ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಾದ ಎನ್ ಎಸ್ ಹರ್ಡಿಕರ್ ಪುಣ್ಯ ಸ್ಮರಣೆ ಕಾರ್ಯಕ್ರಮ ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಾದ ಎನ್ ಎಸ್ ಹರ್ಡಿಕರ್ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಕಾಂಗ್ರೆಸ್ ಸೇವಾದಳ ಜಿಲ್ಲಾಧ್ಯಕ್ಷರಾದ ಬೂತೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎನ್ ಎಸ್ ಹರ್ಡಿಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಎನ್ ಎಸ್ ಹರ್ಡಿಕರ್ ಅವರು ನಡೆದು ಬಂದ ಹಾದಿ ಹಾಗೂ ಅವರ ಕುರಿತು ಜಿಲ್ಲಾಧ್ಯಕ್ಷರಾದ ಬೂತೇಶ್ ಅವರು ಮಾಹಿತಿಯನ್ನ ನೀಡಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಸೇವಾದಳ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಸೇವಾದಳ ಮಹಿಳಾ ಅಧ್ಯಕ್ಷರಾದ ನೇತ್ರ, ಮಹಿಳಾ ಪ್ರಧಾನ ಕಾರ್ಯದರ್ಶಿ ರಾದಮ್ಮ, ಸೇವಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ರಮಾ ನಾಯ್ಕ್, ಕಾಂಗ್ರೆಸ್ ಮುಖಂಡರಾದ ಮೈಲಾರಪ್ಪ, ಸೇವಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಹಾಗೂ ಪಕ್ಷದ ಅನೇಕ ಮುಖಂಡರು ಹಾಜರಿದ್ದರು
ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಾದ ಎನ್ ಎಸ್ ಹರ್ಡಿಕರ್ ಪುಣ್ಯ ಸ್ಮರಣೆ ಕಾರ್ಯಕ್ರಮ ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಾದ ಎನ್ ಎಸ್ ಹರ್ಡಿಕರ್ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಕಾಂಗ್ರೆಸ್ ಸೇವಾದಳ ಜಿಲ್ಲಾಧ್ಯಕ್ಷರಾದ ಬೂತೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎನ್ ಎಸ್ ಹರ್ಡಿಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಎನ್ ಎಸ್ ಹರ್ಡಿಕರ್ ಅವರು ನಡೆದು ಬಂದ ಹಾದಿ ಹಾಗೂ ಅವರ ಕುರಿತು ಜಿಲ್ಲಾಧ್ಯಕ್ಷರಾದ ಬೂತೇಶ್ ಅವರು ಮಾಹಿತಿಯನ್ನ ನೀಡಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಸೇವಾದಳ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಸೇವಾದಳ ಮಹಿಳಾ ಅಧ್ಯಕ್ಷರಾದ ನೇತ್ರ, ಮಹಿಳಾ ಪ್ರಧಾನ ಕಾರ್ಯದರ್ಶಿ ರಾದಮ್ಮ, ಸೇವಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ರಮಾ ನಾಯ್ಕ್, ಕಾಂಗ್ರೆಸ್ ಮುಖಂಡರಾದ ಮೈಲಾರಪ್ಪ, ಸೇವಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಹಾಗೂ ಪಕ್ಷದ ಅನೇಕ ಮುಖಂಡರು ಹಾಜರಿದ್ದರು
- ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಹಿಂದೂ ಮಹಾ ಗಣಪತಿಯ ದ್ವಜ ಪೂಜೆ ಹಾಗೂ ಗೋಪೂಜೆ ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಹಿಂದೂ ಮಹಾ ಗಣಪತಿಯ ದ್ವಜ ಪೂಜೆ ಹಾಗೂ ಗೋಪೂಜೆ ಹಮ್ಮಿಕೊಳ್ಳಲಾಗಿತ್ತು. ಇನ್ನೂ ವಿಶ್ವ ಹಿಂದೂ ಪರಿಷದ್ ಭಜರಂಗದಳದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಿಂದೂ ಮಹಾ ಗಣಪತಿ ಪ್ರತಿಷ್ಠಾನೆ ಮಾಡಲಾಗುತ್ತಿದ್ದು ಈ ಹಿನ್ನೆಲೆ ಗಣೇಶ ಪ್ರತಿಷ್ಟಾಪನಾ ಸ್ಥಳದಲ್ಲಿಂದು ದ್ವಜ ಪೂಜೆ ಹಾಗೂ ಗೋಪೂಜೆ ಹಮ್ಮಿಕೊಂಡಿದ್ದು ಸಂಸದ ಗೋವಿಂದ ಕಾರಜೋಳ, ಭೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಯಾದವ ಮಠದ ಸ್ವಾಮೀಜಿ ಸೇರಿದಂತೆ ಅನೇಕ ಮಠಗಳ ಮಠಾದೀಶರು ಆಗಮಿಸಿದ್ದು ದ್ವಜ ಪೂಜೆ ಹಾಗೂ ದ್ವಜ ಪೂಜೆಯನ್ನ ನೆರವೇರಿಸಿದ್ದು ಹಿಂದೂ ಮಹಾ ಗಣಪತಿ ಉತ್ಸವಕ್ಕೆ ಚಾಲನೆಯನ್ನ ನೀಡಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಹಲವು ಮುಖಂಡರು ಹಾಜರಿದ್ದರು1
- ಗ್ರಾಮ ಪಂಚಾಯತಿ ಜಾಬ್ ಕಾರ್ಡ್ ಕೂಲಿ ಕಾರ್ಮಿಕರಿಂದ ಬೆಳಗೆರೆ ಕೆರೆ ಹಳ್ಳಗಳ ಪುನರ್ ಚೇತನ ಕಾಮಗಾರಿ. ಚಳ್ಳಕೆರೆ ತಾಲೂಕಿನ ಬೆಳೆಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಏಳು ಹಳ್ಳಿಗಳಲ್ಲಿರುವ 1545 ಉದ್ಯೋಗ ಖಾತ್ರಿ ಕಾರ್ಮಿಕರ ಅನುಕೂಲಕ್ಕಾಗಿ ಬಿವಿ ಜೀ ರಾಮ್ ಜೀ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯದ ಕಾಮಗಾರಿಗಳನ್ನು ಕೈಗೊಂಡು ಸ್ಥಳೀಯವಾಗಿ ಕೂಲಿ ಕೆಲಸ ನೀಡಲಾಗಿದೆ. ಸಮೀಪದ ಹುಲಿಕುಂಟೆ ಸರ್ಕಾರಿ ಗೋಮಾಳ ಭೂಮಿಯಲ್ಲಿ ಸುಮಾರು 10 ಲಕ್ಷ ವೆಚ್ಚದ ಸಮುದಾಯ ಕಾಮಗಾರಿ ಆರಂಭಿಸಲಾಗಿದೆ. ಪ್ರತಿ ದಿನ 109 ಜನ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಪಂಚಾಯತಿ ವ್ಯಾಪ್ತಿಯ ಬೆಳೆಗೆರೆ, ನಾರಾಯಣಪುರ, ರಂಗನಾಥಪುರ, ಕಲಮರಹಳ್ಳಿ, ಹುಲಿಕುಂಟೆ, ಭೋವಿ ಕಾಲನಿ, ಕ್ಯಾತನಮಾಳೆ ಸೇರಿದ ಹಳ್ಳಿಗಳಲ್ಲಿ ಒಟ್ಟು 1,545 ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡುಗಳನ್ನು