ಭದ್ರಾವತಿ ಸರ್ ಎಂ ವಿ ಕಾಲೇಜಿನಲ್ಲಿ ಒಂದು ದಿನದ ಸ್ಕೌಟಿಂಗ್ ಕಾರ್ಯಾಗಾರ ಭದ್ರಾವತಿ: ನಗರದ ನ್ಯೂಟೌನ್‌ನಲ್ಲಿರುವ ಸರ್. ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ IQAC ಸಹಯೋಗದಲ್ಲಿ “Essentials of Scouting: A Pathway to Leadership, Spirit and Service” ಎಂಬ ವಿಷಯದ ಕುರಿತು ಒಂದು ದಿನದ ಸ್ಕೌಟಿಂಗ್ ಕಾರ್ಯಾಗಾರವನ್ನು ಸೆ.11ರಂದು ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು, ಸೇವಾ ಮನೋಭಾವ, ತಂಡದ ಕೆಲಸ, ಆತ್ಮವಿಶ್ವಾಸ, ಜವಾಬ್ದಾರಿತನ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು. ಕಾಲೇಜಿನ ಕೊಠಡಿ ಸಂಖ್ಯೆ 1ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಉಷಾದೇವಿ ಜಿ., IQAC ಸಂಯೋಜಕ ಮೊಹಮ್ಮದ್ ನಜೀಬ್ ಎಂ., ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಅಕ್ಷತಾ ಬಿ.ಜಿ., RL ಹಾಗೂ ಶ್ರೀ ಚಿರಂಜೀವಿ ವಿ.ಬಿ., RSL ಸೇರಿದಂತೆ ಗಣ್ಯರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಕೌಟಿಂಗ್ ಕ್ಷೇತ್ರದ ಅನುಭವಿಗಳಾದ ಶಿವಮೊಗ್ಗದ ಶ್ರೀ ಎಚ್. ಶಿವಶಂಕರಪ್ಪ, ALT (S), DTC ಹಾಗೂ ಶ್ರೀ ಸಿ.ಎಂ. ಪರಮೇಶ್ವರಯ್ಯ, A.L.T (S) ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸ್ಕೌಟಿಂಗ್‌ನ ಮೂಲತತ್ವಗಳು, ಉದ್ದೇಶಗಳು ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಅದರ ಪಾತ್ರದ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಾಗಾರದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು, ಶಿಸ್ತು ಮತ್ತು ಜವಾಬ್ದಾರಿಯ ಮಹತ್ವ, ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯ, ಸೇವಾ ಮನೋಭಾವ, ಸಮಾಜಮುಖಿ ಚಿಂತನೆ, ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ, ಸಾಹಸ, ಸ್ನೇಹ ಹಾಗೂ ಸಮಾಜದಲ್ಲಿ ಯುವಜನರ ಜವಾಬ್ದಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವಿಶೇಷ ಆಹ್ವಾನಿತರಾಗಿ ತರೀಕೆರೆಯ SJM ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಡಾ. ಸುಮತಿ ಕೆ., RL ಹಾಗೂ ಡಾ. ಶಿವರಾಜ್‌ಕುಮಾರ್ ಕೆ., RSL ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸ್ಕೌಟಿಂಗ್ ಚಟುವಟಿಕೆಗಳಲ್ಲಿ ಹೆಚ್ಚಿನ ಉತ್ಸಾಹದಿಂದ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. ಸ್ಕೌಟಿಂಗ್ ಮೂಲಕ ವಿದ್ಯಾರ್ಥಿಗಳಲ್ಲಿ ಸಮಯಪಾಲನೆ, ಸ್ವಾವಲಂಬನೆ, ಸಹಕಾರ, ಸಹಾನುಭೂತಿ, ನಾಯಕತ್ವ ಹಾಗೂ ಸೇವಾ ಮನೋಭಾವ ಬೆಳೆಸಬಹುದು. ಮುಂದಿನ ದಿನಗಳಲ್ಲಿ ಸಾಮಾಜಿಕ ಸೇವೆ, ಪರಿಸರ ಸಂರಕ್ಷಣೆ, ಮತದಾರರ ಜಾಗೃತಿ, ಸಮುದಾಯ ಸೇವೆ ಹಾಗೂ ವಿದ್ಯಾರ್ಥಿ ನಾಯಕತ್ವ ಚಟುವಟಿಕೆಗಳನ್ನು ಕೈಗೊಳ್ಳಲು ಈ ಕಾರ್ಯಾಗಾರ ಪ್ರೇರಣೆ ನೀಡಿತು. ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ IQACನ ಸಮನ್ವಯದಲ್ಲಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. “ಸ್ಕೌಟಿಂಗ್ ಉತ್ತಮ ನಾಯಕನನ್ನು ಮಾತ್ರವಲ್ಲ, ಉತ್ತಮ ವ್ಯಕ್ತಿತ್ವ ಮತ್ತು ಉತ್ತಮ ಸಮಾಜವನ್ನು ನಿರ್ಮಿಸುತ್ತದೆ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

- ಭದ್ರಾವತಿ ಸರ್ ಎಂ ವಿ ಕಾಲೇಜಿನಲ್ಲಿ ಒಂದು ದಿನದ ಸ್ಕೌಟಿಂಗ್ ಕಾರ್ಯಾಗಾರ ಭದ್ರಾವತಿ: ನಗರದ ನ್ಯೂಟೌನ್‌ನಲ್ಲಿರುವ ಸರ್. ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ IQAC ಸಹಯೋಗದಲ್ಲಿ “Essentials of Scouting: A Pathway to Leadership, Spirit and Service” ಎಂಬ ವಿಷಯದ ಕುರಿತು ಒಂದು ದಿನದ ಸ್ಕೌಟಿಂಗ್ ಕಾರ್ಯಾಗಾರವನ್ನು ಸೆ.11ರಂದು ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು, ಸೇವಾ ಮನೋಭಾವ, ತಂಡದ ಕೆಲಸ, ಆತ್ಮವಿಶ್ವಾಸ, ಜವಾಬ್ದಾರಿತನ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು. ಕಾಲೇಜಿನ ಕೊಠಡಿ ಸಂಖ್ಯೆ 1ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಉಷಾದೇವಿ ಜಿ., IQAC ಸಂಯೋಜಕ ಮೊಹಮ್ಮದ್ ನಜೀಬ್ ಎಂ., ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಅಕ್ಷತಾ ಬಿ.ಜಿ., RL ಹಾಗೂ ಶ್ರೀ ಚಿರಂಜೀವಿ ವಿ.ಬಿ., RSL ಸೇರಿದಂತೆ ಗಣ್ಯರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಕೌಟಿಂಗ್ ಕ್ಷೇತ್ರದ ಅನುಭವಿಗಳಾದ ಶಿವಮೊಗ್ಗದ ಶ್ರೀ ಎಚ್. ಶಿವಶಂಕರಪ್ಪ, ALT (S), DTC ಹಾಗೂ ಶ್ರೀ ಸಿ.ಎಂ. ಪರಮೇಶ್ವರಯ್ಯ, A.L.T (S) ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸ್ಕೌಟಿಂಗ್‌ನ ಮೂಲತತ್ವಗಳು, ಉದ್ದೇಶಗಳು ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಅದರ ಪಾತ್ರದ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಾಗಾರದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು, ಶಿಸ್ತು