logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅರ್ಹ ರೈತ ಫಲಾನುಭವಿಗಳಿಗೆ ಪಂಪ್‌ಸೆಟ್ ವಿತರಣೆ: ಎನ್.ಎಸ್. ಬೋಸರಾಜು ನೀರಿನ ಸೌಲಭ್ಯವಿದ್ದಲ್ಲಿ ಮಾತ್ರ ರೈತರು ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯ. ಉದ್ದೇಶದಿಂದ ಸರ್ಕಾರವು ಅರ್ಹ ರೈತರ ಜಮೀನುಗಳಲ್ಲಿ ಈ ಬೋರ್‌ವೆಲ್‌ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ವಿವಿಧ ಯೋಜನೆಗಳಡಿ ಪಂಪ್‌ಸೆಟ್ ಮತ್ತು ಅಗತ್ಯ ಪರಿಕರಗಳನ್ನು ವಿತರಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಪರಿಷತ್ ವಿಧಾನ ಸದಸ್ಯ ಎನ್.ಎಸ್. ಬೋಸರಾಜು ಹೇಳಿದರು. ಪಟ್ಟಣದಲ್ಲಿ ಅರ್ಹ ರೈತ ಫಲಾನುಭವಿಗಳಿಗೆ ಪಂಪ್‌ಸೆಟ್ ಮತ್ತು ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆದು ಜೀವನಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಕೆ. ಶಾಂತಪ್ಪ, ಜಯಣ್ಣ, ಮೊಹಮ್ಮದ್ ಶಾಲಂ, ರವಿಪಾಟೀಲ್, ರಾಯಚೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಬದೊಡ್ಡಿ ಆಂಜನೇಯ, ಚುಕ್ಕಿ ಶಿವಕುರ್ಮಾ ಅಮರೇಗೌಡ ಹಂಚಿನಾಳ, ತಿಮ್ಮಪ್ಪ ಮ್ಯಾತ್ರಿ, ಮಹದೇವ್ ಬೋಳಬಂಡಿ, ವೀರೇಶ ರಜಲಬಂಡಾ, ಯೇಸು ಸೇರಿದಂತೆ ಉಪಸ್ಥಿತರಿದ್ದರು. ಇತರರು

1 day ago
user_Shivakumar Sajjan
Shivakumar Sajjan
Local News Reporter ಮಾನ್ವಿ, ರಾಯಚೂರು, ಕರ್ನಾಟಕ•
1 day ago
8a0d8dbb-38d3-4bd7-99fa-f4eb6075349d

ಅರ್ಹ ರೈತ ಫಲಾನುಭವಿಗಳಿಗೆ ಪಂಪ್‌ಸೆಟ್ ವಿತರಣೆ: ಎನ್.ಎಸ್. ಬೋಸರಾಜು ನೀರಿನ ಸೌಲಭ್ಯವಿದ್ದಲ್ಲಿ ಮಾತ್ರ ರೈತರು ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯ. ಉದ್ದೇಶದಿಂದ ಸರ್ಕಾರವು ಅರ್ಹ ರೈತರ ಜಮೀನುಗಳಲ್ಲಿ ಈ ಬೋರ್‌ವೆಲ್‌ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ವಿವಿಧ ಯೋಜನೆಗಳಡಿ ಪಂಪ್‌ಸೆಟ್ ಮತ್ತು ಅಗತ್ಯ ಪರಿಕರಗಳನ್ನು ವಿತರಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಪರಿಷತ್ ವಿಧಾನ ಸದಸ್ಯ ಎನ್.ಎಸ್. ಬೋಸರಾಜು ಹೇಳಿದರು. ಪಟ್ಟಣದಲ್ಲಿ ಅರ್ಹ ರೈತ ಫಲಾನುಭವಿಗಳಿಗೆ ಪಂಪ್‌ಸೆಟ್ ಮತ್ತು

a59af664-6452-4cab-b9bb-4d06743d9895

ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆದು ಜೀವನಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಕೆ. ಶಾಂತಪ್ಪ, ಜಯಣ್ಣ, ಮೊಹಮ್ಮದ್ ಶಾಲಂ, ರವಿಪಾಟೀಲ್, ರಾಯಚೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಬದೊಡ್ಡಿ ಆಂಜನೇಯ, ಚುಕ್ಕಿ ಶಿವಕುರ್ಮಾ ಅಮರೇಗೌಡ ಹಂಚಿನಾಳ, ತಿಮ್ಮಪ್ಪ ಮ್ಯಾತ್ರಿ, ಮಹದೇವ್ ಬೋಳಬಂಡಿ, ವೀರೇಶ ರಜಲಬಂಡಾ, ಯೇಸು ಸೇರಿದಂತೆ ಉಪಸ್ಥಿತರಿದ್ದರು. ಇತರರು

More news from ಕರ್ನಾಟಕ and nearby areas
  • ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ. ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ. ಅಕ್ರಮ ನೀರಾವರಿ ತಡೆಗಟ್ಟುವಲ್ಲಿ ಆಡಳಿತ ಯಂತ್ರ ಕುಸಿದಿದೆ: ಜೆ.ಶರಣಪ್ಪ ಗೌಡ. ಸಿರವಾರ: ಟಿಎಲ್ಬಿಸಿ ಎಡದಂಡೆ ನಾಲೆಯ ಕೆಳಭಾಗಕ್ಕೆ ಸಲಹಾ ಸಮಿತಿಯ ಸಭೆಯ ನಿರ್ಣಯದಂತೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ನೀರು ನಿರ್ವಹಣೆ ಮಾಡದ ನೀರಾವರಿ ಇಲಾಖೆಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ರೈತರು ಮಂಗಳವಾರ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮೇಲ್ಬಾಗದಲ್ಲಿ ಅನಧಿಕೃತ ನೀರಾವರಿ ತಡೆಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಕ್ರಮ ನೀರು ಕಬಳಿಕೆ ಮಾಡುವವರ ಮೇಲೆ ಕಾನೂನು ಕ್ರಮ ಆಗುತ್ತಿಲ್ಲ. ಅಧಿಕಾರಿಗಳು ಅನಧಿಕೃತ ದಂಧೆ ತಡೆಗಟ್ಟಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ವಾಡಿಕೆಗಿಂತ ಮಳೆಯಾಗದ ಹಿನ್ನೆಲೆಯಲ್ಲಿ ಬರಗಾಲ ಉಂಟಾಗಿದೆ‌. ಬೆಳೆಗಳನ್ನು ಉಳಿಸಿಕೊಳ್ಳಲು ರೈತರ ಹರಸಾಹಸ ಪಡುವಂತಾಗಿದೆ ಎಂದರು‌. ರಾಯಚೂರು, ಮಾನ್ವಿ ಮತ್ತು ಸಿರವಾರ ತಾಲೂಕಿನ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟದಲ್ಲಿ ಮಾಜಿ ಶಾಸಕರುಗಳಾದ ರಾಜಾ ವೆಂಕಟಪ್ಪ ನಾಯಕ, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ರೈತ ಸಂಘದ ಮುಖಂಡ ಚಾಮರಸ ಮಾಲೀ ಪಾಟೀಲ್, ಹೋರಾಟಗಾರರಾದ ಶಂಕರಗೌಡ ಹರವಿ, ಎನ್‌. ಉದಯಕುಮಾರ್ ಸಾಹುಕಾರ, ಜೆ.ದೇವರಾಜ ಗೌಡ, ಅಮರೇಶ ಚಾಗಭಾವಿ, ನಾಗರಾಜ ಗೌಡ, ಸವಾರೆಪ್ಪ, ಬಡ್ಡ ಹನುಮಂತ, ರಾಜಪ್ಪ ಹೊನ್ನಟಗಿ, ಮಲ್ಲಪ್ಪ ದೊಡ್ಮನೆ, ದಾನಪ್ಪ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರೈತರು ಪಾಲ್ಗೊಂಡಿದ್ದರು.
