ಆ.26 ರಂದು ಅಖಿಲಭಾರತ ಕ್ರೈಸ್ತ ಮಹಾಸಭಾ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ- ರಾಮಕೃಷ್ಣ ಪ್ರಸಾದ ರಾಯಚೂರು : ಅಖಿಲ ಭಾರತ ಕ್ರೈಸ್ತ ಮಹಾಸಭಾದ ಜಿಲ್ಲಾಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆ.26 ರಂದು ನಗರದ ಪಂಡಿತ ಸಿದ್ದರಾಮ ರಂಗಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಮಕೃಷ್ಣ ಪ್ರಸಾದ.ಎಂ ಹೇಳಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಅಂದು ಬೆಳಿಗ್ಗೆ ಆರ್‌ಟಿಓ ವೃತ್ತದಿಂದ ರಂಗಮಂದಿರದವರೆಗೆ ಬೈಕ್ ರ್ಯಾಲಿ ನಡೆಸಲಾಗುತ್ತದೆ. ನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮಹಾಸಭಾ ರಾಜ್ಯಾಧ್ಯಕ್ಷ ಪ್ರಜ್ವಲ್ ಸ್ವಾಮಿ ಆಗಮಿಸಲಿದ್ದಾರೆ. ಶಾಸಕರುಗಳಾದ ಡಾ.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ದದ್ದಲ್ ಬಸನಗೌಡ, ಎ.ವಸಂತಕುಮಾರ, ಮಾಜಿ ಸಚಿವ ಎನ್.ಎಸ್.ಭೋಸರಾಜ, ಕೆ.ಶಿವನಗೌಡ ನಾಯಕ ಸೇರಿದಂತೆ ಅನೇಕ ರಾಜಕೀಯ ಗಣ್ಯರು, ವಿವಿಧ ಸಭಾಪಾಲಕರು, ಸಮಾಜಬಾಂಧವರು ಭಾಗವಹಿಸಲಿದ್ದಾರೆ ಎಂದರು. ಸಭಾಪಾಲಕ ಜಾನ್‌ವೆಸ್ಲಿ ಮಾತನಾಡಿ ಕ್ರೈಸ್ತ ಮಹಾಸಭಾದ ಕಾರ್ಯಕ್ರಮ ದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ರಾಜ್ಯ ಹಾಗೂ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದರು.
ಆ.26 ರಂದು ಅಖಿಲಭಾರತ ಕ್ರೈಸ್ತ ಮಹಾಸಭಾ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ- ರಾಮಕೃಷ್ಣ ಪ್ರಸಾದ ರಾಯಚೂರು : ಅಖಿಲ ಭಾರತ ಕ್ರೈಸ್ತ ಮಹಾಸಭಾದ ಜಿಲ್ಲಾಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆ.26 ರಂದು ನಗರದ ಪಂಡಿತ ಸಿದ್ದರಾಮ ರಂಗಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಮಕೃಷ್ಣ ಪ್ರಸಾದ.ಎಂ ಹೇಳಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಅಂದು ಬೆಳಿಗ್ಗೆ ಆರ್‌ಟಿಓ ವೃತ್ತದಿಂದ ರಂಗಮಂದಿರದವರೆಗೆ ಬೈಕ್ ರ್ಯಾಲಿ ನಡೆಸಲಾಗುತ್ತದೆ. ನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮಹಾಸಭಾ ರಾಜ್ಯಾಧ್ಯಕ್ಷ ಪ್ರಜ್ವಲ್ ಸ್ವಾಮಿ ಆಗಮಿಸಲಿದ್ದಾರೆ. ಶಾಸಕರುಗಳಾದ ಡಾ.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ದದ್ದಲ್ ಬಸನಗೌಡ, ಎ.ವಸಂತಕುಮಾರ, ಮಾಜಿ ಸಚಿವ ಎನ್.ಎಸ್.ಭೋಸರಾಜ, ಕೆ.ಶಿವನಗೌಡ ನಾಯಕ ಸೇರಿದಂತೆ ಅನೇಕ ರಾಜಕೀಯ ಗಣ್ಯರು, ವಿವಿಧ ಸಭಾಪಾಲಕರು, ಸಮಾಜಬಾಂಧವರು ಭಾಗವಹಿಸಲಿದ್ದಾರೆ ಎಂದರು. ಸಭಾಪಾಲಕ ಜಾನ್‌ವೆಸ್ಲಿ ಮಾತನಾಡಿ ಕ್ರೈಸ್ತ ಮಹಾಸಭಾದ ಕಾರ್ಯಕ್ರಮ ದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ರಾಜ್ಯ ಹಾಗೂ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದರು.
- ಸಿಂಧನೂರು ಕ್ಷೇತ್ರದಲ್ಲಿ 43,115 ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಸಿಂಧನೂರು: ರಾಷ್ಟ್ರೀಯ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಬಳಿಕ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 43,115 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ದೇಸಾಯಿ ತಿಳಿಸಿದ್ದಾರೆ. ಮಂಗಳವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದಲ್ಲಿ 2,40,941 ಮತದಾರರಿದ್ದರು. ಪರಿಷ್ಕರಣೆ ವೇಳೆ ಮೃತಪಟ್ಟ 6,778, ಶಾಶ್ವತವಾಗಿ ಸ್ಥಳಾಂತರಗೊಂಡ 31,954, ಗೈರುಹಾಜರಿದ್ದ 1,555 ಹಾಗೂ ಡಬಲ್ ಮತದಾರರಾಗಿದ್ದ 2,805 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇತರ ಕಾರಣಗಳಿಂದ 23 ಮತದಾರರ ಹೆಸರನ್ನೂ ಡಿಲೀಟ್ ಮಾಡಲಾಗಿದೆ. 2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಒಟ್ಟು 17.90ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ನಗರ ವ್ಯಾಪ್ತಿಯಲ್ಲಿ 20,799 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22,351 ಮತದಾರರ ಹೆಸರುಗಳು ಡಿಲೀಟ್ ಆಗಿವೆ. ಅರ್ಹ ಮತದಾರರ ಹೆಸರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದರೆ, ನಿಗದಿತ 13 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು. ಈ ಹಿಂದೆ ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದವು. 1,200ಕ್ಕೂ ಅಧಿಕ ಮತದಾರರಿರುವ ಕಾರಣ ಮಾಡಶಿರವಾರ, ಪಗಡದಿನ್ನಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ವಿ.ಹೆಚ್.ಎ. ಆ್ಯಪ್ ಮೂಲಕ ಮತದಾರರ ಸೇರ್ಪಡೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅರುಣ್ ಕುಮಾರ್ ದೇಸಾಯಿ ಹೇಳಿದರು.1
- ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ. ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ. ಅಕ್ರಮ ನೀರಾವರಿ ತಡೆಗಟ್ಟುವಲ್ಲಿ ಆಡಳಿತ ಯಂತ್ರ ಕುಸಿದಿದೆ: ಜೆ.ಶರಣಪ್ಪ ಗೌಡ. ಸಿರವಾರ: ಟಿಎಲ್ಬಿಸಿ ಎಡದಂಡೆ ನಾಲೆಯ ಕೆಳಭಾಗಕ್ಕೆ ಸಲಹಾ ಸಮಿತಿಯ ಸಭೆಯ ನಿರ್ಣಯದಂತೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ನೀರು ನಿರ್ವಹಣೆ ಮಾಡದ ನೀರಾವರಿ ಇಲಾಖೆಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ರೈತರು ಮಂಗಳವಾರ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮೇಲ್ಬಾಗದಲ್ಲಿ ಅನಧಿಕೃತ ನೀರಾವರಿ ತಡೆಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಕ್ರಮ ನೀರು ಕಬಳಿಕೆ ಮಾಡುವವರ ಮೇಲೆ ಕಾನೂನು ಕ್ರಮ ಆಗುತ್ತಿಲ್ಲ. ಅಧಿಕಾರಿಗಳು ಅನಧಿಕೃತ ದಂಧೆ ತಡೆಗಟ್ಟಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ವಾಡಿಕೆಗಿಂತ ಮಳೆಯಾಗದ ಹಿನ್ನೆಲೆಯಲ್ಲಿ ಬರಗಾಲ ಉಂಟಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ರೈತರ ಹರಸಾಹಸ ಪಡುವಂತಾಗಿದೆ ಎಂದರು. ರಾಯಚೂರು, ಮಾನ್ವಿ ಮತ್ತು ಸಿರವಾರ ತಾಲೂಕಿನ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟದಲ್ಲಿ ಮಾಜಿ ಶಾಸಕರುಗಳಾದ ರಾಜಾ ವೆಂಕಟಪ್ಪ ನಾಯಕ, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ರೈತ ಸಂಘದ ಮುಖಂಡ ಚಾಮರಸ ಮಾಲೀ ಪಾಟೀಲ್, ಹೋರಾಟಗಾರರಾದ ಶಂಕರಗೌಡ ಹರವಿ, ಎನ್. ಉದಯಕುಮಾರ್ ಸಾಹುಕಾರ, ಜೆ.ದೇವರಾಜ ಗೌಡ, ಅಮರೇಶ ಚಾಗಭಾವಿ, ನಾಗರಾಜ ಗೌಡ, ಸವಾರೆಪ್ಪ, ಬಡ್ಡ ಹನುಮಂತ, ರಾಜಪ್ಪ ಹೊನ್ನಟಗಿ, ಮಲ್ಲಪ್ಪ ದೊಡ್ಮನೆ, ದಾನಪ್ಪ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರೈತರು ಪಾಲ್ಗೊಂಡಿದ್ದರು.2
- "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ ಕಲ್ಯಾಣ ವಾರ್ತೆ -ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. ೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು. *ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು ಕೋಲಿ ಸಮಾಜದ ಆಶಯವಾಗಿದೆ*-" *ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*1
- “ನನ್ನದೇ ಬೆಳೆ, ನನ್ನದೇ ಬೆಲೆ!” 🌾 ಬಳ್ಳಾರಿಯಲ್ಲಿ ನಾಳೆಯಿಂದ ರೈತ ಸಂತೆ ಆರಂಭ | ವಿಷಮುಕ್ತ ಆಹಾರಕ್ಕೆ ಒತ್ತು ಬಳ್ಳಾರಿಯಲ್ಲಿ ಆಗಸ್ಟ್ 26ರಿಂದ ‘ರೈತ ಸಂತೆ’ ಆರಂಭ! 🌾 ಗ್ರಾಹಕರಿಗೆ ನೈಸರ್ಗಿಕ ಹಾಗೂ ವಿಷಮುಕ್ತ ಕೃಷಿ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಬಳ್ಳಾರಿಯ ಗಾಂಧಿ ಭವನದಲ್ಲಿ ರೈತ ಸಂತೆ ಆರಂಭವಾಗಲಿದೆ. “ನನ್ನದೇ ಬೆಳೆ, ನನ್ನದೇ ಬೆಲೆ, ನನ್ನದೇ ಮಾರಾಟ” ಎಂಬ ಪರಿಕಲ್ಪನೆಯಡಿ ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನೈಸರ್ಗಿಕ ಕೃಷಿಕರು ಭಾಗವಹಿಸಲಿದ್ದಾರೆ. 📍 ಸ್ಥಳ: ಗಾಂಧಿ ಭವನ, ಬಳ್ಳಾರಿ 📅 ದಿನಾಂಕ: ಆಗಸ್ಟ್ 26, 2026 ⏰ ಸಮಯ: ಬೆಳಿಗ್ಗೆ 11 ಗಂಟೆ 📆 ಮುಂದೆ: ಪ್ರತಿ ಬುಧವಾರ 🌱 ವಿಶೇಷತೆ: ನೈಸರ್ಗಿಕ ಮತ್ತು ವಿಷಮುಕ್ತ ಕೃಷಿ ಉತ್ಪನ್ನಗಳು ರೈತರ ಆರ್ಥಿಕ ಸ್ವಾವಲಂಬನೆ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಈ ಪ್ರಯತ್ನದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. #Ballari #Bellary #ರೈತಸಂತೆ #ರೈತಸಂಪದ #ನೈಸರ್ಗಿಕಕೃಷಿ #ವಿಷಮುಕ್ತಆಹಾರ #ರೈತರು #ಕೃಷಿ #FarmersMarket #OrganicFarming #NaturalFarming #KarnatakaNews #BallariNews #KannadaNews #Karnataka #Farmers #OrganicFood #LocalFarmers #asnnews24kannada1
- ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ.... ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ. -----------------1
