Shuru
Apke Nagar Ki App…
ಕ್ರೈಸ್ತ ಧರ್ಮದವರಿಂದ ಮಂಗಳೂರಲ್ಲಿ ಗುಡ್ ಫ್ರೈಡೇ ಆಚರಣೆ: ಜಿಲ್ಲೆಯ ವಿವಿಧೆಡೆ ಆಚರಣೆ ಕ್ರೈಸ್ತರು ಯೇಸುವಿನ ಸ್ಮರಣೆ ಮೂಲಕ ಶುಭ ಶುಕ್ರವಾರ (ಗುಡ್ ಫ್ರೈಡೇ) ಆಚರಿಸುತ್ತಿದ್ದಾರೆ. ಇಂದು ಮಂಗಳೂರು ನಗರದ ವಿವಿಧ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆಯೊಂದಿಗೆ ಆಚರಿಸಲಾಗುತ್ತಿದೆ. ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳು ಬೆಳಗ್ಗೆಯಿಂದ ಆರಂಭಗೊಂಡಿವೆ. ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಆರಂಭಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ 'ಶಿಲುಬೆಯ ಹಾದಿ' (ವೇ ಆಫ್ ದಿ ಕ್ರಾಸ್) ಪ್ರಮುಖ ಕಾರ್ಯಕ್ರಮವಾಗಿದೆ.
Shamsheer Budoli
ಕ್ರೈಸ್ತ ಧರ್ಮದವರಿಂದ ಮಂಗಳೂರಲ್ಲಿ ಗುಡ್ ಫ್ರೈಡೇ ಆಚರಣೆ: ಜಿಲ್ಲೆಯ ವಿವಿಧೆಡೆ ಆಚರಣೆ ಕ್ರೈಸ್ತರು ಯೇಸುವಿನ ಸ್ಮರಣೆ ಮೂಲಕ ಶುಭ ಶುಕ್ರವಾರ (ಗುಡ್ ಫ್ರೈಡೇ) ಆಚರಿಸುತ್ತಿದ್ದಾರೆ. ಇಂದು ಮಂಗಳೂರು ನಗರದ ವಿವಿಧ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆಯೊಂದಿಗೆ ಆಚರಿಸಲಾಗುತ್ತಿದೆ. ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳು ಬೆಳಗ್ಗೆಯಿಂದ ಆರಂಭಗೊಂಡಿವೆ. ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಆರಂಭಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ 'ಶಿಲುಬೆಯ ಹಾದಿ' (ವೇ ಆಫ್ ದಿ ಕ್ರಾಸ್) ಪ್ರಮುಖ ಕಾರ್ಯಕ್ರಮವಾಗಿದೆ.
More news from ಕರ್ನಾಟಕ and nearby areas
- ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿರುವ ಕಡಬ ಠಾಣಾ ಪೊಲೀಸರು, ಓರ್ವನನ್ನು ಬಂಧಿಸಿ, 18 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಹೊಸೂರು ಮೂಲದ ಅಕ್ರಮ್ ಪಾಷಾ ಎಂದು ಗುರುತಿಸಲಾಗಿದೆ. ಹಾಸನದಿಂದ ಕೇರಳ ಕಡೆಗೆ ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯನ್ವಯ ಕಡಬ ಠಾಣಾ ಪೊಲೀಸರು ಶುಕ್ರವಾರ ಬೆಳಗಿನ ಜಾವ ಕಡಬದ ಕನ್ವರೆ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ. ಈ ವೇಳೆ ಕಂಟೇನರ್ ನಲ್ಲಿ ಸುಮಾರು 18 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ.1
- ಕಡೂರು:ಮದುವೆ ವಯಸ್ಸಿಗೆ ಬಂದಿದ್ದರೂ ಕೂಡ ಮದುವೆಯಾಗುತ್ತಿಲ್ಲ ಎಂದು ಮಾನಸಿಕವಾಗಿ ಜಿಗುಪ್ಸೆಗೊಂಡ ಕುರಿಗಾಹಿ ಯುವಕನೋರ್ವ ಮದ್ಯ ಸೇವಿಸಿ ತೆಂಗಿನ ಮರಕ್ಕೆ ಗುರುವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ಕುರಿಗಾಹಿ ಯುವಕ ಕುಮಾರ(26) ನೇಣಿಗೆ ಶರಣಾದವ. ತಾಲ್ಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದ ಪರಮೇಶ್ವರಪ್ಪ ಎಂಬುವವರ ತೋಟದಲ್ಲಿ ಕುರಿಗಳ ಮಂದೆಯನ್ನು ಬಿಟ್ಟುಕೊಂಡಿದ್ದನ್ನು. ಇತ್ತೀಚೆಗೆ ರಾಮನವಮಿ ಪ್ರಯುಕ್ತ ಹಬ್ಬಕ್ಕೆಂದು ಊರಿಗೆ ತೆರಳಿದ್ದು ಮನೆಯಲ್ಲಿ ಮದುವೆ ಮಾಡಿಕೊಡುವಂತೆ ಪೋಷಕರಿಗೆ ಒತ್ತಾಯಿಸಿದ್ದನು ಎನ್ನಲಾಗಿದೆ. ಮನೆಯ ಇಬ್ಬರು ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಮಾಡಲಾಗುತ್ತದೆ. ಅಲ್ಲಿಯ ತನಕ ಕುರಿ ಮೇಯಿಸಿಕೊಂಡು ಇರುವಂತೆ ತಿಳಿಹೇಳಿದ್ದಾರೆ. ಮದುವೆ ವಿಚಾರದಲ್ಲಿ ಮಾನಸಿಕವಾಗಿ ಜಿಗುಪ್ಸೆಗೊಂಡು ಮಗನು ನೇಣಿಗೆ ಶರಣಾಗಿರುವುದಾಗಿ ಮೃತನ ತಂದೆ ಬೋಜರಾಜ ದೂರು ನೀಡಿದ್ದು, ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- *ಭಾರತ ನಲ್ಲಿ ವೈರಲ್*1
