ಪ್ಯಾರಾ ಅಥ್ಲೆಟ್ ಶಿಲ್ಪಾಗೆ ಸೆಪ್ಟಂಬರ್ 6ರಂದು ಮೈಸೂರಿನಲ್ಲಿ ಅಭಿನಂದನೆ. ಮೈಸೂರು: ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟ್ ನಲ್ಲಿ ಕಂಚಿನ ಪದಕ ಗಳಿಸಿರುವ ಕೆ ಆರ್ ನಗರ ತಾಲೂಕಿನ ಕಂಚಗಾರ ಕೋಪಲಿನ ಕೆ ಎಸ್ ಶಿಲ್ಪ ಅವರು ನಾಮ ದಾರಿ ಗೌಡ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇವರು ಗ್ಯಾಕೋ ದಲ್ಲಿ ನಡೆದ ಕಾಮನ್ವೆಲ್ ಕ್ರೀಡಾಕೂಟದಲ್ಲಿ ಮಹಿಳೆಯರ ಶಾಟ್ ಪುಟ್ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರು ನಾಲಕ್ಕನೆ ವಯಸ್ಸಿನಲ್ಲಿಯೇ ಅಪಘಾತ ಕೀಳಾಗಿ ತನ್ನ ಒಂದು ಕಾಲನ್ನು ಕಳೆದುಕೊಂಡು ಧೃತಿಗೆಡದೆ ಸದಾ ಪರಿಶ್ರಮದಿಂದ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇವರು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಠದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯವಾಗಿದೆ. ನಾಡಿನ ಹೆಮ್ಮೆಯ ಕುಮಾರಿ ಕುಮಾರಿ ಶಿಲ್ಪಾ ಕೆಎಸ್ ಅವರಿಗೆ ನಾಮಧಾರಿ ಗೌಡ ಜನಾಂಗದ ವತಿಯಿಂದ ದಿನಾಂಕ 6 9 2018 ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಮಾನಸಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜನಾಂಗದ ಎಲ್ಲರೂ ಪರಿವಾರ ಸಮೇತವಾಗಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಮನವಿ ಮಾಡಲಾಗಿದೆ.
ಪ್ಯಾರಾ ಅಥ್ಲೆಟ್ ಶಿಲ್ಪಾಗೆ ಸೆಪ್ಟಂಬರ್ 6ರಂದು ಮೈಸೂರಿನಲ್ಲಿ ಅಭಿನಂದನೆ. ಮೈಸೂರು: ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟ್ ನಲ್ಲಿ ಕಂಚಿನ ಪದಕ ಗಳಿಸಿರುವ ಕೆ ಆರ್ ನಗರ ತಾಲೂಕಿನ ಕಂಚಗಾರ ಕೋಪಲಿನ ಕೆ ಎಸ್ ಶಿಲ್ಪ ಅವರು ನಾಮ ದಾರಿ ಗೌಡ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇವರು ಗ್ಯಾಕೋ ದಲ್ಲಿ ನಡೆದ ಕಾಮನ್ವೆಲ್ ಕ್ರೀಡಾಕೂಟದಲ್ಲಿ ಮಹಿಳೆಯರ ಶಾಟ್ ಪುಟ್ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರು ನಾಲಕ್ಕನೆ ವಯಸ್ಸಿನಲ್ಲಿಯೇ ಅಪಘಾತ ಕೀಳಾಗಿ ತನ್ನ ಒಂದು ಕಾಲನ್ನು ಕಳೆದುಕೊಂಡು ಧೃತಿಗೆಡದೆ ಸದಾ ಪರಿಶ್ರಮದಿಂದ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇವರು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಠದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯವಾಗಿದೆ. ನಾಡಿನ ಹೆಮ್ಮೆಯ ಕುಮಾರಿ ಕುಮಾರಿ ಶಿಲ್ಪಾ ಕೆಎಸ್ ಅವರಿಗೆ ನಾಮಧಾರಿ ಗೌಡ ಜನಾಂಗದ ವತಿಯಿಂದ ದಿನಾಂಕ 6 9 2018 ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಮಾನಸಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜನಾಂಗದ ಎಲ್ಲರೂ ಪರಿವಾರ ಸಮೇತವಾಗಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಮನವಿ ಮಾಡಲಾಗಿದೆ.
