿದ್ದಲ್ಲದೆ ಸಚಿವ ಸ್ಥಾನ ದೊರೆಯುವಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿತ್ತು.ನೀವುಗಳು ನಮ್ಮ ಜೊತೆ ಕೈಜೋಡಿಸಿ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಎನ್.ಸತ್ಯನಾರಾಯಣ, ಅಭಿಷೇಕ ನಾಡಗೌಡ, ರವಿಗೌಡ ನನ್ನೂರು, ಅಜಯ್ ದಾಸರಿ,ನಾಗೇಶ್ ಹಂಚಿನಾಳಕ್ಯಾಂಪ್, ಕೃಷ್ಣಮೂರ್ತಿ, ಸಂಗಮೇಶಗೌಡ, ವೆಂಕಟರಮಣ ರೆಡ್ಡಿ, ಹರಿಬಾಬು ರೈತನಗರ ಕ್ಯಾಂಪ್, ಮೋಹನರೆಡ್ಡಿ , ರಫಿ, ಗೀತಾ, ನಾಗಜ್ಯೋತಿ ಮುಳ್ಳುಪುಡಿ, , ವೀರಬಾಲು, ಆಸೀಫ್ ಸೇರಿದಂತೆ ಅನೇಕರಿದ್ದರು.
    3
    ಆಂಧ್ರ ಸಮಾಜದ ಕಾರ್ಯಕರ್ತರಿಂದ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ  ಸನ್ಮಾನ 
ಸಿಂಧನೂರು,ನ, 26-
ಆಂಧ್ರ ಸಮಾಜದ ಕಾರ್ಯಕರ್ತರಿಂದ
ಸಚಿವ ವೆಂಕಟರಾವ್ ನಾಡಗೌಡ ಅವರಿಗೆ  ಸನ್ಮಾನ ಸ್ವೀಕರಿಸಿದರು.
ಸಿಂಧನೂರು ನಗರದ ತಮ್ಮ ನಿವಾಸದಲ್ಲಿ ಆಗಮಿಸಿದ ಆಂಧ್ರ ಸಮಾಜದ ಕಾರ್ಯಕರ್ತರು ಜೆಡಿಎಸ್ ಪಕ್ಷದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಜೆಡಿಎಸ್ ಪಕ್ಷದಲ್ಲಿ ಆಂಧ್ರ ಸಮುದಾಯದ ಮುಖಂಡರಿಗೆ ಸ್ಥಾನಮಾನ ನೀಡಿರುವುದು ಸಂತೋಷದಾಯಕವಾಗಿದೆ ಎಂದು ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ನೀವು ನನಗೆ ಸನ್ಮಾನ ಮಾಡಿರುವುದು ನಿಮಗೆ ಖುಷಿಯಾಗಿದೆ ಆದರೆ ಇಲ್ಲಿ ನನಗೆ ತುಂಬಾ ಭಾರವಾಗಿದೆ ಮುಂದಿನ ದಿನಗಳಲ್ಲಿ ಇಂದಿನ ಚುನಾವಣೆಯಲ್ಲಿ ಆಂಧ್ರ ಸಮಾಜದ ಮುಖಂಡರುಗಳೇ ನನಗೆ ಹೆಚ್ಚಿನ ಮತಗಳನ್ನು ನೀಡಿ ಶಾಸಕರಾಗಿ ಆಯ್ಕೆ ಮಾಡಿದ್ದಲ್ಲದೆ ಸಚಿವ ಸ್ಥಾನ ದೊರೆಯುವಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿತ್ತು.ನೀವುಗಳು ನಮ್ಮ ಜೊತೆ ಕೈಜೋಡಿಸಿ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಎನ್.ಸತ್ಯನಾರಾಯಣ, ಅಭಿಷೇಕ ನಾಡಗೌಡ, ರವಿಗೌಡ ನನ್ನೂರು, ಅಜಯ್ ದಾಸರಿ,ನಾಗೇಶ್ ಹಂಚಿನಾಳಕ್ಯಾಂಪ್, ಕೃಷ್ಣಮೂರ್ತಿ, ಸಂಗಮೇಶಗೌಡ, ವೆಂಕಟರಮಣ ರೆಡ್ಡಿ,  ಹರಿಬಾಬು ರೈತನಗರ ಕ್ಯಾಂಪ್, ಮೋಹನರೆಡ್ಡಿ , ರಫಿ, ಗೀತಾ, ನಾಗಜ್ಯೋತಿ ಮುಳ್ಳುಪುಡಿ, , ವೀರಬಾಲು, ಆಸೀಫ್ ಸೇರಿದಂತೆ ಅನೇಕರಿದ್ದರು.
    user_ಶಿವರಾಜ.ಕೆ
    ಶಿವರಾಜ.ಕೆ
    ಸಿಂಧನೂರು, ರಾಯಚೂರು, ಕರ್ನಾಟಕ•
    18 hrs ago
  • ಆಶಾ ಕಾರ್ಯಕರ್ತೆಯರ ಬಗ್ಗೆ UT ಖಾದರ್ ಹೇಳಿಕೆಗೆ ಡಿ. ನಾಗಲಕ್ಷ್ಮಿ ಖಡಕ್ ತಿರುಗೇಟು! | ASHA Workers Protest ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದ ಆರೋಗ್ಯ ಸೇವೆಗೆ ಯಾವುದೇ ತೊಂದರೆಯಾಗಿಲ್ಲ ಮತ್ತು ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂಬ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ, ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಖಡಕ್ ತಿರುಗೇಟು ನೀಡಿದ್ದಾರೆ. ​"ಸಚಿವರು ಮೊದಲು ಕೆಳಹಂತದಲ್ಲಿ ಏನಾಗುತ್ತಿದೆ ಎಂಬ ವಾಸ್ತವ ತಿಳಿದುಕೊಳ್ಳಲಿ, ಕಳೆದ ಮೂರು ವರ್ಷಗಳಲ್ಲಿ ಭರವಸೆ ಈಡೇರಿಸದೆ ವಿಶ್ವಾಸ ದ್ರೋಹ ಮಾಡಿದವರು ನೀವೇ" ಎಂದು ನಾಗಲಕ್ಷ್ಮಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ವಿಡಿಯೋ ಇಲ್ಲಿದೆ. ​ನಾಗಲಕ್ಷ್ಮಿ ಅವರು ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ಪೂರ್ತಿಯಾಗಿ ನೋಡಿ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ. ​ವಿಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಚಾನೆಲ್ ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ!
    1
    ಆಶಾ ಕಾರ್ಯಕರ್ತೆಯರ ಬಗ್ಗೆ UT ಖಾದರ್ ಹೇಳಿಕೆಗೆ ಡಿ. ನಾಗಲಕ್ಷ್ಮಿ ಖಡಕ್ ತಿರುಗೇಟು! | ASHA Workers Protest

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದ ಆರೋಗ್ಯ ಸೇವೆಗೆ ಯಾವುದೇ ತೊಂದರೆಯಾಗಿಲ್ಲ ಮತ್ತು ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂಬ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ, ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಖಡಕ್ ತಿರುಗೇಟು ನೀಡಿದ್ದಾರೆ.
​"ಸಚಿವರು ಮೊದಲು ಕೆಳಹಂತದಲ್ಲಿ ಏನಾಗುತ್ತಿದೆ ಎಂಬ ವಾಸ್ತವ ತಿಳಿದುಕೊಳ್ಳಲಿ, ಕಳೆದ ಮೂರು ವರ್ಷಗಳಲ್ಲಿ ಭರವಸೆ ಈಡೇರಿಸದೆ ವಿಶ್ವಾಸ ದ್ರೋಹ ಮಾಡಿದವರು ನೀವೇ" ಎಂದು ನಾಗಲಕ್ಷ್ಮಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ವಿಡಿಯೋ ಇಲ್ಲಿದೆ.
​ನಾಗಲಕ್ಷ್ಮಿ ಅವರು ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ಪೂರ್ತಿಯಾಗಿ ನೋಡಿ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.
​ವಿಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಚಾನೆಲ್ ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ!
    user_RDS DIGITAL ನ್ಯೂಸ್
    RDS DIGITAL ನ್ಯೂಸ್
    Newsagent ಕುಷ್ಟಗಿ, ಕೊಪ್ಪಳ, ಕರ್ನಾಟಕ•
    9 hrs ago
  • ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
    1
    ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
    user_Shrikantagouda. m.p.
    Shrikantagouda. m.p.
    Artist Yelbarga, Koppal•
    11 hrs ago
  • ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಿ: ತೆಮ್ಮಿನಾಳ್ ಕುಷ್ಟಗಿ: ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು ಎಂದು ಶೈಕ್ಷಣಿಕ ಚಿಂತಕ ಶರಣಪ್ಪ ತೆಮ್ಮಿನಾಳ ಹೇಳಿದರು. ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದೋಟಿಹಾಳ–ಕೇಸೂರು ಹೋಬಳಿ ಘಟಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
    4
    ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಿ: ತೆಮ್ಮಿನಾಳ್ 
ಕುಷ್ಟಗಿ: ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು ಎಂದು ಶೈಕ್ಷಣಿಕ ಚಿಂತಕ ಶರಣಪ್ಪ ತೆಮ್ಮಿನಾಳ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದೋಟಿಹಾಳ–ಕೇಸೂರು ಹೋಬಳಿ ಘಟಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
    user_Parashivamurthy
    Parashivamurthy
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.