Shuru
Apke Nagar Ki App…
ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
Shrikantagouda. m.p.
ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
More news from Koppal and nearby areas
- ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ1
- ಆಶಾ ಕಾರ್ಯಕರ್ತೆಯರ ಬಗ್ಗೆ UT ಖಾದರ್ ಹೇಳಿಕೆಗೆ ಡಿ. ನಾಗಲಕ್ಷ್ಮಿ ಖಡಕ್ ತಿರುಗೇಟು! | ASHA Workers Protest ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದ ಆರೋಗ್ಯ ಸೇವೆಗೆ ಯಾವುದೇ ತೊಂದರೆಯಾಗಿಲ್ಲ ಮತ್ತು ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂಬ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ, ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಖಡಕ್ ತಿರುಗೇಟು ನೀಡಿದ್ದಾರೆ. "ಸಚಿವರು ಮೊದಲು ಕೆಳಹಂತದಲ್ಲಿ ಏನಾಗುತ್ತಿದೆ ಎಂಬ ವಾಸ್ತವ ತಿಳಿದುಕೊಳ್ಳಲಿ, ಕಳೆದ ಮೂರು ವರ್ಷಗಳಲ್ಲಿ ಭರವಸೆ ಈಡೇರಿಸದೆ ವಿಶ್ವಾಸ ದ್ರೋಹ ಮಾಡಿದವರು ನೀವೇ" ಎಂದು ನಾಗಲಕ್ಷ್ಮಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ವಿಡಿಯೋ ಇಲ್ಲಿದೆ. ನಾಗಲಕ್ಷ್ಮಿ ಅವರು ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ಪೂರ್ತಿಯಾಗಿ ನೋಡಿ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ. ವಿಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಚಾನೆಲ್ ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ!1
- ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಿ: ತೆಮ್ಮಿನಾಳ್ ಕುಷ್ಟಗಿ: ಕನ್ನಡ ಸಾಹಿತ್ಯ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು ಎಂದು ಶೈಕ್ಷಣಿಕ ಚಿಂತಕ ಶರಣಪ್ಪ ತೆಮ್ಮಿನಾಳ ಹೇಳಿದರು. ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದೋಟಿಹಾಳ–ಕೇಸೂರು ಹೋಬಳಿ ಘಟಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.4
- ದಿನಾಂಕ : 01-12-2026 ಮಂಗಳವಾರ ಬೆಳಿಗ್ಗೆ 10-00 ಗಂಟೆಗೆ ಶ್ರೀಸ್ವಾಮಿ ಪುಷ್ಕರಣಿಯಲ್ಲಿ ಅವಬೃತೋತ್ಸವ ನಡೆಯಲಿದೆ. ಮಧ್ಯಾಹ್ನ 01-00 ಗಂಟೆಗೆ ಶ್ರೀಚಿದಂಬರಚರಿತ್ರೆ ಸಪ್ತಾಹ ಮಂಗಳ, ಗುರುಪಾದ ಪೂಜೆ, ಬುತ್ತಿಪೂಜಾ ದರ್ಶನ, ನೈವೇದ್ಯ, ಮಹಾಮಂಗಳಾರತಿ, ವನಭೋಜನದೊಂದಿಗೆ ಶ್ರೀಕ್ಷೇತ್ರ ಸೂಡಿಯಲ್ಲಿ ನಡೆಯುವ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಶ್ರೀಯಾಜ್ಞವಲ್ಯಾಶ್ರಮ, ಶ್ರೀಚಿದಂಬರೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಸೂಡಿಯಲ್ಲಿ ಶ್ರೀ ಚಿದಂಬರೇಶ್ವರರ 268ನೇ ಜನೋತ್ಸವದ ಪ್ರಯುಕ್ತ ನಡೆಯುವ ಕಾರ್ಯಕ್ರಮ. ಶ್ರೀ ಭುಜಂಗಭಟ್ಟ ವಿರೂಪಾಕ್ಷ ಭಟ್ಟ ಜೋಶಿ ಶ್ರೀಕ್ಷೇತ್ರ ಸೂಡಿ ಇವರಿಂದ ಮಾಹಿತಿ.1
- ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಳಕಲ್ ಸಾರಿಗೆ ಘಟಕದ ಚಾಲಕರಿಗೆ ಸತ್ಕಾರ ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ಪ್ರೇಮ ಮೆರೆದ ಇಳಕಲ್ ಸಾರಿಗೆ ಘಟಕದ ಚಾಲಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಸತ್ಕಾರ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಸಾರಿಗೆ ಘಟಕದ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸಮಾಜ ಸೇವಕರು ಉಪಸ್ಥಿತರಿದ್ದರು.4
- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕಾರಟಗಿ ಪಟ್ಟಣದಲ್ಲಿನ ಸಾಂಸ್ಕೃತಿಕ ಭವನದಲ್ಲಿ ನವೆಂಬರ್ 26ರಂದು ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಉದ್ಘಾಟಿಸಿದರು.2
- ಆನೆಗುಂದಿ ರಸ್ತೆ ಕಾಮಗಾರಿ ಅವ್ಯವಸ್ಥೆ; ಹಗಲಲ್ಲೇ ಸೇತುವೆ ಅಗೆದು ರಸ್ತೆ ಬಂದ್ – ಸಾರ್ವಜನಿಕರ ಪರದಾಟ ಗಂಗಾವತಿ: ನಗರದ ಪ್ರಮುಖ ಸಂಪರ್ಕ ಕೊಂಡಿಯಾದ ಆನೆಗುಂದಿ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಲಲಿತ್ ಮಹಲ್ ಸಮೀಪದ ಸೇತುವೆಯನ್ನು ಹಗಲು ಹೊತ್ತಿನಲ್ಲೇ ಏಕಾಏಕಿ ಜೆಸಿಬಿ ಮೂಲಕ ಸಂಪೂರ್ಣವಾಗಿ ಅಗೆದು ರಸ್ತೆ ಬಂದ್ ಮಾಡಿರುವುದರಿಂದ ವಾಹನ ಸವಾರರು ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಡುವಂತಾಯಿತು. ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್: ಗಂಗಾವತಿ ಮತ್ತು ಆನೆಗುಂದಿ ನಡುವೆ ಪ್ರತಿನಿತ್ಯ ಲಕ್ಷಾಂತರ ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನಗಳು ಸಂಚರಿಸುತ್ತವೆ. ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ, ಯಾವುದೇ ಮುನ್ಸೂಚನೆ ಅಥವಾ ಬದಲಿ ಮಾರ್ಗವಿಲ್ಲದೆ ನೇರವಾಗಿ ಸೇತುವೆಯನ್ನು ಅಗೆಯಲಾಗಿದೆ. ಇದರಿಂದಾಗಿ ಬಸ್ಸು, ಕಾರು ಹಾಗೂ ದ್ವಿಚಕ್ರ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಆಂಬುಲೆನ್ಸ್ ಸಂಚಾರಕ್ಕೂ ಅಡ್ಡಿ: ಇದೇ ಮಾರ್ಗದ ಮುಂದೆ ಸರ್ಕಾರಿ ಮಕ್ಕಳ ಆಸ್ಪತ್ರೆಯಿದ್ದು, ರಸ್ತೆ ಬಂದ್ ಆಗಿದ್ದರಿಂದ ತುರ್ತು ಚಿಕಿತ್ಸೆಗೆ ತೆರಳುವ ಆಂಬುಲೆನ್ಸ್ ಹಾಗೂ ರೋಗಿಗಳಿಗೂ ತೀವ್ರ ತೊಂದರೆಯಾಯಿತು. ಅಲ್ಲದೆ, ರಸ್ತೆ ಅಗಲೀಕರಣದಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಗುತ್ತಿಗೆದಾರರ ವಿರುದ್ಧ ಆಕ್ರೋಶ: ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ರೋಸಿಹೋದ ಸಾರ್ವಜನಿಕರು, ಸ್ಥಳದಲ್ಲಿದ್ದ ಜೆಸಿಬಿ ಆಪರೇಟರ್ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ತೀವ್ರ ವಾದ-ವಿವಾದದ ನಂತರ ಕೇವಲ ಏಕಮುಖ ಸಂಚಾರಕ್ಕೆ (ಒಂದೇ ಬದಿಯಲ್ಲಿ ಹೋಗಲು-ಬರಲು) ಮಾತ್ರ ಅನುವು ಮಾಡಿಕೊಡಲಾಗಿದೆ. ಆದರೂ, ಉಳಿದ ಅರ್ಧ ಕೆಲಸವನ್ನು ಪೂರ್ಣಗೊಳಿಸದೆ ಜೆಸಿಬಿಯನ್ನು ರಸ್ತೆಯಲ್ಲೇ ನಿಲ್ಲಿಸಿ ನಿರ್ಲಕ್ಷ್ಯ ವಹಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಗುಣಮಟ್ಟದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.4
- ದೋಟಿಹಾಳ್ : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕುಷ್ಟಗಿ: ಕನ್ನಡದ ಅಸ್ತಿತ್ವ ಉಳಿಯಲು ನಿತ್ಯದ ಬದುಕಿನಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಲಾಡ್ಲೆಮಷಾಕ್ ದೋಟಿಹಾಳ್ ಹೇಳಿದರು. ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದೋಟಿಹಾಳ–ಕೇಸೂರು ಹೋಬಳಿ ಕಸಾಪ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಉಪನ್ಯಾಸ ಹಾಗೂ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶರಣಪ್ಪ ತೆಮ್ಮಿನಾಳ, ಲೆಂಕಪ್ಪ ವಾಲಿಕಾರ್, ನಿಂಗಪ್ಪ ಸಜ್ಜನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಸೇನಸಾಬ್ ವಾಲಿಕಾರ್, ಡಿ. ಸುರೇಶ್, ಪ್ರಿಯದರ್ಶಿನಿ, ಕೆ.ವೈ. ಕಂದಕೂರು, ಹನುಮಂತರಾವ್ ದೇಸಾಯಿ, ಮಂಜುನಾಥ್ ಗುಳೇದಗುಡ್ಡ, ಶರಣಪ್ಪ ಗೋತಗಿ, ಶ್ರೀನಿವಾಸ್ ಕಂಟ್ಲಿ, ಜಗದೀಶ ಸೂಡಿ, ಪರಶಿವಮೂರ್ತಿ ಮಾಟಲದಿನ್ನಿ, ಬಸವರಾಜ ಕಡಿವಾಳ, ಮಂಜೂರ ಇಲಾಹಿ ಬನ್ನು, ಮಹಾಂತಗೌಡ ಜಾಲಿಹಾಳ್, ಮಹಾಂತಪ್ಪ ದೋಟಿಹಾಳ, ಈಶ್ವರಪ್ಪ ಹುಬ್ಬಳ್ಳಿ ಹಾಗೂ ಉಮೇಶ್ ಮಡಿವಾಳರ ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.4