- ಗುಂಡ್ಲುಪೇಟೆ: ಪಾಳುಬಿದ್ದ ದಂಡಾಧಿಕಾರಿಗಳ ವಸತಿಗೃಹವನ್ನು ಕನ್ನಡಭವನಕ್ಕೆ ನೀಡಲು ಮನವಿ. ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮೈಸೂರು–ಊಟಿ ಮುಖ್ಯ ರಸ್ತೆಯಲ್ಲಿರುವ ತಾಲ್ಲೂಕು ಕಚೇರಿ ಪಕ್ಕದ ಹಲವು ವರ್ಷಗಳಿಂದ ಬಳಕೆಯಾಗದೆ ಪಾಳುಬಿದ್ದಿರುವ ದಂಡಾಧಿಕಾರಿಗಳ ವಸತಿಗೃಹವನ್ನು ಕನ್ನಡಭವನವಾಗಿ ಬಳಸಲು ಅವಕಾಶ ನೀಡುವಂತೆ ಕರ್ನಾಟಕ ಕಾವಲು ಪಡೆ ಮನವಿ ಮಾಡಿದೆ. ಗುರುವಾರ ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಎ. ಅಬ್ದುಲ್ ಮಾಲಿಕ್ ಅವರು ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ಅವರಿಗೆ ಮನವಿ ಸಲ್ಲಿಸಿದರು. ಬಳಕೆಯಾಗದೆ ಇರುವ ಕಟ್ಟಡದ ಸುತ್ತಮುತ್ತ ಮದ್ಯಪಾನ ಹಾಗೂ ಮೂತ್ರವಿಸರ್ಜನೆಯಿಂದ ಅಶುಚಿತ್ವ ಉಂಟಾಗಿದೆ. ಪಟ್ಟಣದಲ್ಲಿ ಕನ್ನಡಭವನ ಇಲ್ಲದ ಕಾರಣ ಕಟ್ಟಡವನ್ನು ಕನ್ನಡಪರ ಸಂಘಟನೆಗಳ ಸಭೆ–ಸಮಾರಂಭಗಳಿಗೆ ನೀಡಿದರೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಎಸ್. ಸರವಣ ಅವರು ಕಟ್ಟಡದ ಸುತ್ತಮುತ್ತ ಶೀಘ್ರ ಸ್ವಚ್ಛತೆ ಕೈಗೊಂಡು, ಕನ್ನಡಭವನಕ್ಕೆ ನೀಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಚಾಲಕ ಮಿಮಿಕ್ರಿ ರಾಜು ಉಪಸ್ಥಿತರಿದ್ದರು.3
- ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೂ ಅವಕಾಶ ಕೊಡುವಂತೆ ಸಿಎಂ ಮನವಿ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೂ ಅವಕಾಶ ಕೊಡುವಂತೆ ಸಿಎಂ ಮನವಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ಎಡಿಸಿ ಜವರೇಗೌಡರ ಮುಖಾಂತರ ಸಿಎಂ, ಶಿಕ್ಷಣ ಇಲಾಖೆ ಸಚಿವರಿಗೆ ಮನವಿ ಚಾಮರಾಜನಗರ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಲಾಗುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ., ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್) ವಿದ್ಯಾರ್ಥಿಗಳಿಗೂ ಸಹ ಅವಕಾಶ ಕಲ್ಪಿಸಿಕೊಡುವಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮುಖಾಂತರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಮುಖ್ಯಮಂತ್ರಿ ಗಳಿಗೆ , ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ಈ ಸಾರಿ ೧೫ ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಬಹಳ ವರ್ಷಗಳಿಂದ ಈ ಹಿಂದಿನ ಸರ್ಕಾರಗಳು ಮಾಡಲಾಗದಂತಹ ಶಿಕ್ಷಕರ ನೇಮಕಾತಿಯನ್ನು ತಾವು ಮಾಡಲು ಹೊರಟಿರುವ ನಿಮ್ಮ ಘನ ಸರ್ಕಾರಕ್ಕೆ ಅಭಿನಂದನೆಗಳು. ಅದರಂತೆಯೆ ಈಗಾಗಲೇ ಇದಕ್ಕೆ ಸಂಬಂಧಪಟ್ಟ ಶಿಕ್ಷಕರ ನೇಮಕಾತಿಗಳ ಅರ್ಜಿಯನ್ನು ತಾವು ಈಗಾಗಲೇ ಕರೆದಿದ್ದು ಇದಕ್ಕೆ ಪೂರಕವಾಗಿ ಪರೀಕ್ಷೆಗಳನ್ನು ತಾವು ನಡೆಸಲು ಉದ್ದೇಶಿಸಿರುತ್ತೀರಿ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಹಳಷ್ಟು ಜನ ವಿದ್ಯಾರ್ಥಿಗಳು ಬಿ.ಇಡಿ. ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ತಿಂಗಳ ನವೆಂಬರ್‌ನಲ್ಲಿ ಈ ನಾಲ್ಕನೇ ಸೆಮಿಸ್ಟರ್‌ನ ಬಿ.ಇಡಿ. ಪರೀಕ್ಷೆಯೂ ಸಹ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಾವು ಈ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಸಹ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಅವರು ಸಹ ಅರ್ಜಿಗಳನ್ನು ಹಾಕಲು ತಾವು ಅವಕಾಶ ಮಾಡಿಕೊಡಬೇಕು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ನಿಜಧ್ವನಿಗೋವಿಂದರಾಜು, ಹೊಮ್ಮ ಲೋಕೇಶ್, ಜಗದೀಶ್, ಮಂಗಲದ ಹೊಸೂರು ಶಿವಣ್ಣ, ರಾಚಪ್ಪ, ಆಟೋ ಲಿಂಗರಾಜು, ಮುತ್ತು ಇತರರು ಹಾಜರಿದ್ದರು. ------- ಚಿತ್ರ:ಚಾಮರಾಜನಗರ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಲಾಗುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ., ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್) ವಿದ್ಯಾರ್ಥಿಗಳಿಗೂ ಸಹ ಅವಕಾಶ ಕಲ್ಪಿಸಿಕೊಡುವಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮುಖಾಂತರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಮುಖ್ಯಮಂತ್ರಿ ಗಳಿಗೆ , ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.3
- ಜಿಲ್ಲಾಧ್ಯಂತ `ಬೀದಿ ನಾಟಕಗಳ ಮೂಲಕ ರಸ್ತೆ ಅಪಘಾತಗಳ ತಡೆ ಮತ್ತು ಜಾಗೃತಿ ಅಭಿಯಾನ' ಮಂಡ್ಯ: ಸಾಮಾಜಿಕ ಹಾಗೂ ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಶನ್ ವತಿಯಿಂದ ಜಿಲ್ಲೆಯ ಜನರಿಗಾಗಿ `ಉಚಿತ ಔಷಧ ನೆರವು' ಹಾಗೂ ಜಿಲ್ಲಾಧ್ಯಂತ `ಬೀದಿ ನಾಟಕಗಳ ಮೂಲಕ ರಸ್ತೆ ಅಪಘಾತಗಳ ತಡೆ ಮತ್ತು ಜಾಗೃತಿ ಅಭಿಯಾನ' ನಡೆಯಲಿದೆ ಎಂದು ಫೌಂಡೇಷನ್‌ನ ಟ್ರಸ್ಟಿ ಎಂ.ಎನ್.ರವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೌಂಡೇಷನ್‌ನಿAದ ನಿರಂತರ ಜನಪರ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಅಂತೆಯೇ ಸಾಮಾಜಿಕ ಜವಾಬ್ದಾರಿಯಿಂದ ಔಷಧ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ಆರ್ಥಿಕ ಸಮಸ್ಯೆಯಿಂದಾಗಿ ಉಚಿತ/ರಿಯಾಯಿತಿ ದರದಲ್ಲಿ ಚಿಕಿತ್ಸೆ ಮತ್ತು ಆರ್ಥಿಕವಾಗಿ ಹಿಂದುಳಿದ, ಹಿರಿಯ ನಾಗರಿಕ ಮತ್ತು ವಿಶೇಷ ಚೇತನರಿಗೆ, ಔಷಧ ಪಡೆಯಲು ಸಾಧ್ಯವಾಗದ ಕಾಯಿಲೆ ಪೀಡಿತರಿಗೆ ಈ ಯೋಜನೆಯಡಿ ಉಚಿತ ಔಷಧ ನೀಡಲಾಗುತ್ತದೆ. ಬಿಪಿ, ಶುಗರ್, ಥೈರಾಯ್ಡ್, ಮೆದುಳು, ಮಾನಸಿಕ, ಪಾರ್ಶ್ವವಾಯು (ಸ್ಟ್ರೋಕ್) ಮುಂತಾದ ದೀರ್ಘಕಾಲದ ಕಾಯಿಲೆಗಳಿಗೆ ಔಷಧ ಪಡೆಯುತ್ತಿರುವವರು ವೈದ್ಯರ ಸಲಹಾ ಚೀಟಿ ಮತ್ತು ಆರ್ಥಿಕ ಸಂಕಷ್ಟದ ವಿವರದೊಂದಿಗೆ ಅರ್ಜಿ ಸಲ್ಲಿಸಿ ಉಚಿತ ಔಷಧ ನೆರವು ಪಡೆಯಲು ಹೇಳಿದರು. ಜಿಲ್ಲೆಯಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 'ರಸ್ತೆ ಸುರಕ್ಷತಾ ಜಾಗೃತಿ ಬೀದಿ ನಾಟಕ ಅಭಿಯಾನ' ಆಯೋಜಿಸಲಾಗಿದೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಹೆಲ್ಮೆಟ್ ಧರಿಸುವುದು, ಅತಿವೇಗ ಚಾಲನೆ ತಡೆಯುವುದು, ಸೀಟ್ ಬೆಲ್ಟ್ ಬಳಕೆ, ಮತ್ತು ಚಾಲನೆ ವೇಳೆ ಮೊಬೈಲ್ ಬಳಸದಿರುವ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಟ್ರಸ್ಟ್ನ ಸಂಘಟನಾ ಕಾರ್ಯದರ್ಶಿಗಳಾದ ಎಂ.ಸಿ.ಅಮಿತ್‌ಗೌಡ, ವಿಶ್ವ, ಸದಸ್ಯೆ ಶೋಭ ಇದ್ದರು.1
- ಮಳವಳ್ಳಿ ತಾಲೂಕು ನಲ್ಲಿ ಅಕ್ರಮ ಮಣ್ಣು ದಂದೆ ಮಳವಳ್ಳಿ : ಮಳವಳ್ಳಿ ತಾಲೂಕಿನಲ್ಲಿ ಮಣ್ಣಿನ ದಂಧೆ ಅಕ್ರಮವಾಗಿ ನಡೆಯುತ್ತಿದ್ದು ಕೆಲ ಗ್ರಾಮಗಳಲ್ಲಿ ಅವೇರಳ್ಳಿ ಹೆಬ್ಬಣಿ ಮುಂತಾದ ಗ್ರಾಮಗಳಲ್ಲಿ ಮಣ್ಣಿನ ದಂಧೆ ಸಾಗುತ್ತಿದೆ ಇದಕ್ಕೆ ಗ್ರಾಮಸ್ಥರ ಆಕ್ರೋಶ ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸೂಕ್ತವಾದ ಕಾನೂನಿ ಕ್ರಮವನ್ನು ಜರಗಿಸಬೇಕು ಎಂದು ತಹಸಿಲ್ದಾರ್ ಜಿಲ್ಲಾ ಕಚೇರಿ ನಲ್ಲಿ ಮನವಿ ಮಾಡಲು ತೀರ್ಮಾನಿಸಿದ್ದಾರೆ1
- ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ: ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಮಳವಳ್ಳಿ: ಬೆಳದಿಂಗಳಲ್ಲಿ ಶರಣರ ಚಿಂತನಮಂಥನ ಸಮಿತಿ ವತಿಯಿಂದ ಹುಣ್ಣಿಮೆ ಪ್ರಯುಕ್ತ 142 ನೇ ಚಿಂತನ ಮಂಥನ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಿ ಮಾತನಾಡಿ,ಪ್ರತಿ ದಿನ ಮನೆಯಲ್ಲಿ ಯೋಗಾಭ್ಯಾಸದಿಂದ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು. ಇದೇ ವೇಳೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಸನ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶಶಿಕಲಾ, ಯೋಗ ಶಿಕ್ಷಕ ಶ್ರೀನಿಧಿ, ಚಿಂತನ ಮಂಥನ ಸಮಿತಿ ಮಲ್ಲೇಶ್, ನಾಗರಾಜು, ಪರಶಿವಮೂರ್ತಿ,ನಟರಾಜಮೂರ್ತಿ ಸೇರಿದಂತೆ ಹಲವರು ಇದ್ದರು.1
- ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ1
- ಗುಂಡ್ಲುಪೇಟೆ:ಹೊನ್ನೇಗೌಡನಹಳ್ಳಿಯಲ್ಲಿ ಹಸುವಿನ ಮೇಲೆ ಹುಲಿ ದಾಳಿ; ರೈತರಲ್ಲಿ ಆತಂಕ. ಗುಂಡ್ಲುಪೇಟೆ: ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ರೈತ ನಾಗಪ್ಪ ಅವರ ಹಸುವಿನ ಮೇಲೆ ಶುಕ್ರವಾರ ಸಂಜೆ ಹುಲಿ ದಾಳಿ ನಡೆಸಿದೆ. ಹುಲಿ ಹಸುವಿನ ಮೇಲೆ ದಾಳಿ ಮಾಡುತ್ತಿದ್ದುದನ್ನು ಗಮನಿಸಿದ ರೈತರು ಜೋರಾಗಿ ಕೂಗಿದಾಗ, ಹೆದರಿದ ಹಸುವನ್ನು ಬಿಟ್ಟು ಕಾಡಿನತ್ತ ಓಡಿಹೋಗಿದೆ. ಘಟನೆಯಿಂದ ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಹೆಚ್ಚಾಗಿದೆ. ಗುಂಡ್ಲುಪೇಟೆ ಭಾಗದಲ್ಲಿ ಹುಲಿ ಹಾಗೂ ಚಿರತೆ ದಾಳಿಗಳು ಪದೇಪದೇ ನಡೆಯುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ದಾಳಿಗೆ ಒಳಗಾದ ಜಾನುವಾರುಗಳಿಗೆ ತಕ್ಷಣ ಚಿಕಿತ್ಸೆ ಹಾಗೂ ಪರಿಹಾರ ನೀಡಬೇಕು. ಹುಲಿ–ಚಿರತೆ ದಾಳಿ ನಿಯಂತ್ರಣಕ್ಕೆ ವಿಶೇಷ ಕ್ರಮ ಕೈಗೊಂಡು, ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.3
- ತಾಲೂಕು ಪಿಡಬ್ಲ್ಯೂಡಿ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಕಚೇರಿಯಲ್ಲಿ ಜಿ ಸೇವಾ ಕೇಂದ್ರ ಉದ್ಘಾಟನೆ ಜಿ ಸೇವಾ ಕೇಂದ್ರದಿಂದ ಗುತ್ತಿಗೆದಾರರಿಗೆ ಅನುಕೂಲ : ಪಿಡಬ್ಲ್ಯೂಡಿ ಇಇ ಕಿರಣ್ ತಾಲೂಕು ಪಿಡಬ್ಲ್ಯೂಡಿ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಕಚೇರಿಯಲ್ಲಿ ಜಿ ಸೇವಾ ಕೇಂದ್ರ ಉದ್ಘಾಟನೆ ಚಾಮರಾಜನಗರ: ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದಲ್ಲಿ ಜಿ ಸೇವಾ ಕೇಂದ್ರ ಆರಂಭವಾಗಿರುವುದು ಗುತ್ತಿಗೆದಾರರಿಗೆ ಅನುಕೂಲವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಿರಣ್ ಹೇಳಿದರು. ನಗರದ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಕಚೇರಿಯಲ್ಲಿ ನೂತನವಾಗಿ ಆರಂಭಿಸಲಾದ ಜಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘವು ಪ್ರತಿ ವರ್ಷವೂ ಲಾಭಾಂಶದಲ್ಲಿ ನಡೆಯುತ್ತಿರುವುದು ತುಂಬಾ ಸಂತಸವಾಗಿದೆ. ಸಂಘದ ಪ್ರಗತಿ ನೋಡಿದರೆ ಮುಂದಿನ ದಿನಗಳಲ್ಲಿ ಸಂಘವು ಚೆನ್ನಾಗಿ ಬೆಳೆಯಲಿದೆ. ನಮಗೂ ನಿಮಗೂ ಜಿಲ್ಲೆಗೆ ಸಹಕಾರವಾಗಿದೆ. ಸ್ಟ್ಯಾಂಪ್ ಪೇಪರ್ ಲಾಭಾಂಶ ತರುವ ಕಾರ್ಯವಲ್ಲ. ಎಲ್ಲರೂ ಬರಲು, ಒಂದು ಕಡೆ ಸೇರುವ ಒಂದು ಜಾಗವಾಗಿದ್ದು, ಇಲ್ಲೇ ಗುತ್ತಿಗೆದಾರರು ಸ್ಟ್ಯಾಂಪ್ ಪೇಪರ್ ಖರೀದಿಸಿ ವ್ಯವಹಾರ ಮಾಡಲು ಅನುಕೂಲವಾಗುತ್ತದೆ. ಇದರಿಂದ ಚಾಮರಾಜನಗರದಲ್ಲಿ ವ್ಯಾಪಾರ ವಹಿವಾಟು ಜಾಸ್ತಿ ಯಾಗುತ್ತಿದ್ದು. ದಿನದಿನೇ ವ್ಯಾಪಾರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಸ್ಟ್ಯಾಂಪ್ ಪೇಪರ್ ಹೆಚ್ಚಾಗಿ ಬೇಕಾಗುತ್ತದೆ. ಇದು ಒಂದು ಒಳ್ಳೆಯ ಕೆಲಸವಾಗಿದೆ ಎಂದರು. ಗುತ್ತಿಗೆದಾರರು ಯಂತ್ರೋಪಕರಣಕ್ಕಾಗಿ ಕಾಯುವ ಸ್ಥಿತಿ ಇದೆ. ಒಂದೇ ಸಮಯದಲ್ಲಿ ಕೆಲಸಗಳು ಆಗುವುದರಿಂದ ಯಂತ್ರೋಪಕರಣಗಳಿಗೆ ಡಿಮ್ಯಾಂಡ್ ಆಗುತ್ತದೆ. ಆಗಾಗಿ ಆದ್ಯತೆ ಮೇರೆಗೆ ಯಂತ್ರೋಪಕರಣ ಸಿಗುವಂತಹ ಕೆಲಸ ಆಗಬೇಕಾಗಿದೆ ಹಿಂದೆ ಇಲಾಖೆಯಿಂದ ಯಂತ್ರೋಪಕರಣಗಳನ್ನು ಗುತ್ತಿಗೆದಾರರಿಗೆ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿತ್ತು ಅದನ್ನು ಈಗ ಕಡಿಮೆ ಮಾಡಲಾಗಿದೆ. ನಿಮಗೆ ಅದು ಅವಕಾಶ ಇದೆ.ಅಂತಹ ಯಂತ್ರೋಪಕರಣಗಳ ಸೇವಾ ಕೇಂದ್ರ ಮಾಡಿದರೆ ಸಂಘಕ್ಕೂ ಗುತ್ತಿಗೆದಾರರಿಗೂ ಹೆಚ್ಚಿನ ಅನುಕೂಲ ಆಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿ, ಸಂಘದ ಆಶಯದಂತೆ ಇಂದು ಜಿ ಸೇವಾ ಕೇಂದ್ರ ಆರಂಭಿಸಲಾಗಿದೆ. ಗುತ್ತಿಗೆದಾರರ ಸದಸ್ಯರು, ಸದುಪಯೋಗಪಡಿಸಿಕೊಂಡು ಸಂಘದ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಸಂಘದ ಪದಾಧಿಕಾರಿಗಳು. ಇದರ ಸದುಪಯೋಗ ಪಡಿಸಿಕೊಂಡು ಸಂಘದ ಅಭಿವೃದ್ಧಿ ಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪಿಆರ್‌ಇಡಿ ಇಇ ರಮೇಶಕುಮಾರ್, ಆರ್‌ಡಬ್ಲ್ಯೂಎಸ್ ಇಇ ಸಂತೋಷ್ ಕುಮಾರ್, ಪಿಡಬ್ಲ್ಯೂಡಿ ಎಇಇ ಶಾಂತಮ್ಮ, ಟಿಎ ಮಾದೇಶ್, ಕ್ಯೂಸಿ ಎಇಇ ಮಹದೇವಸ್ವಾಮಿ ಎಇಇ ರಮೇಶ್, ಎಇಗಳಾದ ಕೃಷ್ಣಮೂರ್ತಿ, ರಘು, ರೇವಣ್ಣ, ಐಶ್ವರ್ಯ, ಚಾಮರಾಜನಗರ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಉಪಾಧ್ಯಕ್ಷ ವೈ.ಪಿ.ರಾಜೇಂದ್ರಪ್ರಸಾದ್, ನಿರ್ದೇಶಕರಾದ ಎಂ.