ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರೈಸ್ತ ಅಲ್ಲ ಹಿಂದೂ: ಉರ್ಬದಲ್ಲಿ ಸುದ್ದಿಗೋಷ್ಟಿಯಲ್ಲಿ ದಾಖಲೆ ಬಿಡುಗಡೆ ಮಂಗಳೂರು: “ಕಳೆದ ಮಾರ್ಚ್ 13 ರಂದು ಸುದ್ದಿಗೋಷ್ಠಿ ನಡೆಸಿದ್ದ ಡಾ.ರತಿ ಅವರು ಕರಾವಳಿಯಲ್ಲಿ ದೈವ ನರ್ತನ ಸೇವೆಯನ್ನು ಪಂಬದ, ಪಾಣಾರ ಸುಮಾರು 16 ಜಾತಿಗಳವರು ಮಾಡಬೇಕು ಆದರೆ ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ನರ್ತನ ಸೇವೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅವರ ಈ ಆರೋಪಕ್ಕೆ ಬೇಕಾದ ಜಾತಿ ಪ್ರಮಾಣಪತ್ರ ನಮ್ಮಲ್ಲಿದ್ದು ನರ್ತನ ಸೇವೆ ಮಾಡಿರುವ ಸುಶಾಂತ್ ಬಂಗೇರ ಒಬ್ಬ ಹಿಂದೂ ಆಗಿದ್ದು ಪಂಬದ ಸಮಾಜಕ್ಕೆ ಸೇರಿದವನು“ ಎಂದು ದೈವನರ್ತಕ ಸೂರಜ್ ಚಿಪ್ಪಾರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ”ನಮ್ಮದೇ ಪಂಬದ ಸಮುದಾಯದ ಗಣೇಶ್ ಪದವಿನಂಗಡಿ ಎಂಬವರು ಮದುವೆ ಆಗಿರುವುದು ಕ್ರಿಶ್ಚನ್ ಮಹಿಳೆಯನ್ನು ಎಂಬುದು ಸತ್ಯ. ಮಾತ್ರವಲ್ಲದೆ ಯಾವಾಗ ಕ್ರಿಶ್ಚಿಯನ್ ಮಹಿಳೆ ಗಣೇಶ್ ಎಂಬವರನ್ನು ಮದುವೆಯಾದರೂ ಆವಾಗಲೇ ನಮ್ಮ ಹಿಂದೂ ಸಂಪ್ರದಾಯಕ್ಕೆ ಹಾಗೂ ಪಂಬದ ಜಾತಿಯ ನೀತಿ ನಿಯಮಗಳನ್ನು ಪಾಲಿಸಿಕೊಂಡು ಬಂದಿರುತ್ತಾರೆ ಯಾವಾಗ ಒಂದು ಹೆಣ್ಣು ತನ್ನ ಮೂಲ ಧರ್ಮವನ್ನೇ ಬಿಟ್ಟು ಮತ್ತೊಂದು ಧರ್ಮಕ್ಕೆ ಬಂದು ಇಲ್ಲಿನ ಆಚಾರ ವಿಚಾರ ಪದ್ದತಿಗಳನ್ನು ಅನುಸರಿಸುತ್ತಾರೆ ಅವರು ನಮ್ಮವರಾಗುತ್ತಾರೆ ಮಾತ್ರವಲ್ಲದೆ ಹೆಣ್ಣನ್ನು ಈ ವಿಚಾರದಲ್ಲಿ ದೂಷಣೆ ಮಾಡುವುದು ಅತಿ ದೊಡ್ಡ ಅನ್ಯಾಯವಾಗುತ್ತದೆ. ಹಾಗೆಯೇ ಪಂಬದ ಜನಾಂಗದ ಗಣೇಶ ಅವರು ಹಿಂದು ಸಂಪ್ರದಾಯದಂತೆ ಮದುವೆಯಾಗಿ ಅದರ ನಂತರ ಸುಶಾಂತ್ ಪಂಬದರನ್ನು ಮಗುವಾಗಿ ಪಡೆಯುತ್ತಾರೆ. ಅದರಂತೆ ಕಾನೂನು ಪ್ರಕಾರ ಜಾತಿ ಪ್ರಮಾಣ ಪತ್ರ ಹಾಗೂ ಎಲ್ಲಾ ದಾಖಲೆಗಳನ್ನು ಈಗಾಗಲೇ ಮಾಡಿಕೊಂಡಿರುತ್ತಾರೆ“ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಚಿಪ್ಪಾರು