- ಬೆಣ್ಣೆತೋರಾ ಜಲಾಶಯ ದಂಡೆಯಲ್ಲಿ ಸಂಭ್ರಮದ ಕನ್ನಡಗಿ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ ಕಾಳಗಿ: ತಾಲೂಕಿನ ಬೆಣ್ಣೆತೋರಾ ಜಲಾಶಯ ದಂಡೆಯಲ್ಲಿರುವ ಸುಕ್ಷೇತ್ರ ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ಅಪಾರ ಭಕ್ತ ಸಮೂಹವು ಭಕ್ತಿಯಿಂದ ಕನ್ನಡಗಿ ಮಲ್ಲಿಕಾರ್ಜುನ ಮಾಹರಾಜ ಕೀ ಜೈ ಎಂಬ ಜಯಘೋಷಗಳನ್ನು ಕೂಗುತ್ತಾ ಮಲ್ಲಿಕಾರ್ಜುನ ಮೂರ್ತಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರಾವಣ ಮಾಸದ ಎರಡನೇ ಸೋಮವಾರ ನಸುಕಿನ ಜಾವ ಕನ್ನಡಗಿ ಮಲ್ಲಿಕಾರ್ಜುನ ಮೂಲ ಕರ್ತೃ ಗದ್ದುಗೆಗೆ ಹಾಗೂ ದೇವಸ್ಥಾನವನ್ನು ವಿವಿಧ ಪುಷ್ಪಾಲಾಂಕರಗಳಿಂದ ಅಲಂಕಾರ ಮಾಡಲಾಗಿತ್ತು. ಮೂಲ ಕತೃ ಗದ್ದುಗೆಗೆ ಅರ್ಚಕರ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ, ಧಾರಾಭಿಷೇಕ, ಮಹಾ ಮಂಗಳಾರತಿ ಜರುಗಿತು. ಮಧ್ಯಾಹ್ನ ಹೇರೂರ (ಕೆ) ಗ್ರಾಮದ ಮುಖಂಡ ಬಸವರಾಜ ಪಾಟೀಲ ಹೇರೂರ ನೇತೃತ್ವದಲ್ಲಿ ಭಜನಾ ಮಂಡಳಿ ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಅಲಂಕೃತ ಕನ್ನಡಗಿ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳ, ಭಜನೆ, ನಂದಿಕೋಲು, ಪುರವಂತರ ಕುಣಿತದೊಂದಿಗೆ ದೇವಸ್ಥಾನ ಸುತ್ತಲು ಐದು ಸುತ್ತು ಭವ್ಯ ಮೆರವಣಿಗೆ ಜರುಗಿತು. ಭಕ್ತರು 'ಕನ್ನಡಗಿ ಮಲ್ಲಿಕಾರ್ಜುನ ಮಹಾರಾಜ ಕೀ ಜೈ' ಎಂದು ಜಯಘೋಷ ಕೂಗುತ್ತಾ ಪಲ್ಲಕ್ಕಿ ಉತ್ಸವಕ್ಕೆ ಉತ್ತುತ್ತಿ, ಬಾಳೆ ಹಣ್ಣು, ನಾಣ್ಯ ಎಸೆದು ಭಕ್ತಿ ಸಮರ್ಪಿಸಿದರು. ವಿವಿಧ ಗ್ರಾಮಗಳಿಂದ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಕಾಯಿಕರ್ಪೂರ ಮಾಡಿ, ನೈವೇದ್ಯ ಅರ್ಪಿಸಿದರು. ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದ ಭಕ್ತ ಜಗಧೀಶ್ ಜವಳಿ ರಾಜನಾಳ ಅವರು ದೇವಸ್ಥಾನವನ್ನು ಸಂಪೂರ್ಣವಾಗಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿರುವುದು ನೇರೆದಿದ್ದ ಭಕ್ತರಿಗೆ ಆಕರ್ಷಿಣಿಯವಾಗಿತ್ತು. ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಮಾಲಿಪಾಟೀಲ ಕನ್ನಡಗಿ, ಮುಖಂಡರಾದ ಬಸವರಾಜ ಪಾಟೀಲ ಹೇರೂರ, ಸಿದ್ದಣ್ಣ ತಳವಾರ, ಶಿವಕುಮಾರ್ ಪಾಟೀಲ ಹೇರೂರ, ವಿಜಯಕುಮಾರ್ ಪಾಟೀಲ, ಚನ್ನವೀರಪ್ಪ ಮಾಲಿಪಾಟೀಲ, ವಿಜಯಕುಮಾರ ಪೂಜಾರಿ, ಶಾಮರಾಯ ಕನ್ನಡಗಿ, ಗುರಲಿಂಗಪ್ಪ ಪಾಟೀಲ, ಮಲ್ಲಣ್ಣ ನಾಯಕೋಡಿ, ಶಾಂತಕುಮಾರ ತಳವಾರ, ಎಚ್.ಬಿ. ಪಾಟೀಲ, ಮಲ್ಲಿಕಾರ್ಜುನ ವಕೀಲರು ಹಾಗೂ ಕಲಬುರಗಿ, ಹೆರೂರ (ಕೆ), ನಾಗೂರ, ಶೆಳ್ಳಗಿ, ಸಾವತಖೇಡ, ಜೀವನ ಮಾರಡಗಿ, ಹೆಬ್ಬಾಳ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಾಳಗಿ ಪೊಲೀಸ್ ಠಾಣೆ ಪಿಎಸ್‌ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.1