ರವಿ, ನಟರಾಜು, ಮಹದೇವಸ್ವಾಮಿ, ಶಿವಬಸವಣ್ಣ, ಎಂ.ಸಿ.ಸುರೇಂದ್ರ, ಎಂ.ಎಂ.ನಾಗರಾಜು, ನಂಜುಂಡಸ್ವಾಮಿ, ದೇವಾಜಮ್ಮಣಿ, ಸುಬ್ಬೇಗೌಡ, ಶಿವಕುಮಾರ್, ನಲ್ಲೂರು ಮಹಾದೇವಸ್ವಾಮಿ, ದೊರೆಸ್ವಾಮಿ, ಗುತ್ತಿಗೆದಾರ ಕೆ.ಎಂ.ಮಹದೇವಸ್ವಾಮಿ, ಹೆಚ್.ಹೆಚ್.ನಾಗರಾಜು, ನಾಗೇಶ್, ಗೋವಿಂದರಾಜು, ಹನುಮಂತು, ವಕೀಲ ಮಂಜು, ಮಹದೇವಸ್ವಾಮಿ, ಸಾಧಿಕ್ ಷರೀಫ್, ಹಾಗೂ ಮೂರು ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಹಾಜರಿದ್ದರು.4
- ಅತಿಥಿ ಉಪನ್ಯಾಸಕರನ್ನು ಸಂಯೋಜಕರನ್ನಾಗಿ ನೇಮಕಮಾಡಿಕೊಳ್ಳು ಸರ್ಕಾರಕ್ಕೆ ೧೦ ದಿನ ಗಡುವು-ಎನ್.ರಾಜೇಂದ್ರಸಿಂಗ್ ಬಾಬು ಮಂಡ್ಯ: ಅತಿಥಿ ಉಪನ್ಯಾಸಕರನ್ನು ತುರ್ತಾಗಿ ಶೈಕ್ಷಣಿಕ ಸಂಯೋಜಕರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಯುಜಿಸಿಯೇತರ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎನ್.ರಾಜೇಂದ್ರಸಿಂಗ್ ಬಾಬು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಸುಮಾರು 3,500ಕ್ಕೂ ಹೆಚ್ಚು ಮಾಜಿ ಯುಜಿಸಿ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಪ್ರಸ್ತುತ ಸಾಲಿನಲ್ಲಿಯೂ ನಿರಂತರವಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರು ನಿರುದ್ಯೋಗ ಸಮಸ್ಯೆಯಿಂದ ಬಳಲುವಂತಾಗಿದೆ ಎಂದು ಅಳಲು ತೋಡಿಕೊಂಡರು. ಹಿAದಿನ ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಆರ್.ಸೀತಾರಾಂ ನೇತೃತ್ವದ ಸರ್ಕಾರದಲ್ಲಿ ಶೈಕ್ಷಣಿಕ ಸಂಯೋಜಕರ ಹುದ್ದೆಗಳಿಗೆ ಸೇರ್ಪಡೆಗೊಳಿಸಲು ಆದೇಶ ನೀಡಿದ್ದರು. ಆದರೆ, ಈಗ ಉನ್ನತ ಶಿಕ್ಷಣ ಇಲಾಖೆಯು ಮರು ಆಯ್ಕೆ ಪ್ರಕ್ರಿಯೆ ಮುಂದುವರಿಸುತ್ತಿರುವುದರಿಂದ ಉಪನ್ಯಾಸಕರಲ್ಲಿ ಆತಂಕ ಮೂಡಿದೆ ಎಂದು ಹೇಳಿದರು. ಕೂಡಲೇ ಕಾಲೇಜು ಶಿಕ್ಷಣ ಇಲಾಖೆಯ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಸಂಯೋಜಕರನ್ನು ಆಯ್ಕೆ ಮಾಡಿಕೊಳ್ಳಬೇಕು. 2025-26ರ ಸೇವೆಯಲ್ಲಿದವರನ್ನು ಕೈಬಿಡದೇ ಎಲ್ಲರನ್ನೂ ಆಯ್ಕೆ ಮಾಡಿಕೊಳ್ಳಬೇಕು. 10 ದಿನದೊಳಗೆ ಕ್ರಮ ವಹಿಸದಿದ್ದರೆ, ರಾಜ್ಯದ ಎಲ್ಲ ಅತಿಥಿ ಉಪನ್ಯಾಸರನ್ನು ಒಗ್ಗೂಡಿಸಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂಎದು ಎಚ್ಚರಿಸಿದರು. ಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಎಂ.ಎಸ್‌ಕೃಷ್ಣ, ಬಿ.ಎಸ್.ಕುಮಾರ್, ಶಿವಕುಮಾರ್ ಇದ್ದರು.1