logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ-ಮಲೆಶಂಕರದಲ್ಲಿ ಮೂಲಭೂತ ಸೌಲಭ್ಯ ಆಲಿಸಲು ಸ್ಥಳೀಯ ಕಚೇರಿ ಸ್ಥಾಪನೆಗೆ ನಿರ್ಧಾರ ಶಿವಮೊಗ್ಗ : ಶೆಟ್ಟಿಹಳ್ಳಿ ವನ್ಯಜೀವಿ ಅಭಯಾ ರಣ್ಯ ವ್ಯಾಪ್ತಿಯ ಮಲೆಶಂಕರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸಂಬoಧಿಸಿದ ಕುಂದುಕೊರತೆ ಆಲಿಸಲು ಸ್ಥಳೀಯ ಕಚೇರಿ ತೆರೆಯಲು ನಿರ್ಧರಿಸ ಲಾಗಿದೆ ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಸಮಿತಿ ಅಧ್ಯಕ್ಷ ಮೊಹಮ್ಮದ್ ತಬ್ರೇಝ್‌ಆಲಂ ಶರೀಫ್ ತಿಳಿಸಿದರು. ಮಲೆಶಂಕರದಲ್ಲಿ ಮೇ ಮಾಹೆಯಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದ ಕುರಿತು ಚರ್ಚಿಸಲು ಜಿಲ್ಲಾಡಳಿತ ಕಚೇರಿ ಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ನಂತರ ಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮಲೆಶಂಕರಕ್ಕೆ ತಾವು ಖುದ್ದು ಭೇಟಿ ನೀಡಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆ, ಬುಡಕಟ್ಟು ಜನಾಂಗದ ಕುಂದುಕೊರತೆ ಸೇರಿದಂತೆ ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಕ್ರಮ ಕೈಗೊಳ್ಳಲಾಗುವುದು. ಹಾಗೂ ಮೇ ಮಾಹೆಯಲ್ಲಿ ಒಂದು ಕಾರ್ಯಕ್ರಮ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದ ಅವರು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸಂಬoಧಿಸಿದ ಸಮಸ್ಯೆಗಳನ್ನು ತಿಳಿಸಲು ಸ್ಥಳೀಯರು ಬೆಂಗಳೂರಿಗೆ ಬರುವುದು ಕಷ್ಟವಾಗುತ್ತದೆ. ಆದ್ದರಿಂದ ಕುಂದು ಕೊರತೆಯನ್ನು ಆಲಿಸಲು ಸ್ಥಳೀಯ ವಾಗಿ ಕಚೇರಿಯನ್ನು ಸ್ಥಾಪಿಸಲಾಗುವುದು ಎಂದರು. ದೇಶದ ಪಶ್ಚಿಮ ಘಟ್ಟಗಳನ್ನು ಹೊಂದಿರುವ 6 ರಾಜ್ಯಗಳ ಪೈಕಿ ನಮ್ಮ ರಾಜ್ಯವೇ ಪಶ್ಚಿಮ ಘಟ್ಟಗಳ ಸಂರಕ್ಷಣೆಯಲ್ಲಿ ಮುಂಚೂಣಿ ಯಲ್ಲಿದೆ. ಹಾಗೂ ಸಂರಕ್ಷಣೆಗಾಗಿ ಸಮಿತಿ ರಚಿಸಿದ ಮೊದಲ ರಾಜ್ಯವಾಗಿದ್ದು, 2008 ರಲ್ಲಿ ಈ ಸಮಿತಿ ರಚನೆಯಾಗಿದೆ. ವನ್ಯಜೀವಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ ಗಳನ್ನು ಘೋಷಿಸುವ ಮೂಲಕ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲಾಗುತ್ತಿದೆ. ತಾವು ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದ್ದು, ಇದರಲ್ಲಿ ಮುಖ್ಯವಾಗಿ ಪ್ಲಾಸ್ಟಿಕ್ ನಿಷೇಧ ಕ್ಕಾಗಿ ಗ್ರೀನ್ ಚೆಕ್ ಪೋಸ್ಟ್ಗಳ ಸ್ಥಾಪನೆ, ಪ್ಲಾಸ್ಟಿಕ್ ಬಳಕೆ ಮಿತಗೊಳಿಸುವ ನಿಯಮ ಗಳು ಮತ್ತು ಪಶ್ಚಿಮ ಘಟ್ಟ ಮ್ಯೂಸಿಯಂ ಇನ್ಸ್ಟಿಟ್ಯೂಟ್ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಮುಖ್ಯವಾಗಿ ಯುವಜನತೆಯಲ್ಲಿ ಅರಿವು ಮೂಡಿಸುವುದು, ನಿಯಮಗಳ ರಚನೆ ಹಾಗೂ ಕತ್ತಲೆ ಕಾಡು ಸಂರಕ್ಷಣೆ ಗೆ ಒತ್ತು ನೀಡಲಾಗುತ್ತಿದ್ದು, ಕತ್ತಲೆ ಕಾನನ್ನು ಹೆರಿಟೇಜ್ ಸೈಟ್ ಆಗಿ ಘೋಷಿಸುವಂತೆ ಜೀವ ವೈವಿಧ್ಯ ಮಂಡಳಿಗೆ ಪತ್ರ ಬರೆಯಲಾಗಿದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಪೋಸ್ಟ್ ಕಾರ್ಡ್ ಬಿಡುಗಡೆ ಗೊಳಿಸಲಾಗಿದೆ. ಹಾಗೂ ಇತ್ತೀಚಿಗೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹೋಂ ಸ್ಟೇ, ರೆಸಾರ್ಟ್ ಸ್ಥಾಪನೆ ಕುರಿತು ಡೇಟಾ ಬೇಸ್ ಸಂಗ್ರಹಿಸಿ, ಅಲ್ಲಿ ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಎಸ್ ಓ ಪಿ ಯನ್ನು ತರಲಾಗುವುದು ಎಂದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಶರಾವತಿ ಪಂಪ್ಡ್ ಸ್ಟೋರೇಜ್ ವಿಷಯಕ್ಕೆ ಸಂಬoಧಿಸಿದoತೆ ಉಚ್ಚನ್ಯಾಯಾಲಯ ಸ್ಟೇ ನೀಡಿದೆ. ಪಶ್ಚಿಮ ಘಟ್ಟಗಳಿಗೆ ಹಾನಿ ಉಂಟು ಮಾಡುವ ಯಾವುದೇ ಯೋಜನೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದ ಅವರು ಹುಲಿಕಲ್ ಘಾಟಿ ಸಮಸ್ಯೆ ಕುರಿತು ಅರಿಯಲು ತಾವು ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು. ಜೀವವೈವಿಧ್ಯ ಉಳಿವಿಗೆ ಸೂಕ್ಷ್ಮ ಪ್ರದೇಶ ಗಳನ್ನು ಘೋಷಿಸುವ ಉದ್ದೇಶ ಹೊಂದಿದ್ದು ಸುಸ್ಥಿರ ಪ್ರವಾಸೋದ್ಯಮ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಪ್ರವಾಸೋದ್ಯಮ, ಗಣಿ ಮತ್ತು ಭೂವಿಜ್ಞಾನ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು. ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಮಾತನಾಡಿ. ಜಿಲ್ಲೆಯಲ್ಲಿ 4 ಅರಣ್ಯ ವಿಭಾಗ, 3 ಪ್ರಾದೇಶಿಕ ವಿಭಾಗ ಗಳಿದ್ದು ಒಟ್ಟು 420 ಹೆಕ್ಟೇರ್ ಅರಣ್ಯ ಭೂಮಿ ಇದೆ. ಅದರಲ್ಲಿ 363 ಹೆ. ಸೂಚಿತ ಅರಣ್ಯವಿದ್ದು ಒಟ್ಟು ಶೇ. 39 ಅರಣ್ಯ ಹೊಂದಿದ್ದೇವೆ. ಮೂರು ವನ್ಯಜೀವಿ ಅಭಯಾರಣ್ಯ ಇದೆ. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ, ಶರಾವತಿ ಅಭಯಾರಣ್ಯ ಹಾಗೂ ಗುಡವಿ ಪಕ್ಷಿಧಾಮವಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಪ್ರಸನ್ನ ಕೃಷ್ಣ ಪಟಗಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