ಮತ್ತು ಜವಾಬ್ದಾರಿಯ ಮಹತ್ವ, ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯ, ಸೇವಾ ಮನೋಭಾವ, ಸಮಾಜಮುಖಿ ಚಿಂತನೆ, ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ, ಸಾಹಸ, ಸ್ನೇಹ ಹಾಗೂ ಸಮಾಜದಲ್ಲಿ ಯುವಜನರ ಜವಾಬ್ದಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವಿಶೇಷ ಆಹ್ವಾನಿತರಾಗಿ ತರೀಕೆರೆಯ SJM ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಡಾ. ಸುಮತಿ ಕೆ., RL ಹಾಗೂ ಡಾ. ಶಿವರಾಜ್‌ಕುಮಾರ್ ಕೆ., RSL ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸ್ಕೌಟಿಂಗ್ ಚಟುವಟಿಕೆಗಳಲ್ಲಿ ಹೆಚ್ಚಿನ ಉತ್ಸಾಹದಿಂದ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. ಸ್ಕೌಟಿಂಗ್ ಮೂಲಕ ವಿದ್ಯಾರ್ಥಿಗಳಲ್ಲಿ ಸಮಯಪಾಲನೆ, ಸ್ವಾವಲಂಬನೆ, ಸಹಕಾರ, ಸಹಾನುಭೂತಿ, ನಾಯಕತ್ವ ಹಾಗೂ ಸೇವಾ ಮನೋಭಾವ ಬೆಳೆಸಬಹುದು. ಮುಂದಿನ ದಿನಗಳಲ್ಲಿ ಸಾಮಾಜಿಕ ಸೇವೆ, ಪರಿಸರ ಸಂರಕ್ಷಣೆ, ಮತದಾರರ ಜಾಗೃತಿ, ಸಮುದಾಯ ಸೇವೆ ಹಾಗೂ ವಿದ್ಯಾರ್ಥಿ ನಾಯಕತ್ವ ಚಟುವಟಿಕೆಗಳನ್ನು ಕೈಗೊಳ್ಳಲು ಈ ಕಾರ್ಯಾಗಾರ ಪ್ರೇರಣೆ ನೀಡಿತು. ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ IQACನ ಸಮನ್ವಯದಲ್ಲಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. “ಸ್ಕೌಟಿಂಗ್ ಉತ್ತಮ ನಾಯಕನನ್ನು ಮಾತ್ರವಲ್ಲ, ಉತ್ತಮ ವ್ಯಕ್ತಿತ್ವ ಮತ್ತು ಉತ್ತಮ ಸಮಾಜವನ್ನು ನಿರ್ಮಿಸುತ್ತದೆ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.1
- ಉಕ್ಕಿನ ನಗರದ ವಿವಿಧೆಡೆ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ....... ಭದ್ರಾವತಿ ಭೋವಿ ಕಾಲೋನಿ ಶ್ರೀ ವಿನಾಯಕ ಸೇವಾ ಸಮಿತಿಯಿಂದ ೪೨ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದು, ಆಕರ್ಷಕ ವೇದಿಕೆಯಲ್ಲಿ ಬೃಹತ್ ವಿನಾಯಕ ಮೂರ್ತಿ ರಾರಾಜಿಸುತ್ತಿದೆ. ಭದ್ರಾವತಿ: ನಗರದ ವಿವಿಧೆಡೆ ಗೌರಿ-ಗಣೇಶ ಹಬ್ಬ ಆಚರಣೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷದಂತೆ ಈ ಬಾರಿ ಸಹ ಪ್ರತಿಷ್ಠಿತ ವಿನಾಯಕ ಸೇವಾ ಸಮಿತಿಗಳಿಂದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಭದ್ರಾವತಿ ಹೊಸಮನೆ ಭಾಗದಲ್ಲಿ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಯಿಂದ ೫೪ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಆಕರ್ಷಕವಾದ ಬೃಹತ್ ಸ್ವಾಗತ ದ್ವಾರಬಾಗಿಲುಗಳನ್ನು ನಿರ್ಮಿಸಲಾಗಿದೆ. ಹೊಸಮನೆ ಭಾಗದಲ್ಲಿ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಯಿಂದ ೫೪ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಆಕರ್ಷಕವಾದ ಬೃಹತ್ ಸ್ವಾಗತ ದ್ವಾರಬಾಗಿಲುಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ವಿದ್ಯುತ್ ದೀಪಗಳ ಆಲಂಕಾರ ಕೈಗೊಳ್ಳಲಾಗಿದೆ. ಭೋವಿ ಕಾಲೋನಿ ಶ್ರೀ ವಿನಾಯಕ ಸೇವಾ ಸಮಿತಿಯಿಂದ ೪೨ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದು, ಆಕರ್ಷಕ ವೇದಿಕೆಯಲ್ಲಿ ಬೃಹತ್ ವಿನಾಯಕ ಮೂರ್ತಿ ರಾರಾಜಿಸುತ್ತಿದೆ. ಭಕ್ತರ ಕಣ್ಮನ ಸೆಳೆಯುತ್ತಿದ್ದು, ಸೆ.೨೪ರಂದು ವಿಸರ್ಜನೆ ನಡೆಯಲಿದೆ.3
- ನರೇಂದ್ರ ಮೋದಿಜೀರವರ 25 ವರ್ಷಗಳ ಸೇವೆ, ಸಮರ್ಪಣೆ, ಅವಿರತ ಪರಿಶ್ರಮ, ಬದ್ಧತೆ, ಇಂದು ಸಂಕಲ್ಪ ದಿನ ಸರಿಸಾಟಿಯಿಲ್ಲದ ವಿಶ್ವನಾಯಕ, ಭಾರತದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀರವರ ಒಂದಿನ ಅಂದು ಸಂಜೆ ಆರು ಗಂಟೆಯಿಂದ ಏಳು ಗಂಟೆಯವರೆಗೆ -ದೇಶದ ಎಲ್ಲಾಕಡೆ, ಎಲ್ಲಾ ಮನೆಗಳಲ್ಲೂ ಒಂದು ಅಕ್ಷರೆಯ ಗೌರವದ ದೀಪ ಬೆಳಗಲಿದೆ. ಅದು ನೆಚ್ಚಿನ ನಾಯಕನಿಗೆ ಅಭಿಮಾನದ, ಅತೀರ್ವಾದದ ದೀಪ! ಇದು ಏನೋ ಒಂದು ಆಚರಣೆಯಲ್ಲ, ಇದು ಒಬ್ಬ ಪ್ರಧಾನ ಸೇವಕನ 25 ವರ್ಷಗಳ ಸೇವೆ, ಸಮರ್ಪಣೆ, ಅವಿರತ ಪರಿಶ್ರಮ, ಬದ್ಧತೆ, ಸಾಧನೆ ಮತ್ತು ತ್ಯಾಗಕ್ಕೆ 140ಕೋಟಿ ದೇಶವಾಸಿಗಳ ಸಾಮೂಹಿಕ ಅಭಿನಂದನೆ ಭಾರತೀಯ ಜನತಾ ಪಾರ್ಟಿಯ ಸೇವಾ ಸಂಕಲ್ಪ ಅಭಿಯಾನ', ಇದನ್ನು ಜನ ಚಳುವಳಿಯಾಗಿ ರೂಪಿಸಿದೆ. ಆಶೀರ್ವಾದ್ ಕಾ ದಿಯಾ' (ಆಶೀರ್ವಾದದ ದೀಪ) ಎಂಬ ಕಾರ್ಯಕ್ರಮದಡಿ ಪ್ರತಿಮನೆಯಲ್ಲೂ ಸಂಜೆ ದೇವರದೀವದ ಜೊತೆಗೆ, ನೆಚ್ಚಿನ ನಾಯಕನ ಹೆಸರಿನಲ್ಲಿ ಅವರಿಗೆ ಒಳತನ್ನು ಬಯಸಿ ಒಂದು ದೀಪ ಪತ್ರ ನರೇಂದ್ರ ಮೋದಿಜೀರವರಿಗೆ ನಮ್ಮ ಹೃದಯ ಪೂರ್ವಕ ಹಾರೈಕೆಯನ್ನು ಸಲ್ಲಿಸೋಣ. ಗುಜರಾತ್‌ನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆ ಯುವನಾಯಕ ಬಹಳ ಜನರಿಗೆ ಪರಿಚಿತರೂ ಅಲ್ಲ! ಅಂದಿನಿಂದ 2014ರ ಮೇ 26 ರವರೆಗೆ ಸತತವಾಗಿ ಗುಜರಾತ್ ಮುಖ್ಯಮಂತ್ರಿಗಳಾಗಿ, ಜನಮೆಚ್ಚುಗೆಯ 'ಅಭಿವೃದ್ಧಿ ಮಾದರಿ' ಯೊಂದಿಗೆ, ಸುರಾಸನ ನೀಡಿ, ಈಗ ಭಾರತದ ಪ್ರಧಾನ ಸೇವಕರಾಗಿ ಸಚಿತ ಮೂರನೇ ಅವಧಿಗೆ ಜನಾದೇಶ ಪಡೆದು, ಇಡೀ ವಿಶ್ವವೇ ಮೆಚ್ಚುವಂತೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ವತ್ರಗರದ ರೈಲ್ವೆ ನಿಲ್ದಾಣದಲ್ಲಿ ತಂದರೊಂದಿಗೆ ಚಣಾ ಮಾರಿದ ಬಾಲಕ, ಇ೦ದು ವಿಶ್ವದ ಅತ್ಯಂತ ಪ್ರಭಾವಿನಾಯಕರ ಸಾಲಿನಲ್ಲಿ ನಿಂತಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿ ಮಾತ್ರವಲ್ಲ, ಒಬ್ಬ ನಾಯಕನ ಸಾಧನಾಗಾಥೆ. ಇದುಸಾಮಾನ್ಯ ಕಾರ್ಯಕರ್ತನೊಬ್ಬನಸೇವಾಮನೋಭಾವದಿಂದ ರಾಷ್ಟ್ರದ ಸೇವೆಯವರೆಗೆ, ಜನಸೇವೆಯಿಂದ ದೇಶಸೇವೆಯವರೆಗೆ ಸಾಗಿದ ಅದ್ಭುತ ಯಶೋಗಾಥೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.1
- 🚨 ಬೆಂಗಳೂರಿನಲ್ಲಿ ಸಿನಿಮೀಯ ಕಿಡ್ನ್ಯಾಪ್ ಯತ್ನ: ಪ್ರೀತಿಸಿ ಮದುವೆಯಾದ ಮಗಳಿಗೆ ಹೆತ್ತವರೇ ವಿಲನ್? ರಸ್ತೆಯಲ್ಲಿ ಸರಣಿ ಅಪಘಾತ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ಮಾದರಿಯಲ್ಲಿ ಯುವತಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುವ ವೇಳೆ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಮಾಡಲಾಗಿದೆ. ಘಟನೆ ವೇಳೆ ಸಾರ್ವಜನಿಕರು ಸಿನಿಮೀಯ ರೀತಿಯಲ್ಲಿ ಕಾರನ್ನು ಚೇಸ್ ಮಾಡಿ ಕೊನೆಗೆ ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ. ಪ್ರಕರಣದ ಹಿನ್ನೆಲೆ ಏನು? ಪೊಲೀಸ್ ಮೂಲಗಳ ಪ್ರಕಾರ, ರಾಜಸ್ಥಾನ ಮೂಲದ ಯುವತಿಯೊಬ್ಬಳು ಯುವಕನನ್ನು ಪ್ರೀತಿಸಿ ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಿದ್ದಳು. ರಾಜಸ್ಥಾನದಲ್ಲಿ ಅಪಾಯವಿದೆ ಎಂಬ ಕಾರಣಕ್ಕೆ ನವದಂಪತಿ ಬೆಂಗಳೂರಿಗೆ ಬಂದು ಅಗ್ರಹಾರ ದಾಸರಹಳ್ಳಿಯಲ್ಲಿ ಕಳೆದ 15 ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಮಗಳು ಬೆಂಗಳೂರಿನಲ್ಲಿ ಇರುವ ವಿಚಾರ ತಿಳಿದ ಬಳಿಕ ಆಕೆಯ ಪೋಷಕರು ಎನ್ನಲಾದವರು ರಾತ್ರಿ ಸುಮಾರು 8 ಗಂಟೆ ವೇಳೆಗೆ Hyundai Venue ಕಾರಿನಲ್ಲಿ ಅಗ್ರಹಾರ ದಾಸರಹಳ್ಳಿಗೆ ಬಂದಿದ್ದಾರೆ. ಮನೆಯೊಳಗೆ ನುಗ್ಗಿದ ಮೂವರು ಯುವಕರು ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ತೆರಳಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವತಿ ಪ್ರಾಣಭಯದಿಂದ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಕಾರನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಕಾರು ಚಾಲಕ ವಾಹನ ನಿಲ್ಲಿಸದೇ ವೇಗವಾಗಿ ಮುನ್ನುಗ್ಗಿದ್ದು, ರಸ್ತೆಯಲ್ಲಿ ಅಡ್ಡಬಂದ ಬೈಕ್‌ಗಳು ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ⚠️ ಮಗು ಸೇರಿದಂತೆ ಸಾರ್ವಜನಿಕರಿಗೆ ಗಾಯ ಪರಾರಿಯಾಗುವ ಧಾವಂತದಲ್ಲಿ ಕಾರು ಸಾರ್ವಜನಿಕರಿಗೂ ಡಿಕ್ಕಿ ಹೊಡೆದಿದ್ದು, ಒಂದು ಮಗುವಿನ ಕಾಲಿನ ಮೇಲೂ ಕಾರು ಹರಿದಿದೆ ಎನ್ನಲಾಗಿದೆ. ಘಟನೆಯಲ್ಲಿ ಹಲವು ಸಾರ್ವಜನಿಕರು ಗಾಯಗೊಂಡಿದ್ದಾರೆ. 