Shuru
Apke Nagar Ki App…
ಮಲೆ ಮಹದೇಶ್ವರ ಬೆಟ್ಟದ ನಾಗಮಲೆಗೆ ಹೋಗುತ್ತಿದ್ದ ಬೆಂಗಳೂರು ಮೂಲದ ಹರ್ಷಿತ್ (10) ಎಂಬ ಬಾಲಕ ಚಿರತೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಈ ಘಟನೆ ಭಕ್ತರು ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗಿದೆ.
ಉಸ್ಮಾನ್ ಖಾನ್
ಮಲೆ ಮಹದೇಶ್ವರ ಬೆಟ್ಟದ ನಾಗಮಲೆಗೆ ಹೋಗುತ್ತಿದ್ದ ಬೆಂಗಳೂರು ಮೂಲದ ಹರ್ಷಿತ್ (10) ಎಂಬ ಬಾಲಕ ಚಿರತೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಈ ಘಟನೆ ಭಕ್ತರು ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗಿದೆ.
More news from ಕರ್ನಾಟಕ and nearby areas
- ಚಾಮರಾಜನಗರ ಜಿಲ್ಲೆಯ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ₹9.5 ಕೋಟಿ ವೆಚ್ಚದ ರಸ್ತೆ ಮತ್ತು ಸಮುದಾಯ ಭವನ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದರ ಜೊತೆಗೆ, ಕ್ಷೇತ್ರದ ನೀರಾವರಿ ಯೋಜನೆಗಳಿಗೆ ₹490 ಕೋಟಿ ಅನುದಾನ ಸಿಕ್ಕಿರುವುದನ್ನು ಘೋಷಿಸಿದರು. ಈ ಯೋಜನೆಗಳಿಂದ ಅಂತರ್ಜಲ ಮಟ್ಟ ಹೆಚ್ಚಾಗಿ, ಗ್ರಾಮಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವ ಗುರಿ ಹೊಂದಲಾಗಿದೆ.4
- ಚಾಮರಾಜನಗರದ ಹನೂರು ತಾಲೂಕಿನ ಕೌಡಳ್ಳಿ ಗ್ರಾಮ ಪಂಚಾಯಿತಿ ಅರಣ್ಯ ಕಚೇರಿ ಎದುರು ಸ್ವಚ್ಛತೆ ಮರೆತಂತಿದೆ. ಸಾರ್ವಜನಿಕರು ಓಡಾಡುವ ಈ ಸ್ಥಳದಲ್ಲಿ ಕಸದ ರಾಶಿ ಸೇರಿ ಅಸ್ವಚ್ಛತೆ ತಾಂಡವವಾಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.1
- ಮಳವಳ್ಳಿ ಪಟ್ಟಣದ ಅನಂತರಾಮ್ ವೃತ್ತದಲ್ಲಿ ನಡೆದ ಭೀಕರ ಅಪಘಾತದಲ್ಲಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದು, ನಂತರ ಸಿಗ್ನಲ್ ಕಂಬ ಮತ್ತು ಪಾದಚಾರಿ ಅಂಗಡಿಗಳಿಗೆ ನುಗ್ಗಿದೆ. ಈ ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಮತ್ತು ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಅಂಗಡಿಗಳಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.1
- ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ವಿಜಯ್, ವಿವಿಧ ಪಕ್ಷಗಳ ಬೆಂಬಲ ಪಡೆದು ಸಿಎಂ ಗಾದಿಗೇರಿದ್ದಾರೆ. ಪ್ರಮಾಣವಚನದಲ್ಲಿ, ತಮ್ಮ ಸಂಪುಟದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.3
- ರಾಜರಾಜೇಶ್ವರಿ ಕಾಲೋನಿಯಲ್ಲಿ 34ನೇ ವರ್ಷದ ಕರಗ ಮಹೋತ್ಸವ ಅದ್ಧೂರಿ ಮೈಸೂರು ನಗರದ ರಾಜರಾಜೇಶ್ವರಿ ಕಾಲೋನಿಯಲ್ಲಿ ದುರ್ಗಾಪರಮೇಶ್ವರಿ, ಆದಿಶಕ್ತಿ ಹಾಗೂ ಚಾಮುಂಡೇಶ್ವರಿ ದೇವಿಯರ 34ನೇ ವರ್ಷದ ಕರಗ ಮಹೋತ್ಸವ ಭಕ್ತಿ ಸಂಭ್ರಮದ ನಡುವೆ ಅದ್ಧೂರಿಯಾಗಿ ಜರುಗಿತು. ಸ್ಥಳೀಯ ಭಕ್ತರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಜನರ ಉಪಸ್ಥಿತಿಯಲ್ಲಿ ಧಾರ್ಮಿಕ ಉತ್ಸಾಹ ಮನೆಮಾಡಿತ್ತು. ಮಹೋತ್ಸವದ ಅಂಗವಾಗಿ ದೇವಿಯರಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು. ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರಗಳಿಂದ ಸಿಂಗಾರಿಸಲಾಗಿದ್ದು ಭಕ್ತರನ್ನು ಆಕರ್ಷಿಸಿತು. ಸಂಜೆದಿಂದಲೇ ಭಕ್ತರು ದೇವಸ್ಥಾನದಲ್ಲಿ ಜಮಾಯಿಸಿ ದೇವಿಯ ದರ್ಶನ ಪಡೆದು ಹರಕೆ ಸಲ್ಲಿಸಿದರು. ರಾತ್ರಿ 8 ಗಂಟೆಗೆ ಕರಗ ಮೆರವಣಿಗೆ ಭಕ್ತರ ಜಯಘೋಷಗಳ ನಡುವೆ ಆರಂಭವಾಯಿತು. ಕರಗ ಹೊತ್ತ ಪೂಜಾರಿ ಭಕ್ತಿಭಾವದಿಂದ ನೃತ್ಯ ಮಾಡುತ್ತಾ ಸಾಗಿದ ದೃಶ್ಯ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಾದಸ್ವರ ಹಾಗೂ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು. ಭಕ್ತರು ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಶಿಸ್ತಿನ ವ್ಯವಸ್ಥೆಗಾಗಿ ಸ್ವಯಂಸೇವಕರು ಹಾಗೂ ಸಮಿತಿ ಸದಸ್ಯರು ವಿಶೇಷ ವ್ಯವಸ್ಥೆ ಮಾಡಿದ್ದರು. ಭಕ್ತರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕಲ್ಪಿಸಿತ್ತು. ರಾತ್ರಿ ಆರಂಭವಾದ ಕರಗ ಮೆರವಣಿಗೆ ಬೆಳಿಗ್ಗೆ 6 ಗಂಟೆಗೆ ದೇವಸ್ಥಾನ ತಲುಪುವುದರೊಂದಿಗೆ ಮಹೋತ್ಸವಕ್ಕೆ ಸಮಾರೋಪ ಕಂಡಿತು. ಬಳಿಕ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಅನ್ನಸಂತರ್ಪಣೆ ಕಾರ್ಯಕ್ರಮದಲ್ಲೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು. ಪ್ರತಿ ವರ್ಷವೂ ನಡೆಯುವ ಈ ಕರಗ ಮಹೋತ್ಸವವು ರಾಜರಾಜೇಶ್ವರಿ ಕಾಲೋನಿಯ ಪ್ರಮುಖ ಧಾರ್ಮಿಕ ಆಚರಣೆಯಾಗಿ ಪ್ರಸಿದ್ಧಿಯಾಗಿದ್ದು, ಭಕ್ತರಲ್ಲಿ ಐಕ್ಯತೆ ಮತ್ತು ಭಕ್ತಿ ಭಾವವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಆಯೋಜಕರು ತಿಳಿಸಿದ್ದಾರೆ.1
- ಮಂಡ್ಯ-ನಾಗಮಂಗಲ ರಸ್ತೆಯ ಪೋದಾರ್‌ನಲ್ಲಿ ಮಾರುತಿ ಈಕೋ ಕಾರು ಮತ್ತು ಬೈಕ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಗಣಿಗ ರವಿಕುಮಾರ್, ಇನ್ನು ಮುಂದೆ ಹೆಲ್ಮೆಟ್ ಧರಿಸದವರಿಗೆ ಶಿಫಾರಸು ಮಾಡುವುದಿಲ್ಲ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.1
- ಭಾರತದಲ್ಲಿ ಉಲೆಮಾ ಮತ್ತು ವಿದ್ವಾಂಸರ ಕಾರ್ಯಕ್ಷಮತೆ ಹಾಗೂ ಸ್ಥಿತಿಗತಿ ಕುರಿತ ವಿಷಯ ವ್ಯಾಪಕವಾಗಿ ವೈರಲ್ ಆಗಿದೆ. ಇದು ರಾಷ್ಟ್ರವ್ಯಾಪಿ ಚರ್ಚೆ ಮತ್ತು ಸಂವಾದಕ್ಕೆ ಕಾರಣವಾಗಿದೆ.1
- ಮಳವಳ್ಳಿ ತಾಲೂಕಿನ ವಿ ಬಸಾಪುರ ಗ್ರಾಮದ ಚೋಳರ ಕಾಲದ ಬಸವೇಶ್ವರ ದೇವಸ್ಥಾನಕ್ಕೆ ಕೆಂಪೇಗೌಡ ಕುಟುಂಬಸ್ಥರು ಹರಕೆ ತೀರಿಸಿ ಬಸಪ್ಪನನ್ನು ಸಮರ್ಪಿಸಿದರು. ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ಪುನಸ್ಕಾರಗಳೊಂದಿಗೆ ಬಸಪ್ಪನಿಗೆ ಮುದ್ರಾ ಧಾರಣೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಮುಂದಿನ ಬುಧವಾರ ಮತ್ತು ಗುರುವಾರ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದ್ದು, ಭಕ್ತರು ಭಾಗವಹಿಸಲು ಮನವಿ ಮಾಡಲಾಗಿದೆ.1