3 hrs ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
3 hrs ago
14ce577c-8881-4db5-af6d-7eca3c146a4b

More news from ಕರ್ನಾಟಕ and nearby areas
  • ಶಿವಮೊಗ್ಗ: ನಮ್ಮೂರ ಬಳಗ ವತಿಯಿಂದ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಮತ್ತು ವಾಸನ್ ಕಣ್ಣಿನ ಆಸ್ಪತ್ರೆ ಸಹ ಯೋಗದೊಂದಿಗೆ ವಿಶ್ವಗುರು ಸಾಂಸ್ಕೃತಿಕ ನಾಯಕ "ಬಸವ ಜಯಂತಿಯ" ಅಂಗವಾಗಿ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳ ಲಾಗಿತ್ತು. ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಳಗದ ಸಂಚಾಲಕ ಹೆಚ್ ಪಿ ಗಿರೀಶ್, 12ನೇ ಶತಮಾನದಲ್ಲಿಯೇ ಸಮ ಸಮಾಜದ ನಿರ್ಮಾಣಕ್ಕೆ ಅನು ಭವ ಮಂಟಪದ ಮೂಲಕ ಸಂವಿಧಾನದ  ಪರಿಕಲ್ಪನೆ , ಶಿಕ್ಷಣ, ದಾಸೋಹ ಸೇವೆ  ಇಂದಿಗೂ ನಮಗೆಲ್ಲರಿಗೂ ಸ್ಪೂರ್ತಿದಾಯಕ ವಚನ ಬಂಡಾರದ ಮುಖಾಂತರ ವಿಶ್ವ ಗುರು ಬಸವಣ್ಣನವರು ಮೂಡಿಸಿದ ವಚನ ಕ್ರಾಂತಿಯು ಇಡೀ ಪ್ರಪಂಚಕ್ಕೆ ಅತ್ಯವಶ್ಯ ವಾಗಿದೆ ಎಂದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ವಿ.ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ನಾಗರಾಜ್ ರಾವ್ ಅವರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಯನ್ನೇ ಮಾಡಿದ, ಮೇಲು-ಕೀಳು ಎಂಬ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಅವಿರತವಾಗಿ ಶ್ರಮಿಸಿದ ಕಾಯಕ ಯೋಗಿ, ಬಸವಣ್ಣನವರ ಕಾರ್ಯ ಹಾಗೂ ಆದರ್ಶಗಳು ನಮಗೆ ಸದಾ ಸ್ಪೂರ್ತಿ. ಅದರಂತೆ ನಮ್ಮೂರ ಬಳಗದಿಂದ ಬಸವೇಶ್ವರ ಜಯಂತಿ ಅಂಗವಾಗಿ ಆರೋಗ್ಯ ಶಿಬಿರ  ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕ ರುಗಳಾದ ನಾಗರಾಜ್ ಕಂಕಾರಿ, ಸಿ ರವಿ,  ಸಂಚಾಲಕರುಗಳಾದ ಕೆ ಆರ್ ಸುರೇಶ್, ರಾಜೇಶ್ ಮಂದಾರ, ಟಿ ಗುರುಪ್ರಸಾದ್, ಆರ್ ಕಿರಣ್, ಎಂ ರಾಕೇಶ್, ಕೇಬಲ್ ಲೋಕೇಶ್, ರಾಘವೇಂದ್ರ ರಾವ್, ಸುಬ್ರಮಣಿ, ಎಸ್ ಬಸವರಾಜ್,ಮನ್ವಿಕ್ ಜೈನ್, ಎಮ್ ಸುಹಾಸ್, ಜಯಪ್ರಕಾಶ್, ಮುರಳಿ ಸಣ್ಣಕ್ಕಿ, ಕೇಶವಮೂರ್ತಿ, ಶಿ ವಿ ಯೋಗೀಶ್,ಭವಾನಿರಾವ್, ನಂದನ್, ಕೇಶವ ಸೀಗೆಹಟ್ಟಿ, ಸಂದೇಶ್ ಇತರರು ಇದ್ದರು.
    1
    ಶಿವಮೊಗ್ಗ: ನಮ್ಮೂರ ಬಳಗ ವತಿಯಿಂದ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಮತ್ತು ವಾಸನ್ ಕಣ್ಣಿನ ಆಸ್ಪತ್ರೆ ಸಹ ಯೋಗದೊಂದಿಗೆ ವಿಶ್ವಗುರು ಸಾಂಸ್ಕೃತಿಕ ನಾಯಕ "ಬಸವ ಜಯಂತಿಯ" ಅಂಗವಾಗಿ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳ ಲಾಗಿತ್ತು.
ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಳಗದ ಸಂಚಾಲಕ ಹೆಚ್ ಪಿ ಗಿರೀಶ್, 12ನೇ ಶತಮಾನದಲ್ಲಿಯೇ ಸಮ ಸಮಾಜದ ನಿರ್ಮಾಣಕ್ಕೆ ಅನು ಭವ ಮಂಟಪದ ಮೂಲಕ ಸಂವಿಧಾನದ  ಪರಿಕಲ್ಪನೆ , ಶಿಕ್ಷಣ, ದಾಸೋಹ ಸೇವೆ  ಇಂದಿಗೂ ನಮಗೆಲ್ಲರಿಗೂ ಸ್ಪೂರ್ತಿದಾಯಕ ವಚನ ಬಂಡಾರದ ಮುಖಾಂತರ ವಿಶ್ವ ಗುರು ಬಸವಣ್ಣನವರು ಮೂಡಿಸಿದ ವಚನ ಕ್ರಾಂತಿಯು ಇಡೀ ಪ್ರಪಂಚಕ್ಕೆ ಅತ್ಯವಶ್ಯ ವಾಗಿದೆ ಎಂದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ವಿ.ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ನಾಗರಾಜ್ ರಾವ್ ಅವರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಯನ್ನೇ ಮಾಡಿದ, ಮೇಲು-ಕೀಳು ಎಂಬ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಅವಿರತವಾಗಿ ಶ್ರಮಿಸಿದ ಕಾಯಕ ಯೋಗಿ, ಬಸವಣ್ಣನವರ ಕಾರ್ಯ ಹಾಗೂ ಆದರ್ಶಗಳು ನಮಗೆ ಸದಾ ಸ್ಪೂರ್ತಿ. ಅದರಂತೆ ನಮ್ಮೂರ ಬಳಗದಿಂದ ಬಸವೇಶ್ವರ ಜಯಂತಿ ಅಂಗವಾಗಿ ಆರೋಗ್ಯ ಶಿಬಿರ  ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕ ರುಗಳಾದ ನಾಗರಾಜ್ ಕಂಕಾರಿ, ಸಿ ರವಿ,  ಸಂಚಾಲಕರುಗಳಾದ ಕೆ ಆರ್ ಸುರೇಶ್, ರಾಜೇಶ್ ಮಂದಾರ, ಟಿ ಗುರುಪ್ರಸಾದ್, ಆರ್ ಕಿರಣ್, ಎಂ ರಾಕೇಶ್, ಕೇಬಲ್ ಲೋಕೇಶ್, ರಾಘವೇಂದ್ರ ರಾವ್, ಸುಬ್ರಮಣಿ, ಎಸ್ ಬಸವರಾಜ್,ಮನ್ವಿಕ್ ಜೈನ್, ಎಮ್ ಸುಹಾಸ್, ಜಯಪ್ರಕಾಶ್, ಮುರಳಿ ಸಣ್ಣಕ್ಕಿ, ಕೇಶವಮೂರ್ತಿ, ಶಿ ವಿ ಯೋಗೀಶ್,ಭವಾನಿರಾವ್, ನಂದನ್, ಕೇಶವ ಸೀಗೆಹಟ್ಟಿ, ಸಂದೇಶ್ ಇತರರು ಇದ್ದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    11 hrs ago