🏍️ 2–3 ಕಿ.ಮೀ ಸಿನಿಮೀಯ ಚೇಸ್! ಕಾರು ನಿಲ್ಲಿಸದೇ ಸಾಗುತ್ತಿದ್ದಂತೆ ಸಾರ್ವಜನಿಕರು ಬೈಕ್‌ಗಳಲ್ಲಿ ಕಾರನ್ನು ಬೆನ್ನಟ್ಟಿದ್ದಾರೆ. ಅಗ್ರಹಾರ ದಾಸರಹಳ್ಳಿಯಿಂದ ಗೋವಿಂದರಾಜನಗರ, ವಿಜಯನಗರ ಮಾರ್ಗವಾಗಿ ಹೊಸಹಳ್ಳಿಯವರೆಗೆ ಸುಮಾರು 2–3 ಕಿ.ಮೀ. ದೂರ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದಾರೆ. ಕೊನೆಗೆ ಹೊಸಹಳ್ಳಿ ಬಳಿ ಟ್ರಾಫಿಕ್‌ನಲ್ಲಿ ಕಾರು ಸಿಲುಕಿಕೊಂಡಿದ್ದು, ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಅಪಹರಣಕ್ಕೆ ಯತ್ನಿಸಿದ ಮೂವರು ಆರೋಪಿಗಳಿಗೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮಾಗಡಿ ರಸ್ತೆ ಹಾಗೂ ವಿಜಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಬಳಸಿದ್ದ ಕಾರನ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ. ಯುವತಿ ಹಾಗೂ ವಶದಲ್ಲಿರುವ ಆರೋಪಿಗಳನ್ನು ವಿಜಯನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಗಾಯಗೊಂಡ ಸಾರ್ವಜನಿಕರು ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 📌 ಯುವತಿಯನ್ನು ಅಪಹರಿಸಲು ಯತ್ನಿಸಿದವರು ನಿಜವಾಗಿಯೂ ಆಕೆಯ ಹೆತ್ತವರೇ? ಪ್ರಕರಣದ ತನಿಖೆಯಿಂದ ಸತ್ಯ ಹೊರಬರಬೇಕಿದೆ.1
- ಶಿವಮೊಗ್ಗದ ಪ್ರತಿಭೆ ಪವನ್ ರಾಮ್: ರಂಗಭೂಮಿಯಿಂದ ಬೆಳ್ಳಿತೆರೆಗೆ.. ಆಟೋ ಚಾಲಕನ ಮಗನಿಂದ ಬೆಳ್ಳಿತೆರೆಗೆ… ಪವನ್ ರಾಮ್ ಅವರ ಕನಸಿನ ಪಯಣ | ಭಾಗ–1 | ಪೂರ್ಣ ವಿಡಿಯೋ ಯೂಟ್ಯೂಬ್‌ನಲ್ಲಿ ಲಭ್ಯ1
- ಸಂಗಮೇಶ್ವರ ಪೇಟೆಯಿಂದ ಬಾಳೆಹೊನ್ನೂರುವರೆಗೂ ಬೃಹತ್ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲು ನಿರ್ಧಾರ. ಚಿಕ್ಕಮಗಳೂರು : ಮಲೆನಾಡಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಜಾರಿಯನ್ನ ವಿರೋಧಿಸಿ ಮಲೆನಾಡಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದೇ 19 ರಂದು ಸಿಎಂ ಡಿ.ಕೆ ಶಿವಕುಮಾರ್ ಬಾಳೆಹೊನ್ನೂರು ಪಟ್ಟಣದಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿರುವ ರೈತರು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹಾಗೂ ಜಾಗರ ಹೋಬಳಿಯ ಎಲ್ಲ ನಾಗರೀಕರು ಹಾಗೂ ರೈತರು ಸಂಗಮೇಶ್ವರ ಪೇಟೆಯಿಂದ ಬೃಹತ್ ಪಾದಯಾತ್ರೆ ಮೂಲಕ ತೆರಳಿ ಸಿಎಂಗೆ ಮನವಿ ಸಲ್ಲಿಸಲು ಸಿರ್ಧರಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಸರ್ವ ಪಕ್ಷ ಹಾಗೂ ಎಲ್ಲ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.1
