logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಜೂನ್ 23ರಂದು ಮಳೆಗಾಗಿ ವಿಶೇಷ ಆಚರಣೆಗಳು ನಡೆದವು. ಗ್ರಾಮದೇವತೆ ಶ್ರೀ ಊರಮ್ಮ ದೇವಸ್ಥಾನದ ಆವರಣದಲ್ಲಿ ಮಳೆಗಂಗಮ್ಮ ಪ್ರೆಶ್ನೆ, ಬುಡ್ಡೆ ಕಲ್ಲಿಗೆ 101 ಕುಂಭ ಜಲಾಭಿಷೇಕ ಹಾಗೂ ಗ್ರಾಮದೇವತೆಗೆ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ, ಶ್ರೀ ಊರಮ್ಮ ದೇವಸ್ಥಾನದ ದೈವಸ್ಥರು ಊರಮ್ಮ ಹೊಂಡಕ್ಕೆ ತೆರಳಿ, ಜಂಗಮ ಹಿರಿಯ ಪೌರೋಹಿತ್ಯರಾದ ಕೆ.ಹೆಚ್.ಎಂ. ಚಿದಾನಂದಸ್ವಾಮಿ ಅವರ ನೇತೃತ್ವದಲ್ಲಿ ಆಯಗಾರರು ಮತ್ತು ನಾಗರಿಕರೊಂದಿಗೆ ಗಂಗೆ ಪೂಜೆಯನ್ನು ವಿಧಿವಿಧಾನಗಳ ಪ್ರಕಾರ ನೆರವೇರಿಸಿದರು. ನಂತರ, ಪಟ್ಟಣದ ಹತ್ತಾರು ಯುವಕರ ತಂಡ ಊರಮ್ಮ ಹೊಂಡದಿಂದ 101 ಕುಂಭಗಳಲ್ಲಿ ಗಂಗೆಯನ್ನು ತಂದು, ಊರ ಬಾಗಿಲಲ್ಲಿರುವ ಬುಡ್ಡೆ ಕಲ್ಲನ್ನು ಶಾಸ್ತ್ರೋಕ್ತವಾಗಿ ಆರಾಧಿಸಿತು. ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಮಳೆ ಕರುಣಿಸುವಂತೆ ಗಂಗಾಜಲವನ್ನು ಅರ್ಪಿಸಿ ಮಳೆ ಫಲವನ್ನು ಬೇಡಿಕೊಳ್ಳಲಾಯಿತು. ಇದೇ ವೇಳೆ, ಊರಮ್ಮ ಹೊಂಡದಿಂದ ಬಣಕಾರ ಮನೆತನದ ಕೋರಿ ಹುಡುಗನಿಗೆ ಗಂಗೆ ತುಂಬಿದ ಹೊಸ ಮಣ್ಣಿನ ಬಿಂದಿಗೆಯನ್ನು ಹೊರೆಸಿ ತಂದು, ಶ್ರೀ ಗ್ರಾಮದೇವತೆಯ ದೇವಸ್ಥಾನದ ಹೆಬ್ಬಾಗಿಲಲ್ಲಿ ವಿಧಿವತ್ತಾಗಿ ಗದ್ದುಗೆ ನಿರ್ಮಿಸಿ ಮಳೆಗಂಗಮ್ಮನನ್ನು ಪ್ರತಿಷ್ಠಾಪಿಸಲಾಯಿತು. ಮಳೆಗಂಗಮ್ಮನ ಮೇಲೆ ಬಣಕಾರ ಮನೆತನದ ಕೋರಿ ಹುಡುಗನನ್ನು ಕೂರಿಸಿ, ನಂತರ ದೈವಸ್ಥರೆಲ್ಲರೂ ಏಕಕಂಠದಿಂದ ಮಳೆಗಾಗಿ ಮಳೆಗಂಗಮ್ಮನಲ್ಲಿ ಪ್ರಾರ್ಥಿಸಿದರು. ಈ ಆಚರಣೆಯಲ್ಲಿ ಮಳೆಗಂಗಮ್ಮಳಿಗೆ (ಬಿಂದಿಗೆ ರೂಪದಲ್ಲಿರುವ) ಮಳೆ ಫಲ ನೀಡುವಂತೆ ಕೋರಿ, ಆಕೆ ಕೋರಿ ಹುಡುಗನನ್ನು ಹೊತ್ತು ತಿರುಗುವ ಮೂಲಕ ಮಳೆ ಫಲವನ್ನು ಸೂಚಿಸಬೇಕೆಂದು ಕೇಳಿಕೊಳ್ಳಲಾಗುತ್ತದೆ. ಬಾಲಕ ಕುಳಿತಿರುವ ನೀರಿನಿಂದ ತುಂಬಿದ ಮಣ್ಣಿನ ಕುಂಭ ರೂಪದ ಮಳೆಗಂಗಮ್ಮ ದೇವಿ ತಾನಾಗಿಯೇ ಎಡಭಾಗಕ್ಕೆ ತಿರುಗಿದರೆ ಮಳೆ ವಿಳಂಬವಾಗುತ್ತದೆ ಅಥವಾ ಸಮರ್ಪಕವಾಗಿ ಬರುವುದಿಲ್ಲ ಎಂಬ ಫಲ ದೊರೆಯುತ್ತದೆ. ಅದೇ ಬಲಭಾಗಕ್ಕೆ ತಿರುಗಿದಲ್ಲಿ ಅತಿ ಶೀಘ್ರದಲ್ಲಿ, ಮೂರ್ನಾಲ್ಕು ದಿನಗಳಲ್ಲಿ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ತಿರುಗುವಿಕೆಯ ವೇಗವೂ ಸಹ ಮಳೆಯ ಪ್ರಮಾಣವನ್ನು ಸೂಚಿಸುತ್ತದೆ; ನಿಧಾನವಾಗಿ ತಿರುಗಿದರೆ ಕಡಿಮೆ ಮಳೆ, ವೇಗವಾಗಿ ತಿರುಗಿದರೆ ರಭಸವಾಗಿ ಮತ್ತು ಸಕಾಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬರುತ್ತದೆ ಎಂಬ ಮಾನದಂಡದ ಆಧಾರದ ಮೇಲೆ ಮಳೆಯ ಸ್ಥಿತಿಗತಿ ಅರಿಯಲಾಗುತ್ತದೆ. ಈ ದೇವರ ಮಳೆ ಹೇಳಿಕೆಯ ಫಲಾನುಫಲದ ಮೇಲೆ ನಾಗರಿಕರಲ್ಲಿ ಮತ್ತು ರೈತರಲ್ಲಿ ನಂಬಿಕೆ ಇದ್ದು, ಇದರ ಆಧಾರದ ಮೇಲೆ ರೈತರು ತಮ್ಮ ಬೇಸಾಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ. ಈ ಬಾರಿಯ ಆಚರಣೆಯಲ್ಲಿ ಮಳೆಗಂಗಮ್ಮಳು, ಬೇಡಿಕೊಂಡ ಕ್ಷಣಮಾತ್ರದಲ್ಲಿಯೇ ಬಲಭಾಗಕ್ಕೆ ವೇಗವಾಗಿ ತಿರುಗುವ ಮೂಲಕ ನೆರೆದವರ ಬೇಡಿಕೆಗೆ ಶುಭ ಸಂಕೇತದ ಮಳೆ ಫಲವನ್ನು ನೀಡಿದರು. ಇದರಿಂದ ಹರ್ಷಗೊಂಡ ಎಲ್ಲರೂ ಶ್ರೀ ಊರಮ್ಮಳಿಗೆ ಹಾಗೂ ಮಳೆಗಂಗಮ್ಮಳಿಗೆ ಜಯಘೋಷ ಮೊಳಗಿಸಿದರು. ನಂತರ ದೇವರಿಗೆ ಮಹಾಪೂಜೆ ನೆರವೇರಿಸಿ, ಮಹಾಮಂಗಳಾರತಿ ಬೆಳಗಿ ಎಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡಿ ನಮಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಜೋಯಿಸ್ ಹವಧನ್, ಬಣಕಾರ ಮಂಜುನಾಥ, ಸೋಗಿ ಗುರುಸಿದ್ದಪ್ಪ, ಬಣಕಾರ ಶಿವಣ್ಣ, ಬಣಕಾರ ಸಿದ್ದಣ್ಣ, ಎ.ಎಂ. ಚನ್ನಯ್ಯ, ತುಪ್ಪಳ್ಳಿ ಕೊಟ್ರೇಶ್, ನಾಗೇಶ್, ಊರಮ್ಮ ಆರ್ಚಕ ಬಿ. ನಾಗರಾಜ, ಬಿ. ಈರಣ್ಣ, ಹನಸಿ ಶಿವಣ್ಣ, ಕಾಯಿಕೆಡವ ವಿಜಯಕುಮಾರ್, ಕೆ.ಬಿ. ಮಲ್ಲಿಕಾರ್ಜುನ, ತಳವಾರ ಸುರೇಶ್, ಮಡಿವಾಳ ತಿರುಕಪ್ಪ ಸೇರಿದಂತೆ ಪಟ್ಟಣದ ದೈವಸ್ಥರು, ಶ್ರೀ ಊರಮ್ಮದೇವಿಯ ಆಯಗಾರರು, ಶ್ರೀ ಪೇಟೆಬಸವೇಶ್ವರ ದೇವಸ್ಥಾನದ ಯುವಕರು, ನೂರಾರು ಭಕ್ತರು, ಮಹಿಳೆಯರು ಮತ್ತು ಶ್ರೀ ಮದಗಾಂಭಿಕ ದೇವಿ ಹಲಗೆ ವಾದ್ಯವೃಂದದವರು ಭಾಗವಹಿಸಿದ್ದರು.

1 hr ago
user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
ಕೂಡ್ಲಿಗಿ, ವಿಜಯನಗರ, ಕರ್ನಾಟಕ•
1 hr ago

ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಜೂನ್ 23ರಂದು ಮಳೆಗಾಗಿ ವಿಶೇಷ ಆಚರಣೆಗಳು ನಡೆದವು. ಗ್ರಾಮದೇವತೆ ಶ್ರೀ ಊರಮ್ಮ ದೇವಸ್ಥಾನದ ಆವರಣದಲ್ಲಿ ಮಳೆಗಂಗಮ್ಮ ಪ್ರೆಶ್ನೆ, ಬುಡ್ಡೆ ಕಲ್ಲಿಗೆ 101 ಕುಂಭ ಜಲಾಭಿಷೇಕ ಹಾಗೂ ಗ್ರಾಮದೇವತೆಗೆ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ, ಶ್ರೀ ಊರಮ್ಮ ದೇವಸ್ಥಾನದ ದೈವಸ್ಥರು ಊರಮ್ಮ ಹೊಂಡಕ್ಕೆ ತೆರಳಿ, ಜಂಗಮ ಹಿರಿಯ ಪೌರೋಹಿತ್ಯರಾದ ಕೆ.ಹೆಚ್.ಎಂ. ಚಿದಾನಂದಸ್ವಾಮಿ ಅವರ ನೇತೃತ್ವದಲ್ಲಿ ಆಯಗಾರರು ಮತ್ತು ನಾಗರಿಕರೊಂದಿಗೆ ಗಂಗೆ ಪೂಜೆಯನ್ನು ವಿಧಿವಿಧಾನಗಳ ಪ್ರಕಾರ ನೆರವೇರಿಸಿದರು. ನಂತರ, ಪಟ್ಟಣದ ಹತ್ತಾರು ಯುವಕರ ತಂಡ ಊರಮ್ಮ ಹೊಂಡದಿಂದ 101 ಕುಂಭಗಳಲ್ಲಿ ಗಂಗೆಯನ್ನು ತಂದು, ಊರ ಬಾಗಿಲಲ್ಲಿರುವ ಬುಡ್ಡೆ ಕಲ್ಲನ್ನು ಶಾಸ್ತ್ರೋಕ್ತವಾಗಿ ಆರಾಧಿಸಿತು. ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಮಳೆ ಕರುಣಿಸುವಂತೆ ಗಂಗಾಜಲವನ್ನು ಅರ್ಪಿಸಿ ಮಳೆ ಫಲವನ್ನು

ಬೇಡಿಕೊಳ್ಳಲಾಯಿತು. ಇದೇ ವೇಳೆ, ಊರಮ್ಮ ಹೊಂಡದಿಂದ ಬಣಕಾರ ಮನೆತನದ ಕೋರಿ ಹುಡುಗನಿಗೆ ಗಂಗೆ ತುಂಬಿದ ಹೊಸ ಮಣ್ಣಿನ ಬಿಂದಿಗೆಯನ್ನು ಹೊರೆಸಿ ತಂದು, ಶ್ರೀ ಗ್ರಾಮದೇವತೆಯ ದೇವಸ್ಥಾನದ ಹೆಬ್ಬಾಗಿಲಲ್ಲಿ ವಿಧಿವತ್ತಾಗಿ ಗದ್ದುಗೆ ನಿರ್ಮಿಸಿ ಮಳೆಗಂಗಮ್ಮನನ್ನು ಪ್ರತಿಷ್ಠಾಪಿಸಲಾಯಿತು. ಮಳೆಗಂಗಮ್ಮನ ಮೇಲೆ ಬಣಕಾರ ಮನೆತನದ ಕೋರಿ ಹುಡುಗನನ್ನು ಕೂರಿಸಿ, ನಂತರ ದೈವಸ್ಥರೆಲ್ಲರೂ ಏಕಕಂಠದಿಂದ ಮಳೆಗಾಗಿ ಮಳೆಗಂಗಮ್ಮನಲ್ಲಿ ಪ್ರಾರ್ಥಿಸಿದರು. ಈ ಆಚರಣೆಯಲ್ಲಿ ಮಳೆಗಂಗಮ್ಮಳಿಗೆ (ಬಿಂದಿಗೆ ರೂಪದಲ್ಲಿರುವ) ಮಳೆ ಫಲ ನೀಡುವಂತೆ ಕೋರಿ, ಆಕೆ ಕೋರಿ ಹುಡುಗನನ್ನು ಹೊತ್ತು ತಿರುಗುವ ಮೂಲಕ ಮಳೆ ಫಲವನ್ನು ಸೂಚಿಸಬೇಕೆಂದು ಕೇಳಿಕೊಳ್ಳಲಾಗುತ್ತದೆ. ಬಾಲಕ ಕುಳಿತಿರುವ ನೀರಿನಿಂದ ತುಂಬಿದ ಮಣ್ಣಿನ ಕುಂಭ ರೂಪದ ಮಳೆಗಂಗಮ್ಮ ದೇವಿ ತಾನಾಗಿಯೇ ಎಡಭಾಗಕ್ಕೆ ತಿರುಗಿದರೆ ಮಳೆ ವಿಳಂಬವಾಗುತ್ತದೆ ಅಥವಾ ಸಮರ್ಪಕವಾಗಿ ಬರುವುದಿಲ್ಲ ಎಂಬ ಫಲ ದೊರೆಯುತ್ತದೆ. ಅದೇ

ಬಲಭಾಗಕ್ಕೆ ತಿರುಗಿದಲ್ಲಿ ಅತಿ ಶೀಘ್ರದಲ್ಲಿ, ಮೂರ್ನಾಲ್ಕು ದಿನಗಳಲ್ಲಿ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ತಿರುಗುವಿಕೆಯ ವೇಗವೂ ಸಹ ಮಳೆಯ ಪ್ರಮಾಣವನ್ನು ಸೂಚಿಸುತ್ತದೆ; ನಿಧಾನವಾಗಿ ತಿರುಗಿದರೆ ಕಡಿಮೆ ಮಳೆ, ವೇಗವಾಗಿ ತಿರುಗಿದರೆ ರಭಸವಾಗಿ ಮತ್ತು ಸಕಾಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬರುತ್ತದೆ ಎಂಬ ಮಾನದಂಡದ ಆಧಾರದ ಮೇಲೆ ಮಳೆಯ ಸ್ಥಿತಿಗತಿ ಅರಿಯಲಾಗುತ್ತದೆ. ಈ ದೇವರ ಮಳೆ ಹೇಳಿಕೆಯ ಫಲಾನುಫಲದ ಮೇಲೆ ನಾಗರಿಕರಲ್ಲಿ ಮತ್ತು ರೈತರಲ್ಲಿ ನಂಬಿಕೆ ಇದ್ದು, ಇದರ ಆಧಾರದ ಮೇಲೆ ರೈತರು ತಮ್ಮ ಬೇಸಾಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ. ಈ ಬಾರಿಯ ಆಚರಣೆಯಲ್ಲಿ ಮಳೆಗಂಗಮ್ಮಳು, ಬೇಡಿಕೊಂಡ ಕ್ಷಣಮಾತ್ರದಲ್ಲಿಯೇ ಬಲಭಾಗಕ್ಕೆ ವೇಗವಾಗಿ ತಿರುಗುವ ಮೂಲಕ ನೆರೆದವರ ಬೇಡಿಕೆಗೆ ಶುಭ ಸಂಕೇತದ ಮಳೆ ಫಲವನ್ನು ನೀಡಿದರು. ಇದರಿಂದ

ಹರ್ಷಗೊಂಡ ಎಲ್ಲರೂ ಶ್ರೀ ಊರಮ್ಮಳಿಗೆ ಹಾಗೂ ಮಳೆಗಂಗಮ್ಮಳಿಗೆ ಜಯಘೋಷ ಮೊಳಗಿಸಿದರು. ನಂತರ ದೇವರಿಗೆ ಮಹಾಪೂಜೆ ನೆರವೇರಿಸಿ, ಮಹಾಮಂಗಳಾರತಿ ಬೆಳಗಿ ಎಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡಿ ನಮಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಜೋಯಿಸ್ ಹವಧನ್, ಬಣಕಾರ ಮಂಜುನಾಥ, ಸೋಗಿ ಗುರುಸಿದ್ದಪ್ಪ, ಬಣಕಾರ ಶಿವಣ್ಣ, ಬಣಕಾರ ಸಿದ್ದಣ್ಣ, ಎ.ಎಂ. ಚನ್ನಯ್ಯ, ತುಪ್ಪಳ್ಳಿ ಕೊಟ್ರೇಶ್, ನಾಗೇಶ್, ಊರಮ್ಮ ಆರ್ಚಕ ಬಿ. ನಾಗರಾಜ, ಬಿ. ಈರಣ್ಣ, ಹನಸಿ ಶಿವಣ್ಣ, ಕಾಯಿಕೆಡವ ವಿಜಯಕುಮಾರ್, ಕೆ.ಬಿ. ಮಲ್ಲಿಕಾರ್ಜುನ, ತಳವಾರ ಸುರೇಶ್, ಮಡಿವಾಳ ತಿರುಕಪ್ಪ ಸೇರಿದಂತೆ ಪಟ್ಟಣದ ದೈವಸ್ಥರು, ಶ್ರೀ ಊರಮ್ಮದೇವಿಯ ಆಯಗಾರರು, ಶ್ರೀ ಪೇಟೆಬಸವೇಶ್ವರ ದೇವಸ್ಥಾನದ ಯುವಕರು, ನೂರಾರು ಭಕ್ತರು, ಮಹಿಳೆಯರು ಮತ್ತು ಶ್ರೀ ಮದಗಾಂಭಿಕ ದೇವಿ ಹಲಗೆ ವಾದ್ಯವೃಂದದವರು ಭಾಗವಹಿಸಿದ್ದರು.

More news from ಕರ್ನಾಟಕ and nearby areas
  • ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮದ ಕೆರೆ ಅಂಗಳದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ಇದೀಗ ಆತಂಕಕಾರಿ ಸ್ವರೂಪ ಪಡೆದುಕೊಂಡಿದೆ. ಜೀವದ ಹಂಗು ತೊರೆದು ಕೆರೆಯೊಳಗೆ ಆಳವಾದ ಸುರಂಗಗಳನ್ನು ಕೊರೆದು, ಅಪಾಯಕಾರಿ ಪರಿಸ್ಥಿತಿಯಲ್ಲಿ ಎತ್ತಿನ ಬಂಡಿಗಳಿಗೆ ಮರಳು ತುಂಬುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿವೆ. ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಪ್ರತಿದಿನ 10 ರಿಂದ 15 ಎತ್ತಿನಗಾಡಿಗಳ ಮೂಲಕ ಮರಳು ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಲಾಗಿದ್ದು, ಮೇಲಿನ ಕಪ್ಪು ಮಣ್ಣನ್ನು ತೆಗೆದು 5 ರಿಂದ 8 ಅಡಿ ಆಳದವರೆಗೆ ಸುರಂಗ ಕೊರೆದು ಮರಳು ತೆಗೆಯಲಾಗುತ್ತಿದೆ. ಈ ಅಕ್ರಮ ಮರಳು ಹಾಗೂ ಮಣ್ಣು ದಂಧೆಯಿಂದ ಕೆರೆಯ ಸ್ವರೂಪವೇ ಸಂಪೂರ್ಣ ಬದಲಾಗಿದ್ದು, ಎಲ್ಲೆಂದರಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಈ ಸುರಂಗಗಳಲ್ಲಿ ಮರಳು ತುಂಬಲಾಗುತ್ತಿದ್ದು, ಈ ಹಿಂದೆ ಇಂತಹ ಘಟನೆಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಜಿಲ್ಲಾಡಳಿತ ಅಕ್ರಮ ಪ್ರವೇಶ ತಡೆಯಲು ಕೆರೆಯ ಸುತ್ತ ಕಾಲುವೆ ನಿರ್ಮಿಸಿದ್ದರೂ, ಅದನ್ನು ಮುಚ್ಚಿ ಮತ್ತೆ ಅಕ್ರಮವಾಗಿ ಪ್ರವೇಶಿಸಿ ಮರಳು ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದೇ ಕೆರೆಯಂಗಳದಲ್ಲಿರುವ ಕುಡಿಯುವ ನೀರಿನ ಕೊಳವೆಬಾವಿಗಳ ಜಲಮಟ್ಟಕ್ಕೂ ಇದರಿಂದ ಭಾರಿ ಹಾನಿಯಾಗಿದ್ದು, ಅಕ್ರಮ ಮರಳು ದಂಧೆಯಿಂದ ಜಲಮೂಲಗಳು ಪಾತಾಳಕ್ಕೆ ಕುಸಿಯುತ್ತಿವೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅಪಾಯಕಾರಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವರೇ? ಬೊಮ್ಮಸಂದ್ರ ಕೆರೆಯಲ್ಲಿನ ಈ ಸುರಂಗ ಮರಳು ದಂಧೆಗೆ ಬ್ರೇಕ್ ಬೀಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
    1
    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮದ ಕೆರೆ ಅಂಗಳದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ಇದೀಗ ಆತಂಕಕಾರಿ ಸ್ವರೂಪ ಪಡೆದುಕೊಂಡಿದೆ. ಜೀವದ ಹಂಗು ತೊರೆದು ಕೆರೆಯೊಳಗೆ ಆಳವಾದ ಸುರಂಗಗಳನ್ನು ಕೊರೆದು, ಅಪಾಯಕಾರಿ ಪರಿಸ್ಥಿತಿಯಲ್ಲಿ ಎತ್ತಿನ ಬಂಡಿಗಳಿಗೆ ಮರಳು ತುಂಬುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿವೆ. ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಪ್ರತಿದಿನ 10 ರಿಂದ 15 ಎತ್ತಿನಗಾಡಿಗಳ ಮೂಲಕ ಮರಳು ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಲಾಗಿದ್ದು, ಮೇಲಿನ ಕಪ್ಪು ಮಣ್ಣನ್ನು ತೆಗೆದು 5 ರಿಂದ 8 ಅಡಿ ಆಳದವರೆಗೆ ಸುರಂಗ ಕೊರೆದು ಮರಳು ತೆಗೆಯಲಾಗುತ್ತಿದೆ.

ಈ ಅಕ್ರಮ ಮರಳು ಹಾಗೂ ಮಣ್ಣು ದಂಧೆಯಿಂದ ಕೆರೆಯ ಸ್ವರೂಪವೇ ಸಂಪೂರ್ಣ ಬದಲಾಗಿದ್ದು, ಎಲ್ಲೆಂದರಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಈ ಸುರಂಗಗಳಲ್ಲಿ ಮರಳು ತುಂಬಲಾಗುತ್ತಿದ್ದು, ಈ ಹಿಂದೆ ಇಂತಹ ಘಟನೆಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಜಿಲ್ಲಾಡಳಿತ ಅಕ್ರಮ ಪ್ರವೇಶ ತಡೆಯಲು ಕೆರೆಯ ಸುತ್ತ ಕಾಲುವೆ ನಿರ್ಮಿಸಿದ್ದರೂ, ಅದನ್ನು ಮುಚ್ಚಿ ಮತ್ತೆ ಅಕ್ರಮವಾಗಿ ಪ್ರವೇಶಿಸಿ ಮರಳು ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದೇ ಕೆರೆಯಂಗಳದಲ್ಲಿರುವ ಕುಡಿಯುವ ನೀರಿನ ಕೊಳವೆಬಾವಿಗಳ ಜಲಮಟ್ಟಕ್ಕೂ ಇದರಿಂದ ಭಾರಿ ಹಾನಿಯಾಗಿದ್ದು, ಅಕ್ರಮ ಮರಳು ದಂಧೆಯಿಂದ ಜಲಮೂಲಗಳು ಪಾತಾಳಕ್ಕೆ ಕುಸಿಯುತ್ತಿವೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅಪಾಯಕಾರಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವರೇ? ಬೊಮ್ಮಸಂದ್ರ ಕೆರೆಯಲ್ಲಿನ ಈ ಸುರಂಗ ಮರಳು ದಂಧೆಗೆ ಬ್ರೇಕ್ ಬೀಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • ಭದ್ರಾವತಿ ನಗರದಲ್ಲಿ ದೀರ್ಘಕಾಲದ ನಂತರ ಮಳೆ ಸುರಿದಿದ್ದು, ಇದರಿಂದ ಸ್ಥಳೀಯರಲ್ಲಿ ಸಂತಸ ಮೂಡಿದೆ. ಬಿಸಿಲಿನ ಬೆವರಿನಿಂದ ತೀವ್ರವಾಗಿ ಹೈರಾಣಾಗಿದ್ದ ಜನರಿಗೆ ಈ ಮಳೆಯು ತಂಪೆರೆದಿದೆ, ‘ಫೈರ್ ಸಿಟಿ’ ಎಂದು ಕರೆಯಲಾಗುತ್ತಿದ್ದ ಭದ್ರಾವತಿ ಈಗ ‘ಕೂಲ್ ಕೂಲ್’ ಎನಿಸಿದೆ. ಮಳೆ ಹನಿಗಳು ಧರೆಗೆ ಇಳಿಯುತ್ತಿದ್ದಂತೆ ಮರ ಗಿಡಗಳು ಕಂಗೊಳಿಸುತ್ತಿದ್ದು, ಇಳೆಯು ತಂಪಾಗಿದೆ. ಈ ಅನಿರೀಕ್ಷಿತ ಮಳೆಯಿಂದಾಗಿ ರೈತರು ಮತ್ತು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
    1
    ಭದ್ರಾವತಿ ನಗರದಲ್ಲಿ ದೀರ್ಘಕಾಲದ ನಂತರ ಮಳೆ ಸುರಿದಿದ್ದು, ಇದರಿಂದ ಸ್ಥಳೀಯರಲ್ಲಿ ಸಂತಸ ಮೂಡಿದೆ. ಬಿಸಿಲಿನ ಬೆವರಿನಿಂದ ತೀವ್ರವಾಗಿ ಹೈರಾಣಾಗಿದ್ದ ಜನರಿಗೆ ಈ ಮಳೆಯು ತಂಪೆರೆದಿದೆ, ‘ಫೈರ್ ಸಿಟಿ’ ಎಂದು ಕರೆಯಲಾಗುತ್ತಿದ್ದ ಭದ್ರಾವತಿ ಈಗ ‘ಕೂಲ್ ಕೂಲ್’ ಎನಿಸಿದೆ.

ಮಳೆ ಹನಿಗಳು ಧರೆಗೆ ಇಳಿಯುತ್ತಿದ್ದಂತೆ ಮರ ಗಿಡಗಳು ಕಂಗೊಳಿಸುತ್ತಿದ್ದು, ಇಳೆಯು ತಂಪಾಗಿದೆ. ಈ ಅನಿರೀಕ್ಷಿತ ಮಳೆಯಿಂದಾಗಿ ರೈತರು ಮತ್ತು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    4 hrs ago
  • ಹಿರಿಯೂರು ನಗರದಲ್ಲಿ ಒಂದು ಬಡ ಕುಟುಂಬಕ್ಕೆ ಸ್ವಂತ ಸೂರು ಇಲ್ಲದೆ ಬೀದಿಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಪ್ರತಿಯೊಬ್ಬರಿಗೂ ಸ್ವಂತ ಸೂರು ಎಂಬುದು ಮೂಲಭೂತ ಹಕ್ಕಾಗಿದ್ದರೂ, ನಿವೇಶನ ಅಥವಾ ಮನೆ ಇಲ್ಲದೆ ಈ ಕುಟುಂಬ ಬೀದಿಗೆ ಬಿದ್ದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದು ಹಿರಿಯೂರಿನ ಬಡ ಕುಟುಂಬವೊಂದರ ಕಣ್ಣೀರಿನ ಕಥೆಯನ್ನು ತೆರೆದಿಟ್ಟಿದೆ. ಸರ್ಕಾರಗಳು ಗುಡಿಸಲು ಮುಕ್ತ ಯೋಜನೆ, ನಿವೇಶನ ವಿತರಣೆ, ಇಂದಿರಾ ಆವಾಸ್, ರಾಜೀವ್ ಗಾಂಧಿ ವಸತಿ ಯೋಜನೆ, ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಹಲವಾರು ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಇನ್ನೂ ಅನೇಕ ಅರ್ಹ ಬಡ ಕುಟುಂಬಗಳು ವಸತಿ ಸೌಲಭ್ಯದಿಂದ ವಂಚಿತವಾಗಿವೆ ಎಂದು ವರದಿಯಾಗಿದೆ.
    1
    ಹಿರಿಯೂರು ನಗರದಲ್ಲಿ ಒಂದು ಬಡ ಕುಟುಂಬಕ್ಕೆ ಸ್ವಂತ ಸೂರು ಇಲ್ಲದೆ ಬೀದಿಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಪ್ರತಿಯೊಬ್ಬರಿಗೂ ಸ್ವಂತ ಸೂರು ಎಂಬುದು ಮೂಲಭೂತ ಹಕ್ಕಾಗಿದ್ದರೂ, ನಿವೇಶನ ಅಥವಾ ಮನೆ ಇಲ್ಲದೆ ಈ ಕುಟುಂಬ ಬೀದಿಗೆ ಬಿದ್ದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದು ಹಿರಿಯೂರಿನ ಬಡ ಕುಟುಂಬವೊಂದರ ಕಣ್ಣೀರಿನ ಕಥೆಯನ್ನು ತೆರೆದಿಟ್ಟಿದೆ. 