  • Post by Manjunatha j c
    1
    Post by Manjunatha j c
    user_Manjunatha j c
    Manjunatha j c
    ಕಡೂರು, ಚಿಕ್ಕಮಗಳೂರು, ಕರ್ನಾಟಕ•
    1 hr ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    18 min ago
  • ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲ‌ ಲೋಕಸಭಾ ಅಧಿವೇಶನ ಕರದಿದ್ದು ವಿಶೇಷ ಅಧಿವೇಶನವಾಗಿತ್ತು. ಮಹಿಳೆಯರ ವಿಶೇಷ ಮೀಸಲಾತಿ ಸೌಲಭ್ಯವನ್ನ ತಕ್ಷಣದಿಂದ ಜಾರಿಗೆ ಬರಲು ದೇಶದಲ್ಲಿ ಕಾನೂನು ರೂಪಿಸಲು ಕರೆದಿಧ್ದರು. 2029 ರ ನಂತರ ಎಂಬ ಬಾವನೆ ಇದ್ದು ಅದನ್ನ ತಿದ್ದುಪಡಿ ಮಾಡಿ ತರಲು ಹೊರಟಿದ್ದು ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಬಿಲ್ ಅನ್ನ ಪಾಸ್ ಮಾಡಲು ಬಿಡಲಿಲ್ಲ ಎಂದು ತಿಳಿಸಿದರು
    1
    ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲ‌ ಲೋಕಸಭಾ ಅಧಿವೇಶನ ಕರದಿದ್ದು ವಿಶೇಷ ಅಧಿವೇಶನವಾಗಿತ್ತು. ಮಹಿಳೆಯರ ವಿಶೇಷ ಮೀಸಲಾತಿ ಸೌಲಭ್ಯವನ್ನ ತಕ್ಷಣದಿಂದ ಜಾರಿಗೆ ಬರಲು ದೇಶದಲ್ಲಿ ಕಾನೂನು ರೂಪಿಸಲು ಕರೆದಿಧ್ದರು. 2029 ರ ನಂತರ ಎಂಬ ಬಾವನೆ ಇದ್ದು ಅದನ್ನ ತಿದ್ದುಪಡಿ ಮಾಡಿ ತರಲು ಹೊರಟಿದ್ದು ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಬಿಲ್ ಅನ್ನ ಪಾಸ್ ಮಾಡಲು ಬಿಡಲಿಲ್ಲ ಎಂದು ತಿಳಿಸಿದರು
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಮುಗ್ರೋಡಿ ಸಂಜಯನಗರ ಬಳಿ ಸುಲೋಚನರವರ ಮನೆಗೆ ವಿದ್ಯುತ್‌ ಸ್ಪರ್ಶದಿಂದ ಬೆಂಕಿ ತಗಲಿ ಮನೆಯ ಎಲ್ಲಾ ಸೊತ್ತುಗಳು ನಾಶವಾಗಿದ್ದು, ಅಪಾರ ನಷ್ಟವಾಗಿರುವ ಬಗ್ಗೆ ಅಧಿಕಾರಿಗಳಾದ ಮೆಸ್ಕಾಂ AEE  ಶಿವಕುಮಾರ್, JE ಸುಬ್ರಹ್ಮಣ್ಯ ಹಾಗೂ ಗ್ರಾಮ ಲೆಕ್ಕಾಧಿಕಾರಿ ಧರ್ಮ ಇವರುಗಳೊಂದಿಗೆ  ಭೇಟಿ ನೀಡಿ ಚರ್ಚೆ ನಡೆಸಿದರು.  