ಚಳ್ಳಕೆರೆ: ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಎಂದು ಚಳ್ಳಕೆರೆ ಡಿವೈಎಸ್ಪಿ ಸತ್ಯನಾರಾಯಣರಾವ್ ಹೇಳಿದರು . . ನಗರದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಚಳ್ಳಕೆರೆ ಪೋಲೀಸ್ ಠಾಣಾ ವತಿಯಿಂದ ಹಮ್ಮಿಕೊಂಡಿದ್ದ ನಶೆ ಮುಕ್ತ ಚಿತ್ರದುರ್ಗ ಸಧೃಡ ಚಿತ್ರದುರ್ಗ ಎನ್ನುವ ಕಾರ್ಯಕ್ರಮದ ಪ್ರಯುಕ್ತ ಯವಕ ಯವತಿಯರಿಗೆ ನಡೆದ ಕ್ರೀಡೆಗೆ ಚಾಲನೆ ನೀಡಿ ಮಾತನಾಡಿ,ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಪಡುತ್ತಿದ್ದಾರೆ ಆದ್ದರಿಂದ ಇಂತಹ ದುಶ್ಚಟಗಳಿಗೆ ಬಲಿಯಾಗದಂತೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. ಯುವಕರು ಧೂಮಪಾನ, ಮದ್ಯಪಾನಗಳನ್ನು ಬಿಟ್ಟು ಆರೋಗ್ಯವಂತ ಜೀವನ ಕಟ್ಟಿಕೊಳ್ಳಬೇಕು . ಶಿಕ್ಷಣ, ಕ್ರೀಡೆ, ಯೋಗಾಸನ ಅಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ದೇಶದ ಹಾಗೂ ಸಮಾಜದ ಒಳಿತಿಗಾಗಿ ನಮ್ಮದೆ ಆದ ಕೊಡುಗೆ ನೀಡಬೇಕು.. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿ ಹಲವಾರು ಕಾಯಿಲೆಗಳು ಹುಟ್ಟಿಕೊಳ್ಳುತ್ತಿದ್ದು ಹಿಂದಿನ ತಲೆಮಾರಿನ ಮನುಷ್ಯರು 80 ವರ್ಷ ನೂರು ವರ್ಷ ಬದುಕುತ್ತಿದ್ದರು ಆದರೆ ಇಂದಿನ ದಿನಗಳ ಯುವಕರು ಹಲವಾರು ದುಶ್ಚಟಗಳಿಗೆ ಬಲಿಯಾಗಿ ಹಲವು ಕಾಯಿಲೆಗಳಿಂದ ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದಿರುವುದು ವಿಷಾದನೀಯ ಆದ್ದರಿಂದ ಇಂದಿನ ಯುವ ಜನತೆ ದಾರಿ ತಪ್ಪದಂತೆ ಹಿರಿಯರ ಮಾರ್ಗ ಒಳ್ಳೆಯರ ಸಹವಾಸ ಬೆಳೆಸಿಕೊಳ್ಳಬೇಕು. ಉತ್ತಮವಾದ ಆರೋಗ್ಯವನ್ನು ಹೊಂದಬೇಕು. ಆರೋಗ್ಯವಂತರಾದರೆ ಸೃಧೃಡ ದೇಶ ಕಟ್ಟಲು ಸಾಧ್ಯವಾಗುತ್ತದೆ ಎಂದರು.. ಈ ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕೆ .ಕುಮಾರ್ ಕಾರ್ಯಕ್ರಮದ ಆಯೋಜನೆ ಹಾಗೂ ಕ್ರೀಡೆಯನ್ನ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ದೇವಪ್ಪ. ರಾಷ್ಟ್ರೀಯ ಸ್ವಂಸೇವದಳದ ತಿಪ್ಪೇಸ್ವಾಮಿ. ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಳಾದ ರವಿ,ಮಂಜುನಾಥ, ಪೊಲೀಸ್ ಪೇದೆಗಳಾದ ಶಂಕ್ರಣ್ಣ. ಮಂಜುನಾಥ್ ಕೊಂಡ್ಲಹಳ್ಳಿ, ಕವಿತಾ, ಲಿಂಗರಾಜು ಹಾಗೂ ಅಶೋಕ ಸ್ಪೋರ್ಟ್ಸ್ ಕ್ಲಬ್ ನ ಮದಕರಿ ಪಾಪಣ್ಣ, ಸೇರಿದಂತೆ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಯುವಕ ಯುವತಿಯರು ಇದ್ದರು....

- ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಷದ್ ಖಾನ್ ( ಪಾರಂಪರಿಕ )1
- *ಭಾರತ ನಲ್ಲಿ ವೈರಲ್*1
- ಮಳವಳ್ಳಿ ಪಟ್ಟಣಕ್ಕೆ ಸುತ್ತೂರಿನಿಂದ ಆದಿಜಗದ್ಗರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿ ಅಗಮನಕ್ಕೆ ಕ್ರಣಗಣನೆ-ಸುತತೂರಿನಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳಿಂದ ವಿದ್ಯುಕ್ತ ಚಾಲನೆ ಸುತ್ತೂರು ಕ್ಷೇತ್ರದಿಂದ ಮಳವಳ್ಳಿಗೆ ಅಗಮಿಸುವ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿಗೆ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮಿಗಳು ಸಂಪ್ರದಾಯಬದ್ದ ಆಚರಣೆಗಳೊಂದಿಗೆ ವಿದ್ಯುಕ್ತವಾಗಿ ಸೋಮವಾರ ಬೆಳಿಗ್ಗೆ ೭.೩೦ ಗಂಟೆಯಲ್ಲಿ ಚಾಲನೆ ನೀಡಿದರು,ಸ್ವತ: ಪರಮಪೂಜ್ಯರ ನೇತೃತ್ವದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸುತ್ತೂರಿನಿಂದ ಮಂಗಳವಾದ್ಯ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಮಳವಳ್ಳಿಗೆ ಟಿ.ನರಸೀಪುರದ ಮೂಲಕ ಮಳವಳ್ಳಿ ಕ್ಷೇತ್ರಕ್ಕೆ ಅಗಮಿಸಲಿದ್ದು,ಗಡಿಬಾಗದ ಚಿಕ್ಕಬಾಗಿಲು ಗ್ರಾಮದಲ್ಲಿ ತಾಲೂಕಿನ ಹರಗುರು ಚರಮೂರ್ತಿಗಳು,ಸರ್ದಭಕ್ತರು,ಜನಪ್ರತಿನಿಧಿಗಳು ವಿಶೇಷ ಪೂಜೆಯೊಂದಿಗೆ ಬರಮಾಡಿಕೊಳೂವತ್ತ ಸಿದ್ದತೆ ನಡೆಸಿದ್ದಾರೆ..ಚಿಕ್ಕಬಾಗಿಲಿನಿಂದ ಪೂರಿಗಾಲಿ,ಸರಗೂರು,ಮುಟ್ಟನಹಳ್ಳಿ,ಬಿ.ಜಿ.ಪುರ,ವಾಸುವಳ್ಳಿ,ಬೆಳಕವಾಡಿಗೆ ಅಗಮಿಸಲಿದ್ದು,ಬೆಳಕವಾಡಿ ಮಠದ ಶ್ರೀಗಳು ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳುವರು ಇದೇ ಸಂದರ್ಭದಲ್ಲಿ ಅಗಮಿಸುವ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿದೆ.1
- Post by Ramesh babu.p3
- ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಶಾದ್ ಖಾನ್ ಸಿಂಪಲ್ ಹೋಮ್ ರೆಮಿಡಿ ಆಲ್ ಪ್ರಾಬ್ಲಮ್ಸ್1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1
- ಮಳವಳ್ಳಿಯಲ್ಲಿ ಡಿಸೆಂಬರ್ 15 ರಿಂದ ನಡೆಯುವ ಸುತ್ತೂರು ಜಯಂತಿ ಮಹೋತ್ಸವದ ಯಶಸ್ವಿಗೆ ಕೈಜೋಡಿಸಲು ಮಾಜಿ ಶಾಸಕರಾದ ಡಾ ಕೆ ಅನ್ನದಾನಿ ಕರೆ ಮಳವಳ್ಳಿ: ಪಟ್ಟಣದಲ್ಲಿ ನಡೆಯುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದ ಯಶಸ್ವಿಗೆ ಎಲ್ಲರೂ ಸಕ್ರೀಯವಾಗಿ ಭಾಗಿಯಾಗಬೇಕು ಎಂದು ಮಾಜಿ ಶಾಸಕ ಕೆ.