ಸರ್ಕಾರಗಳು ಗುಡಿಸಲು ಮುಕ್ತ ಯೋಜನೆ, ನಿವೇಶನ ವಿತರಣೆ, ಇಂದಿರಾ ಆವಾಸ್, ರಾಜೀವ್ ಗಾಂಧಿ ವಸತಿ ಯೋಜನೆ, ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಹಲವಾರು ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಇನ್ನೂ ಅನೇಕ ಅರ್ಹ ಬಡ ಕುಟುಂಬಗಳು ವಸತಿ ಸೌಲಭ್ಯದಿಂದ ವಂಚಿತವಾಗಿವೆ ಎಂದು ವರದಿಯಾಗಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    12 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    12 hrs ago
  • ಕೊಪ್ಪಳದ ಜಿಲ್ಲಾ ಆಡಳಿತದ ಮುಂಭಾಗದಲ್ಲಿ ರೈತ ಸಂಘಟನೆ ನೇತೃತ್ವದಲ್ಲಿ ಬೃಹತ್ ಚಳುವಳಿ ನಡೆಯಿತು. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ವಿದ್ಯುತ್ ಖಾಸಗೀಕರಣದ ಹುನ್ನಾರ ಮಾಡುತ್ತಿರುವುದರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಬಲ್ಡಟ್ ಕಂಪನಿ ಕೈಯಿಂದ ಬಸಾಪುರ ಕೆರೆ ವಿಮುಕ್ತಿಗಾಗಿ ಪ್ರತಿಭಟನೆ ನಡೆಸಲಾಯಿತು. ಈ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಣ ಹೂಗಾರ ಅವರು ಮಾತನಾಡಿ, ಸರ್ಕಾರವು ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು, ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸಬೇಕು, ರಸಗೊಬ್ಬರದ ಅಭಾವವನ್ನು ತಡೆಗಟ್ಟಿ, ಕೃತಕ ಅಭಾವ ಸೃಷ್ಟಿಸುವ ಕಾಳದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಬಲ್ಡೋಟ ಕೆರೆಯನ್ನು ಜನ ಹಾಗೂ ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕೆಂದು ಅವರು ಆಗ್ರಹಿಸಿದರು. ರೈತರ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಸಿದ ಅವರು, ಸರ್ಕಾರವು ಈ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
    1
    ಕೊಪ್ಪಳದ ಜಿಲ್ಲಾ ಆಡಳಿತದ ಮುಂಭಾಗದಲ್ಲಿ ರೈತ ಸಂಘಟನೆ ನೇತೃತ್ವದಲ್ಲಿ ಬೃಹತ್ ಚಳುವಳಿ ನಡೆಯಿತು. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ವಿದ್ಯುತ್ ಖಾಸಗೀಕರಣದ ಹುನ್ನಾರ ಮಾಡುತ್ತಿರುವುದರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಬಲ್ಡಟ್ ಕಂಪನಿ ಕೈಯಿಂದ ಬಸಾಪುರ ಕೆರೆ ವಿಮುಕ್ತಿಗಾಗಿ ಪ್ರತಿಭಟನೆ ನಡೆಸಲಾಯಿತು.

ಈ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಣ ಹೂಗಾರ ಅವರು ಮಾತನಾಡಿ, ಸರ್ಕಾರವು ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು, ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸಬೇಕು, ರಸಗೊಬ್ಬರದ ಅಭಾವವನ್ನು ತಡೆಗಟ್ಟಿ, ಕೃತಕ ಅಭಾವ ಸೃಷ್ಟಿಸುವ ಕಾಳದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಬಲ್ಡೋಟ ಕೆರೆಯನ್ನು ಜನ ಹಾಗೂ ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕೆಂದು ಅವರು ಆಗ್ರಹಿಸಿದರು.

ರೈತರ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಸಿದ ಅವರು, ಸರ್ಕಾರವು ಈ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    1 hr ago
  • ಇಳಕಲ್ ನಗರದಲ್ಲಿ ಕುಂಬಾರ ಸಮಾಜದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಶಾಸಕ ಕಾಶಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಕಾಂಗ್ರೆಸ್ ಪಕ್ಷದ ವರಿಷ್ಠರು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸಮಾಜದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಮುಖಂಡರು ಹಾಗೂ ಯುವ ಮಿತ್ರರು ಉಪಸ್ಥಿತರಿದ್ದರು.
    4
    ಇಳಕಲ್ ನಗರದಲ್ಲಿ ಕುಂಬಾರ ಸಮಾಜದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಶಾಸಕ ಕಾಶಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಕಾಂಗ್ರೆಸ್ ಪಕ್ಷದ ವರಿಷ್ಠರು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸಮಾಜದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಮುಖಂಡರು ಹಾಗೂ ಯುವ ಮಿತ್ರರು ಉಪಸ್ಥಿತರಿದ್ದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    8 hrs ago
  • ಮಂಡ್ಯದ ಎರಡು ವರ್ಷದ ಬಾಲಕ ಸಾಯಿ ಚಿರಾಗ್‌ ಅಪರೂಪದ ಸ್ಪೈನಲ್‌ ಮಸ್ಕ್ಯುಲರ್‌ ಅಟ್ರೋಫಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸುಮಾರು ಎರಡು ಕೋಟಿ ರೂಪಾಯಿಗಳ ಅಗತ್ಯವಿದೆ. ಈ ಹಣ ಸಂಗ್ರಹಿಸಲು ಕುಟುಂಬದವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಕೋಟೆನಾಡಿನ (ಚಿತ್ರದುರ್ಗದ) ಜನರು ಬಾಲಕನ ಸಹಾಯಕ್ಕೆ ಮುಂದಾಗಿದ್ದಾರೆ. ನಗರದ ಗಾಂಧಿ ವೃತ್ತದಲ್ಲಿ ಹಣ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೋಟೆನಾಡಿನ ಜನತೆಯ ಈ ನೆರವಿನ ಹಸ್ತ ಚಾಚಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ.
