Shuru
Apke Nagar Ki App…
ಎಂ ಎಂ ಪಠಾಣ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸನ್ಮಾನ, ಹುಬ್ಬಳ್ಳಿಯಿಂದ ದಾವಣಗೆರೆ ಉಪಚುನಾವಣೆ ಪ್ರಚಾರ ನಿಮಿತ್ತ ತೆರಳುತ್ತಿರುವ ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ. ಕೆ ಶಿವಕುಮಾರ ರವರನ್ನು ಶಿಗ್ಗಾಂವ ಮಾರ್ಗದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಶಾಸಕರ ಸಹೋದರರಾದ ಎಂ ಎಂ ಪಠಾಣ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಸನ್ಮಾನ ಮಾಡಲಾಯಿತು.
H M ಹರಕುಣಿ
ಎಂ ಎಂ ಪಠಾಣ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸನ್ಮಾನ, ಹುಬ್ಬಳ್ಳಿಯಿಂದ ದಾವಣಗೆರೆ ಉಪಚುನಾವಣೆ ಪ್ರಚಾರ ನಿಮಿತ್ತ ತೆರಳುತ್ತಿರುವ ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ. ಕೆ ಶಿವಕುಮಾರ ರವರನ್ನು ಶಿಗ್ಗಾಂವ ಮಾರ್ಗದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಶಾಸಕರ ಸಹೋದರರಾದ ಎಂ ಎಂ ಪಠಾಣ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಸನ್ಮಾನ ಮಾಡಲಾಯಿತು.
More news from ಕರ್ನಾಟಕ and nearby areas
- ಕರವೇ ವತಿಯಿಂದ ಹುನಗುಂದ ನಗರದಲ್ಲಿ ಪ್ರತಿಭಟನೆ ; ತಹಶೀಲ್ದಾರ್ ಗೆ ಮನವಿ ಸಲ್ಲಿಕೆ ಹುನಗುಂದ ; ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷಾ ಪತ್ರಿಕೆಗೆ ಅಂಕಗಳ ಬದಲು ಗ್ರೇಡ್ ವ್ಯವಸ್ಥೆ ಜಾರಿಗೆ ತಂದಿರುವುದನ್ನು ಪುನರ್ ಪರಿಶೀಲನೆ ಮಾಡುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ‘ನಾವು ಹಿಂದಿ ವಿರೋಧಿಗಳಲ್ಲ, ಹಿಂದಿ ಹೇರಿಕೆಯ ವಿರೋಧಿಗಳು’ ಎಂಬ ಫಲಕ ಪ್ರದರ್ಶಿಸಿದರು. ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ ರನ್ನು ಕೇಂದ್ರ ಸರ್ಕಾರ ವಾಪಸ್ ಕರೆಯಿಸಿಕೊಳ್ಳಬೇಕು. ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದ ಹಿಂದೆ, ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ಕನ್ನಡಿಗರ ಆಶೋತ್ತರ ಗಳಿಗೆ ವಿರುದ್ಧವಾಗಿ ನಡೆದುಕೊಂಡಿ ದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.1
- Post by Suresh Belagere1
- Post by Iranna Tarnal1
- Post by @april14news1
- ಗಂಡು ಮಕ್ಕಳು ಎಂಥ ಕೆಲಸ ಮಾಡತ್ತಾರೆ ಅಂಥ ಗೊತ್ತೆ ಬಹಳ ಅಪಯಕಾರಿ ಕೆಲಸ ಬಡಡನ ಕಿತ್ತು ತಿನ್ನುವ ರಾಜ್ಯದಲ್ಲಿ ಪ್ಯಾಮಿಲಿ ಸಂಸಾರಕ್ಕೆ ದುಡಿಯಕು ಕಷ್ಟ ದುಖ ಅನ್ನುಬವಿಸುವನೆ ಮನೆಯ ಯಜಮಾನ ಇನೊಂದು ಹೆಣ್ಣು ಮಕ್ಕಳಿಗೆ ಹೇಳುವದಾದರೆ ಪತ್ತಿಯ ಮನೆಗೆ ಬಂದಾಗ ಸರಿಯಾಗಿ ನೋಡಿಕೊಳ್ಳಿ ಅಷ್ಟೆ ಸಾಕು ಅಂದರೆ ಸುಕವಾಗಿ ಸಂಸಾರ ಸಾಗುವದು1
- ಕೊಡಗಿನ ಕಾಡಿನಲ್ಲಿ ದಾರಿ ತಪ್ಪಿ 4 ದಿನ ಏಕಾಂಗಿಯಾಗಿ ಬದುಕಿ ಬಂದ ಕೇರಳದ ಯುವತಿ! #JB_News_Kannada1
- ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು (ಏಪ್ರಿಲ್ 7) ಬೆಳ್ಳಂಬೆಳಗ್ಗೆ ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬಳ್ಳಾರಿ, ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (DA Case) ಆರೋಪದ ಮೇಲೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ಮನೆ ಮೇಲೆ ದಾಳಿ ನಡೆದಿದೆ. ಸುಶೀಲಮ್ಮ ಅವರು ಒಂದು ವರ್ಷದ ಹಿಂದೆಯೇ ಸ್ವಯಂ ನಿವೃತ್ತಿ (VRS) ಪಡೆದಿದ್ದರು. ಆದರೆ ಅವರು ಸೇವೆಯಲ್ಲಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಚಿತ್ರದುರ್ಗದ ಮೇದೇಹಳ್ಳಿ ಬಡಾವಣೆಯ ನಿವಾಸ ಮತ್ತು ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದ ತೋಟದ ಮನೆಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.1
- ಮುದ್ದೇಬಿಹಾಳ: ಡೆತ್ ನೋಟ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆಗೆ ಮುದ್ದೇಬಿಹಾಳ. ಸಾಲಗಾರರಿಗೆ ಕೊಟ್ಟಿದ್ದ ಹಣ ಮರಳಿ ಕೊಡದ ಕಾರಣಕ್ಕೆ ಮನನೊಂದು ಖಾಸಗಿ ಟ್ರಾವೆಲ್ಸ್ ಏಜೆಂಟ್ ಒಬ್ಬರು ಜಮೀನೊಂದರಲ್ಲಿ ನೇಣು ಬಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ತಾಲೂಕಿನ ಬಿದರಕುಂದಿ ಗ್ರಾಮದ ಹತ್ತಿರ ಬೆಳಕಿಗೆ ಬಂದಿದೆ. ಮುದ್ದೇಬಿಹಾಳದಲ್ಲಿ ಎಸ್ ಆರ್ ಎಸ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮೂಲತಃ ಗೋನಾಳ್ ಎಸ್ ಹೆಚ್ ಗ್ರಾಮದ ನಿವಾಸಿಯಾಗಿದ್ದ ಚೆನ್ನಯ್ಯ ಗಂಗಯ್ಯ ಹಿರೇಮಠ್ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ನನ್ನ ಸಾವಿಗೆ ರವಿ ನಾಲವಡೆ ಹಾಗೂ ವೈದ್ಯನಾಥ್ ಮರಾಠೆ ಎಂಬುವರು ಕಾರಣವಾಗಿದ್ದಾರೆ ಎಂದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿರುವ ಚೆನ್ನಯ್ಯ ಡೆತ್ ನೋಟನ್ನು ತಮ್ಮ ಸಹೋದರನಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.1
- ಗಚ್ಚಿನ ಮಠದ ಜಾತ್ರಾ ಸಂಭ್ರಮ ಅಥಣಿಯಲ್ಲಿ ಏಳು ದಿನಗಳ ಕಾಲ ಸಂಭ್ರಮ, ಸಡಗರ | ನಿರಂತರ ಮಹಾದಾಸೋಹ. ಅಥಣಿ : ಗಚ್ಚಿನ ಮಠದ ಜಾತ್ರಾ ಮಹೋತ್ಸವವು ಏಳು ದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗುತ್ತದೆ. ಜಾತ್ರೆಗೆ ಬರುವ ಯಾತ್ರಿಕರಿಗೆ ಸತತ ಐದು ದಿನಗಳ ಕಾಲ ನಿರಂತರ ಮಹಾದಾಸೋಹ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಿದ್ಧೇಶ್ವರ ಮತ್ತು ಶಿವಯೋಗಿಗಳ ಪರಮಭಕ್ತರು, ಪಟ್ಟಣದ ವ್ಯಾಪಾರಸ್ಥರು, ಅನೇಕ ಸಮಾಜ ಸೇವಕರು ಮತ್ತು ನೌಕರರು, ಸ್ವಯಂ ಪ್ರೇರಿತವಾಗಿ ದವಸ ಧಾನ್ಯಗಳನ್ನು ಸಮರ್ಪಿಸುತ್ತಾರೆ. ಶಿವಯೋಗಿಗಳ ಮತ್ತು ಸಿದ್ಧೇಶ್ವರ ಜಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಆಡಂಬರಕ್ಕೆ ಸೀಮಿತವಲ್ಲ. ಮಹಾ ತಪಸ್ವಿ ಮುರುಘೇಂದ್ರ ಶಿವಯೋಗಿಗಳ ಮತ್ತು ಅಥಣಿಯ ಆರಾಧ್ಯ ದೈವ ಸಿದ್ಧೇಶ್ವರ ದೇವರ ಬಗ್ಗೆ ಅನನ್ಯ ಪ್ರೀತಿ ಮತ್ತು ಪರಿಶುದ್ಧ ಭಕ್ತಿ ಮತ್ತು ಈ ನೆಲದ ಸಂಸ್ಕೃತಿಯಾಗಿದೆ. ಶಿವಯೋಗಿಗಳು ಮತ್ತು ಶ್ರೀ ಸಿದ್ಧೇಶ್ವರ ದೇವರು ನಮ್ಮ ದುಡಿಮೆಗೆ ನೀಡಿದ ಪ್ರತಿಫಲದಿಂದ ಬಂದ ಆದಾಯದಲ್ಲಿ ದಾನ ಮಾಡಿ ಧರ್ಮ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಅನ್ನಸಂತರ್ಪಣೆಗೆ ಧನಸಹಾಯ, ದವಸ ಧಾನ್ಯಗಳನ್ನು, ತರಕಾರಿಗಳನ್ನು ನೀಡುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಾರೆ. ಸದ್ಭಕ್ತರಿಂದ ಬಂದ ಈ ಕಾಣಿಕೆಯನ್ನು ಮತ್ತು ದವಸ ಧಾನ್ಯಗಳನ್ನು ಕಮಿಟಿ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಪ್ರಸಾದವನ್ನು ಮಾಡಿ ವಿತರಿಸುತ್ತಾರೆ. ಸಿದ್ಧೇಶ್ವರ ದೇವಸ್ಥಾನ ಕಮಿಟಿಯ ಮತ್ತು ಸದ್ಭಕ್ತ ಮಂಡಳಿಯ 60ಕ್ಕೂ ಅಧಿಕ ಜನರು ಅಡುಗೆ ತಯಾರಿಸಲು, ಪ್ರಸಾದ ವಿತರಿಸುವ ಮೂಲಕ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಐದು ದಿನಗಳ ಕಾಲ ಪ್ರತಿದಿನ 25 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರೆಯಲ್ಲಿ ಕಳ್ಳರ ಕೈಚಳಕ: ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮ್ಮಿಲನವಾಗಿದ್ದು, ದೇವಸ್ಥಾನಗಳ ಹಬ್ಬಗಳು, ತೇರು ಎಳೆಯುವುದು, ಭಜನೆ ಡೊಳ್ಳು ಕುಣಿತ, ನಾಟಕ ಪ್ರದರ್ಶನಗಳು, ಬಣ್ಣ ಬಣ್ಣದ ಅಂಗಡಿಗಳು ಜಾತ್ರೆಯ ಮುಖ್ಯ ಆಕರ್ಷಣೆಗಳಾಗಿವೆ. ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಾತ್ರೆಯು ಆಕರ್ಷಣೆಯಾಗಿದೆ. ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಬಣ್ಣ ಬಣ್ಣದ ಚಿತ್ರಾನ್ನದ ತೊಟ್ಟಿಲುಗಳ ಸಂಭ್ರಮ ಎಲ್ಲರನ್ನ ಕೈಬಿಸಿ ಕರೆಯುತ್ತವೆ. ಮಹಿಳೆಯರು ಮತ್ತು ಯುವಕ, ಯುವತಿಯರು, ಆಕಾಶದ ಎತ್ತರದ ತೊಟ್ಟಿಲುಗಳಲ್ಲಿ ಕುಳಿತು ಸಂಭ್ರಮಿಸಿದರೆ, ಮಕ್ಕಳು ಹೆಲಿಕಾಪ್ಟರ್‌ನಂತಹ ವಾಹನಗಳಲ್ಲಿ ಕುಳಿತು ಸಂಭ್ರಮಿಸುತ್ತಿದ್ದಾರೆ. ಜಾತ್ರೆಯಲ್ಲಿ ಜನಜಂಗುಳಿ ಮಧ್ಯೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ಸರ್ಪಗಾವಲು ಇದ್ದರೂ ಮೊಬೈಲ್, ಮಹಿಳೆಯರ ಚಿನ್ನಾಭರಣಗಳು ಕಳ್ಳತನವಾಗಿರುವ ಪ್ರಕರಣಗಳು ಕಂಡು ಬಂದಿವೆ. ಜಾತ್ರೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು, ಜಾತ್ರೆಗೆ ಬರುವ ಯಾತ್ರಿಕರು ಮಹಿಳೆಯರು ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕೆಂದು ಜಾತ್ರಾ ಕಮಿಟಿ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.2