- ಆ.26 ರಂದು ಅಖಿಲಭಾರತ ಕ್ರೈಸ್ತ ಮಹಾಸಭಾ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ- ರಾಮಕೃಷ್ಣ ಪ್ರಸಾದ ರಾಯಚೂರು : ಅಖಿಲ ಭಾರತ ಕ್ರೈಸ್ತ ಮಹಾಸಭಾದ ಜಿಲ್ಲಾಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆ.26 ರಂದು ನಗರದ ಪಂಡಿತ ಸಿದ್ದರಾಮ ರಂಗಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಮಕೃಷ್ಣ ಪ್ರಸಾದ.ಎಂ ಹೇಳಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಅಂದು ಬೆಳಿಗ್ಗೆ ಆರ್‌ಟಿಓ ವೃತ್ತದಿಂದ ರಂಗಮಂದಿರದವರೆಗೆ ಬೈಕ್ ರ್ಯಾಲಿ ನಡೆಸಲಾಗುತ್ತದೆ. ನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮಹಾಸಭಾ ರಾಜ್ಯಾಧ್ಯಕ್ಷ ಪ್ರಜ್ವಲ್ ಸ್ವಾಮಿ ಆಗಮಿಸಲಿದ್ದಾರೆ. ಶಾಸಕರುಗಳಾದ ಡಾ.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ದದ್ದಲ್ ಬಸನಗೌಡ, ಎ.ವಸಂತಕುಮಾರ, ಮಾಜಿ ಸಚಿವ ಎನ್.ಎಸ್.ಭೋಸರಾಜ, ಕೆ.ಶಿವನಗೌಡ ನಾಯಕ ಸೇರಿದಂತೆ ಅನೇಕ ರಾಜಕೀಯ ಗಣ್ಯರು, ವಿವಿಧ ಸಭಾಪಾಲಕರು, ಸಮಾಜಬಾಂಧವರು ಭಾಗವಹಿಸಲಿದ್ದಾರೆ ಎಂದರು. ಸಭಾಪಾಲಕ ಜಾನ್‌ವೆಸ್ಲಿ ಮಾತನಾಡಿ ಕ್ರೈಸ್ತ ಮಹಾಸಭಾದ ಕಾರ್ಯಕ್ರಮ ದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ರಾಜ್ಯ ಹಾಗೂ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದರು.1
- ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ...... ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ. ತುರ್ವಿಹಾಳ: ಪಟ್ಟಣದ ಸರ್ವೆ ನಂ.14ರ ಶರಣಪ್ಪ ಮೆಗಳಡಕ್ಕಿ ಅವರ ಹೊಲದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂರು ಎಮ್ಮೆ ಹಾಗೂ ಒಂದು ಆಕಳು ಮೃತಪಟ್ಟಿದ್ದು, ಎರಡು ಎಮ್ಮೆ ಮತ್ತು ನಾಲ್ಕು ಮೇಕೆರಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಸಂತ್ರಸ್ತ ಶರಣಪ್ಪ ಮೆಗಳಡಕ್ಕಿ ತಿಳಿಸಿದ್ದಾರೆ. ವಿದ್ಯುತ್ ಅವಘಡದ ಪರಿಣಾಮ ಜಾನುವಾರುಗಳ ಸಾವಿನ ಜತೆಗೆ ಒಂದು ತೊಲೆ ಬಂಗಾರ ಹಾಗೂ 1.60 ಲಕ್ಷ ನಗದು ಹಣವೂ ನಷ್ಟವಾಗಿದೆ. ಜಾನುವಾರುಗಳ ಸಾವಿನಿಂದ ಹಾಗೂ ಇತರೆ ವಸ್ತುಗಳ ಹಾನಿಯಿಂದ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಸೂಕ್ತವಾಗಿ ಪರಿಶೀಲಿಸಿ, ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಶರಣಪ್ಪ ಮೆಗಳಡಕ್ಕಿ ಮನವಿ ಮಾಡಿದ್ದಾರೆ. ಸ್ಥಳ ಪರಿಶೀಲನೆ: ಘಟನೆ ಕುರಿತು ಮಾಹಿತಿ ಪಡೆದ ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೋಸಗೌಡರ್ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಜಾನುವಾರುಗಳು ಹಾಗೂ ಸ್ಥಳವನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ (ಆರ್‌ಐ) ಉಮಾಪತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿ, ಹಾನಿಯ ವಿವರಗಳನ್ನು ದಾಖಲಿಸಿಕೊಂಡರು.2