ವಿತರಿಸಲಾಗಿದೆ. ಪ್ರಸ್ತುತ ಜಾಬ್ ಕಾರ್ಡುಗಳನ್ನು ನವೀಕರಣ ಮಾಡಿಕೊಂಡು, ವಿಬಿ ರಾಮ್ ಜೀ ಯೋಜನೆಯ 318 ವಿವಿಧ ಕಾಮಗಾರಿಗಳಲ್ಲಿ ದನ,ಕುರಿ,ಮೆಕೆಗಳ ಶೆಡ್ ನಿರ್ಮಾಣ ಸೇರಿ ಕೃಷಿ ಹೊಂಡ ಮತ್ತು ವೈಯಕ್ತಿಕ ರೈತರ ಜಮೀನ ಅಭಿವೃದ್ಧಿ ಕಾಮಗಾರಿ ಹಾಗೂ ಕೆರೆ,ಹಳ್ಳಗಳ ಪುನರ್ ಚೇತನ ಕಾಮಗಾರಿಗಳನ್ನು ಜಾರಿ ಮಾಡಲಾಗಿದೆ. ಪ್ರತಿ ದಿನ 120 ಕೂಲಿ ಕಾರ್ಮಿಕರಿಗೆ 382 ರೂ ದಿನದ ಕೂಲಿಯಂತೆ ಕೆಲಸ ನೀಡಲಾಗಿದೆ. ಈ ವರ್ಷ ಸಕಾಲಕ್ಕೆ ಮುಂಗಾರು ಮಳೆ ಇಲ್ಲ. ರೈತರ ಹೊಲಗಳಲ್ಲಿ ಕೆಲಸ ಇಲ್ಲದಾಗಿದೆ. ಇದರಿಂದ ಇತರೆ ವರ್ಗದ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಇಲ್ಲ. ವಲಸೆ ಹೋಗುವ ಪರಿಸ್ಥಿತಿಯಲ್ಲಿ ಸ್ಥಳೀಯ ಪಂಚಾಯತಿಯಿಂದ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. ಅಂತರ್ಜಲಕ್ಕೆ ಒತ್ತು: ಕೆರೆಗಳ ಹೂಳು ಎತ್ತುವ ಮತ್ತು ಕೆರೆಗೆ ನೀರು ಹರಿದು ಬರುವ ಹಳ್ಳಗಳ ಪುನರ್ ಚೇತನ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ. ಕೆರೆ,ಗೋಕಟ್ಟೆ ಅಭಿವೃದ್ಧಿಯಿಂದ ಹರಿಯುವ ಮಳೆ ನೀರು ತಡೆದು ನಿಲ್ಲಿಸುವ ಅನುಕೂಲ ಆಗುತ್ತದೆ. ಇದರಿಂದ ಅಡವಿಯಲ್ಲಿ ಜನ,ಜಾನುವಾರು ಸೇರಿ ಪ್ರಾಣಿ,ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲ ಮತ್ತು ಅಂತರ್ಜಲ ವೃದ್ದಿಗೆ ಆಧಾರ ಆಗುತ್ತದೆ. ಬರಗಾಲ ಪರಿಸ್ಥಿತಿಗೆ ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗದಂತೆ ಗ್ರಾಮ ಸಮೀಪ ಸಾಮೂಹಿಕವಾಗಿ ಮಾಡುವ ಸಮುದಾಯ ಕಾಮಗಾರಿ ಕೆಲಸ ನೀಡಲಾಗಿದೆ. ಕೆಲ ರೈತರು ವೈಯಕ್ತಿಕವಾಗಿಯೂ ತಮ್ಮ ಹೊಲಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಂಡರೂ ಕೂಲಿ ಸಿಗುತ್ತದೆ ಎನ್ನುತ್ತಾರೆ ಪಿಡಿಒ ಸಿ.ಎಂ. ದೇವೇಂದ್ರಪ್ಪ. ತಾಲೂಕಿನ 40 ಗ್ರಾಮ ಪಂಚಾಯತಿಗಳಲ್ಲಿ ವಿಬಿ ರಾಮ್ ಜೀ ಯೋಜನೆಯಡಿ ಒಟ್ಟು 8,026 ಕಾಮಗಾರಿಗಳ ಅನುಮೋದನೆ ಮಾಡಲಾಗಿದೆ. ಇದರಲ್ಲಿ 1626 ವೈಯಕ್ತಿಕ ಕಾಮಗಾರಿ ಸೇರಿ ಉಳಿದಂತೆ ಸಮೂಹ ಕಾಮಗಾರಿಗಳಿಗೆ ಅವಕಾಶ ಇದೆ. ಪ್ರತಿದಿನ ಸರಾಸರಿ 4 ಸಾವಿರ ಕಾರ್ಮಿಕರು ದುಡಿಯಲು ಅನುಕೂಲ ಮಾಡಲಾಗಿದೆ. ಕೆಲಸಕ್ಕಾಗಿ ಗೂಳೆ ಹೋಗದಂತೆ ಪಂಚಾಯತಿಯಲ್ಲಿ ಕೆಲಸ ಪಡೆಯುವ ಅವಕಾಶ ಇದೆ. ಕೆಲ ಗ್ರಾಮಗಳಲ್ಲಿ ಡಂಗೂರ ಸಾರಿ ಕಾರ್ಮಿಕರಿಗೆ ಸ್ಥಳೀಯ ಕೂಲಿ ಕೆಲಸದ ಬಗ್ಗೆ ಜಾಗೃತಿಗೆ ಕ್ರಮ ವಹಿಸಲಾಗಿದೆ_ ಎಚ್. ಶಶಿಧರ್, ತಾಪಂ, ಇಒ, ಚಳ್ಳಕೆರೆ.1
- ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ್ ಸದಾಶಿವಪ್ಪ ಅವರಿಗೆ ಬೀಳ್ಕೊಡುಗೆ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೆದಾರ್ ಸದಾಶಿವಪ್ಪ ಅವರು ಹೊಳಲ್ಕೆರೆ ತಾಲೂಕು ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸದಾಶಿವಪ್ಪ ಅವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ವರ್ಗಾವಣೆಗೊಂಡ ಶಿರಸ್ತೆದಾರ್ ಸದಾಶಿವಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾತನಾಡಿ, ಸದಾಶಿವಪ್ಪ ಅವರ ಸೇವಾ ಅವಧಿಯ ಕರ್ತವ್ಯನಿಷ್ಠೆ ಹಾಗೂ ಸಹಕಾರವನ್ನು ಸ್ಮರಿಸಿದರು. ಸಹೋದ್ಯೋಗಿಗಳು ಶುಭ ಹಾರೈಸಿ, ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಸಿದರು.4
- ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮೊಬೈಲ್ ಕಳವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಕರ ಮೊಬೈಲ್ ಫೋನನ್ನು ಕಳ್ಳನೊಬ್ಬ ಎಗರಿಸಿ ಪರಾರಿಯಾದ ಘಟನೆ ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗೆಂದು ರೋಗಿಯೊಬ್ಬರು ದಾಖಲಾಗಿದ್ರು. ರೋಗಿಯ ಸಂಬಂಧಿಗಳು ರಾತ್ರಿ ವೇಳೆ ನಿದ್ರೆಗೆ ಜಾರಿದ್ದ ವೇಳೆ ಖದೀಮ ತನ್ನ ಕೈಚಳಕ ತೋರಿದ್ದು, ಮೆಲ್ಲನೇ ಮೊಬೈಲ್ ಫೋನನ್ನ ಎತ್ತಿಕೊಂಡು ಪರಾರಿಯಾಗಿದ್ದಾನೆ. ಇನ್ನು ಕಳ್ಳನ ಖರಾಮತ್ತು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಎಷ್ಟು ಸುರಕ್ಷಿತ ಎನ್ನುವ ಚರ್ಚೆಗಳು ಪ್ರಾರಂಬವಾಗಿದ್ದು, ಸಧ್ಯ ಕಳ್ಳತನ ಘಟನೆಗಳಿಗೆ ಬ್ರೇಕ್ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಫ್ಲೋ......1
- ಈದ್ ಮಿಲಾದ್: ಶಾಂತಿ ಸುವ್ಯವಸ್ಥೆ ಕಾಪಾಡಲು ಚಳ್ಳಕೆರೆಯಲ್ಲಿ ಪೊಲೀಸರಿಂದ ಬೃಹತ್ ಪಥಸಂಚಲನ ಚಳ್ಳಕೆರೆ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪಥಸಂಚಲನ ನಡೆಸಲಾಯಿತು. ನಗರದ ಪೊಲೀಸ್ ಠಾಣೆಯ ಮುಂಭಾಗದಿಂದ ಆರಂಭವಾದ ಈ ಶಿಸ್ತುಬದ್ಧ ಪಥಸಂಚಲನವು ಚಿತ್ರದುರ್ಗ ರಸ್ತೆ, ಅಂಬೇಡ್ಕರ್ ವೃತ್ತ, ಎಸ್.ಆರ್. ರಸ್ತೆ, ಬೆಂಗಳೂರು ರಸ್ತೆ, ಬಸವೇಶ್ವರ ವೃತ್ತ, ಹಳೆನಗರದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಮೂಲಕ ಸಾಗಿ ಬಳ್ಳಾರಿ ರಸ್ತೆಯವರೆಗೆ ಜರುಗಿತು. ನಗರದ ಅಷ್ಟ ದಿಕ್ಕುಗಳಲ್ಲೂ ಸಂಚರಿಸಿದ ಪೊಲೀಸ್ ಪಡೆ, ಸಾರ್ವಜನಿಕರಲ್ಲಿ ಧೈರ್ಯ ಮತ್ತು ಭದ್ರತೆಯ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಯಿತು. ಚಳ್ಳಕೆರೆ ವಿಭಾಗದ ಡಿವೈಎಸ್‌ಪಿ ಸತ್ಯನಾರಾಯಣ ರಾವ್ ಅವರ ನೇತೃತ್ವದಲ್ಲಿ ನಡೆದ ಈ ಪಥಸಂಚಲನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಕೆ. ಕುಮಾರ್, ಪಿಎಸ್‌ಐ ಶಿವರಾಜ್ ಸೇರಿದಂತೆ ಕೆಎಸ್‌ಆರ್‌ಪಿ , ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಎಲ್ಲರೂ ಅನ್ಯೋನ್ಯತೆಯಿಂದ, ಶಾಂತಿ ಹಾಗೂ ಸೌಹಾರ್ದತೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಬೇಕು,ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.1
- ಮುಸ್ಲಿಂ ಭಾಂದವರಿಂದ ಸಂಭ್ರಮದಿಂದ ಈದ್ ಮಿಲಾದ್ ಹಬ್ಬದ ಆಚರಣೆ ಮೊಳಕಾಲ್ಮುರು ಸುದ್ದಿ ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಎಲ್ಲಾ ಸಹೋದರರು ಈದ್ ಮಿಲಾದ್ ಹಬ್ಬವನ್ನು ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಇದು ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸಂಕೇತವಾಗಿ ಆಚರಿಸುವ ಪವಿತ್ರ ಹಬ್ಬ. ಮುಸ್ಲಿಂ ಭಾಂದವರು ಹೊಸ ಬಟ್ಟೆ ತೊಟ್ಟು ಪ್ರವಾದಿಗಳ ಬಗ್ಗೆ ಘೋಷಣೆ ಕೂಗುತ್ತಾ ಊರಲ್ಲಿ ಮೆರವಣಿಗೆ ಮಾಡುತ್ತಾರೆ. ಈ ದಿನದಂದು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಮಸೀದಿಗಳನ್ನು, ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾರೆ. ಮೆರವಣಿಗೆಗಳನ್ನು ಏರ್ಪಡಿಸಿ ಪ್ರವಾದಿಯವರ ಜೀವನ, ಅವರ ಸಂದೇಶವಾದ ಶಾಂತಿ, ಸಹೋದರತ್ವ, ಕರುಣೆ, ಸಮಾನತೆಯ ಬಗ್ಗೆ ಉಪನ್ಯಾಸಗಳು ನಡೆಯುತ್ತವೆ. ಖುರಾನ್ ಪಠಣ ಹಾಗೂ ಪ್ರವಾದಿಯವರನ್ನು ಸ್ತುತಿಸುವ ಗೀತೆಗಳು ಹಾಡುತ್ತಾ ಮೆರವಣಿಗೆ ಮಾಡುತ್ತಾರೆ. ಈ ಹಬ್ಬವು ಕೇವಲ ಸಂಭ್ರಮವಲ್ಲ, ಪ್ರವಾದಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯ ದಿನ. ಬಡವರಿಗೆ ದಾನ, ಅನ್ನದಾನ ಮಾಡುವುದು ಈ ದಿನದ ವಿಶೇಷ. ಕರ್ನಾಟಕ ಸೇರಿದಂತೆ ಭಾರತದಾದ್ಯಂತ, ಅದರಲ್ಲೂ ಹೈದರಾಬಾದ್, ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ನಸೀರ್ ಅಹಮದ್ ಕೆ ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಎಂ ಆರ್ ಮೆಬೂಬ್ ಸಾಬ್, ಖಾಜಾ ಹುಸೇನ್, ಇಬ್ರಮ್ ಶಬ್ಬೀರ್ ಟಿ ಜಿಲಾನ್ ಭಾಷ, ಬೇಕರಿ ಭಾಷಾ, ಅಬ್ದುಲ್ ರಝಕ್, ಗುಲಾಮ್ ಮುಹಮ್ಮದ್, ಶಬ್ಬೀರ್ ಅಹಮದ್, ಮುಂತಾಜ್ ಅಹಮದ್, ಆಟೋ ನೂರ್ ಫಾರೂಕ್, ಇಸಾಕ್ ಅಹಮದ್ ಪೊಲೀಸ್ ಅನ್ವರ್ ಭಾಷ ಹಾಗೂ ಮುಸ್ಲಿಂ ಸಮುದಾಯದ ನಾಗರೀಕರು ಭಾಗವಹಿಸಿದ್ದರು.1
- ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಜನಪ್ರಿಯ ಶಾಸಕರ ಹುಟ್ಟು ಹಬ್ಬದ ಪ್ರಯುಕ್ತ ಕೂಡ್ಲಿಗಿ ಅಪ್ಪು ಸರ್ಕಲ್ ಹತ್ತಿರ ಡಾ. ಶ್ರೀನಿವಾಸ್ ಎನ್ ಟಿ ಅಭಿಮಾನ ಬಳಗ ವತಿಯಿಂದ ಅನ್ನ ಸಂತರ್ಪಣೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಜನಪ್ರಿಯ ಶಾಸಕರ ಹುಟ್ಟು ಹಬ್ಬದ ಪ್ರಯುಕ್ತ ಕೂಡ್ಲಿಗಿ ಅಪ್ಪು ಸರ್ಕಲ್ ಹತ್ತಿರ ಡಾ. ಶ್ರೀನಿವಾಸ್ ಎನ್ ಟಿ ಅಭಿಮಾನ ಬಳಗ ವತಿಯಿಂದ ಅನ್ನ ಸಂತರ್ಪಣೆ1
- ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಾದ ಎನ್ ಎಸ್ ಹರ್ಡಿಕರ್ ಪುಣ್ಯ ಸ್ಮರಣೆ ಕಾರ್ಯಕ್ರಮ ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಾದ ಎನ್ ಎಸ್ ಹರ್ಡಿಕರ್ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಕಾಂಗ್ರೆಸ್ ಸೇವಾದಳ ಜಿಲ್ಲಾಧ್ಯಕ್ಷರಾದ ಬೂತೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎನ್ ಎಸ್ ಹರ್ಡಿಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಎನ್ ಎಸ್ ಹರ್ಡಿಕರ್ ಅವರು ನಡೆದು ಬಂದ ಹಾದಿ ಹಾಗೂ ಅವರ ಕುರಿತು ಜಿಲ್ಲಾಧ್ಯಕ್ಷರಾದ ಬೂತೇಶ್ ಅವರು ಮಾಹಿತಿಯನ್ನ ನೀಡಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಸೇವಾದಳ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಸೇವಾದಳ ಮಹಿಳಾ ಅಧ್ಯಕ್ಷರಾದ ನೇತ್ರ, ಮಹಿಳಾ ಪ್ರಧಾನ ಕಾರ್ಯದರ್ಶಿ ರಾದಮ್ಮ, ಸೇವಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ರಮಾ ನಾಯ್ಕ್, ಕಾಂಗ್ರೆಸ್ ಮುಖಂಡರಾದ ಮೈಲಾರಪ್ಪ, ಸೇವಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಹಾಗೂ ಪಕ್ಷದ ಅನೇಕ ಮುಖಂಡರು ಹಾಜರಿದ್ದರು1