- ಭಾರತದ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿಜಿ ರವರ 25 ವರ್ಷಗಳ ಜನ ಸೇವೆಯ ಗೌರವಾರ್ಥ ಆಶೀರ್ವಾದದ ದೀಪ ಹಚ್ಚೋಣ. ಜನಪ್ರಿಯ ಸಂಸದ ಬಿ ವೈ ರಾಘವೇಂದ್ರ. ಭಾರತ ದೇಶದ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿಜಿ ರವರ 25 ವರ್ಷಗಳ ಜನ ಸೇವೆಯ ಗೌರವಾರ್ಥ ಆಶೀರ್ವಾದದ ದೀಪ ಹಚ್ಚೋಣ. " ಬಿಜೆಪಿ ಸೇವಾ ಸಂಕಲ್ಪ ಅಭಿಯಾನ" ಬಿ. ವೈ .ರಾಘವೇಂದ್ರ ರವರು ಜನಪ್ರಿಯ ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರ.1
- ಭದ್ರಾ ನೀರಿಗಾಗಿ ದಾವಣಗೆರೆಯಲ್ಲಿ ಜಲಸಂಘರ್ಷ ಹೆದ್ದಾರಿ ತಡೆ; ರೈತ–ಪೊಲೀಸರ ನಡುವೆ ನೂಕಾಟ, ಇಬ್ಬರಿಗೂ ಗಾಯ ದಾವಣಗೆರೆ: ಭದ್ರಾ ಬಲದಂಡೆ ನಾಲೆಗೆ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ನಡೆಸಿದ ಪ್ರತಿಭಟನೆ ಮಂಗಳವಾರ ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಬಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ-48ಕ್ಕೆ ನುಗ್ಗಿ ರಸ್ತೆ ತಡೆ ನಡೆಸಿದ ಪರಿಣಾಮ ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಾಡಾ ಕ್ರಾಸ್‌ನ ಅಪೂರ್ವ ರೆಸಾರ್ಟ್ ಎದುರಿನ ಸರ್ವೀಸ್ ರಸ್ತೆಯಲ್ಲಿ ರೈತರು ಒಲೆ, ಪಾತ್ರೆಗಳನ್ನು ತಂದು ಅಡುಗೆ ಮಾಡಲು ಮುಂದಾದಾಗ ಪೊಲೀಸರು ಆಕ್ಷೇಪಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಪೊಲೀಸರ ನಡುವೆ ಕೂಡ ವಾಗ್ವಾದ ನಡೆಯಿತು. ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸರ್ವೀಸ್ ರಸ್ತೆಯಲ್ಲೇ ಅಡುಗೆ ಮಾಡುವುದಾಗಿ ಘೋಷಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ವೇಳೆ ನೂಕಾಟ, ತಳ್ಳಾಟ ಸಂಭವಿಸಿದ್ದು, ಮುಕ್ತೇನಹಳ್ಳಿ ಗ್ರಾಮದ ರೈತ ಶಿವಯೋಗಿ ಅವರ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡದೆ ಬಸ್‌ನಲ್ಲಿ ಕರೆದೊಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಹರಿಹರ ಸಿಟಿ ಸಿಪಿಐ ಸುರೇಶ್ ಸಗರಿ ಅವರ ಮೊಣಕೈ ಹಾಗೂ ಹಣೆಗೆ ಗಾಯವಾಗಿದೆ. ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಭದ್ರಾ ನೀರಿನ ಬೇಡಿಕೆ ಈಡೇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ವರದಿ: ದೇವರಾಜ್ ಕೆ. ನೆಲ್ಲಿಹಂಕಲು, ದಾವಣಗೆರೆ4