    1
    ಮಂಡ್ಯದ ಎರಡು ವರ್ಷದ ಬಾಲಕ ಸಾಯಿ ಚಿರಾಗ್‌ ಅಪರೂಪದ ಸ್ಪೈನಲ್‌ ಮಸ್ಕ್ಯುಲರ್‌ ಅಟ್ರೋಫಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸುಮಾರು ಎರಡು ಕೋಟಿ ರೂಪಾಯಿಗಳ ಅಗತ್ಯವಿದೆ. ಈ ಹಣ ಸಂಗ್ರಹಿಸಲು ಕುಟುಂಬದವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಪರಿಸ್ಥಿತಿಯಲ್ಲಿ, ಕೋಟೆನಾಡಿನ (ಚಿತ್ರದುರ್ಗದ) ಜನರು ಬಾಲಕನ ಸಹಾಯಕ್ಕೆ ಮುಂದಾಗಿದ್ದಾರೆ. ನಗರದ ಗಾಂಧಿ ವೃತ್ತದಲ್ಲಿ ಹಣ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೋಟೆನಾಡಿನ ಜನತೆಯ ಈ ನೆರವಿನ ಹಸ್ತ ಚಾಚಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    12 hrs ago
  • ಚಳ್ಳಕೆರೆ ನಗರದಲ್ಲಿ 60 ವರ್ಷದ ವೃದ್ಧೆ ಯಶೋದಮ್ಮ ಕಾಣೆಯಾಗಿದ್ದು, ಇವರನ್ನು ಪತ್ತೆ ಹಚ್ಚುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಗರದ ಸೋಮುಗುದ್ದ ರಸ್ತೆಯ ಅಪ್ಪರ್ ಭದ್ರಾ ಮೇಲ್ದಂಡೆ ಕ್ವಾಟ್ರಸ್‌ನಲ್ಲಿ ವಾಸವಾಗಿರುವ ನಂದೀಶ ಅವರ ತಾಯಿ ಯಶೋದಮ್ಮ ಅವರು ಸೋಮವಾರ ರಾತ್ರಿ 6:30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದಾರೆ. ಕಾಣೆಯಾದಾಗ ಯಶೋದಮ್ಮ ಕ್ರೀಮ್ ಕಲರ್ ನೈಟಿ ಹಾಗೂ ಬಿಳಿ ದುಪ್ಪಟ್ಟ ಧರಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಯಶೋದಮ್ಮನವರನ್ನು ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಚಳ್ಳಕೆರೆ ಪೊಲೀಸ್ ಠಾಣೆಗೆ ಅಥವಾ ಅವರ ಪುತ್ರ ನಂದೀಶರ ಮೊಬೈಲ್ ಸಂಖ್ಯೆ 7349020442 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರ ಸೊಸೆ ಲಕ್ಷ್ಮಿ ಅವರು ಮನವಿ ಮಾಡಿದ್ದಾರೆ.
    1
    ಚಳ್ಳಕೆರೆ ನಗರದಲ್ಲಿ 60 ವರ್ಷದ ವೃದ್ಧೆ ಯಶೋದಮ್ಮ ಕಾಣೆಯಾಗಿದ್ದು, ಇವರನ್ನು ಪತ್ತೆ ಹಚ್ಚುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಗರದ ಸೋಮುಗುದ್ದ ರಸ್ತೆಯ ಅಪ್ಪರ್ ಭದ್ರಾ ಮೇಲ್ದಂಡೆ ಕ್ವಾಟ್ರಸ್‌ನಲ್ಲಿ ವಾಸವಾಗಿರುವ ನಂದೀಶ ಅವರ ತಾಯಿ ಯಶೋದಮ್ಮ ಅವರು ಸೋಮವಾರ ರಾತ್ರಿ 6:30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದಾರೆ. ಕಾಣೆಯಾದಾಗ ಯಶೋದಮ್ಮ ಕ್ರೀಮ್ ಕಲರ್ ನೈಟಿ ಹಾಗೂ ಬಿಳಿ ದುಪ್ಪಟ್ಟ ಧರಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಯಶೋದಮ್ಮನವರನ್ನು ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಚಳ್ಳಕೆರೆ ಪೊಲೀಸ್ ಠಾಣೆಗೆ ಅಥವಾ ಅವರ ಪುತ್ರ ನಂದೀಶರ ಮೊಬೈಲ್ ಸಂಖ್ಯೆ 7349020442 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರ ಸೊಸೆ ಲಕ್ಷ್ಮಿ ಅವರು ಮನವಿ ಮಾಡಿದ್ದಾರೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    12 hrs ago
  • ಖಾಝಿ ಜನಾಝ ಯಾತ್ರೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು, ಸಚಿವ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ತುರ್ತು ಪೊಲೀಸ್ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಯಾತ್ರೆಯ ಸುಗಮ ಸಂಚಾರಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
    1
    ಖಾಝಿ ಜನಾಝ ಯಾತ್ರೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು, ಸಚಿವ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ತುರ್ತು ಪೊಲೀಸ್ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಯಾತ್ರೆಯ ಸುಗಮ ಸಂಚಾರಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.