    2
    ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ.
ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ.
ಅಕ್ರಮ ನೀರಾವರಿ ತಡೆಗಟ್ಟುವಲ್ಲಿ ಆಡಳಿತ ಯಂತ್ರ ಕುಸಿದಿದೆ: ಜೆ.ಶರಣಪ್ಪ ಗೌಡ.
ಸಿರವಾರ: ಟಿಎಲ್ಬಿಸಿ ಎಡದಂಡೆ ನಾಲೆಯ ಕೆಳಭಾಗಕ್ಕೆ ಸಲಹಾ ಸಮಿತಿಯ ಸಭೆಯ ನಿರ್ಣಯದಂತೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ನೀರು ನಿರ್ವಹಣೆ ಮಾಡದ ನೀರಾವರಿ ಇಲಾಖೆಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವನ್ನು  
ಖಂಡಿಸಿ ರೈತರು ಮಂಗಳವಾರ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮೇಲ್ಬಾಗದಲ್ಲಿ ಅನಧಿಕೃತ ನೀರಾವರಿ ತಡೆಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಕ್ರಮ ನೀರು ಕಬಳಿಕೆ ಮಾಡುವವರ ಮೇಲೆ ಕಾನೂನು ಕ್ರಮ ಆಗುತ್ತಿಲ್ಲ. ಅಧಿಕಾರಿಗಳು ಅನಧಿಕೃತ ದಂಧೆ ತಡೆಗಟ್ಟಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ವಾಡಿಕೆಗಿಂತ ಮಳೆಯಾಗದ ಹಿನ್ನೆಲೆಯಲ್ಲಿ ಬರಗಾಲ ಉಂಟಾಗಿದೆ‌. ಬೆಳೆಗಳನ್ನು ಉಳಿಸಿಕೊಳ್ಳಲು ರೈತರ ಹರಸಾಹಸ ಪಡುವಂತಾಗಿದೆ ಎಂದರು‌.
ರಾಯಚೂರು, ಮಾನ್ವಿ ಮತ್ತು ಸಿರವಾರ  ತಾಲೂಕಿನ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹೋರಾಟದಲ್ಲಿ ಮಾಜಿ ಶಾಸಕರುಗಳಾದ ರಾಜಾ ವೆಂಕಟಪ್ಪ ನಾಯಕ, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ರೈತ ಸಂಘದ ಮುಖಂಡ ಚಾಮರಸ ಮಾಲೀ ಪಾಟೀಲ್, ಹೋರಾಟಗಾರರಾದ ಶಂಕರಗೌಡ ಹರವಿ, ಎನ್‌. ಉದಯಕುಮಾರ್ ಸಾಹುಕಾರ, ಜೆ.ದೇವರಾಜ ಗೌಡ, ಅಮರೇಶ ಚಾಗಭಾವಿ, ನಾಗರಾಜ ಗೌಡ, ಸವಾರೆಪ್ಪ, ಬಡ್ಡ ಹನುಮಂತ, ರಾಜಪ್ಪ ಹೊನ್ನಟಗಿ, ಮಲ್ಲಪ್ಪ ದೊಡ್ಮನೆ, ದಾನಪ್ಪ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರೈತರು ಪಾಲ್ಗೊಂಡಿದ್ದರು.
    user_Mallikarjun Athnoor
    Mallikarjun Athnoor
    ಸಿರ್ವಾರ, ರಾಯಚೂರು, ಕರ್ನಾಟಕ•
    15 hrs ago
  • ಮಹಿಬೂಬ್ ಸಾಬ್ ಹೆಗ್ಗಡದಿನ್ನಿ ಈದ್ ಮಿಲಾದ್ ಹಬ್ಬದ ಶುಭಾಶಯಗಳು.
    1
    ಮಹಿಬೂಬ್ ಸಾಬ್  ಹೆಗ್ಗಡದಿನ್ನಿ ಈದ್ ಮಿಲಾದ್ ಹಬ್ಬದ ಶುಭಾಶಯಗಳು.
    user_Hasan Anjal
    Hasan Anjal
    ದೇವದುರ್ಗ, ರಾಯಚೂರು, ಕರ್ನಾಟಕ•
    17 min ago
  • ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು
    1
    ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು
    user_ನಾಗರಾಜ ವಾರದ
    ನಾಗರಾಜ ವಾರದ
    Newsagent ದೇವದುರ್ಗ, ರಾಯಚೂರು, ಕರ್ನಾಟಕ•
    50 min ago
  • ಸಿಂಧನೂರು ಕ್ಷೇತ್ರದಲ್ಲಿ 43,115 ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಸಿಂಧನೂರು: ರಾಷ್ಟ್ರೀಯ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಬಳಿಕ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 43,115 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ದೇಸಾಯಿ ತಿಳಿಸಿದ್ದಾರೆ. ಮಂಗಳವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದಲ್ಲಿ 2,40,941 ಮತದಾರರಿದ್ದರು. ಪರಿಷ್ಕರಣೆ ವೇಳೆ ಮೃತಪಟ್ಟ 6,778, ಶಾಶ್ವತವಾಗಿ ಸ್ಥಳಾಂತರಗೊಂಡ 31,954, ಗೈರುಹಾಜರಿದ್ದ 1,555 ಹಾಗೂ ಡಬಲ್ ಮತದಾರರಾಗಿದ್ದ 2,805 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇತರ ಕಾರಣಗಳಿಂದ 23 ಮತದಾರರ ಹೆಸರನ್ನೂ ಡಿಲೀಟ್ ಮಾಡಲಾಗಿದೆ. 2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಒಟ್ಟು 17.90ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ನಗರ ವ್ಯಾಪ್ತಿಯಲ್ಲಿ 20,799 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22,351 ಮತದಾರರ ಹೆಸರುಗಳು ಡಿಲೀಟ್ ಆಗಿವೆ. ಅರ್ಹ ಮತದಾರರ ಹೆಸರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದರೆ, ನಿಗದಿತ 13 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು. ಈ ಹಿಂದೆ ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದವು. 1,200ಕ್ಕೂ ಅಧಿಕ ಮತದಾರರಿರುವ ಕಾರಣ ಮಾಡಶಿರವಾರ, ಪಗಡದಿನ್ನಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ವಿ.ಹೆಚ್.ಎ. ಆ್ಯಪ್ ಮೂಲಕ ಮತದಾರರ ಸೇರ್ಪಡೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅರುಣ್ ಕುಮಾರ್ ದೇಸಾಯಿ ಹೇಳಿದರು.
    1
    ಸಿಂಧನೂರು ಕ್ಷೇತ್ರದಲ್ಲಿ 43,115 ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್
ಸಿಂಧನೂರು: ರಾಷ್ಟ್ರೀಯ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಬಳಿಕ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 43,115 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ದೇಸಾಯಿ ತಿಳಿಸಿದ್ದಾರೆ.
ಮಂಗಳವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದಲ್ಲಿ 2,40,941 ಮತದಾರರಿದ್ದರು. ಪರಿಷ್ಕರಣೆ ವೇಳೆ ಮೃತಪಟ್ಟ 6,778, ಶಾಶ್ವತವಾಗಿ ಸ್ಥಳಾಂತರಗೊಂಡ 31,954, ಗೈರುಹಾಜರಿದ್ದ 1,555 ಹಾಗೂ ಡಬಲ್ ಮತದಾರರಾಗಿದ್ದ 2,805 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇತರ ಕಾರಣಗಳಿಂದ 23 ಮತದಾರರ ಹೆಸರನ್ನೂ ಡಿಲೀಟ್ ಮಾಡಲಾಗಿದೆ.