- SHINE ARENA F⚽⚽TBALL AND CRICKET 🏏 TRUF INNAGURATED IN RAJIV NAGAR MYSURU #kvnews1
- STATEMENT GIVEN BY SYED ASIM GENERAL SECRETARY MYSORE CITY KPCC1
- ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಹಿರಿಕಾಟಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯವಾದ ರಸ್ತೆ ನಿರ್ಮಾಣ ಇನ್ನೂ ಸಾಕಾರವಾಗದೇ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ರಸ್ತೆ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರಕಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮುಖ್ಯ ಸಂಪರ್ಕ ರಸ್ತೆ ಇಂದಿಗೂ ಮಣ್ಣಿನ ರಸ್ತೆಯಾಗಿ ಉಳಿದಿದ್ದು, ವಾಹನ ಸಂಚಾರ ಹೆಚ್ಚಾದಾಗ ಭಾರೀ ಪ್ರಮಾಣದಲ್ಲಿ ಧೂಳು ಏಳುತ್ತದೆ. ಈ ಧೂಳು ನೇರವಾಗಿ ಮನೆಗಳೊಳಗೆ ಪ್ರವೇಶಿಸುತ್ತಿದ್ದು, ದಿನನಿತ್ಯದ ಜೀವನವೇ ಸಂಕಷ್ಟಕರವಾಗಿದೆ. ಮಕ್ಕಳಿಗೆ ಉಸಿರಾಟದ ತೊಂದರೆ, ವೃದ್ಧರಿಗೆ ಕೆಮ್ಮು, ಅಲರ್ಜಿ ಹಾಗೂ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆಗಳು ಹೆಚ್ಚಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎನ್ನುವುದು ಗ್ರಾಮಸ್ಥರ ಅಳಲು. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ದುಸ್ಥಿತಿಯಾಗುತ್ತದೆ. ಮಣ್ಣಿನ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟು ಜನರು ಸಂಚಾರ ಮಾಡಲು ಪರದಾಡಬೇಕಾಗುತ್ತದೆ. ಶಾಲಾ ಮಕ್ಕಳು ಶಾಲೆಗೆ ತೆರಳಲು ತೊಂದರೆ ಅನುಭವಿಸುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ವಾಹನಗಳು ಗ್ರಾಮಕ್ಕೆ ಸುಲಭವಾಗಿ ಬರಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಚುನಾವಣೆ ಸಮಯದಲ್ಲಿ ಮಾತ್ರ ರಸ್ತೆ ನಿರ್ಮಾಣದ ಭರವಸೆ ನೀಡಲಾಗುತ್ತದೆ. ಆದರೆ ನಂತರ ಸಮಸ್ಯೆ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಶತಮಾನ ಕಳೆದರೂ ಗ್ರಾಮಕ್ಕೆ ಪಕ್ಕಾ ರಸ್ತೆ ಸಿಗದಿರುವುದು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮೂಡಿಸಿದೆ. ತಕ್ಷಣವೇ ಹಿರಿಕಾಟಿ ಗ್ರಾಮಕ್ಕೆ ಶಾಶ್ವತ ಡಾಂಬರು ರಸ್ತೆ ನಿರ್ಮಿಸಿ ಧೂಳು ಸಮಸ್ಯೆಗೆ ಅಂತ್ಯ ಕಲ್ಪಿಸಬೇಕು. ಜೊತೆಗೆ ಗ್ರಾಮಸ್ಥರ ಆರೋಗ್ಯ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನಾದರೂ ಸಂಬಂಧಿತ ಇಲಾಖೆ ಎಚ್ಚೆತ್ತು ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸುತ್ತಾರೆಯೇ ಎಂಬುದು ಇದೀಗ ಸಾರ್ವಜನಿಕರ ಪ್ರಶ್ನೆಯಾಗಿದೆ.3
- Post by Suresh Belagere1
- ಕ್ರೈಸ್ತರು ಯೇಸುವಿನ ಸ್ಮರಣೆ ಮೂಲಕ ಶುಭ ಶುಕ್ರವಾರ (ಗುಡ್ ಫ್ರೈಡೇ) ಆಚರಿಸುತ್ತಿದ್ದಾರೆ. ಇಂದು ಮಂಗಳೂರು ನಗರದ ವಿವಿಧ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆಯೊಂದಿಗೆ ಆಚರಿಸಲಾಗುತ್ತಿದೆ. ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳು ಬೆಳಗ್ಗೆಯಿಂದ ಆರಂಭಗೊಂಡಿವೆ. ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಆರಂಭಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ 'ಶಿಲುಬೆಯ ಹಾದಿ' (ವೇ ಆಫ್ ದಿ ಕ್ರಾಸ್) ಪ್ರಮುಖ ಕಾರ್ಯಕ್ರಮವಾಗಿದೆ.1