ಗಣೇಶ್ ಪಂಬದ ಮಾತಾಡಿ, ”ಇಲ್ಲಿ ಎಲ್ಲಿಯೂ ಪಂಬದ ಜನಾಂಗದ ವೃತ್ತಿ ಗೌರವ ಕಳೆಯುವ ಕಾರ್ಯವಾಗಲಿ ಅಥವಾ ದೈವಾರಾಧನೆಗೆ ಅಪಚಾರ ಮಾಡುವ ಕೆಲಸವಾಗಲಿ ಆಗಲಿಲ್ಲ. ಅಂದು ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೇವಕ್ಕೆ ನರ್ತಕ ಸೇವೆಯನ್ನು ಶ್ರದ್ದಾಭಕ್ತಿಯಿಂದ ಕಿಂಚಿತ್ತು ಲೋಪದೋಷಗಳು ಬಾರದಂತೆ ದೈವೀ ಅಪ್ಪಣೆ ಯಂತೆ ನಡೆಸಲಾಗಿದೆ ಇದರಿಂದ ಮಾಡಿಸಿದವರಿಗಾಗಲಿ. ಊರಿಗಾಗಲಿ, ನಮಗಾಗಲಿ ಯಾವುದೇ ತೊಂದರೆಗಳು ಬಾರದೆ ಅತ್ಯುತ್ತಮವಾಗಿ ನಡೆದಿದೆ. ನಾನು ಕಳೆದ 31 ವರ್ಷಗಳಿಂದ ಕುಂಬ್ಳೆ ಸೀಮೆ, ವಿಟ್ಲ ಸೀಮೆ, ಕೋಳಿಯೂರು ಸೀಮೆ, ಮಂಜೇಶ್ವರ ಮಾಗಣೆ, ಕುರ್ನಾಡು ಮಾಗಣೆ, ಹರೇಕಳ ಪಾವೂರು ಮಾಗಣೆ ಹೀಗೆ ಹತ್ತು ಹಲವು ಮಾಗಣೆಗಳಲ್ಲಿ ದೈವ ನರ್ತನೆ ಸೇವೆಯನ್ನು ನಿಷ್ಠೆಯಿಂದ ನಮ್ಮ ಜನಾಂಗಕ್ಕೆ ಮತ್ತು ಭಕ್ತ ಸಮುದಾಯದವರಿಗೆ ಧಕ್ಕೆ ಬಾರದ ಹಾಗೆ ನಡೆಸಿಕೊಂಡು ಬಂದಿರುವೆನು. ಇದರಲ್ಲಿ ಸರಿ ತಪ್ಪುಗಳ ಬಗ್ಗೆ ತಿಳಿದುಕೊಂಡಿರುವೆನು ಮಾತ್ರವಲ್ಲದೆ ಕಾಸರಗೋಡು, ದಕ್ಷಿಣ ಕನ್ನಡ ಅವಿಭಜಿತ ಜಿಲ್ಲೆಯಲ್ಲಿ ಭಕ್ತಿಯಿಂದ ಯಾರೆಲ್ಲ ನನ್ನನ್ನು ಆಹ್ವಾನಿಸುತ್ತಾರೋ ಅವರಿಗೆಲ್ಲ ಖಂಡಿತವಾಗಿಯೂ ನನ್ನ ಸೇವೆಯನ್ನು ಮಾಡಲು ಸಿದ್ಧನಾಗಿದ್ದೇನೆ. ಮಾತ್ರವಲ್ಲದೆ ಮುಂದಕ್ಕೂ ಯಾರೆಲ್ಲ ಕರೆಯುತ್ತಾರೋ ಅಲ್ಲಿಗೆ ಸೇವೆ ಸಲ್ಲಿಸಲು ಹೋಗುತ್ತೇನೆ“ ಎಂದರು. ದೈವನರ್ತಕ ಸುಶಾಂತ್ ಬಂಗೇರ ಮಾತಾಡಿ, ”ನನ್ನನ್ನು ಕ್ರೈಸ್ತ ಧರ್ಮಕ್ಕೆ ಸೇರಿದವನು ಎಂದು ಅವಮಾನ ಮಾಡಿದ್ದಾರೆ. ಅವರು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಅವರ ವೈಯಕ್ತಿಕ ಲಾಭಕ್ಕಾಗಿ ನನ್ನ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಅವರಿಂದ ನನಗೆ ಈ ಪರಿಸ್ಥಿತಿ ಒದಗಿಬಂದಿದೆ. ದೈವನರ್ತನ ಮಾಡಲು ಕಷ್ಟವಾಗುತ್ತಿದೆ“ ಎಂದರು. ಪತ್ರಿಕಾಗೋಷ್ಟಿಯಲ್ಲಿ ಗಣೇಶ್ ಕಜೆ, ಕಮಲಾಕ್ಷ ಪಂಬದ ಗಂಧಕಾಡು, ಸವಿತಾ ಮತ್ತಿತರರು ಉಪಸ್ಥಿತರಿದ್ದರು.

- ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರು ಮತ್ತು ಖಾಸಗಿ ಅಂಬ್ಯೂಲೆನ್ಸ್ ವಾಹನಗಳ ನಡುವೆ ಉಂಟಾದ ಡಿಕ್ಕಿಯಲ್ಲಿ ಬ್ರೀಝಾ ಕಾರು ಮೂರು ಪಲ್ಟಿ ಹೊಡೆದು ಯಥಾ ಸ್ಥಿತಿಯಲ್ಲಿ ನಿಂತ ಘಟನೆ ಇಂದು ಮದ್ಯಾಹ್ನ ನಡೆದಿದೆ. ಸೊರಬ ಕಡೆಯಿಂದ ಬಂದ ಅಂಬ್ಯೂಲೆನ್ಸ್ ವಾಹನ ಕಾಶೀಪುರದಿಂದ ಹನಸವಾಡಿಗೆ ಹೋಗುವಾಗ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರಿಗೆ ಡಿಕ್ಕಿ ಹೊಡೆದಿದೆ. ಕಾಲಿನಲ್ಲಿ ಸುರೇಶ್, ದೀಪಾ (14) ಮಗು ಹಾಗೂ ಕಿಶನ್ ಎಂಬ 74 ವರ್ಷದ ವೃದ್ಧರಿದ್ದರು. ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಪಲ್ಟಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಹಿಂದಿನ ಗ್ಲಾಸ್ ಪುಡಿ ಪುಡಿಯಾಗಿದೆ. ನಾಲ್ವರನ್ನ ಉಷಾ ನರ್ಸಿಂಗ್ ಹೋಂ ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಅಂಬ್ಯೂಲೆನ್ಸ್ ಚಾಲಕ ಸಾವಂತ್ ಗೆ ಕಾಲು ಮುರಿದಿದೆ. ತಕ್ಷಣವೇ ಮೂವರನ್ನ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.1
- ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿದೆಡೆ ಬುಧವಾರ ಮಧ್ಯಾಹ್ನ ಭಾರಿ ಗಾಳಿ, ಗುಡುಗು ಸಹಿತ ಅಲಿಕಲ್ಲು ಮಳೆಯಾಗಿದೆ.1
- *ಭಾರತ ನಲ್ಲಿ ವೈರಲ್*1
- Post by Suresh Belagere1
- ಬಾರಿ ಗಾಳಿ-ಮಳೆಗೆ ಸೂರನಹಳ್ಳಿ ಗ್ರಾಮದಲ್ಲಿ ಹಾಗಲಕಾಯಿ ಫಸಲು ನೆಲಕಚ್ಚಿ ರೈತನಿಗೆ ಅಪಾರ ನಷ್ಟ ಉಂಟಾಗಿದೆ. ಚಳ್ಳಕೆರೆ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಯಿಂದ ರೈತ ನರಸಿಂಹಪ್ಪ ಅವರ ತೋಟದಲ್ಲಿ ಬೆಳೆದಿದ್ದ ಹಾಗಲಕಾಯಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿ ಅಪಾರ ನಷ್ಟ ಉಂಟಾಗಿದೆ.1