ಮತ್ತು ನಷ್ಟ ಉಂಟಾದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ಮೆಸ್ಕಾಂ,ಅಧಿಕಾರಿಗಳ ವರದಿಯನ್ನು ಪಡೆದು ಕೂಡಲೇ ಪರಿಹಾರವನ್ನು ಒದಗಿಸಿಕೊಡಬೇಕೆಂದು ಸೂಚಿಸಿದರು. ಈ ಪ್ರದೇಶದಲ್ಲಿ ಅನೇಕ ಎಲೆಕ್ಟ್ರಿಕ್‌  ಕಂಬಗಳ ವಯರ್‌ಗಳು ನೇತಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು ಇದನ್ನು ಸರಿಪಡಿಸದೇ ನಿರ್ಲಕ್ಷತನ ವಹಿಸಿದರೇ, ಇಲಾಖೆಯು ದಂಡ ತೆರಬೇಕೆಂದು ಎಚ್ಚರಿಕೆಯನ್ನು ನೀಡಿದರು. ಈ ಮನೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ ಉಂಟಾದ ಬಗ್ಗೆ ತನಿಖೆ ನಡೆಸಿ, ಮನೆಯವರ ಬಟ್ಟೆ ಬರೆ ಶಾಲಾ ಫೀಸ್‌ ಕಟ್ಟುವಂತಹ ಹಣ ಎಲ್ಲಾ ದಾಖಲೆಗಳು ಬೆಂಕಿಗೆ ಅಹುತಿಯಾಗಿದ್ದು, ಈ ಬಗ್ಗೆ ಪರಿಹಾರ ಒದಗಿಸಿಕೊಡಬೇಕೆಂದು ಇಲಾಖೆಗೆ ಸೂಚಿಸಿದರು ಇದೇ ರೀತಿ ಮಹಾಕಾಳಿಪಡ್ಪು ಜೆಪ್ಪು ಇಲ್ಲಿ ಇತ್ತೀಚೆಗೆ  ಮೃತರಾಗಿದ್ದ, ವರುಣ್‌ರವರಿಗೆ ಈ ವರೆಗೆ ಪರಿಹಾರ ಒದಗಿಸಿಲ್ಲ ಎಂದು ತೀವ್ರ ಅಸಮಾದಾನ ವ್ಯಕ್ತಪಡಿಸಿದರು.ಕೂಡಲೇ ಪರಿಹಾರ ಒದಗಿಸಿಕೊಡಬೇಕೆಂದು ಸೂಚಿಸಿದರು.
    1
    ಮುಗ್ರೋಡಿ ಸಂಜಯನಗರ ಬಳಿ ಸುಲೋಚನರವರ ಮನೆಗೆ ವಿದ್ಯುತ್‌ ಸ್ಪರ್ಶದಿಂದ ಬೆಂಕಿ ತಗಲಿ ಮನೆಯ ಎಲ್ಲಾ ಸೊತ್ತುಗಳು ನಾಶವಾಗಿದ್ದು, ಅಪಾರ ನಷ್ಟವಾಗಿರುವ ಬಗ್ಗೆ ಅಧಿಕಾರಿಗಳಾದ ಮೆಸ್ಕಾಂ AEE  ಶಿವಕುಮಾರ್, JE ಸುಬ್ರಹ್ಮಣ್ಯ ಹಾಗೂ ಗ್ರಾಮ ಲೆಕ್ಕಾಧಿಕಾರಿ ಧರ್ಮ ಇವರುಗಳೊಂದಿಗೆ  ಭೇಟಿ ನೀಡಿ ಚರ್ಚೆ ನಡೆಸಿದರು.  ಮತ್ತು ನಷ್ಟ ಉಂಟಾದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ಮೆಸ್ಕಾಂ,ಅಧಿಕಾರಿಗಳ ವರದಿಯನ್ನು ಪಡೆದು ಕೂಡಲೇ ಪರಿಹಾರವನ್ನು ಒದಗಿಸಿಕೊಡಬೇಕೆಂದು ಸೂಚಿಸಿದರು. ಈ ಪ್ರದೇಶದಲ್ಲಿ ಅನೇಕ ಎಲೆಕ್ಟ್ರಿಕ್‌  ಕಂಬಗಳ ವಯರ್‌ಗಳು ನೇತಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು ಇದನ್ನು ಸರಿಪಡಿಸದೇ ನಿರ್ಲಕ್ಷತನ ವಹಿಸಿದರೇ, ಇಲಾಖೆಯು ದಂಡ ತೆರಬೇಕೆಂದು ಎಚ್ಚರಿಕೆಯನ್ನು ನೀಡಿದರು. ಈ ಮನೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ ಉಂಟಾದ ಬಗ್ಗೆ ತನಿಖೆ ನಡೆಸಿ, ಮನೆಯವರ ಬಟ್ಟೆ ಬರೆ ಶಾಲಾ ಫೀಸ್‌ ಕಟ್ಟುವಂತಹ ಹಣ ಎಲ್ಲಾ ದಾಖಲೆಗಳು ಬೆಂಕಿಗೆ ಅಹುತಿಯಾಗಿದ್ದು, ಈ ಬಗ್ಗೆ ಪರಿಹಾರ ಒದಗಿಸಿಕೊಡಬೇಕೆಂದು ಇಲಾಖೆಗೆ ಸೂಚಿಸಿದರು ಇದೇ ರೀತಿ ಮಹಾಕಾಳಿಪಡ್ಪು ಜೆಪ್ಪು ಇಲ್ಲಿ ಇತ್ತೀಚೆಗೆ  ಮೃತರಾಗಿದ್ದ, ವರುಣ್‌ರವರಿಗೆ ಈ ವರೆಗೆ ಪರಿಹಾರ ಒದಗಿಸಿಲ್ಲ ಎಂದು ತೀವ್ರ ಅಸಮಾದಾನ ವ್ಯಕ್ತಪಡಿಸಿದರು.