2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಒಟ್ಟು 17.90ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ನಗರ ವ್ಯಾಪ್ತಿಯಲ್ಲಿ 20,799 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22,351 ಮತದಾರರ ಹೆಸರುಗಳು ಡಿಲೀಟ್ ಆಗಿವೆ.
ಅರ್ಹ ಮತದಾರರ ಹೆಸರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದರೆ, ನಿಗದಿತ 13 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದವು. 1,200ಕ್ಕೂ ಅಧಿಕ ಮತದಾರರಿರುವ ಕಾರಣ ಮಾಡಶಿರವಾರ, ಪಗಡದಿನ್ನಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ವಿ.ಹೆಚ್.ಎ. ಆ್ಯಪ್ ಮೂಲಕ ಮತದಾರರ ಸೇರ್ಪಡೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅರುಣ್ ಕುಮಾರ್ ದೇಸಾಯಿ ಹೇಳಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    18 hrs ago
  • ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ.... ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ. -----------------
    1
    ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....!
ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....!
ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ
ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ
ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ
ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ....
ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ
ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ
ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ
ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ
ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ.
-----------------
    user_Channakeshava Press ಗಡಿ ವಾಣಿ
    Channakeshava Press ಗಡಿ ವಾಣಿ
    ಕಂಪ್ಲಿ, ಬಳ್ಳಾರಿ, ಕರ್ನಾಟಕ•
    14 hrs ago
  • "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ ಕಲ್ಯಾಣ ವಾರ್ತೆ -ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. ೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು. *ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು ಕೋಲಿ ಸಮಾಜದ ಆಶಯವಾಗಿದೆ*-" *ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*
    1
    "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ 

ಕಲ್ಯಾಣ ವಾರ್ತೆ -ಯಾದಗಿರಿ 
ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. 
೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು.
*ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ 
೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು  ಕೋಲಿ ಸಮಾಜದ ಆಶಯವಾಗಿದೆ*-"
*ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*
    user_DR. S.S. NAYAK
    DR. S.S. NAYAK
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    16 hrs ago