- ಶ್ರೀ ಶ್ರೀಕಾಂತ ದುಂಡಿಗೌಡ್ರ ನೇತೃತ್ವದಲ್ಲಿ ಭಾರತ ಸೇವಾ ಸಂಸ್ಥೆ (ರಿ) ಬನ್ನೂರ ವತಿಯಿಂದ ಇದೇ ಮಾರ್ಚ 22 ರಂದು ಶಿಗ್ಗಾವಿ ತಾಲ್ಲೂಕಿನ ತಡಸ ಗ್ರಾಮದ ಕಂಚಗಾರಗಟ್ಟಿ (14 ಎಕರೆ) ಕೆರೆಯನ್ನು ಹೂಳು ತೆಗೆಯುವ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟರಾದ ಶ್ರೀ ಅನಿರುದ್ಧ ವಿಷ್ಣುವರ್ಧನರವರು ಸಹ ಭಾಗವಹಿಸಲಿದ್ದಾರೆ. ಬನ್ನಿ ನೀವು ಭಾಗವಹಿಸಿ…1
- ಆತ್ಮೀಯ ಸಹನಾಗರಿಕರೇ, ಪವಿತ್ರ ಹಾಗೂ ಶುಭದಾಯಕವಾದ ಯುಗಾದಿ ಹಬ್ಬದ ಈ ಸುಸಂದರ್ಭದಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಮ್ಮ ಸುತ್ತಲೂ ಸುಂದರ ವಸಂತವು ಹರ್ಷೋಲ್ಲಾಸವನ್ನು ಪಸರಿಸುವ ಕಾಲವಿದು. ಹೊಸದಾಗಿ ಅರಳುತ್ತಿರುವ ಸುಮಗಳ ಸೌರಭ ಮತ್ತು ಋತುಮಾನದ ಹಣ್ಣುಗಳ ಆಗಮನವು ನಮ್ಮಲ್ಲಿ ಹೊಸ ಚೈತನ್ಯ ಹಾಗೂ ವಿಪುಲ ಸಾಧ್ಯತೆಗಳ ಸ್ಫೂರ್ತಿಯನ್ನು ತುಂಬುತ್ತವೆ. ಅಂತೆಯೇ, ನಮ್ಮ ಶ್ರಮಜೀವಿ ರೈತಬಾಂಧವರು ಸಹ ಮಹತ್ತರವಾದ ಆಶಾವಾದದೊಂದಿಗೆ ಮುಂದಿನ ಕೃಷಿ ಋತುವಿಗೆ ಸಜ್ಜಾಗುವ ಸಂಭ್ರಮದ ಸಮಯವಿದು. ಸಾಂಪ್ರದಾಯಿಕ ಸಡಗರದ ಯುಗಾದಿಯು ಜೀವನದ ಎಲ್ಲಾ ರಸಭಾವಗಳನ್ನು ಸಮಾನವಾಗಿ ಸ್ವೀಕರಿಸುವುದನ್ನು ನಮಗೆ ನೆನಪಿಸುತ್ತದೆ. ನಮ್ಮ ಸಂಸ್ಕೃತಿಯಲ್ಲಿ ವಿವಿಧ ಹಬ್ಬದ ಅಡುಗೆಗಳ ಜೊತೆಗೆ, ಈ ದಿನದಂದು 'ಸಿಹಿ-ಕಹಿ' ಸಮ್ಮಿಶ್ರಿತ ತಿನಿಸನ್ನು (ಬೇವು-ಬೆಲ್ಲ) ಸವಿಯುವ ವಿಶಿಷ್ಟ ಸಂಪ್ರದಾಯವಿದೆ. ಇದು ಬದುಕಿನ ಆಳವಾದ ಅರ್ಥವನ್ನು ನಮಗೆ ತಿಳಿಸಿಕೊಡುತ್ತದೆ; ಅಡೆತಡೆಗಳನ್ನು ಧೈರ್ಯದಿಂದ ಎದುರಿಸಲು ಮತ್ತು ಯಶಸ್ಸನ್ನು ವಿನಯಪೂರ್ವಕ ಕೃತಜ್ಞತೆಯಿಂದ ಸ್ವಾಗತಿಸಲು ಇದು ನಮಗೆ ಪ್ರೇರಣೆ ನೀಡುತ್ತದೆ. ಈ ಹೊಸ ವರ್ಷವು ನಿಮ್ಮ ಬದುಕಿನಲ್ಲಿ ಸುಖ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ತಂದುಕೊಡಲಿ. ನಿಮ್ಮ ಎಲ್ಲಾ ಸತ್ಕಾರ್ಯಗಳಲ್ಲಿ ಯಶಸ್ಸು ಲಭಿಸಲಿ ಹಾಗೂ ಶಾಂತಿ ಮತ್ತು ಸಕಾರಾತ್ಮಕತೆ ಸದಾ ನೆಲೆಸಲಿ. ನಿಮ್ಮ, ನರೇಂದ್ರ ಮೋದಿ1
- ಶಿವಮೊಗ್ಗ-ಬಿಸಿಲಿನ ತಾಪಕ್ಕೆ ಸೊರಗಿದ್ದ ಜನತೆಗೆ ತಂಪೆರೆದ ಆಲಿಕಲ್ಲಿನ ಮಳೆ2