ಕೂಡಲೇ ಪರಿಹಾರ ಒದಗಿಸಿಕೊಡಬೇಕೆಂದು ಸೂಚಿಸಿದರು.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    1 hr ago
  • 🚩🚩🚩🚩
    3
    🚩🚩🚩🚩
    user_Manjunath Manju kiccha
    Manjunath Manju kiccha
    Farmer ಸಿರಾ, ತುಮಕೂರು, ಕರ್ನಾಟಕ•
    2 hrs ago
  • ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮ ಇಂದು ಜನಸಾಗರದಿಂದ ತುಂಬಿ ತುಳುಕುತ್ತಿದೆ. ದಶಕದ ಹತ್ತಿರದ ಅವಧಿಯ ನಂತರ ನಡೆಯುತ್ತಿರುವ ಈ ಜಾತ್ರೆಯು ಗ್ರಾಮಸ್ಥರಲ್ಲಿ ಹೊಸ ಚೈತನ್ಯ ತುಂಬಿದೆ.
    1
    ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮ ಇಂದು ಜನಸಾಗರದಿಂದ ತುಂಬಿ ತುಳುಕುತ್ತಿದೆ. ದಶಕದ ಹತ್ತಿರದ ಅವಧಿಯ ನಂತರ ನಡೆಯುತ್ತಿರುವ ಈ ಜಾತ್ರೆಯು ಗ್ರಾಮಸ್ಥರಲ್ಲಿ ಹೊಸ ಚೈತನ್ಯ ತುಂಬಿದೆ.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    3 hrs ago
  • ಏಪ್ರಿಲ್ 24ರಂದು ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಡಾ.ರಾಜ್‍ಕುಮಾರ್ ರವರ 97ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಟ ಸಾರ್ವಭೌಮ ಡಾ.ರಾಜ್‍ಕುಮಾರ್‍ರವರ 97ನೇ ಜನ್ಮ ದಿನಾಚರಣೆ ಸಮಾರಂಭ ಇದೇ ಏಪ್ರಿಲ್ 24ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    1
    ಏಪ್ರಿಲ್ 24ರಂದು ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಡಾ.ರಾಜ್‍ಕುಮಾರ್ ರವರ 97ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಟ ಸಾರ್ವಭೌಮ ಡಾ.ರಾಜ್‍ಕುಮಾರ್‍ರವರ 97ನೇ ಜನ್ಮ ದಿನಾಚರಣೆ ಸಮಾರಂಭ ಇದೇ ಏಪ್ರಿಲ್ 24ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.