  • ಕರೆಮ್ಮ ಜಿ ನಾಯಕ್ ಶಾಸಕರು ದೇವದುರ್ಗ ಇವರಿಂದ ಈದ್ ಮಿಲಾದ್ ಹಬ್ಬದ ಶುಭಾಶಯಗಳು
    1
    ಕರೆಮ್ಮ ಜಿ ನಾಯಕ್ ಶಾಸಕರು ದೇವದುರ್ಗ ಇವರಿಂದ ಈದ್ ಮಿಲಾದ್ ಹಬ್ಬದ ಶುಭಾಶಯಗಳು
    user_Hasan Anjal
    Hasan Anjal
    ದೇವದುರ್ಗ, ರಾಯಚೂರು, ಕರ್ನಾಟಕ•
    22 min ago
  • ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ...... ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ. ತುರ್ವಿಹಾಳ: ಪಟ್ಟಣದ ಸರ್ವೆ ನಂ.14ರ ಶರಣಪ್ಪ ಮೆಗಳಡಕ್ಕಿ ಅವರ ಹೊಲದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂರು ಎಮ್ಮೆ ಹಾಗೂ ಒಂದು ಆಕಳು ಮೃತಪಟ್ಟಿದ್ದು, ಎರಡು ಎಮ್ಮೆ ಮತ್ತು ನಾಲ್ಕು ಮೇಕೆರಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಸಂತ್ರಸ್ತ ಶರಣಪ್ಪ ಮೆಗಳಡಕ್ಕಿ ತಿಳಿಸಿದ್ದಾರೆ. ವಿದ್ಯುತ್ ಅವಘಡದ ಪರಿಣಾಮ ಜಾನುವಾರುಗಳ ಸಾವಿನ ಜತೆಗೆ ಒಂದು ತೊಲೆ ಬಂಗಾರ ಹಾಗೂ 1.60 ಲಕ್ಷ ನಗದು ಹಣವೂ ನಷ್ಟವಾಗಿದೆ. ಜಾನುವಾರುಗಳ ಸಾವಿನಿಂದ ಹಾಗೂ ಇತರೆ ವಸ್ತುಗಳ ಹಾನಿಯಿಂದ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಸೂಕ್ತವಾಗಿ ಪರಿಶೀಲಿಸಿ, ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಶರಣಪ್ಪ ಮೆಗಳಡಕ್ಕಿ ಮನವಿ ಮಾಡಿದ್ದಾರೆ. ಸ್ಥಳ ಪರಿಶೀಲನೆ: ಘಟನೆ ಕುರಿತು ಮಾಹಿತಿ ಪಡೆದ ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೋಸಗೌಡರ್ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಜಾನುವಾರುಗಳು ಹಾಗೂ ಸ್ಥಳವನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ (ಆರ್‌ಐ) ಉಮಾಪತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿ, ಹಾನಿಯ ವಿವರಗಳನ್ನು ದಾಖಲಿಸಿಕೊಂಡರು.
    2
    ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ......
ವಿದ್ಯುತ್ ಅವಘಡಕ್ಕೆ:- ಮೂರು ಎಮ್ಮೆ ಹಾಗೂ ಒಂದು ಆಕಳು ಬಲಿ.
ತುರ್ವಿಹಾಳ: ಪಟ್ಟಣದ ಸರ್ವೆ ನಂ.14ರ ಶರಣಪ್ಪ ಮೆಗಳಡಕ್ಕಿ ಅವರ ಹೊಲದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂರು ಎಮ್ಮೆ ಹಾಗೂ ಒಂದು ಆಕಳು ಮೃತಪಟ್ಟಿದ್ದು, ಎರಡು ಎಮ್ಮೆ ಮತ್ತು ನಾಲ್ಕು ಮೇಕೆರಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಸಂತ್ರಸ್ತ ಶರಣಪ್ಪ ಮೆಗಳಡಕ್ಕಿ ತಿಳಿಸಿದ್ದಾರೆ.
ವಿದ್ಯುತ್ ಅವಘಡದ ಪರಿಣಾಮ ಜಾನುವಾರುಗಳ ಸಾವಿನ ಜತೆಗೆ ಒಂದು ತೊಲೆ ಬಂಗಾರ ಹಾಗೂ 1.60 ಲಕ್ಷ ನಗದು ಹಣವೂ  ನಷ್ಟವಾಗಿದೆ. ಜಾನುವಾರುಗಳ ಸಾವಿನಿಂದ ಹಾಗೂ ಇತರೆ ವಸ್ತುಗಳ ಹಾನಿಯಿಂದ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಸೂಕ್ತವಾಗಿ ಪರಿಶೀಲಿಸಿ, ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಶರಣಪ್ಪ ಮೆಗಳಡಕ್ಕಿ ಮನವಿ ಮಾಡಿದ್ದಾರೆ.
ಸ್ಥಳ ಪರಿಶೀಲನೆ: ಘಟನೆ ಕುರಿತು ಮಾಹಿತಿ ಪಡೆದ ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೋಸಗೌಡರ್ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಜಾನುವಾರುಗಳು ಹಾಗೂ ಸ್ಥಳವನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ (ಆರ್‌ಐ) ಉಮಾಪತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿ, ಹಾನಿಯ ವಿವರಗಳನ್ನು ದಾಖಲಿಸಿಕೊಂಡರು.
    user_Mehboob Momin
    Mehboob Momin
    Photographer Sindhnur, Raichur•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.