ಅನ್ನದಾನಿ ಕರೆ ನೀಡಿದರು. ಪಟ್ಟಣದ ಸುತ್ತೂರು ಜಯಂತ್ಯುತ್ಸವ ಆಚರಣಾ ಸಮಿತಿಯ ಕಾರ್ಯಾಲಯದಲ್ಲಿ ಶನಿವಾರ ಅವರು ಮಾತನಾಡಿ, ಇಂಥ ಐತಿಹಾಸಿಕ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜನರು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಪಾಲ್ಗೊಂಡು ಯಶಸ್ವಿಗೆ ಶ್ರಮಿಸಬೇಕು. ರಾಷ್ಟ್ರದ ಪ್ರಥಮ ಪ್ರಜೆಯನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುತ್ತೂರು ಮಠವು ಸಾಕಷ್ಟು ಶ್ರಮ ವಹಿಸಿದೆ. ಸುತ್ತೂರು ಮಠದಲ್ಲಿ ಎಲ್ಲ ಧರ್ಮೀಯರು ಹಾಗೂ ಜಾತಿಯರು ವಿದ್ಯಾಭ್ಯಾಸ ಸೇರಿದಂತೆ ಎಲ್ಲೆಡೆ ಇದ್ದಾರೆ. ಹಿರಿಯರಾದ ಶಿವಯೋಗಿಗಳು ಆರಂಭಿಸಿದ ಮಠದ ಸಾಮಾಜಿಕ ಜವಾಬ್ದಾರಿಗಳನ್ನು ತೋರಿಸುವ ನಿಟ್ಟಿನಲ್ಲಿ ಇಂಥ ಜಯಂತ್ಯುತ್ಸವವನ್ನು ವಾರಗಟ್ಟಲೆ ಆಚರಿಸಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಅದ್ದೂರಿ ಆಚರಣೆಗೆ ಮುಂದಾಗೋಣ ಎಂದು ಕರೆ ನೀಡಿದರು. ಬಸವಣ್ಣ ಅವರ ಹಾದಿಯಲ್ಲಿ ಸಾಗುತ್ತಿರುವ ಸುತ್ತೂರು ಮಠದ ಸಾರಥ್ಯದಲ್ಲಿ ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು ನಿರಂತರವಾಗಿ ನಡೆಯಲಿವೆ. ಅನೇಕ ವಿಷಯಗಳು ಜನರ ಗಮನ ಸೆಳೆಯಲಿದೆ. ಡಿ.16ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಆಗಮನ ಇತಿಹಾಸದ ಪುಟದಲ್ಲಿ ಉಳಿಯಲಿದೆ. ಪ್ರತಿದಿನ ಎಲ್ಲ ಗ್ರಾಮಗಳಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜನರು ಯಾವುದೇ ಆತಂಕವಿಲ್ಲದೇ ಬರಬೇಕು. ಸಂಜೆ 4ಗಂಟೆಗೆ ಆಗಮಿಸಿ ರಾತ್ರಿ 9ಗಂಟೆವರೆಗೆ ಇರಬೇಕು. ಯಾವುದೇ ಲೋಪವಾಗದಂತೆ ಸ್ವಯಂ ಸೇವಕ ತಂಡ ನಿಮ್ಮದೊಂದಿಗೆ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಉಚಿತ ದಾಸೋಹ ಇರಲಿದೆ ಎಂದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರೊಂದಿಗೆ ಸೇರಿದಂತೆ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಂದು ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಸಹ ಇರುವುದರಿಂದ ಪಕ್ಷದ ಕಾರ್ಯಕರ್ತರು ಸಹ ಆಗಮಿಸಿ ಅವರಿಗೆ ಶುಭ ಕೋರುವ ಕೆಲಸ ಮಾಡಬೇಕು ಮಾಡಬೇಕು ಎಂದು ಹೇಳಿದರು. ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಮುಖಂಡರಾದ ಸೋಮಣ್ಣ, ಪುಟ್ಟಬುದ್ದಿ, ರಾಜೇಶ್, ಕುಮಾರ್, ಮಹದೇವಣ್ಣ, ಗಣೇಶ ಪಾಲ್ಗೊಂಡಿದ್ದರು.1